Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಮಹಾರಾಷ್ಟ್ರ ಸರ್ಕಾರದ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಮೀರ್ ಕುಮಾರ್ ಬಿಸ್ವಾಸ್ ಅವರು ಎರಡನೇ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮಂಗಳವಾರ ಭೇಟಿ ನೀಡಿ, ರಾಜ್ಯದಲ್ಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ಪೂರ್ಣ ಮಾಹಿತಿ ಪಡೆದರು. ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿಯನ್ನು ನೀಡಿದರು. ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ವಿಜ್ಞಾನ, ನರ್ಸಿಂಗ್.. ಹೀಗೆ ಒಟ್ಟು 21 ವಿವಿಧ ಬಗೆಯ ಕೋರ್ಸ್ ಗಳಿಗೆ ಸೀಟು ಹಂಚಿಕೆಯನ್ನು ಕೆಇಎ ಏಕಕಾಲದಲ್ಲಿ ಮಾಡುತ್ತಿದ್ದು, ಅದರ ಪೂರ್ಣ ಮಾಹಿತಿಯನ್ನು ಗದ್ಯಾಳ ಅವರು ಬಿಸ್ವಾಸ್ ಅವರಿಗೆ ಎಳೆ ಎಳೆಯಾಗಿ ವಿವರಿಸಿದರು. ಬಿಸ್ವಾಸ್ ಅವರ ನೇತೃತ್ವದ ನಿಯೋಗ ಜೂನ್ 23ರಂದು ಕೂಡ ಕೆಇಎ ಗೆ ಭೇಟಿ ನೀಡಿ ಮಾಹಿತಿ ಪಡೆದಿತ್ತು. ಇವತ್ತಿನ ಭೇಟಿ ಎರಡನೇಯದಾಗಿದ್ದು ಅನೇಕ ಅನುಮಾನ/ಸಂದೇಹಗಳಿಗೆ ಪರಿಹಾರವನ್ನು ಬಿಸ್ವಾಸ್ ಅವರು ಪಡೆದರು. ಮಹಾರಾಷ್ಟ್ರದಲ್ಲಿ ಒಟ್ಟು…
ಬೆಂಗಳೂರು: ದಸರಾ ಮತ್ತು ದೀಪಾವಳಿ ಅವಧಿಯಲ್ಲಿ ರಾಜ್ಯದ ಹೆಮ್ಮೆಯ “ನಂದಿನಿ” ಬ್ರಾಂಡ್‌ನಿಂದ ದಾಖಲೆಯ ಸಿಹಿ ಮಾರಾಟವಾಗಿದೆ. ಬರೋಬ್ಬರಿ ದಸರಾ, ದೀಪಾವಳಿಯಲ್ಲಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳು ಮಾರಾಟವಾಗಿವೆ. ಈ ಕುರಿತಂತೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ರು ಮಾಹಿತಿ ನೀಡಿದ್ದು, ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ (ಕೆಎಂಎಫ್) ಸಂಸ್ಥೆಯು ಕಳೆದ ಐದು ದಶಕಗಳಿಂದ ರಾಜ್ಯದ ಹೈನುಗಾರಿಕೆ ಮತ್ತು ಸಹಕಾರ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದು, ಹಾಲು ಉತ್ಪಾದಕರ ರೈತರ ಹಿತದೃಷ್ಟಿಯಿಂದ ರಾಜ್ಯದ ಹೈನು ಸಹಕಾರ ಚಳುವಳಿಯನ್ನು ಬಲಪಡಿಸುವಲ್ಲಿ ಮುಂಚೂಣಿಯಲ್ಲಿದೆ ಎಂದಿದ್ದಾರೆ. ಪ್ರತಿದಿನ ರಾಜ್ಯದ ವಿವಿಧ ಹೈನುಗಾರ ರೈತರಿಂದ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಅದರಲ್ಲಿ ಸುಮಾರು 65 ಲಕ್ಷ ಲೀಟರ್ ಹಾಲು, ಮೊಸರು ಹಾಗೂ ಯುಎಚ್‌ಟಿ ಹಾಲು ಉತ್ಪನ್ನಗಳನ್ನು ರಾಜ್ಯ ಮತ್ತು ಹೊರರಾಜ್ಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. “ನಂದಿನಿ” ಬ್ರಾಂಡ್‌ನಡಿಯಲ್ಲಿ ಹಾಲಿನೊಂದಿಗೆ ತುಪ್ಪ, ಬೆಣ್ಣೆ, ಪನೀರ್, ಸಿಹಿತಿನಿಸುಗಳು, ಹಾಲಿನ ಪುಡಿ, ಪಾನೀಯಗಳು…
ಹಾಸನ: ಹಾಸನಾಂಬೆ ದೇವಿಯ ದರ್ಶನ ಬಹಳ ಸರಾಗವಾಗಿ ನಡೆಯುತ್ತಿದೆ. ನಿನ್ನೆ ಸುಮಾರು 2 ಲಕ್ಷ ಜನರು ದರ್ಶನ ಪಡೆದಿದ್ದಾರೆ. ಪ್ರಸ್ತುತ ವರ್ಷ ಇಲ್ಲಿಯವರೆಗೆ 23,00,000 ಜನರು ದರ್ಶನ ಪಡೆದಿದ್ದಾರೆ. ಕಳೆದ ವರ್ಷದ ಒಟ್ಟಾರೆ 17,46,000 ಜನ ದರ್ಶನ ಪಡೆದಿದ್ದಾರೆ ಎಂಬುದಾಗಿ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಈ ವರ್ಷ ₹ 300/1000 ಟಿಕೆಟ್ ಸಾಲಿನಲ್ಲಿ 3,40,260 ಜನರು ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಈ ಸಾಲಿನಲ್ಲಿ ಒಟ್ಟಾರೆ 1,29,956 ಜನ ದರ್ಶನ ಪಡೆದಿದ್ದರು. ಇಂದು ಮತ್ತು ನಾಳೆ ದರ್ಶನ ಲಭ್ಯವಿದೆ. ಇಂದು ಮಧ್ಯಾಹ್ನ 2 ರಿಂದ 3.30 ರವರೆಗೆ ನೈವೇದ್ಯ ಇರುವುದರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದಿದ್ದಾರೆ. ಇಂದು ಕ್ಯೂ ಲೈನ್‌ಗಳ ಪ್ರವೇಶ ದ್ವಾರಗಳು ರಾತ್ರಿ 9 ಗಂಟೆಗೆ ಮುಚ್ಚಲ್ಪಡುತ್ತವೆ ಮತ್ತು ದರ್ಶನ ಮಧ್ಯರಾತ್ರಿ 12 ಗಂಟೆಗೆ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ. ಬುಧವಾರ – ದರ್ಶನ ಬೆಳಿಗ್ಗೆ…
ಬೆಂಗಳೂರು ಗ್ರಾಮಾಂತರ: ಲಂಚದ ಹಣವನ್ನು ಪಡೆಯುತ್ತಿದ್ದಂತ ಗ್ರಾಮ ಪಂಚಾಯ್ತಿ ಪಿಡಿಓ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋ ವೈರಲ್ ಬೆನ್ನಲ್ಲೇ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರಿಪುರ ಗ್ರಾಮ ಪಂಚಾಯ್ತಿ ಪಿಡಿಒ ಅಮಾನತುಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಇಒ ಅನುರಾಧಾ ಅವರು ಈ ಆದೇಶ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರಿಪುರ ಗ್ರಾಮ ಪಂಚಾಯ್ತಿ ಪಿಡಿಒ ಶಿವಾನಂದ ಮರಕೇರಿ ಲಂಚದ ಹಣ ಪಡೆಯುತ್ತಿದ್ದಂತ ವೀಡಿಯೋ ವೈರಲ್ ಆಗಿತ್ತು. ಈ ಕುರಿತಂತೆ ತನಿಖೆಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಇಓ ಅನುರಾಧಾ ಆದೇಶಿಸಿದ್ದರು. ವರದಿಯಲ್ಲಿ ಹಾದ್ರಿಪುರ ಗ್ರಾಮ ಪಂಚಾಯ್ತಿ ಪಿಡಿಓ ಶಿವಾನಂದ ಮರಕೇರಿ ಲಂಚ ಪಡೆದಿದ್ದು ಸಾಭೀತಾದ ಹಿನ್ನಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ. https://kannadanewsnow.com/kannada/fire-breaks-out-in-building-near-rashtrapati-bhawan/ https://kannadanewsnow.com/kannada/tomorrow-all-religious-endowment-department-temples-in-the-state-will-conduct-gopooja-government-official-order/
ನವದೆಹಲಿ: ಮಂಗಳವಾರ ಮಧ್ಯಾಹ್ನ ರಾಷ್ಟ್ರಪತಿ ಭವನದ ಗೇಟ್ ಸಂಖ್ಯೆ 31 ರ ಬಳಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಐದು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡಿರುವುದಾಗಿ ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಗೃಹೋಪಯೋಗಿ ವಸ್ತುಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಧ್ಯಾಹ್ನ 1:51 ಕ್ಕೆ ಕರೆ ಬಂದಿದ್ದು, 20 ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. “ನಾವು ಐದು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಧಾವಿಸಿ ಬಂದಿದ್ದೇವೆ. ಮಧ್ಯಾಹ್ನ 2:15 ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ” ಎಂದು ಡಿಎಫ್‌ಎಸ್ ಅಧಿಕಾರಿ ತಿಳಿಸಿದ್ದಾರೆ. https://kannadanewsnow.com/kannada/tomorrow-all-religious-endowment-department-temples-in-the-state-will-conduct-gopooja-government-official-order/
ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ದೀಪಾವಳಿ ಅಂದರೆ ಬಲಿಪಾಡ್ಯಮಿಯ ನಾಳೆಯಂದು ಗೋಪೂಜೆ ಕಾರ್ಯಕ್ರಮ ನೆರವೇರಿಸುವಂತೆ ಸರ್ಕಾರ ಅಧಿಕೃತ ಆದೇಶ ಮಾಡಿದೆ. ಈ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ದೀಪಾವಳಿ (ಬಲಿಪಾಡ್ಯಮಿ) ದಿನದಂದು ಗೋಪೂಜೆ ಕಾರ್ಯಕ್ರಮ ಆಚರಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು, ಕರ್ನಾಟಕ ಸರ್ಕಾರ ರವರ ಮೌಖಿಕ ನಿರ್ದೇಶನ ನೀಡಿದ್ದಾರೆ ಎಂದಿದ್ದಾರೆ. ಅವರ ಉಲ್ಲೇಖಿತ ಸುತ್ತೋಲೆಯನ್ವಯ ಹಿಂದೂ ಧರ್ಮದಲ್ಲಿ ಗೋವಿಗೆ ಗೋಮಾತೆ ಎಂಬ ಹೆಸರಿನಿಂದ, ವಿಶೇಷ ಸ್ಥಾನಮಾನವನ್ನು ನೀಡಿ ಪೂಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿರುವುದರಿಂದ ದೀಪಾವಳಿ(ಬಲಿಪಾಡ್ಯಮಿ) ದಿನದಂದು ಗೋವುಗಳಿಗೆ ಸ್ನಾನ ಮಾಡಿಸಿ ಅರಶಿನ ಕುಂಕುಮ ಹೂವುಗಳಿಂದ ಅಲಂಕರಿಸಿ ಅಕ್ಕಿ ಬೆಲ್ಲ ಹಣ್ಣು ಮುಂತಾದ ಗೋಗ್ರಾಸವನ್ನು ನೀಡಿ ಸಂಜೆ…
ಮಹಾರಾಷ್ಟ್ರ: ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಈ ಅಪಘಾತದಲ್ಲಿ ಬೀದರ್ ಮೂಲದ ನಾಲ್ವರು ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ. ಬೀದರ್ ಮೂಲದ ಸ್ನೇಹಿತರು ಸ್ವಾಮೀಜಿ ದರ್ಶನಕ್ಕೆ ತೆರಳಿದ್ದರು. ಹುಲಜಂತಿ ಮಾಳಿಂಗರಾಯ್ ಸ್ವಾಮೀಜಿ ದರ್ಶನಕ್ಕೆ ತೆರಳಿದ್ದರು. ದರ್ಶನ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಕಾರು ಅಪಘಾತದಲ್ಲಿ ಬೀದರ್ ಮೂಲದ ನಾಲ್ವರು ದುರ್ಮರಣ ಹೊಂದಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/tomorrow-gopuja-is-mandatory-in-the-states-muzarai-temples-minister-ramalinga-reddy-orders/ https://kannadanewsnow.com/kannada/heart-disease-has-increased-among-indians-due-to-lifestyle-and-processed-food-habits-study/
ಬೆಂಗಳೂರು: ನಾಳೆ ರಾಜ್ಯದ ಎಲ್ಲಾ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಗೋಪೂಜೆಯನ್ನು ಕಡ್ಡಾಯವಾಗಿ ಮಾಡುವಂತೆ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶಿಸಿದ್ದಾರೆ. ಈ ಸಂಬಂಧ ಅವರು ಮೌಖಿಕ ಆದೇಶ ನೀಡಿದ್ದಾರೆ ಎನ್ನಲಾಗಿದೆ. ನಾಳೆ ದೀಪಾವಳಿಯ ಬಲಿಪಾಡ್ಯಮಿಯ ಕಾರಣದಿಂದಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಗೋಪೂಜೆ ನೆರವೇರಿಸುವಂತೆ ಸೂಚಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನಾಳೆ ರಾಜ್ಯದ ಎಲ್ಲಾ ಮುಜರಾತಿ ಇಲಾಖೆ ವ್ಯಾಪ್ತಿಯ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು ಪೂಜಿಸುವ ಕಾರಣದಿಂದಾಗಿ ಅವುಗಳಿಗೆ ಸ್ನಾನ ಮಾಡಿಸಿ, ದೇವಾಲಯಕ್ಕೆ ಕರೆತರಬೇಕು. ಆ ಬಳಿಕ ಗೋವುಗಳಿಗೆ ಅರಿಶಿಣ, ಕುಂಕುಮ ಹಚ್ಚಿ, ಹೂವುಗಳಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ನೀಡಿ ಅವುಗಳನ್ನು ಪೂಜಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. https://kannadanewsnow.com/kannada/karnataka-janapada-academy-award-winning-dalavai-chittappa-has-passed-away/ https://kannadanewsnow.com/kannada/heart-disease-has-increased-among-indians-due-to-lifestyle-and-processed-food-habits-study/
ನವದೆಹಲಿ: ಸೋಮವಾರ ವಿಶ್ವ ಹೃದಯ ದಿನದಂದು ಬಿಡುಗಡೆಯಾದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಹೃದಯ ಆರೋಗ್ಯ ಬಿಕ್ಕಟ್ಟು 20 ರ ದಶಕದಲ್ಲಿ ಪ್ರಾರಂಭವಾಗುತ್ತಿದೆ, ಇದು ಜಡ ಜೀವನಶೈಲಿ, ಸಂಸ್ಕರಿಸಿದ ಆಹಾರಕ್ರಮ ಮತ್ತು ಚಯಾಪಚಯ ಒತ್ತಡದಿಂದ ಉಂಟಾಗುತ್ತದೆ. ಭಾರತದಲ್ಲಿ ನಾಲ್ಕು ಜನರಲ್ಲಿ ಒಬ್ಬರು ಅಸಹಜ ಕೊಲೆಸ್ಟ್ರಾಲ್ ಮಟ್ಟವನ್ನು ತೋರಿಸಿದ್ದಾರೆ, ಕಡಿಮೆ ಮಟ್ಟದ ‘ಉತ್ತಮ ಕೊಲೆಸ್ಟ್ರಾಲ್’ (HDL) ಒಂದೇ ಸಾಮಾನ್ಯ ಅಪಾಯಕಾರಿ ಅಂಶವಾಗಿ ಹೊರಹೊಮ್ಮುತ್ತಿದೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. 35% ಜನರು ಕಡಿಮೆ HDL ಮಟ್ಟವನ್ನು ತೋರಿಸಿದ್ದಾರೆ, ಇದು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಕಳೆದ ಒಂದು ವರ್ಷದಲ್ಲಿ ನಡೆಸಲಾದ 3.9 ಲಕ್ಷ ಲಿಪಿಡ್ ಪ್ರೊಫೈಲ್ ಪರೀಕ್ಷೆಗಳ ರಾಷ್ಟ್ರವ್ಯಾಪಿ ವಿಶ್ಲೇಷಣೆಯಿಂದ ತನ್ನ ಸಂಶೋಧನೆಗಳನ್ನು ಬಿಡುಗಡೆ ಮಾಡಿದ ಭಾರತದ ಎರಡನೇ ಅತಿದೊಡ್ಡ ರೋಗಶಾಸ್ತ್ರ ಪ್ರಯೋಗಾಲಯ ಸರಪಳಿಯಾದ ಮೆಟ್ರೊಪೊಲಿಸ್ ಹೆಲ್ತ್‌ಕೇರ್ ಲಿಮಿಟೆಡ್‌ನ ಅಧ್ಯಯನವು ಸುಮಾರು 30% ಜನರು ಒಟ್ಟು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿದ್ದಾರೆ ಎಂದು ಕಂಡುಹಿಡಿದಿದೆ, ಆದರೆ 33% ಜನರು ಅಸಹಜ…
ಬಳ್ಳಾರಿ: ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಳವಾಯಿ ಚಿತ್ತಪ್ಪನವರು ನಿಧನರಾಗಿದ್ದಾರೆ. ಜನಪದ ಮಹಾಕಾವ್ಯಗಳ ಧ್ವನಿಗೆ ದಿಕ್ಕು ತೋರಿಸಿದ ಮಹಾ ಪದಗಾರ ಇನ್ನಿಲ್ಲವಾಗಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಬಂಡಿ ಗ್ರಾಮದ ದಳವಾಯಿ ಚಿತ್ತಪ್ಪ (90 ವರ್ಷ) ನವರ ಸಿರಿಕಂಠಕ್ಕೆ ತಲೆದೂಗದವರಿಲ್ಲ. ಸಂಡೂರು-ಕೂಡ್ಲಿಗಿ ಪರಿಸರದಲ್ಲಿ ಹಬ್ಬ ಹರಿದಿನಗಳಲ್ಲಿ ಗಣನಾದದೊಂದಿಗೆ ಚಿತ್ತಪ್ಪನ ದನಿ ಕೇಳದಿದ್ದರೆ ಕಾರ್ಯಕ್ರಮ ಅಪೂರ್ಣ ಎಂಬುವುದು ಸುತ್ತಲಿನವರ ಅಭಿಪ್ರಾಯವಾಗಿದೆ. ಶ್ರೀಯುತರು ಹಲವಾರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಮುದಾಯ ಸಮ್ಮೇಳನಗಳಲ್ಲಿ ಹಾಡಿ ಜನಮನ ಗೆದ್ದಿದ್ದರು. ದಳವಾಯಿ ಚಿತ್ತಪ್ಪನವರು ತಮ್ಮ ಹದಿನೆಂಟನೇ ವಯಸ್ಸಿಗೆ ಮದುವೆಯಾದರು. ಇವರ ಪತ್ನಿ ಮರಬನಹಳ್ಳಿ ಸಣಮ್ಮ. ಇವರಿಗೆ ಐದು ಜನ ಗಂಡುಮಕ್ಕಳು ಮತ್ತು ಮೂರು ಜನ ಹೆಣ್ಣುಮಕ್ಕಳು . ಸುಮಾರು ಮುವತ್ತೈದು ಮೊಮ್ಮಕ್ಕಳು ಮರಿಮಕ್ಕಳನ್ನು ಕಂಡಿರುವ ದಳವಾಯಿ ಚಿತ್ತಪ್ಪನವರು ಸಂಡೂರು ಭಾಗದ ಗೊಲ್ಲಾಳಿಕೆಯಲ್ಲಿ ಹಿರಿಯ ತಲೆ. ದಳವಾಯಿ ಚಿತ್ತಪ್ಪನವರು ಎತ್ತರದ ಆಳು. ಅವರು ತೊಡುವ ಬಿಳಿ ಬಟ್ಟೆಯಂತೆಯೇ ಬೆಳ್ಳಗಿರುವ ಹುರಿಮೀಸೆ, ಎರೆಡೂ ಮುಂಗೈಯಲ್ಲಿ ಎದ್ದುಕಾಣುವ ಬೆಳ್ಳಿ ಕಡಗ, ಕಿವಿಯಲ್ಲಿ ಮಿಂಚುವ ಕಿವಿಯೋಲೆ, ಕೈಯಲ್ಲಿ…














