Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಪಿವಿಆರ್ ಐನಾಕ್ಸ್, ಬೆಂಗಳೂರು ಹಾಗೂ ಮುಂಬೈನಲ್ಲಿ 8 ಅತ್ಯಾಧುನಿಕ ಪರದೆಗಳನ್ನು ಅನಾವರಣಗೊಳಿಸಿದೆ – ಮುಂಬೈನ ಬೋರಿವಲಿ ಪೂರ್ವದಲ್ಲಿರುವ ಸ್ಕೈ ಸಿಟಿ ಮಾಲ್‌ನಲ್ಲಿ 10-ಪರದೆಗಳ ಮೆಗಾಪ್ಲೆಕ್ಸ್ ಮತ್ತು ಬೆಂಗಳೂರಿನ ಮಹೀಂದ್ರಾ ಮಿಲೇನಿಯಮ್ ಮಾಲ್‌ನಲ್ಲಿ ರೋಮಾಂಚಕ, ವಿನ್ಯಾಸ-ಮುಂದುವರೆದ 8-ಪರದೆಗಳ ಮಲ್ಟಿಪ್ಲೆಕ್ಸ್. ಭಾರತದ ಎರಡು ಅತ್ಯಂತ ನಿರೀಕ್ಷಿತ ಬಿಡುಗಡೆಗಳಾದ ಕೂಲಿ ಮತ್ತು ವಾರ್ 2 ಜೊತೆಗೆ ಆಗಮಿಸುತ್ತಿರುವ ಈ ಬಿಡುಗಡೆಗಳು ಪ್ರೇಕ್ಷಕರಿಗೆ ವರ್ಷದ ಅತಿದೊಡ್ಡ ಪ್ರದರ್ಶನಗಳನ್ನು ನೋಡಲು ಮುಂದಿನ ಸಾಲಿನ ಆಸನವನ್ನು ಭರವಸೆ ನೀಡುತ್ತವೆ, ಇದನ್ನು ಅತ್ಯಂತ ತಲ್ಲೀನಗೊಳಿಸುವ ಸ್ವರೂಪಗಳು ಮತ್ತು ಅತ್ಯಂತ ಕ್ರಿಯಾತ್ಮಕ ಸ್ಥಳಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಬೊರಿವಲಿಯಲ್ಲಿರುವ ಸ್ಕೈ ಸಿಟಿ ಮಾಲ್ ಮೆಗಾಪ್ಲೆಕ್ಸ್ ಮುಂಬೈನ ಪಶ್ಚಿಮ ಉಪನಗರಗಳನ್ನು ಮುಂದಿನ ಪೀಳಿಗೆಯ ಚಲನಚಿತ್ರ ವೀಕ್ಷಣೆಯ ಕೇಂದ್ರವಾಗಿ ಮರು ವ್ಯಾಖ್ಯಾನಿಸುತ್ತದೆ. ಬಹು ಹಂತಗಳಲ್ಲಿ ಹರಡಿರುವ ಈ ಆಸ್ತಿಯು, ಇನ್‌ಸಿಗ್ನಿಯಾ, ಐಮ್ಯಾಕ್ಸ್ ವಿತ್ ಲೇಸರ್ ಮತ್ತು 4DX ಸೇರಿದಂತೆ ಪ್ರೀಮಿಯಂ ಸ್ವರೂಪಗಳನ್ನು ನೀಡುತ್ತದೆ, ಜೊತೆಗೆ ಚಿಕ್ ಲೌಂಜ್ ಸ್ಥಳಗಳು ಮತ್ತು ಹೊಸ ಪೀಳಿಗೆಯ ಸಾಮಾಜಿಕ ಮತ್ತು ಮನರಂಜನಾ…
ನವದೆಹಲಿ: ಸೋಮವಾರ ಏರ್‌ಟೆಲ್ ಬಳಕೆದಾರರು ಇದೇ ರೀತಿಯ ಸ್ಥಗಿತವನ್ನು ವರದಿ ಮಾಡಿದ ಕೆಲವೇ ಗಂಟೆಗಳಲ್ಲಿ ಜಿಯೋ ಮತ್ತು ವೊಡಾಫೋನ್-ಐಡಿಯಾ ನೆಟ್‌ವರ್ಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ. ತಾಂತ್ರಿಕ ದೋಷಗಳನ್ನು ಮೇಲ್ವಿಚಾರಣೆ ಮಾಡುವ ಪೋರ್ಟಲ್ ಡೌನ್‌ಡೆಕ್ಟರ್, ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಜಿಯೋ ಸ್ಥಗಿತಗೊಂಡಿರುವ ಬಗ್ಗೆ 200 ಕ್ಕೂ ಹೆಚ್ಚು ವರದಿಗಳನ್ನು ಕಂಡಿದೆ. ವೊಡಾಫೋನ್-ಐಡಿಯಾ ಸ್ಥಗಿತವು ಇದೀಗ ವ್ಯಾಪಕವಾಗಿ ಕಂಡುಬರುತ್ತಿಲ್ಲವಾದರೂ, ಪೋರ್ಟಲ್ ಸುಮಾರು 50 ಸ್ಥಗಿತ ವರದಿಗಳನ್ನು ವರದಿ ಮಾಡಿದೆ. ಎರಡೂ ಏರ್‌ಟೆಲ್ ಸ್ಥಗಿತ ವರದಿಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ, ಆದರೆ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಡೌನ್‌ಡೆಕ್ಟರ್ ಒದಗಿಸಿದ ಸ್ಥಗಿತ ನಕ್ಷೆಯ ಪ್ರಕಾರ, ವೊಡಾಫೋನ್-ಐಡಿಯಾ ಸ್ಥಗಿತವು ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ ಮತ್ತು ಜೈಪುರದಂತಹ ನಗರಗಳಲ್ಲಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ. ಜಿಯೋ ಸ್ಥಗಿತ ನಕ್ಷೆಯು ಹೆಚ್ಚು ವ್ಯಾಪಕವಾಗಿದೆ, ಇದು ಚಂಡೀಗಢ, ಹೈದರಾಬಾದ್, ಲಕ್ನೋ, ಪಾಟ್ನಾ, ಅಹಮದಾಬಾದ್ ಮತ್ತು ಇನ್ನೂ ಅನೇಕ ನಗರಗಳಲ್ಲಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಟೆಲಿಕಾಂ ದೈತ್ಯ…
ಬೆಂಗಳೂರು: ಐಟಿ ಕ್ಷೇತ್ರದಲ್ಲಿ ಉದ್ಯೋಗದ ಅಭದ್ರತೆ ಹಾಗೂ ಉದ್ಯೋಗ ಕಡಿತದ ಹೊರತಾಗಿಯೂ ಕಾಗ್ನಿಜೆಂಟ್ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಕಾಗ್ನಿಜೆಂಟ್‌ನ ತನ್ನ ಶೇಕಡ 80 ರಷ್ಟು ಅರ್ಹ ಉದ್ಯೋಗಿಗಳಿಗೆ ನವೆಂಬರ್ 1, 2025 ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದೆ. ಇದು ಎರಡನೇ ತ್ರೈಮಾಸಿಕ ಗಳಿಕೆಯ ಸಮಯದಲ್ಲಿ 2025 ರ ದ್ವಿತೀಯಾರ್ಧದಲ್ಲಿ ಬಹುಪಾಲು ಉದ್ಯೋಗಿಗಳಿಗೆ ಅರ್ಹತೆ ಆಧಾರಿತ ವೇತನ ಹೆಚ್ಚಳವನ್ನು ನೀಡಲು ಯೋಜಿಸಿದೆ ಎಂದು ಘೋಷಿಸುವುದರೊಂದಿಗೆ ಹೊಂದಿಕೆಯಾಗುತ್ತದೆ. ಈ ಹೆಚ್ಚಳಗಳನ್ನು ಸೀನಿಯರ್ ಅಸೋಸಿಯೇಟ್ ಮಟ್ಟಗಳವರೆಗೆ ವಿಸ್ತರಿಸಿದೆ, ಎಲ್ಲಾ ವಲಯದ ಉದ್ಯೋಗಿಗಳಿಗೂ ತಮ್ಮ ಉದ್ಯೋಗದ ಅರ್ಹತೆ ಆಧಾರದ ಮೇಲೆ ಹಾಗೂ ವೈಯಕ್ತಿಕ ಕಾರ್ಯಕ್ಷಮತೆ ರೇಟಿಂಗ್ ಆಧಾರದ ಮೇಲೆ ಸಂಬಳ ಹೆಚ್ಚಳ ಪಡೆಯಲಿದ್ದಾರೆ. ಇತ್ತೀಚೆಗೆ ಐಟಿ ಕ್ಷೇತ್ರದಲ್ಲಿ ಉದ್ಯೋಗದ ಅಭದ್ರತೆ ಹಾಗೂ ಸಾಕಷ್ಟು ಉದ್ಯೋಗಿಗಳ ಕಡಿತದಿಂದ ತತ್ತರಿಸಿದ್ದಾರೆ. ಆದರೆ, ಕಾಗ್ನಿಜೆಂಟ್ ತನ್ನ ಉದ್ಯೋಗಿಗಳ ಕ್ಷೇಮವನ್ನು ಕಾಪಾಡಲಿದೆ, ಜೊತೆಗೆ ದುಡಿತಕ್ಕೆ ಸೂಕ್ತ ಸಂಬಳ ನೀಡುವುದು ಸಂಸ್ಥೆಯ ಕರ್ತವ್ಯವೆಂದು ಭಾವಿಸಿದೆ.…
ಬೆಂಗಳೂರು: ಆ. 24ರಂದು ಅರಸೀಕೆರೆ-ಬಾಣಾವರ ಹಾಗೂ ಅರಸೀಕೆರೆ-ಹಬ್ಬನಘಟ್ಟ ನಿಲ್ದಾಣಗಳ ನಡುವೆ ಪ್ರಮುಖ ಸಿಗ್ನಲಿಂಗ್ ಮತ್ತು ಬ್ಲಾಕ್ ಇನ್‌ಸ್ಟ್ರುಮೆಂಟ್ ಬದಲಾವಣೆ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ, ಅಂದು ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳ ಮರು ನಿಗದಿಪಡಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗಿದೆ. ಈ ರೈಲುಗಳ ಸಂಚಾರ ರದ್ದು: ಆಗಸ್ಟ್ 23ರಂದು, ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು–ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದುಗೊಳ್ಳಲಿದೆ. ಆಗಸ್ಟ್ 24ರಂದು: ಮೈಸೂರು–ಎಸ್ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ (06269), ಶಿವಮೊಗ್ಗ ಟೌನ್–ಮೈಸೂರು ಡೈಲಿ ಎಕ್ಸ್‌ಪ್ರೆಸ್ (16226), ಮೈಸೂರು–ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ (16225), ಅರಸೀಕೆರೆ–ಮೈಸೂರು ಡೈಲಿ ಪ್ಯಾಸೆಂಜರ್ (56267), ಮೈಸೂರು–ಅರಸೀಕೆರೆ ಡೈಲಿ ಪ್ಯಾಸೆಂಜರ್ (56268), ಮೈಸೂರು–ಅರಸೀಕೆರೆ ಡೈಲಿ ಪ್ಯಾಸೆಂಜರ್ (56266) ಮತ್ತು ಅರಸೀಕೆರೆ–ಮೈಸೂರು ಡೈಲಿ ಪ್ಯಾಸೆಂಜರ್ (56265) ರೈಲುಗಳು ಒಂದು ದಿನ ರದ್ದುಗೊಳ್ಳಲಿವೆ. ಭಾಗಶಃ ರದ್ದು: ಆಗಸ್ಟ್ 24ರಂದು ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್–ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು ಶಿವಮೊಗ್ಗ…
ಮಂಡ್ಯ : ನ್ಯಾಯಮೂರ್ತಿ ನಾಗ ಮೋಹನ್ ದಾಸ್ ಅವರ ಅವೈಜ್ಞಾನಿಕ ಒಳ ಮೀಸಲಾತಿ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಮದ್ದೂರು ತಾಲೂಕು ಬಲಗೈ ಜಾತಿಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಬೆಂಗಳೂರು ಚಲೋ ನಡೆಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ನೇತೃತ್ವದಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದ ಒಕ್ಕೂಟದ ನೂರಾರು ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಉರಿಲಿಂಗಿ ಪೆದ್ದ ಮಠದ ಪೀಠಾಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ರಾಜ್ಯಮಟ್ಟದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಸ್ ಗಳಲ್ಲಿ ತೆರಳಿದರು. ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುರೇಶ್ ಕಂಠಿ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ರಾಜ್ಯ ಛಲವಾದಿ ಮಹಾಸಭಾದ ಮನವಿಯನ್ನು ಗಣನೆಗೆ ತೆಗೆದುಕೊಳ್ಳದೆ ಏಕ ಪಕ್ಷಿಯವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ, ಬಲಗೈ, ಛಲವಾದಿ ಸಮುದಾಯಕ್ಕೆ ಸೇರಿದ ಹಲವು ಜಾತಿಗಳನ್ನು ಶೇಕಡ 1 ಗುಂಪಿಗೆ ಸೇರಿಸಿರುವುದು ಛಲವಾದಿ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ ಹೀಗಾಗಿ ಸರ್ಕಾರ ಅವರ ವರದಿಯನ್ನು ತಿರಸ್ಕರಿಸುವಂತೆ ಸುರೇಶ್ ಕಂಠಿ…
ಮಂಡ್ಯ : ಅಕ್ರಮವಾಗಿ ಮರಳು ದಂಧೆ ತಡೆಯಲು ಹೋದ ಗದಗ ಜಿಲ್ಲೆಯ ಹುಲ್ಲೂರು ಗ್ರಾಮದ ಸಹಾಯಕನನ್ನು ಭೀಕರವಾಗಿ ಹತ್ಯೆಗೈದಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಡ್ಯ ಜಿಲ್ಲಾ ಕಂದಾಯ ಇಲಾಖೆಯ ನೌಕರರ ಸಂಘ ಹಾಗೂ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಗದಗ ಜಿಲ್ಲೆಯ ಲಕ್ಷ್ಮಿಶ್ವರ ತಾಲೂಕಿನ ಹುಲ್ಲೂರು ಗ್ರಾಮದ ಸರಹದ್ದಿನಲ್ಲಿ ಅಕ್ರಮವಾಗಿ ಮರಳು ದಂಧೆ ನಿರಂತರವಾಗಿ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮ ಸಹಾಯಕ ರಫೀಕ್ ಹುಸೇನ್ ಸಾಬ್ ನದಾಫ್ ಕಳೆದ ಆಗಸ್ಟ್ 15 ರಂದು ಮರಳು ದಂಧೆಯನ್ನು ತಡೆಗಟ್ಟಲು ಹೋದಾಗ ದುಷ್ಕರ್ಮಿಗಳು ಹಾಗೂ ರಫೀಕ್ ನಡುವೆ ಮಾತಿನ ಚಕಮಕಿ ನಡೆಸಿ ಬಳಿಕ ಏಕಾಏಕಿ ಅವರ ಮೇಲೆ ಟ್ರಾಕ್ಟರ್ ಹರಿಸಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಿದರು. ಈ ಕೂಡಲೇ ಅಲ್ಲಿನ ಪೋಲೀಸ್ ಅಧಿಕಾರಿಗಳು ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕು. ಮೃತ ಗ್ರಾಮ ಸಹಾಯಕನ…
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿರುವಂತ ನಟ ದರ್ಶನ್ ಅವರನ್ನು, ಪತ್ನಿ ವಿಜಯಲಕ್ಷ್ಮೀ ಭೇಟಿಯಾದರು. ಅವರ ಕುಶಲೋಪರಿ ವಿಚಾರಿಸಿದಂತ ಅವರು ಹಣ್ಣು ನೀಡಿ, ಜೈಲಿನಿಂದ ವಾಪಾಸ್ ಆದರು. ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿಯಾದರು. ಸಾಮಾನ್ಯ ಎಂಟ್ರಿ ಹಿನ್ನಲೆಯಲ್ಲಿ ಅರ್ಧ ತಾಸು ಮಾತ್ರವೇ ಜೈಲು ಅಧಿಕಾರಿಗಳು ನಟ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮಿಗೆ ಅವಕಾಶ ಮಾಡಿಕೊಟ್ಟರು. ನಟ ದರ್ಶನ್ ಕುಶಲೋಪರಿ ವಿಚಾರಿಸಿದಂತ ಪತ್ನಿ ವಿಜಯಲಕ್ಷ್ಮಿ ಬಳಿಯಲ್ಲಿ ಮಗನ ಬಗ್ಗೆ ನಟ ದರ್ಶನ್ ವಿಚಾರಿಸಿದರು ಎನ್ನಲಾಗಿದೆ. ಆ ಬಳಿಕ ಅರ್ಧ ಗಂಟೆಯ ಸಮಯ ಮುಗಿದ ಕಾರಣ ಅಲ್ಲಿಂದ ವಾಪಾಸ್ ಆದರು ಎಂಬುದಾಗಿ ತಿಳಿದು ಬಂದಿದೆ. https://kannadanewsnow.com/kannada/shivamogga-extension-of-the-application-deadline-for-admission-to-post-metric-hostels/ https://kannadanewsnow.com/kannada/complainant-b-y-vijayendra-insists-on-a-comprehensive-investigation-into-the-individuals-behind-the-complainant/
ಶಿವಮೊಗ್ಗ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2025-26 ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿ ಪಡೆಯಲು ಆನ್ಲೈನ್ ಅರ್ಜಿ ಅವಧಿಯನ್ನು ಆ.25 ರವರೆಗೆ ವಿಸ್ತರಿಸಲಾಗಿದೆ. ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1 , 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗಕ್ಕೆ ಸೇರಿದ ಸಾಮಾನ್ಯ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು https://shp.karnataka.gov.in/bcwd ಇಲ್ಲಿ ಅರ್ಜಿ ಸಲ್ಲಿಸಬೇಕು. ಪ್ರವರ್ಗ-1, ಎಸ್.ಸಿ. ಮತ್ತು ಎಸ್.ಟಿ. ಗೆ ಸೇರಿದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು 2.50 ಲಕ್ಷ ಹಾಗೂ ಪ್ರವರ್ಗ -2ಎ, 2ಬಿ, 3ಎ, 3ಬಿ ಗೆ ಸೇರಿದ ಪೋಷಕರ ವಾರ್ಷಿಕ ಆದಾಯವು 1 ಲಕ್ಷದೊಳಗಿರಬೇಕು. ತಾಲ್ಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ ಹಾಗೂ ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರಿ ಆದೇಶಕ್ಕಾಗಿ ಇಲಾಖೆಯ ವೆಬ್ ಸೈಟ್ https://bcwd.karnataka.gov.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು…
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರದ ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ. ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಶನಿವಾರ ರಾತ್ರಿ ಹೇಳಿಕೆ ಕೊಟ್ಟು ಯಾವುದೇ ಕಾರಣಕ್ಕೂ ಎಸ್‍ಐಟಿ ರಚಿಸುವುದಿಲ್ಲ ಎಂದಿದ್ದರು. ಮರುದಿನವೇ ಅಂದರೆ, ಭಾನುವಾರ ಬೆಳಿಗ್ಗೆ ಎಸ್‍ಐಟಿ ರಚನೆಯ ಹೇಳಿಕೆ ಕೊಟ್ಟಿದ್ದರು. ರಾತ್ರೋರಾತ್ರಿ ಮುಖ್ಯಮಂತ್ರಿಗಳ ಅಭಿಪ್ರಾಯ ಬದಲಾಗಲು ಅವರ ಮೇಲೆ ಒತ್ತಡ ಹೇರಿದ್ದು ಯಾರು ಎಂದು ಸದನದಲ್ಲೇ ಪ್ರಶ್ನಿಸಿದ್ದೆ ಎಂದು ಗಮನಕ್ಕೆ ತಂದರು. ಒತ್ತಡ ಹೇರಿದ ಸಂಘಟನೆಗಳು ಯಾವುವು ಎಂಬ ಕುರಿತು ಸದನದ ಗಮನಕ್ಕೆ ತರಬೇಕು; ಮುಖ್ಯಮಂತ್ರಿಗಳು ಉತ್ತರಿಸಬೇಕೆಂದು ಕೋರಿದ್ದಾಗಿ ತಿಳಿಸಿದರು. ಮುಸುಕುಧಾರಿಯು ಧರ್ಮಸ್ಥಳದ ವಿಷಯದಲ್ಲಿ ಸಾಕಷ್ಟು ಪ್ರಚಾರ ತೆಗೆದುಕೊಂಡು, ರಾಜ್ಯ ಸರಕಾರ ಎಸ್‍ಐಟಿ ಸ್ಥಾಪಿಸುವ ಮಟ್ಟಕ್ಕೂ ಹೋಗಿದ್ದ. ಕಳೆದ 2-3 ವಾರಗಳಿಂದ ತನಿಖೆಯ ಜೊತೆಗೇ ಧರ್ಮಸ್ಥಳ, ಶ್ರೀ ಮಂಜುನಾಥೇಶ್ವರನ ಕ್ಷೇತ್ರದ ಕುರಿತು ಸಾಕಷ್ಟು ಅಪಪ್ರಚಾರಗಳು ನಡೆದಿದ್ದವು. ರಾಜ್ಯ-…
ಜಾಮ್‌ನಗರ : ಭಾರತದಲ್ಲಿ ಮೊದಲ ಬಾರಿಗೆ ಎಂಬಂತೆ ಉದ್ಯಮಿ ಅನಂತ್ ಅಂಬಾನಿ ಅವರು ಆರಂಭಿಸಿದ ವನ್ಯಜೀವಿ ರಕ್ಷಣಾ ಮತ್ತು ಸಂರಕ್ಷಣಾ ಉಪಕ್ರಮ ವಂತಾರ. ಗುಜರಾತ್‌ನ ಜಾಮ್‌ನಗರದಲ್ಲಿ ಇರುವ ವಂತಾರದ ಅತ್ಯಾಧುನಿಕ ಸೌಲಭ್ಯಗಳಲ್ಲಿ ಸೋಮವಾರದಂದು (ಆಗಸ್ಟ್ 18) ಸಂರಕ್ಷಣಾ ಔಷಧದ ಪರಿಚಯದ ಕುರಿತು ಪ್ರಮುಖ ಪಶುವೈದ್ಯಕೀಯ ತರಬೇತಿ ಕೋರ್ಸ್ ಅನ್ನು ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ವಿ. ಕ್ಲೆಮೆಂಟ್ ಬೆನ್, ಐಎಫ್‌ಎಸ್; ಉತ್ತರಾಖಂಡ ಸರ್ಕಾರದ ಮಾಜಿ ಪಿಸಿಸಿಎಫ್ ಮತ್ತು ಸಿಡಬ್ಲ್ಯೂಎಲ್‌ಡಬ್ಲ್ಯೂ ದಿಗ್ವಿಜಯ್ ಸಿಂಗ್ ಖಾಟಿ; ಭಾರತ ವನ್ಯಜೀವಿ ಸಂಸ್ಥೆಯ ಮಾಜಿ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಪ್ರದೀಪ್ ಕೆ. ಮಲಿಕ್; ಮತ್ತು ಜಿಜೆಡ್‌ಆರ್‌ಆರ್‌ಸಿ ನಿರ್ದೇಶಕ ಡಾ. ಬ್ರಿಜ್ ಕಿಶೋರ್ ಗುಪ್ತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಹೀಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅತಿಥಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಮತ್ತು ವನ್ಯಜೀವಿ ಆರೋಗ್ಯ ಮತ್ತು ಸಂರಕ್ಷಣೆಯನ್ನು ಮುನ್ನಡೆಸುವಲ್ಲಿ ಈ ಮೈಲುಗಲ್ಲು ಎನಿಸಿದಂಥ ಉಪಕ್ರಮದ ಮಹತ್ವವನ್ನು ಒತ್ತಿ ಹೇಳಿದರು.…












