Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ದಕ್ಷಿಣ ಮಧ್ಯ ರೈಲ್ವೆಯು ನರಸಾಪುರ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ 8 ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 07201 ನರಸಾಪುರ-ಅರಸೀಕೆರೆ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 6, 13, 20, 27 ಮತ್ತು ಮೇ 4, 11, 18, 25, 2025 (ಭಾನುವಾರ) ರಂದು ಮಧ್ಯಾಹ್ನ 2:20 ಕ್ಕೆ ನರಸಾಪುರದಿಂದ ಹೊರಟು, ಮರುದಿನ (ಸೋಮವಾರ) ಮಧ್ಯಾಹ್ನ 12:45ಕ್ಕೆ ಅರಸೀಕೆರೆಯನ್ನು ತಲುಪಲಿದೆ. ರೈಲು ಸಂಖ್ಯೆ 07202 ಅರಸೀಕೆರೆ-ನರಸಾಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 7, 14, 21, 28, ಮೇ 5, 12, 19, 26, 2025 (ಸೋಮವಾರ) ರಂದು ಮಧ್ಯಾಹ್ನ 2:00 ಗಂಟೆಗೆ ಅರಸೀಕೆರೆಯಿಂದ ಹೊರಟು, ಮರುದಿನ (ಮಂಗಳವಾರ) ಮಧ್ಯಾಹ್ನ 1:00 ಗಂಟೆಗೆ ನರಸಾಪುರವನ್ನು ತಲುಪಲಿದೆ. ಈ ರೈಲು ಎರಡೂ ಮಾರ್ಗಗಳಲ್ಲಿ ಪಾಲಕೊಲ್ಲು, ಭೀಮಾವರಂ ಟೌನ್, ಅಕಿವೀಡು, ಕೈಕಾಲೂರು, ಗುಡಿವಾಡ, ವಿಜಯವಾಡ, ಗುಂಟೂರು,…
ಕತ್ತಲೆ ಆವರಿಸಿದಾಗ ದುಷ್ಟ ಶಕ್ತಿಗಳು ಹೆಚ್ಚು ಸಕ್ರಿಯವಾಗಿರುತ್ತವೆ ಎಂದು ಹೇಳಲಾಗುತ್ತದೆ. ಕತ್ತಲೆ ನಮ್ಮನ್ನು ಆವರಿಸುವ ಅಮಾವಾಸ್ಯೆಯ ದಿನದಂದು ದುಷ್ಟ ಶಕ್ತಿಗಳ ಪ್ರಭಾವವೂ ಹೆಚ್ಚಾಗಿರುತ್ತದೆ. ಈ ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಅಮಾವಾಸ್ಯೆಯಂದು ಪಿತೃ ಪೂಜೆ ಮತ್ತು ಕುಲದೇವತೆಗಳ ಪೂಜೆಯನ್ನು ಮಾಡಬೇಕೆಂದು ನಮ್ಮ ಪೂರ್ವಜರು ಹೇಳಿದ್ದಾರೆ. ಇದರ ಆಧಾರದ ಮೇಲೆ, ನಿಮ್ಮ ಮನೆಯಲ್ಲಿ ದುಷ್ಟಶಕ್ತಿಗಳಿಂದ ಯಾವುದೇ ಸಮಸ್ಯೆಗಳಿದ್ದರೆ, ಅಥವಾ ನಿಮ್ಮ ಮನೆಯಲ್ಲಿರುವ ಜನರು ದುಷ್ಟಶಕ್ತಿಗಳಿಂದ ಪ್ರಭಾವಿತರಾಗಿದ್ದರೆ, ಮುಂಬರುವ ಅಮಾವಾಸ್ಯೆಯಂದು ಹನುಮಂತನ ಈ ಶಕ್ತಿಶಾಲಿ ಮಂತ್ರವನ್ನು ಪಠಿಸಿ. ನಿಮ್ಮ ದುಃಖವು ಶೀಘ್ರದಲ್ಲೇ ನಿಮ್ಮನ್ನು ಬಿಟ್ಟು ಹೋಗುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ…
ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಾದ ಏಪ್ರಿಲ್ 14 ಅನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಈ ಘೋಷಣೆ ಮಾಡಿದ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, “ಸಂವಿಧಾನದ ಶಿಲ್ಪಿ, ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ಸ್ಥಾಪಿಸಿದವರು, ನಮ್ಮ ಗೌರವಾನ್ವಿತ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಜಿ ಅವರ ಜನ್ಮ ದಿನಾಚರಣೆಯಂದು ಈಗ ಸಾರ್ವಜನಿಕ ರಜಾದಿನವನ್ನು ಆಚರಿಸಲಾಗುವುದು” ಎಂದು ಹೇಳಿದ್ದಾರೆ. https://twitter.com/gssjodhpur/status/1905594963775373803 “ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ, ಬಾಬಾ ಸಾಹೇಬ್ ಅವರ ನಿಷ್ಠಾವಂತ ಅನುಯಾಯಿ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಭಾವನೆಗಳನ್ನು ಗೌರವಿಸಿದ್ದಾರೆ” ಎಂದು ಶೇಖಾವತ್ ಹೇಳಿದರು. ಡಾ. ಭೀಮರಾವ್ ಅಂಬೇಡ್ಕರ್ ಯಾರು? ಬಾಬಾಸಾಹೇಬ್ ಅಂಬೇಡ್ಕರ್ ಎಂದು ವ್ಯಾಪಕವಾಗಿ ಕರೆಯಲ್ಪಡುವ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಏಪ್ರಿಲ್ 14, 1891 ರಂದು ಮಧ್ಯಪ್ರದೇಶದ ಮಾವ್‌ನಲ್ಲಿ ಜನಿಸಿದರು. ಅವರು ಆಧುನಿಕ ಭಾರತವನ್ನು…
ನವದೆಹಲಿ: ಮೇ 1 ರಿಂದ ಉಚಿತ ಮಾಸಿಕ ಮಿತಿಯನ್ನು ಮೀರಿ ಎಟಿಎಂ ವಿತ್ ಡ್ರಾ ಶುಲ್ಕವನ್ನು 2 ರೂ.ಗೆ ಹೆಚ್ಚಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಘೋಷಿಸಿದೆ. ಇದರರ್ಥ ಉಚಿತ ಮಿತಿಯನ್ನು ಮೀರುವ ಪ್ರತಿ ವಹಿವಾಟಿಗೆ ಗ್ರಾಹಕರಿಗೆ ಈಗ 23 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ. ಇದು ಎಟಿಎಂ ವಿತ್ ಡ್ರಾ ಶುಲ್ಕದ ಹೆಚ್ಚಳವನ್ನು ಸೂಚಿಸುತ್ತದೆ. ಈ ಹಿಂದೆ ಪ್ರತಿ ವಹಿವಾಟಿಗೆ 21 ರೂ.ಶುಲ್ಕ ನಿಗದಿಪಡಿಸಲಾಗಿತ್ತು. ಗ್ರಾಹಕರು ತಮ್ಮ ಸ್ವಂತ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ ಐದು ಉಚಿತ ವಹಿವಾಟುಗಳನ್ನು (ಹಣಕಾಸು ಮತ್ತು ಹಣಕಾಸುೇತರ ಎರಡೂ) ಇನ್ನೂ ಅನುಮತಿಸಲಾಗುವುದು ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟಪಡಿಸಿದೆ. ಹೆಚ್ಚುವರಿಯಾಗಿ, ಅವರು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಉಚಿತ ವಹಿವಾಟುಗಳನ್ನು ಮಾಡಬಹುದು. ಮೆಟ್ರೋ ನಗರಗಳಲ್ಲಿ ಮೂರು ಮತ್ತು ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ ಐದು. ಬುಧವಾರ ಬಿಡುಗಡೆಯಾದ ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಆರ್‌ಬಿಐ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ನಗದು…
ಬೆಂಗಳೂರು: ಮುಸ್ಲಿಮರಿಗೆ ರಂಜಾನ್ ಕಿಟ್ ಘೋಷಣೆ ಮಾಡಿರುವ ಮೋದಿ ಅವ್ರೇ, ಹಿಂದೂಗಳಿಗೆ ಯುಗಾದಿ ಕಿಟ್ ಯಾವಾಗ ಕೊಡ್ತೀರೀ? ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ. ಸದಾ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮುಸ್ಲಿಮರಿಗೆ ರಂಜಾನ್ ಕಿಟ್ ಕೊಟ್ಟಿರುವುದಕ್ಕೆ ಸ್ವಾಗತ. ಅದೇ ರೀತಿ ದೇಶದಲ್ಲಿರುವ ಎಲ್ಲ ಹಿಂದೂಗಳು ಯುಗಾದಿ ಕಿಟ್ ನಿರೀಕ್ಷೆಯಲ್ಲಿದ್ದಾರೆ. ನೀವು ಆದಷ್ಟು ಬೇಗ ಯುಗಾದಿ ಕಿಟ್ ಘೋಷಣೆ ಮಾಡಿ ಬಹುಸಂಖ್ಯಾತ ಹಿಂದೂಗಳ ಹಬ್ಬದ ಸಂಭ್ರಮವನ್ನು ಹೆಚ್ಚಿಸಿ ಎಂದು ಸಲಹೆ ನೀಡಿದ್ದಾರೆ. ಧರ್ಮದ ಆಧಾರದಲ್ಲಿ ಚುನಾವಣೆ ಎದುರಿಸುತ್ತಾ ಮುಸ್ಲಿಂ ದ್ವೇಷ ಕಾರುವ ಬಿಜೆಪಿ, ಈಗ ಕಿಟ್ ಕೊಟ್ಟು ಮುಸ್ಲಿಮರ ಓಲೈಕೆಗೆ ಮುಂದಾಗಿದೆ. ಅದೇ ರಾಜ್ಯದಲ್ಲಿ ಬಿಜೆಪಿ ನಾಯಕರು ರಾಜ್ಯ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಟೀಕೆ ಮಾಡ್ತಾರೆ. ಇಂತಹ ಡಬಲ್ ಸ್ಟಾಂಡರ್ಡ್ ಮನಸ್ಥಿತಿಯನ್ನು ಬಿಜೆಪಿ ನಾಯಕರು ಬಿಟ್ಟರೆ ಒಳ್ಳೆಯದು ಎಂದಿದ್ದಾರೆ. ನಮ್ಮ ಸರಕಾರ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು…
ಶಿವಮೊಗ್ಗ: ನಾನು ರೈತ ವಿರೋಧಿ ಅಂತ ಹೇಳಿದ್ದಾರೆ. ಒಬ್ಬನೇ ಒಬ್ಬ ರೈತ ನನ್ನು ಕಡೆಗೆ ಬೊಟ್ಟು ಮಾಡಿ ತೋರಿಸಲಿ. ನಾನು ಒಂದೇ ಮನೆಯಲ್ಲಿ ಎರಡು ಬೋರು ಇರೋರು ಕನೆಕ್ಷನ್ ಕಟ್ ಮಾಡಿ. ಟ್ರಾನ್ಸ್ ಫಾರ್ಮರ್ ಮೇಲಿನ ಲೋಡ್ ಕಡಿಮೆ ಆಗಲಿದೆ ಅಂತ ಹೇಳಿದ್ದೇನೆ ವಿನಹ ಬೇರೇನು ಅಲ್ಲ. ಏ ಹಾಲಪ್ಪ 9,000 ಮುಳುಗಡೆ ರೈತರಿಗೆ ವಿಷ ಕೊಟ್ಟ ಪಾಪಿ ನೀನು ಮತ್ತು ರಾಘವೇಂದ್ರ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ಧಾಳಿ ನಡೆಸಿದ್ದಾರೆ. ಇಂದು ಸಾಗರ ನೆಹರು ಮೈದಾನದಲ್ಲಿ ನಡೆದಂತ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ನಾನು ರೈತ ವಿರೋಧಿ ಅಂತ ಹೇಳ್ತಾರೆ. ನಿನ್ನೆ ಸ್ಟೇಟ್ಮೆಂಟ್ ನೋಡಿದೆ. ಗೋಪಾಲಕೃಷ್ಣ ಬೇಳೂರು ರೈತರ ವಿರೋಧಿ. ನಾನು ರೈತರ ವಿರೋಧಿ ಅಂತ ಯಾರಾದರೂ ಒಬ್ಬರು ಬೆಟ್ಟು ಮಾಡಿ ತೋರಿಸಲಿ. ಬಡವರ ವಿರೋಧಿ ಅಂತ ತೋರಿಸಲಿ. ನಾನು ಹೇಳಿದ್ದು ಏನೆಂದ್ರೇ ಎರಡು ಪಂಪ್ ಸೆಟ್ ಇಟ್ಟುಕೊಂಡಿದ್ದಂತ ವ್ಯಕ್ತಿಗೆ ಒಂದಕ್ಕೆ ಅವಕಾಶ ಕೊಡ್ರಪ್ಪ. ಒಂದೊಂದು ಮನೆಗೆ…
ಹಾವೇರಿ: ಬ್ಯಾಂಕಾಕ್ ಗೆ ಪ್ರವಾಸಕ್ಕೆ ತೆರಳಿದ್ದಂತ ಹಾವೇರಿಯ ಐವರು ಕನ್ನಡಿಗರು ಸುರಕ್ಷಿತರಾಗಿರುವುದಾಗಿ ವೀಡಿಯೋ ಕರೆ ಮಾಡಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಬೆಂಗಳೂರಿನಿಂದ ತೆರಳಿದ್ದಂತ 22 ಮಂದಿಯೂ ಸುರಕ್ಷಿತರಾಗಿದ್ದಾರೆ. ಇಂದು ಮ್ಯಾನ್ಮಾರ್ ಹಾಗೂ ಬ್ಯಾಂಕಾಕ್ ನಲ್ಲಿ ಪ್ರಬಲ ಭೂಕಂಪನ ಉಂಟಾಗಿತ್ತು. 7.7ರ ತೀವ್ರತೆಯಲ್ಲಿ ಭೂಕಂಪ ಉಂಟಾಗಿತ್ತು. ಈ ಭೂಕಂಪನದಿಂದಾಗಿ ಹಲವು ಬಹುಮಹಡಿ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಸಮಗೊಂಡಿದ್ದಾವೆ. ಈ ಎಲ್ಲಾ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬ್ಯಾಂಕಾಕ್ ಗೆ ಐದು ದಿನಗಳ ಪ್ರವಾಸಕ್ಕೆಂದು 22 ಮಂದಿ ಬೆಂಗಳೂರಿನಿಂದ ತೆರಳಿದ್ದರು. ಇವತ್ತು ಸಫಾರಿ ವರ್ಡ್ ಗೆ ಹೋಗಿದ್ದಂತ ಸಂದರ್ಭದಲ್ಲಿ ಭೂಕಂಪನದ ಅನುಭವ ಉಂಟಾಗಿತ್ತು. ಬಳಿಕ ಸುವರ್ಣ ಭೂಮಿ ಏರ್ ಪೋರ್ಟ್ ಗೆ ಸುರಕ್ಷಿತವಾಗಿ ಕನ್ನಡಿಗರು ತೆರಳಇದ್ದರು. ಇದೀಗ ಬ್ಯಾಂಕಾಕ್ ನಲ್ಲಿ ಎಲ್ಲರೂ ಸುರಕ್ಷಿತವಾಗಿದ್ದೇವೆ. ವಿಮಾನ ಬಿಡುವ ವೇಳೆಯಲ್ಲಿ ವ್ಯತ್ಯಾಯಸವಾಗಿದೆ ಎಂಬುದಾಗಿ ವಿಮಾನ ನಿಲ್ದಾಣದಿಂದಲೇ ವೀಡಿಯೋ ಮಾಡಿ ಐವರು ಕನ್ನಡಿಗರು ಸ್ಪಷ್ಟ ಪಡಿಸಿದ್ದಾರೆ. https://kannadanewsnow.com/kannada/reels-case-court-grants-bail-to-vinay-rajat/ https://kannadanewsnow.com/kannada/breaking-setback-for-h-d-kumaraswamy-in-the-supreme-court-petition-filed-to-stay-kethamaranhalli-encroachment-eviction-dismissed/
ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿದಂತ ಹಿನ್ನಲೆಯಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದಂತ ವಿನಯ್ ಹಾಗೂ ರಜತ್ ವಿರುದ್ಧ ಕೇಸ್ ದಾಖಲಿಸಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕೋರ್ಟ್ ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ. ಇಂದು ಪೊಲೀಸರ ವಶದಲ್ಲಿದ್ದಂತ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದಂತ ವಿನಯ್ ಹಾಗೂ ರಜತ್ ಕಸ್ಟಡಿ ಅವಧಿ ಮುಕ್ತಾಯಗೊಂಡಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ 24ನೇ ಎಸಿಜೆಎಂ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ 24ನೇ ಎಸಿಜೆಎಂ ಕೋರ್ಟ್ ನ್ಯಾಯಾಧೀಶರು ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಹಾಗೂ ವಿನಯ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ವಿನಯ್ ಹಾಗೂ ರಜತ್ ಗೆ ತಲಾ 10 ಸಾವಿರ ರೂಪಾಯಿ ಶೂರಿಟಿಯ ಷರತ್ತು ಬದ್ಧ ಜಾಮೀನನ್ನು ಕೋರ್ಟ್ ನೀಡಿದೆ. ಈ ಮೂಲಕ ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್, ವಿನಯ್ ಗೆ ಮಚ್ಚು ಹಿಡಿದು ರೀಲ್ಸ್ ಮಾಡಿದಂತ ಪ್ರಕರಮದಲ್ಲಿ ಬಿಗ್ ರಿಲೀಫ್ ನೀಡಿದಂತೆ…
ಬೆಂಗಳೂರು: ನಗರದ ಜನತೆಗೆ ಗುಡ್ ಎನ್ನುವಂತೆ ಬೆಂಗಳೂರಿನ ಹೊಸ ಮಾರ್ಗವೊಂದರಲ್ಲಿ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಈ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬಿಎಂಟಿಸಿಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ. ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ನೂತನ ಮಾರ್ಗವನ್ನು ದಿನಾಂಕ 02.04.2025 ರಿಂದ ರಿಂದ ಪರಿಚಯಿಸಿದ್ದು, ವಿವರ ಕೆಳಕಂಡಂತಿದೆ: ಕ್ರ.ಸಂ ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸುಗಳ ಸಂಖ್ಯೆ 01 220-ಬಿ/1 ಕೆ.ಆರ್ ಮಾರುಕಟ್ಟೆ ಉಪಾಧ್ಯಾಯ ಬಡಾವಣೆ ಸಿರ್ಸಿ ಸರ್ಕಲ್, ನಾಯಂಡಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯ ಗೇಟ್, ಚಂದ್ರಮೌಳೇಶ್ವರ ದೇವಸ್ಥಾನ, ಭೈರವನಗರ 01 02 220-ಸಿ/1 ಕೆಂಪೇಗೌಡ ಬಸ್ ನಿಲ್ದಾಣ ಜ್ಞಾನ ಭಾರತಿ ಲೇಔಟ್ 01ನೇ ಬ್ಲಾಕ್ ಸಿರ್ಸಿ ಸರ್ಕಲ್, ನಾಯಂಡಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯ ಗೇಟ್, ಚಂದ್ರಮೌಳೇಶ್ವರ ದೇವಸ್ಥಾನ, ಭೈರವನಗರ 01 …
ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿ ವಿವಾದಕ್ಕೆ ಸಿಲುಕಿ ನ್ಯಾಯಾಂಗ ಬಂಧನದಲ್ಲಿರುವಂತ ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಹಾಗೂ ವಿನಯ್ ಅವರ ಪೊಲೀಸ್ ಕಸ್ಟಡಿ ಇಂದು ಕೊನೆಗೊಂಡಿತ್ತು. ಅವರನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ಇಂತಹ ಇಬ್ಬರು ಮಾಜಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಮತ್ತೆ ನ್ಯಾಯಾಂಗ ಬಂಧನ ನೀಡಿ ಕೋರ್ಟ್ ಆದೇಶಿಸಿದೆ. ಮಚ್ಚು ಹಿಡಿದು ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದಂತ ವಿನಯ್ ಹಾಗೂ ರಜತ್ ರೀಲ್ಸ್ ಮಾಡಿದ್ದರು. ಈ ಸಂಬಂಧ ಇಬ್ಬರ ವಿರುದ್ಧ ಕೇಸ್ ದಾಖಲಿಸಿದ್ದಂತ ಪೊಲೀಸರು ಬಂಧಿಸಿದ್ದರು. ಆ ಬಳಿಕ ಕೋರ್ಟ್ ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದರು. ಇಂದು ರಜತ್ ಹಾಗೂ ವಿನಯ್ ಪೊಲೀಸರ ವಶದಲ್ಲಿದ್ದಂತ ಅವಧಿ ಮುಕ್ತಾಯಗೊಂಡಿತ್ತು. ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯಕ್ಕೆ ಪೊಲೀಸರು ಇಬ್ಬರನ್ನು ಹಾಜರುಪಡಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದಂತ ಕೋರ್ಟ್, ಏಪ್ರಿಲ್ 9ರವರೆಗೆ ವಿನಯ್ ಹಾಗೂ ರಜತ್ ಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಈ ಮೂಲಕ ಮಾಜಿ…