Author: kannadanewsnow09

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ವೀರೇಂದ್ರ ಹೆಗಡೆ ಅವರು ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅದು ಏನು ಅಂತ ಮುಂದೆ ಓದಿ. ಇಂದು ಸುದ್ದಿಗಾರರೊಂದಿಗೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವಂತ ಅವರು, ಧರ್ಮಸ್ಥಳದ ಬಗ್ಗೆ ಅನಗತ್ಯವಾಗಿ ಗೊಂದಲ ಮೂಡಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತರಾವರಿಯಾಗಿ ಸುದ್ದಿ ಪ್ರಕಟಿಸಲಾಗುತ್ತಿದೆ ಎಂದರು. ಎಸ್ಐಟಿ ಬಗ್ಗೆ ನನಗೆ ನಂಬಿಕೆಯಿದೆ. ಉತ್ತಮ ರೀತಿಯಲ್ಲಿ ಕೆಲಸ ಮಾಡಿ, ಸತ್ಯವನ್ನು ಹೊರ ತರಲಿದೆ. ಸಿಬಿಐ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದರು. https://twitter.com/PTI_News/status/1957750961692139638 ಅಂದಹಾಗೇ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸಲಾಗುತ್ತಿದೆ. ಮಾಸ್ಕ್ ಮ್ಯಾನ್ ತೋರಿಸಿದಂತ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಉತ್ಖನನಗ ವೇಳೆಯಲ್ಲಿ ಎರಡು ಸ್ಥಳಗಳಲ್ಲಿ ಮಾತ್ರವೇ ಅಸ್ಥಿ ಪಂಜರಗಳು ದೊರೆತಿವೆ. ಸದ್ಯ ತಾತ್ಕಾಲಿಕವಾಗಿ ಶೋಧ ಕಾರ್ಯಾಚರಣೆಗೆ ಬ್ರೇಕ್ ಹಾಕಲಾಗಿದೆ. ಎಸ್ಐಟಿಯು ಮಾಸ್ಕ್ ಮ್ಯಾನ್ ಅನ್ನು ಈ ವಿಚಾರವಾಗಿ ವಿಚಾರಣೆ ನಡೆಸುತ್ತಿದೆ. ನಿನ್ನೆ ಇದೇ ವಿಚಾರ ಕೂಡ ವಿಧಾನಸಭೆಯಲ್ಲಿ ಚರ್ಚೆಯಾಗಿತ್ತು. ಗೃಹ ಸಚಿವ…

Read More

ಬೆಂಗಳೂರು: ಇಂದು ಬಿಜೆಪಿ ಸಭಾತ್ಯಾಗದ ನಡುವೆಯೂ ವಿಧಾನಸಭೆಯಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2025 ಅಂಗೀಕಾರಗೊಂಡಿದೆ. ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದಿಂದ 2025ನೇ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧವನ್ನು ವ್ಯಕ್ತ ಪಡಿಸಿ, ಸಭಾತ್ಯಾಗ ಕೂಡ ನಡೆಸಲಾಯಿತು. ಇದಕ್ಕೂ ಮುನ್ನಾ ಸುದೀರ್ಘ ಚರ್ಚೆಯನ್ನು ಬಿಜೆಪಿ ಸದಸ್ಯರು ನಡೆಸಿದರು. ಇದು ರಿಯಲ್ ಎಸ್ಟೇಟ್ ಪರವಾಗಿದೆ ಎಂಬುದಾಗಿ ಆರಂಭದಿಂದಲೂ ವಿರೋಧ ವ್ಯಕ್ತ ಪಡಿಸಿದರು. ಆ ಬಳಿಕ ವಿಧೇಯಕಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಲಾಯಿತು. ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆಯೂ 2025ನೇ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.

Read More

ಬೆಂಗಳೂರು: ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಒಳ ಮೀಸಲಾತಿ ಕಲ್ಪಿಸುವ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ ಇಂದು ಸಂಜೆ 7.30ಕ್ಕೆ ನಡೆಯಲಿದೆ. ಈ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಹೈಅಲರ್ಟ್ ನೀಡಲಾಗಿದೆ. ಇಂದು ಸಂಜೆ 7.30ಕ್ಕೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಕುರಿತಂತೆ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಯಾದ್ರೆ ಸಂಭ್ರಮಾಚಾರಣೆಗೂ ಸಮುದಾಯದವರು ಸಿದ್ಧರಾಗಿದ್ದಾರೆ. ಇನ್ನೊಂದು ಗುಂಪಿನಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ವಿರೋಧಿಸಲಾಗಿದೆ. ಅಲ್ಲದೇ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ದಲಿತ ಎಡಗೈ ಸಮಾಜದ ನಾಯಕ ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿಧಾನಸೌಧದ ಸುತ್ತಮುತ್ತ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. https://kannadanewsnow.com/kannada/greater-bangalore-administration-amendment-bill-2025-passed-in-the-legislative-assembly/ https://kannadanewsnow.com/kannada/the-special-state-cabinet-meeting-scheduled-for-today-at-5-pm-has-been-postponed-to-730-pm/

Read More

ಬೆಂಗಳೂರು: 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಈ ವಿಧೇಯಕವನ್ನು ಮಂಡಿಸಿದರು. ವಿರೋಧ ಪಕ್ಷದ ನಾಯಕರು, ಶಾಸಕರು ಚರ್ಚೆ ನಡೆಸಿದ ನಂತರ ಅನುಮೋದನೆ ನೀಡಲಾಯಿತು. ಸ್ಪಷ್ಟನೆಗಾಗಿ ತಿದ್ದುಪಡಿ ತರಲಾಗಿದೆ 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕದ ಪ್ರಸ್ತಾವನೆ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಇದರಲ್ಲಿ ಒಂದು ಸಣ್ಣ ಸ್ಪಷ್ಟನೆ ನೀಡುವುದಿದೆ. ಏಕೆಂದರೆ ಮಸೂದೆ ಅಂಗೀಕಾರಗೊಂಡಿದ್ದರೂ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಹೀಗಾಗಿ ಈ ಮಸೂದೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ” ಎಂದು ತಿಳಿಸಿದರು. ಈ ತಿದ್ದುಪಡಿಯ ಉದ್ದೇಶ ಹಾಗೂ ಇದರ ಪರಿಣಾಮವೇನು ಎಂಬ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಈಗ ಜಾರಿಯಲ್ಲಿರುವ ಕಾಯ್ದೆ ಅನುಸಾರ ಜಿಬಿಎ ಅಡಿಯಲ್ಲಿ…

Read More

ಅರಿಶಿನ ಕೊಂಬಿನ ಮಾಲೆ ಎಂದರೆ ಅರಿಶಿನದ ಕೊಂಬುಗಳಿಂದ ಮಾಡಿದ ಒಂದು ರೀತಿಯ ಮಾಲೆ. ಇದನ್ನು ಸಾಮಾನ್ಯವಾಗಿ ಮಂಗಳ ಕಾರ್ಯಗಳಲ್ಲಿ ಅಥವಾ ಧಾರ್ಮಿಕ ಆಚರಣೆಗಳಲ್ಲಿ ಬಳಸುತ್ತಾರೆ. ಅರಿಶಿನವು ಶುದ್ಧಿ ಮತ್ತು ಮಂಗಳಕರ ಸಂಕೇತವಾಗಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ಅರಿಶಿನ ಕೊಂಬಿನ ಮಾಲೆಯು ಅರಿಶಿನದ ಕೊಂಬುಗಳನ್ನು ಒಟ್ಟಿಗೆ ಸೇರಿಸಿ, ದಾರದಿಂದ ಕಟ್ಟಿ ತಯಾರಿಸಲಾಗುತ್ತದೆ. ಕೆಲವೊಮ್ಮೆ ಅರಿಶಿನದ ಕೊಂಬುಗಳ ಜೊತೆಗೆ ಇತರ ವಸ್ತುಗಳನ್ನು ಕೂಡ ಸೇರಿಸಲಾಗುತ್ತದೆ. ಇದು ಮದುವೆ, ಗೃಹಪ್ರವೇಶ, ಅಥವಾ ಇತರ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಅಲ್ಲದೆ, ದೇವಸ್ಥಾನಗಳಲ್ಲಿ ಅಥವಾ ಪೂಜಾ ಸ್ಥಳಗಳಲ್ಲಿಯೂ ಇದನ್ನು ಕಾಣಬಹುದು. ಅರಿಶಿನದ ಮಾಲೆಯನ್ನು ಧರಿಸುವುದರಿಂದ ಮಂಗಳಕರ ಮತ್ತು ಶುಭ ಫಲಿತಾಂಶಗಳು ಸಿಗುತ್ತವೆ ಎಂಬ ನಂಬಿಕೆಯಿದೆ. ‌ ಅರಿಶಿನದ ಕೊಂಬುಗಳ ಜೊತೆಗೆ…

Read More

ಬೆಂಗಳೂರು: ಡೆಲಾಯ್ಟ್‌ ಇಂಡಿಯಾ ಪ್ಯಾರಾಒಲಂಪಿಕ್‌ನಲ್ಲಿ ಚಿನ್ನದಪದಕ ಪಡೆದ ಬಿಲ್ಲುಗಾರ್ತಿ ಶೀತಲ್ ದೇವಿ ಅವರೊಂದಿಗೆ ಪಾಲುದಾರಿಕೆ ಘೋಷಿಸಿದ್ದು, ಪ್ಯಾರಒಲಂಪಿಕ್‌ನಲ್ಲಿ ಭಾಗವಹಿಸಲು ಇಚ್ಚಿಸುವ ಹಾಗೂ ಅರ್ಹರ ಪ್ರತಿಭೆಗೆ ಬೆಂಬಲ ನೀಡಲು ಮುಂದಾಗಿದೆ. ಈ ಕುರಿತು ಮಾತನಾಡಿದ ಡೆಲಾಯ್ಟ್ ದಕ್ಷಿಣ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಮಲ್ ಶೆಟ್ಟಿ, 15 ನೇ ವಯಸ್ಸಿನಲ್ಲಿ ಬಿಲ್ಲು ಎತ್ತುವ ಮೂಲಕ ಶೀತಲ್‌ ತನ್ನ ಪ್ರತಿಭೆಯನ್ನು ಇಡೀ ಜಗತ್ತಿಗೆ ತಿಳಿಸಿದರು, 16 ನೇ ವಯಸ್ಸಿನಲ್ಲಿ ವಿಶ್ವದ ನಂ. 1 ಬಿಲ್ಲುಗಾರ್ತಿ ಆಗುವುದಷ್ಟೇ ಅಲ್ಲದೆ, 17 ನೇ ವಯಸ್ಸಿನಲ್ಲಿ ಅರ್ಜುನ ಪ್ರಶಸ್ತಿ ಮತ್ತು ಪ್ಯಾರಾಲಿಂಪಿಕ್ ಕಂಚಿನ ಪದಕವನ್ನು ಗಳಿಸಿದರು, ಇಂತಹ ಪ್ರತಿಭೆಗಳನ್ನು ಪೋಷಿಸಲು ಡೆಲಾಯ್ಟ್‌ ಇಂಡಿಯಾ ಅರ್ಹರಿಗೆ ಸಂಪೂರ್ಣ ಬೆಂಬಲ ನೀಡಲು ಮುಂದಾಗಿದೆ. ಭಾರತದ ಭವಿಷ್ಯವು ಇಂತಹ ಪ್ರತಿಭಾನ್ವಿತರ ಕೈಯಲ್ಲಿದ್ದು, ಇವರಿಗೆ ಬೇಕಾದ ಸವಲತ್ತು ಹಾಗೂ ಸೌಲಭ್ಯ ಒದಗಿಸಿದರೆ, ಪ್ರತಿಯೊಬ್ಬರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಿರೀಟವನ್ನು ಎತ್ತಿ ಹಿಡಿಯುತ್ತಾರೆ. ಭಾರತದ ದೊಡ್ಡ ಶಕ್ತಿ ಅದರ ಜನರಲ್ಲಿದೆ, ಅವರು ದೊಡ್ಡ ಕನಸು ಕಾಣುವ,…

Read More

ಬೆಂಗಳೂರು: ಭಾರತದ ಪ್ರಮುಖ ಆನ್-ಡಿಮಾಂಡ್ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಲಿಮಿಟೆಡ್, ಐಟಿ ಹಾಗೂ ಇತರೆಡೆ ಕೆಲಸ ಮಾಡುವರಿಗಾಗಿ ಡೆಸ್ಕ್‌ಈಟ್ಸ್‌ ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಕುರಿತು ಮಾತನಾಡಿದ ಸ್ವಿಗ್ಗಿಯ ಉಪಾಧ್ಯಕ್ಷ , (ಆಹಾರ ತಂತ್ರ, ಗ್ರಾಹಕ ಅನುಭವ ಮತ್ತು ಹೊಸ ಉಪಕ್ರಮಗಳು) ಶ್ರೀ ದೀಪಕ್ ಮಲೂ, ಇದು ಭಾರತದ 30 ನಗರಗಳಲ್ಲಿನ 7 ಸಾವಿರಕ್ಕೂ ಅಧಿಕ ಟೆಕ್ ಪಾರ್ಕ್‌ಗಳು, ವ್ಯಾಪಾರ ಕೇಂದ್ರಗಳು ಮತ್ತು ಕಾರ್ಪೊರೇಟ್ ಕಾಂಪ್ಲೆಕ್ಸ್‌ಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಫುಡ್ ಅನುಭವವಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಗುರುಗ್ರಾಮ್, ಪುಣೆ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಇದು ಲಭ್ಯವಿದೆ. ಡೆಸ್ಕ್‌ ಈಟ್‌, ಕಚೇರಿಯಲ್ಲಿರುವಾಗ ಸುಲಭ, ವೇಗ ಮತ್ತು ವೈವಿಧ್ಯಮಯ ಆಹಾರ ಸೇವೆಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಈ ಸಂಗ್ರಹವು 200,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಿಂದ ಸುಮಾರು 7 ಲಕ್ಷ ಆಹಾರ ಪದಾರ್ಥಗಳನ್ನು ಒಳಗೊಂಡಿದೆ. ಬಳಕೆದಾರರು ಸ್ವಿಗ್ಗಿ ಅಪ್ಲಿಕೇಶನ್‌ನಲ್ಲಿ “ಆಫೀಸ್‌” ಅಥವಾ “ವರ್ಕ್‌” ಎಂದು ಟೈಪ್ ಮಾಡುವ ಮೂಲಕ ಈ ಸೇವೆಯನ್ನು ಪಡೆಯಬಹುದು.…

Read More

ಬೆಂಗಳೂರು: ಸುಜಾತ ಭಟ್ ಮೃತ ಯುವತಿ ಪೋಟೋ ತೋರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದೂರುದಾರೆ ಸುಜಾತಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅದು ಏನು ಅಂತ ಮುಂದೆ ಓದಿ. ಈ ಕುರಿತಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವಂತ ದೂರುದಾರೆ ಸುಜಾತ ಭಟ್ ಅವರು, ಎಲ್ಲರೂ ಒಂದೊಂದು ರೀತಿ ತೇಜೋವಧೆ ಮಾಡುತ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ. ನನ್ನ ನೋವು ನನಗೆ ಗೊತ್ತು ಎಂಬುದಾಗಿ ಕಿಡಿಕಾರಿದರು. ಇದರಲ್ಲಿ ಫೇಕ್ ಯಾವುದೂ ಇಲ್ಲ. ನಾನು ರಂಗಪ್ರಸಾದ್ ಅವರ ಮನೆಯಲ್ಲಿ ಇದ್ದಿದ್ದು ನಿಜ. ನಾನು ಕೇಳಿರೋದು ನನ್ನ ಮಗಳ ಅಸ್ಥಿ. ಅನಾಮಧೇಯ ವ್ಯಕ್ತಿ ಬಂದು ಶವಗಳನ್ನು ಹೂತಿದ್ದಾಗಿ ಹೇಳಿದ್ದ. ನನ್ನ ಮಗಳ ಅಸ್ಥಿ ಪಂಜರ ಸಿಕ್ಕಿದ್ರೆ ಕೊಡಿ ಎಂದು ಕೇಳಿದ್ದೆ ಎಂದರು. ಪೋಟೋದಲ್ಲಿ ಇರುವವಳು ನನ್ನ ಮಗಳು. ಅದು ಸತ್ಯ. ಒಬ್ಬ ವ್ಯಕ್ತಿ ರೀತಿ ತುಂಬಾ ಜನ ಇರುತ್ತಾರೆ ಅಲ್ವ? ನನ್ನ ಭಾವ ಈ ಆರೋಪಗಳನ್ನು ಮಾಡ್ತಿದ್ದಾರೆ. ನಾನು ಎಲ್ಲಿ ದಾಖಲೆ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದರು. ರಿಪ್ಪನ್ ಪೇಟೆಯಲ್ಲಿ ಪ್ರಭಾಕರ್…

Read More

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಹೀಗಾಗಿ ಬೆಂಗಳೂರು ನಗರ ವಿವಿ, ಇನ್ಮುಂದೆ ಡಾ.ಮನಮೋಹನ್ ಸಿಂಗ್ ವಿವಿ ಎಂಬುದಾಗಿ ಮರುನಾಮಕರಣವಾಗಲಿದೆ. ಬೆಂಗಳೂರು ನಗರ ವಿವಿಯ ಹೆಸರು ಮರು ನಾಮಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಈ ವಿಧೇಯಕದ ಬಗ್ಗೆ ಚರ್ಚೆಯ ನಂತ್ರ ಅಂಗೀಕಾರವನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಹೆಸರು ಬದಲಾವಣೆಯಾಗಲಿದೆ. ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕವು ವಿಧಾನ ಪರಿಷತ್ತಿನಲ್ಲೂ ಅಂಗೀಕಾರಗೊಂಡರೇ ಡಾ.ಮನಮೋಹನ್ ಸಿಂಗ್ ವಿವಿ ಎಂಬುದಾಗಿ ಬೆಂಗಳೂರು ನಗರ ವಿವಿ ಮರು ನಾಮಕರಣವಾಗಲಿದೆ. https://kannadanewsnow.com/kannada/dharmasthala-case-this-is-veerendra-hegdes-first-reaction/ https://kannadanewsnow.com/kannada/the-special-state-cabinet-meeting-scheduled-for-today-at-5-pm-has-been-postponed-to-730-pm/

Read More

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ವೀರೇಂದ್ರ ಹೆಗಡೆ ಅವರು ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ರಾಜ್ಯ ಸರ್ಕಾರದ ಎಸ್ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ. ಅಲ್ಲದೇ ನಾನು ಸಿಬಿಐ ತನಿಖೆಯ ವೇಳೆಯಲ್ಲೂ ಸಂಪೂರ್ಣವಾಗಿ ಸಹಕಾರ ನೀಡಿದ್ದಾಗಿ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವಂತ ಅವರು, ಧರ್ಮಸ್ಥಳದ ಬಗ್ಗೆ ಅನಗತ್ಯವಾಗಿ ಗೊಂದಲ ಮೂಡಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತರಾವರಿಯಾಗಿ ಸುದ್ದಿ ಪ್ರಕಟಿಸಲಾಗುತ್ತಿದೆ ಎಂದರು. ಎಸ್ಐಟಿ ಬಗ್ಗೆ ನನಗೆ ನಂಬಿಕೆಯಿದೆ. ಉತ್ತಮ ರೀತಿಯಲ್ಲಿ ಕೆಲಸ ಮಾಡಿ, ಸತ್ಯವನ್ನು ಹೊರ ತರಲಿದೆ. ಸಿಬಿಐ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದರು. https://twitter.com/PTI_News/status/1957750961692139638 ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಧರ್ಮಸ್ಥಳಕ್ಕೆ ಕಳಂಕ ತರಲು ಕೆಲವರು ಯತ್ನಿಸುತ್ತಿದ್ದಾರೆ. ಎಸ್ಐಟಿ ಅಧಿಕಾರಿಗಳ ತನಿಖಾ ವರದಿಗಾಗಿ ನಾವು ಕಾಯುತ್ತಿದ್ದೇವೆ. ಎಸ್ಐಟಿ ಸತ್ಯ ಹೊರಗೆ ತರುತ್ತೆ ಎಂದು ವೀರೇಂದ್ರ ಹೆಗಡೆ ಎಸ್ಐಟಿ ತನಿಖೆಯನ್ನು ಸ್ವಾಗತಿಸಿದರು. ಅಂದಹಾಗೇ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸಲಾಗುತ್ತಿದೆ. ಮಾಸ್ಕ್ ಮ್ಯಾನ್…

Read More