Subscribe to Updates
Get the latest creative news from FooBar about art, design and business.
Author: kannadanewsnow09
ಬಳ್ಳಾರಿ : ಧಾರವಾಡ ಶಹರದ ಸಪ್ತಾಪೂರ ರಸ್ತೆಯಲ್ಲಿರುವ ಮಿಲಿಟರಿ ಬಾಲಕಿಯರ ವಸತಿ ನಿಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷಕ್ಕಾಗಿ ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಪ್ರದೇಶ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಯುದ್ದದಲ್ಲಿ ಮಡಿದ ಯೋಧರ ಮತ್ತು ಮಾಜಿ ಸೈನಿಕರ ಹೆಣ್ಣು ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 5 ನೇ ತರಗತಿಯಿಂದ ಪಿಯುಸಿ – 2 ರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ವಸತಿ ನಿಲಯದಲ್ಲಿ ವಾಸ್ತವ್ಯ ಮತ್ತು ಊಟೋಪಚಾರಗಳು ಉಚಿತವಾಗಿದ್ದು, ಮಾಜಿ ಸೈನಿಕರ ಹೆಣ್ಣು ಮಕ್ಕಳು ಈ ಸೌಲಭ್ಯದ ಉಪಯೋಗ ಪಡೆಯಬಹುದಾಗಿದೆ. ವಸತಿ ನಿಲಯದಲ್ಲಿ ಧಾರವಾಡ ನಗರದಲ್ಲಿರುವ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಮಾತ್ರ ನಿಲಯದಲ್ಲಿ ಪ್ರವೇಶ ನೀಡಲಾಗುವುದು. ಅರ್ಜಿಗಳನ್ನು ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಉದಯ ಹಾಸ್ಟೆಲ್ ಸರ್ಕಲ್ ಸೈನಿಕ ವಿಶ್ರಾಂತಿ ಗೃಹ ಆವರಣ, ಧಾರವಾಡ ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಮೇ 31 ರೊಳಗಾಗಿ ಮರಳಿ ಇದೇ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಥವಾ…
ಅಥಣಿ: ಹಳ್ಳದಲ್ಲಿ ಸಾಗುತ್ತಿದ್ದಂತ ವೇಳೆಯಲ್ಲಿ ದಾರಿ ಕಾಣದೇ ಎತ್ತಿನ ಗಾಡಿಯೊಂದು ಮುಗುಚಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು, ಒಂದು ಎತ್ತು ಸಾವನ್ನಪ್ಪಿರುವಂತ ಘಟನೆ ಅಥಣಿಯಲ್ಲಿ ನಡೆದಿದೆ. ನಿರಂತರವಾಗಿ ಸುರಿಯುತ್ತಿರುವಂತ ಮಳೆಯಿಂದಾಗಿ ಹಳ್ಳಕ್ಕೆ ಸೇತುವೆ ಇಲ್ಲದ ಕಾರಣ, ಎತ್ತಿನ ಗಾಡಿಯಲ್ಲಿ ಸಾಗುತ್ತಿದ್ದಾಗ ದಾರಿ ಕಾಣದೇ ಮುಗುಚಿ ಬಿದ್ದಿದೆ. ಈ ಪರಿಣಾಮ ಮಕ್ಕಳಾದಂತ ಗಣೇಶ್ ಕಾಂಬಳೆ(9), ದೀಪಕ್ ಕಾಂಬಳೆ(11) ಎಂಬ ಬಾಲಕರು ಸಾವನ್ನಪ್ಪಿದ್ದಾರೆ. ಹಳ್ಳದಲ್ಲಿ ದಾರಿ ಕಾಣದೇ ಈ ದುರಂತ ಸಂಭವಿಸಿದೆ. ಎತ್ತಿನ ಗಾಡಿ ಮುಗುಚಿ ಬಿದ್ದ ಪರಿಣಾಮ ಒಂದು ಎತ್ತು ಕೂಡ ಸಾವನ್ನಪ್ಪಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. https://kannadanewsnow.com/kannada/15000-vacant-posts-in-the-police-department-will-be-filled-soon-home-minister-g-parameshwar/ https://kannadanewsnow.com/kannada/tree-falls-block-soraba-sagara-road-traffic-forest-department-unaware/
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ( Corona ) ಪ್ರಕರಣಗಳ ಸಂಖ್ಯೆ ಶತಕ ತಲುಪಿದೆ. ಇಂದು 36 ಜನರಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಡುವ ಮೂಲಕ ಸಕ್ರೀಯ ಪ್ರಕರಣಗಳ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಇಂದು ಆರ್ ಟಿ ಪಿಸಿಆರ್ ಮೂಲಕ 361, ರಾಟ್ ಮೂಲಕ 20 ಜನರು ಸೇರಿದಂತೆ 381 ಮಂದಿಯನ್ನು ಕೋವಿಡ್ ಪರೀಕ್ಷೆಗೆ ( Covid Test ) ಒಳಪಡಿಸಲಾಯಿತು. ಇವರಲ್ಲಿ 36 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ ಎಂಬುದಾಗಿ ಹೇಳಿದೆ. ಸದ್ಯ ರಾಜ್ಯದಲ್ಲಿ ನಾಲ್ವರು ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರಿಗೆ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದಾಗಿ ತಿಳಿಸಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ( Corona Case ) ಸಂಖ್ಯೆ ಹೆಚ್ಚಳವಾಗುತ್ತಿದೆ.…
ಬೆಂಗಳೂರು: 2025-26ನೇ ಸಾಲಿಗೆ ಮೆಟ್ರಿಕ್ ನಂತ್ರದ ವಿದ್ಯಾರ್ಥಿನಿಲಯಗಳಿಗೆ ಅಂದರೆ ಪಿಯುಸಿ, ಐಟಿಐ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಹೊಸದಾಗಿ ಪ್ರವೇಶ ಬಯಸುವವರಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಆಯುಕ್ತರು ಪತ್ರ ಬರೆದಿದ್ದು, 2025-26ನೇ ಸಾಲಿಗೆ ಮೆಟ್ರಿಕ್ ನಂತ್ರದ ವಿದ್ಯಾರ್ಥಿನಿಲಯಗಳಲ್ಲಿ ಹೊಸದಾಗಿ ಪ್ರವೇಶ ಬಯಸುವ ಪಿಯುಸಿ, ಐಟಿಐ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆಯು ದಿನಾಂಕ 20-05-2025ರಿಂದ ಆರಂಭಗೊಂಡಿದೆ. ಕೊನೆಯ ದಿನಾಂಕ 20-06-2025 ಆಗಿದೆ. ಹೊಸ ಅರ್ಜಿಗಳನ್ನು ತಾಲ್ಲೂಕು ಕಲ್ಯಾಣ ಅಧಿಕಾರಿಗಳು ಪರಿಶೀಲನೆ ಮಾಡಲು ಅಂತಿಮ ದಿನಾಂಕ 23-06-2025 ಆಗಿರುತ್ತದೆ ಎಂದಿದ್ದಾರೆ. ತಾಲ್ಲೂಕು ಸಮಿತಿಯ ಮೂಲಕ ಆಯ್ಕೆಯಾದ ಹೊಸ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ದಿನಾಂಕ 27-06-2025ರಂದು ಪ್ರಕಟಿಸಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಪಡೆಯಲು ಅಂತಿಮ ದಿನಾಂಕ 30-06-2025 ಆಗಿರುತ್ತದೆ ಎಂದು ತಿಳಿಸಿದೆ. https://kannadanewsnow.com/kannada/dc-orders-to-enforce-a-ban-in-all-police-station-jurisdictions-of-south-kanara-district-until-may-30/ https://kannadanewsnow.com/kannada/big-news-party-opposition-activities-have-been-expelled-by-vijayendras-first-reaction/…
ಬೆಂಗಳೂರು: ರಾಜ್ಯದಲ್ಲಿ ಕೋರೋನಾಘಾತವನ್ನೇ ನೀಡಿದೆ. ರಾಜ್ಯಾಧ್ಯಂತ ಇಂದು 36 ಜನರಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಇಂದು ಆರ್ ಟಿ ಪಿಸಿಆರ್ ಮೂಲಕ 361, ರಾಟ್ ಮೂಲಕ 20 ಜನರು ಸೇರಿದಂತೆ 381 ಮಂದಿಯನ್ನು ಕೋವಿಡ್ ಪರೀಕ್ಷೆಗೆ ( Covid Test ) ಒಳಪಡಿಸಲಾಯಿತು. ಇವರಲ್ಲಿ 36 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ ಎಂಬುದಾಗಿ ಹೇಳಿದೆ. ಸದ್ಯ ರಾಜ್ಯದಲ್ಲಿ ನಾಲ್ವರು ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರಿಗೆ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದಾಗಿ ತಿಳಿಸಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ( Corona Case ) ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಇದರ…
ದಕ್ಷಿಣ ಕನ್ನಡ: ಜಿಲ್ಲೆಯ ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಎಂಬಾತನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಬಿಗಿ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಆದೇಶಿಸಿದ್ದಾರೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿ ಆನಂದ್ ಆದೇಶ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ.30ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಅಂತ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲ್ಲೂಕಿನ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ.30ರವರೆಗೆ ಬಿಎನ್ಎಸ್ 163ರಡಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂಬುದಾಗಿ ಆದೇಶದಲ್ಲಿ ಹೇಳಿದ್ದಾರೆ. https://kannadanewsnow.com/kannada/bjp-obstructs-the-implementation-of-smart-meters-former-council-member-ramesh-babu-complains/ https://kannadanewsnow.com/kannada/tree-falls-block-soraba-sagara-road-traffic-forest-department-unaware/
ಬೆಂಗಳೂರು: ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ 3 ತಿಂಗಳ ಕಾಲಮಿತಿ ವಿಧಿಸಿ ಒತ್ತಡ ಹೇರುತ್ತಿದ್ದರೆ, ರಾಜ್ಯ ಬಿಜೆಪಿ ನಾಯಕರು ಆ ಯೋಜನೆ ಅನುಷ್ಠಾನಗೊಳಿಸಲು ಅಡ್ಡಗಾಲು ಹಾಕುತ್ತಿದ್ದಾರೆ. ಈ ವಿಷಯವಾಗಿ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಲಿಖಿತ ದೂರು ನೀಡುವುದಾಗಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ಧಿಗೋಷ್ಠಿ ನಡೆಸಿದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಾಗೂ ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್, ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರವಾಗಿ ಬಿಜೆಪಿ-ಜೆಡಿಎಸ್ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು. “ಸ್ಮಾರ್ಟ್ ಮೀಟರ್ನಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸುವ ಮೂಲಕ ರಾಜ್ಯದ ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರದ ಯೋಜನೆ ರಾಜ್ಯದಲ್ಲಿ ಅನುಷ್ಠಾನಗೊಳ್ಳದಂತೆ ಬಿಜೆಪಿ ನಾಯಕರೇ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ತಕ್ಕ ಉತ್ತರ ಕೊಡುತ್ತದೆ. ಅಶ್ವತ್ಥ…
ಕೇರಳ: ಮಂಗಳವಾರ ಕೇರಳದ ವಕ್ಕಂನಲ್ಲಿರುವ ಅವರ ಮನೆಯಲ್ಲಿ ತಂದೆ, ತಾಯಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮಕ್ಕಳ ಕುಟುಂಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಮೃತರನ್ನು 55 ವರ್ಷದ ಅನಿಲ್ಕುಮಾರ್, ಅವರ 50 ವರ್ಷದ ಪತ್ನಿ ಶೀಜಾ ಮತ್ತು ಇಪ್ಪತ್ತರ ಹರೆಯದ ಅವರ ಇಬ್ಬರು ಗಂಡು ಮಕ್ಕಳು ಎಂದು ಗುರುತಿಸಲಾಗಿದೆ. ಪ್ರಾಥಮಿಕವಾಗಿ ಈ ಘಟನೆ ಆತ್ಮಹತ್ಯೆಯಂತೆ ಕಾಣುತ್ತಿದೆ ಎಂದು ಪೊಲೀಸರು ತಿಳಿಸಿದ್ದು, “ಅನಿಲ್ಕುಮಾರ್ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ತನಿಖೆ ನಡೆಯುತ್ತಿದೆ. ಮನೆಯಿಂದ ಇಲ್ಲಿಯವರೆಗೆ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ” ಎಂದು ತಿಳಿಸಿದ್ದಾರೆ. ಕುಟುಂಬದ ಸದಸ್ಯರು ಯಾರೂ ಹೊರಗೆ ಕಾಣಿಸದ ಕಾರಣ ನೆರೆಹೊರೆಯವರು ಮನೆಗೆ ಪ್ರವೇಶಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪಂಚಕುಲ ಆತ್ಮಹತ್ಯೆ ಪ್ರಕರಣ ಕೇರಳದ ಘಟನೆ ನಡೆದ ಒಂದು ದಿನದ ನಂತರ, ಹರಿಯಾಣದ ಪಂಚಕುಲದಲ್ಲಿ ಕಾರಿನೊಳಗೆ ಉತ್ತರಾಖಂಡದ ಡೆಹ್ರಾಡೂನ್ನ ಕುಟುಂಬದ ಏಳು ಸದಸ್ಯರು…
ಬೆಂಗಳೂರು: ನಗರದ ಶಕ್ತಿ ಸೌಧ ವಿಧಾನಸೌಧ ಸಾರ್ವಜನಿಕರ ಪ್ರವೇಶಕ್ಕೆ ಇನ್ಮುಂದೆ ಮುಕ್ತವಾಗಿದೆ. ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಹಾಗೂ ಪ್ರತಿ ಭಾನುವಾರದಂದು ವಿಧಾನಸೌಧಕ್ಕೆ ಸಾರ್ವಜನಿಕರು ಭೇಟಿ ನೀಡಿ, ನೋಡಬಹುದಾಗಿದೆ. ಕರ್ನಾಟಕದ ಶಕ್ತಿ ಕೇಂದ್ರ, ಪ್ರಜಾಪ್ರಭುತ್ವದ ಸಂಕೇತ ಎನಿಸಿಕೊಂಡಿರುವ ವಿಧಾನಸೌಧವು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ. ಐತಿಹಾಸಿಕ ಕಟ್ಟಡದ ಮಹತ್ವವನ್ನು ಪರಿಚಯಿಸುವ ನಿಟ್ಟಿನಲ್ಲಿ ʼವಿಧಾನಸೌಧ ಮಾರ್ಗದರ್ಶಿ ನಡಿಗೆʼ ಆರಂಭಿಸಲಾಗಿದೆ. ಪ್ರತಿ 2ನೇ ಮತ್ತು 4ನೇ ಶನಿವಾರ ಹಾಗೂ ಎಲ್ಲ ಭಾನುವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. 16 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಿರಲಿದ್ದು, ಇದಕ್ಕೆ ಮೇಲ್ಪಟ್ಟವರಿಗೆ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. ದಿನಕ್ಕೆ 300 ಪ್ರೇಕ್ಷಕರಿಗೆ ಮಾತ್ರ ಪ್ರವೇಶ ಅವಕಾಶವಿರಲಿದೆ. ಅಧಿಕೃತ ಕೆಎಸ್ಟಿಡಿಸಿ ವೆಬ್ಸೈಟ್ ಅಥವಾ ದೃಢೀಕೃತ ಟಿಕೆಟ್ ಸೇವಾ ಪೂರೈಕೆದಾರರ ವೇದಿಕೆಯಲ್ಲಿ ಟಿಕೆಟ್ ಬುಕ್ಕಿಂಗ್ ಕಡ್ಡಾಯ. ಸ್ಥಳದಲ್ಲಿ ಬುಕ್ಕಿಂಗ್ ಮಾಡಲು ಬಯಸುವವರು ಗೇಟ್ -3ರಲ್ಲಿರುವ ಕೆಎಸ್ಟಿಡಿಸಿ ಕೌಂಟರ್ನಲ್ಲಿ ಟಿಕೆಟ್ ಲಭ್ಯತೆ ಇದ್ದರೆ ಪ್ರವೇಶಕ್ಕೆ ಅವಕಾಶ…
ನವದೆಹಲಿ: ಕನ್ನಡದ ಹಿರಿಯ ನಟ ಅನಂತ್ ನಾಗ್ ಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ನವದೆಹಲಿಯಲ್ಲಿ ಪಾಂಡಿ ರಾಮ್ ಮಾಂಡವಿ ಅವರು ಕಲೆ-ಮರ ಕರಕುಶಲ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. https://twitter.com/ANI/status/1927355226345914792 ದೆಹಲಿ: ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕಿ ಕೇಜ್ ಅವರು ಕಲೆ-ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. https://twitter.com/ANI/status/1927354169691673022












