Author: kannadanewsnow09

ಮಹಾರಾಷ್ಟ್ರ: ರಾಜ್ಯದಲ್ಲಿ ನಿರಂತವಾಗಿ ಮಳೆಯಾಗುತ್ತಿದೆ. ಈ ಮಳೆಯ ಪರಿಣಾಮವಾಗಿ ಇಂದ್ರಯಾಣಿ ನದಿಗೆ ನಿರ್ಮಿಸಲಾದ ಸೇತುವೆ ಕುಸಿತಗೊಂಡಿದೆ. ಈ ಕಾರಣದಿಂದಾಗಿ ಆರು ಮಂದಿ ಸಾವನ್ನಪ್ಪಿದ್ದರೇ, 25 ರಿಂದ 30 ಪ್ರವಾಸಿಗರು ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಭಾನುವಾರದ ಇಂದು ಭಾರೀ ಸಂಖ್ಯೆಯ ಪ್ರವಾಸಿಗರು ಇಂದ್ರಯಾಣಿ ಸೇತುವೆ ಬಳಿ ಜಮಾಯಿಸಿದ್ದರು. ಈ ವೇಳೆ ಸೇತುವೆ ಕುಸಿತಗೊಂಡು ಭಾರಿ ದುರಂತ ಸಂಭವಿಸಿದೆ. ಇಂದುವರೆಗೆ 6 ಪ್ರವಾಸಿಗರ ಮೃತದೇಹ ಪತ್ತೆಯಾಗಿದ್ದು, ಉಳಿದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. https://twitter.com/ians_india/status/1934203511404998791 ಮಹಾರಾಷ್ಟ್ರದ ಪುಣೆಯ ಮಾವಲ್ ತಾಲ್ಲೂಕಿನ ಕುಂದಮಾಲದಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು 25–30 ಪ್ರವಾಸಿಗರು ನದಿಗೆ ಬಿದ್ದ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಏರಿದೆ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. https://kannadanewsnow.com/kannada/tomorrow-is-the-funeral-of-former-gujarat-chief-minister-vijay-rupani/ https://kannadanewsnow.com/kannada/breaking-mobile-attendance-is-mandatory-for-doctors-and-staff-at-all-health-centers-in-the-state-dinesh-gundu-rao/

Read More

ನವದೆಹಲಿ: ಅಹಮದಾಬಾದ್ ನಲ್ಲಿ ನಡೆದಂತ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಮೃತರಾಗಿದ್ದರು. ಇಂತಹ ಅವರ ಅಂತ್ಯಕ್ರಿಯೆಯನ್ನು ನಾಳೆ ಕುಟುಂಬಸ್ಥರು ನೆರವೇರಿಸುತ್ತಿರುವುದಾಗಿ ತಿಳಿದು ಬಂದಿದೆ. ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯಲ್ಲಿ ಏರ್ ಇಂಡಿಯಾ ವಿಮಾನ ಪತನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಾವನ್ನಪ್ಪಿದ್ದರು. ಅವರ ಡಿಎನ್ಎ ಪರೀಕ್ಷೆ ನಡೆಸಿದ್ದಂತ ಸಂದರ್ಭದಲ್ಲಿ, ವಿಜಯ್ ರೂಪಾನಿ ಗುರುತು ಪತ್ತೆಯಾಗಿತ್ತು. ಇದೀಗ ಆಸ್ಪತ್ರೆಯ ವೈದ್ಯರು ಕುಟುಂಬಸ್ಥರಿಗೆ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹವನ್ನು ಹಸ್ತಾಂತರಿಸಿದ್ದಾರೆ. ಹೀಗಾಗಿ ನಾಳೆ ಅವರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸುತ್ತಿರುವುದಾಗಿ ತಿಳಿದು ಬಂದಿದೆ. https://twitter.com/ANI/status/1934152108317585661 ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಾಣ ಕಳೆದುಕೊಂಡರು. ಇಂದು, ಬೆಳಿಗ್ಗೆ 11:10 ರ ಸುಮಾರಿಗೆ, ಅವರ ಡಿಎನ್‌ಎ ಹೊಂದಾಣಿಕೆಯಾಗಿದೆ. ಅವರು ಹಲವಾರು ವರ್ಷಗಳ ಕಾಲ ರಾಜ್ಯದ ಜನರಿಗಾಗಿ ಕೆಲಸ ಮಾಡಿದರು…” ಎಂದು ಗುಜರಾತ್ ಗೃಹ ಸಚಿವ ಹರ್ಷ್…

Read More

ಉತ್ತರ ಪ್ರದೇಶ: ಜೂನ್ 15, ಭಾನುವಾರ ಮಧ್ಯಾಹ್ನ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಸ್ಥಳಾಂತರ ಪ್ರಕ್ರಿಯೆಯ ಸಮಯದಲ್ಲಿ ಕುಸಿದ ಆರು ಮನೆಗಳ ಅವಶೇಷಗಳೊಳಗೆ ಒಬ್ಬರು ಸಾವನ್ನಪ್ಪಿದ್ದು, 12 ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಶಹಗಂಜ್‌ನ ಮಸಾನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕರು ಈ ಪ್ರದೇಶದಲ್ಲಿ ಅಗೆಯುತ್ತಿದ್ದಾಗ ಈ ಕುಸಿತ ಸಂಭವಿಸಿದೆ. ಇದು ಹತ್ತಿರದ ಮನೆಗಳ ಅಡಿಪಾಯವನ್ನು ದುರ್ಬಲಗೊಳಿಸಿದೆ ಎಂದು ಶಂಕಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಆರು ಮನೆಗಳು ಕುಸಿದುಬಿದ್ದು, ಜನನಿಬಿಡ ಪ್ರದೇಶದಲ್ಲಿ ಅವ್ಯವಸ್ಥೆ ಉಂಟಾಗಿದೆ. ಕುಸಿತದ ಸ್ಥಳದಲ್ಲಿ ಪ್ರಸ್ತುತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿದ್ದು, ಸ್ಥಳೀಯ ಆಡಳಿತ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್, ಅಗ್ನಿಶಾಮಕ ಇಲಾಖೆ, ಆಂಬ್ಯುಲೆನ್ಸ್‌ಗಳು ಮತ್ತು ಸ್ಥಳೀಯ ಪೊಲೀಸರ ತಂಡಗಳು ಸ್ಥಳದಲ್ಲಿವೆ. ಪರಿಹಾರ ಕಾರ್ಯದ ನಂತರ, ತನಿಖಾ ಸಂಸ್ಥೆಗಳು ಕುಸಿತಕ್ಕೆ ನಿಖರವಾದ ಕಾರಣವನ್ನು ತನಿಖೆ ಮಾಡುತ್ತವೆ. https://twitter.com/ANI/status/1934156090536522222 ಶ್ಲೋಕ್ ಕುಮಾರ್ ಮಾತನಾಡಿ, ಗೋವಿಂದ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಸಾನಿ ಪ್ರದೇಶದಲ್ಲಿ,…

Read More

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಐದು ತಿಂಗಳು ಕಂತು ಕಟ್ಟಿಲ್ಲವೆಂದು ಮನೆಯಿಂದ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಹೊರ ಹಾಕಿದ್ದಾರೆ. ವಿಜಯಪುರದ ರಹಮತ್ ನಗರದ ಮುನಿರಾಜು ಕುಟುಂಬ ಈಗ ಬೀದಿಪಾಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಮುನಿರಾಜು ಬೀದಿಯಲ್ಲಿ ನಿಂತು ಕಣ್ಣೀರಿಡುತ್ತಿದ್ದಾರೆ. 2021ರಲ್ಲಿ ಎಸ್ ಬಿ ಎಸ್ ಪಿ ಮೈಕ್ರೋ ಫೈನಾನ್ಸ್ ನಿಂದ 21 ಲಕ್ಷ ಸಾಲ ಪಡೆದಿದ್ದರು. ಅಂದಿನಿಂದ ಪ್ರತಿ ತಿಂಗಳು ಕಂತು ಕಟ್ಟುತ್ತಿದ್ದರು. 2025ರ ಜನವರಿಯಿಂದ ಇದುವರೆಗೆ ಐದು ತಿಂಗಳ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಪಡೆದ ಸಾಲದ ಕಂತಿನ ಹಣವನ್ನು ಕಟ್ಟಿಲ್ಲವೆಂದು ಕುಟುಂಬವನ್ನು ಬೀದಿಗೆ ತಳ್ಳಿ ಮೈಕ್ರೋ ಫೈನಾನ್ಸ್ ಕಂಪನಿಯೊಂದು ಬೀಗ ಹಾಕಿದ ಘಟನೆ ನಡೆದಿದೆ. ಮನೆಯಲ್ಲಿದ್ದಂತ ವಸ್ತುಗಳನ್ನು ಎತ್ತಿಕೊಳ್ಳಲು ಬಿಡದೇ ಬೀಗ ಹಾಕಿ ಸೀಲ್ ಜಡಿದು ಅಮಾನವೀಯವಾಗಿ ನಡೆದುಕೊಂಡಿದೆ. ಯಾವುದೇ ನೋಟಿಸ್ ನೀಡದೇ ಏಕಾಏಕಿ ಮನೆಯಿಂದ ಹೊರಹಾಕಿದ್ದಾರೆ ಎಂಬುದಾಗಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಜೊತೆ ಬೀದಿಯಲ್ಲಿ ಮುನಿರಾಜು ಕಣ್ಣೀರಿಡುತ್ತಿದ್ದಾರೆ. https://kannadanewsnow.com/kannada/breaking-mobile-attendance-is-mandatory-for-doctors-and-staff-at-all-health-centers-in-the-state-dinesh-gundu-rao/

Read More

ಬೆಂಗಳೂರು: ವಿದೇಶಿ ಪ್ರಜೆಗಳಿಗೆ ಸಂಬಂಧಿಸಿದ ಲೆಕ್ಕಪರಿಶೋಧನೆ ಮತ್ತು ಪರಿಶೀಲನೆ ಕುರಿತು ಶೈಕ್ಷಣಿಕ ಮತ್ತು ವೈದ್ಯಕೀಯ ಸೇರಿದಂತೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳಿಗೆ ಸುತ್ತೋಲೆ ಅಥವಾ ಅಧಿಸೂಚನೆಯನ್ನು ಹೊರಡಿಸುವಂತೆ ಕರ್ನಾಟಕ ಹೈಕೋರ್ಟ್ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ಅವರನ್ನು ಕೇಳಿದೆ. ಭಾರತದಲ್ಲಿ ವಾಸಿಸುವ ವಿದೇಶಿ ಪ್ರಜೆಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು, ನಿಯಂತ್ರಿಸಲು ಮತ್ತು ಜಾರಿಗೊಳಿಸಲು ಬಹು ಅಧಿಕಾರಿಗಳನ್ನು ಒಳಗೊಂಡ ಸಮಗ್ರ, ಸಂಘಟಿತ ಮತ್ತು ಪಾರದರ್ಶಕ ಕಾರ್ಯವಿಧಾನದ ತುರ್ತು ಅವಶ್ಯಕತೆಯಿದೆ ಎಂದು ಗಮನಿಸಿ, ಜೂನ್ 18 ರೊಳಗೆ ACS ಗೆ ಅಂತಹ ಸುತ್ತೋಲೆ/ಅಧಿಸೂಚನೆಯನ್ನು ಹೊರಡಿಸುವಂತೆ ನ್ಯಾಯಾಲಯವು ಈ ಮಧ್ಯಂತರ ಆದೇಶವನ್ನು ನೀಡಿದೆ. “ವಿದೇಶಿ ಪ್ರಜೆಗಳು ತಮ್ಮ ವೀಸಾದಿಂದ ಅನುಮತಿಸಲಾದ ಅವಧಿಯನ್ನು ಮೀರಿ ಭಾರತದಲ್ಲಿ ಉಳಿಯುವ ವಿದ್ಯಮಾನವು ಗಮನಾರ್ಹ ಕಳವಳವಾಗಿ ಹೊರಹೊಮ್ಮಿದೆ. ಅಂತಹ ಮಿತಿಮೀರಿದ ವಾಸ್ತವ್ಯಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳು, ಸ್ಥಳೀಯ ಆಡಳಿತ ಮತ್ತು ಕಾನೂನು ಜಾರಿಯ ಮೇಲಿನ ಒತ್ತಡ, ಸಾರ್ವಜನಿಕ ಆರೋಗ್ಯ ಟ್ರ್ಯಾಕಿಂಗ್‌ನಲ್ಲಿನ ಸವಾಲುಗಳು ಮತ್ತು ಅನೌಪಚಾರಿಕ ಉದ್ಯೋಗ ವಲಯಗಳಲ್ಲಿನ ಶೋಷಣೆ ಸೇರಿದಂತೆ…

Read More

ಬೆಂಗಳೂರು: ನಗರದಲ್ಲಿ ಬಿರುಗಾಲಿ ಸಹಿತ ಮಳೆಯಾಗುತ್ತಿದೆ. ಈ ಕಾರಣದಿಂದ ಮರದ ಕೊಂಬೆಯೊಂದು ಮುರಿದು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸನಗರದಲ್ಲಿ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಮರದ ಕೊಂಬೆ ಮುರಿದು ಬಿದ್ದು ಗಾಯಗೊಂಡಿರುವಂತ ಸವಾರ ಅಕ್ಷಯ್ (29) ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಗಾಯಾಳು ಅಕ್ಷಯನ್ ಗೆ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. https://kannadanewsnow.com/kannada/breaking-mobile-attendance-is-mandatory-for-doctors-and-staff-at-all-health-centers-in-the-state-dinesh-gundu-rao/ https://kannadanewsnow.com/kannada/6-houses-collapsed-simultaneously-while-digging-soil-many-feared-trapped-under-rubble/

Read More

ಉತ್ತರ ಪ್ರದೇಶ: ರಾಜ್ಯದಲ್ಲಿ ಮಣ್ಣು ಅಗೆಯುತ್ತಿದ್ದಂತ ಸಂದರ್ಭದಲ್ಲಿ ಏಕಕಾಲಕ್ಕೆ 6 ಮನೆಗಳು ಕುಸಿದು ಬಿದ್ದಿದ್ದಾವೆ. ಈ ದುರಂತದಲ್ಲಿ ಮನೆಗಳ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಮಥುರಾ ನಗರದಲ್ಲಿ ಮಣ್ಣು ಅಗೆಯುವಾಗ ಏಕಕಾಲಕ್ಕೆ ಆರು ಮನೆಗಳು ಕುಸಿದು ಬಿದ್ದಿದ್ದಾವೆ. ಈ ದುರಂತದಲ್ಲಿ ಮನೆಯ ಅವಶೇಷಗಳಡಿ ಅನೇಕ ಜನರು ಸಿಲುಕಿರುವಂತ ಶಂಕೆ ವ್ಯಕ್ತವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ್ದು, ಮನೆಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣೆ ಮಾಡುವಂತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/good-news-for-the-maratha-community-of-the-state-invitation-to-apply-for-loan-facilities-under-various-schemes/

Read More

ಬೆಂಗಳೂರು: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ವೆಬ್‍ಸೈಟ್ www.kaushalkar.com ಮೂಲಕ ಜುಲೈ 4 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ http://kmcdc.karnataka.gov.in 8867537799, 080-29903994, ದೂ.ಸಂ: 08192-230934 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ. ವೀರಶೈವ ಲಿಂಗಾಯ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ವೆಬ್‍ಸೈಟ್ www.kaushalkar.com ಮೂಲಕ ಜೂನ್ 30 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ http://kvldcl.karnataka.gov.in 080-22865522, 9900012351, 9900012352 ದೂ.ಸಂ: 08192-230934 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Read More

ಬೆಂಗಳೂರು: ಪ್ರಸಕ್ತ ಸಾಲಿನ ಶೇ.24.10%, 7.25% ಮತ್ತು 5% ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪಸಂಖ್ಯಾತ ಮತ್ತು ದೈಹಿಕ ವಿಕಲಚೇತನರ ಫಲಾನುಭವಿಗಳಿಂದ ವೈಯಕ್ತಿಕ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಜಗಳೂರು ಪಟ್ಟಣ ಪಂಚಾಯಿತಿಯ ಕಚೇರಿಯಲ್ಲಿ ಪಡೆದು ಜೂನ್ 30 ರೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಮುಖ್ಯಾಧಿಕಾರಿ ಲೋಕ್ಯಾನಾಯ್ಕ.ಸಿ ತಿಳಿಸಿದ್ದಾರೆ. ಅರ್ಚಕರಿಗೆ ಮಾಸಿಕ ಗೌರವಧನಕ್ಕೆ ಅರ್ಜಿ ಆಹ್ವಾನ ಜೈನ್ ಸಮುದಾಯ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ಮತ್ತು ಸಹಾಯಕ ಅರ್ಚಕರುಗಳಿಗೆ ಹಾಗೂ ಸಿಖ್ ಗುರುದ್ವಾರಗಳಲ್ಲಿರುವ ಮುಖ್ಯ ಮತ್ತು ಸಹಾಯಕ ಗ್ರಂಥಿಗಳಿಗೆ ಮಾಸಿಕ ಗೌರವಧನ ಪಡೆಯಲಿಚ್ಚಿಸುವ ಅರ್ಹ ಫಲಾನುಭವಿಗಳಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 26 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಫಲಾನುಭವಿಗಳು ಜಿಲ್ಲೆಯ ಜೈನ್ ಬಸದಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಸಂಘಗಳ ನೊಂದಣಿ ಕಾಯ್ದೆ ಅಥವಾ ಇತರೆ ಸಂಬಂಧಪಟ್ಟ ಕಾಯ್ದೆ ಅನ್ವಯ ನೊಂದಣಿಯಾದ ಪ್ರಧಾನ ಅರ್ಚಕ, ಗ್ರಂಥಿಗೆ ಮಾಸಿಕ ರೂ.6000/, ಸಹಾಯಕ ಗ್ರಂಥಿ, ಅರ್ಚಕರಿಗೆ ಮಾಸಿಕ ರೂ.5000/ ಗೌರವಧನ…

Read More

ಗುಜರಾತ್: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದ ನಂತರ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್‌ಎ ಹೋಲಿಕೆಯಾಗಿದೆ ಎಂದು ರಾಜ್ಯದ ಗೃಹ ಸಚಿವ ಹರ್ಷ ಸಾಂಘವಿ ಭಾನುವಾರ ದೃಢಪಡಿಸಿದರು. https://twitter.com/ANI/status/1934152108317585661 ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಾಣ ಕಳೆದುಕೊಂಡರು. ಇಂದು, ಬೆಳಿಗ್ಗೆ 11:10 ರ ಸುಮಾರಿಗೆ, ಅವರ ಡಿಎನ್‌ಎ ಹೊಂದಾಣಿಕೆಯಾಗಿದೆ. ಅವರು ಹಲವಾರು ವರ್ಷಗಳ ಕಾಲ ರಾಜ್ಯದ ಜನರಿಗಾಗಿ ಕೆಲಸ ಮಾಡಿದರು…” ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ. ಅವರ ಪಾರ್ಥಿವ ಶರೀರದ ಸಾಗಣೆ ಮಾಡಲು ಮಾಜಿ ಸಿಎಂ ವಿಜಯ್ ರೂಪಾನಿ ಕುಟುಂಬಸ್ಥರು ಆಸ್ಪತ್ರೆಯ ಬಳಿ ನೆರೆದಿದ್ದಾರೆ. ಇಂದೇ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಅಹಮದಾಬಾದ್ ಏರ್ ಇಂಡಿಯಾ ಅಪಘಾತದಲ್ಲಿ ಸಾವನ್ನಪ್ಪಿದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹವನ್ನು ಕೆಲವು ದಿನಗಳ ನಂತರ ಗುರುತಿಸಲಾಗಿದೆ

Read More