Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕನ್ನಡದ ಸುಪ್ರಸಿದ್ದ ಆಂಕರ್ ಅನುಶ್ರೀ ವೆಡ್ಸ್ ರೋಷನ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್.28ರಂದು ಬೆಂಗಳೂರಲ್ಲಿ ಮದುವೆ ನಡೆಯಲಿದೆ. ಅನುಶ್ರೀ ಅವರ ಆಮಂತ್ರಣ ಪತ್ರಿಕೆ ರಿಲೀವ್ ಆಗಿದ್ದು, ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ ಏಕಾಂಗಿ ನಿರೂಪಣೆಯ ನಂತ್ರ ಅರ್ಧಾಂಗಿಯಾಗುವ ಹೊಸ ಮನ್ವಂತರಕ್ಕೆ ಸಮಯ ಬಂದಿದೆ. ಅನುಶ್ರೀ ವೆಡ್ಸ್ ರೋಷನ್ ಮಹೂರ್ತವು ದಿನಾಂಕ 28-08-2025ರ ಗುರುವಾರ ಬೆಳಗ್ಗೆ 10.56ಕ್ಕೆ ನಡೆಯಲಿದೆ ಎಂಬುದಾಗಿ ತಿಳಿಸಿದ್ದಾರೆ. ಅನುಶ್ರೀ ವೆಡ್ ರೋಷನ್ ಅವರ ಮದುವೆಯು ಆಗಸ್ಟ್.28ರಂದು ಬೆಂಗಳೂರಿನ ಕಗ್ಗಲಿಪುರದ ತಿಟ್ಟೆಹಳ್ಳಿಯ ಸಂಭ್ರಮ ಬೈ ಸ್ಪಾನ್ ಲೈನ್ಸ್ ಸ್ಟುಡಿಯೋಸ್ ನಲ್ಲಿ ನೆರವೇರಲಿದೆ. ಒಟ್ಟಾರೆಯಾಗಿ ಆಂಕರ್ ಅನುಶ್ರೀ ಅವರ ಮದುವೆಯೂ ಇದೇ ಆಗಸ್ಟ್.28ರಂದು ಬೆಂಗಳೂರಿನ ಕಗ್ಗಲಿಪುರ ಸಮೀಪದ ತಿಟ್ಟೆಹಳ್ಳಿಯಲ್ಲಿ ನೆರವೇರಲಿದೆ. ಅವರ ವಿವಾಹಕ್ಕೆ ಸಿನಿ ರಂಗದ ಗಣ್ಯರು, ಸ್ನೇಹಿತರು ಸೇರಿದಂತೆ ಗಣ್ಯಾತಿ ಗಣ್ಯರು ಭಾಗಿಯಾಗಲಿದ್ದಾರೆ. https://kannadanewsnow.com/kannada/seven-special-deputy-commissioners-have-been-appointed-to-the-bengaluru-city-district-deputy-commissioners-court-case/ https://kannadanewsnow.com/kannada/cabinet-approves-illegal-mining-report-do-you-know-whats-in-the-report/
ಬೆಂಗಳೂರು: ರಾಜ್ಯದಲ್ಲಿ ನಮ್ಮ ಸರ್ಕಾರ ಮೇ 2023 ರಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ 7460 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 6393, 1 ವರ್ಷಕ್ಕಿಂತ ಹೆಚ್ಚು ಅವಧಿ ಮೀರಿದ ಬಾಕಿ ಪ್ರಕರಣಗಳಿದ್ದವು. ಅದರಲ್ಲಿ 5 ವರ್ಷಕ್ಕೂ ಹೆಚ್ಚು ಮೇಲ್ಪಟ್ಟ 4894 ಪ್ರಕರಣಗಳು ಬಾಕಿ ಇದ್ದವು ಎಂಬುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳ ಪ್ರಯತ್ನದಿಂದ 3729 ಬಾಕಿ ಇದ್ದ ತಕರಾರು ಪ್ರಕರಣಗಳನ್ನು ಇತ್ಯರ್ಥಪಡಿಸಿ, ವಿಲೆ ಮಾಡಲಾಗಿದೆ. ಅದಾಗ್ಯೂ ಇದೇ ಅವಧಿಯಲ್ಲಿ 1545 ಹೊಸ ಪ್ರಕರಣಗಳೂ ದಾಖಲಾಗಿವೆ. ಪ್ರಸ್ತುತ 5276 ಪ್ರಕರಣಗಳು ಬಾಕಿ ಇದ್ದು, ಪ್ರತಿ ತಿಂಗಳು ಸರಾಸರಿಯಾಗಿ 143 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಇದೇ ಪ್ರಮಾಣದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹಲವು ವರ್ಷಗಳೇ ಬೇಕಾಗುತ್ತದೆ. ಈ ವಿಳಂಬವು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಸೂಕ್ತ ನ್ಯಾಯಾಲಯದ ಆದೇಶವನ್ನು ಪಡೆಯುವಲ್ಲಿ ವಿಳಂಬವು ಸಾಮಾನ್ಯ ಜನರಿಗೆ ಅಪಾರ ಅನಾನುಕೂಲತೆಯನ್ನು ಉಂಟುಮಾಡುವುದಲ್ಲದೆ ಜನಸಾಮಾನ್ಯರ ಕಿರುಕುಳಕ್ಕೂ ಕಾರಣವಾಗುತ್ತದೆ. ಕೆಲವು ಪ್ರಕರಣಗಳಲ್ಲಿ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಿದಂತ ಬರೋಬ್ಬರಿ 37 ಮಸೂದೆಗಳಿಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡರಲ್ಲೂ ಅಂಗೀಕಾರವನ್ನು ಪಡೆದಿದೆ. ಈ ಕುರಿತಂತೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು ಮಾಹಿತಿ ಹಂಚಿಕೊಂಡಿದ್ದು, ವಿಧಾನಸಭೆಯಲ್ಲಿ ಅಂಗೀಕೃತಗೊಂಡು, ವಿಧಾನ ಪರಿಷತ್ತಿನಲ್ಲಿ 37 ಮಸೂದೆಗಳಿಗೆ ಸಹಮತಿಯನ್ನು ಪಡೆದಿರುವುದಾಗಿ ತಿಳಿಸಿದ್ದಾರೆ. ಹೀಗಿವೆ ಉಭಯ ಸದನಗಳಲ್ಲಿ ಅಂಗೀಕಾರ ಪಡೆದ ಮಸೂದೆಗಳ ಪಟ್ಟಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.28) ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.29) ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಯಲಯಗಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.30) ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಮಾಭಿವೃದ್ಧಿ) ವಿಧೇಯಕ, 2025 (ವಿಧೇಯಕ ಸಂ.31) ಕರ್ನಾಟಕ ವೈದ್ಯಕೀಯ ನೋಂದಣಿ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.32) 6 ಕರ್ನಾಟಕ ಕೆರೆ…
ಕಲಬುರ್ಗಿ: ಜಿಲ್ಲೆಯಲ್ಲಿ ಪಾಠ ಕೇಳುತ್ತಿದ್ದಾಗಲೇ ಶಾಲಾ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವಂತ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಲ್ಕಪಲ್ಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿತಗೊಂಡಿದೆ. ಈ ವೇಳೆ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದರಿಂದಾಗಿ ಮೂವರು ಗಾಯಗೊಂಡಿದ್ದಾರೆ. ಶಾಲಾ ಮೇಲ್ಛಾವಣಿ ಕುಸಿತಗೊಂಡ ಪರಿಣಾಮ ಶ್ರೀನಿವಾಸ್, ಕಾವೇರಿ, ಅಕ್ಷತಾ ಎಂಬಂತ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವಂತ ಇಬ್ಬರು ವಿದ್ಯಾರ್ಥಿಗಳನ್ನು ಗುರುಮಠಕಲ್ ತಾಲ್ಲೂಕು ಆಸ್ಪತ್ರೆಗೆ, ಮತ್ತೋರ್ವ ವಿದ್ಯಾರ್ಥಿಯನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. https://kannadanewsnow.com/kannada/cabinet-approves-illegal-mining-report-do-you-know-whats-in-the-report/ https://kannadanewsnow.com/kannada/bumper-news-for-job-seekers-2-5-lakh-new-jobs-available-in-banking-finance-sector/
ಬೆಂಗಳೂರು: ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ರಚಿಸಲಾಗಿದ್ದ ಸಚಿವ ಸಂಪುಟದ ಉಪಸಮಿತಿಯ ವರದಿಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿರುವ ಬಗ್ಗೆ ಸರ್ಕಾರದ ಹೇಳಿಕೆ. ಕರ್ನಾಟಕ ರಾಜ್ಯದಲ್ಲಿ 2006 ರಿಂದ 2011 ರವರೆಗೆ ಭಾರಿ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದವು. ಈ ಅಕ್ರಮದಲ್ಲಿ ಅಧಿಕಾರಸ್ಥ ರಾಜಕಾರಣಿಗಳು, ವ್ಯಾಪಾರಸ್ಥರು, ಅಧಿಕಾರಿಗಳು ಹಾಗೂ ಇನ್ನಿತರರು ಶಾಮೀಲಾಗಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದರು ಎಂಬುದು ದೇಶದ ಮುಂದೆ ಜಗಜ್ಜಾಹೀರಾಗಿರುವ ಸಂಗತಿ. ಈ ಅಕ್ರಮಗಳನ್ನು ಲೋಕಾಯುಕ್ತ ಸಂಸ್ಥೆಯು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿ ವರದಿ ನೀಡಿತ್ತು. 2013 ರಿಂದ 2018ರ ನಮ್ಮ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿತ್ತು. ಉಪ ಸಮಿತಿಯು ಗಣಿ ಅಕ್ರಮಗಳಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಿ ದಿನಾಂಕ: 16.10.2015 ರಂದು ನಡೆದ ಉಪ ಸಮಿತಿ ಸಭೆಯಲ್ಲಿ ಕೆಲವು ಶಿಫಾರಸ್ಸುಗಳನ್ನು ಮಾಡಿರುತ್ತದೆ. ಆ ಸಂದರ್ಭದಲ್ಲಿ, ಅಕ್ರಮ ಗಣಿಗಾರಿಕೆ ಕುರಿತು ನಮ್ಮ ಸರ್ಕಾರವು…
ಬೆಂಗಳೂರು: ಈಗಾಗಲೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಕೇಸಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸಿ, ಅನುಭವಿಸುತ್ತಿದ್ದಾರೆ. ಇದೀಗ ಪ್ರಜ್ವಲ್ ರೇವಣ್ಣ ವಿರುದ್ಧದ 3ನೇ ಕೇಸಲ್ಲಿ ದೋಷಾರೋಪವನ್ನು ಕೋರ್ಟ್ ನಿಗದಿ ಪಡಿಸಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರದ ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರ ಕೇಸಲ್ಲಿ 3ನೇ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಾರೋಪ ನಿಗದಿ ಪಡಿಸಿದೆ. ದೋಷಾರೋಪ ಹೊರಿಸಲು ಇಂಗ್ಲಿಷ್ ಆಯ್ಕೆಯನ್ನು ಪ್ರಜ್ವಲ್ ರೇವಣ್ಣ ಮಾಡಿದ್ದರು. ನ್ಯಾಯಾಧೀಶರು ಓದಿದ ಎಲ್ಲಾ ದೋಷಾರೋಪಗಳನ್ನು ಪ್ರಜ್ವಲ್ ರೇವಣ್ಣ ನಿರಾಕರಿಸಿದ್ದಾರೆ. ಸಾಕ್ಷ್ಯ ವಿಚಾರಣೆ ದಿನಾಂಕವನ್ನು ಸೆಪ್ಟೆಂಬರ್.11ರಂದು ಕೋರ್ಟ್ ನಿಗದಿ ಪಡಿಸಿದೆ. https://kannadanewsnow.com/kannada/kea-has-announced-the-final-round-results-of-dcet/
ಬೆಂಗಳೂರು: ಪ್ರಸಕ್ತ ಸಾಲಿನ ಡಿಸಿಇಟಿ ಮೂರು ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ. ಆ.25ರಿಂದ 27ರವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಂಡು, ಆ.28ರೊಳಗೆ ಶುಲ್ಕ ಪಾವತಿಸುವುದು. ಕಾಷನ್ ಡೆಪಾಸಿಟ್ ಕಟ್ಟಿದವರ ಹಣವನ್ನು ಶುಲ್ಕದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೀಟು ಖಾತರಿ ಚೀಟಿಯನ್ನು ಆ.29ರೊಳಗೆ ಡೌನ್‌ಲೋಡ್ ಮಾಡಿಕೊಂಡು ಆ.30ರೊಳಗೆ ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ. ಕೊನೆ ಸುತ್ತಿನಲ್ಲಿ ಒಟ್ಟು 860 ಮಂದಿಗೆ ವಿವಿಧ ವಿಭಾಗಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ. https://kannadanewsnow.com/kannada/power-outage-in-these-areas-of-bangalore-city-tomorrow/ https://kannadanewsnow.com/kannada/invitation-to-apply-for-agniveer-recruitment/
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11ಕೆ.ವಿ ಹೂಡಿ ಸ್ಟೇಷನ್ ವ್ಯಾಪ್ತಿಯಲ್ಲಿ ದಿನಾಂಕ 23.08.2025 (ಶನಿವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 03:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹುಡಿ ವಿಲೇಜ್, ತಿಗಲಾರಪಾಳ್ಯ, ಸೀತಾರಾಮಪಾಳ್ಯ, ಬಸವನಗರ, ಸೊನ್ನೆಹಳ್ಳಿ, ಟ್ರಂಕ್ ಕೇಬಲ್ ದೋಷ, ಎನ್ಜಿಇಎಫ್ ಕೈಗಾರಿಕಾ ಪ್ರದೇಶ, ಶಿವರಾಜ್ ಫ್ಯಾಕ್ಟರಿ, ಇಎಸ್ಐ ರಸ್ತೆ, ವಿಎಸ್ಎನ್ಎಲ್ ಡೇಟಾ ಸೆಂಟರ್, ಪುರವ ಪಾರ್ಕ್ ವಿಲಾಸ್, ಶಿವಗಂಗಾ ಲೇಔಟ್, ಅನುಗ್ರಹ ಲೇಔಟ್, ಚಿನ್ನಪ್ಪ ಲೇಔಟ್, ಔಟರ್ ರಿಂಗ್ ರಸ್ತೆ, ರಾಮಕೃಷ್ಣ ರೆಡ್ಡಿ ಲೇಔಟ್, ಗರುಡಾಚಾರ್ ಪಾಳ್ಯ, ಆರ್ಎಚ್ಬಿ ಕಾಲೋನಿ, ಲಕ್ಷ್ಮೀ ಸಾಗರ, ಮಹೇಶ್ವರಮ್ಮ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. https://kannadanewsnow.com/kannada/good-news-from-ksrtc-for-those-who-wish-to-see-the-singhadurga-bridge-bus-service-from-bangalore/ https://kannadanewsnow.com/kannada/invitation-to-apply-for-agniveer-recruitment/
ಬೆಂಗಳೂರು: ರಾಜ್ಯಕ್ಕೆ ಒಂದೇ ಕಾನೂನು ಇರಬೇಕು. ಗಣೇಶೋತ್ಸವವನ್ನು ವಿಜೃಂಭಣೆಯಿಂದ ಹಿಂದೂಗಳು ಕೊಂಡಾಡುವಂತೆ ಆಚರಿಸಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿ ಮಣೆ ಹಾಕುವುದು, ಹಿಂದೂಗಳನ್ನು ದಮನಿಸುವ ನೀತಿಯನ್ನು ಮಾಡಿದ್ದೇ ಆದರೆ, ಇದರ ಪ್ರತಿಫಲವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಲ್ಲ ಕಡೆ ಹಿಂದೂಗಳು ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು. ಗಣಪತಿ ಹಬ್ಬವನ್ನು ಬಹುಕಾಲದಿಂದ, ತಲೆತಲಾಂತರದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಗುಲ್ಬರ್ಗದಲ್ಲಿ ರಿಪಬ್ಲಿಕ್ ಆಫ್ ಗುಲ್ಬರ್ಗ ಎಂದು ಕರೆಯುತ್ತಾರೆ. ರಾಜ್ಯದ ಕಾನೂನು, ದೇಶದ ಕಾನೂನು ಅಲ್ಲಿ ನಡೆಯುವುದಿಲ್ಲ. ರಾಜ್ಯಕ್ಕೆ ಒಂದೇ ಕಾನೂನು, ನೀತಿ ಇರಬೇಕು ಎಂದು ಶಾಸಕರು ಪ್ರಸ್ತಾಪಿಸಿದ್ದರು. ಗುಲ್ಬರ್ಗದಲ್ಲಿ ಸದ್ದೇ ಮಾಡದೇ ಗಣಪತಿ ಉತ್ಸವ ಮಾಡಬೇಕೇ? ಕಾಂಗ್ರೆಸ್ಸಿನವರಿಗೆ ಮಾತ್ರ ಮೌನ ಗಣಪತಿ ಬೇಕು ಎಂದು ಟೀಕಿಸಿದರು. ದಕ್ಷಿಣ ಕನ್ನಡದಲ್ಲೂ ಹಿಂದೂಗಳನ್ನು ತುಳಿಯುವ ಕೆಲಸ…
ಬೆಂಗಳೂರು: ಸಿಂಗದೂರು ಕೇಬಲ್ ಬ್ರಿಡ್ಜ್ ಉದ್ಘಾಟನೆಯ ಬಳಿಕ ನೋಡೋದಕ್ಕೆ ತೆರಳೋರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಿಂದ ಸಿಗಂದೂರು ಸೇತುವೆ ನೋಡೋ ಪ್ಲಾನ್ ಮಾಡಿದ್ದರೇ, ಕೆ ಎಸ್ ಆರ್ ಟಿಸಿ ನೇರವಾಗಿ ಬಸ್ ಸಂಚಾರದ ವ್ಯವಸ್ಥೆ ಮಾಡಿ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕೆ ಎಸ್ ಆರ್ ಟಿ ಸಿಯು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಸಿಗಂದೂರು ವಯಾ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ ಮಾರ್ಗದಲ್ಲಿ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ದಿನಾಂಕ 22-08-2025 ರಿಂದ ಪ್ರಾರಂಭಿಸಿ ಈ ಕೆಳಕಂಡ ವೇಳಾಪಟ್ಟಿಯಂತೆ ಪ್ರಾರಂಭಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದಿದೆ. ಹೀಗಿದೆ ವೇಳಾಪಟ್ಟಿ ಮತ್ತು ಪ್ರಯಾಣದರ ಬೆಂಗಳೂರಿನಿಂದ ಸಿಗಂದೂರಿಗೆ ರೂ.950 ದರವನ್ನು ನಾನ್ ಎಸಿ ಸ್ಲೀಪರ್ ಬಸ್ಸಿಗೆ ನಿಗದಿ ಪಡಿಸಲಾಗಿದೆ. ಈ ಬಸ್ಸು ರಾತ್ರಿ 9.40ಕ್ಕೆ ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ಸಿಗಂದೂರು ತಲುಪಲಿದೆ. ಸಿಗಂದೂರನ್ನು ರಾತ್ರಿ…














