Author: kannadanewsnow09

ಮಂಡ್ಯ: ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗವಾಗಿದೆ. ಇಷ್ಟು ವರ್ಷ ಧರ್ಮಸ್ಥಳದ ಬಗ್ಗೆ ಮಾತನಾಡಲು ಬಿಟ್ಟಿದ್ದೇ ಅಪರಾಧ ಎಂಬುದಾಗಿ ಸಚಿವ ಎನ್ ಚಲುವರಾಯಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ನಾಯಕರು ಈಗ ಕಾನೂನಿನ ಕ್ರಮ ಆಗಬೇಕು ಅಂತಿದ್ದಾರೆ. ಹತ್ತಾರು ವರ್ಷದಿಂದ ಧರ್ಮಸ್ಥಳದ ಬಗ್ಗೆ ಅನೇಕರು ಮಾತನಾಡುತ್ತಿದ್ರು. ಆಗ ಬಿಜೆಪಿಯವರು ಎಲ್ಲಿ ಹೋಗಿದ್ರು ಎಂಬುದಾಗಿ ಪ್ರಶ್ನಿಸಿದರು. ಬಿಜೆಪಿ ಅವಧಿಯಲ್ಲೇ ತನಿಖೆ ಮಾಡಿ ಕ್ರಮಕೈಗೊಳ್ಳಬೇಕಿತ್ತು. ಬಿಜೆಪಿ ಸರ್ಕಾರ ಇದ್ದಾಗ ನಾವು ಅವರ ಕೈಯನ್ನು ಹಿಡಿದುಕೊಂಡಿದ್ವ? ತಿರುಪತಿ ಬಿಟ್ಟರೇ ಧರ್ಮಸ್ಥಳಕ್ಕೆ ಅತ್ಯಂತ ಹೆಚ್ಚು ಭಕ್ತರು ಇದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ನಡುವಳಿಕೆಯೇ ಇದಕ್ಕೆಲ್ಲ ಕಾರಣ ಎಂದರು. ನಾವು ಎಸ್ಐಟಿ ರಚಿಸಿದಾಗ ಯಾರೂ ಕೂಡ ಬೇಡ ಎನ್ನಲಿಲ್ಲ. ಎಲ್ಲರೂ ಬಾಯಿ ಮುಚ್ಚಿಕೊಂಡು ಕೂತಿದ್ದರು. ಎಸ್ಐಟಿ ರಚನೆ ಬಳಿಕ ಲಾಭ ಪಡೆಯಲು ಬಿಜೆಪಿ ಯತ್ನಿಸಿತು ಎಂಬುದಾಗಿ ಕಿಡಿಕಾರಿದರು.

Read More

ಬೆಂಗಳೂರು: ಅಕ್ರಮ ಆನ್ ಲೈನ್ ಹಾಗೂ ಆಪ್ ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿಯನ್ನು ಇಡಿ ಬಂಧಿಸಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರನ್ನು ಆಗಸ್ಟ್.28ರವರೆಗೆ ಇಡಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಅಕ್ರಮ ಆನ್ ಲೈನ್ ಮತ್ತು ಆಫ್ ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರನ್ನು ಮನೆ, ಕಚೇರಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ್ದರು. ಅಕ್ರಮ ಹಣ ವರ್ಗಾವಣೆ ಪತ್ತೆಯಾದ ಹಿನ್ನಲೆಯಲ್ಲಿ ಸಿಕ್ಕಿಂನಲ್ಲಿ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರನ್ನು ಬಂಧಿಸಲಾಗಿತ್ತು. ಇಂದು ಇಡಿ ಅಧಿಕಾರಿಗಳಿಂದ 35ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಸೈಯದ್ ಬಿ ರೆಹಮಾನ್ ಅವರು ಆಗಸ್ಟ್.28ರವರೆಗೆ ಇಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.

Read More

ಮಂಡ್ಯ: ಒಳ ಮೀಸಲಾತಿ ಜಾರಿ ಮಾಡುವಲ್ಲಿ ಬಲಾಡ್ಯ ಪರಿಶಿಷ್ಟ ಸಮುದಾಯಗಳನ್ನು ಓಲೈಸುವ ಭರದಲ್ಲಿ ದುರ್ಬಲ ಅಲೆಮಾರಿ ಸಮುದಾಯಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಅಖಿಲ ಕರ್ನಾಟಕ ಡಾ|| ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್ ಗಂಭೀರ ಆರೋಪ ಮಾಡಿದರು. ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಾನೇ ರಚನೆ ಮಾಡಿದ್ದ ನ್ಯಾ|| ನಾಗಮೋಹನ್ ದಾಸ್ ವರದಿಯ ಅಂಶಗಳಿಗೆ ತಿಲಾಂಜಲಿ ನೀಡಿದೆ. ಈಗಾಗಲೇ ಇರುವ ವರದಿಗಳನ್ನು ಅಲ್ಲಗಳೆದು ತಾನಾಗಿಯೇ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿ ವರದಿ ನೀಡಲು ಹೇಳಿತ್ತು. ಆಯೋಗವು ಒಳ ಮೀಸಲಾತಿಗೆ ಸಂಬಂಧಿಸಿದ ವರದಿ ನೀಡುವಾಗ 59 ಅಲೆಮಾರಿ ಸಮುದಾಯ ಗಳನ್ನು ಒಂದು ಗುಂಪು ಮಾಡಿ ಶೇ 1 ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ಈ ಗುಂಪನ್ನೇ ರದ್ದು ಮಾಡಿ ಬಲಿಷ್ಠ ಅಸ್ಪೃಶ್ಯ ಜಾತಿಗಳೊಂದಿಗೆ ದುರ್ಬಲ ಅಲೆಮಾರಿಗಳನ್ನು ಸೇರ್ಪಡೆ ಮಾಡಿ ಅನ್ಯಾಯ ಮಾಡಿದೆ ಎಂದು…

Read More

ಬೆಂಗಳೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ 1500 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ದಿನಾಂಕ: 26.08.2025 ರಂದು ಸ್ವರ್ಣಗೌರಿ ವ್ರತ, ದಿನಾಂಕ 27.08.2025ರಂದು ಗಣೇಶ ಚತುರ್ಥಿ ಹಬ್ಬವಿರುವುದರಿಂದ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ:25.08.2025 ಹಾಗೂ 26.08.2025 ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 1500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿರುತ್ತದೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ:27.08.2025 ಹಾಗೂ 31.08.2025ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು. • ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಕಾರ್ಯಾಚರಣೆ. • ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ,…

Read More

ಬೆಂಗಳೂರು: ನಗರದ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿರುವ ʻಪರಮ್ ಕಲ್ಚರ್ʼ ತನ್ನ ಮಾಸಿಕ ಕಲಾ ಪ್ರದರ್ಶನವಾದ ʻಪರಮ್ ವಿಹಾರʼ ಕಾರ್ಯಕ್ರಮವನ್ನು ಸನಾತನ ಕಲಾಕ್ಷೇತ್ರದಲ್ಲಿ ಆಗಸ್ಟ್ 24ರಂದು ಆಯೋಜಿಸಿದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾ ಪ್ರಕಾರಗಳ ಮಿಶ್ರಣವುಳ್ಳ ಕಾರ್ಯಕ್ರಮ ಇದಾಗಿದ್ದು, ಜಗಲಿ ಟೇಲ್ಸ್‌, ತಂತ್ರ ಕಾರ್ಯಕ್ರಮಗಳು ಮಾಹಿತಿಯುಕ್ತ ಮನೋರಂಜನೆ ನೀಡಲು ಸಜ್ಜಾಗಿದೆ. ಪ್ರತಿ ತಿಂಗಳ ನಾಲ್ಕನೇ ಭಾನುವಾರದಂದು ನಡೆಯುವ ಈ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯ ಶ್ರೀಮಂತತೆಯ ಸಾರವನ್ನೊಳಗೊಂಡಿರುವುದಲ್ಲದೆ, ಉದಯೋನ್ಮುಖ ಕಲಾವಿದರಿಗೆ ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ವಿದ್ವಾನ್ ಪ್ರಮಥ್ ಕಿರಣ್ ಅವರ ನೇತೃತ್ವದಲ್ಲಿ ‘ತಂತ್ರ’: ವಿದ್ವಾನ್ ಪ್ರಮಥ್ ಕಿರಣ್ ಅವರ ನೇತೃತ್ವದಲ್ಲಿ ಭಾನುವಾರ ಮಧ್ಯಾಹ್ನ 2:30ರಿಂದ 4:30ರವರೆಗೆ ‘ತಂತ್ರ’ ಎಂಬ ವಿಶೇಷ ಕಾರ್ಯಾಗಾರದ ಮೂಲಕ ಕಾರ್ಯಕ್ರಮವು ಪ್ರಾರಂಭವಾಗಲಿದೆ. ಈ ಕಾರ್ಯಾಗಾರದಲ್ಲಿ ಸಂಗೀತಗಾರರು ಮತ್ತು ಧ್ವನಿ ತಂತ್ರಜ್ಞರು ಲೈವ್ ಸೌಂಡ್ ಪ್ರೊಡಕ್ಷನ್ ಕುರಿತು ಅಗಾಧ ಮಾಹಿತಿಯನ್ನೊದಗಿಸುತ್ತಾರೆ. ಗೇರ್ ಹ್ಯಾಕ್‌ಗಳು ಮತ್ತು ಫೀಡ್‌ಬ್ಯಾಕ್ ನಿಯಂತ್ರಣದಂತಹ ಸೂಕ್ಷ್ಮ ತಾಂತ್ರಿಕ ವಿಷಯಗಳಿಂದ ಹಿಡಿದು ಅತ್ಯುತ್ತಮ ಗುಣಮಟ್ಟದ ಮತ್ತು ಸ್ಪಷ್ಟ ಆಡಿಯೋ ಮಿಕ್ಸಿಂಗ್‌…

Read More

ಬೆಂಗಳೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ 1500 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ದಿನಾಂಕ: 26.08.2025 ರಂದು ಸ್ವರ್ಣಗೌರಿ ವ್ರತ, ದಿನಾಂಕ 27.08.2025ರಂದು ಗಣೇಶ ಚತುರ್ಥಿ ಹಬ್ಬವಿರುವುದರಿಂದ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ:25.08.2025 ಹಾಗೂ 26.08.2025 ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 1500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿರುತ್ತದೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ:27.08.2025 ಹಾಗೂ 31.08.2025ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು. • ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಕಾರ್ಯಾಚರಣೆ. • ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ,…

Read More

ಮಂಡ್ಯ : ಕಂದಾಯ ಇಲಾಖೆ ಎಲ್ಲ ಇಲಾಖೆಗಳ ಮಾತೃ ಇಲಾಖೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇಲಾಖಾ ನೌಕರರೂ ಮಾತೃ ಹೃದಯದಿಂದ ಜನ ಸೇವೆ ಮಾಡಬೇಕೆಂದು ಮದ್ದೂರು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಹೇಳಿದರು. ಮದ್ದೂರು ಪಟ್ಟಣದ ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ವಿ.ಎ ಮುರಳೀಧರ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ಮದ್ದೂರು ತಾಲೂಕು ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾಗಿದ್ದ ಎಚ್.ಮಂಜುನಾಥ್ ಅವರು ಮಂಡ್ಯ ತಾಲೂಕಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ರಾಜಸ್ವ ನಿರೀಕ್ಷಕ ವಿ.ಎ.ಮುರಳೀಧರ ಅವರನ್ನು ಜಿಲ್ಲಾ ಸಮಿತಿಯಿಂದ ಅವರನ್ನು ನೇಮಕ ಮಾಡಲಾಗಿದೆ. ವಿ.ಎ.ಮುರಳೀಧರ ಅವರು ದಶಕಗಳ ಮೇಲ್ಪಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರಿಗೆ ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿದ್ದು ಖುಷಿ ವಿಚಾರ. ನೌಕರರ ಸಹಕಾರ ಇಲ್ಲದೆ ಜನಸೇವೆ ಹಾಗೂ ಉತ್ತಮ ಆಡಳಿತ ನೀಡಲು ಅಸಾಧ್ಯ. ಕಂದಾಯ ಇಲಾಖೆ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಜನರ ಜೊತೆಗೆ…

Read More

ಮಂಡ್ಯ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಮತ್ತು ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಶುಕ್ರವಾರ ಮದ್ದೂರು ಪಟ್ಟಣ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಮದ್ದೂರು ಪಟ್ಟಣ ವ್ಯಾಪ್ತಿಯ ಸರ್ಕಾರಿ ಕಛೇರಿಗಳು, ಬ್ಯಾಂಕ್, ಆಸ್ಪತ್ರೆ, ಶಾಲಾ ಕಾಲೇಜುಗಳು, ಚಿತ್ರ ಮಂದಿರಗಳು, ಮೆಡಿಕಲ್ ಶಾಪ್ ಹಾಗೂ ಅಗತ್ಯ ವಸ್ತುಗಳ ಮಾರಾಟ ಹೊರತು ಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟು ಬೆಳಿಗ್ಗೆಯಿಂದ ಸಂಜೆವರೆಗೂ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಹಿಂದೂ ಜಾಗರಣ ವೇದಿಕೆ, ವಿಶ್ವ ಒಕ್ಕಲಿಗರ ಸಂಘ, ಆರ್.ಎಸ್.ಎಸ್ ಧರ್ಮಸ್ಥಳ ಸಮಿತಿ, ವಕೀಲರ ಸಂಘ, ವರ್ತಕರ ಸಂಘ, ಜೆಡಿಎಸ್, ಬಿಜೆಪಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟ್ಟಣದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದಿಂದ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಸರಿ ಬಾವುಟಗಳನ್ನು ಹಿಡಿದುಕೊಂಡು ಸಂಚರಿಸಿ ಘೋಷಣೆ ಕೂಗುತ್ತ ತಾಲೂಕು ಕಛೇರಿ ಮುಂದೆ ಕೆಲಕಾಲ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ…

Read More

ಬೆಂಗಳೂರು: ಅಮೆರಿಕನ್‌ ಸೊಸೈಟಿ ಆಫ್‌ ಮೆಕ್ಯಾನಿಕಲ್‌ ಎಂಜಿನಿಯರ್ಸ್‌ (ಎಎಸ್‌ಎಂಇ) ಭಾರತದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್ ಮತ್ತು ಎಕ್ಸ್‌ಪೋಸಿಷನ್ (ಐಎಂಸಿಇ) ಸಮ್ಮೇಳನ ಆಯೋಜಿಸಿದೆ. ಸೆಪ್ಟೆಂಬರ್ 10 ರಿಂದ 13 ರವರೆಗೆ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆಯಲಿರುವ ಈ ಸಮ್ಮೇಳನವು ನಾವಿನ್ಯತೆ, ಸಂಶೋಧನೆ ಮತ್ತು ಜಾಗತಿಕ ನಿಶ್ಚಿತಾರ್ಥದ ಪರಂಪರೆಯಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸುತ್ತದೆ. ಈ ಕುರಿತು ಮಾತನಾಡಿದ IMECE ಇಂಡಿಯಾ ಆವೃತ್ತಿಯ ಬಿಡುಗಡೆಯ ಕುರಿತು ಮಾತನಾಡಿದ ASME ಇಂಡಿಯಾ ಪ್ರೈ.ಲಿ.ನ ನಿರ್ದೇಶಕ ಮಧುಕರ್ ಶರ್ಮಾ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಂಪ್ರದಾಯಿಕವಾಗಿ ನಡೆಯುವ IMECE, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿನ ಪ್ರಗತಿಯನ್ನು ಅನ್ವೇಷಿಸಲು ಪ್ರಪಂಚದಾದ್ಯಂತದ ಚಿಂತಕರು, ಸಂಶೋಧಕರು, ಉದ್ಯಮ ವೃತ್ತಿಪರರು, ನೀತಿ ನಿರೂಪಕರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುತ್ತದೆ. 650 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ತಾಂತ್ರಿಕ ಪ್ರಸ್ತುತಿ, 1500 ಪ್ರತಿನಿಧಿಗಳು ಮತ್ತು 100 ಪ್ರದರ್ಶಕರನ್ನು ಒಳಗೊಂಡ ಮೊದಲ IMECE ಇಂಡಿಯಾ 2025 ಆಗಲಿದೆ. ಈ ಸಮ್ಮೇಳನವು ಎಂಜಿನಿಯರಿಂಗ್ ಜ್ಞಾನವನ್ನು ಹೆಚ್ಚಿಸಲು,…

Read More

ಮೈಸೂರು: ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ, ರೈಲ್ವೆ ಮಂಡಳಿ 06281/06282 ಮೈಸೂರು–ಅಜ್ಮೀರ್– ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಅವಧಿ ವಿಸ್ತರಣೆಯನ್ನು ಅನುಮೋದಿಸಿದೆ. ಈ ರೈಲುಗಳು ಹಳೆಯ ಸಮಯ, ನಿಲ್ದಾಣಗಳು ಮತ್ತು ಸಂಚಾರದಂತೆ ಮುಂದುವರೆಯಲಿವೆ. 06281 ಮೈಸೂರು–ಅಜ್ಮೀರ್ ವಿಶೇಷ ಎಕ್ಸ್‌ಪ್ರೆಸ್, ಮೊದಲು 30.08.2025 ರವರೆಗೆ ಮಾತ್ರ ಓಡುವಂತೆ ಪ್ರಕಟಿಸಲಾಗಿತ್ತು. ಇದೀಗ ಇದು 06.09.2025 ರಿಂದ 29.11.2025 ರವರೆಗೆ ಪ್ರತಿ ಶನಿವಾರ ಓಡಲಿದೆ. ಅದೇ ರೀತಿ, 06282 ಅಜ್ಮೀರ್–ಮೈಸೂರು ವಿಶೇಷ ಎಕ್ಸ್‌ಪ್ರೆಸ್, ಮೊದಲು 01.09.2025 ರವರೆಗೆ ಮಾತ್ರ ಓಡುವಂತೆ ಪ್ರಕಟಿಸಲಾಗಿತ್ತು. ಇದೀಗ ಇದು 08.09.2025 ರಿಂದ 01.12.2025 ರವರೆಗೆ ಪ್ರತಿ ಸೋಮವಾರ ಓಡಲಿದೆ.

Read More