Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು : ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಅವರ ಲೊಕೇಶನ್ ಟ್ರ್ಯಾಕ್ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ವಲಯ ಐಜಿಪಿ ಹಾಗೂ ಡಿಜಿಪಿ ಅವರಿಂದ ಮಾಹಿತಿ ಪಡೆಯುವುದಾಗಿ ಗೃಹ ಸಚಿವ ಪರಮೇಶ್ವರ ಅವರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಲೊಕೇಶನ್ ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಅವರು ಆರೋಪದ ಕುರಿತು ಮಾಧ್ಯಮದವರಿಗೆ ಸಚಿವರು ಪ್ರತಿಕ್ರಿಯಿಸಿದರು. ಎಸ್‌ಪಿ ಹಾಗೂ ಐಜಿಪಿಯವರೊಂದಿಗೆ ಮಾತನಾಡುತ್ತೇನೆ. ಅಂತಹ ಘಟನೆ ಏನಾದರು ನಡೆದಿದ್ದರೆ, ಯಾಕೆ ನಡೆದಿದೆ, ಯಾವ ಕಾರಣಕ್ಕೆ ಆಗಿದೆ, ಯಾರು ಅನುಮತಿ ಕೊಟ್ಟಿದ್ದಾರೆ ಎಂದು ವಿಚಾರಿಸಿ, ಮುಂದಿನ ಕ್ರಮ ತೆಗದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ವಕ್ಫ್ ಮಸೂದೆ ರಾಜಕೀಯ ಕಾರಣಕ್ಕಾಗಿ ಮಾಡಿಕೊಳ್ಳಲಾಗಿದೆ ವಿನಃ ಜನರ ಹಿತಾಸಕ್ತಿಗಾಗಿ ತಂದಿಲ್ಲ ಎಂದು ಪುನರುಚ್ಛಿಸಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾಡಿರುವ ನಿರಾಧಾರ ಆರೋಪಕ್ಕೆ ಸದನದಲ್ಲಿ ಅವರೇ ಸೂಕ್ತ ಉತ್ತರ ನೀಡಿದ್ದಾರೆ. ಯಾವುದಾದರು ಆಸ್ತಿ ಕಬಳಿಕೆ…
ಚಾಮರಾಜನಗರ: ಕೆಲಸಕ್ಕೆ ಹೋಗಬೇಡ ಎಂಬುದಾಗಿ ಹೇಳಿದಂತ ಪತಿಯ ಮಾತಿನಿಂದ ಮನನೊಂದು ಪತ್ನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ಕುಂತೂರಿನಲ್ಲಿ ನಡೆದಿದೆ. ಚಾಮರಾಜನಗರದ ಕುಂತೂರಿನಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಬೇಡ ಎಂಬುದಾಗಿ ಪತ್ನಿ ಸುಧಾಗೆ ಪತಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಜಗಳವಾಗಿದೆ. ಜಗಳ ತಾರಕಕ್ಕೇರಿದಂತ ಸಂದರ್ಭದಲ್ಲಿ ಪತ್ನಿ ಸುಧಾ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/big-news-lorry-owners-protest-against-diesel-hike-strike-date-likely-to-be-announced-tomorrow/ https://kannadanewsnow.com/kannada/money-problem-solve-astrology/
ನಮಸ್ಕಾರ ಸ್ನೇಹಿತರೆ ಸಾಮುದ್ರಿಕಾಶಾಸ್ತ್ರ ಒಂದು ಯಾವ ರೀತಿಯ ವಿಜ್ಞಾನವಾಗಿದೆ ಎಂದರೆ ಇಲ್ಲಿ ಹಸ್ತ ರೇಖೆಗಳ ಮೂಲಕ ತಮ್ಮ ಭವಿಷ್ಯವನ್ನು ನೋಡಬಹುದಾಗಿದೆ ಭವಿಷ್ಯದಲ್ಲಿ ಯಾವ ಎಲ್ಲಾ ಕೆಟ್ಟ ಘಟನೆಗಳು ಮತ್ತು ಒಳ್ಳೆಯ ಘಟನೆಗಳು ನಡೆಯಲಿವೆ ಎಂದು ನಾವು ಇಲ್ಲಿ ತಿಳಿಯಬಹುದು ಇಲ್ಲಿ ಅಂಗೈನ ಆಕಾರ ಬೆರಳುಗಳ ಎತ್ತರವನ್ನು ನೋಡಿ ಮನುಷ್ಯನ ಜೀವನದ ಕೆಲವು ವಿಶೇಷವಾದ ಗುಣಗಳನ್ನು ತಿಳಿಯಬಹುದಾಗಿದೆ ಇಲ್ಲಿ ನಿಮ್ಮ ಅಂಗೈಯ ನ ಹೆಬ್ಬೆರಳು ಕೇವಲ ನಿಮ್ಮ ವ್ಯಕ್ತಿತ್ವದ ಕನ್ನಡಿ ಆಗಿರದೆ ಇದರ ಒಳಗಡೆ ನಿಮ್ಮ ಜೀವನ ಸಂಗಾತಿಯ ಹೆಸರು ಕೂಡ ಅಡಗಿರುತ್ತದೆ ಹೆಬ್ಬರಳಿನ ಯಾವ ಭಾಗದಲ್ಲಿ ನಿಮ್ಮ ಪಾರ್ಟ್ನರ್ ಹೆಸರು ಅಡಗಿರುತ್ತದೆ ಮತ್ತು ಬೆರಳಿನಲ್ಲಿರುವ ರೇಖೆಗಳ ಮೂಲಕ ಯಾವ ವಯಸ್ಸಿನಲ್ಲಿ ನಿಮ್ಮ ಮದುವೆ ಆಗುತ್ತದೆ ಎಂದು ಕೂಡ ತಿಳಿಯಬಹುದಾಗಿದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ಸಿಂಗದೂರು ಚೌಡಮ್ಮನವರ ಉಪಾಸಕರು ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು…
ನವದೆಹಲಿ: ಸಣ್ಣ ಉಳಿತಾಯ ಯೋಜನೆಯ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಗಳಿಗೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಪಿಪಿಎಫ್ ಖಾತೆಗಳ ನಾಮಿನಿಯನ್ನು ನವೀಕರಿಸಲು ಅಥವಾ ಬದಲಾಯಿಸಲು ಇನ್ನು ಮುಂದೆ ಯಾವುದೇ ಶುಲ್ಕವಿರುವುದಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪಿಪಿಎಫ್ ಖಾತೆಗಳ ಸಂದರ್ಭದಲ್ಲಿ ನಾಮಿನಿ ವಿವರಗಳನ್ನು ಬದಲಾಯಿಸಲು ಅನೇಕ ಹಣಕಾಸು ಸಂಸ್ಥೆಗಳು ಶುಲ್ಕ ವಿಧಿಸುತ್ತಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಆರೋಪಗಳನ್ನು ತೆಗೆದುಹಾಕಲು ನಾವು ಜಿಒ ತಂದಿದ್ದೇವೆ ಎಂದಿದ್ದಾರೆ. ಇತ್ತೀಚೆಗೆ, ಸರ್ಕಾರಿ ಉಳಿತಾಯ ಉತ್ತೇಜನ ಸಾಮಾನ್ಯ ನಿಯಮಗಳು, 2018 ರಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ಪಿಪಿಎಫ್ ಖಾತೆಗಳಿಗೆ ನಾಮಿನಿಗಳ ನವೀಕರಣದ ಮೇಲಿನ ಯಾವುದೇ ಶುಲ್ಕಗಳನ್ನು ತೆಗೆದುಹಾಕಲು ಗೆಜೆಟ್ ಅಧಿಸೂಚನೆಯ ಮೂಲಕ ಸರ್ಕಾರಿ ಉಳಿತಾಯ ಉತ್ತೇಜನ ಸಾಮಾನ್ಯ ನಿಯಮಗಳು, 2018 ರಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ಇತ್ತೀಚೆಗೆ ಅಂಗೀಕರಿಸಲಾದ ಬ್ಯಾಂಕಿಂಗ್ ತಿದ್ದುಪಡಿ ಮಸೂದೆ, 2025 ರ ಪ್ರಕಾರ, ನಾಲ್ಕು ನಾಮನಿರ್ದೇಶಿತರನ್ನು ನೀಡಲು ಅವಕಾಶವಿದೆ ಎಂದು…
ಗದಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಾಗಿ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೊಳಿಸಲಾಗಿದೆ. ಸಾಲ ಮರು ಪಾವತಿಗಾಗಿ ಕಿರುಕುಳ ನೀಡುವವರ ವಿರುದ್ಧ ಈ ಕಾನೂನಿನಡಿ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೇ ಇಂತಹ ಮಸೂದೆ ಜಾರಿಗೆ ತಂದರೂ, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಲ್ಲ. ಗದಗದಲ್ಲಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗದಗ ಜಿಲ್ಲೆಯ ಬೆಟಗೇರಿಯ ನರಸಾಪುರದ ಆಶ್ರಯ ಕಾಲೋನಿಯ ನಿವಾಸಿ ಉಮೇಶ್ ಕಟವಾ(40) ಎಂಬುವರೇ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಉಮೇಶ್ ಅವರು ಬಿಎಸ್ಎಸ್ ಫೈನಾನ್ಸ್, ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಸೇರಿದಂತೆ ಇತರೆ ಫೈನಾನ್ಸ್ ಕಂಪನಿಗಳಿಂದ ಒಂದೂವರೆ ಲಕ್ಷದಷ್ಟು ಸಾಲ ಮಾಡಿದ್ದರು. ಸಾಲ ಮರುಪಾವತಿಸುವಂತೆ ನಿರಂತವಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳು ಕಿರುಕುಳ ನೀಡುತ್ತಿದ್ದವು. ಇಂದು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ತಮ್ಮ ಮನೆಯಲ್ಲೇ ಉಮೇಶ್ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. https://kannadanewsnow.com/kannada/chargesheet-framed-in-one-case-against-former-mp-prajwal-revanna/ https://kannadanewsnow.com/kannada/no-fee-for-nominee-renewal-of-ppf-accounts-finance-ministry/
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಒಂದು ಪ್ರಕರಣದಲ್ಲಿ ದೋಷಾರೋಪವನ್ನು ಕೋರ್ಟ್ ನಿಗದಿ ಪಡಿಸಿದೆ. ಈ ಮೂಲಕ ಪ್ರಜ್ವಲ್ ರೇವಣ್ಣ ಅವರಿಗೆ ಬಿಗ್ ಶಾಕ್ ನೀಡಲಾಗಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ, ಅಶ್ಲೀಲ ದೃಶ್ಯ ಸೆರೆ ಸಂಬಂಧದ ಪ್ರಕರಣದ ವಿಚಾರಣೆ ನಡೆಯಿತು. ಪ್ರಜ್ವಲ್ ರೇವಣ್ಣ ಮೇಲಿನ 8 ಆರೋಪಗಳ ಬಗ್ಗೆ ನ್ಯಾಯಾಧೀಶರು ಪ್ರಶ್ನಿಸಿದರು. ಎರಡೂ ದೋಷಾರೋಪಣೆ ಒಪ್ಪಲು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನಿರಾಕರಿಸಿದರು. ಅತ್ಯಾಚಾರ, ಅಶ್ಲೀಲ ದೃಶ್ಯ ಸೆರೆಗೆ ಸಂಬಂಧಿಸಿದಂತ ದೋಷಾರೋಪಗಳು. ನಾನು ಯಾವುದೇ ತಪ್ಪಿ ಮಾಡಿಲ್ಲವೆಂದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಾರೋಪಗಳನ್ನು ನಿರಾಕರಿಸಿದರು. ಆದರೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ 2/2024ರ ಪ್ರಕರಣದಲ್ಲಿ ದೋಷಾರೋಪವನ್ನು ನಿಗದಿ ಪಡಿಸಿತು. ಆ ಬಳಿಕ ಏಪ್ರಿಲ್ 9ಕ್ಕೆ ಕೇಸ್ ಟ್ರಯಲ್ ಗೆ ದಿನಾಂಕ ನಿಗದಿಯನ್ನು ಕೋರ್ಟ್ ಮಾಡಿದೆ. https://kannadanewsnow.com/kannada/no-fee-for-nominee-renewal-of-ppf-accounts-finance-ministry/ https://kannadanewsnow.com/kannada/two-jdu-leaders-resign-for-supporting-waqf-bill/
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ತುಳಿತಕ್ಕೆ ಒಳಗಾಗಿರುವ ಬಡ, ದುರ್ಬಲ ಜನರಿಗೆ ವರದಾನವಾಗಿದೆ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಪ್ರತಿಪಾದಿಸಿದರು. ರಾಜ್ಯಸಭೆಯಲ್ಲಿ ಇಂದು ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಅವರು; ದೇಶದಲ್ಲಿರುವ ವಕ್ಫ್ ಬೋರ್ಡ್ ಗಳ ಆಸ್ತಿ ಸುಮಾರು ₹1.2 ಲಕ್ಷ ಕೋಟಿ ಬೆಲೆ ಬಾಳುತ್ತದೆ. ಇಂತಹ ಬೆಲೆ ಬಾಳುವ ಆಸ್ತಿಯನ್ನು ದಾನಿಗಳು ನೀಡಿದ್ದಾರೆ. ಈ ಆಸ್ತಿಯನ್ನು ರಕ್ಷಣೆ ಮಾಡಿ ಬಡ ಮುಸ್ಲಿಮರಿಗೆ ಅನುಕೂಲ ಆಗುವ ಕೆಲಸವನ್ನು ಈ ವಿಧೇಯಕ ಮಾಡುತ್ತಿದೆ ಎಂದರು. ಈ ಮಸೂದೆಯು ವಕ್ಫ್ ಮಂಡಳಿಗಳ ಅಡಿಯಲ್ಲಿರುವ ಆಸ್ತಿಗಳ ಆಡಳಿತವನ್ನು ನಿಯಂತ್ರಿಸುತ್ತದೆ. ಇದು ಪ್ರಸ್ತುತ ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ಇರುವ ಒಟ್ಟು 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತದೆ ಹಾಗೂ ಅದರ ಮೌಲ್ಯ ₹1.2 ಲಕ್ಷ ಕೋಟಿ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಈ ಆಸ್ತಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು. ನಾವು ಜಾತ್ಯತೀತ ಎಂದು ಹೇಳಿಕೊಂಡವರು ಮುಸ್ಲಿಮರಿಗೆ ಕಳೆದ ಎಪ್ಪತ್ತೈದು ವರ್ಷಗಳಿಂದ…
ನವದೆಹಲಿ: ಜನತಾ ದಳ (ಯುನೈಟೆಡ್) ಪಕ್ಷದ ಹಿರಿಯ ನಾಯಕರಾದ ಮೊಹಮ್ಮದ್ ಖಾಸಿಮ್ ಅನ್ಸಾರಿ ಮತ್ತು ಮೊಹಮ್ಮದ್ ನವಾಜ್ ಮಲಿಕ್ ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ನೀಡುವ ಬಗ್ಗೆ ಭಿನ್ನಾಭಿಪ್ರಾಯವಿದೆ ಎಂದು ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ತಡರಾತ್ರಿ ಮಸೂದೆಯನ್ನು ಅಂಗೀಕರಿಸಲಾಯಿತು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮಿತ್ರ ಪಕ್ಷವಾದ ಜೆಡಿ(ಯು) ಹಲವಾರು ಕಡೆಗಳಿಂದ ವಿರೋಧದ ಹೊರತಾಗಿಯೂ ಅದನ್ನು ಬೆಂಬಲಿಸಿತು. ಜೆಡಿ(ಯು) ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ, ಅನ್ಸಾರಿ ಪಕ್ಷದ ನಿರ್ಧಾರದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಇದು ಜೆಡಿ(ಯು) ಅನ್ನು ಜಾತ್ಯತೀತ ಮೌಲ್ಯಗಳ ರಕ್ಷಕ ಎಂದು ನೋಡಿದ ಅನೇಕ ಭಾರತೀಯ ಮುಸ್ಲಿಮರ ನಂಬಿಕೆಯನ್ನು ಮುರಿದಿದೆ ಎಂದು ಅವರು ಹೇಳಿದರು. “ನನ್ನ ಜೀವನದ ಹಲವಾರು ವರ್ಷಗಳನ್ನು ಪಕ್ಷಕ್ಕೆ ನೀಡಿದ್ದಕ್ಕಾಗಿ ನಾನು ನಿರಾಶೆಗೊಂಡಿದ್ದೇನೆ” ಎಂದು ಅವರು ಹಿಂದಿಯಲ್ಲಿ ಬರೆದಿದ್ದಾರೆ. “ನಮ್ಮಂತಹ ಲಕ್ಷಾಂತರ ಭಾರತೀಯ ಮುಸ್ಲಿಮರು ನೀವು ಸಂಪೂರ್ಣವಾಗಿ ಜಾತ್ಯತೀತ ಸಿದ್ಧಾಂತದ ಧ್ವಜಧಾರಕರು ಎಂದು ಅಚಲ ನಂಬಿಕೆಯನ್ನು ಹೊಂದಿದ್ದರು…
ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಎರಡು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಈ ಬೇಡಿಕೆ ಈಡೇರಿಸಿದಂತ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್ ಸಂತೋಷ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಾಜ್ಯ ಸರ್ಕಾರವು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಹಾಗೂ ಸಮಗ್ರ ವೇತನ ಪ್ಯಾಕೇಜ್ ಎಂಬಂತ ಎರಡು ಪ್ರಮುಖ ಬೇಡಿಕೆಯನ್ನು ಈಡೇರಿಸಿದೆ ಎಂದರು. ರಾಜ್ಯ ಸರ್ಕಾರದ ಸಮಗ್ರ ವೇತನ ಪ್ಯಾಕೇಜ್ ಕಾರಣದಿಂದ ಸರ್ಕಾರಿ ನೌಕರರು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ಬ್ಯಾಂಕುಗಳ ಜೊತೆಗಿನ ಒಡಂಬಡಿಕೆಯಿಂದ ಸರ್ಕಾರಿ ನೌಕರರಿಗೆ ಕ್ಷಣಾರ್ಧದಲ್ಲಿ ಗೃಹ, ವಾಹನ, ಉನ್ನತ ಶಿಕ್ಷಣ ಸಾಲ ಸೇರಿದಂತೆ ಇತರೆ ಸೌಲಭ್ಯಗಳು ದೊರೆಯುವಂತೆ ಆಗಲಿದೆ ಎಂದರು. ರಾಜ್ಯ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗಲೇ ಅಕಾಲಿಕ ಮರಣಹೊಂದಿದರೇ ಅವರ ಅವಲಂಭಿತರಿಗೆ ನೀಡಲಾಗುತ್ತಿದ್ದಂತ ಪರಿಹಾರವನ್ನು 50 ಲಕ್ಷದಿಂದ 1 ಕೋಟಿಗೆ…
ಕಲಿಯುಗದಲ್ಲಿ ಆಂಜನೇಯಸ್ವಾಮಿ ಆರಾಧನೆ ಮಾಡುವುದರಿಂದ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ ನಾವು ಅನೇಕ ದೇವರನ್ನು ಆರಾಧನೆ ಮಾಡುತ್ತೇವೆ ನಮ್ಮ ಕಷ್ಟಗಳು ನಿವಾರಣೆಯಾಗಲಿ ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಎಲ್ಲಾ ದೇವರಲ್ಲಿ ಮೊರೆ ಹೋಗುತ್ತೇವೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ಸಿಂಗದೂರು ಚೌಡಮ್ಮನವರ ಉಪಾಸಕರು ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ, ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ…