Author: kannadanewsnow09

ಕೊಪ್ಪಳ: ಜಿಲ್ಲೆಯಲ್ಲಿ ಶಾಕಿಂಗ್ ಘಟನೆ ಎನ್ನುವಂತೆ ವಿದ್ಯುತ್ ತಂತಿಯೊಂದು ಬಾಲಕನ ಮೇಲೆ ಕಟ್ ಆಗಿ ಬಿದ್ದ ಪರಿಣಾಮ, ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಬಹಿರ್ದೆಸೆಗೆ ತೆರಳಿದ್ದಂತ ಬಾಲಕನ ಮೇಲೆ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದೆ. ಇದರ ಪರಿಣಾಮವಾಗಿ ಬಾಲಕ ವಿನಯ್(11) ಸ್ಥಳದಲ್ಲೇ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಅವಘಡಕ್ಕೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ಪೋಷಕರು, ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. https://kannadanewsnow.com/kannada/cricketer-mohammed-siraj-takes-charge-as-telangana-dsp/ https://kannadanewsnow.com/kannada/indias-first-terrorist-nathuram-godse-was-breaking-break-mlc-b-k-hariprasad/

Read More

ಹೈದರಾಬಾದ್ : ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರು ತೆಲಂಗಾಣದ ಪೊಲೀಸ್ ಮಹಾನಿರ್ದೇಶಕರಿಗೆ (Director General of Police -DGP) ಶುಕ್ರವಾರ ವರದಿ ಮಾಡಿದ ನಂತರ ಅಧಿಕೃತವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿ (Deputy Superintendent of Police -DSP) ಅಧಿಕಾರವನ್ನು ಸ್ವೀಕರಿಸಿದರು. ಮೊಹಮ್ಮದ್ ಸಿರಾಜ್ಗೆ ಪ್ರತಿಷ್ಠಿತ ಗ್ರೂಪ್ -1 ಸರ್ಕಾರಿ ಹುದ್ದೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಘೋಷಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿರಾಜ್ ಇಂದು ತನ್ನ ಕರ್ತವ್ಯಗಳನ್ನು ವಹಿಸಿಕೊಂಡಿದ್ದರಿಂದ ಭರವಸೆ ಈಡೇರಿದೆ. ಇದಕ್ಕೂ ಮುನ್ನ, ರೇವಂತ್ ರೆಡ್ಡಿ ಅವರು ಭವಿಷ್ಯದ ಪ್ರತಿಭೆಗಳನ್ನು ಬೆಳೆಸುವ ಯೋಜನೆಗಳೊಂದಿಗೆ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಬೆಂಬಲಿಸುವ ರಾಜ್ಯ ಸರ್ಕಾರದ ಸಮರ್ಪಣೆಯನ್ನು ಎತ್ತಿ ತೋರಿಸಿದರು. ಇದಲ್ಲದೆ, ಐಸಿಸಿ ಟಿ 20 ವಿಶ್ವಕಪ್ನಲ್ಲಿ ಸಾಧನೆ ಮಾಡಿದ ನಂತರ ತೆಲಂಗಾಣ ಸರ್ಕಾರವು ಜುಬಿಲಿ ಹಿಲ್ಸ್ನ ರಸ್ತೆ ಸಂಖ್ಯೆ 78 ರಲ್ಲಿ 600 ಚದರ ಗಜ ಭೂಮಿಯನ್ನು ಅಂತರರಾಷ್ಟ್ರೀಯ ಕ್ರಿಕೆಟಿಗನಿಗೆ ಮಂಜೂರು ಮಾಡಿದೆ. ಮೊಹಮ್ಮದ್ ಸಿರಾಜ್ ಯಾರು? ಮಾರ್ಚ್…

Read More

ಮೈಸೂರು: ನಾಳೆ ಶನಿವಾರ (ಅಕ್ಟೋಬರ್ 12) ನಡೆಯುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದೆ. ಹಾಗಾದ್ರೇ ನಾಳೆಯ ಕಾರ್ಯಕ್ರಮಗಳು ಏನು? ಯಾವ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಆರಂಭಗೊಳ್ಳಲಿದೆ ಎನ್ನುವ ಸಂಪೂರ್ಣ ವಿವರ ಮುಂದಿದೆ ಓದಿ. ಹೀಗಿದೆ ನಾಳೆಯ ಮೈಸೂರು ದಸರಾ ಜಂಬೂ ಸವಾರಿಯ ಕಾರ್ಯಕ್ರಮಗಳ ಸಂಪೂರ್ಣ ವಿವರ ನಾಳೆ ಮಧ್ಯಾಹ್ನ 1.41ರಿಂದ 2.10ರ ನಡುವೆ ಶುಭ ಮಕರ‌ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿಯ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಜಂಬೂಸವಾರಿ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿ ಬೆಟ್ಟದಿಂದ ಉತ್ಸವಮೂರ್ತಿ ನಾಳೆ ಬೆಳಿಗ್ಗೆ 8 ಗಂಟೆಗೆ ಹೊರಬಂದು ಮೆರವಣಿಗೆ ಮೂಲಕ ಅರಮನೆಯತ್ತ ಸಾಗುತ್ತದೆ‌. ಬೆಳಿಗ್ಗೆ 10:15 ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ ಆರಂಭ (ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳು ಸವಾರಿ ತೊಟ್ಟಿಗೆ ಆಗಮನ). ಬೆಳಿಗ್ಗೆ 10 ಗಂಟೆಯಿಂದ‌…

Read More

ನವದೆಹಲಿ: ನೋಯೆಲ್ ನವಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್ ಗಳನ್ನು ರಚಿಸುವ ಎಲ್ಲಾ ಟ್ರಸ್ಟ್ ಗಳ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂಬುದಾಗಿ ಟಾಟಾ ಟ್ರಸ್ಟ್ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಟಾಟಾ ಟ್ರಸ್ಟ್,ಟಾಟಾ ಟ್ರಸ್ಟ್ ಗಳನ್ನು ಒಳಗೊಂಡಿರುವ ವಿವಿಧ ಟ್ರಸ್ಟ್ ಗಳ ಟ್ರಸ್ಟಿಗಳು ಇಂದು ಮುಂಬೈನಲ್ಲಿ ನಡೆದ ಜಂಟಿ ಸಭೆಯಲ್ಲಿ ಸಭೆ ಸೇರಿದರು. ಟಾಟಾ ಟ್ರಸ್ಟ್ ಗಳ ಅಧ್ಯಕ್ಷರಾದ ರತನ್ ಎನ್. ಟಾಟಾ ಅವರ ನಿಧನಕ್ಕೆ ಅವರು ಸಂತಾಪ ಸೂಚಿಸಿದರು ಮತ್ತು ಟಾಟಾ ಸಮೂಹಕ್ಕೆ ಮಾತ್ರವಲ್ಲದೆ ರಾಷ್ಟ್ರ ನಿರ್ಮಾಣಕ್ಕೂ ಅವರು ಸಲ್ಲಿಸಿದ ಮಹತ್ತರ ಸೇವೆಗಳನ್ನು ಸ್ಮರಿಸಿದರು. ತಕ್ಷಣವೇ ನಡೆದ ಪ್ರತ್ಯೇಕ ಸಭೆಗಳಲ್ಲಿ ನೋಯೆಲ್ ನವಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್ ಗಳನ್ನು ರಚಿಸುವ ವಿವಿಧ ಟ್ರಸ್ಟ್ ಗಳ ಅಧ್ಯಕ್ಷರಾಗಿ ನೇಮಿಸಲು ಮತ್ತು ಅವರನ್ನು ಟಾಟಾ ಟ್ರಸ್ಟ್ ಗಳ ಅಧ್ಯಕ್ಷರನ್ನಾಗಿ ನೇಮಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಅವರ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟ್ರಸ್ಟ್…

Read More

ಬೆಳಗಾವಿ: ತಾನು ರೈತರಿಗಾಗಿ ಆತ್ಮಹತ್ಯೆಗೂ ರೆಡಿಯಾಗಿದ್ದೇನೆ. ಬೇಕಿದ್ರೇ ನಾಳೆಯೇ ಶಾಸಕ ಸ್ಥಾನಕ್ಕೂ ರಾಜೀನಾಮೆಗೆ ಸಿದ್ಧ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಶಾಸಕ ರಾಜು ಕಾಗೆ ಗುಡುಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು, ರೈತು ಒಂದು ವರ್ಷ ಬೆಳೆಯನ್ನು ಬೆಳೆಯೋದು ಬಿಟ್ಟರೇ ನೀವು ಏನು ತಿನ್ನುತ್ತೀರಿ.? ನಿಮ್ಮ ಬಳಿಯಲ್ಲಿ ಹಣ, ಬಂಗಾರ, ಬೆಳ್ಳಿ ಸಾಕಷ್ಟು ಇದ್ದರೂ ಅನ್ನ ಇಲ್ಲದೇ ಅದನ್ನು ತಿನ್ನೋಕೆ ಆಗುತ್ತಾ.? ಮೊದಲು ರೈತರ ಬದುಕನ್ನು ಹಸನು ಮಾಡುವಂತ ಕೆಲಸ ಮಾಡಿ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು. ರೈತರು ಬದುಕ್ಕಿದ್ದರೇ ಮಾತ್ರವೇ ಈ ದೇಶದ ಪ್ರಗತಿ ಸಾಧ್ಯವಾಗಲಿದೆ. ನಾನು ಕಳೆದ ಒಂದು ವರ್ಷದಿಂದ ರೈತರ ಪರವಾಗಿಯೇ ನಿಂತಿದ್ದೇನೆ, ಹೇಳಿಕೆಯನ್ನು ನೀಡುತ್ತಿದ್ದೇನೆ. ಆದ್ರೇ ನನ್ನ ಮಾತನ್ನು ಈ ಸರ್ಕಾರ ಆಲಿಸುತ್ತಿಲ್ಲ. ಹೀಗೆ ಪರಿಸ್ಥಿತಿ ಮುಂದುವರೆದರೇ ನಾನು ರೈತರಿಗಾಗಿ ವಿಧಾನಸೌಧದಲ್ಲೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಓರ್ವ ಮಂತ್ರಿಗೆ ಹೇಳಿದ್ದೆ. ಆ ವೇಳೆಯಲ್ಲಿ ನೀನ್ಯಾಕೆ ಆತ್ಮಹತ್ಯೆ…

Read More

ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಮ್ಮೆ ದಸರೆಯ ಶುಭಾಶಯಗಳು. ನಾಳೆ ಮೈಸೂರಿನಲ್ಲಿ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಸಾಗಲಿದೆ. ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸೌಭಾಗ್ಯವನ್ನು ರಾಜ್ಯದ ಜನ ಹಲವು ಬಾರಿ ಒದಗಿಸಿಕೊಟ್ಟಿದ್ದಾರೆ. ತಾಯಿಯ ಆಶೀರ್ವಾದ ನನ್ನ ಮೇಲೆ ಸದಾ ಇರುವ ಕಾರಣದಿಂದಲೇ ದೀರ್ಘಕಾಲದಿಂದ ರಾಜಕೀಯದಲ್ಲಿ ಇರಲು ಸಾಧ್ಯವಾಗಿದೆ ಎಂದಿದ್ದಾರೆ. ರಾಜಕೀಯದಲ್ಲಿ ತೆಗಳುವವರು, ಹೊಗಳುವವರು ಇರುತ್ತಾರೆ. ಶತ್ರುಗಳೂ, ಅಭಿಮಾನಿಗಳೂ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನನ್ನನ್ನು ಸಹಮತಿಸಲೇಬೇಕೆಂಬ ಭಾವನೆ ನನಗಿಲ್ಲ. ಒಟ್ಟಾರೆ ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ, ಟೀಕೆಗಳು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ. ಕೆಲವು ಮೊಕದ್ದಮೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಚಿವ ಸಂಪುಟದ ಉಪಸಮಿತಿಗಿರುತ್ತದೆ. ಗೃಹಸಚಿವರು ಈ ಉಪಸಮಿತಿಯ ನೇತೃತ್ವ ವಹಿಸಿದ್ದು, ಸಮಿತಿಯ ವಿವೇಚನೆಯಂತೆ ಹುಬ್ಬಳ್ಳಿ ಗಲಭೆ ಪ್ರಕರಣದ ದೂರನ್ನು ಹಿಂದಕ್ಕೆ ಪಡೆದಿದೆ. ಆದಾಗ್ಯೂ ಈ…

Read More

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಫಿರಂಗಿ ಕೇಂದ್ರದಲ್ಲಿ ಫೈರಿಂಗ್ ಅಭ್ಯಾಸದ ವೇಳೆ ಭಾರತೀಯ ಫೀಲ್ಡ್ ಗನ್ ನಿಂದ ಬಂದ ಶೆಲ್ ಸ್ಫೋಟಗೊಂಡು ಇಬ್ಬರು ಅಗ್ನಿವೀರ್ ಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ನಾಸಿಕ್ ರಸ್ತೆ ಪ್ರದೇಶದ ಫಿರಂಗಿ ಕೇಂದ್ರದಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗ್ನಿವೀರರಾದ ಗೋಹಿಲ್ ವಿಶ್ವರಾಜ್ ಸಿಂಗ್ (20) ಮತ್ತು ಸೈಫತ್ ಶಿತ್ (21) ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಅಗ್ನಿವೀರರ ತಂಡವು ಭಾರತೀಯ ಫೀಲ್ಡ್ ಗನ್ ನಿಂದ ಗುಂಡು ಹಾರಿಸುತ್ತಿದ್ದಾಗ ಶೆಲ್ ಗಳಲ್ಲಿ ಒಂದು ಸ್ಫೋಟಗೊಂಡಿತು. ಇಬ್ಬರಿಗೂ ಗಾಯಗಳಾಗಿದ್ದು, ಅವರನ್ನು ಡಿಯೋಲಾಲಿಯ ಎಂಎಚ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಹವಿಲ್ದಾರ್ ಅಜಿತ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಡಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. https://kannadanewsnow.com/kannada/court-imposes-rs-25000-fine-on-mobile-phone-purchased-for-rs-34576/…

Read More

ಶಿವಮೊಗ್ಗ: ದೂರುದಾರರಾದ ಚೇತನ್ ತಾವು ಕೊಂಡ ಮೊಬೈಲ್‌ನಲ್ಲಿ ದೋಷವಿದ್ದು ರಿಪೇರಿ ಮಾಡದೇ ಸೇವಾ ನ್ಯೂನ್ಯತೆವೆಸಗಿದ ಎದುರುದಾರ ಒನ್ ಪ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಅಶೋಕ ನಗರ, ಬೆಂಗಳೂರು ಅರ್ಬನ್, ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ ಹಾಗೂ ಮೊಬೈಲ್ ಕೇರ್. ಶಿವಮೊಗ್ಗ ಇವರ ವಿರುದ್ದ ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪರಿಹಾರ ನೀಡಲು ಆದೇಶಿಸಿದೆ. ದೂರುದಾರರಾದ ಚೇತನ್ ಇವರು ಎದುರುದಾರರಾದ ಒನ್ ಪ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಅಶೋಕ ನಗರ, ಬೆಂಗಳೂರು ಅರ್ಬನ್ 1ನೇ ಎದುರುದಾರರು, ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ 2ನೇ ಎದುರುದಾರರು ಮತ್ತು ಮೊಬೈಲ್ ಕೇರ್ ಶಿವಮೊಗ್ಗ, 3ನೇ ಎದುರುದಾರರು ಇವರ ವಿರುದ್ದ ದೂರನ್ನು ಸಲ್ಲಿಸಿ ತಾವು ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ ಇವರಿಂದ ಕೊಂಡ ಮೊಬೈಲ್‌ನಲ್ಲಿ ಖರೀದಿಸಿದ ದಿನಾಂಕದಿಂದಲೂ ದೋಷ ಕಂಡುಬಂದಿದ್ದು, ಹಲವಾರು ಬಾರಿ ಎದುರುದಾರರಲ್ಲಿ ರಿಪೇರಿ ಮಾಡಿಕೊಡಲು ವಿನಂತಿಸಿದ್ದು, ಎದುರುದಾರರು ಒಮ್ಮೆ ಮೊಬೈಲ್ ರಿಪೇರಿ ಮಾಡಿಕೊಟ್ಟಿದ್ದರು. ನಂತರವೂ ಮೊಬೈಲ್‌ನಲ್ಲಿ ದೋಷ ಕಂಡುಬಂದಿದ್ದು, ಎದುರುದಾರರಲ್ಲಿ…

Read More

ಮೈಸೂರು: ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟ ಹಮ್ಮಿಕೊಳ್ಳುತ್ತಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರಕ್ಕೆ ಕೆಲವು ಮೊಕದ್ದಮೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಚಿವಸಂಪುಟದ ಉಪಸಮಿತಿಗಿರುತ್ತದೆ. ಗೃಹಸಚಿವರು ಈ ಉಪಸಮಿತಿಯ ನೇತೃತ್ವ ವಹಿಸಿದ್ದು, ಸಮಿತಿಯ ವಿವೇಚನೆಯಂತೆ ಪ್ರಕರಣದ ದೂರನ್ನು ಹಿಂದಕ್ಕೆ ಪಡೆದಿದೆ. ಆದಾಗ್ಯೂ ಈ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇನೆ ಎಂದರು. ಬಿಜೆಪಿಯವರು ಕೇವಲ ಸುಳ್ಳು ವಿಚಾರಗಳ ಆಧರಿಸಿಯೇ ಹೋರಾಟ ಮಾಡುತ್ತಾರೆ. ಸತ್ಯದ ಪರವಾಗಿ ಅವರ ಹೋರಾಟ ಎಂದಿಗೂ ಕಾಣಸಿಗುವುದಿಲ್ಲ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಜನತೆಗೆ ದಸರೆಯ ಶುಭ ಕೋರಿದ ಮುಖ್ಯಮಂತ್ರಿಗಳು, ನಾಳೆ ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.ರಾಜಕೀಯದಲ್ಲಿ ತೆಗಳುವವರು, ಹೊಗಳುವವರು ಇರುತ್ತಾರೆ. ಶತ್ರುಗಳೂ , ಅಭಿಮಾನಿಗಳೂ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನನ್ನನ್ನು ಸಹಮತಿಸಲೇ ಬೇಕೆಂಬ ಭಾವನೆ ನನಗಿಲ್ಲ. ಒಟ್ಟಾರೆ ಪ್ರಜಾಪ್ರಭುತ್ವದಲ್ಲಿ…

Read More

ಬೆಂಗಳೂರು: ಪಾರ್ಕ್ ನಲ್ಲಿ ಪೋಟೋ ತೆಗೆಯುತ್ತಿದ್ದಾಗ ಅಡ್ಡ ಬಂದ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮತ್ತೊಬ್ಬ ವ್ಯಕ್ತಿ ರಕ್ತ ಬರುವಂತೆ ಹಲ್ಲೆ ನಡೆಸಿರುವಂತ ಬೆಚ್ಚಿ ಬೀಳಿಸೋ ಘಟನೆ ಕಬ್ಬನ್ ಪಾರ್ಕ್ ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಸೆ.29ರಂದು ಮಧ್ಯಾಹ್ನ 3.30ಕ್ಕೆ ಹೆಚ್ ಎಎಲ್ ನ ಡಿಫೆನ್ಸ್ ವಿಭಾಗದಲ್ಲಿ ಟೆಕ್ನೀಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಂತ ರವಿಕಿರಣ್ ಎಂಬುವರು ಕಬ್ಬನ್ ಪಾರ್ಕ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪಾರ್ಕ್ ನಲ್ಲಿ ನಡೆದು ಹೋಗುತ್ತಿದ್ದಂತ ವೇಳೆಯಲ್ಲೇ ಉತ್ತರ ಭಾರತ ಮೂಲಕ ವ್ಯಕ್ತಿಯೊಬ್ಬ ಪೋಟೋ ತೆಗೆದುಕೊಳ್ಳುತ್ತಿದ್ದರು. ರವಿಕಿರಣ್ ಅದೇ ಸಂದರ್ಭದಲ್ಲಿ ಸಾಗಿದಾಗ, ಪೋಟೋ ತೆಗೆಯುತ್ತಿದ್ದಾಗ ಅಡ್ಡ ಬರ್ತೀಯ ಎಂಬುದಾಗಿ ಗಲಾಟೆ ಶುರುವಾಗಿದೆ. ಕಬ್ಬನ್ ಪಾರ್ಕ್ ಏನು ನಿಮ್ಮಪ್ಪಂದ ಎಂಬುದಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ರಕ್ತ ಬರುವಂತೆ ರವಿಕಿರಣ್ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ಗಾಯಗೊಂಡಂತ ರವಿಕಿರಣ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ…

Read More