Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: 2025-26ನೇ ಸಾಲಿನಲ್ಲಿ ಶಾಲೆಗಳಿಗೆ ನೀಡುವ ಸ್ಥಳೀಯ ರಜೆಯ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಹತ್ವದ ಸ್ಪಷ್ಟನೆ ನೀಡಲಾಗಿದೆ. ಅದೇನು ಅಂತ ಮುಂದೆ ಓದಿ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಿಕ್ಷಣದ ನಿರ್ದೇಶಕರು ಜ್ಞಾಪನ ಪತ್ರ ಹೊರಡಿಸಿದ್ದು, ಅದರಲ್ಲಿ ಮಾನ್ಯ ಶಾಸಕರ ಪತ್ರದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶಾಲೆಗೆ ನೀಡುವ ಸ್ಥಳೀಯ ರಜೆಯು ಶೈಕ್ಷಣಿಕ ವರ್ಷಕ್ಕೆ ನಾಲ್ಕು, ನೀಡಬಹುದಾಗಿದೆ ಎಂದು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ತಿಳಿಸಲಾಗಿದೆ. ಆದರೆ ಸ್ಥಳೀಯ ರಜೆಯ ವರ್ಗೀಕರಣ ಹೇಗೆ ಮಾಡಬೇಕೆಂದು ಸ್ಪಷ್ಟವಾಗಿ ತಿಳಿಸಿರುವುದಿಲ್ಲ. ಇದರರ್ಥವೇನೆಂದರೆ ಸ್ಥಳೀಯ ರಜೆಯನ್ನು ಶೈಕ್ಷಣಿಕ ವರ್ಷದಲ್ಲಿ ತಿಂಗಳಿಗೆ ಎಷ್ಟು ನೀಡಬಹುದು, ಕೆಲವೊಮ್ಮ ಧಾರ್ಮಿಕ ಹಬ್ಬಗಳು ಒಂದೇ ತಿಂಗಳಲ್ಲಿ 2 ಹಬ್ಬಗಳು ಬಂದಲ್ಲಿ, ಉದಾಹರಣೆಗೆ ಹೇಳುವುದಾದರೆ ಈ ತಿಂಗಳಲ್ಲಿ (ಜುಲೈ-25) 08/08/2025 ರಂದು ವರಮಹಾಲಕ್ಷ್ಮೀ & 26/08/2025ರಂದು ಸ್ವರ್ಣಗೌರಿ ವುತ ಹಬ್ಬಗಳಿದ್ದು ಈ ಸಂದರ್ಭದಲ್ಲಿ ತಿಂಗಳಿಗೆ 2 ಸ್ಥಳೀಯ ರಜೆಯನ್ನು ನೀಡಬಹುದೇ ಎಂದು ಸ್ಥಳೀಯ ವರ್ಗೀಕರಣದ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಕೋರಿರುತ್ತಾರೆ…
ಮೈಸೂರು: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸುವಂತ ಕೃತ್ಯ ಎನ್ನುವಂತ ಘಟನೆ ನಡೆದಿದೆ. ಲಾಡ್ಜ್ ಒಂದರಲ್ಲಿ ಪ್ರಿಯಕರನೊಬ್ಬ ವಿವಾಹಿತ ಮಹಿಳೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ ಸ್ಪೋಟಿಸಿ ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಮೈಸೂರಿನ ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿರುವಂತ ಲಾಡ್ಜ್ ನಲ್ಲಿ ಗೆರಸನಹಳ್ಳಿ ಗ್ರಾಮ ರಕ್ಷಿತಾ(20) ಎಂಬಾಕಿಯನ್ನು ಪ್ರಿಯಕರ ಬಿಳಿಕೆರೆ ಗ್ರಾಮದ ಸಿದ್ಧರಾಜು ಎಂಬಾತನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೇರಳ ಮೂಲದ ವ್ಯಕ್ತಿಯನ್ನು ರಕ್ಷಿತಾ ವಿವಾಹವಾಗಿದ್ದರು. ಸಿದ್ಧರಾಜು ಜೊತೆಗೆ ರಕ್ಷಿತಾ ಅನೈತಿಸ ಸಂಬಂಧವನ್ನು ಹೊಂದಿದ್ದರು. ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಎಂಬುದಾಗಿ ಸಿದ್ದರಾಜು ರಕ್ಷಿತಾ ಕರೆತಂದಿದ್ದನು. ಭೇರ್ಯ ಗ್ರಾಮದ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದನು. ಲಾಡ್ಜ್ ನಲ್ಲಿ ಅಕ್ಷತಾ ಬಾಯಿಗೆ ಜಿಲೆಟಿನ್ ಕಟ್ಟಿ ಇರಿಸಿ ಸ್ಪೋಟಿಸಿ ಹತ್ಯೆಗೈದಿದ್ದಾನೆ. ಆ ಬಳಿಕ ಮೊಬೈಲ್ ಬ್ಲಾಸ್ಟ್ ಅಂತ ಕೂಗಾಡಿದ್ದಾನೆ. ಆದರೇ ಸ್ಥಳದಲ್ಲಿ ಯಾವುದೇ ಮೊಬೈಲ್ ಇರದ ಕಾರಣ ಅನುಮಾನ ಬಂದಿದೆ. ಮೊಬೈಲ್ ಎಲ್ಲಿ ಎಂಬುದಾಗಿ ಕೇಳಿದಾಗ ಬಿಸಾಕಿದ್ದಾಗಿ ಸುಳ್ಳನ್ನು ಸಿದ್ಧರಾಜು ಹೇಳಿದ್ದನು. ಸಿದ್ಧರಾಜು ಸುಳ್ಳು…
ಸೋಮವಾರ ಗಾಜಾದ ನಾಸರ್ ಆಸ್ಪತ್ರೆಯ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಒಬ್ಬರು ರಾಯಿಟರ್ಸ್ಗಾಗಿ ಕೆಲಸ ಮಾಡುತ್ತಿದ್ದರು ಎಂದು ಪ್ಯಾಲೆಸ್ಟೀನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ ದಾಳಿಯಲ್ಲಿ ಸಾವನ್ನಪ್ಪಿದ ಪತ್ರಕರ್ತರಲ್ಲಿ ಒಬ್ಬರಾದ ಕ್ಯಾಮೆರಾಮನ್ ಹುಸಮ್ ಅಲ್-ಮಸ್ರಿ ರಾಯಿಟರ್ಸ್ನ ಗುತ್ತಿಗೆದಾರರಾಗಿದ್ದರು. ರಾಯಿಟರ್ಸ್ ಗುತ್ತಿಗೆದಾರರೂ ಆಗಿದ್ದ ಛಾಯಾಗ್ರಾಹಕ ಹಾತೆಮ್ ಖಲೀದ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಗಳ ಕುರಿತು ಇಸ್ರೇಲಿ ಮಿಲಿಟರಿ ಮತ್ತು ಪ್ರಧಾನ ಮಂತ್ರಿ ಕಚೇರಿ ಎರಡೂ ತಕ್ಷಣದ ಪ್ರತಿಕ್ರಿಯೆಯನ್ನು ನೀಡಿಲ್ಲ. https://kannadanewsnow.com/kannada/11-year-old-boy-dies-in-bmtc-bus-accident-heres-the-shocking-video/
ಬೆಂಗಳೂರು: ನಿನ್ನೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ 11 ವರ್ಷದ ಬಾಲಕ ಸಾವನ್ನಪ್ಪಿದ್ದ ಬಗ್ಗೆ ವರದಿಯಾಗಿತ್ತು. ಆದರೇ ವಾಸ್ತವವಾಗಿ ಬೈಕ್ ಸವಾರನೇ ಆಯತಪ್ಪಿ ಬಿದ್ದ ಪರಿಣಾಮ, ಹಿಂಬಾಗದಲ್ಲಿ ಕುಳಿತಿದ್ದಂತ 11 ವರ್ಷದ ಬಾಲಕ ಬಿಎಂಟಿಸಿ ಬಸ್ಸಿನ ಹಿಂಬಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಈ ಭಯಾನಕ ವೀಡಿಯೋವನ್ನು ಬಿಎಂಟಿಸಿ ಬಿಡುಗಡೆ ಮಾಡಿದ್ದು, ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದೆ. ದಿನಾಂಕ: —24/08/2025 ರ ಸಂಜೆ 17:45 ಕ್ಕೆ ಘಟಕ–52 (ಹುತ್ತನಹಳ್ಳಿ)ಗೆ ಸೇರಿದ ಬಸ್ ಸಂಖ್ಯೆ KA–57–F–6496 ಕೆ.ಆರ್. ಮಾರುಕಟ್ಟೆ, ಜಾಮಿ ಮಸೀದಿ ಸಮೀಪದಲ್ಲಿ ಅಪಘಾತಕ್ಕೆ ಒಳಗಾಗಿರುತ್ತದೆ ಈ ಸಂದರ್ಭದಲ್ಲಿ, ಚಾಲಕ ಸಂತೋಷ್ (ಬಿಲ್ಲೆ ಸಂಖ್ಯೆ: 17790) ಹಾಗೂ ನಿರ್ವಾಹಕ ಭಾಸ್ಕರ್ (ಬಿಲ್ಲೆ ಸಂಖ್ಯೆ: 12671) ಕರ್ತವ್ಯ ನಿರ್ವಹಿಸುತ್ತಿದ್ದರು. ಸದರಿ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕುಶವಾಗಿ ವೀಕ್ಷಿಸಿದಾಗ ಈ ಕೆಳಕಂಡ ಮಾಹಿತಿಯು ಲಭ್ಯವಾಗಿರುತ್ತದೆ. ಬಸ್ನ ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನದ ಸವಾರರು (ಮೂರು ಜನ ಸವಾರರು ಒಂದೇ ಸ್ಕೂಟರಿನಲ್ಲಿ ಚಲಿಸುತ್ತಿದ್ದು, ಮಧ್ಯದಲ್ಲಿ 11 ವರ್ಷದ ಬಾಲಕ…
ಬೆಂಗಳೂರು: ನನ್ನ ಬಗ್ಗೆ ಮಾತನಾಡುವವರು ಮಾತನಾಡಲಿ, ನಾನು ಸೂಕ್ತ ವೇದಿಕೆಯಲ್ಲಿ ಆ ಬಗ್ಗೆ ಮಾತನಾಡುವುದಾಗಿ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧ ವಿಚಾರವಾಗಿ ಮಾತನಾಡಿದಂತ ಅವರು, ಈ ಹಿಂದೆ ನಾನು ಏನು ಮಾತನಾಡಿದ್ದೇನೆ ಎಂಬುದನ್ನು ತಿಳಿದುಕೊಂಡು ಮಾತನಾಡಲಿ. ಯಾರೋ ವಿರೋಧ ಮಾತ್ತಾರೆ ಅಂದ್ರೆ ಅದಕ್ಕೆ ನಾನು ಉತ್ತರ ಕೊಡಬೇಕಾ? ಆ ಬಗ್ಗೆ ನಾನು ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದರು. ನಾನು ಸದ್ಯ ಮೈಸೂರು ದಸರಾ ಉದ್ಘಾಟನೆಯ ಬಗ್ಗೆ ವಿರೋಧ ಮಾಡುವ ಬಗ್ಗೆ ಪ್ರತಿಕ್ರಿಯೆ ಕೊಡೋದಿಲ್ಲ. ವಿರೋಧ ಮಾಡುವವರು ಮಾಡಲಿ. ಅದು ಅವರ ಸ್ವಾತಂತ್ರ್ಯವಾಗಿದೆ. ನಾನು ಅದಕ್ಕೆ ಪ್ರತಿಕ್ರಿಯೆ ಕೊಡೋದಿಲ್ಲ. ನಾನು ಸೂಕ್ತ ವೇದಿಕೆಯಲ್ಲೇ ಸಕ್ಷಮವಾಗಿ ಮಾತನಾಡುವುದಾಗಿ ತಿಳಿಸಿದರು.
ನವದೆಹಲಿ: CIBIL ಸ್ಕೋರ್ ಇಲ್ಲದ ಕಾರಣಕ್ಕೆ ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಸಾಲ ನಿರಾಕರಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಹೊಸ ಸಾಲ ಪಡೆಯುವವರ ಸಾಲ ಅರ್ಜಿಗಳನ್ನು ಅವರಿಗೆ ಹಿಂದಿನ ಸಾಲ ಇತಿಹಾಸವಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳು ಮತ್ತು ಕ್ರೆಡಿಟ್ ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ಹೇಳಿದರು. “ಕ್ರೆಡಿಟ್ ಸಂಸ್ಥೆಗಳಿಗೆ ಉತ್ತಮ ಅಭ್ಯಾಸಗಳ ಭಾಗವಾಗಿ, ಮೊದಲ ಬಾರಿಗೆ ಸಾಲ ಪಡೆಯುವವರ ಸಾಲ ಅರ್ಜಿಗಳನ್ನು ಅವರಿಗೆ ಕ್ರೆಡಿಟ್ ಇತಿಹಾಸವಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಬಾರದು ಎಂದು RBI ಸಲಹೆ ನೀಡಿದೆ” ಎಂದು ಚೌಧರಿ ಹೇಳಿದರು. ಕನಿಷ್ಠ ಸ್ಕೋರ್ ಅನ್ನು ಸೂಚಿಸಲಾಗಿಲ್ಲ ಆರ್ಬಿಐ ಸಾಲಗಾರರಿಗೆ ಯಾವುದೇ ಕನಿಷ್ಠ ಕ್ರೆಡಿಟ್ ಸ್ಕೋರ್ ಅನ್ನು ನಿಗದಿಪಡಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. “ಅನಿಯಂತ್ರಿತ ಕ್ರೆಡಿಟ್ ವಾತಾವರಣದಲ್ಲಿ, ಸಾಲದಾತರು ಮಂಡಳಿಯು ಅನುಮೋದಿಸಿದ ನೀತಿಗಳು ಮತ್ತು ವಿಶಾಲ ನಿಯಂತ್ರಕ ಮಾರ್ಗಸೂಚಿಗಳ ಆಧಾರದ…
ಹೈದರಾಬಾದ್: ಇಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ರಾಪಿಡೋ ಚಾಲಕನೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಕೊಂದು, ಆಕೆಯ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ನದಿಗೆ ಎಸೆದಿರುವಂತ ಘಟನೆ ನಡೆದಿದೆ. ಹೈದರಾಬಾದ್ನ ಪ್ರತಾಪ್ ಸಿಂಗಾರಮ್ ಬಳಿಯ ಮುಸಿ ನದಿಯಲ್ಲಿ ವ್ಯಕ್ತಿಯೊಬ್ಬ ತನ್ನ ಐದು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ತುಂಡು ಮಾಡಿ, ಭಾಗಗಳನ್ನು ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಮಹೇಂದರ್ ರೆಡ್ಡಿ ಎಂದು ಗುರುತಿಸಲಾದ ಆರೋಪಿ, ಬೋಡುಪ್ಪಲ್ನ ಬಾಲಾಜಿ ಹಿಲ್ಸ್ನಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ಸ್ವಾತಿ (22) ಅವರನ್ನು ಕೊಲೆ ಮಾಡಿ, ನಂತರ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ಕವರ್ಗಳಲ್ಲಿ ಪ್ಯಾಕ್ ಮಾಡಿದ್ದಾನೆ. https://twitter.com/Shyamsundarak6/status/1959488364299928062 ರ್ಯಾಪಿಡೊ ಚಾಲಕನಾಗಿ ಕೆಲಸ ಮಾಡುತ್ತಿದ್ದ ರೆಡ್ಡಿ ನಂತರ ಆಕೆಯ ತಲೆ, ಕೈಗಳು ಮತ್ತು ಕಾಲುಗಳನ್ನು ಜೌಗು ಗುಂಡಿಯಲ್ಲಿ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಇಲ್ಲಿಯವರೆಗೆ ಮುಂಡ ಮಾತ್ರ ಪತ್ತೆಯಾಗಿದೆ. ಪ್ರೇಮ ವಿವಾಹದ ನಂತರ ದಂಪತಿಗಳು ಕಳೆದ 25 ದಿನಗಳಿಂದ ಈ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ…
ಬೆಂಗಳೂರು: ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಹೈನುಗಾರಿಕೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ 1.25 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ. ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ (ಐಎಸ್ಬಿ) ಯ ಅಡಿಯಲ್ಲಿ ಬ್ಯಾಂಕ್ಗಳ ಸಹಯೋಗದೊಂದಿಗೆ ಹೈನುಗಾರಿಕೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಇಲಾಖೆಯ ಆಯಾ ನಿಗಮಗಳ ಅಡಿಯಲ್ಲಿ ಎರಡು ಎಮ್ಮೆ/ಹಸುಗಳಿಗೆ ಘಟಕ ವೆಚ್ಚ ಶೇ.50ರಷ್ಟು ಅಥವಾ ಗರಿಷ್ಟ 1.25 ಲಕ್ಷಗಳ ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.09.2025 ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು: http://sevasindhu.karnataka.gov.in ಅಥವಾ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ. https://twitter.com/SWDGoK/status/1959226920333394218
ಬೆಂಗಳೂರು: ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಗಿದೆ. ಅದೇ ದೇವದಾಸಿ ಮಕ್ಕಳಿಗೆ ಪಿತೃತ್ವ ಹಕ್ಕು ನೀಡುವುದಾಗಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ಹಂಚಿಕೊಳ್ಳಲಾಗಿದ್ದು, ದೇವದಾಸಿ ಮಹಿಳೆಯರಿಗೆ ಶೋಷಣೆಯಿಂದ ವಿಮೋಚನೆ, ಅವರ ಮಕ್ಕಳಿಗೆ ಸಬಲೀಕರಣ ಹಾಗೂ ಸಾಮಾಜಿಕ ಗೌರವ ತರುವ ನಿಟ್ಟಿನಲ್ಲಿ ಕರ್ನಾಟಕ ದೇವದಾಸಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ – 2025 ಅಂಗೀಕಾರವಾಗಿದೆ. https://twitter.com/SWDGoK/status/1958880891511431454
ಬೆಂಗಳೂರು: ರಾಜ್ಯ ಸರ್ಕಾರದಿಂದ ಬ್ಯಾಂಕ್ ಗಳ ಸಹಯೋಗದೊಂದಿಗೆ ಫಾಸ್ಟ್ ಪುಡ್, ಟ್ರಕ್ ಟ್ರೈಲರ್, ಮೊಬೈಲ್ ಪುಡ್ ಕಿಚನ್ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಬರೋಬ್ಬರಿ 4 ಲಕ್ಷದವರೆಗೆ ಸಹಾಯಧನ ಸಿಗಲಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಐಎಸ್ಬಿ (ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ)ಯೋಜನೆಯ ಅಡಿಯಲ್ಲಿ ಸಂಪೂರ್ಣ ಸಹಾಯಧನದೊಂದಿಗೆ ₹4.00 ಲಕ್ಷ ಮೌಲ್ಯದ ಫಾಸ್ಟ್ ಫುಡ್ ಟ್ರಕ್ ಟ್ರೇಲರ್/ಮೊಬೈಲ್ ಕಿಚನ್ ಚಲಿಸುವ ಆಹಾರ ಸೇವಾ ಘಟಕವನ್ನು ಪರಿಶಿಷ್ಟ ಜಾತಿಯವರಿಗೆ ನೀಡಲಾಗುವುದು ಎಂದಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.09.2025 ಆಗಿದೆ. ಈ ಲಿಂಕ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು: http://sevasindhu.karnataka.gov.in ಅಥವಾ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಎಂದು ತಿಳಿಸಿದೆ. https://twitter.com/SWDGoK/status/1957448855496102111














