Subscribe to Updates
Get the latest creative news from FooBar about art, design and business.
Author: kannadanewsnow09
ಖಾನ್ ಯೂನಿಸ್: ದಕ್ಷಿಣ ಗಾಜಾದ ಮುಖ್ಯ ಆಸ್ಪತ್ರೆಯ ನಾಲ್ಕನೇ ಮಹಡಿಯ ಮೇಲೆ ಸೋಮವಾರ ಇಸ್ರೇಲಿ ವಾಯುದಾಳಿ ನಡೆದಿದ್ದು, ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ನಾಸರ್ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಬಲಿಯಾದವರು ಡಬಲ್-ಟ್ಯಾಪ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ – ಮೊದಲು ಒಂದು ಕ್ಷಿಪಣಿ ಹೊಡೆದು, ನಂತರ ರಕ್ಷಣಾ ಸಿಬ್ಬಂದಿ ಆಗಮಿಸುತ್ತಿದ್ದಂತೆ ಮತ್ತೊಂದು ಕ್ಷಣದಲ್ಲಿ ಮತ್ತೊಂದು ಕ್ಷಿಪಣಿ ಹೊಡೆದಿದೆ. ದಕ್ಷಿಣ ಗಾಜಾದಲ್ಲಿ ಅತಿ ದೊಡ್ಡದಾದ ಖಾನ್ ಯೂನಿಸ್ ಅವರ ನಾಸರ್ ಆಸ್ಪತ್ರೆ, ಯುದ್ಧದ 22 ತಿಂಗಳ ಉದ್ದಕ್ಕೂ ದಾಳಿಗಳು ಮತ್ತು ಬಾಂಬ್ ದಾಳಿಯನ್ನು ತಡೆದುಕೊಂಡಿದೆ, ಅಧಿಕಾರಿಗಳು ಸರಬರಾಜು ಮತ್ತು ಸಿಬ್ಬಂದಿಗಳ ತೀವ್ರ ಕೊರತೆಯನ್ನು ಉಲ್ಲೇಖಿಸಿದ್ದಾರೆ. ಇಸ್ರೇಲ್ ಸೇನೆಯು ಮುಷ್ಕರದ ಕುರಿತಾದ ಪ್ರಶ್ನೆಗಳಿಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಆಸ್ಪತ್ರೆ ಮುಷ್ಕರದಲ್ಲಿ ಸಾವನ್ನಪ್ಪಿದವರಲ್ಲಿ ನಾಲ್ವರು ಪತ್ರಕರ್ತರು ಸೇರಿದ್ದಾರೆ. ಅಸೋಸಿಯೇಟೆಡ್ ಪ್ರೆಸ್‌ಗಾಗಿ ಕೆಲಸ ಮಾಡಿದ ಫ್ರೀಲ್ಯಾನ್ಸರ್ ಸೇರಿದಂತೆ. ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಎಪಿಗಾಗಿ ಫ್ರೀಲ್ಯಾನ್ಸರ್ ಮಾಡಿದ 33 ವರ್ಷದ ಮರಿಯಮ್…
ಹಾಸನ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಯ್ಕೆ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದರು. ಇಂತಹ ಅವರಿಗೆ ಹಿಂದೂ ಸಂಪ್ರದಾಯದಂತೆ ಬಾಗಿನ ನೀಡಿ, ಆಹ್ವಾನಿಸಲಾಗಿದೆ. ಈ ಬಾಗಿನವನ್ನು ಖುಷಿಯಿಂದಲೇ ಬಾಗಿನವನ್ನು ಸ್ವೀಕರಿಸಿದರು. ಇಂದು ಹಾಸನದಲ್ಲಿ ಹಿಂದೂ ಸಂಪ್ರದಾಯದಂತೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಕಲಾವಿದೆ ಶಶಿಕಲಾ ಬಾಗಿನ ನೀಡಿ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಆಹ್ವಾನಿಸಿದರು. ಅರಿಶಿಣ, ಕುಂಕುಮ, ಬಳೆ, ಹೂ, ಸೀರೆಯನ್ನು ಬಾನು ಮುಷ್ತಾಕ್ ಅವರಿಗೆ ಕಲಾವಿದೆ ಶಶಿಕಲಾ ಅವರು ಬಾಗಿನದ ಜೊತೆಯಲ್ಲಿ ನೀಡಿದರು. ಖುಷಿಯಲ್ಲೇ ಬಾಗಿನವನ್ನು ಬಾನು ಮುಷ್ತಾಕ್ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರಿಸಿದಂತ ಅವರು, ಚಾಮುಂಡೇಶ್ವರಿ ತಾಯಿ ಅಂತೀರಿ. ಅದನ್ನ ಗೌರವಿಸ್ತೀನಿ. ನಾಡ ಹಬ್ಬ ಅಂತಾರೆ ಅದನ್ನೂ ನಾನು ಗೌರವಿಸುತ್ತೇನೆ ಎಂದರು. ಪೋಷಕರ ಜೊತೆಗೆ ಜಂಬೂಸವಾರಿ ನೋಡಲು ಹೋಗಿದ್ದೆ. ಈಗ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು ಖುಷಿಯಾಗಿದೆ ಎಂದರು. https://kannadanewsnow.com/kannada/the-auspicious-time-for-the-renowned-marikamba-jatra-mahotsav-has-been-fixed/ https://kannadanewsnow.com/kannada/big-news-the-investigation-into-the-dharmasthala-case-is-90-complete-nia-cbi-not-needed-minister-ramalinga-reddy/
ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿರುವಂತ ನಟ ಮಡೆನೂರು ಮನು ಅವರು ಅವರ ಕ್ಷಮೆಯನ್ನು ಕೇಳಿರುವುದಾಗಿ ತಿಳಿದು ಬಂದಿದೆ. ಇಂದು ಕಂಠೀರವ ಸ್ಟೂಡಿಯೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನಟ ಮಡೆನೂರು ಮನು ಭೇಟಿಯಾಗಿದ್ದಾರೆ. ಅಲ್ಲಿ ಅವರನ್ನು ಕ್ಷಮೆ ಕೋರಿರುವುದಾಗಿ ಹೇಳಲಾಗುತ್ತಿದೆ. ಅಂದಹಾಗೇ ಈ ಹಿಂದೆ ನಾಲ್ಕರಿಂದ ಐದು ಬಾರಿ ನಟ ಶಿವರಾಜ್ ಕುಮಾರ್ ಭೇಟಿಯಾಗೋದಕ್ಕೆ ಮಡೆನೂರು ಮನು ಪ್ರಯತ್ನಿಸಿದ್ದರು. ಆದರೇ ಅದು ಸಾಧ್ಯವಾಗಿರಲಿಲ್ಲ. ಈ ಹಿಂದೆ ವೈರಲ್ ಆಗಿದ್ದ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ನಟ ಮನು ಶಿವಣ್ಣನ ಕಾಣಲು ಅವರ ಮನೆಗೆ ಹೋಗಿದ್ದಾರೆ ಎನ್ನಲಾಗಿದೆ. ಇದರಲ್ಲಿ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್‌ವುಡ್ ನಟರ ಸಾವಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪ ಮಾಡಲಾಗಿತ್ತು. ಈ ಹಿನ್ನೆಲೆ ಮಡೆನೂರು ಮನು ಜೈಲಿಂದ ಹೊರಬಂದ ಮೇಲೆ ಆ ಆಡಿಯೋ ನನ್ನದಲ್ಲ, ನಾನು ಎಲ್ಲ ನಟರ ಬಳಿ ಕ್ಷಮೆ ಕೇಳುವುದಾಗಿ ಹೇಳಿದ್ದರು. ಹೀಗಾಗಿ ಕ್ಷಮೆ ಕೇಳಲು…
ನವದೆಹಲಿ: ಕಾರುಗಳು, ವ್ಯಾನ್‌ಗಳು ಮತ್ತು ಜೀಪ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪರಿಚಯಿಸಿದ ಹೊಸ ಟೋಲ್ ಪಾವತಿ ಆಯ್ಕೆಯೇ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್. ಈ ಪಾಸ್‌ನ ಬೆಲೆ ರೂ. 3,000 ಆಗಿದ್ದು, ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ತಡೆರಹಿತ ಪ್ರಯಾಣವನ್ನು ಅನುಮತಿಸುತ್ತದೆ, ಯಾವುದು ಮೊದಲೋ ಅದು. ತ್ವರಿತ ಮತ್ತು ತೊಂದರೆ-ಮುಕ್ತ ಸಕ್ರಿಯಗೊಳಿಸುವಿಕೆಗಾಗಿ ಇದು ಸಕ್ರಿಯ ಫಾಸ್ಟ್‌ಟ್ಯಾಗ್‌ಗೆ ಲಿಂಕ್ ಮಾಡಲಾಗಿದೆ. ಹಾಗಾದ್ರೆ ವಾರ್ಷಿಕ ಫಾಸ್ಟ್ ಟ್ಯಾಗ್ ಪಡೆಯೋದು ಹೇಗೆ.? ಯಾರೆಲ್ಲಾ ಅರ್ಹರು ಎನ್ನುವ ಸಂಪೂರ್ಣ ಮಾಹಿತಿ ಮುಂದೆ ಓದಿ. ಫಾಸ್ಟ್‌ಟ್ಯಾಗ್ ಎಂದರೇನು? ಫಾಸ್ಟ್‌ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನದಿಂದ ನಡೆಸಲ್ಪಡುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದೆ. ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ವಾಹನದ ಖಾತೆಗೆ ಲಿಂಕ್ ಮಾಡಲಾದ ವಿಶಿಷ್ಟ 13-ಅಂಕಿಯ ಎಲೆಕ್ಟ್ರಾನಿಕ್ ಕೋಡ್ ಅನ್ನು ಒಳಗೊಂಡಿದೆ. ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ, RFID ರೀಡರ್ ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಸ್ಥಿರವಾಗಿರುವ ಟ್ಯಾಗ್ ಅನ್ನು ಸ್ಕ್ಯಾನ್ ಮಾಡುತ್ತದೆ. ಟೋಲ್ ಮೊತ್ತವನ್ನು…
2025-26 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ರಾಜ್ಯವಲಯದಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನು ಮಾರಾಟಗಾರರಿಗೆ ಆರ್ಥಿಕ ನೆರವು ನೀಡಲು ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50 ರಷ್ಟು ಅಥವಾ ರೂ.3 ಲಕ್ಷ ಆರ್ಥಿಕ ನೆರವನ್ನು ಇಲಾಖಾ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ಅನುಷ್ಟಾನಗೊಳಿಸಲಾಗುತ್ತಿದೆ. ಜಿಲ್ಲೆಗೆ ಪರಿಶಿಷ್ಟ ಜಾತಿ-2 ಮತ್ತು ಪರಿಶಿಷ್ಟ ಪಂಗಡ-1 ಮೀನು ಮಾರಾಟಗಾರರಿಗೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಅರ್ಹ ಮೀನು ಮಾರಾಟಗಾರರು ಸೆ.20 ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಂಬAಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಇಲಾಖೆಯ ಆನ್‌ಲೈನ್ ಪೋರ್ಟಲ್ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕ, ಶಿವಮೊಗ್ಗ- 9986040981, ಮೀನುಗಾರಿಕೆ ಸಹಾಯಕ ನಿರ್ದೇಶಕ, ಭದ್ರಾವತಿ-9743370815, ಮೀನುಗಾರಿಕೆ ಸಹಾಯಕ ನಿರ್ದೇಶಕ, ಶಿಕಾರಿಪುರ-9686939028, ಮೀನುಗಾರಿಕೆ ಸಹಾಯಕ ನಿರ್ದೇಶಕರ, ಸಾಗರ ಮತ್ತು…
ಶಿವಮೊಗ್ಗ: ಜಿಲ್ಲೆಯ ಸುಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದು ಸಾಗರದ ಮಾರಿಕಾಂಬ ಜಾತ್ರೆ. ಇದೀಗ ಸಾಗರದ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ದಿನಾಂಕ 03-02-2026ರಿಂದ ಸಾಗರದ ಮಾರಿಕಾಂಬಾ ಜಾತ್ರಾ ಮಹೋತ್ಸವ ನೆರವೇರಲಿದೆ. ಈ ಕುರಿತಂತೆ ಮಾರಿಕಾಂಬ ದೇವಸ್ಥಾನ ಕಮಿಟಿಯ ಸದಸ್ಯರಾದಂತ ತಾರಾಮೂರ್ತಿ ಮಾಹಿತಿ ನೀಡಿದ್ದು, ಅಕ್ಟೋಬರ್.5ರಂದು ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಠಾನದ ಜನರಲ್ ಬಾಡಿ ಮೀಟಿಂಗ್ ನಡೆಯಲಿದೆ. ಅದು ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಠಾನದ ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಕ್ಟೋಬರ್.30ರ ಒಳಗಾಗಿ ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಠಾನಕ್ಕೆ ಹೊಸ ಪದಾಧಿಕಾರಿಗಳು ಆಯ್ಕೆಗೊಂಡು, ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದರು. ಮಾರಿಕಾಂಬಾ ಜಾತ್ರೆಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗೆ ಜಾತ್ರಾ ಮಹೋತ್ಸವಕ್ಕೆ ದಿನಾಂಕ ಗೊತ್ತು ಪಡಿಸಲಾಗಿದೆ. ಚುನಾವಣಾ ಪ್ರಕ್ರಿಯೆಗೂ ಮುನ್ನವೇ ಮಾರಿಕಾಂಬಾ ಜಾತ್ರಾ ಕೈಂಕರ್ಯಗಳಿಗೆ ಯಾವುದೇ ತೊಂದರೆ ಆಗದಂತೆ ದಿನಾಂಕ ಪ್ರಕಟಿಸಲಾಗಿದೆ. ಅದರಂತೆ ಜಾತ್ರಾ ಕಾರ್ಯಕ್ರಮ ತಯಾರಿ ಸೇರಿದಂತೆ ಇತರೆ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು.…
ನವದೆಹಲಿ: ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಪ್ರತಿಕ್ರಿಯೆಯಾಗಿ ದೆಹಲಿ ವಿಶ್ವವಿದ್ಯಾಲಯವು ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದ ಮುಖ್ಯ ಮಾಹಿತಿ ಆಯೋಗದ ಆದೇಶವನ್ನು ದೆಹಲಿ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿ ಸಚಿನ್ ದತ್ತ ಅವರು ಹೈಕೋರ್ಟ್‌ನಿಂದ ನೀಡಿದ ಆದೇಶದ ಪ್ರಕಾರ, ಶೈಕ್ಷಣಿಕ ದಾಖಲೆ ಮತ್ತು ಪದವಿಯ ಯಾವುದೇ ಬಹಿರಂಗಪಡಿಸುವಿಕೆಯ ಅಗತ್ಯವಿಲ್ಲ. ವಿವರವಾದ ಆದೇಶ ನಂತರ ಲಭ್ಯವಿರುತ್ತದೆ. ಪ್ರಧಾನಿ ಮೋದಿ ಅವರ ಶೈಕ್ಷಣಿಕ ದಾಖಲೆಗಳನ್ನು ಬಹಿರಂಗಪಡಿಸುವುದರ ಕುರಿತು ಈ ಕಾನೂನು ಹೋರಾಟ ಸುಮಾರು ಒಂದು ದಶಕದಿಂದ ನಡೆಯುತ್ತಿದೆ – ವಾಸ್ತವವಾಗಿ, 1978 ರಲ್ಲಿ ಪ್ರಧಾನಿ ಮೋದಿ ಅವರ ಚುನಾವಣಾ ಅಫಿಡವಿಟ್ ಪ್ರಕಾರ ಪದವಿ ಪಡೆದ ವರ್ಷ, ಡಿಯುನಿಂದ ಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ದಾಖಲೆ. ಈ ದಾಖಲೆಗಾಗಿ 2016 ರ ಆರ್‌ಟಿಐ ಅರ್ಜಿಯೊಂದಿಗೆ ಇದು ಪ್ರಾರಂಭವಾಯಿತು. ಮೂರನೇ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುವುದರ ವಿರುದ್ಧ ನಿಯಮಗಳನ್ನು ಉಲ್ಲೇಖಿಸಿ ವಿಶ್ವವಿದ್ಯಾಲಯವು ಅದನ್ನು ನಿರಾಕರಿಸಿತು. ಆದಾಗ್ಯೂ, ಮುಖ್ಯ ಮಾಹಿತಿ ಆಯೋಗ…
ಬೆಂಗಳೂರು: ಬಾಕಿಯಿರುವ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಬ್ಯಾಕ್‌ಲಾಗ್ ಹುದ್ದೆ ಭರ್ತಿ ವಿಷಯದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ. ಸರ್ಕಾರ ದಲಿತರ ಪರವಾಗಿದ್ದು, ದಲಿತರಿಗೆ ಸೂಕ್ತ ನ್ಯಾಯ ಒದಗಿಸಲು ಅಡ್ಡಗಾಲು ಹಾಕುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದಂತ ಅವರು, ರಾಜ್ಯಾದ್ಯಂತ ದೇವದಾಸಿಯರ ಸಮೀಕ್ಷೆ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕ ದೇವದಾಸಿಯರ ಪುನರ್ವಸತಿಗೆ ಹಾಗೂ ಈ ಪಿಡುಗನ್ನು ಸಂಪೂರ್ಣವಾಗಿ ತೊಲಗಿಸಲು ಯೋಜನೆ ಜಾರಿಗೊಳಿಸಲಾಗುವುದು. ವಿಶೇಷ ಅನುದಾನ ನೀಡುವ ಬಗ್ಗೆಯೂ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸೂಚನೆ…
ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯದಿಂದ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿ ಮೈಸೂರಿನ ಹಿನಕಲ್ ನಲ್ಲಿರುವಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಧುಸೂದನ್ ಕೆ.ಎಸ್ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಇಂದು ಕೇಂದ್ರ ಶಿಕ್ಷಣ ಸಚಿವಾಲಯದಿಂದ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2025ರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪ್ರಶಸ್ತಿ ಪುರಸ್ಕೃತರಿಗೆ ನೀವು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳು 2025ಕ್ಕೆ ಆಯ್ಕೆಯಾಗಿದ್ದೀರಿ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 5, 2025 ರ ಶುಕ್ರವಾರದಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ ಎಂದಿದೆ. ಪ್ರತಿ ಪ್ರಶಸ್ತಿಯು ಮೆರಿಟ್ ಪ್ರಮಾಣಪತ್ರ, ರೂ. 50,000/- ನಗದು ಮತ್ತು ಬೆಳ್ಳಿ ಪದಕವನ್ನು ಹೊಂದಿರುತ್ತದೆ. ನಿಮ್ಮ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸೆಪ್ಟೆಂಬರ್ 3 (ಮಧ್ಯಾಹ್ನ) ರಿಂದ ಸೆಪ್ಟೆಂಬರ್ 6, 2025 ರವರೆಗೆ (ಬೆಳಿಗ್ಗೆ) ಹೋಟೆಲ್ ‘ದಿ ಅಶೋಕ್’, 50-ಬಿ, ಡಿಪ್ಲೊಮ್ಯಾಟಿಕ್ ಎನ್‌ಕ್ಲೇವ್, ಚಾಣಕ್ಯಪುರಿ, ನವದೆಹಲಿ 110 021…
ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದಾಗಿ ಸ್ಪೋಟಕ ಮಾಹಿತಿ ನೀಡಿ, ಆ ಬಳಿಕ ಅದು ಸುಳ್ಳು ಎಂಬುದಾಗಿ ಬುರುಡೆ ಬಿಟ್ಟಿದ್ದಂತ ಬುರುಡೆ ಚಿನ್ನಯ್ಯನ ಹಿಂದಿನ ಸತ್ಯ ಬಟಾ ಬಯಲಾಗಿತ್ತು. ಇದೀಗ ಮಾಡೋದೆಲ್ಲ ಮಾಡಿ ಬುರುಡೆ ಚಿನ್ನಯ್ಯ ಸಹೋದರನ ಮುಂದೆ ಕಣ್ಣೀರಿಟ್ಟಿರುವುದಾಗಿ ತಿಳಿದು ಬಂದಿದೆ. ಹೌದು ಬುರುಡೆ ಚಿನ್ನಯ್ಯ ಸಹೋದರ ತಾನಾಸಿ ಮುಂದೆ ಮಾಡೋದೆಲ್ಲ ಮಾಡಿ ಕಣ್ಣೀರಿಟ್ಟಿದ್ದಾರೆ. ಸಹೋದರನಿಗೆ ಕರೆ ಮಾಡಿ ಗೋಳಾಡಿರುವುದಾಗಿ ತಿಳಿದು ಬಂದಿದೆ. ಅಂದಹಾಗೇ ಚಿನ್ನಯ್ಯನನ್ನು ಬಂಧಿಸಿದ್ದ ದಿನವೇ ತಾನಾಸಿಯನ್ನು ಎಸ್ಐಟಿ ಕರೆಸಿತ್ತು. ಮೊನ್ನೆ ಚಿನ್ನಯ್ಯನ ಜೊತೆ ಅಣ್ಣ ತಾನಾಸಿ ಮಾತನಾಡಿದ್ದರು. ಅಂದು ನನ್ನ ಎದುರು ಕಣ್ಣೀರಿಟ್ಟಿದ್ದ ಎಂಬುದಾಗಿ ತಾನಾಸಿ ಹೇಳಿದ್ದಾರೆ. ಎಲ್ಲಾ ಸತ್ಯವನ್ನೂ ಎಸ್ಐಟಿಗೆ ಹೇಳಿದ್ದೇನೆ ಎಂಬುದಾಗಿ ಚಿನ್ನಯ್ಯ ಕಣ್ಣೀರಿಟ್ಟಿದ್ದರಂತೆ. ಆ ವೇಳೆಯಲ್ಲಿ ಅಣ್ಣ ತಾನಾಸಿ ಮಣ್ಣು ತಿನ್ನುವ ಕೆಲಸ ಮಾಡಿದೆ ಎಂಬುದಾಗಿ ಬೈದಿದ್ದರಂತೆ. https://kannadanewsnow.com/kannada/important-notification-from-the-department-of-school-education-regarding-local-holidays-for-schools/ https://kannadanewsnow.com/kannada/big-news-the-investigation-into-the-dharmasthala-case-is-90-complete-nia-cbi-not-needed-minister-ramalinga-reddy/














