Author: kannadanewsnow09

ಬೆಂಗಳೂರು : “ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇದು ಹಿಂದೂಗಳ ಆಸ್ತಿಯಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬೇಡ ಎಂಬ ಬಿಜೆಪಿ ‌ನಾಯಕರ ವಿರೋಧದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. “ನಾವುಗಳು ಮಸೀದಿ, ದರ್ಗಾಗಳಿಗೆ, ಜೈನರ ಬಸದಿಗಳಿಗೆ, ಚರ್ಚ್, ಗುರುದ್ವಾರಗಳಿಗೆ ಹೋಗುತ್ತೇವೆ. ನಾವು ಗುರುದ್ವಾರಕ್ಕೆ ಹೋಗೋದನ್ನ ಯಾರಾದರೂ ತಪ್ಪಿಸಿದ್ದಾರಾ? ಹಿಂದೂ ದೇವಸ್ಥಾನಗಳಿಗೆ ಅವರುಗಳು ಬರುವುದನ್ನು ನಾವು ವಿರೋಧಿಸಿದ್ದೇವೆಯೇ? ಯಾವುದೇ ಶ್ರದ್ದಾ ಕೇಂದ್ರಗಳಿಗೆ ಯಾರು ಬೇಕಾದರೂ ಹೋಗಿ ಬರಬಹುದು” ಎಂದರು. ಬೇರೆ ಧರ್ಮದವರು ಹಿಂದೂಗಳಾಗಿ ಮತಾಂತರವಾಗಿಲ್ಲವೇ? “ಎಷ್ಟೋ ಜನ ಹಿಂದೂಗಳು ಮುಸ್ಲಿಮರಾಗಿ, ಕ್ರಿಶ್ಚಿಯನ್ನರಾಗಿ ಹಾಗೂ ಬೇರೆ ಧರ್ಮದವರು ಹಿಂದೂಗಳಾಗಿ ಮತಾಂತರವಾಗಿಲ್ಲವೇ? ಮುಸ್ಲಿಮರು ಹಿಂದೂ ಧರ್ಮದ ಆಚರಣೆಗಳನ್ನು ಮಾಡುತ್ತಿಲ್ಲವೇ? ಅಯೋಧ್ಯೆ ರಾಮನಿಗೆ ಹಿಂದುಗಳು ಮಾತ್ರ ಬರಬೇಕು ಎಂದು ಏಕೆ ಬೋರ್ಡ್ ಹಾಕಿಲ್ಲ? ಬಿಜೆಪಿ ಸರ್ಕಾರ ಇದ್ದ ವೇಳೆ ಹಾಗೂ ಈಗ ಇಡೀ ದೇಶದಲ್ಲಿ…

Read More

ಬೆಂಗಳೂರು: ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು, ಕೋರಿಕೆ ವರ್ಗಾವಣೆ ಅರ್ಜಿ ಸಲ್ಲಿಸಿರುವ ಶಿಕ್ಷಕರುಗಳಿಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲು ಕಾಲಾವಕಾಶವನ್ನು ವಿಸ್ತರಿಸಿ ಆದೇಶಿಸಲಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020 (2020 ರ ಕರ್ನಾಟಕ ಅಧಿನಿಯಮ ಸಂಖ್ಯೆ: 04) ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು-2020 ರ ಹಾಗೂ ವರ್ಗಾವಣೆ ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳು-2022 ಪುಕಾರ 2024-25 ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಉಲ್ಲೇಖ-1 ರ ವರ್ಗಾವಣಾ ವರ್ಗಾವಣಾ ವೇಳಾಪಟ್ಟಿಯಂತೆ ಹೆಚ್ಚುವರಿ ಶಿಕ್ಷಕರ ಆಕ್ಷೇಪಣೆಗಳನ್ನು ವಿಭಾಗೀಯ ಸಹ ನಿರ್ದೇಶಕರಿಗೆ ಸಲ್ಲಿಸಲು ದಿನಾಂಕ : 25-08-2025 ಹಾಗೂ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರು ಆಕ್ಷೇಪಣೆಗಳನ್ನು ಸಲ್ಲಿಸಲು ವಿಭಾಗೀಯ ಸಹ ನಿರ್ದೇಶಕರಿಗೆ ಸಲ್ಲಿಸಲು…

Read More

ಭಾದ್ರಪದ ಶುಕ್ಲ ಮಾಸದ ಕ್ಷೀಣ ಚಂದ್ರನ ದಿನವನ್ನು ಗಣೇಶನ ಅವತಾರ ದಿನವೆಂದು ಆಚರಿಸಲಾಗುತ್ತದೆ. ಆ ದಿನ ಎಲ್ಲರೂ ತಮ್ಮ ಮನೆಗಳಲ್ಲಿ ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ನಾವು ಮನೆಯಲ್ಲಿ ಗಣೇಶನ ಮೂರ್ತಿಯನ್ನು ಖರೀದಿಸುತ್ತೇವೆ, ಅವನಿಗೆ ಇಷ್ಟವಾದ ವಸ್ತುಗಳನ್ನು ನೈವೇದ್ಯವಾಗಿ ಇಡುತ್ತೇವೆ ಮತ್ತು ಅವನಿಗೆ ವಿಶೇಷ ಪೂಜೆ ಮತ್ತು ಅರ್ಚನೆಗಳನ್ನು ಮಾಡುತ್ತೇವೆ. ಹಾಗೆ ಮಾಡುವುದರಿಂದ ನಾವು ಗಣೇಶನ ಕೃಪೆಯನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ, ಅಂತಹ ವಿಶೇಷ ದಿನದಂದು ನಾವು ಸಲ್ಲಿಸಬಹುದಾದ ಪ್ರಾರ್ಥನೆಗಳನ್ನು ಪೂರೈಸಲು ನಾವು ಮಾಡಬೇಕಾದ ಪೂಜೆಯನ್ನು ನಾವು ನೋಡಲಿದ್ದೇವೆ . ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ಪ್ರಾರ್ಥನೆಗಳನ್ನು ಈಡೇರಿಸುವ ಪೂಜೆ ಗಣೇಶನು ಸರ್ವೋಚ್ಚ ದೇವರು ಮತ್ತು ಕೆಲಸದಲ್ಲಿ ಯಶಸ್ಸನ್ನು ನೀಡಬಲ್ಲವನು.…

Read More

ಜಮ್ಮು-ಕಾಶ್ಮೀರ: ಮಂಗಳವಾರ ಮಧ್ಯಾಹ್ನ ತ್ರಿಕೂಟ ಬೆಟ್ಟದ ಮೇಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಕನಿಷ್ಠ ಐದು ಜನರು ಸಾವನ್ನಪ್ಪಿ, 14 ಜನರು ಗಾಯಗೊಂಡಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದ ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಧ್ಕ್ವರಿಯಲ್ಲಿರುವ ಇಂದರ್ಪ್ರಸ್ಥ ಭೋಜನಾಲಯದ ಬಳಿ ಭೂಕುಸಿತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಹಾಯವಾಣಿ ಸಂಖ್ಯೆ ಆರಂಭ ಪೀಡಿತ ಜಿಲ್ಲೆಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ ಮತ್ತು ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆಯನ್ನು ವಹಿಸಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಜಮ್ಮು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ವಿವಿಧ ಜಿಲ್ಲೆಗಳ ಜನರ ತುರ್ತು ಸಂಪರ್ಕ ಸಂಖ್ಯೆಗಳು: ಜಮ್ಮು – 0191-2571616 ಸಾಂಬಾ – 01923-241004, 01923-246915 ಕಥುವಾ – 01922-238796 ಪೂಂಚ್ – 01965-2200888 ರಾಜೌರಿ – 01962-295895 ಉಧಂಪುರ – 01992-272727, 01992-272728 ರಿಯಾಸಿ – 9419839557 ರಾಂಬನ್ – 01998-29550, 01998-266790 ದೋಡಾ –…

Read More

ಬೆಂಗಳೂರು: ಇಂದು ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚನೆ ಮಾಡಿ ಆದೇಶಿಸಲಾಗಿತ್ತು. ಈ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರನ್ನಾಗಿ ಎಂ.ಮಹೇಶ್ವರ ರಾವ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಅಧಿಸೂಚನೆ ಹೊರಡಿಸಿದ್ದು, ದಿನಾಂಕ 26-08-2025ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿ ಆದೇಶಿಸಲಾಗಿದೆ ಎಂದಿದ್ದಾರೆ. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಐಎಎಸ್ ಅಧಿಕಾರಿ ಎಂ.ಮಹೇಶ್ವರ ರಾವ್, ಬಿಬಿಎಂಪಿ ಮುಖ್ಯ ಆಯುಕ್ತರು ಅವರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರನ್ನಾಗಿ ಅಧಿಕ ಪ್ರಭಾರದ ಮೇಲೆ ನೇಮಿಸಿ ಆದೇಶಿಸಿದ್ದಾರೆ. https://kannadanewsnow.com/kannada/scan-qr-code-get-property-information-registration-and-rental-agreement-new-scheme-of-the-government/ https://kannadanewsnow.com/kannada/union-minister-kiren-rijiju-saves-two-people-who-fell-into-a-river-receives-huge-praise-from-netizens/

Read More

ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ದೋಡಾ ಜಿಲ್ಲೆಯಲ್ಲಿ ನಿರಂತರ ಮಳೆ, ಮೇಘಸ್ಫೋಟ ಮತ್ತು ಭೂಕುಸಿತದಿಂದ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಹಲವಾರು ಮನೆಗಳು ಮತ್ತು ರಸ್ತೆಗಳು ನಾಶವಾಗಿವೆ. ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ನದಿ ದಂಡೆಗಳಿಂದ ದೂರವಿರುವಂತೆ ಅಧಿಕಾರಿಗಳು ನಿವಾಸಿಗಳನ್ನು ಒತ್ತಾಯಿಸಿದ್ದರಿಂದ ಜಿಲ್ಲೆಯಲ್ಲಿ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. https://twitter.com/ANI/status/1960293176066953599 ರೈಲುಗಳು ಮತ್ತು ಹೆದ್ದಾರಿಗಳು ಮುಚ್ಚಲ್ಪಟ್ಟಿವೆ ದೋಡಾ ಮತ್ತು ಕಿಶ್ತ್ವಾರ್ ನಡುವಿನ ಪ್ರಮುಖ ಕೊಂಡಿಯಾದ NH-244 ನಲ್ಲಿ ಭಾರೀ ಮಳೆಯಿಂದಾಗಿ ರಸ್ತೆಯ ಒಂದು ಭಾಗ ಕೊಚ್ಚಿಹೋಗಿದ್ದು, ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರಾಂಬನ್ ಜಿಲ್ಲೆಯ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತಗಳು ಮತ್ತು ಗುಂಡಿನ ಕಲ್ಲುಗಳು ಬಿದ್ದಿವೆ. ಕಾಶ್ಮೀರ ಕಣಿವೆಯನ್ನು ಕಿಶ್ತ್ವಾರ್‌ನೊಂದಿಗೆ ಸಂಪರ್ಕಿಸುವ ಸಿಂಥನ್ ಟಾಪ್ ಪಾಸ್ ಅನ್ನು ಮುಚ್ಚಲಾಗಿದೆ ಮತ್ತು ಜೊಜಿಲಾ ಪಾಸ್‌ನಲ್ಲಿ ಭಾರೀ ಹಿಮಪಾತವು ಶ್ರೀನಗರ-ಲೇಹ್ ಹೆದ್ದಾರಿಯನ್ನು ನಿರ್ಬಂಧಿಸಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್, ಶ್ರೀ ಶಕ್ತಿ ಎಕ್ಸ್‌ಪ್ರೆಸ್ ಮತ್ತು ಹೇಮಕುಂಟ್ ಎಕ್ಸ್‌ಪ್ರೆಸ್ ಸೇರಿದಂತೆ ಕತ್ರಾಗೆ ಮತ್ತು ಅಲ್ಲಿಂದ ಬರುವ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ.…

Read More

ಶಿವಮೊಗ್ಗ: ಜಿಲ್ಲೆಯ ವಾರ್ತಾಧಿಕಾರಿಯಾಗಿದ್ದಂತ ಮಾರುತಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಶಿವಮೊಗ್ಗ ಜಿಲ್ಲೆಯ ನೂತನ ವಾರ್ತಾಧಿಕಾರಿಯಾಗಿ ಧನಂಜಯ ಅಧಿಕಾರ ಸ್ವೀಕಾರಿಸಿದ್ದಾರೆ. ಶಿವಮೊಗ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯ ನಿರ್ದೇಶಕರಾಗಿ ಧನಂಜಯ ಇವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಇವರಿಗೆ ಸಂಬಂಧಿಸಿದ ಸರ್ಕಾರಿ ಹಾಗೂ ಅರೆ ಸರ್ಕಾರಿ ಪತ್ರ ವ್ಯವಹಾರವನ್ನು ಇವರ ಹೆಸರಿನಲ್ಲಿ ಹಾಗೂ ಪದನಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್.ಎಂ.ವಿ ರಸ್ತೆ ಶಿವಮೊಗ್ಗ ಈ ವಿಳಾಸದಲ್ಲಿ ಪತ್ರ ವ್ಯವಹರಿಸಬಹುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/formation-of-greater-bengaluru-authority-siddaramaiah-appointed-as-chairman-d-k-shivakumar-appointed-as-vice-chairman/ https://kannadanewsnow.com/kannada/scan-qr-code-get-property-information-registration-and-rental-agreement-new-scheme-of-the-government/

Read More

ಚಿಕ್ಕಬಳ್ಳಾಪುರ: ಜಿಲ್ಲೆ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಗ್ರಾಮದಲ್ಲಿ ಮಂಗಳವಾರ ಗೌರಿ ಹಬ್ಬದ ಸಂಭ್ರಮ. ಸಾವಿರಾರು ಮಂದಿ ಗೌರಿ ಪೂಜೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ‘ಒಂದು ಜಗತ್ತು ಒಂದು ಕುಟುಂಬ’ ಸೇವಾ ಅಭಿಯಾನದ ಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಗೌರಿ ಹಬ್ಬದ ನಿಜವಾದ ಸಂದೇಶ ಮತ್ತು ಗೌರಿ ಪೂಜೆಯ ಫಲದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಅವರ ಉಪನ್ಯಾಸದ ಬಗ್ಗೆ ಮುಂದೆ ಓದಿ. ದೇವಿಯು ಎಲ್ಲರಲ್ಲಿಯೂ ಚೇತನವಾಗಿ, ಪ್ರಜ್ಞೆಯಾಗಿ ನೆಲೆಸಿದ್ದಾಳೆ. ಅವಳಿಗೆ ನಾವು ಸದಾ ನಮಿಸಬೇಕು. ಶಿವ ಮತ್ತು ದೇವಿಯನ್ನು ಪ್ರಜ್ಞೆ ಮತ್ತು ಶಕ್ತಿಯ ರೂಪವಾಗಿ ಆರಾಧಿಸುತ್ತೇವೆ. ಶಿವನು ಪ್ರಜ್ಞೆ ಪ್ರತೀಕವಾದರೆ ಶಕ್ತಿಯು ಅದರ ವಿಸ್ತರಣೆಯಾಗಿದ್ದಾಳೆ. ಅವರಿಬ್ಬರ ಸಂಯೋಗದಿಂದಲೇ ನಾವೆಲ್ಲರೂ ನಮ್ಮ ಕರ್ಮಗಳನ್ನು ಮಾಡಲು ಸಾಧ್ಯವಾಗುತ್ತದೆ. ಶಿವ-ಪಾರ್ವತಿಯರ ಮದುವೆಯು ಭೌತಿಕ ವಿಚಾರ ಅಲ್ಲ. ಇದು ಜೀವಾತ್ಮನು ಪರಮಾತ್ಮನೊಂದಿಗೆ ಸೇರುವುದನ್ನು ಸಂಕೇತಿಸುತ್ತದೆ. ಶಕ್ತಿಯು ಚೈತನ್ಯದಲ್ಲಿ ಸೇರುವುದನ್ನು ಸೂಚಿಸುತ್ತದೆ. ಶಿವನನ್ನು ವರಿಸಲು ಪಾರ್ವತಿಯು 16 ವರ್ಷ ತಪಸ್ಸು ಮಾಡಿದ್ದಳು. ತಪಸ್ಸು ಹೊರತುಪಡಿಸಿ ಶಿವನನ್ನು ಬೇರೆ…

Read More

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚನೆ ಮಾಡಿ ಸರ್ಕಾರ ಆದೇಶಿಸಿದೆ. ಈ ಆದೇಶದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಾಧ್ಯಕ್ಷರಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇಮಕ ಮಾಡಲಾಗಿದೆ. ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ (2025ರ ಕರ್ನಾಟಕ ಕಾಯ್ದೆ ಸಂಖ್ಯೆ 35) ಪ್ರಕರಣ 09ರ ಉಪ ಪ್ರಕರಣ(1)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಗಿನಂತೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷರಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಡಿಸಿಎಂ ಡಿ.ಕೆ ಶಿವಕುಮಾರ್, ಪದನಿಮಿತ್ತ ಸದಸ್ಯರನ್ನಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕುಮಾರಿ ಶೋಭಾ ಕರಂದ್ಲಾಜೆ, ಸಚಿವ ರಾಮಲಿಂಗಾರೆಡ್ಡಿ, ಕೆಜೆ ಜಾರ್ಜ್, ಬಿಎಸ್ ಸುರೇಶ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ನೇಮಕ ಮಾಡಲಾಗಿದೆ.…

Read More

ಬೆಂಗಳೂರು: ನಗರದಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆ ಪತ್ತೆಯಾಗಿ ಅಚ್ಚರಿಯನ್ನು ಹುಟ್ಟಿಸಿತ್ತು. ಇದೀಗ ಕಸದ ರಾಶಿಯಲ್ಲಿ ಮನುಷ್ಯನ ಮೂಳೆ ಪತ್ತೆ ಹಿಂದಿನ ಸ್ಪೋಟಕ ರಹಸ್ಯ ಬಯಲಾಗಿದೆ. ಅದೇನು ಅಂತ ಮುಂದೆ ಓದಿ. ಬೆಂಗಳೂರಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆ ಪತ್ತೆ ಕೇಸ್ ಗೆ ಸಂಬಂಧಿಸಿದಂತೆ ರಹಸ್ಯ ಬಯಲಾಗಿದೆ. ಮೆಡಿಕಲ್ ಓದುತ್ತಿದ್ದಂತ ವಿದ್ಯಾರ್ಥಿನಿ ತಂದೆಯ ಎಡವಟ್ಟು ಇದಕ್ಕೆ ಕಾರಣ ಎಂಬುದು ತಿಳಿದು ಬಂದಿದೆ. ಮಡಿಕಲ್ ವ್ಯಾಸಂಗಕ್ಕಾಗಿ ಮಗಳು ಮನೆಗೆ ತಂದಿಟ್ಟಿದ್ದಂತ ಮೂಳೆಗಳು ಅವುಗಳಾಗಿವೆ. ಮಗಳು ವಿದ್ಯಾಭ್ಯಾಸಕ್ಕಾಗಿ ತಂದಿಟ್ಟಿದ್ದಂತ ಮೂಳೆಗಳು ಅವಶ್ಯಕತೆ ಇಲ್ಲದೆ ಕೆಲ ದಿನಗಳಇಂದ ಮನೆಯಲ್ಲೇ ಇಟ್ಟಿದ್ದರು. ಗೌರಿ ಹಬ್ಬ ಹಿನ್ನಲೆಯಲ್ಲಿ ಕಸದ ರಾಶಿಯಲ್ಲಿ ಮೂಳೆಗಳ್ನು ಎಸೆದಿದ್ದರು. ಇಂದು ಕಸದ ರಾಶಿಗೆ ಮೂಳೆಗಳನ್ನು ವಿದ್ಯಾರ್ಥಿ ತಂದೆ ಎಸೆದು ಹೋಗಿದ್ದರು. ಕಸದ ರಾಶಿಯಲ್ಲಿ ಮನುಷ್ಯರ ಮೂಳೆಗಳನ್ನು ಕಂಡು ಜನರು ಆತಂಕಗೊಂಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಂತ ವಿದ್ಯಾರ್ಥಿನಿಯ ತಂದೆ ತಪ್ಪೊಪ್ಪಿಕೊಂಡಿದ್ದಾರೆ. ಈ ಮೂಲಕ ಬೆಂಗಳೂರಲ್ಲಿ ಕಸದ ರಾಶಿಯಲ್ಲಿ ಪತ್ತೆಯಾದಂತ…

Read More