Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ : ಸಾಗರದ ಇತಿಹಾಸ ಪ್ರಸಿದ್ದವಾದ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಫೆಬ್ರವರಿ.3, 2026ರಂದು ನಡೆಯಲಿದೆ ಎಂದು ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಹೇಳಿದರು. ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಸೋಮವಾರ ಮಾರಿಕಾಂಬಾ ಜಾತ್ರಾ ವಿವರದ ನಾಮಫಲಕ ಅನಾವರಣ ಮಾಡಿ ಮಾತನಾಡಿದಂತ ಅವರು, ಜಾತ್ರೆ ನಡೆಸುವ ಕುರಿತು ಚರ್ಚೆ ನಡೆಸಲಾಗಿದ್ದು ಮುಹೂರ್ತವನ್ನು ನಿಗಧಿಪಡಿಸಲಾಗಿದೆ. 2025ರ ಡಿಸೆಂಬರ್ 23ರಂದು ಮರ ಕಡಿಯುವ ಶಾಸ್ತ, 2026ರ ಜನವರಿ 27ರಂದು ಜಾತ್ರೆಗೆ ಅಂಕೆ ಹಾಕುವುದು. ಫೆ.3ರಂದು ತವರುಮನೆಯಲ್ಲಿ ಅಮ್ಮನ ಪ್ರತಿಷ್ಟಾಪನೆ, ರಾತ್ರಿ ಅಮ್ಮನವರ ಮೆರವಣಿಗೆ ನಂತರ ಗಂಡನ ಮನೆ ದೇವಸ್ಥಾನದಲ್ಲಿ ಅಮ್ಮನ ಪ್ರತಿಷ್ಟಾಪನೆ, ಫೆ. 11ರಂದು ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರ ಫೆ. 15ರಂದು ಅಂಕೆ ತೆಗೆಯುವುದು ಮತ್ತು ಕೋಣವನ್ನು ಬಿಡುವ ಶಾಸ್ತ್ರ ನಡೆಯುತ್ತದೆ. ಸಾರ್ವಜನಿಕರಿಗೆ ಮಾಹಿತಿ ಹಿನ್ನೆಲೆಯಲ್ಲಿ ಆರು ತಿಂಗಳ ಮೊದಲೆ ಜಾತ್ರಾ ದಿನಾಂಕ ಘೋಷಣೆ ಮಾಡಿದೆ ಎಂದರು. ಗಂಡನ ಮನೆ ದೇವಸ್ಥಾನದ ಪ್ರಧಾನ ಅರ್ಚಕ ರವಿ ಪೋತರಾಜ ಮಾತನಾಡಿ, ಅರಸರ ಕಾಲದಿಂದಲೂ ಸಾಗರದ…
ಶಿವಮೊಗ್ಗ: ಕೆಳದಿ ಅರಸರ ಕಾಲದಿಂದಲೂ ಸಾಗರದ ಜೋಯಿಸ್ ಮನೆತನದಲ್ಲಿ ಅರಮನೆ ಗೌರಿ ಕೂರಿಸುವಂತ ಸಂಪ್ರದಾಯವಿದೆ. ಇಂದು ಅದರಂತೆ ಜೋಯಿಸ್ ಮನೆತನದವರಿಂದ ಅರಮನೆ ಗೌರಿ ಪ್ರತಿಷ್ಠಾಪಿಸಿ ವಿಶೇಷ ರೀತಿಯಲ್ಲಿ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೌರಿ ಗಣೇಶ ಹಬ್ಬ ಎಲ್ಲರ ಮನೆಯಲ್ಲೂ ಮನೆ ಮಾಡಿದೆ. ಇದೇ ಹೊತ್ತಿನಲ್ಲಿ ಕೆಳದಿ ಅರಸರ ಕಾಲದಿಂದಲೂ ಜೋಯಿಸ್ ಮನೆತನದಿಂದ ಅರಮನೆ ಗೌರಿಯನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜೆ ನಡೆಸಲಾಯಿತು. 2 ದಿನಗಳ ಕಾಲ ಗೌರಿಯನ್ನು ಪೂಜಿಸಲಾಗುತ್ತದೆ. ಈ ದೇವಿಯನ್ನು ಪ್ರತಿಯೊಬ್ಬ ಭಕ್ತರು ಸ್ಪರ್ಶಿಸಿ, ಪೂಜಿಸುವುದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತ ಸಂಪ್ರದಾಯವಾಗಿದೆ. ಈ ಕುರಿತಂತೆ ಮಾತನಾಡಿದಂತ ಜೋಯಿಸ್ ಮನೆತನದ ಸದಾಶಿವ ಜೋಯಿಸ್ ಅವರು, ನಮ್ಮ ಕುಟುಂಬದಲ್ಲಿ ಕೆಳದಿ ಅರಸರ ಕಾಲದಿಂದಲೂ ಅರಮನೆಯಲ್ಲಿ ಪೂಜೆಗೊಳ್ಳುತ್ತಿದ್ದಂತ ಗೌರಿಯನ್ನು ಅರಸರ ಆಳ್ವಿಕೆಯ ನಂತ್ರ, ನಮ್ಮ ಮನೆತನದ ಮೂಲಕ ಮನೆಯಲ್ಲಿಯೇ ಇಟ್ಟು ಪೂಜೆ ಮಾಡುವ ಸಂಪ್ರದಾಯವನ್ನು ನಡೆಸಲಾಗುತ್ತಿದೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದರು. ನಮ್ಮ ಮನೆಯಲ್ಲಿ ಕೂರಿಸುವಂತ ಅರಮನೆ…
BREAKING: ಮಾಜಿ ಸಚಿವ ಮುರುಗೇಶ್ ನಿರಾಣಿ ಪುತ್ರನಿಗೆ ಸುಪ್ರೀಂ ಕೋರ್ಟ್ ಶಾಕ್: ವಿಜಯ್ ನಿರಾಣಿ ವಿರುದ್ಧ ತನಿಖೆಗೆ ಆದೇಶ
ಬೆಂಗಳೂರು: ಮಾಜಿ ಸಚಿವ ಮುರುಗೇಶ್ ನಿರಾಣಿ ಪುತ್ರನಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿದೆ. ವಿಜಯ್ ನಿರಾಣಿ ವಿರುದ್ಧ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ವಿಜಯ್ ನಿರಾಣಿ ವಿರುದ್ಧ ಕಾನೂನು ಪ್ರಕಾರ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 2018ರಲ್ಲಿ ಕಾರ್ಮಿಕರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 2018ರಲ್ಲಿ ನಿರಾಣಿ ಶುಗರ್ಸ್ ನ ತ್ಯಾಜ್ಯ ಘಟಕದಲ್ಲಿ 6 ಕಾರ್ಮಿಕರು ಮೃತಪಟ್ಟಿದ್ದರು. ಈ ಘಟನೆ ಸಂಬಂಧಿಸಿದಂತೆ ಕಾನೂನು ಪ್ರಕಾರ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ. https://kannadanewsnow.com/kannada/that-is-a-song-of-god-how-can-you-call-it-an-rss-song-mla-k-m-udays-question/ https://kannadanewsnow.com/kannada/good-news-for-teachers-waiting-for-transfer-extension-of-time-to-file-objections-to-the-additional-list/
ಹಾಸನ: ನಾನು ಕೋಟಿಗಟ್ಟಲೆ ಕನ್ನಡಿಗರ ಪ್ರೀತಿ, ಅಭಿಮಾನವನ್ನು ಪಡೆದಿದ್ದೇನೆ. ಇಂತಹುದ್ದರ ನಡುವೆ ಒಂದಿಬ್ಬರ ನಕಾರಾತ್ಮಕ ಟೀಕೆ, ಪ್ರತಿಕ್ರಿಯೆಗಳಿಗೆ ಉತ್ತರವನ್ನು ಕೊಡುವ ಅಗತ್ಯವಿಲ್ಲ. ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಒಂದಿಬ್ಬರ ಟೀಕೆ ಲೆಕ್ಕಕ್ಕಿಲ್ಲ ಎಂಬುದಾಗಿ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಕೋಟ್ಯಾಂತರ ಕನ್ನಡಿಗರು ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಅಭಿಮಾನವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಎಲ್ಲೋ ಒಂದಿಬ್ಬರು ನೆಗೆಟಿವಿಟಿಗೆ ಯಾಕೆ ಪ್ರತಿಕ್ರಿಯೆ ನೀಡಬೇಕು? ಅದರ ಅಗತ್ಯವೇ ಇಲ್ಲ. ಈ ಟೀಕೆಗೆ ಜನರೇ ಪ್ರತಿಕ್ರಿಯೆ ಕೊಡುತ್ತಾರೆ ಎಂದರು. ರಾಜಕೀಯ ಮಾಡೋದಕ್ಕೆ ವಿರೋಧ ಪಕ್ಷ, ಆಡಳಿತ ಪಕ್ಷ ಅಂತ ಇರಬೇಕು. ಆದರೇ ಯಾವ ವಿಚಾರದಲ್ಲಿ ರಾಜಕೀಯ ಮಾಡಬೇಕೋ ಅದರಲ್ಲಿ ಮಾಡಬೇಕು. ಆ ಬಗ್ಗೆ ಪ್ರಜ್ಞೆ ಸಕ್ರೀಯ ರಾಜಕಾರಣದಲ್ಲಿರುವಂತವರಿಗೆ ಇರಬೇಕು ಎಂಬುದಾಗಿ ತಮ್ಮನ್ನು ಟೀಕಿಸಿದ ರಾಜಕಾರಣಿಗಳಿಗೆ ಕುಟುಕಿದರು. ನಾನು ಬಿಜೆಪಿ ಪಕ್ಷದಲ್ಲಿ ಮೈಸೂರು ಸಂಸದ ಯದುವೀರ್ ಅವರಂತಹ ಸಂತತಿ ಹೆಚ್ಚಾಗಲಿ ಎಂಬುದಾಗಿ ಆಪೇಕ್ಷೆ ಪಡುತ್ತೇನೆ. ಒಂದು ಸಮತೋಲನದಿಂದ ವಿಷಯ…
ಬೆಂಗಳೂರು: ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿತವಾಗಿ, ನಾಗರಿಕ ವೈಮಾನಿಕ ಸೇವೆಗಳ ಕಾರ್ಯಾಚರಣೆ ನಡೆಸುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣವು ಮಂಗಳವಾರ ತನ್ನ ಎರಡನೆಯ ವಾರ್ಷಿಕೋತ್ಸವ ಆಚರಿಸಿತು. ಈ ಬಗ್ಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಮಾತನಾಡಿ, ‘ಕೆಎಸ್ಐಐಡಿಸಿ ಮೂಲಕ ರಾಜ್ಯ ಸರಕಾರವೇ ನಿರ್ವಹಿಸಲು ಆರಂಭಿಸಿದ ಪ್ರಪ್ರಥಮ ವಿಮಾನ ನಿಲ್ದಾಣ ಇದಾಗಿದೆ. ಕೇವಲ ಎರಡು ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ 2,400 ವಿಮಾನಯಾನಗಳ ಮತ್ತು 1 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರ ನಿರ್ವಹಣೆ ಯಶಸ್ವಿಯಾಗಿ ನಡೆದಿದೆ’ ಎಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ಕಂಪನಿಯು 670 ಯಾನಗಳಿಂದ 31,500 ಪ್ರಯಾಣಿಕರಿಗೆ, ಸ್ಟಾರ್ ಏರ್ ಸಂಸ್ಥೆಯು 1,200 ಯಾನಗಳ ಮೂಲಕ 47 ಸಾವಿರ ಪ್ರಯಾಣಿಕರಿಗೆ ಮತ್ತು ಸ್ಪೈಸ್ ಜೆಟ್ ಸಂಸ್ಥೆಯು 530 ಯಾನಗಳ ಮೂಲಕ 25 ಸಾವಿರ ಪ್ರಯಾಣಿಕರಿಗೆ ವಿಮಾನಯಾನ ಸೇವೆ ಒದಗಿಸಿವೆ ಎಂದು ಅವರು ಅಂಕಿಅಂಶಗಳನ್ನು ನೀಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ಬೆಂಗಳೂರು, ಗೋವಾ, ಹೈದರಾಬಾದ್, ತಿರುಪತಿ,…
ಬೆಂಗಳೂರು: ಕಾಡಗೋಡಿ ದಿಣ್ಣೂರಿನಲ್ಲಿ ದಲಿತರ ಮೇಲೆ ಗೂಂಡಾವರ್ತನೆ ನಡೆದಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡಿದ ನಂತರ ಮಾಧ್ಯಮದವರೊಂದಿಗೆ ಇಂದು ಮಾತನಾಡಿದ ಅವರು, ಡಿಐಜಿಗೂ ಮನವಿ ನೀಡುತ್ತಿರುವುದಾಗಿ ತಿಳಿಸಿದರು. ಪರಿಶಿಷ್ಟ ಜಾತಿ, ವರ್ಗಗಳ ವಿಜಿಲೆನ್ಸ್ ಸಮಿತಿ ಸಭೆಯಲ್ಲಿ ದಿಣ್ಣೂರು ಗ್ರಾಮದ ದಲಿತರ ಜಮೀನುಗಳನ್ನು ಅರಣ್ಯಾಧಿಕಾರಿಗಳು ಅಕ್ರಮವಾಗಿ, ಮನೆಗಳನ್ನು ಒಡೆದುಹಾಕಿ ಜಮೀನು ಕಬ್ಜಾ ಮಾಡಿದ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ. ಇದು ಕೋರ್ಟ್ ಆದೇಶ ಇರುವುದೇ ಬೇರೆ ಎಂದು ಆಕ್ಷೇಪಿಸಿದರು. 711 ಎಕರೆ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಅವರು ಹೇಳಿಕೊಂಡಿದ್ದಾರೆ. 250-300 ಎಕರೆ ಕೆಐಡಿಬಿ ವಶದಲ್ಲಿದೆ. ಈಗಾಗಲೇ ಕಾರ್ಖಾನೆಗಳನ್ನು ನಿರ್ಮಿಸಿದ್ದಾರೆ. 250 ಎಕರೆ ರೈಲ್ವೆಗೆ ಸೇರಿದೆ. ಕೆಲವರು ಖಾಸಗಿಯಾಗಿ ಜಾಗ ಪಡೆದು ಕಾರ್ಖಾನೆಗಳನ್ನು ನಿರ್ಮಿಸಿದ್ದಾರೆ. ಅಲ್ಲಿ ಅಪಾರ್ಟ್‍ಮೆಂಟ್‍ಗಳೂ ಬಂದಿವೆ ಎಂದು ವಿವರಿಸಿದರು. ಮೆಟ್ರೋಗೆ 45 ಎಕರೆ ಕೊಟ್ಟಿದೆ. ಉಳಿದಿರುವುದು ಕೇವಲ 120 ಎಕರೆ. ಇದು ಪಕ್ಕಾ ಆ ಊರಿನ ದಲಿತರ…
ಮಂಡ್ಯ: ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಡಿದ್ದು ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ? ಎಂಬುದಾಗಿ ಮದ್ದೂರು ಶಾಸಕ ಕೆ.ಎಂ ಉದಯ್ ಪ್ರಶ್ನಿಸಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ. ಬೆಳ್ಳೂರು ಗ್ರಾಮದಲ್ಲಿ ಶಾಸಕ ಕದಲೂರು ಉದಯ್ ಮಾತನಾಡಿ, RSSನ ಗೀತೆ ಯಾವುದೋ ಸಂಸ್ಥೆಗೋ, ಪಕ್ಷಕ್ಕೋ, ಜಾತಿಗೋ ಸೇರಿದೆಯಾ? ಆಗಂತ ಯಾರಾದ್ರು ಅವರದ್ದು ಎಂದು ಬರೆದು ಕೊಟ್ಟಿದ್ದಾರಾ? ಆ ಗೀತೆನಾ ಯಾರು ಬೇಕಾದ್ರು ಎಲ್ಲಾದ್ರು ಹಾಡಬಹುದು ಎಂದರು. ದಾಸಯ್ಯನು ಹಾಡ್ತಾನೆ ಓರ್ವ ಫೇಮಸ್ ಸಿಂಗರ್ ಕೂಡ ಹಾಡ್ತಾನೆ. ಅಗಂತ ಅದು ಆ ಪಕ್ಷಕ್ಕೋ ಸಂಸ್ಥೆಗೋ ಆ ಜಾತಿಗೋ ಸೀಮಿತಾ ಅಂತಲ್ಲ. ಅದು ದೇವರ ಹಾಡು ಅದನ್ನ ನೀವು ಹೇಂಗೆ RSS ಗೀತೆ ಅಂತೀರಾ?. ಅದೇನ್ ಬರೆದು ಕೊಟ್ಬಿಟ್ಟಿದ್ದಾರಾ RSS ಗೆ ಅಂತಾ. ಈ ಬಗ್ಗೆ ಇವತ್ತು ಡಿಕೆಶಿ ಕ್ಷಮೆ ಕೇಳಿರೋದು ನನಗೆ ಗೊತ್ತಿಲ್ಲ. ಆಗಂತ ಆ ಗೀತೆನಾ ಯಾರಿಗೂ ರಿಸರ್ವ್ ಅಲ್ಲ. ಯಾರು ಯಾವ ಗೀತೆ…
ಮಂಡ್ಯ : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ರೂಪುರೇಷೆ ತಯಾರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ವ್ಯಕ್ತಪಡಿಸಿದರು. ಮದ್ದೂರು ತಾಲೂಕಿನ ಕೆ.ಬೆಳ್ಳೂರು ಗ್ರಾಮದಲ್ಲಿ ಮಂಗಳವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪ್ರಾರಂಭಿಸಿರುವ ಪಶು ಚಿಕಿತ್ಸಾಲಯದ ಉದ್ಘಾಟಿಸಿ ಅವರು ಮಾತನಾಡಿದರು. ಕೆ.ಬೆಳ್ಳೂರು ಪಕ್ಷಿಗಳಿಗೆ ಹೆಸರುವಾಸಿಯಾದ ಗ್ರಾಮವಾಗಿದ್ದು, ಇಲ್ಲಿಗೆ ದೇಶ ವಿದೇಶಗಳಿಂದ ಹಲವು ಪ್ರಭೇದದ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಆದ್ದರಿಂದ ಈ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಪ್ರವಾಸಿಗರಿಗೆ ಹಾಗೂ ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಇಲ್ಲಿಗೆ ಆಗಮಿಸುವ ಪಕ್ಷಿಗಳಿಗೆ ಏನು ತೊಂದ್ರೆ ಆದರೂ ದೂರದ ಊರುಗಳಿಗೆ ಹೋಗಿ ಚಿಕಿತ್ಸೆ ಕೊಡಿಸಬೇಕಿತ್ತು. ಪಕ್ಷಿಗಳ ಆರೋಗ್ಯದ ದೃಷ್ಟಿಯಿಂದ ಪಶು ಚಿಕಿತ್ಸಾಲಯನ್ನು ಪ್ರಾರಂಭಿಸಲಾಗಿದೆ ಎಂದರು. ಗ್ರಾಮಕ್ಕೆ ಹೊರ ದೇಶಗಳಿಂದ ಪಕ್ಷಿಗಳು ಹೆಚ್ಚಾಗಿ ಬರುತ್ತವೆ. ಅವುಗಳಿಗೆ ಅನುಕೂಲಕ್ಕೆ ತಕ್ಕಂತೆ…
ಶಿವಮೊಗ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 5 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಹಾಗೂ 10ನೇ ತರಗತಿ ನಂತರದ ಕೋರ್ಸ್/ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ. ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ಹೆಚ್ಚಾಗಿ ವಾಸಿಸುವ ಕಾಲೋನಿಗಳಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿ, ಮೂಲಭೂತ ಸೌಕರ್ಯಗಳು, ವಸತಿ ರಹಿತರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಮೂಲಕ ಮನೆಗಳ ನಿರ್ಮಾಣ ಮಾಡಲು ರೂ.1.20 ಲಕ್ಷಗಳ ಸಹಾಯಧನ, 1 ರಿಂದ 10 ನೇ ತರಗತಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 2000 ಹಾಗೂ ಮೆಟ್ರಿಕ್ ನಂತರದ ಐಟಿಐ, ಪಿಯುಸಿ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.3000, ಪದವಿ/ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೂ.4000 ಹಾಗೂ ತಾಂತ್ರಿಕ ವೃತ್ತಿಪರ ಕೊರ್ಸ್ಗಳಿಗೆ ರೂ. 5000 ವಿಶೇಷ ಸಹಾಯ ಧನ…
ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ತಾತ್ಕಾಲಿಕ ಸಂಚಾರಿ ವಾಹನಗಳ ವ್ಯವಸ್ಥೆಯನ್ನು ಎಲ್ಲಾ ವಾರ್ಡ್ ಗಳಲ್ಲಿ ಮಾಡಿಕೊಳ್ಳಲಾಗಿದೆ ಎಂದು ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ. ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ. ಅದರ ಸಂಪೂರ್ಣ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಬಿಬಿಎಂಪಿ ವೆಬ್ ಸೈಟ್ ಲಿಂಕ್ https://apps.bbmpgov.in/ganesh2025/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಪ್ರಮುಖ ಕಲ್ಯಾಣಿಗಳಲ್ಲಿ ಅಗತ್ಯ ವ್ಯವಸ್ಥೆ: ಪ್ರತಿ ವರ್ಷದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳಾದ ಸ್ಯಾಂಕಿಕೆರೆ, ಹಲಸೂರು ಕರೆ, ಯಡಿಯೂರು ಕೆರೆ ಹಾಗೂ ಹೆಬ್ಬಾಳ ಕೆರೆ ಹಾಗೂ ಇತರೆ ಕೆರೆಗಳ ಅಂಗಳದಲ್ಲಿರುವ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡಿಂಗ್‌ಗಳ ಅಳವಡಿಕೆ, ನುರಿತ ಈಜುಗಾರರ/ಜೀವ ರಕ್ಷಕರ ನಿಯೋಜನೆ,…













