Author: kannadanewsnow09

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, “ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯ 31.12.2024 ರ ನಂತರವೂ ಸಾಲ ನೀಡುವ ಅವಧಿಯನ್ನು ಪುನರ್ರಚನೆ ಮತ್ತು ವಿಸ್ತರಿಸಲು” ಅನುಮೋದನೆ ನೀಡಿದೆ. ಸಾಲ ನೀಡುವ ಅವಧಿಯನ್ನು ಈಗ ಮಾರ್ಚ್ 31, 2030 ರವರೆಗೆ ವಿಸ್ತರಿಸಲಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, “ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (PM SWANidhi) ಯೋಜನೆಯ 31.12.2024 ರ ನಂತರವೂ ಸಾಲ ನೀಡುವ ಅವಧಿಯನ್ನು ಪುನರ್ರಚಿಸಲು ಮತ್ತು ವಿಸ್ತರಿಸಲು” ಅನುಮೋದನೆ ನೀಡಿದೆ. ಸಾಲ ನೀಡುವ ಅವಧಿಯನ್ನು ಈಗ ಮಾರ್ಚ್ 31, 2030 ರವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯ ಒಟ್ಟು ವೆಚ್ಚ *7,332 ಕೋಟಿ. ಪುನರ್ರಚಿಸಲಾದ ಯೋಜನೆಯು 50 ಲಕ್ಷ ಹೊಸ ಫಲಾನುಭವಿಗಳನ್ನು ಒಳಗೊಂಡಂತೆ 1.15 ಕೋಟಿ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ.…

Read More

ಬೆಂಗಳೂರು: ನಗರದಲ್ಲಿ ಇಂದು ನಿರ್ಮಾಣ ಹಂತದ ಕಟ್ಟಡದ ಸ್ಲ್ಯಾಬ್ ಕುಸಿತಗೊಂಡ ಪರಿಣಾಮವಾಗಿ ಗಾರೆ ಕೆಲಸದ ಮೇಸ್ತ್ರಿ ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಇದೇ ದುರಂತದಲ್ಲಿ ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಂಗಳೂರಿನ ಸಂಪಿಗೆಹಳ್ಳಿಯ ಅಗ್ರಹಾರದಲ್ಲಿ ನಿರ್ಮಾಣ ಹಂತದ ಕಟ್ಟಡದ ಸ್ಲ್ಯಾಬ್ ಕುಸಿತಗೊಂಡಿದೆ. ಈ ದುರ್ಘಟನೆಯಲ್ಲಿ ಬಿಹಾರ ಮೂಲದ ಗಾರೆ ಮೇಸ್ತ್ರಿ ಶಕಲ್ ದಾಸ್(35) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಈ ದುರಂತದಲ್ಲಿ ಮತ್ತೋರ್ವ ಕಾರ್ಮಿಕ ನೀರಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಚಿಕ್ಕಬಳ್ಳಾಪುರ: ಇಂದು ಗಣೇಶ ಚತುರ್ಥಿಯ ಶುಭ ಸಂದರ್ಭ. ಗಣಪತಿಯ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಎನ್ನುವ ಸಂಪ್ರದಾಯವಿದೆ. ವಾಸ್ತವವಾಗಿ ಗಣಪತಿಯು ಎಲ್ಲಿಗೂ ಹೋಗುವುದೂ ಇಲ್ಲ, ಎಲ್ಲಿಂದಲೂ ಬರುವುದೂ ಇಲ್ಲ. ಅವನು ಸದಾ ನಮ್ಮೊಂದಿಗೆ ಇರುತ್ತಾನೆ. ನಮ್ಮನ್ನು ಅತ್ಯಂತ ಹತ್ತಿರದಿಂದ ಗಮನಿಸಿ ಮಾರ್ಗದರ್ಶನ ನೀಡುತ್ತಾನೆ. ಅವನಿಂದ ನಾವು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಆದರೆ ಒಂದು ಮಾತನ್ನು ಎಲ್ಲ ಭಕ್ತರೂ ಗ್ರಹಿಸಬೇಕು. ಗಣಪತಿ ಪ್ರತಿಷ್ಠಾಪನೆ ಮಾಡಿದಾಗ ಆ ಪರಿಸರದಲ್ಲಿ ಶ್ರದ್ಧೆ-ಗೌರವ ಇರಬೇಕು. ಗಣಪತಿಯ ಪೂಜಾ ವಿಧಿಗಳು ಸರಿಯಾದ ಕ್ರಮದಲ್ಲಿ ನಡೆಯಬೇಕು. ಭಾರತದಲ್ಲಿ ಗಣೇಶನ ಹಬ್ಬ ಅತ್ಯಂತ ಜನಪ್ರಿಯವಾದುದು. ಭಾರತದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ಹಿಂದೂಗಳು ಒಗ್ಗೂಡಲು ನಿರ್ಬಂಧವಿತ್ತು. ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಪದ್ಧತಿ ಆರಂಭಿಸುವ ಮೂಲಕ ಈ ಹಬ್ಬವನ್ನು ಸಂಘಟನೆಗೆ ಶ್ರೀಕಾರ ಹಾಕಲು ಬಳಸಿದರು. ಮಹಾರಾಷ್ಟ್ರದಲ್ಲಿ ಇದು ಆರಂಭವಾದರೂ ಈಗ ಇಡೀ ದೇಶಕ್ಕೆ ಇದು ವ್ಯಾಪಿಸಿದೆ. ಎಷ್ಟೋ ಕುಟುಂಬಗಳಲ್ಲಿ ತಾವೇ ಸ್ವತಃ ರೂಪಿಸಿದ ಗಣಪತಿ ವಿಗ್ರಹವನ್ನು ಪೂಜಿಸುತ್ತಾರೆ. ಕೆಲವರು ಕೊಂಡು ತಂದ ವಿಗ್ರಹವನ್ನು ಮನೆಯಲ್ಲಿ…

Read More

ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಸ್ಲ್ಯಾಬ್ ಕುಸಿತಗೊಂಡು ಓರ್ವ ಕಾರ್ಮಿಕ ಸಾವನ್ನಪ್ಪಿ, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವಂತ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಸಂಪಿಗೆಹಳ್ಳಿಯ ಅಗ್ರಹಾರದಲ್ಲಿ ನಿರ್ಮಾಣ ಹಂತದ ಕಟ್ಟಡದ ಸ್ಲ್ಯಾಬ್ ಕುಸಿತಗೊಂಡಿದೆ. ಈ ದುರ್ಘಟನೆಯಲ್ಲಿ ಬಿಹಾರ ಮೂಲದ ಓರ್ವ ಕಟ್ಟಡ ಕಾರ್ಮಿಕ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇನ್ನೂ ಓರ್ವ ಕಾರ್ಮಿಕ ಸಾವನ್ನಪ್ಪಿದ್ದರೇ, ಮತ್ತೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. https://kannadanewsnow.com/kannada/why-is-it-necessary-to-offer-a-prayer-in-front-of-ganapati/ https://kannadanewsnow.com/kannada/mysore-dasara-hindu-festival-yaduveer-odefiers-return-to-dk-shivakumar/

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂದು ಗಣೇಶ ಚತುರ್ಥಿಯ ಶುಭ ಸಂದರ್ಭ. ಗಣಪತಿಯ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಎನ್ನುವ ಸಂಪ್ರದಾಯವಿದೆ. ವಾಸ್ತವವಾಗಿ ಗಣಪತಿಯು ಎಲ್ಲಿಗೂ ಹೋಗುವುದೂ ಇಲ್ಲ, ಎಲ್ಲಿಂದಲೂ ಬರುವುದೂ ಇಲ್ಲ. ಅವನು ಸದಾ ನಮ್ಮೊಂದಿಗೆ ಇರುತ್ತಾನೆ. ನಮ್ಮನ್ನು ಅತ್ಯಂತ ಹತ್ತಿರದಿಂದ ಗಮನಿಸಿ ಮಾರ್ಗದರ್ಶನ ನೀಡುತ್ತಾನೆ. ಅವನಿಂದ ನಾವು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಆದರೆ ಒಂದು ಮಾತನ್ನು ಎಲ್ಲ ಭಕ್ತರೂ ಗ್ರಹಿಸಬೇಕು. ಗಣಪತಿ ಪ್ರತಿಷ್ಠಾಪನೆ ಮಾಡಿದಾಗ ಆ ಪರಿಸರದಲ್ಲಿ ಶ್ರದ್ಧೆ-ಗೌರವ ಇರಬೇಕು. ಗಣಪತಿಯ ಪೂಜಾ ವಿಧಿಗಳು ಸರಿಯಾದ ಕ್ರಮದಲ್ಲಿ ನಡೆಯಬೇಕು. ಭಾರತದಲ್ಲಿ ಗಣೇಶನ ಹಬ್ಬ ಅತ್ಯಂತ ಜನಪ್ರಿಯವಾದುದು. ಭಾರತದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ಹಿಂದೂಗಳು ಒಗ್ಗೂಡಲು ನಿರ್ಬಂಧವಿತ್ತು. ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಪದ್ಧತಿ ಆರಂಭಿಸುವ ಮೂಲಕ ಈ ಹಬ್ಬವನ್ನು ಸಂಘಟನೆಗೆ ಶ್ರೀಕಾರ ಹಾಕಲು ಬಳಸಿದರು. ಮಹಾರಾಷ್ಟ್ರದಲ್ಲಿ ಇದು ಆರಂಭವಾದರೂ ಈಗ ಇಡೀ ದೇಶಕ್ಕೆ ಇದು ವ್ಯಾಪಿಸಿದೆ. ಎಷ್ಟೋ ಕುಟುಂಬಗಳಲ್ಲಿ ತಾವೇ ಸ್ವತಃ ರೂಪಿಸಿದ ಗಣಪತಿ ವಿಗ್ರಹವನ್ನು ಪೂಜಿಸುತ್ತಾರೆ. ಕೆಲವರು ಕೊಂಡು ತಂದ…

Read More

ಮೈಸೂರು: ದಸರಾ ನಮ್ಮ ನಾಡಿನ ಅತಿದೊಡ್ಡ ಸಾಂಸ್ಕೃತಿಕ ಸಂಭ್ರಮ. ಎಲ್ಲ ಧರ್ಮದವರು ಪಾಲ್ಗೊಳ್ಳಬಹುದು, ಆದರೆ ಮೂಲತಃ ಅದು ಹಿಂದೂ ಹಬ್ಬ. ಅದರ ದಿನಾಂಕವನ್ನು ನಿಗದಿಪಡಿಸುವುದು ಹಿಂದೂ ಪಂಚಾಂಗ. ಯಾರದೋ ಇಚ್ಛೆ-ಮನೋಭಾವಕ್ಕೆ ಅನುಗುಣವಾಗಿ ಬದಲಾಯಿಸುವ ಹಬ್ಬವಲ್ಲ ಎಂಬುದಾಗಿ ಸಂಸದ ಯದುವೀರ್ ಒಡೆಯರ್ ಹೇಳುವ ಮೂಲಕ, ಡಿಸಿಎಂ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಚಾಮುಂಡಿ ಬೆಟ್ಟ ಎಲ್ಲ ಧರ್ಮ–ಸಮುದಾಯದವರಿಗೂ ಮುಕ್ತವಾಗಿ ತೆರೆದಿದೆ. ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ-ಧರ್ಮಗಳಲ್ಲಿದ್ದಾರೆ ಎಂದಿದ್ದಾರೆ. ಆದರೆ, ಚಾಮುಂಡಿ ಬೆಟ್ಟ ಒಂದು ಶಕ್ತಿಪೀಠ. ತಾಯಿ ಚಾಮುಂಡೇಶ್ವರಿ ಹಿಂದೂ ದೇವಿ – ಆಕೆಯ ಉಲ್ಲೇಖ ಹಿಂದೂ ಗ್ರಂಥವಾದ ಮಾರ್ಕಂಡೇಯ ಪುರಾಣದ ದೇವಿ ಮಹಾತ್ಮ್ಯದಲ್ಲಿದೆ; ಬೇರೆ ಧರ್ಮಗಳ ಗ್ರಂಥಗಳಲ್ಲಿ ಇಲ್ಲ. ಪ್ರತಿದಿನವೂ ಹಿಂದೂ ಶಾಸ್ತ್ರಾನುಸಾರವೇ ಪೂಜೆ–ಪರಂಪರೆ ನಡೆಯುತ್ತಿವೆ. ಇಲ್ಲಿಗೆ ಬರುವ ಎಲ್ಲರೂ ಆಕೆಯನ್ನು ಹಿಂದೂ ದೇವಿಯಾಗಿಯೇ ಆರಾಧಿಸುತ್ತಾರೆ ತಿಳಿಸಿದ್ದಾರೆ. ದಸರಾ ನಮ್ಮ ನಾಡಿನ ಅತಿದೊಡ್ಡ ಸಾಂಸ್ಕೃತಿಕ ಸಂಭ್ರಮ. ಎಲ್ಲ ಧರ್ಮದವರು ಪಾಲ್ಗೊಳ್ಳಬಹುದು,…

Read More

ಲಕ್ನೋ: ಸಾಲದ ಬಾಧೆಯಿಂದ ಬೇಸತ್ತಂತ ದಂಪತಿಗಳು ತಮ್ಮ ನಾಲ್ಕು ತಿಂಗಳ ಮಗುವಿಗೆ ವಿಶವಿಟ್ಟು, ತಾವು ಆತ್ಮಹತ್ಯೆಗೆ ಮಾಡಿಕೊಂಡಿರುವಂತ ಧಾರುಣ ಘಟನೆ ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ನಡೆದಿದೆ. ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ಕೈಮಗ್ಗ ಉದ್ಯಮಿ ಸಚಿನ್ ಗ್ರೋವರ್(30) ಮತ್ತು ಪತ್ನಿ ಶಿವಾನಿ(28) ಸಾಲದ ಸುಳಿಗೆ ಸಿಲುಕಿದ್ದರು. ಸಾಲದ ಬಾಧೆಯಿಂದ ಬೇಸತ್ತಂತ ದಂಪತಿಗಳು ಬುಧವಾರ ಬೆಳಗ್ಗೆ ತಮ್ಮ ನಾಲ್ಕು ತಿಂಗಳ ಗಂಡು ಮಗು ಫತೇಹ್ ಗೆ ವಿಷ ವಿಟ್ಟು, ತಾವೂ ಮನೆಯಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಉದ್ಯಮಿ ಸಚಿನ್ ತಾನು ಸಾಲದ ಹೊರೆಯಿಂದ ಬಳಲುತ್ತಿದ್ದೇನೆ. ಆದಾಯದ ಕೊರತೆಯಿಂದಾಗಿ ನೊಂದು ಹೋಗಿದ್ದೇನೆ. ದಯವಿಟ್ಟು ನಮ್ಮ ಕಾರು, ಮನೆ ಮಾರಾಟ ಮಾಡಿ ಸಾಲ ತೀರಿಸಿಬಿಡಿ. ಸಾಲ ಕೊಟ್ಟವರು ನೊಂದುಕೊಳ್ಳಬಾರದು ಎಂಬುದಾಗಿ ಹೇಳಿದ್ದಾರೆ. ಅಂದಹಾಗೇ ದಂಪತಿಗಳು ಮಂಗಳವಾರ ರಾತ್ರಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದರೇ, ಮಗುವಿನ ಶವವು ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿದೆ. ಸಚಿನ್-ಶಿವಾನಿ…

Read More

ದಕ್ಷಿಣ ಕನ್ನಡ: ನಾನು ಹೇಳಿದ್ದು ಎಲ್ಲವೂ ಸುಳ್ಳು. ತಪ್ಪಾಯ್ತು. ನನ್ನನ್ನು ಬಿಟ್ಟು ಬಿಡಿ. ಕೇಸ್ ಹಿಂಪಡೆಯುತ್ತೇನೆ ಎಂಬುದಾಗಿ ಸುಜಾತಾ ಭಟ್ ಕಣ್ಣೀರಿಟ್ಟಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿನ ಎಸ್ಐಟಿ ಪೊಲೀಸರ ವಿಚಾರಣೆಗೆ ಹಾಜರಾದಂತ ಅವರು, ನಾನು ಹೇಳಿದ್ದು ಎಲ್ಲವೂ ಸುಳ್ಳು, ತಪ್ಪಾಯ್ತು. ನನ್ನ ಕೇಸ್ ಹಿಂಪಡೆಯುತ್ತೇನೆ. ಬಿಟ್ಟು ಬಿಡಿ ಎಂಬುದಾಗಿ ಗೋಗರೆದಿರುವುದಾಗಿ ಹೇಳಲಾಗುತ್ತಿದೆ. ವಿಚಾರಣೆಯ ವೇಳೆಯಲ್ಲಿ ದೂರು ಹಿಂಪಡೆಯುವುದಾಗಿ ಸುಜಾತಾ ಭಟ್ ಹೇಳಿದ್ದಾರೆ. ಆದರೇ ಸುಜಾತಾ ಭಟ್ ಹೇಳಿಕೆಗೆ ಎಸ್ಐಟಿ ಅಧಿಕಾರಿಗಳು ಸಮ್ಮತಿಸಿಲ್ಲ. ಬದಲಾಗಿ ವಿಚಾರಣೆಯನ್ನು ಎಸ್ಐಟಿ ಅಧಿಕಾರಿಗಳು ಮುಂದುವರೆಸಿದ್ದಾರೆ. ಸುಜಾತ ಭಟ್ ಗೆ ಪ್ರಶ್ನೆಗಳ ಸುರಿಮಳೆಯನ್ನೇ ಕೇಳುತ್ತಿದ್ದಾರೆ. ಇಂದಿನ ಎಸ್ಐಟಿ ವಿಚಾರಣೆ ವೇಳೆಯಲ್ಲಿ ಎಲ್ಲಾ ಸತ್ಯವನ್ನು ಸುಜಾತಾ ಭಟ್ ಹೇಳಿದ್ದಾರೆ ಎನ್ನಲಾಗುತ್ತಿದೆ. ನಾನು ಹೇಳಿದ್ದೆಲ್ಲ ಸುಳ್ಳು. ತಪ್ಪಾಯ್ತು ಬಿಟ್ಟುಬಿಡಿ ಎಂಬುದಾಗಿ ಕಣ್ಣೀರನ್ನು ಎಸ್ಐಟಿ ಅಧಿಕಾರಿಗಳ ಮುಂದೆ ಸುಜಾತಾ ಭಟ್ ಹಾಕಿದ್ದಾರೆ. ಅಲ್ಲದೇ ಸುಳ್ಳು ಹೇಳಿದ್ದರ ಹಿಂದಿರುವವರ ಹೆಸರನ್ನು ಕೂಡ ಸುಜಾತಾ ಭಟ್ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸುಜಾತಾ ಭಟ್…

Read More

ಬೆಂಗಳೂರು: ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಕರ್ನಾಟಕ ಹಾಲು ಒಕ್ಕೂಟ (Karnataka Milk Federation -KMF) ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರಲ್ಲಿ ಲ್ಯಾಕ್ಟೋಸ್ ಮುಕ್ತ ಹಾಲನ್ನು ಪರಿಚಯಿಸಲು ಯೋಜಿಸುತ್ತಿದೆ. ಇದಲ್ಲದೆ, ಕೆಎಂಎಫ್ ಪ್ರೋಟೀನ್ ಭರಿತ ಹಾಲು ಮತ್ತು ಎಮ್ಮೆ ಹಾಲಿಗೆ ಮಾರುಕಟ್ಟೆಯನ್ನು ಅನ್ವೇಷಿಸಲು ಯೋಜಿಸುತ್ತಿದೆ. ಈ ವಲಯದಲ್ಲಿ ಸಾಕಷ್ಟು ಸ್ಪರ್ಧೆ ಇದೆ ಮತ್ತು ನಮ್ಮ ಸ್ಪರ್ಧಿಗಳು ಅಂತಹ ಹೊಸ ಬಗೆಯ ಹಾಲನ್ನು ಪರಿಚಯಿಸುತ್ತಿದ್ದಾರೆ. ಅದಕ್ಕೆ ಬೇಡಿಕೆಯೂ ಇದೆ. ಆದ್ದರಿಂದ, ನಾವು ಅಂತಹ ಹೊಸ ಉತ್ಪನ್ನಗಳನ್ನು ಪ್ರಯತ್ನಿಸುತ್ತಿದ್ದೇವೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಬಿ ಹೇಳಿದರು. ಎಮ್ಮೆ ಹಾಲು ಕೂಡ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಮತ್ತು ಆದ್ದರಿಂದ, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅಧಿಕಾರಿಗಳು ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲು ಯೋಜಿಸುತ್ತಿದ್ದಾರೆ. “ಪ್ರೋಟೀನ್ ಭರಿತ ಆಹಾರಗಳು ಈಗ ಜನರಲ್ಲಿ, ವಿಶೇಷವಾಗಿ ಯುವಕರಲ್ಲಿ ಬಹಳ ಜನಪ್ರಿಯವಾಗಿವೆ. ಆದ್ದರಿಂದ, ಈ ವರ್ಗದ ಗ್ರಾಹಕರನ್ನು ಪೂರೈಸಲು ಪ್ರೋಟೀನ್ ಭರಿತ…

Read More

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಸಂಬಳ ಪ್ಯಾಕೇಜ್ ಎಂದು ತಮ್ಮ ಬ್ಯಾಂಕ್ ಖಾತೆಯನ್ನು ನೋಂದಾಯಿಸಿಕೊಳ್ಳಲು ಹಾಗೂ ಪಿಎಂಇಬಿವೈ ಮತ್ತು ಪಿಎಂಜೆಜೆಬಿವೈ ವಿಮಾ ಯೋಜನೆ ಪಡೆಯಲು ಸೂಚಿಸಲಾಗಿದೆ. ಅದರಂತೆ ಎ ಗುಂಪಿನ ಅಧಿಕಾರಿಗಳಇಗೆ ಹೆಚ್ ಆರ್ ಎಂಎಸ್ ನಲ್ಲಿ ನೋಂದಾಯಿಸಲು ದಿನಾಂಕ 31-08-2025ರವರೆಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಈ ಕೊನೆಯ ದಿನಾಂಕದೊಳಗೆ ನೋಂದಾಯಿಸಿಕೊಳ್ಳದಿದ್ದರೇ ವೇತನವನ್ನು ಹೆಚ್ ಆರ್ ಎಂ ಎಸ್ ನಲ್ಲಿ ತಡೆಹಿಡಿಯಲಾಗುವುದು ಎಂಬುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿರುವಂತ ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು,  ಸರ್ಕಾರದ ಇಲಾಖೆಗಳಲ್ಲಿ ನೇರವಾಗಿ/ಪರೋಕ್ಷವಾಗಿ ಇರುವ ವಿವಿಧ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಜಾಲವನ್ನು ಜಾರಿಗೆ ತರಲು ಅಥವಾ ಹೆಚ್ಚಿಸಲು ಉದ್ದೇಶಿಸಿರುವ ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ-ಸಿಎಎಂ/1/2025, ದಿನಾಂಕ: 21.02.2025 ರ ಬಗ್ಗೆ ತಮ್ಮ ಗಮನವನ್ನು ಸೆಳೆಯಲಾಗಿದೆ. ಮೇಲಿನ ಸರ್ಕಾರಿ ಆದೇಶದ ಉದ್ದೇಶವೆಂದರೆ ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜುಗಳಲ್ಲಿ ಉಚಿತವಾಗಿ ಅಥವಾ…

Read More