Author: kannadanewsnow09

ಬೆಂಗಳೂರು: ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆ ಹಣ ಬಾರದೇ ಇದ್ದವರಿಗೆ ಮತ್ತೊಂದು ಅಪ್ ಡೇಟ್ ನೀಡಲಾಗಿದೆ. ಅದೇ ಯಜಮಾನಿಯರಿಗೆ ಹಣ ಬಾರದೇ ಇದ್ರೆ, ಈ ಸಮಸ್ಯೆ ನಿವಾರಿಸಿಕೊಳ್ಳುವಂತೆ ಸೂಚಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಗೃಹ ಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಂಡು, ಕೆಲ ಯಜಮಾನಿ ಮಹಿಳೆಯರಿಗೆ ಹಣ ಬಾರದೇ ಇರುವ ಬಗ್ಗೆ ದೂರುಗಳು ಬರುತ್ತಿವೆ. ಈ ಸಮಸ್ಯೆ ನಿವಾರಣೆಗಾಗಿ ಯಜಮಾನಿಯರು ಕೆಲ ತಾಂತ್ರಿಕ ಸಮಸ್ಯೆ ನಿವಾರಿಸಿಕೊಳ್ಳುವಂತೆ ತಿಳಿಸಿದೆ. ಸರ್ಕಾರದ ಗೃಹ ಲಕ್ಷ್ಮೀ ಯೋಜನೆ ರೂ.2000 ಹಣ ಬಾರದಂತ ಯಜಮಾನಿ ಮಹಿಳೆಯರು, ತಪ್ಪದೇ ಕೆವೈಸಿ ಮಾಡಿಸುವಂತೆ ತಿಳಿಸಿದೆ. ಅಲ್ಲದೇ ಬ್ಯಾಂಗ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಬೇಕು. ರೇಷನ್ ಕಾರ್ಡ್ ನಲ್ಲಿರೋ ಪ್ರತಿಯೊಬ್ಬ ಸದಸ್ಯರ ಕೆವೈಸಿ ಅಪ್ ಡೇಟ್ ಆಗಿರಬೇಕು ಅಂತ ಹೇಳಿದೆ. ಇನ್ನೂ ರೇಷನ್ ಕಾರ್ಡ್ ಸದಸ್ಯರು ಬ್ಯಾಂಕ್ ಗಳಿಗೆ ತೆರಳಿ ತಮ್ಮ ಆಧಾರ್ ಸಂಖ್ಯೆ ನೀಡಿ, ಕೈವೈಸಿ ಅಪ್ ಡೇಟ್ ಮಾಡಿಸಬೇಕು. ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು…

Read More

ಬೆಂಗಳೂರು: ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಸರಬರಾಜಾಗುತ್ತಿರುವ ಕುಡಿಯುವ ನೀರು ಕಲುಷಿತಗೊಳ್ಳುವ ಪ್ರಕರಣಗಳು ಪುನಾರಾವರ್ತನೆಯಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೇ ಇರುವ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಲ್ಲಾ ಕಾರ್ಯಪಾಲಕ ಅಭಿಯಂತರರಿಗೆ ಸಚಿವರು ಪತ್ರ ಬರೆದು ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮತ್ತು ಆಯಾ ಗ್ರಾಮ ಪಂಚಾಯತಿ ಆದ್ಯ ಜವಾಬ್ದಾರಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಲ್ಲದೇ ಪ್ರಾಣಹಾನಿಗಳು ಕೂಡಾ ಸಂಭವಿಸಿರುತ್ತವೆ. ಇಂತಹ ಪ್ರಕರಣಗಳನ್ನು…

Read More

ನವದೆಹಲಿ: ಬಿಹಾರದ ಶೇಖ್ಪುರ ಜಿಲ್ಲೆಯ ಅರಿಯಾರಿ ಬ್ಲಾಕ್ನಲ್ಲಿರುವ ಮಂಕೌಲ್ ಮಿಡಲ್ ಸ್ಕೂಲ್ನಲ್ಲಿ ಇಂದು (ಮೇ 29) ಬೆಳಿಗ್ಗೆ ತೀವ್ರ ಶಾಖದ ಪರಿಸ್ಥಿತಿಗಳಿಂದಾಗಿ ಕನಿಷ್ಠ 50 ವಿದ್ಯಾರ್ಥಿಗಳು ಮೂರ್ಛೆ ತಪ್ಪಿದ್ದಾರೆ. ಆರಂಭದಲ್ಲಿ, ಆರು ವಿದ್ಯಾರ್ಥಿಗಳು ಪ್ರಜ್ಞೆ ಕಳೆದುಕೊಂಡರು, ಆದರೆ ನಂತರ, ಇನ್ನೂ ಅನೇಕ ವಿದ್ಯಾರ್ಥಿಗಳು ಕುಸಿಯಲು ಪ್ರಾರಂಭಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಗಾಗಿ ಸಭೆಗೆ ಹಾಜರಾಗಿ ನಂತರ ತರಗತಿಗೆ ತೆರಳಿದ ನಂತರ ಈ ಘಟನೆ ಪ್ರಾರಂಭವಾಯಿತು. ಇಡೀ ವಿಷಯವು ಶಾಲೆ ಮತ್ತು ಗ್ರಾಮದಲ್ಲಿ ಗೊಂದಲವನ್ನು ಸೃಷ್ಟಿಸಿತು. ಪ್ರಜ್ಞಾಹೀನ ವಿದ್ಯಾರ್ಥಿಗಳಿಗೆ ನೀರು ಮತ್ತು ಎಲೆಕ್ಟ್ರೋಲೈಟ್ಗಳನ್ನು ಒದಗಿಸಲಾಯಿತು ಮತ್ತು ಆಂಬ್ಯುಲೆನ್ಸ್ ಬರದ ಕಾರಣ ಅವರನ್ನು ತಕ್ಷಣ ಬೈಕ್ಗಳು, ಟೆಂಪೊಗಳು ಮತ್ತು ಇ-ರಿಕ್ಷಾಗಳಲ್ಲಿ ಜಿಲ್ಲೆಯ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. https://twitter.com/ANI/status/1795708511672004634 ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಪ್ರಸಾದ್ ಅವರು ಘಟನೆಯ ಬಗ್ಗೆ ಸಾರ್ವಜನಿಕ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರು ಮತ್ತು ಆಂಬ್ಯುಲೆನ್ಸ್ ಅನ್ನು ವಿನಂತಿಸಿದರು. ಆದಾಗ್ಯೂ, ಆಂಬ್ಯುಲೆನ್ಸ್ ತಡವಾಗಿ ಬಂದಿದ್ದರಿಂದ ಗ್ರಾಮಸ್ಥರು ಆಕ್ರೋಶಗೊಂಡರು, ನಂತರ ಅವರು ರಸ್ತೆಯನ್ನು ನಿರ್ಬಂಧಿಸಿ ಆಡಳಿತದ ವಿರುದ್ಧ…

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರು ತಮ್ಮ ವಿರುದ್ಧದ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಮೇ.31ಕ್ಕೆ ಕೋರ್ಟ್ ಮುಂದೂಡಿದೆ. ಅಶ್ಲೀಲ ವೀಡಿಯೋ ಕೇಸ್ ನಂತ್ರ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ ತಲೆ ಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಎಸ್ಐಟಿ ವಾರೆಂಟ್ ಕೂಡ ಪಡೆದಿದೆ. ಇದರ ನಡುವೆ ವಿದೇಶದಿಂದಲೇ ತಮ್ಮ ವಕೀಲರ ಮೂಲಕ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆ ಕೈಗೆತ್ತಿಕೊಂಡ ನಂತ್ರ, ಜಾಮೀನು ಅರ್ಜಿಯ ವಿಚಾರಣೆಯನ್ನು ಮೇ.31ಕ್ಕೆ ಮುಂದೂಡಿದೆ. ಮೇ.3ಕ್ಕೆ ಬೆಂಗಳೂರಿಗೆ ಪ್ರಜ್ವಲ್ ಬರುತ್ತಿದ್ದಾರೆ. ಅಂದೇ ವಿಚಾರಣೆ ನಡೆಸೋದಕ್ಕೆ ಅವಕಾಶ ನೀಡುವಂತೆ ಪ್ರಜ್ವಲ್ ಪರ ವಕೀಲರು ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮೇ.31ಕ್ಕೆ ಮುಂದೂಡಿಕೆ ಮಾಡಿದೆ. https://kannadanewsnow.com/kannada/woman-abduction-case-court-reserves-order-on-bhavani-revannas-bail-plea-on-may-31/ https://kannadanewsnow.com/kannada/link-pan-with-aadhaar-card-by-may-31-income-tax-department-to-taxpayers/

Read More

ಬೆಂಗಳೂರು: ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಮಹಿಳೆ ಅಪಹರಣ ಪ್ರಕರಣ ಸಂಬಂಧ ಭವಾನಿ ರೇವಣ್ಣ ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ನಡೆಸಿತು. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಾದ-ಪ್ರತಿ ವಾದ ಆಲಿಸಿದ ಬಳಿಕ, ಮೇ.31ಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಭವಾನಿ ರೇವಣ್ಣ ಸಲ್ಲಿಸಿದ್ದಂತ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಎಸ್ಐಟಿ ಪರ ಎಸ್ ಪಿಪಿ ಅವರು ಭವಾನಿ ರೇವಣ್ಣ ಅವರಿಗೆ ಜಾಮೀನು ನೀಡದಂತೆ ಆಕ್ಷೇಪಣೆಯನ್ನು ಸಲ್ಲಿಸಿ ವಾದ ಮಂಡಿಸಿದರು. ಭವಾನಿ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು ಜಾಮೀನು ನೀಡುವಂತೆ ಮನವಿ ಮಾಡಿದರು. ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ದಾಖಲಾಗಿದ್ದಂತ ಭವಾನಿ ರೇವಣ್ಣ ವಿರುದ್ಧದ ಮಹಿಳೆ ಅಪಹರಣ ಪ್ರಕರಣ ಸಂಬಂಧದ ಜಾಮೀನು ಅರ್ಜಿಯ ವಾದ ಪ್ರತಿವಾದ ಆಲಿಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಮೇ.31ಕ್ಕೆ ಆದೇಶ ಕಾಯ್ದಿರಿಸಿ ಮುಂದೂಡಿಕೆ ಮಾಡಿದೆ.…

Read More

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ಸಂಬಂಧ ಈಗಾಗಲೇ ಕಿಂಗ್ ಪಿನ್ ಶ್ರೀಕಿ ಆಲಿಯಾಸ್ ಶ್ರೀಕೃಷ್ಣನನ್ನು ಬಂಧಿಸಲಾಗಿದೆ. ಇದೇ ಪ್ರಕರಮದಲ್ಲಿ ಈಗ ಸಿಐಡಿ ಪೊಲೀಸರು, ಸೈಬರ್ ಕ್ರೈಂ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಾಧರ್ ಎಂಬುವರನ್ನು ಬಂಧಿಸಲಾಗಿದೆ. ಬಿಟ್ ಕಾಯಿನ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತ ಅದನ್ನು ಮೊದಲು ಟೇಕ್ ಓವರ್ ಮಾಡಿ, ತನಿಖೆ ನಡೆಸಿದ್ದೇ ಸೈಬರ್ ಕ್ರೈಂ ಠಾಣೆಯ ಪೊಲೀಸರು. ಅಂದು ಸೈಬರ್ ಕ್ರೈಂ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದಂತ ಚಂದ್ರಾಧರ್ ಅವರು, ಈ ಹಗರಣದಲ್ಲಿ ಭಾಗಿಯಾಗಿದ್ದರು ಎಂಬುದಾಗಿ ಸಿಐಡಿ ಅಧಿಕಾರಿಗಳ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದಂತ ಪೊಲೀಸರು ಇದೀಗ ಸಿಐಡಿ ಪೊಲೀಸರು, ಸೈಬರ್ ಕ್ರೈಂ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಾಧರ್ ಅವರನ್ನು ಬಂಧಿಸಿದ್ದಾರೆ. ಈ ಮೂಲಕ ಬಿಟ್ ಕಾಯಿನ್ ಹಗರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದಂತೆ ಆಗಿದೆ. https://kannadanewsnow.com/kannada/prajwal-revanna-to-be-in-germany-information-to-the-state-government-about-his-stay-in-dubai/ https://kannadanewsnow.com/kannada/link-pan-with-aadhaar-card-by-may-31-income-tax-department-to-taxpayers/

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿ ಇದ್ದಾರೆ ಎನ್ನಲಾಗುತ್ತಿತ್ತು. ಆದ್ರೇ ಅವರು ಅಲ್ಲಿಯೂ ಇಲ್ಲ. ಎಲ್ಲಿದ್ದೀಯಪ್ಪ ಪ್ರಜ್ವಲ್ ಅಂತ ನೋಡೋದಾದ್ರೇ, ರಾಜ್ಯ ಸರ್ಕಾರಕ್ಕೆ ಪ್ರಜ್ವಲ್ ದುಬೈನಲ್ಲಿ ಇರೋ ಮಾಹಿತಿ ಕಲೆ ಹಾಕಿದೆ ಅಂತ ತಿಳಿದು ಬಂದಿದೆ. ಮೇ.31ರಂದು ಬೆಂಗಳೂರಿಗೆ ವಿದೇಶದಿಂದ ಸಂಸದ ಪ್ರಜ್ವಲ್ ರೇವಣ್ಣ ವಾಪಾಸ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಇಂದು ತಮ್ಮ ವಿರುದ್ಧದ ಮೂರು ಪ್ರಕರಣಗಳಲ್ಲಿ ಜಾಮೀನಿಗಾಗಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ನಡುವೆ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿ ಇಲ್ಲ. ದುಬೈನಲ್ಲಿ ಇರೋ ಮಾಹಿತಿಯನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಿದೆ ಎನ್ನಲಾಗುತ್ತಿದೆ. ಜರ್ಮನಿಯಿಂದ ದುಬೈಗೆ ಹಾರಿರುವಂತ ಸಂಸದ ಪ್ರಜ್ವಲ್ ರೇವಣ್ಣ, ಅಲ್ಲಿ ಅಪಾರ್ಮೆಂಟ್ ಒಂದರಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಜ್ವಲ್ ರೇವಣ್ಣ ಅವರು ದುಬೈನ ಅಪಾರ್ಮೆಂಟ್ ಒಂದರಲ್ಲಿ ಉಳಿದುಕೊಳ್ಳೋದಕ್ಕೆ ಹಾಸನದ ಅವರ ಕೆಲ ಸ್ನೇಹಿತರು ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. https://kannadanewsnow.com/kannada/sandalwood-producers-brawl-case-a-ganesh-alleges-satish-attacked-with-spoon/ https://kannadanewsnow.com/kannada/link-pan-with-aadhaar-card-by-may-31-income-tax-department-to-taxpayers/

Read More

ಬೆಂಗಳೂರು: ಗೋಪಾ ಟ್ರಿಪ್ ಗೆ ತೆರಳಿದ್ದಂತ ವೇಳೆಯಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕರ ನಡುವೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಸ್ಪೂನ್ ನಿಂದ ನಿರ್ಮಾಪಕ ಸತೀಶ್ ಸಿಕ್ಕ ಸಿಕ್ಕವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸ್ವಲ್ಪ ಕೆಳಗೆ ಬಿದ್ದಿದ್ದರೇ ನನ್ನ ಕಣ್ಣೇ ಹೋಗುತ್ತಿತ್ತು ಅಂತ ಎ.ಗಣೇಶ್ ಗಂಭೀರ ಆರೋಪ ಮಾಡಿದ್ದಾರೆ. ನಿರ್ಮಾಪಕ ಎ.ಗಣೇಶ್ ಮತ್ತು ರಥಾವರ ಮಂಜುನಾಥ್ ಮೇಲೆ ಸತೀಶ್ ಆರ್ಯ ಎಂಬುವರು ಹಲ್ಲೆ ನಡೆಸಿದ್ದಾರೆ. ಗಲಾಟೆ ವೇಳೆ ಗಣೇಶ್​ ಮೂಗು ಹರಿದಿದ್ದು, 15 ಸ್ಟಿಚ್ ಹಾಕಲಾಗಿದೆ. ಸ್ಪೂನ್ ನಿಂದ ಸತೀಶ್ ಚುಚ್ಚಿದ್ದರಿಂದ ತನ್ನ ಕಣ್ಣಿಗೆ ಗಾಯವಾಗಿದೆ. ನನ್ನ ಮೇಲೆ ಅಲ್ಲದೇ ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ತಲೆಗೆ ಪೆಟ್ಟು ಬಿದ್ದಿದೆ ಅಂತ ಹೇಳಿದ್ದಾರೆ. ಇನ್ನೂ ಗೋವಾ ಗಲಾಟೆ ಸಂಬಂಧ ನಾಳೆ ಫಿಲ್ಮ್ ಚೇಂಬರ್​ನಲ್ಲಿ ಮೀಟಿಂಗ್ ಕರೆಯಲಾಗಿದೆ. ಈ ಘಟನೆ ಸಂಬಂಧ ಗೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಿದ್ದೇನೆ ಎಂದು ನಿರ್ಮಾಪಕ ಎ ಗಣೇಶ್​ ಮಾಹಿತಿ ಹಂಚಿಕೊಂಡಿದ್ದಾರೆ. https://kannadanewsnow.com/kannada/pornographic-video-case-prajwal-revanna-moves-court-seeking-anticipatory-bail/ https://kannadanewsnow.com/kannada/link-pan-with-aadhaar-card-by-may-31-income-tax-department-to-taxpayers/

Read More

ಬೆಂಗಳೂರು: ಅಶ್ಲೀಲ ವೀಡಿಯೋ ಕೇಸ್, ಮಹಿಳೆ ಅಪಹರಣ, ಹಾಸನ ಪೆನ್ ಡ್ರೈವ್ ವೈರಲ್ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅವರು ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಸಂಸದ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿರೋದಾಗಿ ತಿಳಿದು ಬಂದಿದೆ. ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವಂತ ಅವರು, ಮೂರು ಪ್ರಕರಣಗಳಲ್ಲಿ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. ವಿದೇಶದಲ್ಲಿ ಇರುವಂತ ಅವರು ತಮ್ಮ ವಕೀಲರ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅಂದಹಾಗೇ ಸಿಐಡಿ ಪೊಲೀಸರು ದಾಖಲಿಸಿಕೊಂಡಿರುವಂತ ಕ್ರೈಂ ನಂ.20/2024, ಸೈಬರ್ ಕ್ರೈಂ ನಂ.2/2024 ಹಾಗೂ ಹೊಳೆನರಸೀಪುರ ಠಾಣೆಯ ಕ್ರೈಂ ನಂ.107/2024 ಮೂರು ಪ್ರಕರಣಗಳಲ್ಲಿ ಜಾಮೀನು ನೀಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

Read More

ಯಾದಗಿರಿ: ಬಸ್ ನಿಲ್ದಾಣದಲ್ಲಿದ್ದಂತ ಬಸವಣ್ಣನ ಪೋಟೋ ತೆಗೆದು ಏಸು ಕ್ರಿಸ್ತನ ಪೋಟೋ ಹಾಕುವಂತೆ ವ್ಯಕ್ತಿಯೊಬ್ಬ ಕಿರಿಕ್ ಮಾಡಿದಂತ ಘಟನೆ ಸುರಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ಬಸ್ ನಿಲ್ದಾಣದಲ್ಲಿ ಕ್ರೈಸ್ತ ಅನುಯಾಯಿಯೊಬ್ಬ ವಿಶ್ವಗುರು ಬಸವಣ್ಣನಿಗೆ ಅವಹೇಳನಕಾರಿಯಾಗಿ ಮಾತನಾಡಿರೋದಾಗಿ ತಿಳಿದು ಬಂದಿದೆ. ಬಸ್ ನಿಲ್ದಾಣದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದಂತ ವ್ಯಕ್ತಿ, ಕ್ರೈಸ್ತ ಧರ್ಮದವರಿಗೆ ಅನ್ಯಾಯವಾಗಿದೆ. ಬಸ್ ನಿಲ್ದಾಣದಲ್ಲಿನ ಬಸವಣ್ಣನ ಪೋಟೋ ತೆಗೆದು, ಜೀಸಸ್ ಪೋಟೋ ಹಾಕುವಂತೆ ಮೊಂಡಾಟ ಮೆರೆದಿದ್ದಾನೆ. ಬಸ್ ನಿಲ್ದಾಣದಲ್ಲೇ ರಂಪಾಟ ಮಾಡುವ ವೇಳೆ ಸಾರ್ವಜನಿಕರು ವೀಡಿಯೋ ಮಾಡಿಕೊಂಡಿದ್ದು, ಇದೀಗ ವೀಡಿಯೋ ವೈರಲ್ ಆಗಿದೆ. ಅನಾಮಧೇಯ ವ್ಯಕ್ತಿಯ ವಿರುದ್ಧ ಕ್ರಮಕ್ಕಾಗಿ ಜನ ಆಗ್ರಹಿಸಿದ್ದಾರೆ. https://kannadanewsnow.com/kannada/link-pan-with-aadhaar-card-by-may-31-income-tax-department-to-taxpayers/ https://kannadanewsnow.com/kannada/valmiki-nigam-superintendent-suicide-case-cm-should-take-moral-responsibility-and-resign-says-n-ravikumar/

Read More