Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಸಾಗರ ತಾಲ್ಲೂಕನ್ನು ಜಿಲ್ಲೆ ಮಾಡಬೇಕು ಎಂಬುದಾಗಿ ಕಿಚ್ಚು ಹೆಚ್ಚಾಗಿದೆ. ಸಾಗರ ಜಿಲ್ಲಾ ಹೋರಾಟ ಸಮಿತಿಯಿಂದ ದಿನಾಂಕ 05-09-2025ರಂದು ಮಹತ್ವದ ನಾಗರೀಕರ ಸಭೆಯನ್ನು ಕರೆಯಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿಯಿಂದ ಮಾಹಿತಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರದ ಜನಗಣತಿ 2026 ಏಪ್ರಿಲ್.1ರಿಂದ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಅದಕ್ಕಿಂತ 3 ತಿಂಗಳ ಮೊದಲೇ ಹೊಸ ಜಿಲ್ಲೆ, ತಾಲ್ಲೂಕು ರಚನೆ ಸೇರಿದಂತೆ ಗಡಿಗಳಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಿತ ಬದಲಾವಣೆಗಳಿದ್ದರೇ, 2025ರ ಡಿಸೆಂಬರ್.31ರೊಳಗೆ ಮುಗಿಸಿಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ ಎಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಜಿಲ್ಲೆಯಲ್ಲಿ ಮತ್ತೊಂದು ಜಿಲ್ಲಾ ಕೇಂದ್ರ ಆಗುವ ಅರ್ಹತೆ ಇರುವುದು ಸಾಗರಕ್ಕೆ ಮಾತ್ರ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ದಿನಾಂಕ 05-09-2025ರ ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಸಾಗರದ ನಗರಸಭೆ ರಂಗಮಂದಿರದಲ್ಲಿ ಸಾಗರ ಜಿಲ್ಲೆ ರಚನೆಗೆ ಆಗ್ರಹಿಸುವ ಬಗ್ಗೆ ನಾಗರೀಕರ ಸಭೆ ಕರೆಯಲಾಗಿದೆ. ಈ ನಾಗರೀಕ ಸಭೆಗೆ ಪಕ್ಷಾತೀತ ಹೋರಾಟಕ್ಕೆ ಎಲ್ಲಾ ಸಮಾಜ, ಸಂಘ,…
ಚಿಕ್ಕಬಳ್ಳಾಪುರ: ಜಿಲ್ಲೆಯ ಫಾರ್ಮ್ ಹೌಸ್ ಒಂದರಲ್ಲಿನ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿತ್ತು. ಈ ಜ್ವರದಿಂದಾಗಿ 100ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದವು. ಇಂತಹ ರೋಗಗ್ರಸ್ತ ಹಂದಿಗಳನ್ನು ಕೆರೆಗೆ ಬಿಸಾಡಿ ಅಮಾನವೀಯ ಕೃತ್ಯವನ್ನು ಎಸಗಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಹೆಬ್ಬರಿ ಬಳಿಯ ಕೆರೆಗೆ ರೋಗಗ್ರಸ್ತ ಹಂದಿಗಳನ್ನು ಎಸೆದು ಅಮಾನವೀಯ ಕೃತ್ಯವನ್ನು ಎಸಗಲಾಗಿದೆ. ಹೆಬ್ಬರಿ ಬಳಿಯಿರುವಂತ ಕೆರೆಗೆ ರೋಗಗ್ರಸ್ತ ಹಂದಿಗಳನ್ನು ಮಾಲೀಕ ಬಿಸಾಡಿದ್ದಾರೆ. ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದರಿಂದ 100 ಹಂದಿಗಳು ಮೃತಪಟ್ಟಿದ್ದವು. ಮೃತಪಟ್ಟ ಹಂದಿಗಳನ್ನು ಕೆರೆಗೆ ಬಿಸಾಕಿ ಮಾಲೀಕ ಅವಿವೇಕತನ ಮೆರೆದಿದ್ದಾನೆ. ಇದರಿಂದಾಗಿ ಜನ, ಜಾನುವಾರ ನೀರು ಬಳಸಿದ್ರೆ ಅಪಾಯ ಎದುರಾಗುವಂತ ಆತಂಕ ಉಂಟಾಗಿದೆ. ಕೆರೆಯಲ್ಲಿ ಹಂದಿಗಳ ಶವ ತೇಲುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ಹೆಬ್ಬರಿ ಗ್ರಾಮದ ಕೆರೆ ಬಳಿಗೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಪಶುಸಂಗೋಪನೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತಂಕ ವ್ಯಕ್ತ ಪಡಿಸಿದ ಸಚಿವ ಎಂ.ಸಿ ಸುಧಾಕರ್…
ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Ltd – RIL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಶುಕ್ರವಾರ ಜಿಯೋ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (initial public offering -IPO)ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಮತ್ತು 2026 ರ ಮೊದಲಾರ್ಧದ ವೇಳೆಗೆ ಪಟ್ಟಿ ಮಾಡುವ ಗುರಿ ಹೊಂದಿದೆ ಎಂದು ಘೋಷಿಸಿದರು. ಶುಕ್ರವಾರ ಕಂಪನಿಯ 48 ನೇ ವಾರ್ಷಿಕ ಸಾಮಾನ್ಯ ಸಭೆ (48th annual general meeting -AGM) ಸಂದರ್ಭದಲ್ಲಿ ಅವರು ಆರ್‌ಐಎಲ್ ಷೇರುದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. “ಇಂದು, ಜಿಯೋ ತನ್ನ ಐಪಿಒಗೆ ಅರ್ಜಿ ಸಲ್ಲಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಘೋಷಿಸಲು ನನಗೆ ಹೆಮ್ಮೆ ಎನಿಸುತ್ತಿದೆ. ಅಗತ್ಯವಿರುವ ಎಲ್ಲಾ ಅನುಮೋದನೆಗಳಿಗೆ ಒಳಪಟ್ಟು 2026 ರ ಮೊದಲಾರ್ಧದ ವೇಳೆಗೆ ಜಿಯೋವನ್ನು ಪಟ್ಟಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಅಂಬಾನಿ ಹೇಳಿದರು. ಜಿಯೋದ ಆದಾಯವು 1,28,218 ಕೋಟಿ ರೂ. ($15.0 ಶತಕೋಟಿ), ಇದು FY-25 ರಲ್ಲಿ ವರ್ಷಕ್ಕೆ…
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 28-08-2025 ರಂದು ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 73,000 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿರುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ: ಪೂರ್ವ ವಲಯ: 9,306 ಪಶ್ಚಿಮ ವಲಯ: 10,568 ದಕ್ಷಿಣ ವಲಯ: 44521 ಬೊಮ್ಮನಹಳ್ಳಿ ವಲಯ: 2,347 ದಾಸರಹಳ್ಳಿ ವಲಯ: 168 ಮಹದೇವಪುರ ವಲಯ: 2,737 ಆರ್.ಆರ್.ನಗರ ವಲಯ: 2,113 ಯಲಹಂಕ ವಲಯ: 2,199 ಒಟ್ಟು: 73,959 https://kannadanewsnow.com/kannada/jio-has-crossed-500-million-customers/ https://kannadanewsnow.com/kannada/good-news-for-state-property-owners-land-records-will-be-available-in-digital-form/
ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Ltd -RIL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಶುಕ್ರವಾರ ಜಿಯೋ ಕುಟುಂಬವು 500 ಮಿಲಿಯನ್ ಗ್ರಾಹಕರನ್ನು ದಾಟಿದೆ ಎಂದು ಘೋಷಿಸಿದರು. ಶುಕ್ರವಾರ ಕಂಪನಿಯ 48 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (Annual general meeting -AGM) ಅವರು ಆರ್‌ಐಎಲ್ ಷೇರುದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. “ಇಂದು, ಜಿಯೋ ಕುಟುಂಬವು 500 ಮಿಲಿಯನ್ ಗ್ರಾಹಕರನ್ನು ದಾಟಿದೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. 500 ಮಿಲಿಯನ್ ಮೈಲಿಗಲ್ಲು ನಿಮ್ಮ ಅಚಲ ನಂಬಿಕೆ ಮತ್ತು ಬೆಂಬಲದ ಸಂಕೇತವಾಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ” ಎಂದು ಅಂಬಾನಿ ಹೇಳಿದರು. ಜನರು ಹೇಳುವುದನ್ನು ನಾನು ಕೇಳಿದ್ದೇನೆ: ‘ಜಿಯೋ ನನ್ನ ಜೀವನವನ್ನು ಬದಲಾಯಿಸಿತು’ ಮತ್ತು ‘ನಾನು ಜಿಯೋವನ್ನು ಪ್ರೀತಿಸುತ್ತೇನೆ’. ಆದರೆ ನಾನು ನನ್ನ ಹೃದಯದಿಂದ ಹೇಳುತ್ತೇನೆ. ವಾಸ್ತವವಾಗಿ, ಪ್ರತಿಯೊಬ್ಬ ಭಾರತೀಯನು ಜಿಯೋವನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವ ಮೂಲಕ ನಿರ್ಮಿಸಿದನು ಎಂದು ಹೇಳಿದರು. https://kannadanewsnow.com/kannada/abhiman-studio-land-encroachment-issue-balakrishnas-daughter-has-issued-this-warning-to-the-state-government/…
ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ನೆಲಸಮಗೊಳಿಸಿದಂತ ಬಾಲಕೃಷ್ಣ ಪುತ್ರಿ ಗೀತಾ ವಿರುದ್ಧ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಅಲ್ಲದೇ ಸರ್ಕಾರ ನೀಡಿದಂತ ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಒತ್ತಾಯಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಒಂದು ವೇಳೆ ಮುಟ್ಟುಗೋಲು ಹಾಕಿಕೊಂಡರೇ ಹೀಗೆ ಮಾಡುವುದಾಗಿ ಬಾಲಕೃಷ್ಣ ಪುತ್ರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಬಾಲಕೃಷ್ಣ ಅವರ ಪುತ್ರಿ ಗೀತಾ ಅವರು, ಅಭಿಮಾನ್ ಸ್ಟುಡಿಯೋ ಜಾಗವನ್ನು ಸರ್ಕಾರ ಮುಟ್ಟಿಗೋಲು ಹಾಕಿಕೊಂಡರೇ ಕೋರ್ಟ್ ಮೊರೆ ಹೋಗುತ್ತೇನೆ. ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತರುತ್ತೇನೆ ಎಂಬುದಾಗಿ ಹೇಳಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಎಲ್ಲಾ ದಾಖಲೆ ಇಟ್ಟುಕೊಂಡು ಸುದ್ದಿಗೋಷ್ಠಿ ಮಾಡುತ್ತೇನೆ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಸ್ಥಳ ನೆಲಸಮ ಸಂಬಂಧ ಎಲ್ಲಾ ಮಾಹಿತಿಯನ್ನು ಜನತೆಯ ಮುಂದೆ ಇಡುವುದಾಗಿ ತಿಳಿಸಿದ್ದಾರೆ. https://kannadanewsnow.com/kannada/good-news-for-the-sc-community-of-the-state-invitation-to-apply-for-the-police-constable-pre-recruitment-training/ https://kannadanewsnow.com/kannada/good-news-for-state-property-owners-land-records-will-be-available-in-digital-form/
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಮಾಜಿ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರನ್ನು ಮೂರು ವರ್ಷಗಳ ಅವಧಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ. ಡಾ. ಪಟೇಲ್ ಅವರು ಸೆಪ್ಟೆಂಬರ್ 2016 ರಿಂದ ಡಿಸೆಂಬರ್ 2018 ರವರೆಗೆ RBI ನ 24 ನೇ ಗವರ್ನರ್ ಆಗಿ ಸೇವೆ ಸಲ್ಲಿಸಿದರು. ಅವರ ಗವರ್ನರ್ ಹುದ್ದೆಗೆ ಮುಂಚಿತವಾಗಿ, ಅವರು RBI ನ ಉಪ ಗವರ್ನರ್ ಆಗಿದ್ದರು ಮತ್ತು ಇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. https://twitter.com/ANI/status/1961271706812911671 ಅವರು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (AIIB) ನಲ್ಲಿ ಹೂಡಿಕೆ ಕಾರ್ಯಾಚರಣೆಗಳ ಉಪಾಧ್ಯಕ್ಷರಾಗಿದ್ದರು (ಪ್ರದೇಶ 1), ದಕ್ಷಿಣ ಏಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ಆಗ್ನೇಯ ಏಷ್ಯಾದಾದ್ಯಂತ ಸಾರ್ವಭೌಮ ಮತ್ತು ಸಾರ್ವಭೌಮೇತರ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದರು. ಅವರು ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಕಂಪನಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ನಿರ್ವಹಣಾ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯಲ್ಲಿನ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆ ಮತ್ತು ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ವೃಂದದ ನಿಯೋಜನೆಯನ್ನು ರದ್ದುಗೊಳಿಸಿ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಛೇರಿಗಳಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳ ಕಛೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಜಿಲ್ಲಾ ಆಸತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ವೃಂದದ ನೌಕರರು ಕ್ಷೇತ್ರೀಯ ಮಟದಲ್ಲಿ ಕಾರ್ಯನಿರ್ವಹಿಸಬೇಕಾದ ಸಿಬ್ಬಂದಿಗಳಾಗಿದ್ದು, ಅವರು ಜಿಲ್ಲಾ ಮಟ್ಟ / ತಾಲ್ಲೂಕು ಮಟ್ಟದ ಕಛೇರಿ /ಆಸ್ಪತ್ರೆಗಳಲ್ಲಿ…
ಚಿಕ್ಕಬಳ್ಳಾಪುರ: ರಾಜ್ಯಕ್ಕೂ ಆಫ್ರಿಕನ್ ಹಂದಿ ಜ್ವರವು ಕಾಲಿಟ್ಟಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಗೆ ಆಫ್ರಿಕನ್ ಹಕ್ಕಿಜ್ವರ ಕಾಲಿಟ್ಟಿದ್ದು, ಜ್ವರದ ಕೇಸ್ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಯಾರ್ಕ್ ಶೇರ್ ತಳಿಯ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ಚಿಂತಾಮಣಿ ತಾಲ್ಲೂಕಿನ ಹೆಬ್ಬರಿ ಗ್ರಾಮದ ಬಳಿಯಲ್ಲಿರುವಂತ ಫಾರ್ಮ್ ನಲ್ಲಿನ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ಈಗಾಗಲೇ ಆಫ್ರಿಕನ್ ಹಂದಿ ಜ್ವರದಿಂದಾಗಿ 100 ಹಂದಿಗಳು ಸಾವನ್ನಪ್ಪಿದ್ದಾವೆ. 57 ಹಂದಿ ಕೊಲ್ಲಲು ನಿರ್ಧರಿಸಲಾಗಿದೆ. ಕಳೆದ ಒಂದು ವಾರದಿಂದ ಫಾರ್ಮ್ ನಲ್ಲಿ ಹಂದಿಗಳು ಸರಣಿ ಸಾಲಿನಲ್ಲಿ ಸಾವನ್ನಪ್ಪಿದ್ದಾವೆ. ಹಂದಿಗಳ ಸರಣಿ ಸಾವಿನಿಂದಾಗಿ ಮಾದರಿಯನ್ನು ಸಂಗ್ರಹಿಸಿ ಭೂಪಾಲ್ ನ ರಾಷ್ಟ್ರೀಯ ಲ್ಯಾಬ್ ಗೆ ಕಳುಹಿಸಲಾಗಿತ್ತು. ಇಂದು ಬಂದಿರುವ ವರದಿಯಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ ಎಂಬುದಾಗಿ ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರಂಗಪ್ಪ ಮಾಹಿತಿ ನೀಡಿದ್ದಾರೆ. ಅಲ್ಲದೇ ಫಾರ್ಮ್ ನಿಂದ ಹಂದಿಗಳ ಸಾಗಾಟ, ಮಾರಾಟವನ್ನು ನಿಷೇಧಿಸಲಾಗಿದೆ. ಅಂದಹಾಗೇ ಈ ಫಾರ್ಮ್ ಹೌಸ್ ನಿಂದ ಹಂದಿಗಳನ್ನು…
ಶಿವಮೊಗ್ಗ: ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಈ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಹತ್ವದ ಕ್ರಮವನ್ನು ಕೈಗೊಂಡಿದ್ದಾರೆ. ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ದಿನಾಂಕ: 26-08-2025 ರಂದು ಪೋಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆಯಲ್ಲಿ ಈ ಕೆಳಕಂಡ ಪ್ರಮುಖ ಮತ್ತು ಅತೀ ಸೂಕ್ಷ್ಮತೆಯಿಂದ ಕೂಡಿರುವ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲೆಯ ವಿವಿಧ ನಗರ/ಪಟ್ಟಣ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮಧ್ಯ ತಯಾರಿಕೆ, ಮಾರಾಟ, ಸರಬರಾಜು ಮತ್ತು ಸಾಗಾಟಗಳನ್ನು ನಿಷೇಧಿಸಿ ಪಾನನಿರೋಧ “ಶುಷ್ಕ ದಿನ” ಗಳೆಂದು ಮತ್ತು ಎಲ್ಲಾ ವಿವಿಧ ಮಧ್ಯದ ಸನ್ನದು ಮಾರಾಟ ಮಳಿಗೆಗಳನ್ನು ಮದ್ಯ ಮಾರಾಟ ಡಿಪೋಗಳನ್ನು ಹಾಗೂ ಮಧ್ಯ ತಯಾರಿಕಾ ಘಟಕಗಳನ್ನು ಮುಚ್ಚಲು ಆದೇಶ ಹೊರಡಿಸಬೇಕಾಗಿ ಕೋರಿರುತ್ತಾರೆ. ಪೋಲಿಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ರವರ ಕೋರಿಕೆ ಮೇರೆಗೆ ಈ ಕೆಳಕಂಡಂತೆ ಸೂಚಿಸಿರುವ ದಿನಾಂಕಗಳಂದು ಮತ್ತು ಸಮಯದಲ್ಲಿ “ಶುಷ್ಕ…














