Author: kannadanewsnow09

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ಕೆಲ ರೈಲುಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ. ಇನ್ನೂ ಕೆಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದರೇ, ಮತ್ತೆ ಕೆಲ ರೈಲುಗಳು ಸಂಚಾರವನ್ನು ತಡವಾಗಿ ಪ್ರಾರಂಭಿಸಲಿದ್ದಾವೆ. ಈ ರೈಲುಗಳ ಸೇವೆಯಲ್ಲಿ ಬದಲಾವಣೆ ಮೈಸೂರು ವಿಭಾಗದ ಹಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಕಾಲುವೆ ದಾಟುವ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ, ರೈಲು ಸಂಚಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ರೈಲುಗಳ ಸಂಚಾರ ರದ್ದು: 1. ಏಪ್ರಿಲ್ 8, 10, 12, 14, 29, ಮೇ 3, 10 ಮತ್ತು ಜೂನ್ 10, 2025 ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದಾಗಲಿದೆ. 2. ಜೂನ್ 10, 2025 ರಂದು ರೈಲು ಸಂಖ್ಯೆ 16206 ಮೈಸೂರು-ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 16205 ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲುಗಳು ರದ್ದಾಗಲಿವೆ. ಈ ರೈಲುಗಳ ಸಂಚಾರ ಭಾಗಶಃ ರದ್ದು:…

Read More

ಹಾಸನ: ಕಚ್ಚಿದ ಹಾವನ್ನೇ ಕೈಯಲ್ಲಿ ಹಿಡಿದು ಯುವಕನೊಬ್ಬ ಕುಳಿತು ರಂಪಾಟ ಮಾಡಿದಂತ ಘಟನೆ ಹಾಸನದ ಬಿಎಂ ರಸ್ತೆಯಲ್ಲಿ ನಡೆದಿದೆ. ಯುವಕನನ್ನು ಕಚ್ಚಿದಂತ ಕೊಳಕ ಮಂಡಲ ಹಾವು, ಕಚ್ಚಿದ ಬಳಿಕ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಹಾಸನದ ಬಿಎಂ ರಸ್ತೆಯಲ್ಲಿ ಯುವಕನೊಬ್ಬನಿಗೆ ಕೊಳಕ ಮಂಡಲ ಹಾವು ಕಚ್ಚಿದ್ದರಿಂದ ಅದನ್ನೇ ಕೈಯಲ್ಲಿ ಹಿಡಿದು ಖಾಸಗಿ ಬ್ಯಾಂಕ್ ಮುಂದೆ ಕುಳಿತಿದ್ದಾನೆ. ಆಸ್ಪತ್ರೆಗೆ ಹೋಗು ಅಂತ ಸಾರ್ವಜನಿಕರು ಬುದ್ಧಿ ಹೇಳಿದರೂ ಹೋಗದೇ ರಂಪಾಟ ಮೆರೆದಿದ್ದಾನೆ. ಕಚ್ಚಿದ ಹಾವನ್ನೇ ಗಟ್ಟಿಯಾಗಿ ಹಿಡಿದು ಕುಳಿತ ಕಾರಣ, ಯುವಕನ ಕೈಯಲ್ಲೇ ಹಾವು ಕೂಡ ಪ್ರಾಣ ಬಿಟ್ಟಿದೆ. ಈ ಮೂಲಕ ಹಾಸನದ ಬಿಎಂ ರಸ್ತೆಯ ಖಾಸಗಿ ಬ್ಯಾಂಕ್ ಮುಂದೆ ಶಾಕಿಂಗ್ ಎನ್ನುವಂತ ಘಟನೆ ನಡೆದಿದೆ. https://kannadanewsnow.com/kannada/haj-2025-why-saudi-arabia-has-temporarily-banned-visas-from-13-countries-including-india/ https://kannadanewsnow.com/kannada/big-news-state-government-issues-important-announcement-on-grihalakshmi-scheme/

Read More

ನವದೆಹಲಿ: ಹಜ್ ಯಾತ್ರೆ-2025 ಸಮೀಪಿಸುತ್ತಿರುವುದರಿಂದ, ಸೌದಿ ಅರೇಬಿಯಾ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ 14 ದೇಶಗಳ ನಾಗರಿಕರಿಗೆ ಕೆಲವು ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಕ್ಕಾ ಯಾತ್ರೆ ಮುಕ್ತಾಯಗೊಳ್ಳುತ್ತಿದ್ದಂತೆ ಉಮ್ರಾ, ವ್ಯಾಪಾರ ಮತ್ತು ಕುಟುಂಬ ಭೇಟಿ ವೀಸಾಗಳ ಮೇಲಿನ ನಿಷೇಧವು ಜೂನ್ ಮಧ್ಯಭಾಗದವರೆಗೆ ಜಾರಿಗೆ ಬರಲಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ನೈಜೀರಿಯಾ, ಜೋರ್ಡಾನ್, ಅಲ್ಜೀರಿಯಾ, ಸುಡಾನ್, ಇಥಿಯೋಪಿಯಾ, ಟುನೀಶಿಯಾ, ಯೆಮೆನ್ ಮತ್ತು ಮೊರಾಕೊ ಸೇರಿದಂತೆ 14 ರಾಷ್ಟ್ರಗಳ ಮೇಲೆ ಈ ನಿಷೇಧವು ಪರಿಣಾಮ ಬೀರುತ್ತದೆ. ಸರಿಯಾದ ನೋಂದಣಿ ಇಲ್ಲದೆ ವ್ಯಕ್ತಿಗಳು ಹಜ್ ಮಾಡಲು ಪ್ರಯತ್ನಿಸುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಉಮ್ರಾ ವೀಸಾಗಳನ್ನು ಹೊಂದಿರುವ ವ್ಯಕ್ತಿಗಳು ಏಪ್ರಿಲ್ 13 ರವರೆಗೆ ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದು ಎಂದು ಪಾಕಿಸ್ತಾನದ ARY ಸೌದಿ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಹಿಂದೆ ಅನೇಕ ವಿದೇಶಿ ಪ್ರಜೆಗಳು ಉಮ್ರಾ ಅಥವಾ ಭೇಟಿ ವೀಸಾದಲ್ಲಿ ದೇಶವನ್ನು ಪ್ರವೇಶಿಸಿ ನಂತರ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹಣಾ ವಾಹನಗಳ ಚಾಲಕರಿಗೆ ಶುಭಸುದ್ದಿಯೊಂದು ಹೊರ ಬಿದ್ದಿದೆ. ಪೌರ ಕಾರ್ಮಿಕರಿಗೆ ಕಾರ್ಮಿಕರ ದಿನವಾದಂತ ಮೇ.1ರಂದು ಖಾಯಂ ಮಾಡುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಈ ಬಗ್ಗೆ ಮಾತನಾಡಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಕಾರ್ಮಿಕರ ದಿನದಂದು ಗುತ್ತಿಗೆ ಆಧಾರಿತ ಪೌರ ಕಾರ್ಮಿಕರನ್ನು ಹಾಗೂ ತ್ಯಾಜ್ಯ ಸಂಗ್ರಹಣಾ ವಾಹನಗಳ ಚಾಲಕರನ್ನು ಖಾಯಂಗೊಳಿಸುವ ನಿರ್ಧಾರಕ್ಕೆ ನಾವು ಬಂದಿದ್ದೇವೆ ಎಂದಿದ್ದಾರೆ. ಬಸವಾದಿ ಶರಣರ ಕಾಯಕವೇ ಕೈಲಾಸವೆಂಬ ಮಾತಿಗೆ ಬದ್ಧರಾಗಿ ಬಿಸಿಲು – ಮಳೆ, ಹಗಲು – ರಾತ್ರಿಯೆನ್ನದೆ ಸಮಾಜವನ್ನು ಸ್ವಚ್ಚವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಕಲ್ಯಾಣ ನಮ್ಮ ಕರ್ತವ್ಯ ಅಂತ ತಿಳಿಸಿದ್ದಾರೆ. 2017ರಲ್ಲಿಯೂ 10,000 ಪೌರಕಾರ್ಮಿಕರ ಖಾಯಂಮಾತಿ, ವೇತನವನ್ನು ₹7,000 ದಿಂದ ₹17,000 ಸಾವಿರಕ್ಕೆ ಹೆಚ್ಚಳ ಮಾಡಿದ್ದು ನಾವೇ, ಎಲ್ಲ ಕಾಲಕ್ಕೂ ಶ್ರಮಿಕ ಜನರ ನಿಜವಾದ ಹಿತಚಿಂತಕರು ನಾವೇ ಎಂದು ಹೇಳಿದ್ದಾರೆ. https://twitter.com/KarnatakaVarthe/status/1909175792535498995 https://kannadanewsnow.com/kannada/good-news-for-pourakarmikas-state-govt-to-issue-appointment-letter-on-may-1/ https://kannadanewsnow.com/kannada/big-news-state-government-issues-important-announcement-on-grihalakshmi-scheme/

Read More

ಬೆಂಗಳೂರು: ನನಗೆ ಇಂದೇ ನಿಮಗೆ ನೇಮಕಾತಿ ಪತ್ರ ನೀಡಬೇಕು ಎನ್ನುವ ಆಲೋಚನೆ ಇತ್ತು. ಒಂದಷ್ಟು ಸಿಂದುತ್ವ ಬಾಕಿ ಇರುವ ಕಾರಣ ಮೇ 1 ರಂದು ನೇಮಕಾತಿ ಪತ್ರ ನಿಮ್ಮ ಕೈ ಸೇರುವುದು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ನಾನು ಸಲಹೆ ನೀಡಿದೆ. ವಾಹನ ಚಾಲಕರು, ಲೋಡರ್ಸ್ ವಿಚಾರವಾಗಿ ನಾರಾಯಣ ಅವರು ಗಮನ ಸೆಳೆದಿದ್ದಾರೆ. ಅವರ ಮನವಿಯನ್ನು ಕಾರ್ಯಗತಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂಬುದಾಗಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದರು. “ಶೂ, ಕೈಗವಸು ಸೇರಿದಂತೆ ಇತರೇ ಸಲಕರಣೆಗಳ ವಿತರಣೆಗೆ ರೂ.5 ಕೋಟಿ, ಸಮವಸ್ತ್ರಕ್ಕೆ ರೂ. 6 ಕೋಟಿ, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಮರುಪಾವತಿಗೆ ರೂ. 6 ಕೋಟಿ, ಆರೋಗ್ಯಕ್ಕೆ ರೂ.4 ಕೋಟಿ, ಒಂಟಿ ಮನೆಗೆ ಪ್ರತ್ಯೇಕವಾಗಿ ರೂ.30 ಕೋಟಿ, ಕೌಶಲ್ಯ ಅಭಿವೃದ್ದಿಗೆ ರೂ.5 ಕೋಟಿ, ಟ್ಯಾಕ್ಸಿ, ಆಟೋ ಚಾಲಕರಿಗೆ ರೂ. 10 ಕೋಟಿ ಒಟ್ಟು ನಿಮ್ಮ…

Read More

ನವದೆಹಲಿ: ಕರ್ನಾಟಕದ ಜನತೆಗೆ ಬಿಗ್ ಶಾಕ್ ಎನ್ನುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಡೀಸೆಲ್ ಮೇಲಿನ ಸುಂಕವನ್ನು 2 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಹೀಗಾಗಿ ಡೀಸೆಲ್ ದರ 2 ರೂಪಾಯಿ ಹೆಚ್ಚಳವಾಗಿತ್ತು. ಈಗ ದೇಶದ ಜನತೆಗೆ ಬಿಗ್ ಶಾಕ್ ಎನ್ನುವಂತೆ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಲಾ 2 ರೂಪಾಯಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. https://twitter.com/ANI/status/1909183305419010272 ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 2 ರೂ.ಗಳಷ್ಟು ಹೆಚ್ಚಿಸಲಾಗಿದೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಶೀಘ್ರವೇ ಹೆಚ್ಚಳವಾಗೋ ಸಾಧ್ಯತೆ ಇದೆ. ಈ ಮೂಲಕ ವಾಹನ ಸವಾರರಿಗೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಬಿಸಿ ಮುಟ್ಟಲಿದೆ. https://kannadanewsnow.com/kannada/bbmp-to-allocate-rs-730-crore-for-welfare-of-pourakarmikas-dk-shivakumar/ https://kannadanewsnow.com/kannada/big-news-state-government-issues-important-announcement-on-grihalakshmi-scheme/

Read More

ಬೆಂಗಳೂರು : “ಈ ಬಾರಿಯ ಬಿಬಿಎಂಪಿ ಬಜೆಟ್ ಅಲ್ಲಿ ಪೌರಕಾರ್ಮಿಕರ ವೇತನ ಪಾವತಿಗೆ ರೂ.500 ಕೋಟಿ ಹಣ ಘೋಷಣೆ ಮಾಡಲಾಗಿದೆ. ರೂ. 107 ಕೋಟಿ ಹಣವನ್ನು ಪಿಂಚಣಿಗೆ ಮೀಸಲಿಡಲಾಗಿದೆ. ಮೃತಪಟ್ಟವರ ಹೆಸರಿನಲ್ಲಿ ರೂ.10 ಲಕ್ಷ ಹಣ ಮೀಸಲಿಟ್ಟು ರೂ. 6 ಸಾವಿರ ಪಿಂಚಣಿ ನೀಡುವ ಯೋಜನೆ ತರಲಾಗಿದೆ. ಪೌರಕಾರ್ಮಿಕರಿಗಾಗಿ ಬಿಬಿಎಂಪಿಯಿಂದ ಒಟ್ಟು ರೂ.730 ಕೋಟಿ ಹಣ ನಾವು ಮೀಸಲಿಟ್ಟಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದರು. “ಶೂ, ಕೈಗವಸು ಸೇರಿದಂತೆ ಇತರೇ ಸಲಕರಣೆಗಳ ವಿತರಣೆಗೆ ರೂ.5 ಕೋಟಿ, ಸಮವಸ್ತ್ರಕ್ಕೆ ರೂ. 6 ಕೋಟಿ, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಮರುಪಾವತಿಗೆ ರೂ. 6 ಕೋಟಿ, ಆರೋಗ್ಯಕ್ಕೆ ರೂ.4 ಕೋಟಿ, ಒಂಟಿ ಮನೆಗೆ ಪ್ರತ್ಯೇಕವಾಗಿ ರೂ.30 ಕೋಟಿ, ಕೌಶಲ್ಯ ಅಭಿವೃದ್ದಿಗೆ ರೂ.5 ಕೋಟಿ, ಟ್ಯಾಕ್ಸಿ, ಆಟೋ ಚಾಲಕರಿಗೆ ರೂ. 10 ಕೋಟಿ ಒಟ್ಟು ನಿಮ್ಮ ಕಲ್ಯಾಣಕ್ಕೆ…

Read More

ಹಾಸನ: ಭವಾನಿ ರೇವಣ್ಣ ಅವರು 10 ತಿಂಗಳ ಬಳಿಕ ಹಾಸನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಆಗಮಿಸಿದಂತ ಅವರನ್ನು ಅಭಿಮಾನಿಗಳು, ಹಿತೈಶಿಗಳು ಹೂಮಳೆ ಸುರಿಸಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು. ಹಾಸನ ಜಿಲ್ಲೆಯ ಹೊಳೆನರಸೀಪುರಕ್ಕೆ ಭವಾನಿ ರೇವಣ್ಣ ಇಂದು ಭೇಟಿ ನೀಡಿದರು. ಈ ವೇಳೆಯಲ್ಲಿ ಅವರಿಗೆ ಅಭಿಮಾನಿಗಳು ಹೂಮಳೆಯನ್ನು ಸುರಿಸಿ, ಪಟಾಕಿ ಸಿಡಿಸಿ, ಆರತಿ ಬೆಳಗಿ ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದಂತ ಅವರು ನಾನು ಹಾಸನಕ್ಕೆ ಬರೋದಕ್ಕೆ ಈಗ ಅವಕಾಶ ಸಿಕ್ಕಿದೆ. ನನ್ನ ಕೈಲಾದ ಸೇವೆ ಜನರಿಗಾಗಿ ಮಾಡುತ್ತೇನೆ. ನಾನು ಬರುವ ವಿಷಯ ಯಾರಿಗೂ ತಿಳಿಸಿರಲಿಲ್ಲ. ಆದರೂ ಸಾಕಷ್ಟು ಜನರು ಬಂದಿದ್ದೀರಿ. ನಿಮ್ಮ ಈ ಅಭಿಮಾನಕ್ಕೆ ನಾನು ಚಿರಋಣಿ ಎಂಬುದಾಗಿ ತಿಳಿಸಿದರು. https://kannadanewsnow.com/kannada/another-shock-to-the-people-of-bengaluru-by-the-state-government-solid-waste-management-charges-fixed/ https://kannadanewsnow.com/kannada/big-news-state-government-issues-important-announcement-on-grihalakshmi-scheme/

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರು ಜನತೆಗೆ ಬಿಗ್ ಶಾಕ್ ಎನ್ನುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಬಳಕೆದಾರರು, ಸೇವಾ ಶುಲ್ಕವನ್ನು 2025-26ನೇ ಆರ್ಥಿಕ ಸಾಲಿನಿಂದ ಆಸ್ತಿ ತೆರಿಗೆ ಜೊತೆಯಲ್ಲಿ ಸಂಗ್ರಹಿಸಲು ಬಿಬಿಎಂಪಿ ಆದೇಶಿಸಿದೆ. ಈ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು,  ಘನ ಸರ್ಕಾರವು ಗೃಹ, ವಾಣಿಜ್ಯ, ಸಾಂಖ್ಯಿಕ ಮತ್ತು ಬೃಹತ್‌ ತ್ಯಾಜ್ಯ ಉತ್ಪಾದಕರಿಂದ ಬಳಕೆದಾರರ ಶುಲ್ಕ (ಸೇವಾ ಶುಲ್ಕ)ವನ್ನು ಸಂಗ್ರಹಿಸಲು ಉಲ್ಲೇಖ (01) ರನ್ವಯ ಅನುಮೋದನೆಯನ್ನು ನೀಡಿದ್ದು ಅನುಷ್ಠಾನದಲ್ಲಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಣಯಗಳಿಗೆ ಅನುಮೋದನೆಯನ್ನು ನೀಡಿರುತ್ತದೆ ಎಂದಿದ್ದಾರೆ. ಅದರಂತೆ ಗ್ರಹ, ವಾಣಿಜ್ಯ ಮತ್ತು ಸಾಂಖ್ಯಿಕ ತ್ಯಾಜ್ಯ ಉತ್ಪಾದಕರಿಂದ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ (ಸೇವಾ ಶುಲ್ಕ)ವನ್ನು ದಿನಾಂಕ: 01.04.2025 ರಿಂದ ಅನ್ವಯವಾಗುವಂತೆ ಸಂಗ್ರಹಿಸಲು ಮತ್ತು ಉಲ್ಲೇಖ (01) ರಲ್ಲಿರುವಂತೆ ಶುಲ್ಕದ ವಾರ್ಷಿಕ ವೃದ್ಧಿಯನ್ನು 2026-27ನೇ ಸಾಲಿನಿಂದ ಅನುಷ್ಠಾನಗೊಳಿಸಲು ಉಲ್ಲೇಖ (5) ರಂತೆ ಮಾನ್ಯ ಆಡಳಿತಗಾರರು ಅನುಮೋದನ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ. https://kannadanewsnow.com/kannada/good-news-for-gram-panchayat-water-operators-from-state-government-weekly-off-fixed/…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯ್ತಿ ವಾಟರ್ ಆಪರೇಟರ್ ಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಆಪರೇಟರ್ ಗಳಿಗೆ ವಾರದ ರಜೆಯನ್ನು ನಿಗದಿಪಡಿಸಿದೆ. ಈ ಕುರಿತಂತೆ ಆದೇಶ ಹೊರಡಿಸಿದ್ದು,  ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ (ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳು) ನಿಯಮಗಳನ್ನು ರಚಿಸಲಾಗಿದ್ದು, ಸದರಿ ನಿಯಮಗಳ ಕ್ರ.ಸಂ.7 (i) ರಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ರಜೆ ನೀಡುವ ಬಗ್ಗೆ ವಿವರಿಸಲಾಗಿರುತ್ತದೆ. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಆಪರೇಟರ್ ಗಳಿಗೆ ವಾರದಲ್ಲಿ ಒಂದು ದಿನ ರಜೆಯನ್ನು ನಿಗದಿಪಡಿಸುವಂತೆ ಕೋರಿ ಉಲ್ಲೇಖ (2) ರಲ್ಲಿ ಸಲ್ಲಿಸಿದ ಮನವಿಯನ್ನು ಮಾನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉಲ್ಲೇಖ (3)ರ ಸಭೆಯಲ್ಲಿ ಪರಿಶೀಲಿಸಿದ್ದು, ಉಲ್ಲೇಖ(4)ರ ಆದೇಶದಂತೆ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಆಪರೇಟರ್‌ಗಳಿಗೆ ಕೆಳಕಂಡ ಷರತ್ತಿಗೊಳಪಟ್ಟು ವಾರದಲ್ಲಿ ಒಂದು ದಿನ ರಜೆಯನ್ನು ನಿಗದಿಪಡಿಸಲು ಕ್ರಮವಹಿಸುವಂತೆ ಸೂಚಿಸಿದೆ.…

Read More