Author: kannadanewsnow09

ಮಂಡ್ಯ: ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಭಾರೀ ಸಂಚಲನವೇ ಉಂಟಾಗಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ 1,00,937 ಮತಗಳಿಂದ ಮುನ್ನಡೆಯನ್ನು ಸಾಧಿಸಿದ್ದಾರೆ. ತೀವ್ರ ಜಿದ್ದಾ ಜಿದ್ದಿನ ಕಣವಾಗಿರುವಂತ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾರೀ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಇತ್ತೀಚಿನ ಮತಏಣಿಕೆ ಮಾಹಿತಿಯಂತೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ 2,48,730 ಮತಗಳನ್ನು ಪಡೆದಿದ್ದರೇ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು 1,47,793 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಿಂತ 1,00,937 ಮತಗಳ ಮುನ್ನಡೆಯನ್ನು ಹೆಚ್.ಡಿಕೆ ಸಾಧಿಸಿದ್ದಾರೆ. https://kannadanewsnow.com/kannada/in-shivamogga-b-y-raghavendra-is-leading-by-26182-votes-in-the-third-round/ https://kannadanewsnow.com/kannada/breaking-lok-sabha-election-results-nda-leading-in-271-seats-india-leading-in-183-seats/

Read More

ಶಿವಮೊಗ್ಗ: ಜಿಲ್ಲೆಯ ಲೋಕಸಭಾ ಚುನಾವಣೆ ಮತದಾನದ ಮತಏಣಿಕೆ ಕಾರ್ಯ ನಡೆಯುತ್ತಿದೆ. 4ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು 49,495 ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಚುನಾವಣೆಯ ಮತಏಣಿಕೆ ಕಾರ್ಯ ಭರದಿಂದ ಸಾಗುತ್ತಿದೆ. 4ನೇ ಸುತ್ತಿನ ಎಣಿಕೆ ನಂತರ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಮುನ್ನಡೆಯನ್ನು ಸಾಧಿಸಿದ್ದಾರೆ. ಬಿವೈ ರಾಘವೇಂದ್ರ ಅವರು 173745 ಮತಗಳನ್ನು 3ನೇ ಸುತ್ತಿನಲ್ಲಿ ಪಡೆದಿದ್ದರೇ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ‌ಕುಮಾರ್ 124250 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರು 6172 ಮತಗಳನ್ನು ಪಡೆದಿದ್ದಾರೆ. ಒಟ್ಟಾರೆಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. 49495 ಮತಗಳಿಂದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಮುನ್ನಡೆ ಕಾಯ್ದುಕೊಂಡಿದ್ದಾರೆ. https://kannadanewsnow.com/kannada/bjps-yaduveer-is-leading-by-35467-votes-in-mysuru-kodagu-lok-sabha-constituency/ https://kannadanewsnow.com/kannada/breaking-lok-sabha-election-results-nda-leading-in-271-seats-india-leading-in-183-seats/

Read More

ಮೈಸೂರು: ಜಿಲ್ಲೆಯ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಯಧುವೀರ್ 35,467 ಮತಗಳಿಂದ ಮುನ್ನಡೆಯನ್ನು ಸಾಧಿಸಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಯದುವೀರ್​ಗೆ 1,64,337 ಮತಗಳು ಬಿದ್ದಿವೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ 128,870 ಮತಗಳನ್ನು ಪಡೆದಿದ್ದು ಯದುವೀರ್ 35467 ಮತಗಳ ಮುನ್ನಡೆ ಸಾಧಿಸಿದ್ದಾರೆ. Lok Sabha Election Results: ಡಿಕೆ‌ ಸುರೇಶ್ ಭಾರಿ ಹಿನ್ನಡೆ, ಕನಕಪುರದಲ್ಲಿ ಖಾಕಿ ಕಟ್ಟೆಚ್ಚರ ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಗೆ ಬಿಗ್ ಶಾಕ್ ಆಗಿದೆ. ಈವರೆಗಿನ ಲೋಕಸಭಾ ಚುನಾವಣೆ ಮತಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಭಾರೀ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಕೆ‌ ಸುರೇಶ್ ಭಾರಿ ಹಿನ್ನಡೆ ಉಂಟಾಗಿದೆ. ಈ ಕಾರಣದಿಂದಲೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಹತೋಟಿಗೆ ತರೋ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಕನಕಪುರದಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ…

Read More

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಗೆ ಬಿಗ್ ಶಾಕ್ ಆಗಿದೆ. ಈವರೆಗಿನ ಲೋಕಸಭಾ ಚುನಾವಣೆ ಮತಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಭಾರೀ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಕೆ‌ ಸುರೇಶ್ ಭಾರಿ ಹಿನ್ನಡೆ ಉಂಟಾಗಿದೆ. ಈ ಕಾರಣದಿಂದಲೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಹತೋಟಿಗೆ ತರೋ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಕನಕಪುರದಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು 141,752 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ 91,286 ಮತಗಳನ್ನು ಪಡೆದಿದ್ದು 50,466 ಮತಗಳ ಅಂತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. https://kannadanewsnow.com/kannada/breaking-lok-sabha-election-results-nda-leading-in-271-seats-india-leading-in-183-seats/ https://kannadanewsnow.com/kannada/in-mandya-former-cm-hd-kumaraswamy-is-leading-by-54658-votes/

Read More

ಬಡತನ ಮಾರಕ ಎಂದು ನಮ್ಮ ಅಜ್ಜಿಯರು ಹೇಳಿದ್ದಾರೆ. ಬಡತನವು ಅಂತಹ ಭಯಾನಕ ವಿಷಯವಾಗಿದೆ. ಈ ಬಡತನವನ್ನು ಹೋಗಲಾಡಿಸುವ ಪ್ರಯತ್ನವನ್ನು ಮೊದಲು ಮಾಡಬೇಕು. ಆ ಪ್ರಯತ್ನಗಳು ಸಫಲವಾಗಬೇಕಾದರೆ ದೇವರ ಕೃಪೆಯೇ ಆಸರೆಯಾಗಬೇಕು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಾವು ಪರಿಶ್ರಮದಿಂದ ದೇವರ ಅನುಗ್ರಹವನ್ನು ಪರಿಪೂರ್ಣಗೊಳಿಸಿದರೆ, ನಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ಇದರಿಂದ ನಮ್ಮ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಮಾಡಬಹುದಾದ ಸರಳವಾದ ಅಭಿಷೇಕ ವಿಧಾನದ ಬಗ್ಗೆ ನಾವು ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನೋಡಲಿದ್ದೇವೆ. ಬಿಲ್ವಾಭಿಷೇಕ ಪೂಜೆ ಮಹಾಲಕ್ಷ್ಮಿಯು ತಾಯಿ ಮತ್ತು ಕುಬೇರನ ಸ್ಥಾನಮಾನಕ್ಕೆ ಅನುಗುಣವಾಗಿ ಸಂಪತ್ತನ್ನು ನೀಡಬಲ್ಲ ದೇವತೆ. ಆದರೆ ಕುಬೇರ ಮತ್ತು ತಾಯಿ ಮಹಾಲಕ್ಷ್ಮಿಗೆ ಸಂಪತ್ತನ್ನು ನೀಡಿದವನು ಶಿವ. ನಾವು ಶಿವನನ್ನು ಪೂಜಿಸಿದರೆ ತಾಯಿ ಮಹಾಲಕ್ಷ್ಮಿ ಮತ್ತು ಕುಬೇರನಿಗೆ ನೀಡಿದ ಸಂಪತ್ತಿನಂತೆ ಶಿವನು ನಮಗೆ ಸಂಪತ್ತನ್ನು ನೀಡುತ್ತಾನೆ…

Read More

ಮಂಡ್ಯ: ಜಿಲ್ಲೆಯ ಲೋಕಸಭಾ ಚುನಾವಣೆಯ ಮತಏಣಿಕೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭಾರೀ ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಬರೋಬ್ಬರಿ 54,658 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ರಾಜ್ಯದ ತೀವ್ರ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿರುವಂತ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಮುನ್ನಡೆಯನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು @ ವೆಂಕಟರಮಣೇಗೌಡ ಅವರು 79,799 ಮತಗಳನ್ನು ಇಲ್ಲಿಯವರೆಗೆ ಸಿಕ್ಕಂತ ಫಲಿತಾಂಶದಲ್ಲಿ ಪಡೆದಿದ್ದರೇ, ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ 1,34,457 ಮತಗಳನ್ನು ಪಡೆದಿದ್ದಾರೆ. ಒಟ್ಟಾರೆಯಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು 54,658 ಮತಗಳಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ. ವರದಿ: ಗಿರೀಶ್ ರಾಜ್, ಮಂಡ್ಯ https://kannadanewsnow.com/kannada/rahul-gandhi-gains-lead-by-21000-votes/ https://kannadanewsnow.com/kannada/breaking-lok-sabha-election-results-nda-leading-in-271-seats-india-leading-in-183-seats/

Read More

ಕೇರಳ: ವಯನಾಡ್ ನಲ್ಲಿ ರಾಹುಲ್ ಗಾಂಧಿ ಎಲ್ ಡಿಎಫ್ ನ ಅನ್ನಿ ರಾಜಾ ವಿರುದ್ಧ 21,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಇದೀಗ ಸಿಕ್ಕಿರುವಂತ ಕೇರಳ ಲೋಕಸಭಾ ಚುನಾವಣಾ ಫಲಿತಾಂಶ ಮಾಹಿತಿಯಂತೆ ರಾಹುಲ್ ಗಾಂಧಿ 20,807 ಮತಗಳನ್ನು ಪಡೆದಿದ್ದಾರೆ. ಹೀಗಿದೆ ವಯನಾಡ್ ಚುನಾವಣಾ ಫಲಿತಾಂಶ ಅಭ್ಯರ್ಥಿಗಳವಾರು ಪಡೆದ ಮತ ವಿವರ ರಾಹುಲ್ ಗಾಂಧಿ (ಕಾಂಗ್ರೆಸ್)-20807 ಅನ್ನಿ ರಾಜಾ (ಸಿಪಿಐ)-6777 ಸುರೇಂದ್ರನ್ (ಬಿಜೆಪಿ) – 3516 ಪಿ.ಆರ್.ಕೃಷ್ಣನ್ ಕುಟ್ಟಿ (ಬಿಎಸ್ಪಿ)-63 ಅಜೀಬ್ ಮುಹಮ್ಮದ್ (ಭಾರತ)-33 ಕೆ.ಪ್ರಸೀದಾ (ಭಾರತ)-32 ಸಿನೋಜ್ ಎಸಿ (ಭಾರತ)-25 ಕೆ.ಪಿ.ಸತ್ಯನ್ (ಭಾರತ)-20 ಪಿ.ರಾಧಾಕೃಷ್ಣನ್ (ಭಾರತ)-15 https://kannadanewsnow.com/kannada/election-breaking-dk-suresh-shocks-bjp-candidate-dr-manjunath-leading-by-over-26000-votes/ https://kannadanewsnow.com/kannada/breaking-lok-sabha-election-results-nda-leading-in-271-seats-india-leading-in-183-seats/

Read More

ವಾರಣಾಸಿ: ಇಂದು ಲೋಕಸಭಾ ಚುನಾವಣೆಗೆ ನಡೆದಂತ ಮತದಾನದ ಮತಏಣಿಕೆ ಕಾರ್ಯ ನಡೆಯುತ್ತಿದೆ. ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 6000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯನ್ನು ಸಾಧಿಸಿದ್ದಾರೆ. ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ವಿರುದ್ಧ 6,000 ಕ್ಕೂ ಹೆಚ್ಚು ಮತಗಳಿಂದ ಹಿಂದುಳಿದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. 2024ರ ಲೋಕಸಭಾ ಚುನಾವಣೆಯ ಆರು ವಾರಗಳ ಕಠಿಣ ಅವಧಿಯಲ್ಲಿ ಏಳು ಹಂತಗಳಲ್ಲಿ ನಡೆದ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 642 ಮಿಲಿಯನ್ ಜನರು ಮತ ಚಲಾಯಿಸಿದ್ದಾರೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಅಧಿಕಾರಾವಧಿ ಸೃಷ್ಟಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎಗೆ ಮೂರನೇ ಎರಡರಷ್ಟು ಬಹುಮತ ಸಿಗಲಿದೆ ಎಂದು ಹೇಳಿವೆ. https://kannadanewsnow.com/kannada/breaking-lok-sabha-election-results-nda-leading-in-271-seats-india-leading-in-183-seats/ https://kannadanewsnow.com/kannada/election-breaking-dk-suresh-shocks-bjp-candidate-dr-manjunath-leading-by-over-26000-votes/

Read More

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವಂತ ಎಸ್ಐಟಿ ಅಧಿಕಾರಿಗಳು, ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯ ನಂತ್ರ ಸಚಿವ ಬಿ.ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್ ಎಂಬುವರನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಬೆಂಗಳೂರಿನ ವಸಂತನಗರದಲ್ಲಿರುವಂತ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿಯ ಮೇಲೆ ಸ್ಥಳ ಮಹಜರಿಗಾಗಿ ಎಸ್ಐಟಿ ಅಧಿಕಾರಿಗಳು ಇಬ್ಬರು ಆರೋಪಿಗಳೊಂದಿಗೆ ದಾಳಿ ನಡೆಸಿದ್ದರು. ಈ ದಾಳಿಯ ವೇಳೆಯಲ್ಲಿ ಡಿಜಿಟಲ್ ದಾಖಲಾತಿ ಸಂಗ್ರಹಿಸೋ ಕಾರ್ಯದಲ್ಲಿ ಎಸ್ಐಟಿ ಅಧಿಕಾರಿಗಳು ತೊಡಗಿದ್ದರು. ಈ ಸಂದರ್ಭದಲ್ಲಿ ಕಚೇರಿಯಲ್ಲಿದ್ದಂತ ಸಚಿವ ಬಿ.ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಅಕ್ರಮದಲ್ಲಿ ಭಾಗಿಯಾಗಿರೋದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಅವರನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಅಲ್ಲದೇ ಎಸ್ಐಟಿ ಕಚೇರಿಗೆ ಬಂಧಿಸಿ ಕರೆದೊಯ್ಯುತ್ತಿದ್ದು, ಹಗರಣ ಸಂಬಂಧ ಮತ್ತಷ್ಟು ವಿಚಾರಣೆ ನಡೆಸೋ ಸಾಧ್ಯತೆ ಇದೆ. ಅಂದಹಾಗೇ ನೆಕ್ಕಂಟಿ ನಾಗರಾಜ್ ಅವರು ಆಗಾಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿಗೆ ತೆರಳುತ್ತಿದ್ದರಂತೆ. ಅಲ್ಲಿಗೆ ತೆರಳಿ, ಸಚಿವರು,…

Read More

ಬೆಂಗಳೂರು: ನಗರದಲ್ಲಿ ನಡೆದಿದ್ದಂತ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದಂತ ತೆಲುಗು ನಟಿ ಹೇಮಾಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಇದರ ನಡುವೆ ನಾನು ತಪ್ಪು ಮಾಡಿಲ್ಲ ಅಂತ ನಟಿ ಹೇಮಾ ಪುನರುಚ್ಚಾರಿಸಿದ್ದಾರೆ. ನಗರದಲ್ಲಿ ನಡೆದಿದ್ದಂತ ರೇವ್ ಪಾರ್ಟಿ ಪ್ರಕರಣ ಸಂಬಂಧ ಇಂದು ಸಿಸಿಬಿ ವಿಚಾರಣೆಗೆ ತೆಲುಗು ನಟಿ ಹೇಮಾ ಹಾಜರಾಗಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದ್ದಂತ ಸಿಸಿಬಿ ಪೊಲೀಸರು, ಬಂಧನ ಕೂಡ ಮಾಡಿದ್ದರು. ಈ ಬಳಿಕ ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಲಾಗಿತ್ತು. ಅವರಿಗೆ ನ್ಯಾಯಾಧೀಶರು ಜೂನ್.14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಬಳಿಯ ಫಾರ್ಮ್ ಹೌಸ್ ನಲ್ಲಿ ನಡೆಸಲಾಗಿದ್ದಂತ ರೇವ್ ಪಾರ್ಟಿ ಸಂಬಂಧ ತೆಲುಗು ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಯ ಬಳಿಕ ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಂತ ಅವರನ್ನು ಬೆಂಗಳೂರು ನಗರದ ಆನೇಕಲ್ ನಲ್ಲಿರುವಂತ ಆನೇಕಲ್ ನ 4ನೇ ಸಿವಿಲ್, ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದರು. ಬೆಂಗಳೂರಿನ ರೇವ್ ಪಾರ್ಟಿ ಪ್ರಕರಣ…

Read More