Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿಯಲ್ಲಿ ಕಾರು ಸ್ಪೋಟ ಪ್ರಕರಣದಲ್ಲಿ ಮೃತರಾದವರ ಕುಟುಂಬಕ್ಕೆ ದೆಹಲಿ ಸರ್ಕಾರ ಪರಿಹಾರ ಘೋಷಿಸಿದೆ. ಈ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ರೇಖಾ ಗುಪ್ತ ಘೋಷಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ದೆಹಲಿಯಲ್ಲಿ ನಡೆದ ಈ ದುರಂತ ಘಟನೆ ಇಡೀ ನಗರವನ್ನೇ ಆಘಾತಕ್ಕೆ ದೂಡಿದೆ. ಈ ಸಂಕಷ್ಟದ ಸಮಯದಲ್ಲಿ, ದೆಹಲಿ ಸರ್ಕಾರವು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಮತ್ತು ಈ ಘಟನೆಯಲ್ಲಿ ಗಾಯಗೊಂಡವರಿಗೆ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ದೆಹಲಿ ಸರ್ಕಾರವು ಪ್ರತಿ ಪೀಡಿತ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ ಮತ್ತು ತಕ್ಷಣದ ಪರಿಹಾರಕ್ಕಾಗಿ ನಾವು ಸಹಾನುಭೂತಿಯ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ. ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ₹10 ಲಕ್ಷ ನೀಡಲಾಗುವುದು, ಶಾಶ್ವತವಾಗಿ ಅಂಗವಿಕಲರಾದ ವ್ಯಕ್ತಿಗಳಿಗೆ ₹5 ಲಕ್ಷ ನೀಡಲಾಗುವುದು ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ₹2 ಲಕ್ಷ ನೀಡಲಾಗುವುದು. ಗಾಯಾಳುಗಳ ಸರಿಯಾದ ಮತ್ತು ಗುಣಮಟ್ಟದ…
ಬೆಂಗಳೂರು: ರಾಜ್ಯದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಇಲಾಖೆ ಮಾಡಲು ಮಹತ್ವದ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಅದೇ ಕೌನ್ಸಿಲಿಂಗ್ ಮೂಲಕ ತ್ರಿವಳಿ ತಜ್ಞರನ್ನು ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ತಾಯಿ, ನವಜಾತ ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು ತಾಲೂಕು ಮಟ್ಟದ 147 ಆಸ್ಪತ್ರೆಗಳು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಸೂತಿ, ಅರಿವಳಿಕೆ ಮತ್ತು ಮಕ್ಕಳ ತಜ್ಞರನ್ನು ತರ್ಕಬದ್ಧಗೊಳಿಸಿ, ಮರು ನಿಯೋಜಿಸಲು ಕೌನ್ಸಿಲಿಂಗ್ ನಡೆಸಲಾಗುವುದು. ಈ ಕ್ರಮದಿಂದಾಗಿ, ತಾಲೂಕು ಮಟ್ಟದ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ತಜ್ಞರ ಸೇವೆ ಸಿಗಲಿದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. https://twitter.com/KarnatakaVarthe/status/1988222909106843714
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಜನಸಂಪರ್ಕ ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಹಾಜರಿರಲಿದ್ದು, ಜನರ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸುವಂತ ಕೆಲಸವನ್ನು ಮಾಡಲಾಗುತ್ತಿದೆ. ಹೀಗಾಗಿ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು, ತಮ್ಮ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ. ನಾಳೆ ಕಲ್ಮನೆಯಲ್ಲಿ ಶಾಸಕರಿಂದ ಜನಸಂಪರ್ಕ ಸಭೆ ಇಂದು ಸಾಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯದ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮಾಹಿತಿ ನೀಡಿದರು. ಈ ಹಿಂದೆ ಹೋಬಳಿ ಮಟ್ಟದಲ್ಲಿ ಶಾಸಕನಾಗಿ ಜನಸಂಪರ್ಕ ಸಭೆಯನ್ನು ನಡೆಸಿದ್ದೆ. ಇದೀಗ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಕಲ್ಮನೆಯಲ್ಲಿ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಜನರ ಬಳಿಗೆ ಸರ್ಕಾರವನ್ನು ಕೊಂಡೊಯ್ಯುವಂತ ಕೆಲಸವನ್ನು ಮಾಡಿ, ಸಮಸ್ಯೆ ಇತ್ಯರ್ಥ ಪಡಿಸುವಂತ ಕೆಲಸ ಮಾಡಲಾಗುತ್ತಿದೆ ಎಂಬುದಾಗಿ ಹೇಳಿದರು. ನಾಳೆಯ ಜನಸಂಪರ್ಕ ಸಭೆಯಲ್ಲಿ ರೈತರ…
ಅಜೆರ್ಬೈಜಾನ್‌ನಿಂದ ಟರ್ಕಿಗೆ ತೆರಳುತ್ತಿದ್ದ ಟರ್ಕಿಶ್ ಸಿ-130 ಮಿಲಿಟರಿ ಸರಕು ವಿಮಾನವು ಮಂಗಳವಾರ ಜಾರ್ಜಿಯಾ-ಅಜೆರ್ಬೈಜಾನ್ ಗಡಿಯಲ್ಲಿ ಅಪಘಾತಕ್ಕೀಡಾಗಿದೆ ಎಂದು ಟರ್ಕಿಶ್ ರಕ್ಷಣಾ ಸಚಿವಾಲಯ ತಿಳಿಸಿದೆ, ಜಂಟಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ. ರಕ್ಷಣಾ ಸಚಿವಾಲಯದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಹೇಳಿಕೆಯ ಪ್ರಕಾರ, “ನಮ್ಮ ದೇಶಕ್ಕೆ ಬರಲು ಅಜೆರ್ಬೈಜಾನ್‌ನಿಂದ ಹೊರಟ ನಮ್ಮ ಸಿ-130 ಮಿಲಿಟರಿ ಸರಕು ವಿಮಾನಗಳಲ್ಲಿ ಒಂದು ಜಾರ್ಜಿಯಾ-ಅಜೆರ್ಬೈಜಾನ್ ಗಡಿಯಲ್ಲಿ ಅಪಘಾತಕ್ಕೀಡಾಗಿದೆ. ಅಜೆರ್ಬೈಜಾನ್ ಮತ್ತು ಜಾರ್ಜಿಯನ್ ಅಧಿಕಾರಿಗಳ ಸಮನ್ವಯದೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿವೆ ಎಂದಿದೆ. ಬಲಿಪಶುಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಹೇಳಿಕೆಯಲ್ಲಿ ಹೀಗೆ ಹೇಳಿದರು: “ಟರ್ಕಿಶ್ ವಾಯುಪಡೆಗೆ ಸೇರಿದ ಮಿಲಿಟರಿ ಸರಕು ವಿಮಾನವು ಗಾಂಜಾದಿಂದ ಹೊರಟು ಜಾರ್ಜಿಯನ್ ಭೂಪ್ರದೇಶಕ್ಕೆ ಪತನಗೊಂಡು ಸೈನಿಕರ ಸಾವಿಗೆ ಕಾರಣವಾದ ಅಪಘಾತದ ಸುದ್ದಿ ನಮ್ಮನ್ನು ತೀವ್ರವಾಗಿ ಬೆಚ್ಚಿಬೀಳಿಸಿದೆ. “ಜೀವ ಕಳೆದುಕೊಂಡವರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನಾನು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ಕಷ್ಟದ ಕ್ಷಣದಲ್ಲಿ, ಈ ದುರಂತ…
ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯನ್ನು ವಿವಿಧ ಸಮೀಕ್ಷಾ ಸಂಸ್ಥೆಗಳಿಂದ ಪ್ರಕಟಿಸಲಾಗಿದೆ. ಈ ಸಮೀಕ್ಷೆಯಲ್ಲಿ ಎನ್ ಡಿ ಎ ಸ್ಪಷ್ಟ ಬಹುಮತ ಪಡೆಯಲಿದೆ ಎಂಬುದಾಗಿ ಹೇಳಲಾಗಿದೆ. ಮಾಟ್ರಿಜ್ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಎನ್ ಡಿಎ 147ರಿಂದ 167 ಸೀಟನ್ನು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷದ ಎಂಜಿಪಿ 70 ರಿಂದ 90 ಸೀಟ್, ಜೆಎಸ್ ಪಿ 0, ಇತರೆ 2ರಿಂದ 6 ಸೀಟು ಗೆಲ್ಲುವ ಸಾಧ್ಯತೆಯನ್ನು ತಿಳಿಸಿದೆ. ಪೀಪಲ್ ಇನ್ ಸೈಟ್ ಸಮೀಕ್ಷೆಯ ಪ್ರಕಾರ ಎನ್ ಡಿಎಗೆ ಸ್ಪಷ್ಟ ಬಹುಮತ ಬರಲಿದೆ ಎಂಬುದಾಗಿ ಹೇಳಲಾಗಿದೆ. ಎನ್ ಡಿಎ 133-143, ಮಹಾಘಟಬಂಧನ್ 93-102, ಇತರೆ 2-9 ಸ್ಥಾನವನ್ನು ಗೆಲ್ಲಲಿವೆ ಎಂಬುದಾಗಿ ಹೇಳಲಾಗಿದೆ. https://twitter.com/ANI/status/1988236009977606355 ಡಿವಿ ರಿಸರ್ಚ್ ನಂತೆ ಎನ್ ಡಿಎಗೆ ಸರಳ ಬಹುಮತ ಬರಲಿದೆ. ಎನ್ ಡಿಎ 132 ರಿಂದ 152, ಮಹಾಘಟಬಂಧನ್ ಗೆ 83-98 ಸೀಟ್, ಜೆಎಸ್ ಪಿ 2ರಿಂದ 4, ಇತರೆ 1 ರಿಂದ 8 ಸೀಟ್ ಪಡೆಯುವ ಸಾಧ್ಯತೆ ಇದೆ…
ನವದೆಹಲಿ: ದೆಹಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಭದ್ರತಾ ಸಂಪುಟ ಸಮಿತಿಯ ಸಭೆ ನಡೆಯಲಿದೆ. ನಾಳೆ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಭದ್ರತಾ ಸಂಪುಟ ಸಮಿತಿ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಸಂಪುಟ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ಭೂತಾನ್ ಪ್ರವಾಸದಲ್ಲಿರುವಂತ ಅವರು ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ. ಭಾರತಕ್ಕೆ ಆಗಮಿಸುತ್ತಿದ್ದಂತೆ ಭದ್ರತಾ ಸಂಪುಟ ಸಮಿತಿ ಸಭೆಯನ್ನು ನಡೆಸಲಿದ್ದಾರೆ. ದೆಹಲಿ ಕಾರು ಸ್ಪೋಟ ಕೇಸ್: ಕೇಂದ್ರ ಗೃಹ ಇಲಾಖೆಗೆ ‘ಪ್ರಾಥಮಿಕ ತನಿಖಾ ವರದಿ’ ಸಲ್ಲಿಕೆ ನವದೆಹಲಿ: ದೆಹಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆಗೆ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಈ ಘಟನೆ ಕುರಿತಂತೆ ತಕ್ಷಣವೇ ತನಿಖೆಗೆ ಇಳಿದಂತ ದೆಹಲಿ ಪೊಲೀಸರು ತಮ್ಮ ಪ್ರಾಥಮಿಕ ತನಿಖಾ…
ನವದೆಹಲಿ: ದೆಹಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆಗೆ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಈ ಘಟನೆ ಕುರಿತಂತೆ ತಕ್ಷಣವೇ ತನಿಖೆಗೆ ಇಳಿದಂತ ದೆಹಲಿ ಪೊಲೀಸರು ತಮ್ಮ ಪ್ರಾಥಮಿಕ ತನಿಖಾ ವರದಿಯನ್ನು ಸಿದ್ಧಪಡಿಸಿದ್ದರು. ಈ ತನಿಖಾ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ದೆಹಲಿ ಸ್ಪೋಟದ ಆರೋಪಿಗಳನ್ನು ಬಿಡಲ್ಲ – ಅಮಿತ್ ಶಾ ದೆಹಲಿಯ ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿಯಲ್ಲಿ ಕಾರು ಸ್ಪೋಟಸಿದಂತ ಆರೋಪಿಗಳನ್ನು ಬಿಡುವುದಿಲ್ಲ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ದೆಹಲಿ ಕಾರು ಸ್ಪೋಟದ ಆರೋಪಿಗಳು ಎಲ್ಲೇ ಇದ್ರೂ ನಾವು ಬಿಡಲ್ಲ. ಪತ್ತೆ ಹಚ್ಚುವಂತ ಕೆಲಸವನ್ನು ತನಿಖಾ ಸಂಸ್ಥೆಗಳು ಕೈಗೊಂಡಿರೋದಾಗಿ ತಿಳಿಸಿದ್ದಾರೆ. https://kannadanewsnow.com/kannada/another-video-of-an-i20-car-goes-viral-2-weeks-before-the-delhi-blasts/ https://kannadanewsnow.com/kannada/money-will-be-deposited-in-the-accounts-of-farmers-who-lost-their-crops-due-to-heavy-rains-cm-siddaramaiah-announces/
ನವದೆಹಲಿ: ಅಕ್ಟೋಬರ್ 29 ರ ಎಸಿಸಿಟಿವಿ ದೃಶ್ಯಾವಳಿಗಳು, ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟಗೊಂಡ ಬಿಳಿ ಹುಂಡೈ ಐ20 ಕಾರು ಖರೀದಿಸಿದ ದಿನದಂದು ಹರಿಯಾಣದ ಫರಿದಾಬಾದ್‌ನಲ್ಲಿ ಮೂವರು ಪ್ರಯಾಣಿಕರೊಂದಿಗೆ ಕಾಣಿಸಿಕೊಂಡಿರುವುದನ್ನು ಬಹಿರಂಗಪಡಿಸಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕಳೆದ ತಿಂಗಳ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಫರಿದಾಬಾದ್ ಬೀದಿಯಲ್ಲಿರುವ ಬಿಳಿ ಹುಂಡೈ ಐ20 ಕಾರಿನಲ್ಲಿ ಮೂವರು ಪ್ರಯಾಣಿಕರಲ್ಲಿ ಇಬ್ಬರು ಸಂಜೆ 4:20 ರ ಸುಮಾರಿಗೆ ಮಾಲಿನ್ಯ ನಿಯಂತ್ರಣ ತಪಾಸಣಾ ಕೇಂದ್ರದಂತೆ ಕಾಣುವ ಸ್ಥಳದಲ್ಲಿ ವಿವಿಧ ಅಂತರಗಳಲ್ಲಿ ವಾಹನವನ್ನು ಪ್ರವೇಶಿಸುತ್ತಿರುವುದನ್ನು ಕಾಣಬಹುದು. ದೃಶ್ಯಗಳಲ್ಲಿ, ವಾಹನವು ಮುಂಭಾಗದಲ್ಲಿ ಇಬ್ಬರು ಮತ್ತು ಹಿಂಭಾಗದಲ್ಲಿ ಮೂರನೇ ವ್ಯಕ್ತಿಗಳು ಕುಳಿತಿರುವಂತೆ ಕಾಣಬಹುದು. https://twitter.com/htTweets/status/1988183840360460676 ಸೋಮವಾರ ಸಂಜೆ ಐತಿಹಾಸಿಕ ಸ್ಮಾರಕದ ಬಳಿ ಸ್ಫೋಟಗೊಂಡು 13 ಜನರು ಸಾವನ್ನಪ್ಪಿ 21 ಜನರು ಗಾಯಗೊಂಡ ದುರ್ಘಟನೆಗೆ ಕಾರಣವಾದ ಕಾರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ನಿವಾಸಿ ಡಾ. ಉಮರ್ ಉನ್ ನಬಿ ಅವರದ್ದಾಗಿದ್ದು, ಭಯೋತ್ಪಾದಕ ಸಂಬಂಧಗಳನ್ನು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಎಚ್‌ಟಿ ವರದಿಯ…
ನವದೆಹಲಿ: ದೆಹಲಿಯಲ್ಲಿ ಕಾರು ಸ್ಪೋಟ ಮಾಡಿ 12 ಮಂದಿ ಸಾವಿಗೆ ಕಾರಣವಾಗಿರುವಂತ ಯಾರನ್ನೂ ಬಿಡುವುದಿಲ್ಲ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. https://twitter.com/ANI/status/1988208654215246201 ಇಂದು ಭದ್ರತಾ ಪಡೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದಂತ ಅವರು, ಮಾತನಾಡಿದಂತ ಅವರು, ದೆಹಲಿ ಕೆಂಪುಕೋಟೆ ಬಳಿಯಲ್ಲಿ ಐ20 ಕಾರು ಸ್ಪೋಟ ಘಟನೆ ಸಂಬಂಧ ತನಿಖೆ ಮುಂದುವರೆದಿದೆ. ಸ್ಪೋಟಕದ ಕಾರಣಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಿರುವುದಾಗಿ ತಿಳಿಸಿದರು. ದೆಹಲಿ ಕಾರು ಸ್ಪೋಟಕದ ಆರೋಪಿಗಳ ಪತ್ತೆಗೆ ಕ್ರಮ ವಹಿಸುವಂತೆ ಸೂಚಿಸಿದಂತ ಅವರು, ಕಾರು ಸ್ಪೋಟ ಮಾಡಿದ ಯಾರನ್ನೂ ಬಿಡುವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದರು. ಇದರ ಮಧ್ಯೆ ಕಾರು ಸ್ಪೋಟದಿಂದಾಗಿ 12 ಮಂದಿ ಬಲಿಯಾದ ಘಟನೆ ಸಂಬಂಧ ನಾಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ಕೂಡ ನಡೆಯಲಿದೆ. https://kannadanewsnow.com/kannada/delhi-car-blast-case-central-government-orders-national-investigation-agency-nia-probe/ https://kannadanewsnow.com/kannada/money-will-be-deposited-in-the-accounts-of-farmers-who-lost-their-crops-due-to-heavy-rains-cm-siddaramaiah-announces/
ಬೆಂಗಳೂರು: ದೇಶ-ವಿದೇಶಗಳ ಗ್ರಾಹಕರಿಗೆ ಕರ್ನಾಟಕದ ಹೆಮ್ಮೆಯ ಪಾರಂಪರಿಕ ಮತ್ತು ಜಿಐ ಮಾನ್ಯತೆ ಹೊಂದಿರುವ ವಿಶಿಷ್ಟ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ನಲ್ಲಿ ಕೈಗಾರಿಕಾ ಇಲಾಖೆಯ ಮೂಲಕ ನಿರ್ಮಿಸಿರುವ ಆಕರ್ಷಕ ಮತ್ತು ಸುಸಜ್ಜಿತ ಕಲಾಲೋಕ ಮಳಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರಕಲಾ ರಚನೆ ಮತ್ತು ಘಂಟಾನಾದದ ಮೂಲಕ ಮಂಗಳವಾರ ಉದ್ಘಾಟಿಸಿದರು. ಉದ್ಘಾಡಿಸಿ ಮಾತನಾಡಿದ ಮುಖ್ಯಮಂತ್ರಿಗಳು, `ಕರ್ನಾಟಕದ ಕೈಗಾರಿಕಾ ಭೂಪಟದಲ್ಲಿ ಇದೊಂದು ಸಂತಸದ ಕ್ಷಣವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನವು ಜನನಿಬಿಡತೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಪ್ರತೀದಿನವೂ ಇಲ್ಲಿ ಹತ್ತಾರು ಸಾವಿರ ಪ್ರಯಾಣಿಕರು ಬರುತ್ತಿರುತ್ತಾರೆ. ಇಂಥವರಿಗೆ ಇಲ್ಲಿಗೆ ಬಂದ ತಕ್ಷಣವೇ ಕರ್ನಾಟಕದ ಅಭಿಮಾನದ ಪಯಣ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ಕಲಾಲೋಕ ಮಳಿಗೆ ನಿರ್ಮಿಸಲಾಗಿದೆ. ಇದರ ಮೂಲಕ ಕರ್ನಾಟಕದ ಹೆಮ್ಮಯ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ಮಾರಾಟ ಸಾಧಿಸಲಾಗುವುದು’ ಎಂದರು. ಸಚಿವ ಎಂ ಬಿ ಪಾಟೀಲ ಮಾತನಾಡಿ, `ಟರ್ಮಿನಲ್-2ರ ಸಮೀಪ ನಿರ್ಮಿತವಾಗಿರುವ ಕಲಾಲೋಕ ಮಳಿಗೆಯಲ್ಲಿ…














