Author: kannadanewsnow09

ಬೆಂಗಳೂರು: ಬಳ್ಳಾರಿಯ ಸಂಸದ ಇ.ತುಕಾರಾಂ ಅವರು ಎಲ್ಲ ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರನ್ನು ಅನರ್ಹಗೊಳಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು. ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾನು, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಇವತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ಅವರಿಗೆ ಇ.ತುಕಾರಾಂ ಅನರ್ಹತೆ ಸಂಬಂಧ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಕುರಿತು ಸಾಕಷ್ಟು ಬಾರಿ ಚರ್ಚೆಗಳಾಗಿವೆ. ಬಿಜೆಪಿ, ಈ ನಿಗಮದ ಹಗರಣವನ್ನು ಮುಂದಿಟ್ಟು ಹೋರಾಟಗಳನ್ನು ನಡೆಸಿದೆ. ನಂತರ ತನಿಖೆ ಆಧಾರದಲ್ಲಿ ಕಳೆದ ತಿಂಗಳು ಇ.ಡಿ. ಪ್ರೆಸ್ ನೋಟನ್ನೂ ಬಿಡುಗಡೆ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಣವನ್ನು ಕಾಂಗ್ರೆಸ್ ಸರಕಾರ ಲೂಟಿ ಮಾಡಿದ್ದಾಗಿ ತಿಳಿಸಿದ್ದಾರೆ…

Read More

ಬೆಂಗಳೂರು: ನಡ್ಡಾ, ಪ್ರಹ್ಲಾದ್ ಜೋಷಿ ಸೇರಿ ಯೋಗೇಶ್ವರಗೆ ಜೆಡಿಎಸ್ ಟಿಕೆಟ್ ಕೊಡಿ ಎಂದು ಕೇಳಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಯೋಗೇಶ್ವರ್ ಸ್ವಾಗತಕ್ಕೆ ಕ್ಯೂ ನಿಂತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಚನ್ನಪಟ್ಟಣ ಕಾರ್ಯಕರ್ತರು, ಮುಖಂಡರ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ ಅವರು; ಚನ್ನಪಟ್ಟಣ ಕಾರ್ಯಕರ್ತರ ಸಭೆಯಲ್ಲಿ ಅವರ ಭಾವನೆಗಳನ್ನು ಅರಿತುಕೊಂಡಿದ್ದೇನೆ. ಸ್ಥಳಿಯವಾಗಿ ಬಿಜೆಪಿ ನಾಯಕರಲ್ಲಿ ಗೊಂದಲವಿದೆ. ಇನ್ನೂ ಮೂರು ದಿನ ಸಮಯವಿದೆ. ಎಲ್ಲಾ ಬೆಳವಣಿಗೆ ಗಮನಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಬೆಳಗ್ಗೆಯಿಂದ ಎಲ್ಲಾ ಕಾಂಗ್ರೆಸ್ ನಾಯಕರು ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಸಾಲು ಸಾಲಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸಿಎಂ, ಡಿಸಿಎಂ ಸೇರಿದರೆ ಕೈ ಪಕ್ಷದ ಅನೇಕ ನಾಯಕರು ಸ್ವಾಗತ ಕೋರುತ್ತಿದ್ದಾರೆ. ಮೂರು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ನನ್ನ‌ ಮುಂದೆ ಪ್ರಸ್ತಾವನೆ ಇಟ್ಟಿದ್ದರು. ಅವರಿಗೆ ಜೆಡಿಎಸ್ ಪಕ್ಷದಿಂದಲೇ ಬಿ ಫಾರಂ ಕೊಡಿ ಎಂದು ಅವರು ಕೇಳಿದ್ದರು. ಅವರ…

Read More

ಬೆಂಗಳೂರು: ಉದ್ಯೋಗ ಸನ್ನದ್ಧತೆಗಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸಲು ʼನಿಪುಣ ಕರ್ನಾಟಕʼ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಘೋಷಿಸಿದ್ದು, ಶೀಘ್ರದಲ್ಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ಬೆಂಗಳೂರು ಟೆಕ್ ಶೃಂಗಸಭೆಗೆ ಮುನ್ನ ಸಚಿವರು ಆರ್ ಅಂಡ್ ಡಿ ಲ್ಯಾಬ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳ‌ ತಜ್ಞರು ಹಾಗೂ ಪ್ರತಿನಿಧಿಗಳ ಜೊತೆ ಪರಸ್ಪರ ಸಂವಾದ ಮಾಡಿ ಸಚಿವರು ಮಾತನಾಡಿದರು ಯುವ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಸಚಿವರು ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವ ಮತ್ತು ಮನಃಸ್ಥಿತಿಯನ್ನು ಬೆಳೆಸಲು ವಿದ್ಯಾರ್ಥಿಗಳನ್ನು ಚರ್ಚೆಗಳು, ರಸಪ್ರಶ್ನೆಗಳು ಮತ್ತು ವಿಜ್ಞಾನ ಪ್ರದರ್ಶನಗಳಂತಹ ಜ್ಞಾನಾಭಿವೃದ್ಧಿ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತಹ ಕಾರ್ಯಕ್ರಮ ಚೌಕಟ್ಟನ್ನು ರೂಪಿಸಲು ಸಚಿವರು ಸಲಹೆ ನೀಡಿದರು. ಕರ್ನಾಟಕ ಸರ್ಕಾರದ ಉದ್ದೇಶವು ಅತ್ಯಂತ ಸ್ಪಷ್ಟವಾಗಿದ್ದು, ನಾವು ಕೇವಲ ಹೂಡಿಕೆಯ ತಾಣವಾಗಿ ಇರಲು ಬಯಸುವುದಿಲ್ಲ.ಜ್ಞಾನ ಹಾಗೂ ಕೌಶಲ್ಯವೇ ನಮ್ಮ…

Read More

ಚಿತ್ರದುರ್ಗ: ಮೇಲಧಿಕಾರಿಗಳ ಅನುಮತಿಯಿಲ್ಲದೇ ಕರ್ತವ್ಯಕ್ಕೆ ಗೈರು ಹಾಜರಾಗಿ, ಕರ್ತವ್ಯದ ವೇಳೆಯಲ್ಲೇ ಅಶಿಸ್ತು ವರ್ತನೆ ತೋರಿದ ಕಾರಣ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನೇರಲಗುಂಟೆ ಗ್ರಾಮ ಪಂಚಾಯ್ತಿ ಪಿಡಿಒ ಹನುಮಂತ ಕುಮಾರ್ ಅಮಾನತುಗೊಳಿಸಿ ಜಿಲ್ಲಾ ಪಂಚಾಯ್ತಿ ಸಿಇಒ ಆದೇಶಿಸಿದ್ದಾರೆ. ಇಂದು ಆದೇಶ ಹೊರಡಿಸಿರುವಂತ ಚಿತ್ರದುರ್ಗ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಎಸ್.ಜೆ ಸೋಮಶೇಖರ್ ಅವರು, ಹನುಮಂತ ಕುಮಾರ್.ಎಸ್ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನೇರಲಗುಂಟೆ ಗ್ರಾಮ ಪಂಚಾಯತಿ, ಇವರು ಗ್ರಾಮ ಪಂಚಾಯತಿ ಕಛೇರಿ ಕರ್ತವ್ಯಕ್ಕೆ ದಿನಾಂಕ:30-09-2024 ರಿಂದ ಅನಧಿಕೃತವಾಗಿ ಗೈರು ಹಾಜರಾಗಿರುತ್ತಾರೆ ಎಂದಿದ್ದಾರೆ. ಸಾರ್ವಜನಿಕರ ಕುಂದುಕೊರತೆಗಳಿಗೆ ಸಾರ್ವಜನಿಕರು ಮತ್ತು ಜನ ಪ್ರತಿನಿದಿಗಳು ದೂರವಾಣಿ ಕರೆ ಮಾಡಿದರೂ ಸಹ ಸ್ವೀಕರಿಸದೆ ಇರುವುದರಿಂದ ಸರ್ಕಾರಿ ಯೋಜನೆಗಳ ಅನುಷ್ಟಾನದಲ್ಲಿ ಅಡಚಣೆ ಉಂಟಾಗಿದ್ದು, ಸದರಿಯವರನ್ನು ಬದಲಾವಣೆ ಮಾಡಿ ಅದೇ ಗ್ರಾಮ ಪಂಚಾಯತಿಯ ಗ್ರೇಡ್-1 ಕಾರ್ಯದರ್ಶಿಯಾದ ಕೆ.ಎಸ್.ಜಯಣ್ಣ ಇವರಿಗೆ ಪ್ರಭಾರ ವ್ಯವಸ್ಥೆ ಮಾಡಿಕೊಡಲು ಸದರಿ ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರು ಕೋರಿರುತ್ತಾರೆ ಎಂದು ಹೇಳಿದ್ದಾರೆ. ಅದರಂತೆ ನೇರಲಗುಂಟೆ ಗ್ರಾಮ…

Read More

ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಅದರ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೂವರು ದುರ್ಮರಣ ಹೊಂದಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವಾರು ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇದೀಗ ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ 16 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಒಂದು ಕುಸಿದು ಬಿದ್ದಿದ್ದು,ಕಟ್ಟಡದ ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಇವರಲ್ಲಿ ಮೂವರು ದುರ್ಮರಣ ಹೊಂದಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 16 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಈ ಒಂದು ಘಟನೆ ನಡೆದಿದೆ. ಸ್ಥಳೀಯರು ಹೇಳುತ್ತಿರುವ ಪ್ರಕಾರ ಈ ಒಂದು ನಿರ್ಮಾಣ ಹಂತದ ಕಟ್ಟಡದ ಕೆಳಗಡೆ ಅನೇಕ ಕಾರ್ಮಿಕರು ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಕುಸಿದು ಬಿದ್ದಿರುವಂತ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ, ಅದರಡಿಯಲ್ಲಿ ಮೂವರು…

Read More

ಬೆಂಗಳೂರು: ರಾಜಧಾನಿ ಬೆಂಗಳೂರು ದಿನೇ ದಿನೇ ತನ್ನ ಕಬಂಧ ಬಾಹುವನ್ನು ವಿಸ್ತರಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಇರುವ ಪ್ರಮುಖ ಬೇಡಿಕೆಯಾದ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ಅವರಿಗೆ ರಾಮನಗರ, ಮಂಡ್ಯ ಹಾಗೂ ಮೈಸೂರು ಭಾಗದ ಜನಪ್ರತನಿಧಿಗಳ ತಂಡವು ಮನವಿ ಮಾಡಿದೆ. ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸಿದರೆ ಈ ಭಾಗದ ಜನತೆಗೆ ಅನುಕೂಲವಾಗುವುದರ ಜೊತೆಗೆ ಬೆಂಗಳೂರು ದಕ್ಷಿಣ ಭಾಗವೂ ವಾಣಿಜ್ಯ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ . ರಾಮನಗರ ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್, ಮಾಗಡಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಮಳವಳ್ಳಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಶ್ರೀರಂಗಪಟ್ಟಣ ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಮದ್ದೂರು ಶಾಸಕರಾದ ಕೆ.ಎಂ. ಉದಯ್‌,…

Read More

ಬೆಂಗಳೂರು: ನಗರದಲ್ಲಿ ಬೆಸ್ಕಾಂನಿಂದ ( BESCOM ) ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ, ದಿನಾಂಕ 23-10-2024ರ ನಾಳೆ, ಹಾಗೂ ದಿನಾಂಕ 24-10-2024ರ ಗುರುವಾರದ ನಾಡಿದ್ದು ನಗರದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಬೆಸ್ಕಾಂ ಮಾಹಿತಿ ನೀಡಿದ್ದು, ಬೆಂಗಳೂರು: 66/11 ಕೆವಿ. ಆಲೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ವಿದ್ಯುತ್ ಸರಬರಾಜಾಗುತ್ತಿರುವ ನೆಲಮಂಗಲ ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳಲ್ಲಿ ದಿನಾಂಕ: 23.10.2024 ರಂದು ಬುಧವಾರ ಬೆಳಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕಾಗಿ ಕೋರಲಾಗಿದೆ. ನಾಳೆ ಈ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ ವಿದ್ಯುತ್ ಅಡಚಣೆಯುಂಟಾಗುವ ಪ್ರದೇಶಗಳು: ನೆಲಮಂಗಲ ತಾಲ್ಲೂಕಿನ ಮಾಕಳಿ, ಮಂತ್ರಿ ಬಡಾವಣೆ, ನರಸೀಪುರ ಬಿಡಿಎ ಪ್ಲಾಟ್ಸ್, ಅಡಕಮಾರನಹಳ್ಳಿ, ದೊಂಬರಹಳ್ಳಿ, ರಾಜೇಶ್ವರಿ ನಗರ, ದಾಸನಪುರ, ದೇವಣ್ಣಪಾಳ್ಯ, ಹಾರೋಕ್ಯಾತನಹಳ್ಳಿ, ಗೌಡಹಳ್ಳಿ, ಹೆಗ್ಗಡದೇವನಪುರ, ಹುಸ್ಕೂರು…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಯುವಕರಲ್ಲಿ ಪಾರ್ಶ್ವವಾಯು ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣವನ್ನು ಅಧ್ಯಯನದಿಂದ ತಿಳಿದು ಬಂದಿದ್ದು, ಇದಕ್ಕೆ ಹೆಚ್ಚಿದ ಆಲ್ಕೋಹಾಲ್ ಸೇವನೆ ಅಂದರೆ ಮದ್ಯಪಾನ ಸೇವನೆಯೇ ಕಾರಣ ಎಂಬುದಾಗಿ ಶಾಕಿಂಗ್ ಮಾಹಿತಿಯನ್ನು ಬಿಚ್ಚಿಟ್ಟಿದೆ. ಒಂದು ಕಾಲದಲ್ಲಿ ಪ್ರಾಥಮಿಕವಾಗಿ ವಯಸ್ಸಾದವರ ಮೇಲೆ ಪರಿಣಾಮ ಬೀರುವ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಲ್ಪಟ್ಟಿದ್ದ ಪಾರ್ಶ್ವವಾಯು ಈಗ ಅತಿಯಾದ ಮದ್ಯಪಾನ ಸೇರಿದಂತೆ ಜೀವನಶೈಲಿ ಅಭ್ಯಾಸಗಳಿಂದಾಗಿ ಯುವ ಜನಸಂಖ್ಯೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 2022 ರ ಇಂಟರ್ಸ್ಟ್ರೋಕ್ ಅಧ್ಯಯನವು ಹೆಚ್ಚಿನ ಮತ್ತು ಮಧ್ಯಮ ಆಲ್ಕೋಹಾಲ್ ಸೇವನೆಯು ಪಾರ್ಶ್ವವಾಯುವಿಗೆ ಸಂಬಂಧಿಸಿದ ಹೆಚ್ಚಿನ ಅಸಮಾನತೆಗಳೊಂದಿಗೆ ಸಂಬಂಧಿಸಿದೆ ಎಂದು ಬಹಿರಂಗಪಡಿಸಿದೆ. ಹೆಪ್ಪುಗಟ್ಟುವಿಕೆ ಅಥವಾ ಒಡೆದ ರಕ್ತನಾಳದಿಂದಾಗಿ ಮೆದುಳಿನ ಭಾಗಕ್ಕೆ ಆಮ್ಲಜನಕ ಸಿಗದಿದ್ದಾಗ ಪಾರ್ಶ್ವವಾಯು ಸಂಭವಿಸುತ್ತದೆ. ಇದು ಕೆಲವು ಮೆದುಳಿನ ಕೋಶಗಳ ಸಾವಿಗೆ ಕಾರಣವಾಗುತ್ತದೆ, ಇದು ಮಾತನಾಡಲು, ನಡೆಯಲು, ಯೋಚಿಸಲು ಅಥವಾ ಕೈಗಳನ್ನು ಚಲಿಸಲು ಕಷ್ಟವಾಗುವಂತಹ ಅಂಗವೈಕಲ್ಯಗಳಿಗೆ ಕಾರಣವಾಗುತ್ತದೆ. ಪಾರ್ಶ್ವವಾಯುವಿಗೆ ಸಂಬಂಧಿಸಿದ ಸಾವುಗಳು 2020 ರಲ್ಲಿ 6.6 ಮಿಲಿಯನ್ ನಿಂದ 2050 ರ ವೇಳೆಗೆ 9.7…

Read More

ಬೆಂಗಳೂರು: ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಈಗ ಜಲಪ್ರಳಯವೇ ಉಂಟಾಗಿದೆ. ಇಂತಹ ಸಮಸ್ಯೆ ನಿವಾರಿಸುವ ಸಂಬಂಧ ಬಿಬಿಎಂಪಿಯ ಕಂಟ್ರೋಲ್ ರೂಂಗೆ ಬಂದ ಕರೆಗಳು ಮಾತ್ರ ಸಾವಿರಾರು. ಅದೆಷ್ಟು ಅಂತ ಮುಂದೆ ಓದಿ. ಈ ಬಗ್ಗೆ ಬಿಬಿಎಂಪಿಯಿಂದ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 22-10-2024ರ ಇಂದಿನ ಸಂಜೆ 3 ಗಂಟೆಯವರೆಗೆ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿರುವ ಬಗ್ಗೆ 232 ದೂರುಗಳು ಬಂದಿದ್ದರೇ, ಇವುಗಳಲ್ಲಿ 94 ದೂರು ಪರಿಹರಿಸಲಾಗಿದೆ. ಮನೆಗೆ ನೀರು ನುಗ್ಗಿದ ಬಗ್ಗೆ 1066 ದೂರುಗಳು ದಾಖಲಾಗಿದ್ದಾವೆ. ಇವುಗಳಲ್ಲಿ 477 ಪರಿಹರಿಸಲಾಗಿದೆ ಎಂದಿದೆ. ಇನ್ನೂ ಬೆಂಗಳೂರು ವೆಸ್ಟ್ ವಲಯದಲ್ಲಿ 2, ಸೌತ್ ವಲಯಲ್ಲಿ ಒಂದು, ರಾಜರಾಜೇಶ್ವರಿ ನಗರ ವಲಯದಲ್ಲಿ ಒಂದು, ದಾಸರಹಳ್ಳಿಯಲ್ಲಿ ನಾಲ್ಕು ಸೇರಿದಂತೆ 8 ಮರಗಳು ಮುರಿದು ಬಿದ್ದಿದ್ದಾವೆ. ಇವುಗಳಲ್ಲಿ ನಾಲ್ಕನ್ನು ತೆರವುಗೊಳಿಸಲಾಗಿದೆ. ಮರದ ಕೊಂಬೆಗಳು ಮುರಿದು ಬಿದ್ದ ಬಗ್ಗೆ 22 ದೂರುಗಳು ಬಂದಿದ್ದು, 15 ಮರದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದಿದೆ. ಒಟ್ಟಾರೆಯಾಗಿ ಬೆಂಗಳೂರಲ್ಲಿ ಮಳೆಯಿಂದ ಉಂಟಾದಂತ ಅವಾಂತರ ಸಂಬಂಧ 8…

Read More

ಚಿತ್ರದುರ್ಗ:ಯೋಗ ಬಲ್ಲವನಿಗೆ ರೋಗ ಇಲ್ಲ. ವೈದ್ಯರು ನೀಡುವ ಔಶಧಿ ಗುಣ ಯೋಗದಲ್ಲಿದೆ ಎಂದು ಐಯುಡಿಪಿನಿಸರ್ಗ ಯೋಗ ಕೇಂದ್ರದ ಅಧ್ಯಕ್ಷರಾದ ರಾಮಣ್ಣ ತಿಳಿಸಿದರು. ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದಲ್ಲಿ ನಡೆದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು,ನಮ್ಮ ಯೋಗ ಕೇಂದ್ರದ ಯೋಗಪಟುಗಳಾದ ಗೀತಮ್ಮ ಹಾಗು ವಾಸವಿಯವರು ಹರಿದ್ವಾರದಲ್ಲಿ ನಡೆದ ಶಿಕ್ಷಕ ತರಭೇತಿ ಶಿಭಿರದಲ್ಲಿ ಭಾಗವಹಿಸಿ ಯಶಸ್ವಿಯಾಗಿ ತರಭೇತಿ‌ಪಡೆದು ತವರಿಗೆ ಮರಳಿದ್ದಾರೆ. ಇದು ನಮ್ಮ ಯೋಗ ಕೇಂದ್ರಕ್ಕೊಂದು ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಧನೆ ಇಡೀ ಹೆಣ್ಣು ಸಂಕುಲಕ್ಕೆ ಮಾದರಿ ಎನಿಸಿದೆ‌. ಇಂದು ಹೆಣ್ಣು ಸಂಕುಲವು ಯಾವುದರಲ್ಲು ಕಡಿಮೆ ಇಲ್ಲ. ಇಡೀ ಜಗತ್ತಿಗೆ ಹೆಣ್ಣಿನ‌ಸಾಧನೆ ಮಾದರಿ ಎನಿಸಿದೆ. ಹೆಣ್ಣು ಈಜಗತ್ತಿನ ಸೃಷ್ಟಿ ದೇವತೆ ಎನಿಸಿದ್ದಾರೆ. ಈ ಭೂಮಿ ಹೆಣ್ಣು,ನಾವು ನಿತ್ಯ ಖರ್ಚು ಮಾಡುವ ಲಕ್ಷ್ಮಿ ಹೆಣ್ಣು ಅಂತೆಯೇ ಕಲಿಯುವ ವಿದ್ಯೆ ಎನಿಸಿರುವ ಸರಸ್ವತಿ‌ ಕೂಡ ಹೆಣ್ಣಾಗಿದ್ದು, ಎಲ್ಲಾ‌ ಕ್ಷೇತ್ರಗಳಲ್ಲು ಹೆಣ್ಮಕ್ಕಳು ಸಾಧನೆಯಲ್ಲಿ ಮುಂದಿದ್ದಾರೆ. ಹೀಗಾಗಿ ಹೆಣ್ಣುಮಕ್ಕಳು ಯಾವುದರಲ್ಲು ಕಡಿಮೆ ಇಲ್ಲ ಎನ್ನಿಸ್ತಿದೆ. ಒಂದು ಹೆಣ್ಣು ಮನಸು ಮಾಡಿದರೆ…

Read More