Author: kannadanewsnow09

ಶಿವಮೊಗ್ಗ : ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮೂರಿನ ಆಸ್ತಿ. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲ ಕಾಲೇಜು ಮಾತ್ರವಲ್ಲದೇ, ಸಮಾಜ ಸಹ ಮಾಡಬೇಕು ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ  ನೆಹರೂ ಮೈದಾನದಲ್ಲಿ ಬುಧವಾರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಸರ್ಕಾರಿ ಶಾಲಾಕಾಲೇಜು ಎಂದರೆ ಅಸಡ್ಡೆಯಿಂದ ನೋಡುವ ದಿನಗಳು ದೂರವಾಗಿದೆ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಸರ್ಕಾರಿ ಪದವಿಪೂರ್ವ ಕಾಲೇಜು ಐದು ದಶಕ ಪೂರೈಸಿರುವ ಹಿನ್ನೆಲೆಯಲ್ಲಿ ಅನೇಕ ಅಭಿವೃದ್ದಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿದ್ದು 95 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಐದು ಕೊಠಡಿ ಲೋಕಾರ್ಪಣೆ ಮಾಡಲಾಗಿದೆ. ಸುಣ್ಣಬಣ್ಣಕ್ಕೆ, ರಿಪೇರಿ, ಶೌಚಾಲಯ ನಿರ್ಮಾಣಕ್ಕೆ 50 ಲಕ್ಷ ರೂ. ಖರ್ಚು ಮಾಡಿದೆ. ರಂಗಮಂದಿರದ ಅಗತ್ಯವಿದ್ದು ಅದನ್ನು ಮುಂದಿನ ಬಜೆಟ್‌ನಲ್ಲಿ ತರಲಾಗುತ್ತದೆ ಎಂದರು. ನೀವು ಓದಿದ ಶಾಲೆ…

Read More

ಶಿವಮೊಗ್ಗ : ಸಾಗರ ಉಪವಿಭಾಗೀಯ ಕೇಂದ್ರ ಜಿಲ್ಲೆಯಾದರೆ ಮಾತ್ರ ನಮಗೆ ಆಗುತ್ತಿರುವ ಮಲತಾಯಿಧೋರಣೆಯಿಂದ ಮುಕ್ತಿ ಸಿಗುತ್ತದೆ. ಅಭಿವೃದ್ದಿ ಸೇರಿ ಎಲ್ಲ ಹಂತದಲ್ಲಿಯೂ ಸಾಗರವನ್ನು ತೀರ ನಿರ್ಲಕ್ಷ್ಯ ಮಾಡಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಎಂದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಗರ ಮಲೆನಾಡಿನ ಮಲತಾಯಿ ಮಕ್ಕಳು ಎನ್ನುವಂತೆ ನಡೆಸಿಕೊಳ್ಳುತ್ತಿದ್ದಾರೆ. ಸಾಗರ ಉಪವಿಭಾಗೀಯ ಕೇಂದ್ರ ಜಿಲ್ಲೆಯಾದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಸಾಗರ ಜಿಲ್ಲೆ ಮಾಡಿ ಎನ್ನುವ ಹೋರಾಟ ನಾ.ಡಿಸೋಜ, ಕೆ.ವಿ.ಸುಬ್ಬಣ್ಣ ಅವರಿಂದ ಪ್ರಾರಂಭವಾಗಿ ಈಗಿನ ಜಿಲ್ಲಾ ಹೋರಾಟ ಸಮಿತಿ ಅತ್ಯಂತ ವ್ಯವಸ್ಥಿತ ಹೋರಾಟ ರೂಪಿಸಿದೆ. ಕರೂರು ಭಾರಂಗಿ ಹೋಬಳಿ ಜಿಲ್ಲಾ ಕೇಂದ್ರ ಸಂಪರ್ಕಿಸಲು ನೂರಾರು ಕಿ.ಮೀ. ಕ್ರಮಿಸಬೇಕಾಗಿದೆ. ಇದರ ಜೊತೆಗೆ ಮಂಗನಕಾಯಿಲೆಯಂತಹ ಮಾರಕ ರೋಗಬಾಧೆ ನಮ್ಮ ತಾಲ್ಲೂಕನ್ನು ಹೈರಾಣಾಗಿಸಿದೆ. ಸುಸಜ್ಜಿತ ಜಿಲ್ಲಾಸ್ಪತ್ರೆ ಇದ್ದರೆ ಇಂತಹ ಕಾಯಿಲೆಗಳಿಗೆ ಸಂಶೋಧನೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ…

Read More

ಶಿವಮೊಗ್ಗ : ಫೆಬ್ರವರಿ 3ರಿಂದ ನಡೆಯಲಿರುವ ಮಾರಿಕಾಂಬಾ ದೇವಿಯ ಜಾತ್ರೆಯ ಆರಂಭಿಕ ಹಂತವಾದ ಮರ ಕಡಿಯುವ ಶಾಸ್ತ್ರ ಮಂಗಳವರ ವಿದ್ಯುಕ್ತವಾಗಿ ನಡೆಯಿತು. ಉಪ್ಪಾರ ಕೇರಿಯ ಚಿಕ್ಕಮ್ಮನ ಮನೆಯಲ್ಲಿ ಪೋತರಾಜನಿಗೆ ವಿಶೇಷ ಪೂಜೆ ಸಲ್ಲಿಸಿ, ಅರಿಶಿನ ಶಾಸ್ತ್ರ ಮುಗಿಸಿ ಅಲ್ಲಿಂದ ಮಾರಿಕಾಂಬಾ ದೇವಸ್ಥಾನಕ್ಕೆ ಕರೆದು ಕೊಂಡು ಬರಲಾಯಿತು. ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೋತರಾಜ ಮರ ಹುಡುಕುವ ಕಾರ್ಯಕ್ಕೆ ಮುಂದಾದನು. ಅತ್ಯಂತ ಆವೇಶಭರಿತನಾಗಿ ಚಾಟಿಸೇವೆ ಮೂಲಕ ಪೋತರಾಜ ಮರ ಹುಡುಕಲು ಪ್ರಾರಂಭ ಮಾಡಿದನು. ಸಾಗರ ಹೋಟೆಲ್ ಸರ್ಕಲ್ ಮೂಲಕ ಮರ ಹುಡುಕುತ್ತಾ ಹೊರಟ ಪೋತರಾಜನ ಹಿಂದೆ ಸಾವಿರಾರು ಭಕ್ತರು ಹಿಂಬಾಲಿಸಿದರು. ನಂತರ ಜೋಗ ರಸ್ತೆಯ ರಾಮ ದೇವಸ್ಥಾನದ ಸಮೀಪ ಹಲಸಿನ ಮರ ಗುರುತಿಸಿದ ಪೋತರಾಜ ಚಾಟಿಯಿಂದ ಹೊಡೆಯುವ ಮೂಲಕ ಮರ ಕಡಿಯುವ ಶಾಸ್ತ್ರವನ್ನು ಮುಗಿಸಿದರು. https://youtu.be/sJ-lYWv_7tM?si=bJrec0s_mJZ2vbPq ಇದಕ್ಕೂ ಮೊದಲು ಉಪ್ಪಾರ ಕೇರಿಯಲ್ಲಿರುವ ಪೋತರಾಜನ ಮನೆಯಲ್ಲಿ ಮರ ಕಡಿಯುವ ಶಾಸ್ತ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನ ನಡೆಯಿತು. ಸಂಸದ ಬಿ.ವೈ.ರಾಘವೇಂದ್ರ,…

Read More

ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ. 26 ರಂದು ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಸೋಮಿನಕೊಪ್ಪ, ಹೊಂಗಿರಣ ಲೇಔಟ್, ಗೋಕುಲ್ ಲೇಔಟ್, ಸಹ್ಯಾದ್ರಿನಗರ, ಮುನಿಯಪ್ಪ ಲೇಔಟ್, ಸಂಗೊಳ್ಳಿ ರಾಯಣ್ಣ ಲೇಔಟ್, ವೆಟರ‍್ನರಿ ಕಾಲೇಜು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Read More

ತಿರುಪತಿ: ತಿರುಪತಿ ತಿರುಮಲಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು. ಅಲ್ಲಿ ನಡೆಯುತ್ತಿರುವಂತಿ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಪರಿಷತ್ ಸದಸ್ಯ ಶರವಣ ತಿರುಪತಿ ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ನ್ಯೂನತೆಗಳಿರುವುದಾಗಿ ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಾವೇ ಖುದ್ದು ಭೇಟಿ ನೀಡಿ ಪರಿವೀಕ್ಷಣೆ ನಡೆಸುವುದಾಗಿ ಉತ್ತರಿಸಿದ್ದರು. ಅದರಂತೆ ನಿನ್ನೆಯ ಮಂಗಳವಾರದಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿರುಮಲಕ್ಕೆ ಭೇಟಿ ನೀಡಿ, ಟಿಟಿಡಿ ಅಧಿಕಾರಿಗಳೊಂದಿಗೆ ತಿರುಮಲದಲ್ಲಿರುವ ಕರ್ನಾಟಕ ಸರ್ಕಾರದ 3 ಅತಿಥಿ ಗೃಹಗಳು ಹಾಗೂ ಛತ್ರದ ಪರಿಶೀಲನೆ ನಡೆಸಿದರು. ಬಾಕಿ ಉಳಿದಿರುವ ಎಲ್ಲಾ ಸಮಸ್ಯೆ/ ಕಾಮಗಾರಿಗಳನ್ನು ಮಾರ್ಚ್ 2026 ರೊಳಗೆ ಪೂರ್ಣ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. *ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಕೆಳಕಂಡ ವಿಷಯಗಳ ಕುರಿತು ಚರ್ಚೆ ನಡೆಸಿದರು. 1. ತಿರುಮಲದಲ್ಲಿನ ಭೂಮಿಯ ಲೀಸ್ ವಿಷಯ 2. ಟಿಟಿಡಿ ವಾಪಸ್ ಪಡೆದ…

Read More

ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಗುಂಡು ಹಾರಿಸಿ ಪತ್ನಿಯನ್ನೇ ಪತಿಯೊಬ್ಬ ಹತ್ಯೆಗೈದ ಘಟನೆ ನಡೆದಿದೆ. ಬೆಂಗಳೂರಿನ ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್ ಬಳಿಯಲ್ಲಿ ಈ ದುಷ್ಕೃತ್ಯವನ್ನು ನಡೆಸಲಾಗಿದೆ. ಏಕಾಏಕಿ ಗನ್ ತೆಗೆದು ಪತ್ನಿ ಮೇಲೆ ಪತಿ ಫೈರಿಂಗ್ ಮಾಡಿದ್ದಾನೆ. ನಡು ರಸ್ತೆಯಲ್ಲೇ ಗುಂಡು ಹಾರಿಸಿ ಪತ್ನಿಯನ್ನು ಬಾಲಮುರುಗನ್ ಎಂಬಾತ ಹತ್ಯೆಗೈದಿದ್ದಾನೆ. ಅಂದಹಾಗೇ ಕೋರ್ಟ್ ನಲ್ಲಿ ದಂಪತಿಗಳ ವಿವಾಹ ವಿಚ್ಚೇಧನ ಅರ್ಜಿ ವಿಚಾರಣೆ ನಡೆಯುತ್ತಿದೆ. ಇಂದು ಇಬ್ಬರೂ ವಿಚಾರಣೆ ಮುಗಿಸಿಕೊಂಡು ಬಂದಿದ್ದರು. ಈ ವೇಳೆಯಲ್ಲಿ ಬಾಲಮುರುಗನ್ ಹಾಗೂ ಪತ್ನಿ ನಡುವೆ ಜಗಳ ಉಂಟಾಗಿದೆ. ಜಗಳ ತಾರಕಕ್ಕೇರಿದಂತ ಸಂದರ್ಭದಲ್ಲಿ ಬಾಲಮುರುಗನ್ ತನ್ನ ಬಳಿಯಿದ್ದಂತ ಗನ್ ತೆಗೆದು ಪತ್ನಿಗೆ ಹೊಡೆದಿದ್ದಾರೆ. ಇದರಿಂದಾಗಿ ಬಾಲಮುರುಗನ್ ಪತ್ನಿ ತೀವ್ರ ರಕ್ತಸ್ತ್ರಾವದಿಂದ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಾಗಡಿರೋಡ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು: ಅಂತರ ನಿಗಮ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಕೆ ಎಸ್ ಆರ್ ಟಿ ಸಿ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರಿಗೆ ಗುಡ್ ನ್ಯೂಸ್ ಅನ್ನು ನಿಗಮ ನೀಡಿದೆ. ಅಂತರ ನಿಗಮ ವರ್ಗಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕರು,  2026ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ದಿನಾಂಕ:01-01-2026 ರ ಬೆಳಿಗ್ಗೆ 11:00 ಗಂಟೆಯಿಂದ ಪ್ರಾರಂಭವಾಗಲಿದ್ದು, ದಿನಾಂಕ:31-01-2026 ರ ಸಂಜೆ 5:30 ರವರೆಗೆ ಆನ್-ಲೈನ್ ಮೂಲಕ www.ksrtc.org/transfer ರಲ್ಲಿ ಸಾಮಾನ್ಯ (ಪತಿ-ಪತ್ನಿ/ಅಂಗವಿಕಲ/ತೀವ್ರತರಹದ ಅನಾರೋಗ್ಯ ಒಳಗೊಂಡಂತೆ) ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ. ನೌಕರರು ಸದರಿ ಸೌಲಭ್ಯದ ಸದುಪಯೋಗವನ್ನು ಪಡೆಯಲು ತಿಳಿಸಲಾಗಿದೆ. ಸದರಿ ವಿಷಯವನ್ನು ನೌಕರರ ಗಮನಕ್ಕೆ ತರಲು ಹಾಗೂ ಕೇಂದ್ರ ಕಛೇರಿ/ವಿಭಾಗ/ಘಟಕದ/ತರಬೇತಿ ಕೇಂದ್ರ/ಕಾರ್ಯಾಗಾರಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ಕೋರಿದ್ದಾರೆ. ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು.. https://kannadanewsnow.com/kannada/menstrual-leave-for-female-employees-of-the-transport-department-ksrtc-official-order/ https://kannadanewsnow.com/kannada/attention-bengaluru-residents-here-are-the-details-of-our-metro-feeder-bus-services/ https://kannadanewsnow.com/kannada/good-news-for-the-people-of-bengaluru-air-conditioned-vajra-bmtc-buses-start-operating-on-this-route/

Read More

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪರಸ್ಪರ ಸಹಕಾರದೊಂದಿಗೆ ಮೆಟ್ರೋ ಪ್ರಯಾಣಿಕರಿಗೆ ಸುಗಮ ಮತ್ತು ಪರಿಣಾಮಕಾರಿ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿವೆ. ಈ ಸೇವೆಗಳು ಮೆಟ್ರೋ ನಿಲ್ದಾಣಗಳಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿವೆ. ಬಿಎಂಟಿಸಿ ವತಿಯಿಂದ ಆರಂಭಿಸಲಾದ ಮೆಟ್ರೋ ಫೀಡರ್ ಬಸ್ ಸೇವೆಗಳ ವಿವರಗಳು ಈ ಕೆಳಗಿನಂತಿವೆ: ಜ್ಞಾನಭಾರತಿ ಮೆಟ್ರೋ ನಿಲ್ದಾಣ – ಭಾರತ್‌ನಗರ 2ನೇ ಹಂತ ಮಾರ್ಗ: ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಮುದ್ದೈಯನಪಾಳ್ಯ ಜಂಕ್ಷನ್, ಭಾರತ್‌ನಗರ 1ನೇ ಹಂತ, ಬ್ಯಾಡರಹಳ್ಳಿ ಮೂಲಕ ಜ್ಞಾನಭಾರತಿ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ: 06.25, 07.40, 08.50, 10.30, 14.05, 15.05, 16.20, 18.10, 19.35, 20.55 ಭಾರತ್‌ನಗರ 2ನೇ ಹಂತದಿಂದ ಹೊರಡುವ ಸಮಯ: 05.50, 07.00, 08.15, 09.30, 11.10, 14.30, 15.40, 17.15, 18.50, 20.15 ಕೆ.ಆರ್.…

Read More

ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ನೂತನ ಹವಾನಿಯಂತ್ರಿತ ವಜ್ರ ಮಾರ್ಗಸಂಖ್ಯೆ ವಿ-ಎಂಎಫ್-5 ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ದಿನಾಂಕ 24.12.2025 ರಿಂದ ಜಾರಿಗೆ ಬರುವಂತೆ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ ದಿಂದ ಇಂದಿರಾ ನಗರ ಪೋಲಿಸ್ ಸ್ಟೇಷನ್, ಮಿಲಿಟರಿ ಬ್ರಿಡ್ಜ್, ಕೋರಮಂಗಲ ವಾಟರ್ ಟ್ಯಾಂಕ್, ಮಡಿವಾಳ, ಮಾರ್ಗವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ನೂತನವಾಗಿ ಹವಾನಿಯಂತ್ರಿತ ಸಾರಿಗೆಗಳನ್ನು ಮಾರ್ಗಸಂಖ್ಯೆ – ವಿ-ಎಂಎಫ್-5 ರಲ್ಲಿ 04 ಕಾರ್ಯಾಚರಣೆಗೊಳಿಸಲಾಗುವುದು. ವಿವರಗಳು ಕೆಳಕಂಡಂತಿದೆ. ಮಾರ್ಗಸಂಖ್ಯೆ ವಿ-ಎಂಎಫ್-5 ವೇಳಾಪಟ್ಟಿ (ನಿರ್ಗಮನ ನಮಯ) ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ ಸೆಂಟ್ರಲ್ ಸಿಲ್ಕ್ ಬೋರ್ಡ್ 0515, 0550, 0700, 0745, 0915, 1010, 1040, 1110, 1205, 1235, 1310, 1340, 1530, 1600, 1645, 1715, 1805,1835,…

Read More

ನವದೆಹಲಿ : ಮೆಟ್ರೋ 2ನೇ ಹಂತದ ಪರಿಷ್ಕೃತ ದರಕ್ಕೆ ಒಪ್ಪಿಗೆ, ಮೆಟ್ರೋ 3ಎ ಹಂತಕ್ಕೆ ಅನುಮೋದನೆ, RRTS ಯೋಜನೆಗೆ ಬೆಂಬಲ, ಮಿಟ್ಟಗಾನಹಳ್ಳಿ ಕೆರೆ ಬಳಿ ವಿವಿಧಹಂತದ ತ್ಯಾಜ್ಯ ವಿಲೇವಾರಿ(Treatment and Disposal of Legacy Leachate)ಗೆ ಅನುಮತಿ ಸೇರಿದಂತೆ ಬೆಂಗಳೂರಿನ ಅಭಿವೃದ್ಧಿಗೆ ಅಗತ್ಯವಾಗಿರುವ ಯೋಜನೆಗಳಿಗೆ ಅನುಮತಿ ಹಾಗೂ ಬೆಂಬಲ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ದೆಹಲಿಯಲ್ಲಿ ಮಂಗಳವಾರ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವರಾದ ಮನೋಹರ್ ಲಾಲ್ ಅವರನ್ನು ಭೇಟಿ ಮಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ರಾಜ್ಯ ರಾಜಧಾನಿಗೆ ಅಗತ್ಯವಾಗಿರುವ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಿದರು. “ಬೆಂಗಳೂರು ದೇಶದ ಮಹಾನಗರಗಳಲ್ಲಿ ಒಂದಾಗಿದ್ದು, ಇಲ್ಲಿ ಅನೇಕ ನಗರಾಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗೆ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಬಾಕಿ ಉಳಿದಿರುವ ಅನುಮತಿ ನೀಡಬೇಕು” ಎಂದು ಪತ್ರದಲ್ಲಿ ತಿಳಿಸಿದ್ದಾರೆ. “ಮೆಟ್ರೋ 2ನೇ ಹಂತದ…

Read More