Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ : ಜನವರಿ.3 ಮತ್ತು 4ರಂದು ರಜತ ಸಾಗರೋತ್ಸವ ಅತ್ಯಂತ ವಿಶೇಷವಾಗಿ ಆಯೋಜಿಸಿದೆ. ಸಹೃದಯ ಬಳಗ ಎರಡೂವರೆ ದಶಕಗಳಿಂದ ಇಂತಹ ವಿಶೇಷ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಅನುಕರಣೀಯವಾಗಿದೆ ಎಂದು ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ಹೇಳಿದರು. ಶಿವಮೊಗ್ಗ ಜಿಲ್ಲೆಯ ಸಾಗರದ ಸಹೃದಯ ಬಳಗದ ವತಿಯಿಂದ ಜ. 3 ಮತ್ತು 4ರಂದು ನಡೆಯಲಿರುವ ರಜತ ಸಾಗರೋತ್ಸವದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ, ಮಾತನಾಡಿದಂತ ಅವರು, ಸಾಗರೋತ್ಸವ ಹೆಸರಿನಲ್ಲಿ ಎಲೆಮರೆಯ ಕಾಯಿಯಂತೆ ಇರುವ ಸಾಧಕರನ್ನು ಸನ್ಮಾನಿಸುವುದು, ವಿವಿಧ ಸಾಂಸ್ಕೃತಿಕ ವೈಭವ, ನಗೆಹಬ್ಬದಂತಹ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ತಾಲ್ಲೂಕಿನ ಇತಿಹಾಸದ ಮೇಲೆ ಬೆಳಕು ಚೆಲ್ಲಲು ಇತಿಹಾಸ ಸಮ್ಮೇಳನ, ಆಹಾರ ಮೇಳ ನಡೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ಭಗವದ್ಗೀತೆ ಅಭಿಯಾನ ಸಮಿತಿ ಅಧ್ಯಕ್ಷ ಕೆ.ವಿ.ಜಯರಾಮ್ ಮಾತನಾಡಿ, ಪ್ರತಿವರ್ಷ ಒಂದು ದಿನ ನಡೆಯುತ್ತಿದ್ದ ಸಾಗರೋತ್ಸವ ಈ ಬಾರಿ ರಜತ ಮಹೋತ್ಸವ ಅಂಗವಾಗಿ ಎರಡು ದಿನ ನಡೆಯುತ್ತಿದೆ. ಸಹೃದಯ ಬಳಗ ಅತ್ಯಂತ 25 ವರ್ಷಗಳಿಂದ ಈ…
ಶಿವಮೊಗ್ಗ: ಡಿಸೆಂಬರ್.23 ಮತ್ತು 24ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಸಹ ರಾಜ್ಯದ ಅತ್ಯಂತ ಪ್ರತಿಷ್ಟಿತ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತದೆ. ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಕಾಲೇಜಿಗೆ ಸುಣ್ಣಬಣ್ಣ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯ ಒದಗಿಸಲು 50 ಲಕ್ಷ ರೂ. ನೀಡಲಾಗಿದೆ ಎಂದರು. ಡಿ. 23ರಂದು ಹಳೇಯ ವಿದ್ಯಾರ್ಥಿಗಳ ಸಮಾಗಮ, ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಡಿ. 24ರಂದು ಸ್ಮರಣ ಸಂಚಿಕೆ ಬಿಡುಗಡೆ, ಸಮಾರೋಪ ಸಮಾರಂಭ ಹಾಗೂ ಝೀ ಕನ್ನಡ ಖ್ಯಾತಿಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿದೆ ಎಂದು ಹೇಳಿದರು. ಈ ಕಾಲೇಜಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದು ದೊಡ್ಡದೊಡ್ಡ ಹುದ್ದೆಯಲ್ಲಿದ್ದಾರೆ. ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ…
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಬಿಗ್ ಶಾಕ್ ಎನ್ನುವಂತೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸೆಂಬರ್.19ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ. ನೋಟಿಸ್ ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಹಣಕಾಸು ಮತ್ತು ವಹಿವಾಟಿನ ವಿವರಗಳನ್ನು ಕೋರಿದ್ದಾರೆ. ಅಲ್ಲದೇ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನಲೆಯಲ್ಲಿ ಈ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. https://kannadanewsnow.com/kannada/tet-exam-in-bengaluru-on-december-7-prohibitory-orders-imposed-around-the-exam-center/ https://kannadanewsnow.com/kannada/it-is-true-that-i-met-satish-jarkiholi-dcm-d-k-shivakumar/
ಬೆಂಗಳೂರು: ದಿನಾಂಕ 07-12-2025ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(KARTET-2025) ನಡೆಯಲಿದೆ. ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಮಾಡಿದ್ದು, ದಿನಾಂಕ: 07-12-2025 ರಂದು ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2025) ರ ನಡೆಯಲಿದ್ದು, ಸದರಿ ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸುವಂತೆ ಮತ್ತು ಪರೀಕ್ಷೆ ನಡೆಯುವ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಹತ್ತಿರದಲ್ಲಿರುವ ಎಲ್ಲಾ ಜೆರಾಕ್ಸ್/ಸೈಬರ್/ಕಂಪ್ಯೂಟರ್ ಸೆಂಟರ್ ಮುಚ್ಚುವಂತೆ ಉಲ್ಲೇಖಿತ ಪತ್ರದಲ್ಲಿ ಕೋರಲಾಗಿರುತ್ತದೆ ಎಂದಿದ್ದಾರೆ. ಈ ವಿಷಯದ ಬಗ್ಗೆ ನಾನು ಖುದ್ದಾಗಿ ಮಾಡಿದ ವಿಚಾರಣೆಯಿಂದ ಮತ್ತು ಗುಪ್ತವಾರ್ತಾ ವರದಿಯಿಂದ ಮೇಲ್ಕಂಡ ಪರೀಕ್ಷೆಯು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯ ಪದೇಶಕ್ಕೆ…
ನವದೆಹಲಿ: ಜಾರಿ ನಿರ್ದೇಶನಾಲಯ (ED) ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಸಂಸ್ಥೆಗಳಿಗೆ ಸೇರಿದ 18 ಕ್ಕೂ ಹೆಚ್ಚು ಆಸ್ತಿಗಳು ಮತ್ತು ₹1,120 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಪ್ರಕರಣದಲ್ಲಿ ಒಟ್ಟು ಜಪ್ತಿ ಮಾಡಲಾದ ಮೊತ್ತ ₹10,117 ಕೋಟಿಗಳಿಗೆ ತಲುಪಿದೆ. ಯೆಸ್ ಬ್ಯಾಂಕ್ ಮೂಲಕ ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳಿಗೆ ರವಾನಿಸಲಾದ ಸಾರ್ವಜನಿಕ ನಿಧಿಯ ವಂಚನೆಯ ದುರುಪಯೋಗದ ಆರೋಪದ ತನಿಖೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಏಜೆನ್ಸಿಯ ಪ್ರಕಾರ, ಯೆಸ್ ಬ್ಯಾಂಕ್ 2017 ಮತ್ತು 2019 ರ ನಡುವೆ ಗುಂಪು ಕಂಪನಿಗಳಲ್ಲಿ ₹5,010 ಕೋಟಿ ಹೂಡಿಕೆ ಮಾಡಿತು, ಅದು ನಂತರ ನಿಷ್ಪ್ರಯೋಜಕವಾಯಿತು. ED ಯ ತನಿಖೆಯು ಸಾರ್ವಜನಿಕ ನಿಧಿಯಲ್ಲಿ ₹11,000 ಕೋಟಿಗೂ ಹೆಚ್ಚು ಹಣವನ್ನು ಯೆಸ್ ಬ್ಯಾಂಕ್ ಮೂಲಕ ಗುಂಪಿನ ಸಂಸ್ಥೆಗಳಿಗೆ ವೃತ್ತಾಕಾರವಾಗಿ ವರ್ಗಾಯಿಸಲಾಗಿದೆ ಎಂದು ಬಹಿರಂಗಪಡಿಸಿದೆ. “ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಏಳು ಆಸ್ತಿಗಳು, ರಿಲಯನ್ಸ್ ಪವರ್ ಲಿಮಿಟೆಡ್‌ನ ಎರಡು ಆಸ್ತಿಗಳು, ರಿಲಯನ್ಸ್ ವ್ಯಾಲ್ಯೂ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ನ ಒಂಬತ್ತು ಆಸ್ತಿಗಳು, ರಿಲಯನ್ಸ್…
ಶಿವಮೊಗ್ಗ: ಲದ್ದಿ ಹಾಕಿದ್ದಿದೆ. ಓಡಾಡಿದ ಹೆಜ್ಜೆ ಗುರುತುಗಳಿವೆ. ಜಾಡು ಹಿಡಿದು ಹಿಂದೆ ಬಿದ್ದ ಅರಣ್ಯ ಇಲಾಖೆಯವರ ಕಣ್ಣಿಗೆ ಮಾತ್ರ ಆನೆಗಳೇ ಕಾಣಿಸುತ್ತಲಿಲ್ಲ. ಇದು ಸೊರಬ ತಾಲ್ಲೂಕಿನ ಉಳವಿ ಹೋಬಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವಂತ ಎರಡು ಆನೆಗಳ ಕಾರ್ಯಾಚರಣೆಯ ಹುಡುಕಾಟವಾಗಿದೆ. ಹೀಗಾಗಿ ನಾಳೆ ಥರ್ಮಲ್ ಡ್ರೋನ್ ಸ್ಕ್ಯಾನರ್ ಬಳಸಿ ಪತ್ತೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯಿಂದ ನಡೆಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಆನೆಗಳು ಕಾಣಿಸಿಕೊಂಡಿವೆ. ಎರಡು ಆನೆಗಳು ಸಾಗರ ವಲಯದ ತ್ಯಾಗರ್ತಿ ಮೂಲಕ ಮುಳ್ಳುಕೇರಿಯಿಂದ ಉಳವಿ ಹೋಬಳಿ ವ್ಯಾಪ್ತಿಗೆ ಬಂದಿರೋದಾಗಿ ಹೇಳಲಾಗುತ್ತಿದೆ. ಕಾಡಿನಂಚಿನಲ್ಲಿ ಇರುವಂತ ಭತ್ತ, ಬಾಳೆಯನ್ನು ನಾಶ ಪಡಿಸಿರುವಂತ ಜೋಡಿ ಆನೆಗಳು ಮಾತ್ರ, ಈವರೆಗೆ ಹೆಜ್ಜೆ ಗುರುತಿನ ಮೂಲಕ ಆನೆಗಳ ಜಾಡು ಸಿಕ್ಕಿದೆಯೇ ವಿನಃ ಅರಣ್ಯ ಇಲಾಖೆಯವರು ಹುಡುಕಿದರೂ ಕಣ್ಣಿಗೆ ಬಿದ್ದಿಲ್ಲ. ಕಳೆದ ಐದು ದಿನಗಳ ಹಿಂದೆ ಕಣ್ಣೂರು, ಕಾನಹಳ್ಳಿ, ಗಡೆಗದ್ದೆ, ಕೋಪುಲುಗದ್ದೆ, ಉಳವಿ, ಕರ್ಜಿಕೊಪ್ಪ, ಹುಣವಳ್ಳಿ, ಕೈಸೋಡಿ, ದೂಗೂರು ವ್ಯಾಪ್ತಿಯಲ್ಲಿ ಎರಡು ಆನೆಗಳು ದಾಂಧಲೆಯನ್ನೇ ನಡೆಸಿವೆ. ಕೆಲವೆಡೆ…
ನವದೆಹಲಿ: ವಾರ್ನರ್ ಬ್ರದರ್ಸ್ ಡಿಸ್ಕವರಿಯ ಟಿವಿ ಮತ್ತು ಫಿಲ್ಮ್ ಸ್ಟುಡಿಯೋಗಳು ಮತ್ತು ಸ್ಟ್ರೀಮಿಂಗ್ ವಿಭಾಗವನ್ನು $72 ಬಿಲಿಯನ್‌ಗೆ ಖರೀದಿಸಲು ನೆಟ್‌ಫ್ಲಿಕ್ಸ್ ಒಪ್ಪಿಕೊಂಡಿದೆ. ಈ ಒಪ್ಪಂದವು ಹಾಲಿವುಡ್‌ನ ಅತ್ಯಂತ ಅಮೂಲ್ಯ ಮತ್ತು ಹಳೆಯ ಆಸ್ತಿಗಳಲ್ಲಿ ಒಂದಾದ ಸ್ಟ್ರೀಮಿಂಗ್ ಪ್ರವರ್ತಕನಿಗೆ ನಿಯಂತ್ರಣವನ್ನು ಹಸ್ತಾಂತರಿಸುತ್ತದೆ, ಇದು ಮಾಧ್ಯಮ ಉದ್ಯಮವನ್ನು ಬುಡಮೇಲು ಮಾಡಿದೆ. ಶುಕ್ರವಾರ ಘೋಷಿಸಲಾದ ಈ ಒಪ್ಪಂದವು ವಾರಗಳ ಕಾಲ ನಡೆದ ಬಿಡ್ಡಿಂಗ್ ಯುದ್ಧದ ನಂತರ, ನೆಟ್‌ಫ್ಲಿಕ್ಸ್ ಸುಮಾರು $28-ಷೇರು ಕೊಡುಗೆಯೊಂದಿಗೆ ಮುನ್ನಡೆ ಸಾಧಿಸಿತು, ಇದು ಪ್ಯಾರಾಮೌಂಟ್ ಸ್ಕೈಡಾನ್ಸ್‌ನ ಸಂಪೂರ್ಣ ವಾರ್ನರ್ ಬ್ರದರ್ಸ್ ಡಿಸ್ಕವರಿಗಾಗಿ ಸುಮಾರು $24 ಬಿಡ್ ಅನ್ನು ಮೀರಿಸಿತು, ಇದರಲ್ಲಿ ಸ್ಪಿನ್‌ಆಫ್‌ಗಾಗಿ ನಿಗದಿಪಡಿಸಲಾದ ಕೇಬಲ್ ಟಿವಿ ಸ್ವತ್ತುಗಳು ಸೇರಿವೆ. ವಾರ್ನರ್ ಬ್ರದರ್ಸ್ ಡಿಸ್ಕವರಿ ಷೇರುಗಳು ಗುರುವಾರ $24.5 ಕ್ಕೆ ಮುಕ್ತಾಯಗೊಂಡವು, ಇದು $61 ಬಿಲಿಯನ್ ಮಾರುಕಟ್ಟೆ ಮೌಲ್ಯವನ್ನು ನೀಡಿತು. “ಗೇಮ್ ಆಫ್ ಥ್ರೋನ್ಸ್”, “ಡಿಸಿ ಕಾಮಿಕ್ಸ್” ಮತ್ತು “ಹ್ಯಾರಿ ಪಾಟರ್” ಸೇರಿದಂತೆ ಮಾರ್ಕ್ಯೂ ಫ್ರಾಂಚೈಸಿಗಳ ಮಾಲೀಕರನ್ನು ಖರೀದಿಸುವುದರಿಂದ ಹಾಲಿವುಡ್‌ನಲ್ಲಿ ಅಧಿಕಾರ ಸಮತೋಲನವನ್ನು ಮತ್ತಷ್ಟು…
ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಗಳಲ್ಲಿ ಕಾರ್ಯಾಚರಣೆಯ ಅಡಚಣೆಗಳಿಗೆ ಕಾರಣವಾಗುವ ಅಂಶಗಳ ಸಮಗ್ರ ಪರಿಶೀಲನೆ ಮತ್ತು ಮೌಲ್ಯಮಾಪನ ನಡೆಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಲು ಆದೇಶಿಸಿದೆ. ಈ ಸಮಿತಿಯಲ್ಲಿ ಜಂಟಿ ಮಹಾನಿರ್ದೇಶಕ ಸಂಜಯ್ ಕೆ ಬ್ರಹ್ಮಣೆ, ಉಪ ಮಹಾನಿರ್ದೇಶಕ ಅಮಿತ್ ಗುಪ್ತಾ, ಭಾರತೀಯ ವಾಣಿಜ್ಯ ಪೈಲಟ್‌ಗಳ ಸೊಸೈಟಿಯ (ಎಸ್‌ಎಫ್‌ಒಐ) ಕ್ಯಾಪ್ಟನ್ ಕಪಿಲ್ ಮಾಂಗ್ಲಿಕ್ ಮತ್ತು ಭಾರತೀಯ ವಿಮಾನಯಾನ ಸಂಸ್ಥೆಗಳ ಒಕ್ಕೂಟದ (ಎಫ್‌ಒಐ) ಕ್ಯಾಪ್ಟನ್ ಲೋಕೇಶ್ ರಾಂಪಾಲ್ ಸೇರಿದ್ದಾರೆ. ವಿಮಾನ ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ಸಚಿವಾಲಯದ ತಕ್ಷಣದ ಕ್ರಮಗಳು ವಿಮಾನ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುವ ತೀವ್ರ ಅಡಚಣೆಗಳನ್ನು ಪರಿಹರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಮಾನಯಾನ ಸಂಸ್ಥೆಗಳು, ವಿಶೇಷವಾಗಿ ಇಂಡಿಗೋಗೆ ನಿರ್ದೇಶನ ನೀಡುವಂತೆ ನಾಗರಿಕ ವಿಮಾನಯಾನ ಸಚಿವಾಲಯ ತುರ್ತು ಆದೇಶಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕ ಅನಾನುಕೂಲತೆಯನ್ನು ನಿವಾರಿಸುವುದು ಮತ್ತು ಸೇವಾ ಸ್ಥಿರತೆಯನ್ನು ಪುನಃಸ್ಥಾಪಿಸುವುದು ಎರಡು ಸರ್ಕಾರಿ ಆದೇಶಗಳ ಗುರಿಯಾಗಿದೆ. https://twitter.com/ANI/status/1996915074339115410 ಸಚಿವಾಲಯವು ವಿವರಿಸಿರುವ ಪ್ರಮುಖ ನಿರೀಕ್ಷೆಗಳು ಇವುಗಳನ್ನು ಒಳಗೊಂಡಿವೆ- ವಿಮಾನ ವೇಳಾಪಟ್ಟಿಗಳು…
ಬೆಂಗಳೂರು : ಬೆಸ್ಕಾಂನ ವೈಟ್‌ಫೀಲ್ಡ್ ವಿಭಾಗ ಮತ್ತು ಇ-4 ಉಪವಿಭಾಗ ಕಚೇರಿಯ ನೂತನ ಕಟ್ಟಡವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಶುಕ್ರವಾರ ಉದ್ಘಾಟಿಸಿದರು. ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಇದುವರೆಗೆ ವೈಟ್‌ಫೀಲ್ಡ್ ವಿಭಾಗ ಹಾಗೂ ಇ-4 ಉಪವಿಭಾಗ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಇಮ್ಮಡಿಹಳ್ಲಿ ಮುಖ್ಯರಸ್ತೆಯ ಗಾಂಧೀಪುರದಲ್ಲಿ ನಿರ್ಮಾಣಗೊಂಡಿರುವ ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದ್ದು ಗ್ರಾಹಕರಿಗೆ ಅನುಕೂಲಕರವಾಗಲಿದೆ,” ಎಂದರು. ಈ ಜಾಗ ಪಡೆಯಲು ನೆರವಾದ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ಅವರಿಗೆ ಧನ್ಯವಾದ ಹೇಳಿದ ಸಚಿವರು, “ನಗರದ ಪ್ರಮುಖ ಪ್ರದೇಶವಾಗಿರುವ ವೈಟ್‌ಫೀಲ್ಡ್‌ನಲ್ಲಿ ವಿಭಾಗದಲ್ಲಿ 3,88,917 ಕ್ಕೂ ಹೆಚ್ಚಿನ ಗ್ರಾಹಕರಿದ್ದಾರೆ. ಸಾರ್ವಜನಿಕರಿಗೆ ನೂತನ ಕಚೇರಿ ಬೆಸ್ಕಾಂನ ಹತ್ತು ಹಲವು ಸೇವೆಗಳನ್ನು ತ್ವರಿತವಾಗಿ ಒದಗಿಸಲು ನೆರವಾಗಲಿದೆ,” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹದೇವಪುರ ಕ್ಷೇತ್ರ ಶಾಸಕಿ ಮಂಜುಳ ಅರವಿಂದ ಲಿಂಬಾವಳಿ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜೆ.ರಮೇಶ್…
ಬೆಂಗಳೂರು : ನಿನ್ನೆ ರಾತ್ರಿ ಮದುವೆಯೊಂದರಲ್ಲಿ ನಾನು ಹಾಗೂ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ನಿಜ. ರಾಜ್ಯ ಹಾಗೂ ಪಕ್ಷದ ವಿಚಾರ ಮಾತನಾಡಿದ್ದೇವೆ. ನಾನು ಹಾಗೂ ಸತೀಶ್ ಜಾರಕಿಹೊಳಿ ಸಹೋದ್ಯೋಗಿಗಳು. ನಮ್ಮನ್ನು ವೈರಿಗಳಂತೆ ಯಾಕೆ ನೋಡುತ್ತೀರಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ. ಕೆಐಎಡಿಬಿಎ ನೂತನ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ಸತೀಶ್ ಜಾರಕಿಹೋಳಿ ಅವರ ಭೇಟಿ ಬಗ್ಗೆ ಕೇಳಿದಾಗ, “ನಾವು ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲಿ ಇರುತ್ತೇವೆ, ರಾತ್ರಿ ಊಟಕ್ಕೆ ಸೇರುತ್ತೇವೆ, ಬೆಳಗ್ಗೆ ತಿಂಡಿಗೆ ಸೇರುತ್ತೇವೆ. ಇವೆಲ್ಲ ಇದ್ದೇ ಇರುತ್ತವೆ. ರಾಜಕೀಯದಲ್ಲಿ ಸ್ನೇಹ, ಬಾಂಧವ್ಯ, ನೆಂಟಸ್ಥನ ಇದ್ದೇ ಇರುತ್ತದೆ” ಎಂದರು. “ಈಗ ನಾನು ಹಾಗೂ ಎಂ.ಬಿ. ಪಾಟೀಲ್ ಅವರು ಸುಮಾರು ಒಂದು ಗಂಟೆ ಕಾಲ ಮಾತಾಡಿದ್ದೇವೆ. ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಹೇಗೆ ಆಕರ್ಷಿಸಬೇಕು. ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಹೇಗೆ ನಮಗೆ ಸ್ಪರ್ಧೆ ನೀಡುತ್ತಿದೆ. ತೆಲಂಗಾಣದಲ್ಲಿ ಸದ್ಯದಲ್ಲೇ ಜಾಗತಿಕ ಸಮಾವೇಶ ನಡೆಯಲಿದ್ದು, ಜಾಗತಿಕ…













