Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: 220/66/11 kV ಹೆಬ್ಬಾಳ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-4 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಶನಿವಾರ (16.11.2024) ರಂದು ಬೆಳಗ್ಗೆ 12:00 ಯಿಂದ ಮಧ್ಯಾಹ್ನ 13:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗಂಗಾನಗರ, ಲಕ್ಷ್ಮಯ್ಹ್ ಬ್ಲಾಕ್, ವೀವರ್ ಕಾಲೋನಿ, ಸಿ.ಬಿ.ಐ ಕ್ವಾರ್ಟರ್ಸ್,, ಆರ್.ಬಿ.ಐ ಕಾಲೋನಿ, ಸಿ.ಪಿ.ಯು ಬ್ಲಾಕ್, ಡಿ.ಜಿ.ಕ್ಯೂ ಕ್ವಾಟರ್ಸ್, ಮುನಿರಾಮಯ್ಯ ಬ್ಲಾಕ್, ಯು.ಎ.ಎಸ್ ಕ್ಯಾಂಪಸ್. ದಿನ್ನೂರ್ ಮುಖ್ಯ ರಸ್ತೆ, ಆರ್. ಟಿ ನಗರ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಮುನನಪ್ಪಾ ಕಾಲೋನಿ, ಎಚ್.ಎಂ.ಟಿ ಬ್ಲಾಕ್,,ಚಾಮುಂಡಿನಗರ, ಮಾಜಿ ಸೈನಿಕರ ಕಾಲೋನಿ, ಆರ್‌ಟಿ ನಗರ ಪೊಲೀಸ್ ಠಾಣಾ ಪ್ರದೇಶ, ಅಶ್ವತ್ನಗರ, ಡಾಲರ್ಸ್ ಕಾಲೋನಿ, ಎಂಎಲ್‌ಎ ಲೇಔಟ್, ರತನ್ ಅಪಾರ್ಟ್‌ಮೆಂಟ್, ಗಾಯತ್ರಿ ಅಪಾರ್ಟ್‌ಮೆಂಟ್, ಫುಡ್‌ವರ್ಲ್ಡ್ ಆರ್‌ಟಿ ನಗರ, ನೃಪತುಂಗ ಬಡಾವಣೆ, ಕೃಷ್ಣಪ್ಪ ಬ್ಲಾಕ್.ಸಿಬಿಐ ಮುಖ್ಯರಸ್ತೆ, ಎಂಎಲ್‌ಎ ಲೇಔಟ್‌ನ ಭಾಗಗಳು, ಶಾಂತಿಸಾಗರ ಮುಖ್ಯ ರಸ್ತೆ, ಆರ್‌ಟಿ ನಗರ, ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, 80’…
ಬೆಂಗಳೂರು : “ಐವತ್ತು ಜನ ಕಾಂಗ್ರೆಸ್ ಎಂಎಲ್ಎ ಗಳಿಗೆ ಬಿಜೆಪಿಯವರು 50 ಕೋಟಿ ಆಮಿಷ ಒಡ್ಡಿರುವುದು ನಿಜ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿದರು. ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಪಕ್ಷದ ಐವತ್ತು ಶಾಸಕರಿಗೆ ತಲಾ 50 ಕೋಟಿಯಂತೆ ಬಿಜೆಪಿಯವರು ಆಮಿಷ ಒಡ್ದುತ್ತಿದ್ದಾರೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯ ಬಗ್ಗೆ ಕೇಳಿದಾಗ ಹೀಗೆ ಉತ್ತರಿಸಿದರು. “ಆಪರೇಷನ್ ಕಮಲದ ಬಗ್ಗೆ ನಮ್ಮ ಶಾಸಕರ ಬಳಿ ಮಾತನಾಡಿದ್ದಾರೆ. ಈ ವಿಚಾರವನ್ನು ಕೆಲವರು ಬಂದು ಮುಖ್ಯಮಂತ್ರಿಯ ಬಳಿ ತಿಳಿಸಿದ್ದಾರೆ. ಈ ಸಂಗತಿಯನ್ನು ಮುಖ್ಯಮಂತ್ರಿಗಳು ಮಾಧ್ಯಮದ ಮುಂದೆ ಹೇಳಿದ್ದಾರೆ. ಮಿಕ್ಕ ವಿಚಾರಗಳನ್ನು ಅನಂತರ ನಿಮಗೆ ತಿಳಿಸುತ್ತೇನೆ” ಎಂದು ಹೇಳಿದರು. https://kannadanewsnow.com/kannada/it-takes-hard-work-sacrifice-and-diligence-to-achieve-in-life-deputy-cm-dk-shivakumar-shivakumar/ https://kannadanewsnow.com/kannada/are-they-horses-donkeys-or-donkeys-to-buy-mlas-mlc-ct-ravi/
ಬೆಂಗಳೂರು : “ಮಕ್ಕಳು ಕನಸನ್ನು ಕಾಣಬೇಕು. ಆ ಕನಸನ್ನು ಸಾಕಾರಗೊಳಿಸಲು ಶ್ರಮ ಪಡಬೇಕು, ಜೀವನದಲ್ಲಿ ತ್ಯಾಗ ಹಾಗೂ ಶ್ರದ್ಧೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಕುಳಿತಲ್ಲಿಯೇ ಕುಳಿತು ಕನಸು ಕಂಡರೆ ಪ್ರಯೋಜನವಿಲ್ಲ, ಅದಕ್ಕೆ ಪ್ರಯತ್ನ ಪಡಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು. ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜಯಂತಿ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿ ನಡೆದ ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮಕ್ಕಳ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಮಾತನಾಡಿದರು. “ನೀವು ಸಾಗಿದ ಹಾದಿಯನ್ನು ಮರೆತರೆ ಫಲ ದೊರೆಯುವುದಿಲ್ಲ. ನಿಮ್ಮನ್ನು ಸಾಕಿದ ಪೋಷಕರು, ವ್ಯಕ್ತಿತ್ವ ಬೆಳೆಸಿದ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಯಾವುದನ್ನು ಬೇಕಾದರೂ ಬದಲಿಯಾಗಿ ಪಡೆಯಬಹುದು. ಪೋಷಕರು ಮತ್ತು ಶಿಕ್ಷಕರನ್ನು ಬದಲಿಯಾಗಿ ಪಡೆಯಲು ಸಾಧ್ಯವಿಲ್ಲ. ಎಷ್ಟೇ ಎತ್ತರಕ್ಕೆ ಬೆಳೆದರೂ ನೀವು ಈ ಪ್ರಾಥಮಿಕ ವಿಚಾರಗಳನ್ನು ಮರೆಯಬಾರದು” ಎಂದು ಹೇಳಿದರು. “ಮಕ್ಕಳೇ ಈ ದೇಶದ ಆಸ್ತಿ. ನೀವು ಸಹ…
ಶಿವಮೊಗ್ಗ: ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿಯ ಹಣವನ್ನು ಉತ್ತಮ ರೀತಿಯಲ್ಲಿ ಸದ್ವಿನಿಯೋಗ ಮಾಡಿಕೊಳ್ಳಬೇಕು. ಕಾಲೇಜು ಅಭಿವೃದ್ಧಿಗೆ ಬೇಕಿರುವಂತ ಎಲ್ಲಾ ಸಹಕಾರವನ್ನು ನೀಡುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಡಿಸಿ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಪ್ರಾಂಶುಪಾಲರಾದಂತ ಡಾ.ಸಣ್ಣ ಹನುಮಂತಪ್ಪ ಅವರು ಅಜೆಂಡಾ ಮಂಡಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಈ ವರ್ಷ 2 ಕೋಟಿ ಅನುದಾನ ಬಂದಿದೆ. 8-10 ಕೊಠಡಿಗಳ ಅವಶ್ಯಕತೆ ಇದೆ. ಈಗಾಗಲೇ ರಾಜ್ಯ ಸರ್ಕಾರದಿಂದ 5 ಎಕರೆ ಜಮೀನನ್ನು ಕಾಲೇಜಿನ ಪಕ್ಕದಲ್ಲಿ ನೀಡಲಾಗಿದೆ. ಮೂಲ ಸೌಕರ್ಯಾಭಿವೃದ್ಧಿಗೆ ಇನ್ನೂ ಐದು ಎಕರೆ ಹೆಚ್ಚುವರಿಯಾಗಿ ಬೇಕಿದೆ. ವಾಹನ ನಿಲ್ದಾಣ ನಿರ್ಮಾಣ ಮಾಡಿಕೊಡುವಂತೆಯೂ ಸಿಡಿಸಿ ಅಧ್ಯಕ್ಷರಾದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರಲ್ಲಿ ಮನವಿ ಮಾಡಿದರು. ಸದ್ಯ ಸಿಡಿಸಿ ಖಾತೆಯಲ್ಲಿ 10.20 ಲಕ್ಷ ಇದೆ. ಇದರಲ್ಲಿ ಗುತ್ತಿಗೆ ನೌಕರರ ವೇತನಕ್ಕೆ 1.20 ಲಕ್ಷ ಹೋಗಲಿದೆ. ಕರೆಂಟ್…
ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಿಗೆ ಇಂದು ನಡೆದಂತ ಉಪ ಚುನಾವಣೆಯ ಮತದಾನಕ್ಕೆ ತೆರೆ ಬಿದ್ದಿದೆ. ಯಾವ ಕ್ಷೇತ್ರದಲ್ಲಿ ಇಂದು ಎಷ್ಟು ಮತದಾನ ನಡೆದಿದೆ ಎನ್ನುವ ಶೇಕಡಾವಾರು ಅಧಿಕೃತ ಮಾಹಿತಿ ಮುಂದಿದೆ ಓದಿ. ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕ ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ನಡೆದಂತ ಉಪ ಚುನಾವಣೆಯ ಮತದಾದ ಶೇಕಡವಾರು ವಿವರ ಈ ಕೆಳಗಿನಂತಿದೆ ಎಂದಿದೆ. ಶಿಗ್ಗಾಂವಿ ವಿಧಾನಸಭಾ ಉಪ ಚುನಾವಣೆಯಲ್ಲಿ ಶೇ.80.48ರಷ್ಟು ಮತದಾನವಾಗಿದೆ. ಸಂಡೂರಿನಲ್ಲಿ ಶೇ.76.24 ಹಾಗೂ ಚನ್ನಪಟ್ಟಣದಲ್ಲಿ ದಾಖಲೆಯ ಶೇ.88.80ರಷ್ಟು ಮತದಾನವಾಗಿರುವುದಾಗಿ ರಾಜ್ಯ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದೆ. https://twitter.com/ceo_karnataka/status/1856708463537066241 https://kannadanewsnow.com/kannada/fir-registered-against-puneeth-kerehalli-for-derogatory-remarks-against-minister-zameer-ahmed/ https://kannadanewsnow.com/kannada/state-government-constitutes-commission-under-nagamohan-to-implement-internal-reservation/
ಬೆಂಗಳೂರು : ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಅವಹೇಳನ ಕಾರಿ ಮಾತು ಹಾಗೂ ಧರ್ಮ ಮತ್ತು ಜಾತಿ ನಿಂದನೆ ಮಾಡಿದ್ದ ಪುನೀತ್ ಕೆರೆ ಹಳ್ಳಿ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಸಹಾಯಕ ಬಿ. ಎಸ್. ಅಶೋಕ್ ನೀಡಿದ ದೂರು ಆಧರಿಸಿ ಬುಧವಾರ ಎಫ್ ಐ ಆರ್ ದಾಖಲಾಗಿದೆ. ನವೆಂಬರ್ 11 ರಂದು ಪುನೀತ್ ಕೆರೆ ಹಳ್ಳಿ ಅವರು ಯಾವುದೋ ಸ್ಥಳದಲ್ಲಿ ತಮ್ಮ ಸಾಮಾಜಿಕ ಜಾಲ ತಾಣದ ಫೇಸ್ ಬುಕ್ ಲಿಂಕ್ ನಲ್ಲಿ ಸಚಿವರಾದ ಜಮೀರ್ ಅಹಮದ್ ಖಾನ್ ಅವರ ಕುರಿತು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಿಂದನೆ ಮಾಡಿರುತ್ತಾರೆ. ಧರ್ಮ -ಧರ್ಮ ಗಳ ನಡುವೆ ದ್ವೇಷ ಬಿತ್ತುವ ಪ್ರಚೋದನಕಾರಿ ಹೇಳಿಕೆ ನೀಡಿರುತ್ತಾರೆ. ಪದೇ ಪದೇ ಅವಾಚ್ಯ ಶಬ್ದ ಗಳಿಂದ ಸಚಿವರನ್ನು ನಿಂದಿಸಿರುತ್ತಾರೆ. ಜತೆಗೆ ಪ್ರಾಣ ಬೆದರಿಕೆ ಸಹ ಹಾಕಿರುತ್ತಾರೆ. ಹೀಗಾಗಿ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟದ ನಿರ್ಣಯದ ಅನ್ವಯ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿ ಅಧಿಕೃತ ಆದೇಶ ಹೊರಡಿಸಿದೆ. ಇಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಜಂಟಿಕಾರ್ಯದರ್ಶಿ ಆದೇಶ ಹೊರಡಿಸಿದ್ದು,ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸಿಗಳೊಂದಿಗೆ ಎರಡು ತಿಂಗಳ ಅವಧಿಯೊಳಗಾಗಿ ವರದಿ ಸಲ್ಲಿಸಲು ಆಯೋಗ Ja 19520 (Commission of Inquiry Act1952) (to, a 0.60) ಕರ್ನಾಟಕ ಉಚ್ಚ ಸೆಕ್ಷನ್ (3)ರಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಿ, ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ಹೆಚ್.ಎನ್.ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ ಎಂದಿದೆ. ಸದರಿ ವಿಚಾರಣಾ ಆಯೋಗದ The terms of references, ಕಛೇರಿ, ವಾಹನ ವ್ಯವಸ್ಥೆ ಅಗತ್ಯ ಸಿಬ್ಬಂದಿ, ಗೌರವಧನ…
ಬೆಂಗಳೂರು : ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಕ್ಕಳ ಸಂವಾದವನ್ನು ನ.14ರ ನಾಳೆ ಆಯೋಜಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನವೆಂಬರ್ 14ರ ನಾಳೆ ಬೆಳಿಗ್ಗೆ 9 ಗಂಟೆಗೆ ವಿಧಾನಸೌಧದ ಕೊಠಡಿ ಸಂಖ್ಯೆ: 334 ಸಮ್ಮೇಳನ ಸಭಾಂಗಣದಲ್ಲಿ ಈ ಸಂವಾದ ಏರ್ಪಡಿಸಲಾಗಿದೆ. ಈ ಸಂವಾದದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಇನ್ನೂ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಕ್ಕಳ ದಿನಾಚರಣೆಯಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಸ್ಮರಿಸುವುದರ ಜೊತೆಗೆ, ಭವಿಷ್ಯದ ಕರ್ನಾಟಕದ ನಿರ್ಮಾಣಕ್ಕೆ ಮಕ್ಕಳಿಂದ ಸಲಹೆಗಳನ್ನು ಪಡೆಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳನ್ನು ಈ ಸಂವಾದಕ್ಕೆ ಆಹ್ವಾನಿಸಲಾಗಿದೆ. ಭವಿಷ್ಯದ ಪ್ರಜೆಗಳಾದ ಇಂದಿನ ಮಕ್ಕಳೊಂದಿಗೆ ಭವಿಷ್ಯದ ಕರ್ನಾಟಕಕ್ಕಾಗಿ ಸಂವಾದ ನಡೆಸಿ, ಅವರಿಂದ ಬರುವ ಅಮೂಲ್ಯ…
ಬೆಂಗಳೂರು: ರಾಜ್ಯ ಸರ್ಕಾರದಿಂದ ವೈಷ್ಟೋದೇವಿಗೆ ಭೇಟಿ ನೀಡುವಂತ ಭಕ್ತಾಧಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಅದೇನೆಂದರೇ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಯಾತ್ರಾರ್ಥಿಗಳಿಗೆ 5,000 ಧನ ಸಹಾಯ ಮಾಡೋದಕ್ಕೆ ನಿರ್ಧರಿಸಿದ್ದಾರೆ. ಇಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವೈಷ್ಟೋದೇವಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸಹಾಯ ಧನ ಘೋಷಣೆ ಮಾಡಲಾಗಿದೆ. ಇಂದಿನ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಸಭೆಯಲ್ಲಿ ಈ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ * ವೈಷ್ಟೋದೇವಿಗೆ ಭೇಟಿ ನೀಡುವ ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳಿಗೆ ತಲಾ ರೂ. 5000/-ಗಳ ಸಹಾಯ ಧನ ನೀಡಲು ತೀರ್ಮಾನಿಸಲಾಯಿತು. * ಸರ್ಕಾರದ ಬಹುಮಹಡಿಗಳ ಕಟ್ಟಡದ ಎದುರು ಇರುವ ಮುಜರಾಯಿ ಇಲಾಖೆಗೆ ಸೇರಿದ 3/4 ಎಕರೆ ಜಾಗದಲ್ಲಿ ರೂ. 10 ಕೋಟಿ ವೆಚ್ಚದಲ್ಲಿ ಧಾರ್ಮಿಕ ಸೌಧ ನಿರ್ಮಿಸಲು ತೀರ್ಮಾನಿಸಲಾಯಿತು. * 120 ವರುಷಗಳ ಹಳೆಯದಾದ ಮೈಸೂರಿನ ಸಂಸ್ಕೃತ ಮಹಾರಾಜ ಕಾಲೇಜಿನ ಸಂಸ್ಥೆಯ ಸಂಪೂರ್ಣ ಜೀರ್ಣೋದ್ಧಾರ…
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ನಗರಾಭೀವೃದ್ಧಿ ಇಲಾಖೆ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನ ಇಲಾಖೆಗಳ ನಡುವೆ ಸಮನ್ವಯದಿಂದ ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸ ಸುಗಮವಾಗಿ ವಿತರಿಸಲು ಅನುಕೂಲವಾಗುವಂತೆ ವರದಿ ನೀಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮೂರೂ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಜಂಟಿ ಕಾರ್ಯಪಡೆಯೊಂದನ್ನು ರಚಿಸಲು ಇಂದು ನಡೆದ ಸಚಿವರುಗಳ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಂದಾಯ ಸಚಿವ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಪೌರಾಳಿಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರುಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಖಾತಾ ರಹಿತ ಆಸ್ತಿಗಳ ನೋಂದಣಿ ನಿಲ್ಲಿಸಲಾಗಿರುವುದರಿಂದ ಉದ್ಭವಿಸಿರುವ ಸಮಸ್ಯೆಗಳ ಕುರಿತಂತೆ ದೀರ್ಘವಾಗಿ ಚರ್ಚಿಸಲಾಯಿತು. ಜಂಟಿ ಕಾರ್ಯಪಡೆ ಅಧ್ಯಕ್ಷತೆವಹಿಸಿರುವ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಅವರು ಖಾತಾ ವಿತರಿಸುವ ಸಂಬಂಧ ತಕ್ಷಣದ ಪರಿಹಾರೋಪಾಯಗಳನ್ನು ಸೂಚಿಸುವುದು ಸೇರಿದಂತೆ ಎರಡು ತಿಂಗಳ ಒಳಗೆ ಅಂತಿಮ ವರದಿಯನ್ನು…