Author: kannadanewsnow09

ಬೆಂಗಳೂರು: ರಾಜಧಾನಿಯಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣ ಗೋಚರಿಸುತ್ತಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್), ಹೊಸ ‘ಲೀಚೆಟ್ ಸಂಸ್ಕರಣಾ ಘಟಕ’ನಿರ್ಮಿಸಲು ಮತ್ತು ಲೀಚೆಟ್ ತ್ಯಾಜ್ಯ ಸಂಸ್ಕರಿಸಲು ಮುಂದಾಗಿದೆ. ಇದಕ್ಕಾಗಿ ಬಿಎಸ್‌ಡಬ್ಲ್ಯುಎಂಎಲ್, ಪ್ರತಿ ಲೀಟರ್ ಲೀಚೆಟ್ ತ್ಯಾಜ್ಯ ಸಂಸ್ಕರಣೆಗೆ 1 ರೂಪಾಯಿ 65 ಪೈಸೆನಂತೆ ಒಟ್ಟು 474.89 ಕೋಟಿ ರೂ. ಮೊತ್ತದ ಟೆಂಡರ್‌ನ್ನು ‘ಮುಕ್ಕ ಪ್ರೋಟಿನ್ಸ್ ಲಿಮಿಟೆಡ್’ಗೆ ನಿಯಮದಂತೆ ನೀಡಲಾಗಿದೆ. ಸಚಿವ ಸಂಪುಟ, ಆರ್ಥಿಕ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಗೆ ಟೆಂಡರ್ ಮೊತ್ತಕ್ಕೆ ಈಗಾಗಲೇ ಅನುಮೋದನೆ ನೀಡಿದೆ. ಮಿಟ್ಟಗಾನಹಳ್ಳಿ, ಕಣ್ಣೂರು ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿಯ ಪರಿಣಾಮ ಈ ಪ್ರದೇಶಗಳಲ್ಲಿ ಅಂದಾಜು 2,878 ಮಿಲಿಯನ್ ಲೀ. ಲಿಚೇಟ್ ( ತ್ಯಾಜ್ಯದಿಂದ ಹೊರಬರುವ ದ್ರವ ತ್ಯಾಜ್ಯ) ಶೇಖರಣೆಯಾಗಿದೆ. ಆದ್ದರಿಂದ, ಲೀಚೆಟ್ ಸಂಸ್ಕರಣಾ ಘಟಕ ನಿರ್ಮಿಸಲು, ಲೀಚೆಟ್ ತ್ಯಾಜ್ಯ ಸಂಸ್ಕರಿಸಲು ಬಿಎಸ್‌ಡಬ್ಲ್ಯುಎಂಎಲ್‌ನಿಂದ ಮುಕ್ಕ ಪ್ರೋಟಿನ್ಸ್ ಲಿಮಿಟೆಡ್, ಕಾರ್ಯಾದೇಶ ಪತ್ರ ಪಡೆದಿದೆ. 9 ತಿಂಗಳದೊಳಗೆ…

Read More

ಬೆಂಗಳೂರು: ಮೂರು ವರ್ಷಗಳಿಗೆ ಒಮ್ಮೆ ನಡೆಯುವಂತ ಸಾಗರದ ಮಾರಿಕಾಂಬ ದೇವಿ ಜಾತ್ರೆಗೆ 2 ಕೋಟಿ ಅನುದಾನ ಮಂಜೂರಿಗೆ ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ. ಈ ಮೂಲಕ ಶಾಸಕ ಗೋಪಾಲಕೃಷ್ಣ ಬೇಳೂರು ಮನವಿಗೆ ಸಿಎಂ ಸಿದ್ದರಾಮಯ್ಯ ತಕ್ಷಣವೇ ಪ್ರತಿ ಸ್ಪಂದಿಸಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಭೇಟಿಯಾಗಿ ಪತ್ರ ನೀಡಿ ಮನವಿ ಮಾಡಿದ್ದರು. ಸಿಎಂಗೆ ನೀಡಿದ ಮನವಿ ಪತ್ರದಲ್ಲಿ  ಸಾಗರದ ಮಾರಿಕಾಂಬ ದೇವಿ ಜಾತ್ರೆ ಮೂರು ವರ್ಷಗಳಿಗೆ ಒಮ್ಮೆ ಮಾಡಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಯ ಭಕ್ತರು ಆಗಮಿಸುತ್ತಾರೆ ಎಂದಿದ್ದರು. 9 ದಿನಗಳ ಕಾಲ ನಡೆಯುವಂತ ಸಾಗರದ ಮಾರಿಕಾಂಬ ದೇವಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿ ಅಗಲಿದ್ದಾರೆ. ಹೀಗಾಗಿ ಮೂಲ ಸೌಕರ್ಯ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ವಿಶೇಷ ಆದ್ಯತೆ ಮೇರೆಗೆ ಪರಿಗಣಿಸಿ ಅನುದಾನ ಕಲ್ಪಿಸಲು ಮನವಿ ಮಾಡಿದ್ದರು. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಮನವಿಗೆ ಸ್ಥಳದಲ್ಲೇ ಸಿಎಂ ಸಿದ್ದರಾಮಯ್ಯ…

Read More

ಸಾಮಾನ್ಯವಾಗಿ ಈಗಿನ ಕಾಲದಲ್ಲಿ ವಿವಾಹಕ್ಕೆ ಸಂಬಂಧಪಟ್ಟಂತಹ ತೊಂದರೆಗಳನ್ನು ಸಾಕಷ್ಟು ಜನರು ಅನುಭವಿಸುತ್ತಿರುತ್ತಾರೆ. ಆದ್ದರಿಂದ ವಿವಾಹಕ್ಕೆ ಸಂಬಂಧಪಟ್ಟಂತೆ ತೊಂದರೆಯನ್ನು ದೂರ ಮಾಡಿಕೊಳ್ಳಬೇಕೆಂದರೆ ಯಾವ ಪೂಜೆಯನ್ನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ…

Read More

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ದುರ್ನಡತೆ ತಡೆಗೆ ಸರ್ಕಾರ ಮಹತ್ವದ ಕ್ರಮವಹಿಸಿದೆ. ಇದಕ್ಕಾಗಿ ಘಟಕಾಧಿಕಾರಿಗಳು ಕೆಲ ಕ್ರಮಗಳನ್ನು ಕೈಗೊಳ್ಳುವಂತೆ ಖಡಕ್ ಆದೇಶ ಮಾಡಲಾಗಿದೆ. ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾ ನಿರೀಕ್ಷಕರಾದಂತ ಡಾ.ಎಂ.ಎ ಸಲೀಂ ಅವರು ಆದೇಶ ಹೊರಡಿಸಿದ್ದು, ಇತ್ತೀಚೆಗೆ ಕೆಲವು ದರೋಡೆ, ಕಳ್ಳತನ ಮತ್ತು ವಂಚನೆ ಕೃತ್ಯಗಳಲ್ಲಿ ಕೆಲವು ಪೊಲೀಸ್ ಸಿಬ್ಬಂದಿಯವರುಗಳ ಹೆಸರುಗಳು ತಳಕು ಹಾಕಿಕೊಂಡಿರುವುದು ತೀರಾ ಕಳವಳಕಾರಿ ಬೆಳವಣಿಗೆಯಾಗಿದೆ. ಇಂತಹ ಪ್ರವೃತ್ತಿಗಳು ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆಯಾಗುವುದರೊಂದಿಗೆ ಇಲಾಖೆಯನ್ನು ಅಪಕೀರ್ತಿಗೆ ಗುರಿ ಮಾಡುತ್ತವೆ. ಈ ರೀತಿಯ ದುಷ್ಕೃತ್ಯಗಳು ಸಾರ್ವಜನಿಕರಿಗೆ ಪೊಲೀಸರ ಮೇಲಿನ ನಂಬಿಕೆಯನ್ನು ಕುಂದಿಸುವುದಲ್ಲದೆ, ಕಾನೂನು ಜಾರಿಯ ಸಂಪೂರ್ಣ ವ್ಯವಸ್ಥೆಯ ಮೂಲ ಸಿದ್ಧಾಂತಗಳನ್ನೇ ಸಂಶಯಾಸ್ಪದವಾಗಿ ನೋಡುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಇಂತಹ ಘಟನೆಗಳನ್ನು ಸಮರ್ಥವಾಗಿ ತಡೆಗಟ್ಟಿ, ಹೊಣೆಗಾರಿಕೆಯನ್ನು ನಿಗಧಿಪಡಿಸುವ ಮೂಲಕ ಪೊಲೀಸ್ ಇಲಾಖೆಯ ಸಮಗ್ರತೆಯನ್ನು ಪುನರ್ನಿಮಿ್ರಸುವ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದಿದ್ದಾರೆ. ಇತ್ತೀಚೆಗೆ ದಾವಣಗೆರೆಯಲ್ಲಿ ಒಬ್ಬ ಚಿನ್ನದ ವ್ಯಾಪಾರಿಯ ಮೇಲೆ ದರೋಡೆ…

Read More

ಬೆಂಗಳೂರು: ಹಿರಿಯ ಪತ್ರಕರ್ತರಾದ ಟಿ.ಜೆ.ಎಸ್. ಜಾರ್ಜ್ ಅವರು ಸುದ್ದಿ ಮನೆಗೆ ಘನತೆ ತಂದರೆ, ಸಂಜೆವಾಣಿ ಅ.ಚ.ಶಿವಣ್ಣ ಅವರು ಸ್ಕೂಪ್ ಮತ್ತು ಬ್ರೇಕಿಂಗ್ ನ್ಯೂಸ್‌ಗಳಿಗೆ ಹೊಸ ಮೆರಗು ಕೊಟ್ಟರು ಎಂದು ಕೆಯುಡಬ್ಲೂಜೆ ಶ್ಲಾಗಿಸಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯೂಡಬ್ಲ್ಯೂಜೆ)ವತಿಯಿಂದ ಅಗಲಿದ ಹಿರಿಯ ಪತ್ರಕರ್ತರಾದ ಟಿಜೆಎಸ್ ಜಾರ್ಜ್, ಅ.ಚ.ಶಿವಣ್ಣ ಅವರಿಗೆ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಆರಂಭದಲ್ಲಿ ಇಬ್ಬರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಒಂದು ನಿಮಿಶ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಹಿರಿಯ ಪತ್ರಕರ್ತರಾದ ಟಿಜೆಎಸ್ ಜಾರ್ಜ್, ಅ.ಚ.ಶಿವಣ್ಣ ಅವರಲ್ಲಿದ್ದ ಸಮಗ್ರ ಒಳನೋಟ ಮತ್ತು ದೂರದೃಷ್ಟಿಯಿಂದಾಗಿ ಸುದ್ದಿಮನೆಗೆ ಆ ಕಾಲಘಟ್ಟದಲ್ಲಿ ತನ್ನದೇ ಆದ ಮಹತ್ವ ತುಂಬಿತ್ತು ಎಂದು ಹೇಳಿದರು. ಇಂದು ನಾವು ಕಾಣುತ್ತಿರುವ ಪತ್ರಿಕೋದ್ಯಮದಲ್ಲಿ ಒಂದಷ್ಟು ವೃತ್ತಿ ಬದ್ದತೆಯ ಬೆಳವಣಿಗೆಗೆ ಅಂದು ಅವರಲ್ಲಿದ್ದ ಕೆಲ ಮೌಲ್ಯಗಳು ಪೂರಕವಾಗಿದ್ದವು ಎಂದು ಅಭಿಪ್ರಾಯಪಟ್ಟರು. ಕಳೆದ…

Read More

ಶಿವಮೊಗ್ಗ : ಎಲೆಚುಕ್ಕೆ ಮತ್ತು ಹಳದಿ ಎಲೆ ರೋಗದಿಂದ ಫಸಲು ಕಳೆದುಕೊಂಡಿರುವ ಬೆಳೆಗಾರರಿಗೆ ಪರಿಹಾರ ನೀಡುವಂತೆ ಸದನದಲ್ಲಿ ಗಟ್ಟಿಯಾಗಿ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ. ಅಡಿಕೆ ಬೆಳೆಗಾರರು ತೀವೃ ಸಂಕಷ್ಟದಲ್ಲಿದ್ದು, ಅಡಿಕೆ ಬೆಳೆಯುವ ಪ್ರದೇಶದಿಂದ ಬಂದ ಶಾಸಕರು ಒಟ್ಟಾಗಿ ಸರ್ಕಾರದ ಮೇಲೆ ಪರಿಹಾರಧನ ಬಿಡುಗಡೆಗೆ ಒತ್ತಡ ತರುತ್ತೇವೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದರ ಜೊತೆಗೆ ಹವಮಾನ ಆಧಾರಿತ ಬೆಳೆವಿಮೆ ಬಿಡುಗಡೆಗೂ ಸಹ ಸರ್ಕಾರಕ್ಕೆ, ಸಂಬAಧಪಟ್ಟ ಸಚಿವರಿಗೆ ಮನವಿ ಮಾಡಲಾಗಿದ್ದು, ಶೀಘ್ರ ಪರಿಹಾರಧನ ಬಿಡುಗಡೆಯಾಗುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಗೊಂದಲ ಶೀಘ್ರದಲ್ಲಿಯೆ ಬಗೆಹರಿಸಲು ನಾವು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ನನ್ನ ಹತ್ತಿರ ಸಹಜವಾಗಿ ಕೆಲವೊಂದು ವಿಷಯಗಳನ್ನು ಚರ್ಚೆ ಮಾಡಿದ್ದು, ಕೆಲವು ಮಾಧ್ಯಮದಲ್ಲಿ ಬಂದಿತ್ತು. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಗರವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಗೆ…

Read More

ಶಿವಮೊಗ್ಗ : ಕಾರ್ಮಿಕರ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು. ವೈದ್ಯ, ಇಂಜಿನಿಯರ್ ಸೇರಿದಂತೆ ಉನ್ನತ ಹುದ್ದೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತೇವೆ ಎನ್ನುವ ಸಂಕಲ್ಪ ಕಾರ್ಮಿಕರು ಕೈಗೊಳ್ಳಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಗುರುವಾರದಂದು ಸಾಗರ ನಗರಸಭೆ ಆವರಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ ಟೂಲ್ಸ್ ಕಿಟ್ ಮತ್ತು ಸುರಕ್ಷಾ ಕಿಟ್ ವಿತರಣೆ ಮಾಡಿ ಅವರು ಮಾತನಾಡುತ್ತಾ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಅವರ ಬದುಕು ಹಸನುಗೊಳಿಸಿ ಎಂದರು. ದೇಶ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿ ನಿರ್ಮಾಣ, ಅಭಿವೃದ್ದಿ ಕೆಲಸದ ಹಿಂದೆ ನಿಮ್ಮ ಶ್ರಮ ಇರುತ್ತದೆ. ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಅದರ ಸದ್ಭಳಕೆ ಮಾಡಿಕೊಳ್ಳಿ. ಕಾರ್ಮಿಕರಲ್ಲದವರು ಕಾರ್ಮಿಕ ಕಾರ್ಡ್ ಪಡೆದು ನಿಮಗೆ ಸಿಗಬೇಕಾದ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಗಮನ ಹರಿಸಿ ಎಂದು ಹೇಳಿದರು. ಸಂತೋಷ್ ಲಾಡ್ ಅವರು ಕಾರ್ಮಿಕ ಸಚಿವರಾದ ಮೇಲೆ ದೊಡ್ಡಮಟ್ಟದ…

Read More

ಮಂಡ್ಯ : ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಕ್ಯಾಬಿನೆಟ್ ಗೆ ತಂದಿದ್ದರು. ಆದರೆ, ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ, ನಾನು ಮಂಡ್ಯದಲ್ಲೇ ಆಗಲೇಬೇಕು ಅಂದಾಗ ಎಲ್ಲರು ಸುಮ್ಮನಾದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಪ್ರಾರಂಭವಾದ ಮೇಲೆ ಮೊದಲ ಕೃಷಿ ಮೇಳವನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಅವರು ಮಾತನಾಡಿದರು ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದಾಲೋಚನೆಯಿಂದ ಮಂಡ್ಯದಲ್ಲಿ 80 ವರ್ಷಗಳ ಹಿಂದೆಯೇ ಇಲ್ಲಿ ಸಂಶೋಧನಾ ಕೇಂದ್ರವನ್ನು ತೆರೆದಿದ್ದಾರೆ. ಸಂಶೋಧನಾ ಕೇಂದ್ರ ಇದ್ದರೆ ಸಾಲದು ಜಿಲ್ಲೆಯ ಜನತೆಗೆ ವಿಶ್ವ ವಿದ್ಯಾಲಯಯನ್ನು ತೆರೆದರೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಸಚಿವ ಚಲುವರಾಯಸ್ವಾಮಿ ಅವರು ವಿವಿ ಸ್ಥಾಪನೆಗೆ ಕ್ಯಾಬಿನೆಟ್ ಗೆ ತಂದರು. ಕ್ಯಾಬಿನೆಟ್ ನಲ್ಲಿ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನನಗೂ ಇದು ಸೂಕ್ತ ಅನ್ನಿಸಿತು. ಹೀಗಾಗಿ ನಾನು ಮಂಡ್ಯದಲ್ಲೇ ಆಗಲೇಬೇಕು ಅಂದಾಗ ಎಲ್ಲರೂ ಸುಮ್ಮನಾದರು ಎಂದರು. ಐದು ಜಿಲ್ಲೆಗಳನ್ನ…

Read More

ಶಿವಮೊಗ್ಗ : ಜನವರಿ.3 ಮತ್ತು 4ರಂದು ರಜತ ಸಾಗರೋತ್ಸವ ಅತ್ಯಂತ ವಿಶೇಷವಾಗಿ ಆಯೋಜಿಸಿದೆ. ಸಹೃದಯ ಬಳಗ ಎರಡೂವರೆ ದಶಕಗಳಿಂದ ಇಂತಹ ವಿಶೇಷ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಅನುಕರಣೀಯವಾಗಿದೆ ಎಂದು ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ಹೇಳಿದರು. ಶಿವಮೊಗ್ಗ ಜಿಲ್ಲೆಯ ಸಾಗರದ ಸಹೃದಯ ಬಳಗದ ವತಿಯಿಂದ ಜ. 3 ಮತ್ತು 4ರಂದು ನಡೆಯಲಿರುವ ರಜತ ಸಾಗರೋತ್ಸವದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ, ಮಾತನಾಡಿದಂತ ಅವರು, ಸಾಗರೋತ್ಸವ ಹೆಸರಿನಲ್ಲಿ ಎಲೆಮರೆಯ ಕಾಯಿಯಂತೆ ಇರುವ ಸಾಧಕರನ್ನು ಸನ್ಮಾನಿಸುವುದು, ವಿವಿಧ ಸಾಂಸ್ಕೃತಿಕ ವೈಭವ, ನಗೆಹಬ್ಬದಂತಹ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ತಾಲ್ಲೂಕಿನ ಇತಿಹಾಸದ ಮೇಲೆ ಬೆಳಕು ಚೆಲ್ಲಲು ಇತಿಹಾಸ ಸಮ್ಮೇಳನ, ಆಹಾರ ಮೇಳ ನಡೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ಭಗವದ್ಗೀತೆ ಅಭಿಯಾನ ಸಮಿತಿ ಅಧ್ಯಕ್ಷ ಕೆ.ವಿ.ಜಯರಾಮ್ ಮಾತನಾಡಿ, ಪ್ರತಿವರ್ಷ ಒಂದು ದಿನ ನಡೆಯುತ್ತಿದ್ದ ಸಾಗರೋತ್ಸವ ಈ ಬಾರಿ ರಜತ ಮಹೋತ್ಸವ ಅಂಗವಾಗಿ ಎರಡು ದಿನ ನಡೆಯುತ್ತಿದೆ. ಸಹೃದಯ ಬಳಗ ಅತ್ಯಂತ 25 ವರ್ಷಗಳಿಂದ ಈ…

Read More

ಶಿವಮೊಗ್ಗ: ಡಿಸೆಂಬರ್.23 ಮತ್ತು 24ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಸಹ ರಾಜ್ಯದ ಅತ್ಯಂತ ಪ್ರತಿಷ್ಟಿತ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತದೆ. ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಕಾಲೇಜಿಗೆ ಸುಣ್ಣಬಣ್ಣ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯ ಒದಗಿಸಲು 50 ಲಕ್ಷ ರೂ. ನೀಡಲಾಗಿದೆ ಎಂದರು. ಡಿ. 23ರಂದು ಹಳೇಯ ವಿದ್ಯಾರ್ಥಿಗಳ ಸಮಾಗಮ, ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಡಿ. 24ರಂದು ಸ್ಮರಣ ಸಂಚಿಕೆ ಬಿಡುಗಡೆ, ಸಮಾರೋಪ ಸಮಾರಂಭ ಹಾಗೂ ಝೀ ಕನ್ನಡ ಖ್ಯಾತಿಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿದೆ ಎಂದು ಹೇಳಿದರು. ಈ ಕಾಲೇಜಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದು ದೊಡ್ಡದೊಡ್ಡ ಹುದ್ದೆಯಲ್ಲಿದ್ದಾರೆ. ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ…

Read More