Author: kannadanewsnow09

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವಂತ ರೈತರಿಗೆ ಸಾಗುವಳಿ ಪತ್ರವನ್ನು ನೀಡುವ ಸಂಬಂಧ ಡೇಟ್ ಫಿಕ್ಸ್ ಆಗಿದೆ. ಬಗರ್ ಹುಕುಂ ಸಾಗುವಳಿದಾರರ ಅರ್ಜಿಯನ್ನು ನವೆಂಬರ್.26ರೊಳಗೆ ಕ್ಲಿಯರ್ ಮಾಡಿ, ಡಿಸೆಂಬರ್ ಮೊದಲ ವಾರದಲ್ಲಿ ಡಿಜಿಟಲ್ ಸಾಗುವಳಿ ಭೂ ಮಂಜೂರಾತಿ ಪತ್ರ ವಿತರಣೆಗೆ ನಿರ್ಧರಿಸಲಾಗಿದೆ. ಈ ಸಂಬಂಧ ಇಂದು ಸಚಿವ ಕೃಷ್ಣಭೈರೇಗೌಡ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯ ಬಳಿಕ ಮಾತನಾಡಿದಂತ ಅವರು, ನವೆಂಬರ್ ತಿಂಗಳ 25 ರ ಒಳಗೆ ತಹಶೀಲ್ದಾರರು ಅರ್ಹ-ಅನರ್ಹ ಅರ್ಜಿಗಳನ್ನು ವಿಂಗಡಿಸಿ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಎಲ್ಲಾ ಜಿಲ್ಲಾಧಿಕಾರಿಗಳು ನವೆಂಬರ್.26 ರ ಬೆಳಗ್ಗೆಯೇ ಇಡೀ ಜಿಲ್ಲೆಯ ಪಟ್ಟಿಯನ್ನು ಒಂದುಗೂಡಿಸಿ ನನಗೆ ಸಲ್ಲಿಸಬೇಕು. ಡಿಸೆಂಬರ್ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್ ಭೂ ಸಾಗುವಳಿ ಚೀಟಿ ನೀಡಬೇಕು” ಎಂದು ಅವರು ತಾಕೀತು ಮಾಡಿದರು. ರಾಜ್ಯಾದ್ಯಂತ ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ 14ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಅನರ್ಹ…

Read More

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಕರ್ನಾಟಕರತ್ನ ದಿವಂಗತ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆಯನ್ನು ಸರ್ಕಾರದಿಂದ ಖರೀದಿಸಿ ಸ್ಮಾರಕವಾಗಿ ಸಂರಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಈ ಸಂಬಂಧ ಇಂದು ಸಿಎಂ ಜೊತೆ ಮಾತುಕತೆ ನಡೆಸಿದ್ದು, ನಿಜಲಿಂಗಪ್ಪನವರ ಮನೆಯನ್ನು ಖರೀದಿಸಿ, ನವೀಕರಿಸಿ ಅದನ್ನು ಸ್ಮಾರಕವಾಗಿ ಕಾಪಾಡಲು 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು. ನಿಜಲಿಂಗಪ್ಪ ಅವರು ಏಕೀಕರಣದ ಬಳಿಕ ಮೈಸೂರು ರಾಜ್ಯದ (ಕರ್ನಾಟಕ) ಪ್ರಥಮ ಮುಖ್ಯಮಂತ್ರಿಗಳಾಗಿದ್ದು, ತಮ್ಮ ಸರಳ, ಸಜ್ಜನಿಕೆಯಿಂದ ಇಡೀ ರಾಜ್ಯದ ಜನಮನ ಗೆದ್ದಿದ್ದರು. ಅವರ ಮನೆಯನ್ನು ಸ್ಮಾರಕ ಮಾಡುವುದಾಗಿ ಈ ಹಿಂದೆಯೇ ಸರ್ಕಾರ ಘೋಷಿಸಿತ್ತು. ಈಗ ಆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು. https://kannadanewsnow.com/kannada/good-news-for-bagar-hukum-cultivators-in-the-state-land-allotted-in-first-week-of-december/ https://kannadanewsnow.com/kannada/dont-you-feel-ashamed-minister-krishna-byre-gowda-reprimands-all-tahsildars-of-mysuru/

Read More

ಬೆಂಗಳೂರು: ಕೆಲಸ ಮಾಡದ ಮೈಸೂರಿನ ತಹಶೀಲ್ದಾರರೇ ನಿಮಗೆ ನಾಚಿಕೆ ಆಗಲ್ವ? ನಿಮಗೆ ಮನುಷ್ಯತ್ವ ಇಲ್ವ? ಎಂದು ಅಧಿಕಾರಿಗಳನ್ನು ಇಂದಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಗರ್ ಹುಕುಂ ಅರ್ಜಿ ವಿಲೇ, ನಮೂನೆ 1-5 ಹಾಗೂ ನಮೂನೆ 6-10 ದುರಸ್ಥಿ ಕೆಲಸ ಹಾಗೂ ತಹಶೀಲ್ದಾರ್ ತಕರಾರು ಅರ್ಜಿ ವಿಲೇ ಕೆಲಸದಲ್ಲೂ ಮೈಸೂರು ಸಾಕಷ್ಟು ಹಿಂದೆ ಬಿದ್ದಿದೆ. ಹೀಗಾಗಿ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರ್ ಗಳನ್ನೂ ತರಾಟೆಗೆ ತೆಗೆದುಕೊಂಡ ಸಚಿವರು, “ಮೈಸೂರು ಜಿಲ್ಲೆ ಕಳಪೆಯಲ್ಲಿ ಕಳಪೆ ಜಿಲ್ಲೆಯಾಗುತ್ತಿದೆ. ಕೆಲಸ ಮಾಡದ ಅಧಿಕಾರಿಗಳಿಗೆ ಮನುಷ್ಯತ್ವ ಇದೆಯಾ? ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು, ನಾಚಿಕೆ ಆಗಲ್ವ? ಎಂದು ಕಿಡಿಕಾರಿದರು. ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಸರ್ವೇ ಇಲಾಖೆ ಆಯುಕ್ತರಾದ ಮಂಜುನಾಥ್ ಉಪಸ್ಥಿತರಿದ್ದರು. https://kannadanewsnow.com/kannada/good-news-for-bagar-hukum-cultivators-in-the-state-land-allotted-in-first-week-of-december/ https://kannadanewsnow.com/kannada/are-they-horses-donkeys-or-donkeys-to-buy-mlas-mlc-ct-ravi/

Read More

ಬೆಂಗಳೂರು : ಬಡವರಿಗೆ ಭೂ ಮಂಜೂರುಗೊಳಿಸುವ “ಬಗರ್ ಹುಕುಂ” ಅರ್ಜಿಗಳ ಪೈಕಿ ಅರ್ಹ-ಅನರ್ಹ ಅರ್ಜಿಗಳನ್ನು ರಾಜ್ಯದ ಎಲ್ಲಾ ತಹಶೀಲ್ದಾರರೂ ಈ ತಿಂಗಳ 25 ರ ಒಳಗೆ ವಿಂಗಡಿಸಿ ಜಿಲ್ಲಾಧಿಕಾರಿಗಳಿಗೆ ನೀಡಬೇಕು. ತಪ್ಪಿದರೆ ಎಲ್ಲರಿಗೂ ಶೋಕಾಸ್ ನೊಟೀಸ್ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಎಚ್ಚರಿಸಿದರು. ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ವಿಕಾಸಸೌಧದಿಂದ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಬಗರ್ ಹುಕುಂ ಅರ್ಜಿ ವಿಲೇ ಪ್ರಗತಿ ಪರಿಶೀಲನೆ ನಡೆಸಿದರು. “ಬಗರ್ ಹುಕುಂ” ಬಡವರ ಕೆಲಸ. ಬಡ ರೈತರಿಗೆ ಶೀಘ್ರ ಭೂ ಮಂಜೂರು ಮಾಡಬೇಕು ಎಂದು ರೈತಪರ ಸಂಘಟನೆಗಳು ದಶಕಗಳಿಂದ ಹೋರಾಡುತ್ತಿವೆ. ಈ ಬಗ್ಗೆ ಸರ್ಕಾರಕ್ಕೂ ಬದ್ಧತೆ ಇದ್ದು, ರೈತ ಹೋರಾಟಗಾರರ ದ್ವನಿಗೆ ಕಿವಿಗೊಡುವ ಅವರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಉತ್ತರದಾಯಿತ್ವ ನನ್ನ ಮೇಲೂ ಇದೆ” ಎಂದರು. ಮುಂದುವರೆದು, “ಬಗರ್ ಹುಕುಂ ಕೆಲಸಗಳಿಗೆ ಚುರುಕು ಮುಟ್ಟಿಸಬೇಕು ಎಂಬ ಕಾರಣದಿಂದಲೇ ನಾನು ಕಳೆದ ಒಂದು ವರ್ಷದಿಂದ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕೋವಿಡ್ ಸಂಬಂಧಿತ ಪ್ರಕರಣಗಳ ಸಂಪೂರ್ಣ ಆಯಾಮಗಳ ತನಿಖೆಗಾಗಿ ವಿಶೇಷ ಎಸ್ಐಟಿ ರಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ. ಇಂದು ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು, ಇಂದು 25 ವಿಷಯಗಳನ್ನ ಪರಿಶೀಲಿಸಿದ್ದೇವೆ. ಎರಡುಮೂರು ಬಿಟ್ಟು ಉಳಿದವಕ್ಕೆ ಅನುಮತಿ ನೀಡಲಾಗಿದೆ ಎಂದರು. ಎಲ್ಲಾ ಸಮಿತಿಗಳನ್ನ ನಿಷ್ಕ್ರಿಯಗೊಳಿಸಿತ್ತು. ಯಾರ ಗಮನಕ್ಕೂ ಬರದಂತೆ ಭ್ರಷ್ಟಾಚಾರ ಮಾಡಿತ್ತು. 200, 300 ಪಿಪಿಎ ಕಿಟ್ ಗೆ 2100 ಕೊಟ್ಟಿದೆ. ಲಕ್ಚಾಂತರ ಕಿಟ್ ಬೇರೆ ದೇಶದಿಂದ ತರಿಸಿದೆ. ಔಷಧಿಗಳನ್ನ ಎರಡು ಪಟ್ಟು ಹೆಚ್ಚು ದರದಲ್ಲಿ ಖರೀದಿ ಮಾಡಲಾಗಿದೆ. ಬ್ಲಾಕ್ ಲೀಸ್ಟ್ ನಲ್ಲಿದ್ದ ಕಂಪನಿಗಳಿಗೆ ಪೇಮೆಂಟ್ ಮಾಡಿದ್ದಾರೆ. ಪಿಎಸಿ ಸಭೆಗಳಲ್ಲಿ ಚರ್ಚೆಯಾದ್ರೂ ಕ್ರಮ ಜರುಗಿಸದಿರುವುದು. ಮಾನವಹಕ್ಕುಗಳಿಗೂ ದೂರುಗಳು ಹೋಗಿದ್ದವು. ಹೀಗಾಗಿ ಕುನ್ಹಾ ಕಮಿಟಿಯನ್ನ ರಚಿಸಿದ್ದೆವು ಎಂದರು. ಕೋವಿಡ್ ಹಗಣರದ ಚರ್ಚೆ ವಿಚಾರವಾಗಿ ಮಾತನಾಡಿದಂತ ಅವರು, ಜಗತ್ತು ಕೊರೊನಾದಿಂದ ಅಲ್ಲೋಲ ಕಲ್ಲೋಲ ಆಗಿತ್ತು. ದೊಡ್ಡ ದುರಂತವನ್ನ ಜಗತ್ತು ಅನುಭವಿಸಿತ್ತು. ದೇಶ ನಮ್ಮ ರಾಜ್ಯವೂ ದುರಂತ ಅನುಭವಿಸ್ತು. ಆಗಿನ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿದೆ. ಭ್ರಷ್ಟಾಚಾರ,…

Read More

ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆಯ ಭ್ರಷ್ಟಾಚಾರ ಖಂಡಿಸಿ ಮದ್ಯ ಮಾರಾಟಗಾರರು ಪ್ರತಿಭಟನೆಗೆ ಇಳಿಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನವೆಂಬರ್.20ರಂದು ರಾಜ್ಯಾಧ್ಯಂತ ಎಣ್ಣೆ ಸಿಗೋದು ಡೌಟ್ ಎನ್ನಲಾಗುತ್ತಿದೆ. ಈ ಬಗ್ಗೆ ಫೆಡರೇಷನ್ ಆಫ್ ವೈನ್ಸ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದಾಚಾರ್ಯ ಹೆಗ್ಡೆ ಅವರು ಮಾಹಿತಿ ಹಂಚಿಕೊಂಡಿದ್ದು, ರಾಜ್ಯದಲ್ಲಿನ ಅಬಕಾರಿ ನೀತಿ ಖಂಡಿಸಿ ನವೆಂಬರ್.20ರಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ರಾಜ್ಯ ಅಬಕಾರಿ ಇಲಾಖೆಯಲ್ಲಿ ದಿನೇ ದಿನೇ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಿ ಅಂತ ಸರ್ಕಾರದ ಗಮನಕ್ಕೆ ತಂದರೇ ಈವರೆಗೆ ಕ್ರಮವಹಿಸಿಲ್ಲ. ನಮ್ಮ ಜೊತೆಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಕೂಡ ಸಭೆ ಕರೆದು ಮಾತನಾಡಿಲ್ಲ ಎಂಬುದಾಗಿ ಕಿಡಿಕಾರಿದರು. ರಾಜ್ಯದಲ್ಲಿನ ಅಬಕಾರಿ ನೀತಿ ವಿರುದ್ಧ ಮದ್ಯ ಮಾರಾಟಗಾರರು ನವೆಂಬರ್.20ರಂದು ಮದ್ಯ ಮಾರಾಟವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ. ಅದು ವೈನ್, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಯಾವುದೇ ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ. ಮದ್ಯ ಮಾರಾಟ ಸ್ಥಗಿತಗೊಳಿಸಿ…

Read More

ಬೆಂಗಳೂರು: ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಕ್ಕಳ ಸಂವಾದವನ್ನು ನಡೆಸಿದರು. ಬಿಬಿಎಂಪಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಇಂದು ವಿಧಾನಸೌಧದ ಕೊಠಡಿ ಸಂಖ್ಯೆ: 334 ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 160 ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳ ದಿನಾಚರಣೆಯಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಸ್ಮರಿಸುವುದರ ಜೊತೆಗೆ, ಭವಿಷ್ಯದ ಕರ್ನಾಟಕದ ನಿರ್ಮಾಣಕ್ಕೆ ಮಕ್ಕಳಿಂದ ಸಲಹೆಗಳನ್ನು ಪಡೆಯುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಅದರಂತೆ ಮಕ್ಕಳೊಂದಿಗೆ ಸಂವಾದ ನಡೆಸಿದ್ದು, ಸಂವಾವದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳು ಹಾಗೂ ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ. 1. ಕೌಸಲ್ಯ, 9ನೇ ತರಗತಿ, ಪಾಲಿಕೆ ಪ್ರೌಢಶಾಲೆ, ಭೈರಸಂದ್ರ: ಪ್ರಶ್ನೆ: ನಮ್ಮ ಬೆಂಗಳೂರು ನಗರದಲ್ಲಿ ದಿನೇ ದಿನೇ ಜನಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ. ಇದರಿಂದ ವಾಹನಗಳ ಬಳಕೆಯು ಹೆಚ್ಚಾಗುತ್ತಿದ್ದು, ವಾಯು ಮಾಲಿನ್ಯ ಶಬ್ಧ ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ನಮಗೆ ಶಾಲೆಗಾಗಲಿ, ನಮ್ಮ…

Read More

ನವದೆಹಲಿ: ಎನ್ಸಿಡಿ ರಿಸ್ಕ್ ಫ್ಯಾಕ್ಟರ್ ಕೊಲಾಬರೇಶನ್ (ಎನ್ಸಿಡಿ-ಆರ್ಐಎಸ್ಸಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಯ ಇತ್ತೀಚಿನ ವರದಿಯ ಪ್ರಕಾರ, ಭಾರತವು 2022 ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಮಧುಮೇಹಿಗಳನ್ನು ದಾಖಲಿಸಿದೆ, ಇದು ವಿಶ್ವದ 828 ಮಿಲಿಯನ್ ಪ್ರಕರಣಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚು. ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು 62% ಮಧುಮೇಹಿಗಳು ತಮ್ಮ ಸ್ಥಿತಿಗೆ ಯಾವುದೇ ಚಿಕಿತ್ಸೆಯನ್ನು ಪಡೆಯುತ್ತಿಲ್ಲ. ಎನ್ಸಿಡಿ-ಆರ್ಐಎಸ್ಸಿ ಸಾಂಕ್ರಾಮಿಕವಲ್ಲದ ರೋಗಗಳನ್ನು ಪತ್ತೆಹಚ್ಚುವ ವಿಶ್ವಾದ್ಯಂತ 1,500 ಕ್ಕೂ ಹೆಚ್ಚು ಆರೋಗ್ಯ ತಜ್ಞರ ಸಹಯೋಗವಾಗಿದೆ. ಅವರ ಇತ್ತೀಚಿನ ಸಂಶೋಧನೆಗಳು 2022 ರಲ್ಲಿ ಭಾರತದಲ್ಲಿ ಸುಮಾರು 212 ಮಿಲಿಯನ್ ಜನರು, ಜನಸಂಖ್ಯೆಯ ಸುಮಾರು 23.7% ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಸೂಚಿಸುತ್ತದೆ. ಆದರೂ, ಈ ವ್ಯಕ್ತಿಗಳಲ್ಲಿ ಸುಮಾರು 133 ಮಿಲಿಯನ್ ಜನರು ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಅಥವಾ ಯಾವುದೇ ಚಿಕಿತ್ಸೆಯನ್ನು ಪಡೆಯುತ್ತಿಲ್ಲ, ಇದು ಚಿಕಿತ್ಸೆ ನೀಡದ ಮಧುಮೇಹ ಪ್ರಕರಣಗಳಲ್ಲಿ ಭಾರತವನ್ನು ಜಾಗತಿಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಿಸಿದೆ. ಇದಕ್ಕೆ ಹೋಲಿಸಿದರೆ, ಹೋಲಿಸಬಹುದಾದ ಜನಸಂಖ್ಯೆಯನ್ನು…

Read More

ಬೆಂಗಳೂರು: ಕರ್ನಾಟಕದ ಮೂರು ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಯ ಬಳಿಕ, ಡಿಸಿಎಂ ಡಿಕೆ ಶಿವಕುಮಾರ್ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ. ನಾಳೆಯಿಂದ ಮೂರು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ. ದಿನಾಂಕ 15-11-2024ರ ನಾಳೆ ಬೆಳಿಗ್ಗೆ 9.55ಕ್ಕೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಮುಂಬೈಗೆ ತೆರಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮುಂಬೈ ಏರ್ಪೋರ್ಟ್ ತಲುಪಲಿರುವಂತ ಅವರು, ಅಲ್ಲಿಂದ ರಸ್ತೆಯ ಮೂಲಕ ಸಾಗಿ ಮುಂಬೈ ವೆಸ್ಟ್ ವಿಧಾನಸಭಾ ಕ್ಷೇತ್ರವಾದಂತ ಬಿವಂಡಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಚಾಂದಿವಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿರುವಂತ ಅವರು, ರಾತ್ರಿ 7.55ಕ್ಕೆ ಮುಂಬೈನಿಂದ ವಿಮಾನದಲ್ಲಿ ಹೊರಟು, ಬೆಂಗಳೂರನ್ನು ರಾತ್ರಿ 9.55ಕ್ಕೆ ತಲುಪಲಿದ್ದಾರೆ. ದಿನಾಂಕ 16-11-2024ರಂದು ಮರು ದಿನ ಬೆಳಿಗ್ಗೆ 9 ಗಂಟೆಗೆ ಹೆಚ್ ಎಎಲ್ ಏರ್ ಪೋರ್ಟ್ ನಿಂದ ವಿಶೇಷ ಏರ್ ಕ್ರಾಫ್ಟ್ ಮೂಲಕ ಮಹರಾಷ್ಟ್ರದ ಸೊಲ್ಲಾಪುರ ವಿಮಾನ ನಿಲ್ದಾಣವನ್ನು ಬೆಳಿಗ್ಗೆ 11 ಗಂಟೆಗೆ…

Read More

ಬೆಂಗಳೂರು : 66/11 kV ರಾಜನಕುಂಟೆ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 15.11.2024 ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 04:00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.  “ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರ, ಕೆಎಂಎಫ್, ಇಟಗಲ್‌ಪುರ, ಅರ್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ. ಸೆಂಚುರ್‌ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. ನ.16ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ 220/66/11 kV ಹೆಬ್ಬಾಳ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-4 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಶನಿವಾರ (16.11.2024) ರಂದು ಬೆಳಗ್ಗೆ 12:00 ಯಿಂದ ಮಧ್ಯಾಹ್ನ 13:30 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗಂಗಾನಗರ, ಲಕ್ಷ್ಮಯ್ಹ್ ಬ್ಲಾಕ್, ವೀವರ್ ಕಾಲೋನಿ, ಸಿ.ಬಿ.ಐ…

Read More