Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಗರದಲ್ಲಿ ಬೆಸ್ಕಾಂನಿಂದ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಕಾರಣ, ನವೆಂಬರ್.20, 2024ರ ನಾಳೆ, ನವೆಂಬರ್.21, 2024ರ ನಾಡಿದ್ದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ನಿರ್ವಹಣಾ ಕಾಮಗಾರಿ ನಿಮಿತ್ತ ನವೆಂಬರ್.20ರ ನಾಳೆಯ ಬುಧವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನಾಳೆ ಈ ಏರಿಯಾಗಳಲ್ಲಿ ಪವರ್ ಕಟ್ ಅರೇಹಳ್ಳಿ, ಇಟ್ಟಮಡು, ಏಜಿಎಸ್ ಲೇಔಟ್, ಚಿಕ್ಕಲಸಂದ್ರ, ಟಿ.ಜಿ. ಲೇಔಟ್, ಭುವನೇಶ್ವರಿನಗರ ಇಸ್ರೋ ಲೇಔಟ್, ಇಸ್ರೋ ಲೇಔಟ್ ಇಂಡಸ್ರ್ಟಿಯಲ್ ಏರಿಯಾ, ಕುಮಾರಸ್ವಾಮಿ ಬಡಾವಣೆ, ವಿಠ್ಠಲ ನಗರ, ವಿಕ್ರಮ್ ನಗರ, ಯೆಲಚೇನಹಳ್ಳಿ, ರಾಮಾಂಜನೇಯ ನಗರ, ನಂದ ಕುಮಾರ್ ಲೇಔಟ್, ಉತ್ತರಹಳ್ಳಿ ಮೇನ್ ರೋಡ್, ಉದಯ ನಗರ, ಗೌಡನ ಪಾಳ್ಯ, ಟೆಲಿಕಾಂ ಲೇಔಟ್, ಮುನೇಶ್ವರ ನಗರ, ಚಿಕ್ಕಲಸಂದ್ರ ವಿಲೇಜ್, ಕದಿರೇನಹಳ್ಳಿ, ಅಬ್ಬಯ್ಯ ನಾಯ್ಡು ಸ್ಟುಡಿಯೋ ಸುತ್ತಮುತ್ತಲ ಪ್ರದೇಶ, ನಾಯ್ಡು ಲೇಔಟ್, ಎಜಿಎಸ್ ಲೇಔಟ್, ಹನುಮ ಆದಶð ಅಪಾಟ್ðಮೆಂಟ್ 1 & 2, ಹಿಲ್ಸ್ ಲೇಔಟ್, ಕಾಮಾಕ್ಯ ಲೇಔಟ್, ಹೊಸಕೆರೆಹಳ್ಳಿ, ಟಾಟಾ…
ಉಡುಪಿ: ಜಿಲ್ಲೆಯ ಕಬ್ಬಿನಾಲೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಹತ್ಯೆ ಮಾಡಲಾಗಿತ್ತು. ಈ ಬೆನ್ನಲ್ಲೇ ಪೀತೆ ಬೈಲ್, ಕಬ್ಬಿನಾಲೆ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಜೊತೆಗೆ ನಕ್ಸಲ್ ನಿಗ್ರಹ ಪಡೆಯಿಂದ ಕೋಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯ ಕಬ್ಬಿನಾಲೆ ಅರಣ್ಯ ವ್ಯಾಪ್ತಿಯಲ್ಲಿ ನಕ್ಸಲ್ ನಿಗ್ರಹ ಪಡೆ ನಡೆಸಿದಂತ ದಾಳಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಅವರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು. ಇನ್ನೂ ಐದಾರು ನಕ್ಸಲರು ಅರಣ್ಯದಲ್ಲಿ ಇರುವುದಾಗಿ ಹೇಳಲಾಗುತ್ತಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಐಜಿಪಿ ರೂಪಾ.ಡಿ ಅವರು ನಕ್ಸಲ್ ನಾಯಕ ವಿಕ್ರಂ ಗೌಡ ಅವರನ್ನು ಹತ್ಯೆ ಮಾಡಲಾಗಿದೆ. ಅವರ ವಿರುದ್ಧ 61 ಕೇಸ್ ಗಳಿದ್ದವು ಎಂದು ತಿಳಿಸಿದರು. ಕಾಡಿನಲ್ಲಿ ಇನ್ನೂ 5-6 ನಕ್ಸಲ್ ಇರುವುದಾಗಿ ಮಾಹಿತಿ ತಿಳಿದು ಬಂದಿದೆ. ಅವರಿಗೆ ಶರಣಾಗುವಂತೆ ಸೂಚಿಸಲಾಗಿದೆ. ಶರಣಾಗತಿಗೆ ಮೊದಲ ಆದ್ಯತೆ ನೀಡುತ್ತೇವೆ. ಇಲ್ಲದಿದ್ದರೇ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು. ನಕ್ಸಲ್ ನಿಗ್ರಹ ಪಡೆಯಿಂದ ಕಾರ್ಯಾಚರಣೆ ಮುಂದುವರೆದಿದೆ.…
ಬೆಂಗಳೂರು: ರಾಜ್ಯದಲ್ಲಿನ ಸಿಇಟಿ, ನೀಟ್ ಹಾಗೂ ಜೆಇಇ ಪರೀಕ್ಷೆ ಬರೆಯೋದಕ್ಕೆ ಸಿದ್ಧತೆ ನಡೆಸುತ್ತಿರುವಂತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ನಾಳೆ ಸಚಿವ ಮಧು ಬಂಗಾರಪ್ಪ ಉಚಿತ CET, NEET, JEE ತರಬೇತಿಗೆ ಚಾಲನೆ ನೀಡಲಿದ್ದಾರೆ. ಹೀಗಾಗಿ ಇನ್ಮುಂದೆ ರಾಜ್ಯ ಸರ್ಕಾರದಿಂದಲೇ ಫ್ರೀ ಕೋಚಿಂಗ್ ನೀಡಲಾಗುತ್ತದೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬಜೆಟ್ ಅಯವ್ಯಯ ಕಂಡಿಕೆ 101ರಲ್ಲಿ ಘೋಷಿಸಿರುವಂತೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ 25,000 ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಸಿಇಟಿ, ನೀಟ್, ಜೆಇಇ ಆನ್ ಲೈನ್ ತರಬೇತಿಯನ್ನು ಆರಂಭಿಸುತ್ತಿರುವುದಾಗಿ ತಿಳಿಸಿದ್ದಾರೆ. ದಿನಾಂಕ 20-11-2024ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಸಚಿವ ಮಧು ಎಸ್ ಬಂಗಾರಪ್ಪ ಅವರು ಈ ತರಬೇತಿಗೆ ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ. ಆ ಬಳಿಕ ರಾಜ್ಯದಲ್ಲಿನ 25,000 ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಉಚಿತವಾದಂತ ತರಬೇತಿಯನ್ನು ಸಿಇಟಿ, ನೀಟ್, ಜೆಇಇ ಪರೀಕ್ಷೆಗೆ ಆನ್ ಲೈನ್…
ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ. ಆ ಬಳಿಕ ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗುತ್ತದೆ. ಕೆಲವರ ಕಾರ್ಡ್ ಸಂಪೂರ್ಣ ರದ್ದಾಗಲಿದೆ ಎನ್ನಲಾಗುತ್ತಿತ್ತು. ಹೀಗಾಗಿ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುವ ಆತಂಕದಲ್ಲಿದ್ದವರಿಗೆ ಸರ್ಕಾರ ಮರುಸ್ಪಷ್ಟನೆ ಮೂಲಕ ಗುಡ್ ನ್ಯೂಸ್ ನೀಡಿದೆ. ಅದೇನು ಅಂತ ಮುಂದೆ ಓದಿ. ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರು, ಲವು ಕುಟುಂಬಗಳಲ್ಲಿ ಹಿಂದೆ ಬಿಪಿಎಲ್ ಕಾರ್ಡ್ ಹೊಂದಿದ್ದವರು ಉತ್ತಮ ಆದಾಯ ಗಳಿಸುವ ಉದ್ಯೋಗಗಳಿಗೆ ಸೇರಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಅಂಥವರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಿಸಲಾಗುತ್ತದೆ. ಇದೊಂದು ಸಹಜ ಪ್ರಕ್ರಿಯೆ ಎಂಬುದಾಗಿ ತಿಳಿಸಿದ್ದಾರೆ. ಯಾವುದೇ ಸರ್ಕಾರ ಇದ್ದರೂ, ಇದನ್ನೇ ಮಾಡಬೇಕಾಗುತ್ತದೆ. ನಮ್ಮ ಸರ್ಕಾರವು ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. https://twitter.com/KarnatakaVarthe/status/1858788409067925659 https://kannadanewsnow.com/kannada/breaking-%e0%b2%95%e0%b3%81%e0%b2%95%e0%b3%8d%e0%b2%95%e0%b3%86-%e0%b2%b8%e0%b3%81%e0%b2%ac%e0%b3%8d%e0%b2%b0%e0%b2%ae%e0%b2%a3%e0%b3%8d%e0%b2%af-breaking-cricketer-suryakumar-yadav-visits-kukke-subr/ https://kannadanewsnow.com/kannada/congress-has-kindergarten-system-too-narendra-swamy-on-ministerial-berth/
ಶಿವಮೊಗ್ಗ: ಜಿಲ್ಲೆಯ ಸಾಗರ ನಗರಸಭೆಯಲ್ಲಿ ಸೇಲ್ ಸರ್ಟಿಫಿಕೇಟ್ ಹಗರಣ ಇನ್ನೂ ಹಸಿಯಾಗೇ ಇದೆ. ಈ ನಡುವೆಯೂ ನಗರಸಭೆಯ ಕೋಟ್ಯಂತರ ಬೆಲೆ ಬಾಳುವ ಆಸ್ತಿಯೇ ಖಾಸಗಿ ಬಲಾಡ್ಯ ವ್ಯಕ್ತಿಯೊಬ್ಬರ ಪಾಲಾಗಿದೆ ಎನ್ನಲಾಗುತ್ತಿದೆ. ಇದರಲ್ಲಿ ನಗರಸಭೆಯ ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು, ಸದಸ್ಯರೂ ಪಾಲುದಾರರು ಎಂದೇ ಹೇಳಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಾಗರ ನಗರಸಭೆ ವ್ಯಾಪ್ತಿಯ 29ನೇ ವಾರ್ಡ್ ನಲ್ಲಿ ನಗರಸಭೆ ಖಾಲಿ ಜಾಗವಿತ್ತು. 2019ರಿಂದಲೂ ಈ ಜಾಗವನ್ನು ಅಂಗನವಾಡಿ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿ, ಬಳಕೆ ಮಾಡಲು ಅವಕಾಶ ಕೋರಿ ನಗರಸಭೆಯ ಸದಸ್ಯರು, ಸ್ಥಳೀಯ ನಿವಾಸಿಗಳು ಕೂಡ ನಗರಸಭೆಗೆ ಮನವಿ ಮಾಡಿದ್ದರು. ದಿನಾಂಕ 07-08-2021ರಂದು ಕೂಡ 29ನೇ ವಾರ್ಡ್ ನಲ್ಲಿನ ಸರ್ವೆ ನಂಬರ್.02ರ ಸರ್ಕಾರಿ ಜಾಗವನ್ನು ಸಮುದಾಯ ಭವನ ಹಾಗೂ ಅಂಗನವಾಡಿ ಕೇಂದ್ರ ನಿರ್ಮಿಸಿಕೊಡಲು 29ನೇ ವಾರ್ಡಿನ ಸಾರ್ವಜನಿಕರು ಸಾಗರ ನಗರಸಭೆ ಅಧ್ಯಕ್ಷರಾಗಿರುವ ಮಧುರ ಶಿವಾನಂದ ಅವರಿಗೆ ಪತ್ರದಲ್ಲಿ ಕೋರಿದ್ದರು. ಏನಿದೆ ಪತ್ರದಲ್ಲಿ.? ಸಾಗರ ನಗರಸಭೆ ವ್ಯಾಪ್ತಿಯ 29ನೇ ವಾರ್ಡಿನ ಸಾರ್ವಜನಿಕರಿಗೆ ಧಾರ್ಮಿಕ…
ಬೆಂಗಳೂರು: ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) 27ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆಯನ್ನು ನವೆಂಬರ್ 19 ರಿಂದ 21ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ʼಅನಿಯಮಿತʼ ಎಂಬ ಪರಿಕಲ್ಪನೆ ಅಡಿಯಲ್ಲಿ ಟೆಕ್ ಶೃಂಗಸಭೆ ಆಯೋಜಿಸಲಾಗಿದೆ. ಸ್ಟಾರ್ಟ್‌ಅಪ್‌ಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಜಾಗತಿಕ ಪಾಲುದಾರಿಕೆಗೆ ಆದ್ಯತೆ ನೀಡಲಾಗುತ್ತಿದೆ. ತಾಂತ್ರಿಕ ಉತ್ಕೃಷ್ಟತೆ, ನಾವೀನ್ಯತೆ ಮತ್ತು ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲೊದೆ. ನವೆಂಬರ್ 19 ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ ಎಂದು ಐಟಿ – ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. https://twitter.com/KarnatakaVarthe/status/1858494383403983028
ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಹಿರಿಯ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಕಾರಿನ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು ಸೋಮವಾರ ನಾಗ್ಪುರ ಜಿಲ್ಲೆಯ ಕಟೋಲ್-ಜಲಾಲ್ಖೇಡಾ ರಸ್ತೆಯಲ್ಲಿ ಕಲ್ಲುಗಳಿಂದ ದಾಳಿ ನಡೆಸಿದ ಪರಿಣಾಮ ಅವರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತಮ್ಮ ಪುತ್ರ ಸಲೀಲ್ ದೇಶ್ಮುಖ್ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದ ದೇಶ್ಮುಖ್ ಅವರು ನರ್ಖೇಡ್ನಲ್ಲಿ ಸಾರ್ವಜನಿಕ ಸಭೆಯಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. https://kannadanewsnow.com/kannada/we-are-not-snatching-anyones-rice-deputy-cm-dk-shivakumar-shivakumar/ https://kannadanewsnow.com/kannada/5-lakh-citizens-travelled-in-a-single-day-indian-aviation-creates-history/
ಬೆಂಗಳೂರು: “ನಾವು ಯಾರ ಅನ್ನವನ್ನು ಕಸಿಯುತ್ತಿಲ್ಲ, ಬಿಜೆಪಿಗೆ ರಾಜಕೀಯ ಮಾಡುವುದು ಬಿಟ್ಟು ಬೇರೇನು ಕೆಲಸ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸಂಬಂಧ ಸರ್ಕಾರ ಬಡವರ ಅನ್ನ ಕಸಿಯುತ್ತಿದೆ ಎಂಬ ಟೀಕೆ ಬಗ್ಗೆ ಕೇಳಿದಾಗ, “ಬಿಜೆಪಿಯವರಿಗೆ ಬೇರೇನು ಕೆಲಸವಿದೆ. ನಮ್ಮ ಕ್ಷೇತ್ರದಲ್ಲೂ ಶೇ 90 ರಷ್ಟು ಹಾಗೂ ಹೊಳೆನರಸೀಪುರದಲ್ಲಿ ಶೇ 92 ಬಿಪಿಎಲ್ ಕಾರ್ಡುದಾರರಿದ್ದಾರೆ. ಹೀಗಾಗಿ ಇವುಗಳನ್ನು ಪರಿಶೀಲನೆ ಮಾಡಬೇಕಲ್ಲವೇ. ನಿಜವಾದ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಕ್ಕಿದೆಯೇ ಇಲ್ಲವೇ ಎಂದು ನೋಡಬೇಕಾಗಿದೆ. ಕೆಲವು ಮಾನದಂಡಗಳ ಆಧಾರದ ಮೇಲೆ ಕೆಲವು ಬಿಪಿಎಲ್ ಕಾರ್ಡು ರದ್ದಾಗಿವೆ” ಎಂದರು. 1 ಸಾವಿರ ಕೋಟಿ ಎಲ್ಲಿಂದ ಬಂತು?: ಶಾಸಕರ ಖರೀದಿಗಾಗಿ 50 ಕೋಟಿಯಿಂದ 100 ಕೋಟಿವರೆಗೂ ಆಮಿಷ ನೀಡಲಾಗುತ್ತಿದೆ ಎಂಬ ವಿಚಾರದ ಬಗ್ಗೆ ಕೇಳಿದಾಗ, “ಬಿಜೆಪಿಯವರು ಮೊದಲು ಯತ್ನಾಳ್ ಅವರ 1000 ಕೋಟಿ ಬಗ್ಗೆ ಉತ್ತರ ನೀಡಲಿ. ಆ ಹಣ…
ಬೆಂಗಳೂರು: ಎಂ ಎ ಸ್ನಾತಕೋತ್ತರ ಪದವಿಯಲ್ಲಿ ಉಡುಪಿಯ ವಿಂಧ್ಯಾ ಆಚಾರ್ಯಳಿಗೆ ಪ್ರಥಮ ರ್ಯಾಂಕ್ ಸಹಿತ ಚಿನ್ನದ ಪದಕ ನೀಡಲಾಗಿದೆ. ಬೆಂಗಳೂರಿನ ಜೈನ್ ಡೀಮ್ಡ್ ವಿಶ್ವವಿದ್ಯಾಲಯದ ಘಟಿಕೋತ್ಸವವು ಬುಧವಾರ ನೆರವೇರಿತು. ಈ ಸಂದರ್ಭದಲ್ಲಿ ವಿವಿಯಲ್ಲಿ ಎಂಎ ಪರ್ಫಾಮಿಂಗ್ ಆರ್ಟ್ ( ನೃತ್ಯಶಾಸ್ತ್ರ) ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಉಡುಪಿಯ ಯುವ ನೃತ್ಯ ಪ್ರತಿಭೆ ಕುಮಾರಿ ವಿಂಧ್ಯಾ ಆಚಾರ್ಯ ಸ್ವರ್ಣ ಪದಕ ಸಹಿತ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು. ಇವರು ಕೆ.ವಿಷ್ಣುಮೂರ್ತಿ ಆಚಾರ್ಯ ಮತ್ತು ಸ್ನೇಹಾ ಆಚಾರ್ಯ ದಂಪತಿಯ ಸುಪುತ್ರಿ. ಭರತನಾಟ್ಯ ಹಾಗೂ ಯಕ್ಷಗಾನ ಕಲಾಪ್ರವೀಣೆಯಾಗಿದ್ದು, ಕಳೆದ ಕೆಲ ವರ್ಷಗಳಿಂದ ರಾಜ್ಯ, ದೇಶ ಮತ್ತು ವಿದೇಶಗಳ ನೂರಾರು ವೇದಿಕೆಗಳಲ್ಲಿ ತಮ್ಮ ನೃತ್ಯಕಲಾ ಪ್ರತಿಭೆಯಿಂದ ಚಿರಪರಿಚಿತಳಾಗಿದ್ದಾಳೆ. https://kannadanewsnow.com/kannada/bengaluru-power-outage-in-these-areas-on-november-20/ https://kannadanewsnow.com/kannada/5-lakh-citizens-travelled-in-a-single-day-indian-aviation-creates-history/
ಬೆಂಗಳೂರು: ದಿನಾಂಕ 20.11.2024 (ಬುಧವಾರ) ಬೆಳಿಗ್ಗೆ 10:00 ಗಂಟೆಯಿxದ ಮಧ್ಯಾಹ್ನ 03:00 ಗಂಟೆಯವರೆಗೆ 66/11ಕೆವಿ ಆಸ್ಟಿನ್ ಟೌನ್ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂಬುದಾಗಿ ಬೆಸ್ಕಾಂ ತಿಳಿಸಿದೆ. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು ಬ್ರೆಂಟನ್ ರಸ್ತೆ, ಶೋಭಾ ಪರ್ಲ್, ಐಸಿಐಸಿಐ ಬ್ಯಾಂಕ್, ರಾಯಭಾರ ಕಚೇರಿ ಎತ್ತರ, ಅಭರಣ ಆಭರಣಗಳು, ಹರ್ಬನ್ ಲೈಫ್, ಆರ್‌ಎಂಝಡ್, ಅಶೋಕ್ ನಗರ, ಗರುಡಮಾಲ್, ಏರ್ ಫೋರ್ಸ್ ಹಾಸ್ಪ್. ,ದೊಮ್ಮಲೂರು, ಆಸ್ಟಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ವಿಜಾಜ್ ಬ್ಯಾಂಕ್, ಹೋಟೆಲ್ ತಾಜ್, ವಿಕ್ಟೋರಿಯಾ ಲೇಔಟ್, ಮ್ಯೂಸಿಯಂ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಅಡ್ಡ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ವೈ.ಜಿ.ಪಾಳ್ಯ, ಕೆಎಸ್‌ಆರ್‌ಪಿ, ಐಟಿಸಿ ಹೋಟೆಲ್, ರಿಚ್ಮಂಡ್ ರಸ್ತೆ, ವನ್ನೆರ್ಪೇಟ್, ಲೈಫ್ ಸ್ಟೈಲ್, M.G. ರಸ್ತೆ, ಹೇಯ್ಸ್ ರಸ್ತೆ, ಕಾನ್ವೆಂಟ್ ರಸ್ತೆ, S.L. ಅಪಾರ್ಟ್‌ಮೆಂಟ್, ರಿಚ್ಮಂಡ್ ಟೌನ್, ನಜಪ್ಪ ವೃತ್ತ, ಸ್ಟೇನ್ ಗಾರ್ಡನ್, ರಿಚ್‌ಮಂಡ್…