Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ವಿಮಾನಗಳ ಹಾರಾಟ ರದ್ದು ಹಿನ್ನಲೆಯಲ್ಲಿ ಟಿಕೆಟ್ ದರವನ್ನು ಏರ್ ಲೈನ್ಸ್ ಕಂಪನಿಗಳು ಹೆಚ್ಚಳ ಮಾಡಿದ್ದವು. ಇವುಗಳಿಗೆ ಶಾಕ್ ಎನ್ನುವಂತೆ ಎಲ್ಲಾ ಐರ್ ಲೈನ್ಸ್ ಗಳಿಗೆ ಏಕರೂಪದ ದರವನ್ನು ನಿಗದಿಗೊಳಿಸಿ ವಿಮಾನಯಾನ ಸಚಿವಾಲಯ ಆದೇಶಿಸಿದೆ. ಹೌದು ವಿಮಾನಗಳ ಹಾರಾಟ ರದ್ದು ಹಿನ್ನಲೆಯಲ್ಲಿ ಟಿಕೆಟ್ ದರ ಹೆಚ್ಚಳ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿರೋ ಏರ್ ಲೈನ್ಸ್ ಗಳಿಗೆ ವಿಮಾನಯಾನ ಸಚಿವಾಲಯ ಶಾಕ್ ನೀಡಿದೆ. ಏಕರೂಪದ ದರ ನಿಗದಿಗೊಳಿಸಿ ವಿಮಾನಯಾನ ಸಚಿವಾಲಯ ಆದೇಶ ಮಾಡಿದೆ. ಎಲ್ಲಾ ಏರ್ ಲೈನ್ಸ್ ಗಳಿಗೆ ಅನ್ವಯವಾಗುವಂತೆ ಏಕರೂಪದ ದರವನ್ನು ನಿಗದಿಗೊಳಿಸಲಾಗಿದೆ. ಹೀಗಾಗಿ ವಿಮಾನ ರದ್ದುಗೊಂಡು, ಟಿಕೆಟ್ ದರ ಏರಿಕೆಯ ಶಾಕ್ ನಲ್ಲಿ ಇದ್ದಂತ ಪ್ರಯಾಣಿಕರಿಗೆ ವಿಮಾನಯಾನ ಸಚಿವಾಲಯವು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. https://kannadanewsnow.com/kannada/i-will-not-be-a-minister-in-dk-shivakumars-cabinet-if-he-becomes-cm-former-minister-kn-rajanna/ https://kannadanewsnow.com/kannada/breaking-no-need-to-answer-calls-and-emails-after-work-new-bill-introduced-in-parliament/
ತುಮಕೂರು: ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ, ನನಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದಾದರೇ ಬೇಡವೇ ಬೇಡ ಎಂಬುದಾಗಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಭಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿಕೆ ಸಂಪುಟದಲ್ಲಿ ನನಗೆ ಸ್ಥಾನ ಕೊಟ್ಟರೇ ಬೇಡವೇ ಬೇಡ. ನನಗೆ ಸಚಿವ ಸ್ಥಾನ ಬೇಡ ಮತ್ತೊಬ್ಬರಿಗೆ ಅವಕಾಶ ಕೊಡಲಿ. ಹಾಗಂತ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆಂದು ಹೇಳುತ್ತಿಲ್ಲ. ಅದೇನು ಸಿಎಂ ಆಗೇ ಬಿಡುತ್ತಾರೆ ಅಂದುಕೊಂಡಿದ್ದೀರಾ? ಎಂಬುದಾಗಿ ಹೇಳಿದ್ದಾರೆ. ರಾಜಣ್ಣಗೆ ಮತ್ತೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರ ಬೇಡಿಕೆ ವಿಚಾರವಾಗಿ ಮಾತನಾಡಿ, ಯಾರು ನನ್ನ ಪರವಾಗಿ ಹೋರಾಟ ಮಾಡ್ತಿದ್ದಾರೋ ಅವರಿಗೆ ಚಿರಋಣಿ. ನನಗೆ ಅಧಿಕಾರದ ದಾಹ ಇಲ್ಲ ಎಂಬುದಾಗಿ ತಿಳಿಸಿದರು. ನಾನು ಮೊದಲೇ ಹೇಳಿದ್ದೇನೆ ಡಿ.ಕೆ ಶಿವಕುಮಾರ್ ಸಿಎಂ ಆದ್ರೆ ಅವರ ಸಂಪುಟದಲ್ಲಿ ಸಚಿವ ಆಗೋಲ್ಲ. ಮತ್ತೆ ಅದನ್ನೇ ಹೇಳ್ತೀನಿ. ನನ್ನ ಪರ ಅಭಿಪ್ರಾಯ, ವಿಶ್ವಾಸ ವ್ಯಕ್ತಪಡಿಸಿದವರಿಗೆ ಅಭಾರಿಯಾಗಿರುವೆ. ನಾನು ಯಾವತ್ತೂ ಅಧಿಕಾರ ಹುಡುಕಿಕೊಂಡು ಹೋದವನಲ್ಲ. ಅಧಿಕಾರ…
ಬೆಂಗಳೂರು: ರಾಜ್ಯದಲ್ಲಿ ಅಪರಾಧ ಕೃತ್ಯಗಳಲ್ಲಿ ಪೊಲೀಸರೇ ಭಾಗಿಯಾಗಿ, ಇಲಾಖೆಗೆ ಕೆಟ್ಟ ಹೆಸರು ತರುವಂತ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ಇವುಗಳನ್ನು ನಿಯಂತ್ರಿಸಲು ಖಡಕ್ ಆದೇಶವನ್ನು ಡಿಜಿ ಮತ್ತು ಐಜಿಪಿ ಸಲೀಂ ಮಾಡಿದ್ದಾರೆ. ಅದರಂತೆ ಇನ್ಮುಂದೆ ರಾಜ್ಯದಲ್ಲಿ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಬಿದ್ರೆ, ಕಾನೂನು ಕ್ರಮ ಫಿಕ್ಸ್ ಆದಂತೆ ಆಗಿದೆ. ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾ ನಿರೀಕ್ಷಕರಾದಂತ ಡಾ.ಎಂ.ಎ ಸಲೀಂ ಅವರು ಆದೇಶ ಹೊರಡಿಸಿದ್ದು, ಇತ್ತೀಚೆಗೆ ಕೆಲವು ದರೋಡೆ, ಕಳ್ಳತನ ಮತ್ತು ವಂಚನೆ ಕೃತ್ಯಗಳಲ್ಲಿ ಕೆಲವು ಪೊಲೀಸ್ ಸಿಬ್ಬಂದಿಯವರುಗಳ ಹೆಸರುಗಳು ತಳಕು ಹಾಕಿಕೊಂಡಿರುವುದು ತೀರಾ ಕಳವಳಕಾರಿ ಬೆಳವಣಿಗೆಯಾಗಿದೆ. ಇಂತಹ ಪ್ರವೃತ್ತಿಗಳು ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆಯಾಗುವುದರೊಂದಿಗೆ ಇಲಾಖೆಯನ್ನು ಅಪಕೀರ್ತಿಗೆ ಗುರಿ ಮಾಡುತ್ತವೆ ಎಂಬುದಾಗಿ ಹೇಳಿದ್ದಾರೆ. ಈ ರೀತಿಯ ದುಷ್ಕೃತ್ಯಗಳು ಸಾರ್ವಜನಿಕರಿಗೆ ಪೊಲೀಸರ ಮೇಲಿನ ನಂಬಿಕೆಯನ್ನು ಕುಂದಿಸುವುದಲ್ಲದೆ, ಕಾನೂನು ಜಾರಿಯ ಸಂಪೂರ್ಣ ವ್ಯವಸ್ಥೆಯ ಮೂಲ ಸಿದ್ಧಾಂತಗಳನ್ನೇ ಸಂಶಯಾಸ್ಪದವಾಗಿ ನೋಡುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಇಂತಹ ಘಟನೆಗಳನ್ನು ಸಮರ್ಥವಾಗಿ ತಡೆಗಟ್ಟಿ, ಹೊಣೆಗಾರಿಕೆಯನ್ನು…
ಬೆಂಗಳೂರು: ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯನ್ನು ರಾಜ್ಯದ ಅನುದಾನಿತ ಶಾಲೆಗಳ ಶಿಕ್ಷಕರು, ಸಿಬ್ಬಂದಿಗಳೂ ವಿಸ್ತರಿಸುವಂತೆ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಮನವಿ ಮಾಡಿದ್ದಾರೆ. ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿರುವಂತ ಅವರು, ರಾಜ್ಯದ ಸರ್ಕಾರಿ ನೌಕರರು, ಅವರ ಅವಲಂಬಿತರ ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡಲು ಕರ್ನಾಟಕ ಆರೋಗ್ಯ ಸಂಜೀವನಿ ಯೋಜನೆಯನ್ನು ಜಾರಿಗೊಳಿಸಿರೋದಕ್ಕೆ ನೌಕರರ ಸಂಘದ ಪರವಾಗಿ ಧನ್ಯವಾದವನ್ನು ಸಲ್ಲಿಸಿದ್ದಾರೆ. ರಾಜ್ಯಾಧ್ಯಂತ ಇರುವಂತ ಅನುದಾನಿತ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಂತ ಶಿಕ್ಷಕರು, ಲಿಪಿಕ ವೃಂದದ ಸಿಬ್ಬಂದಿಗಳು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ವಿಸ್ತರಿಸುವಂತೆ ತಮ್ಮಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರು ಮನವಿ ಮಾಡಿಕೊಂಡಿರೋದಾಗಿ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ…
ನವದೆಹಲಿ: ಇಂಡಿಗೋ ವಿಮಾನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿ ಸಾವಿರಾರು ಪ್ರಯಾಣಿಕರು ಪರದಾಡುತ್ತಿರುವುದರಿಂದ, ನಾಗರಿಕ ವಿಮಾನಯಾನ ಸಚಿವಾಲಯವು ಶನಿವಾರ ವಿಮಾನಯಾನ ಸಂಸ್ಥೆಗೆ ನಿರ್ದೇಶನ ನೀಡಿದ್ದು, ರದ್ದಾದ ವಿಮಾನಗಳ ಟಿಕೆಟ್ ಮರುಪಾವತಿ ಪ್ರಕ್ರಿಯೆಯನ್ನು ಭಾನುವಾರ ಸಂಜೆಯೊಳಗೆ ಪೂರ್ಣಗೊಳಿಸಬೇಕು ಮತ್ತು ಪ್ರಯಾಣಿಕರಿಂದ ಬೇರ್ಪಟ್ಟ ಸಾಮಾನುಗಳನ್ನು ಮುಂದಿನ ಎರಡು ದಿನಗಳಲ್ಲಿ ತಲುಪಿಸುವಂತೆ ನೋಡಿಕೊಳ್ಳಬೇಕು. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಶನಿವಾರ 1,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿ ಐದನೇ ದಿನಕ್ಕೆ ಅಡ್ಡಿಪಡಿಸಿದ ಒಂದು ದಿನದ ನಂತರ, ಮರುಪಾವತಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ ಅಥವಾ ಅನುಸರಣೆಯ ಕೊರತೆಯು ತಕ್ಷಣದ ನಿಯಂತ್ರಕ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ರದ್ದಾದ ಅಥವಾ ಅಡ್ಡಿಪಡಿಸಿದ ಎಲ್ಲಾ ವಿಮಾನಗಳಿಗೆ ಮರುಪಾವತಿ ಪ್ರಕ್ರಿಯೆಯನ್ನು ಭಾನುವಾರ ರಾತ್ರಿ 8 ಗಂಟೆಯೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. “ರದ್ದತಿಯಿಂದ ಪ್ರಯಾಣ ಯೋಜನೆಗಳು ಪರಿಣಾಮ ಬೀರಿದ ಪ್ರಯಾಣಿಕರಿಗೆ ಯಾವುದೇ ಮರುಹೊಂದಿಸುವ ಶುಲ್ಕವನ್ನು ವಿಧಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ” ಎಂದು ಅದು ಹೇಳಿದೆ. ಶನಿವಾರ, ವಿವಿಧ ವಿಮಾನ…
ಮೈಸೂರು: ಕ್ರಿಸ್ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ರೈಲ್ವೆ ಮಂಡಳಿ ಮೈಸೂರು–ಟ್ಯುಟಿಕೊರಿನ್ ನಡುವೆ ಎರಡು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಓಡಿಸಲಿದೆ. ರೈಲು ಸಂಖ್ಯೆ 06283: ಮೈಸೂರು–ಟ್ಯುಟಿಕೊರಿನ್ ವಿಶೇಷ ಎಕ್ಸ್ಪ್ರೆಸ್ ಈ ರೈಲು 2025ರ ಡಿಸೆಂಬರ್ 23 ಮತ್ತು 27ರಂದು (ಮಂಗಳವಾರ ಮತ್ತು ಶನಿವಾರ) ಸಂಜೆ 18:35ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಬೆಳಗ್ಗೆ 11:00ಕ್ಕೆ ಟ್ಯುಟಿಕೊರಿನ್ ತಲುಪಲಿದೆ. ಮರಳಿ ಸಂಚರಿಸುವ ರೈಲು ಸಂಖ್ಯೆ 06284: ಟ್ಯುಟಿಕೊರಿನ್–ಮೈಸೂರು ವಿಶೇಷ ಎಕ್ಸ್ಪ್ರೆಸ್ 2025ರ ಡಿಸೆಂಬರ್ 24 ಮತ್ತು 28ರಂದು (ಬುಧವಾರ ಮತ್ತು ಭಾನುವಾರ) ಮಧ್ಯಾಹ್ನ 14:00ಕ್ಕೆ ಟ್ಯುಟಿಕೊರಿನ್ ನಿಂದ ಹೊರಟು, ಮರುದಿನ ಬೆಳಗ್ಗೆ 07:45ಕ್ಕೆ ಮೈಸೂರು ತಲುಪಲಿದೆ. ಮಾರ್ಗಮಧ್ಯೆ ಈ ವಿಶೇಷ ರೈಲು ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಂ, ಕೆಂಗೇರಿ, ಕೆ.ಎಸ್.ಆರ್. ಬೆಂಗಳೂರು, ಬೆಂಗಳೂರು ಕ್ಯಾಂಟ್, ಹೊಸೂರು, ಧರ್ಮಪುರಿ, ಸೇಲಂ, ನಮಕ್ಕಲ್, ಕರೂರು, ದಿಂಡಿಗಲ್, ಮಧುರೈ, ವಿರುದುನಗರ, ಸತೂರ್, ಕೋವಿಲ್ಪಟ್ಟಿ ಮತ್ತು ಟುಟಿಮೇಲುರ್ ಸ್ಟೇಷನ್ಗಳಲ್ಲಿ ನಿಲುಗಡೆಗೊಳ್ಳಲಿದೆ. ಈ ವಿಶೇಷ ರೈಲು…
ಮಂಡ್ಯ: ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಕಳೆದ ಒಂದು ವರ್ಷದಿಂದ ಕೈಗಾರಿಕೆ ಸ್ಥಾಪನೆಗೆ ಜಾಗ ಹುಡುಕಲು ಜಿಲ್ಲಾಧಿಕಾರಿಗೆ ಹೇಳುತ್ತಿದ್ದೇನೆ. ಇನ್ನೂ ಜಾಗ ಸಿಕ್ಕಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ಇಲ್ಲಿನ ವಿಸಿ ಫಾರಂನಲ್ಲಿ ನಡೆಯುತ್ತರಿರುವ ಕೃಷಿ ಮೇಳದಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಕೇಂದ್ರ ಸಚಿವರು; ಕುಮಾರಣ್ಣ ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ. ಜಿಲ್ಲೆಗೆ ಏನಾದರೂ ಕೈಗಾರಿಕೆ ತರಬಹುದು ಎಂಬ ನಿರೀಕ್ಷೆ ಜನರಲ್ಲಿದೆ. ಕನಿಷ್ಠ ಒಂದು ಕಾರ್ಖಾನೆಯನ್ನಾದರು ಮಂಡ್ಯಕ್ಕೆ ತರಲು ಒಂದು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಇನ್ನೂ ಸರಕಾರ ನಮಗೆ ಜಾಗ ನೀಡಿಲ್ಲ ಎಂದರು. ರಾಜ್ಯದಲ್ಲಿ ನನ್ನ ಇಲಾಖೆ ಯಿಂದ ಸಾಧ್ಯವಾಗುವ ಕೆಲಸಗಳನ್ನು ಮಾಡುತ್ತಿದ್ದೇನೆ. ಭದ್ರಾವತಿಯಲ್ಲರಿವ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಪುನಶ್ಚೇತನಕ್ಕೆ ಚಿಂತನೆ ನಡೆಸಲಾಗಿದೆ. ಇತ್ತೀಚೆಗೆ ನಾನು ಆ ಕಾರ್ಖಾನೆಗೆ ಎರಡನೇ ಸಲ ಭೇಟಿ ನೀಡಿದ್ದೆ ಎಂದು ಕೇಂದ್ರ ಸಚಿವರು ಹೇಳಿದರು. ಕೃಷಿ ಮೇಳ…
ಬೆಂಗಳೂರು: “ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ. ಆ ಮೂಲಕ ನಮಗೆ ಕಿರುಕುಳ ನೀಡಲಾಗುತ್ತಿದೆ. ಇದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಇಡಿ ಸಮನ್ಸ್ ನೀಡಿರುವ ಬಗ್ಗೆ ಕೇಳಿದಾಗ, “ನಾವು ಮೊದಲಿನಿಂದಲೂ ತನಿಖೆಗೆ ಸಹಕರಿಸುತ್ತಲೇ ಬಂದಿದ್ದೇವೆ. ಇಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಇಷ್ಟೆಲ್ಲಾ ಆದರೂ ಇ.ಡಿ. ಚಾರ್ಜ್ ಶೀಟ್ ಹಾಕಿರೋದು ಏಕೆ ಎಂಬುದೇ ಗೊತ್ತಿಲ್ಲ. ಇದರಲ್ಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ. ನಾವು ಕಾನೂನಾತ್ಮಕವಾಗಿ ನ್ಯಾಯಲಯದಲ್ಲಿ ಹೋರಾಟ ಮಾಡುತ್ತೇವೆ” ಎಂದರು. ಡಿ.19 ರ ಒಳಗೆ ಪೊಲೀಸರಿಗೆ ಮಾಹಿತಿ ನೀಡಬೇಕು “ನನಗೆ ಹಾಗೂ ನನ್ನ ತಮ್ಮ ಡಿ.ಕೆ.ಸುರೇಶ್ ಗೆ ಇಡಿ ಸಮನ್ಸ್ ನೀಡಿದೆ. ಈಗಾಗಲೇ ನಾವು ಇದಕ್ಕೆ ಹಿಂದೆಯೇ ಉತ್ತರ ಕೊಟ್ಟಿದ್ದೆವು. ಆದರೂ ನಮಗೆ ಸಮನ್ಸ್ ನೀಡಿರುವುದು ಆಘಾತಕಾರಿ. ದೆಹಲಿ ಪೊಲೀಸರು ಡಿಸೆಂಬರ್ 19 ನೇ ತಾರೀಕಿನ…
ಶಿವಮೊಗ್ಗ: ಜಿಲ್ಲೆಯ ಸಾಗರದ ತಾಲ್ಲೂಕಿನ ಮಡಸೂರು ಬಳಿಯಲ್ಲಿ ಕಳೆದ ಐದು ದಿನಗಳಿಂದ ಪತ್ತೆಯಾಗದ ಎರಡು ಆಸೆಗಳು ಡ್ರೋನ್ ಕ್ಯಾಮರಾ ಹದ್ದಿನ ಕಣ್ಣಿನಲ್ಲಿ ಪತ್ತೆಯಾಗಿವೆ. ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಆನೆಗಳು ಇಂದಿನ ಥರ್ಮಲ್ ಸ್ಕ್ಯಾನ್ ಡ್ರೋನ್ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿವೆ. ಇದೀಗ ರಸ್ತೆ ಸಂಚಾರ ಬಂದ್ ಮಾಡಿ ಶೆಟ್ಟಿಹಳ್ಳಿ ಕಡೆಗೆ ಓಡಿಸೋದಕ್ಕ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಸಾರ್ವಜನಿಕರಲ್ಲಿ ಈ ಮನವಿ ಮಾಡಿದ ಡಿಎಫ್ಓ ಮೋಹನ್ ಕುಮಾರ್ ಈ ಕುರಿತು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಸಾಗರ-ಸೊರಬ ಡಿಎಫ್ಓ ಮೋಹನ್ ಕುಮಾರ್ ಅವರು, ಸಾಗರ ತಾಲೂಕಿನ ಮಡಸೂರು ಬಳಿಯ ಕಾಡಿನಲ್ಲಿ ಗಂಡು ಹಾಗೂ ಹೆಣ್ಣು ಆನೆಗಳು ಪತ್ತೆ ಆಗಿದ್ದಾವೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಕೃಷಿ ಕೆಲಸದಲ್ಲಿ ತೊಡಗಿದ್ದರೇ ಆನೆ ಕಾಣಿಸಿಕೊಂಡಿರುವ ವ್ಯಾಪ್ತಿಯಿಂದ ದೂರ ತೆರಳಬೇಕು. ರಾತ್ರಿ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ. ಇಂದಿನ ಥರ್ಮಲ್ ಡ್ರೋನ್ ಸ್ಕ್ಯಾನ್ ಕಾರ್ಯಾಚರಣೆ ಸಾಗರ-ಸೊರಬ ಡಿಎಫ್ಓ…
ಶಿವಮೊಗ್ಗ: ಜಿಲ್ಲೆಯಲ್ಲಿ ತಾಯಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಮಗನೂ ಆತ್ಮಹತ್ಯೆಗೆ ಶರಣಾಗಿರುವಂತ ಧಾರುಣ ಘಟನೆಯೊಂದು ನಡೆದಿದೆ. ಶಿವಮೊಗ್ಗದ ಅಶ್ವತ್ಥ್ ಬಡಾವಣೆಯ ಮನೆಯಲ್ಲಿ ತಾಯಿ-ಮಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಜಯಶ್ರೀ(57) ಹಾಗೂ ಪುತ್ರ ಆಕಾಶ್(32) ಆತ್ಮಹತ್ಯೆಗೆ ಶರಣಾದಂತವರಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ಮೊದಲಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಆತ್ಮಹತ್ಯೆಗೆ ಶರಣಾಗಿದ್ದು ನೋಡಿ ಮಗನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೂರು ವರ್ಷದ ಹಿಂದೆ ಮೊದಲ ಪತ್ನಿ ನವ್ಯಾ ಆತ್ಮಹತ್ಯೆಗೆ ಶರಣಾಗಿದ್ದರು. 6 ತಿಂಗಳ ಹಿಂದೆಯಷ್ಟೇ 2ನೇ ಮದುವೆಯನ್ನು ಆಕಾಶ್ ಆಗಿದ್ದರು. 2ನೇ ಹೆಂಡತಿ ಮನೆಯಲ್ಲಿದ್ದಾಗ ತಾಯಿ, ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ.














