Author: kannadanewsnow09

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (Directors General of Military Operations -DGMOs) ಮೇ 10 ರಂದು ಮಾಡಿಕೊಂಡ ತಿಳುವಳಿಕೆಯ ನಂತರ, ಗಡಿಯಲ್ಲಿ ಜಾಗರೂಕತೆಯ ಮಟ್ಟವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ವಿಶ್ವಾಸ ವೃದ್ಧಿ ಕ್ರಮಗಳನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ಗುರುವಾರ ತಿಳಿಸಿದೆ. ಭಾರತೀಯ ಸೇನೆಯು ಗುರುವಾರ ಹೊರಡಿಸಿದ ಸಂವಹನದಲ್ಲಿ ಈ ನಿರ್ಧಾರವನ್ನು ತಿಳಿಸಲಾಗಿದೆ.  ಪರಿಸ್ಥಿತಿ ಮತ್ತಷ್ಟು ಬೆಳೆದಂತೆ, ನಾವು ನಿಮಗೆ ತಿಳಿಸುತ್ತೇವೆ” ಎಂದು ಟಿಪ್ಪಣಿ ಸೇರಿಸಲಾಗಿದೆ. ಮೇ 10, 2025 ರಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಆದ ತಿಳುವಳಿಕೆಯ ಜೊತೆಗೆ, ಜಾಗರೂಕತೆಯ ಮಟ್ಟವನ್ನು ಕಡಿಮೆ ಮಾಡಲು ವಿಶ್ವಾಸ ವೃದ್ಧಿ ಕ್ರಮಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಭಾರತೀಯ ಸೇನೆ ತಿಳಿಸಿದೆ. https://twitter.com/ANI/status/1923029377203241352 https://kannadanewsnow.com/kannada/on-may-17-2023-ipl-match-in-bangalore-extension-of-our-metro-service-until-midnight/ https://kannadanewsnow.com/kannada/big-news-attention-to-the-rural-people-of-the-state-all-these-services-of-the-gram-panchayat-will-be-available-on-whatsapp-watch-video/ https://kannadanewsnow.com/kannada/great-news-for-guest-teachers-and-lecturers-in-state-government-schools-and-colleges-increase-in-honorarium/

Read More

ಬೆಂಗಳೂರು: ಮೇ.17, 23ರಂದು ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ ನಿಗದಿಯಾಗಿದೆ. ಈ ಪಂದ್ಯಾವಳಿ ವೀಕ್ಷಣೆಗೆ ತೆರಳುವಂತ ವೀಕ್ಷಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಮಧ್ಯರಾತ್ರಿಯವರೆಗೆ ವಿಸ್ತರಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2025 ಪಂದ್ಯಗಳಿಗೆ ಮೆಟ್ರೋ ಸೇವೆ ವಿಸ್ತರಣೆ TATA IPL T-20 ಕ್ರಿಕೆಟ್ ಪಂದ್ಯಗಳು ದಿನಾಂಕ 17 ಮತ್ತು 23ನೇ ಮೇ, 2025 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಸದರಿ ದಿನಗಳಲ್ಲಿ ನಮ್ಮ ಮೆಟ್ರೋ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಯನ್ನು ಮಧ್ಯರಾತ್ರಿ 01.00ರ ವರೆಗೆ ವಿಸ್ತರಿಸಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 01.35 ಕ್ಕೆ ಹೊರಡಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಿದೆ. https://twitter.com/officialbmrcl/status/1923013575339085964 https://kannadanewsnow.com/kannada/apple-to-boost-iphone-production-in-india-despite-trumps-objections-sources/ https://kannadanewsnow.com/kannada/big-news-attention-to-the-rural-people-of-the-state-all-these-services-of-the-gram-panchayat-will-be-available-on-whatsapp-watch-video/

Read More

ನವದೆಹಲಿ: ಭಾರತದಲ್ಲಿನ ತನ್ನ ಹೂಡಿಕೆ ಯೋಜನೆಗಳು ಬದಲಾಗಿಲ್ಲ ಎಂದು ಆಪಲ್ ದೃಢಪಡಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪಲ್ ಸಿಇಒ ಟಿಮ್ ಕುಕ್ ಅವರನ್ನು ಭಾರತದಲ್ಲಿ ಉತ್ಪಾದನೆಯನ್ನು ಕಡಿಮೆ ಮಾಡಿ ಅಮೆರಿಕದಲ್ಲಿ ಹೆಚ್ಚಿಸುವಂತೆ ಇತ್ತೀಚೆಗೆ ಒತ್ತಾಯಿಸಿದ್ದರು. ಇದರ ನಡುವೆ ಭಾರತದಲ್ಲಿ ಐಪೋನ್ ಉತ್ಪಾದನೆ ಹೆಚ್ಚಿಸಲು ಆಪಲ್ ಮುಂದಾಗಿರುವುದಾಗಿ ವರದಿಯಿಂದ ತಿಳಿದು ಬಂದಿದೆ. ಟ್ರಂಪ್ ಹೇಳಿಕೆಗಳ ನಂತರ ಆಪಲ್ ಕಾರ್ಯನಿರ್ವಾಹಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಲು ತ್ವರಿತವಾಗಿ ನಿರ್ಧರಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ. ಭಾರತದಲ್ಲಿ ಉತ್ಪಾದನೆಯನ್ನು ವಿಸ್ತರಿಸುವುದನ್ನು ಮುಂದುವರಿಸಲು ಯೋಜಿಸಲಾಗಿದೆ ಎಂದು ಕಂಪನಿಯು ಒತ್ತಿ ಹೇಳಿದೆ. ಇದು ಈಗಾಗಲೇ ಆಪಲ್ ಉತ್ಪನ್ನಗಳಿಗೆ, ವಿಶೇಷವಾಗಿ ಐಫೋನ್‌ಗಳಿಗೆ ಪ್ರಮುಖ ಉತ್ಪಾದನಾ ಕೇಂದ್ರವಾಗುತ್ತಿದೆ. ಪ್ರಸ್ತುತ, ಆಪಲ್‌ನ ಜಾಗತಿಕ ಐಫೋನ್ ಉತ್ಪಾದನೆಯ ಶೇಕಡಾ 15 ರಷ್ಟು ಭಾರತದಲ್ಲಿ ತಯಾರಾಗುತ್ತಿದೆ. ಫಾಕ್ಸ್‌ಕಾನ್, ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಪೆಗಾಟ್ರಾನ್ ಇಂಡಿಯಾದಂತಹ ಪ್ರಮುಖ ಆಪಲ್ ಪೂರೈಕೆದಾರರು ಐಫೋನ್‌ಗಳನ್ನು ಜೋಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಫಾಕ್ಸ್‌ಕಾನ್ ತೆಲಂಗಾಣದಲ್ಲಿ ರಫ್ತು ಮಾಡಲು ಏರ್‌ಪಾಡ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿದೆ.…

Read More

ಸ್ವಂತ ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಜೀವನದ ಕನಸು ಆಗಿರುತ್ತದೆ. ಅನೇಕ ಜನರು ಅನೇಕ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಿದರೂ ಸಹ ಮನೆ ಕಟ್ಟಿಸುವ ಕನಸು ಮಾತ್ರ ಕನಸಾಗಿಯೇ ಇರುತ್ತದೆ. ಕೆಲವರ ಬಳಿ ಎಷ್ಟೇ ಹಣ ಇದ್ದರೂ ಕೂಡಾ ಅವರು ತಮಗೆ ಇಷ್ಟ ಬಂದ ಹಾಗೇ ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಆಗದೇ ಒದ್ದಾಡುತ್ತಾ ಇರುತ್ತಾರೆ. ಈ ಸಮಸ್ಯೆಯ ಪರಿಹಾರಕ್ಕಾಗಿಯೇ ಇಲ್ಲಿ ಇಂದು ದೇವಾಲಯವಿದೇ. ಇಲ್ಲಿ ನೆಲೆಸಿರುವ ದೇವರು ಸ್ವಂತ ಮನೆ ಕಟ್ಟಿಸುವ ಕನಸನ್ನು ನನಸು ಮಾಡುವರು ಎನ್ನುವುದು ಕೆಲವರ ಅಚಲ ನಂಬಿಕೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ಸಿಂಗದೂರು ಚೌಡಮ್ಮನವರ ಉಪಾಸಕರು ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ…

Read More

ಬೆಂಗಳೂರು: ನಗರದ ಜನರು ವಿದ್ಯುತ್, ನೀರಿನ ಸಂಪರ್ಕ ಪಡೆಯೋದಕ್ಕೆ, ಬಿಬಿಎಂಪಿ ನೀಡುವಂತ ಈ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಸ್ಕಾಂಗೆ ವಿದ್ಯುತ್ ಸಂಪರ್ಕ ಕೋರಿ ಸುಮಾರು 66,400 ಸಂಪರ್ಕಗಳಿಗಾಗಿ ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ಮಾಹಿತಿ ಇರುತ್ತದೆ. ಘನ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:14605/2024 (WC ಸಂಖ್ಯೆ:46342/2013 ರ ಪ್ರಕರಣದಲ್ಲಿ) ದಿನಾಂಕ:17-12-2024 ರಂದು ನೀಡಿರುವ ಆದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರ ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, ನೀರು ಸರಬರಾಜು / ಒಳಚರಂಡಿ ಸಂಪರ್ಕ ನೀಡುವಂತೆ ಆದೇಶಿಸಲಾಗಿದೆ. ಘನ ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕೋರಿರುವ ಕಟ್ಟಡಗಳಿಗೆ ಬಿಬಿಎಂಪಿ ಯಿಂದ ‘ಎ’ ಖಾತಾ ಅಥವಾ ‘ಬಿ’ ಖಾತಾ ಪಡೆಯಲಾಗಿರುವ ಬಗ್ಗೆ, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿರುವ ಬಗ್ಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿರುವ /…

Read More

ಟರ್ಕಿ: ಗುರುವಾರ ಸಂಜೆ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಟರ್ಕಿಯ ಸೆಂಟ್ರಲ್ ಅನಾಟೋಲಿಯಾ ಪ್ರದೇಶದ ಕೊನ್ಯಾ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. https://twitter.com/ivan_8848/status/1923015534825595155 ಝೆಲೆನ್ಸ್ಕಿ ಭೇಟಿಯ ಸಮಯದಲ್ಲಿ ಅಂಕಾರಾ ಬಳಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಟರ್ಕಿಯ ಕೊನ್ಯಾದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ – ಝೆಲೆನ್ಸ್ಕಿ ಪ್ರಸ್ತುತ ಇರುವ ಅಂಕಾರಾದಲ್ಲಿ ಕಂಪನದ ಅನುಭವವಾಗಿದೆ. ಯಾವುದೇ ಹಾನಿ ಅಥವಾ ಸಾವುನೋವುಗಳ ವರದಿಯಾಗಿಲ್ಲ.

Read More

ಕೆಎನ್ಎನ್ ಸ್ಪೋರ್ಟ್ ಡೆಸ್ಕ್: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಟೀಮ್ ಇಂಡಿಯಾ (ಸೀನಿಯರ್ ಮಹಿಳಾ) ತಂಡಗಳನ್ನು ಬಿಸಿಸಿಐ ಪ್ರಕಟಿಸಲಾಗಿದೆ. ಈ ಬಗ್ಗೆ ಎಕ್ಸ್ ನಲ್ಲಿ ಬಿಸಿಸಿಐ ವುಮೆನ್ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಮುಂಬರುವಂತ ಇಂಗ್ಲೆಂಡ್ ವಿರುದ್ಜದದ ಟಿ20ಐ ಒನ್ ಡೇ ಕ್ರಿಕೆಟ್ ಪಂದ್ಯಾವಳಿಗೆ ತಂಡವನ್ನು ಪ್ರಕಟಿಸಿರುವುದಾಗಿ ತಿಳಿಸಿದೆ. https://twitter.com/BCCIWomen/status/1923001111452975106 ಇಂಗ್ಲೆಂಡ್ ವಿರುದ್ಧದ ಟೀಂ ಇಂಡಿಯಾ ಮಹಿಳಾ ತಂಡದ ಒನ್ ಡೇ ಪಂದ್ಯಾವಳಿಗೆ ಹರ್ಮನ್ ಪ್ರೀತ್ ಕೌರ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಉಪ ನಾಯಕರನ್ನಾಗಿ ಸ್ಮೃತಿ ಮಧನ ಅವರನ್ನು ನೇಮಿಸಲಾಗಿದೆ. ಇನ್ನೂ ತಂಡದಲ್ಲಿ ಪ್ರತೀಕಾ ರಾವಲ್, ಹರ್ಲಿನ್ ಡಿಯೋಲ್, ಜಮೀಮಾ ರೋಡ್ರಿಗುಸ್, ರಿಚಾ ಘೋಷ್, ಯಸ್ತ್ರಿಕ ಭಾಟಿಯ, ತೇಜಲ್ ಹಸಬನ್ಸಿಸ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ಶ್ರೀ ಚರಣಿ, ಸುಚಿತ್ರ ಉಪಾಧ್ಯಾ, ಅಮಂಜೋತ್ ಕೌರ್, ಅರುಂದತಿ ರೆಡ್ಡಿ, ಕ್ರಾಂತಿ ಗೌಡ್, ಶಯಾಲಿ ಒಳಗೊಂಡಿದೆ. ಟಿ20ಐ ಪಂದ್ಯಾವಳಿಯ ಭಾರತದ ತಂಡ ಹೀಗಿದೆ ಹರ್ಮನ್ ಪ್ರೀತ್ ಕೌರ್ ಅವರನ್ನು ತಂಡದ ನಾಯಕಿಯನ್ನಾಗಿ ನೇಮಿಸಲಾಗಿದ್ದರೇ, ಸ್ಮೃತಿ ಮಂಧನ…

Read More

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಮೈಸೂರು ಮೃಗಲಯದಲ್ಲಿ ಆಫ್ರಿಕನ್ ಸಿಂಹವನ್ನು ದತ್ತು ಪಡೆಯಲಾಗಿದೆ. ಮಂಜುನಾಥ್ ಗೌಡ ಅವರ ನೇತೃತ್ವದ ಪ್ರದೇಶ ಯುವ ಕಾಂಗ್ರೆಸ್ ಒಂದು ವರ್ಷಕ್ಕೆ ದತ್ತು ಪಡೆದಿದ್ದು, ಪ್ರತಿ ವರ್ಷ ದತ್ತು ನವೀಕರಣಕ್ಕೆ ನಿರ್ಧರಿಸಿದೆ. ವರ್ಷಕ್ಕೆ ದತ್ತು ಮೊತ್ತ 2 ಲಕ್ಷ ರೂಪಾಯಿ. https://kannadanewsnow.com/kannada/nothing-can-be-done-as-long-as-siddaramaiah-has-the-blessings-of-the-people-minister-bairathi-suresh/ https://kannadanewsnow.com/kannada/big-news-attention-to-the-rural-people-of-the-state-all-these-services-of-the-gram-panchayat-will-be-available-on-whatsapp-watch-video/

Read More

ವಿಜಯಪುರ: ರಾಜ್ಯದಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಜನರ ಆಶೀರ್ವಾದ ಇರುವವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ವಿಜಯಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಸೇರಿದಂತೆ ಕೆಲವು ಸುಳ್ಳು ಪ್ರಕರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಮತ್ತು ಇತರರು ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಕಪ್ಪು ಮಸಿ ಬಳಿಯುವ ಪ್ರಯತ್ನ ನಡೆಸಿದರು. ಆದರೆ, ಅದು ಸಾಕಾರಗೊಳ್ಳಲಿಲ್ಲ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು ರಾಜ್ಯವಷ್ಟೇ ಅಲ್ಲ, ಇಡೀ ದೇಶ ಕಂಡ ಅತ್ಯಂತ ಪ್ರಾಮಾಣಿಕ ರಾಜಕೀಯ ನೇತಾರರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 16 ಬಾರಿ ಬಜೆಟ್ ಅನ್ನು ಮಂಡಿಸುವ ಮೂಲಕ ತಳ ವರ್ಗದ ಸಮುದಾಯಗಳೂ ಸೇರಿದಂತೆ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಅನೇಕ ಕೊಡುಗೆ ನೀಡಿದ್ದಾರೆ. ಅವರ ಈ ಸೇವೆ ಅನನ್ಯವಾಗಿದೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಿದ್ದರಾಮಯ್ಯ ಅವರ ವರ್ಚಸ್ಸಿಗೆ…

Read More

ನವದೆಹಲಿ: ಪಾಕಿಸ್ತಾನಕ್ಕೆ ಸಹಾಯ ಮಾಡಿದಂತ ಟರ್ಕಿ ವಿರುದ್ಧ ಬಾಯ್ ಕಾಟ್ ಟರ್ಕಿ ಅಭಿಯಾನ ಆರಂಭಿಸಲಾಗಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರವು ಟರ್ಕಿಯ ಸೆಲೆಬಿ ವಿಮಾನ ನಿಲ್ದಾಣ ಸೇವೆಗಳಿಗೆ ಭದ್ರತಾ ಅನುಮತಿ ರದ್ದುಪಡಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ” ತಕ್ಷಣದಿಂದ ಜಾರಿಗೆ ಬರುವಂತೆ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾಗಿದ್ದ ಭದ್ರತಾ ಅನುಮತಿಯನ್ನು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ರದ್ದುಗೊಳಿಸಿ ಆದೇಶಿಸಿದೆ. https://twitter.com/ANI/status/1923001283838910758 ಟ್ರಂಪ್ ಯು-ಟರ್ನ್: ಭಾರತ-ಪಾಕ್ ನಡುವೆ ನಾನು ಮಧ್ಯಸ್ಥಿಕೆ ವಹಿಸಿಲ್ಲವೆಂದು ಹೇಳಿಕೆ | Donald Trump U-turn ಅಮೇರಿಕಾ: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಒಪ್ಪಿಕೊಂಡಿದ್ದಾವೆ ಎಂಬುದಾಗಿ ತಿಳಿಸಿದ್ದಂತ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು, ಈಗ ಯು-ಟರ್ನ್ ಹೊಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಾನು ಮಧ್ಯಸ್ಥಿಕೆ ವಹಿಸಿಲ್ಲ. ಸಮಸ್ಯೆ ಬಗೆಹರಿಸಲು ಸಹಾಯ ಮಾಡಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಹೆಚ್ಚುತ್ತಿರುವ ಟೀಕೆಗಳ ಮಧ್ಯೆ, ಭಾರತ ಮತ್ತು ಪಾಕಿಸ್ತಾನ…

Read More