Subscribe to Updates
Get the latest creative news from FooBar about art, design and business.
Author: kannadanewsnow09
ಮಂಡ್ಯ : ಹಕ್ಕು ಪತ್ರ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಚಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಂತಿ ಬಡಾವಣೆಯ ನಿವಾಸಿಗಳು ಮದ್ದೂರು ಶಾಸಕ ಕೆ.ಎಂ.ಉದಯ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಸೋಮವಾರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ವೇಳೆ ಶಾಸಕ ಉದಯ್ ಅವರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮದ ಮುಖಂಡ ರಾಜೇಶ್ ಮಾತನಾಡಿ, 50ಕ್ಕೂ ಹೆಚ್ಚು ವರ್ಷಗಳಿಂದ ಜಯಂತಿ ಬಡಾವಣೆಯ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಬಡಾವಣೆಯ ನಿವಾಸಿಗಳು ಪ್ರತಿನಿತ್ಯ ಯಾವುದೇ ಮೂಲ ಸೌಕರ್ಯಗಳು ಇಲ್ಲದೇ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅಳಲು ತೋಡಿಕೊಂಡರು. ಗ್ರಾಮದ ಸರ್ಕಾರಿ ಜಾಗದಲ್ಲಿ 100 ಕ್ಕೂ ಹೆಚ್ಚು ಮನೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಆದರೆ, ಯಾವುದೇ ಸೌಕರ್ಯಗಳನ್ನು ನೀಡಿಲ್ಲ. ಆಗ ನಿರ್ಮಿಸಿರುವ ಮನೆಗಳು ಸಹ ಶಿಥಿಲಗೊಂಡು ವಾಸಕ್ಕೂ ಸಹ…
ಬೆಂಗಳೂರು: ನರೇಗಾ ಯೋಜನೆಯ ನೆರವಿನಿಂದ ‘ಜಲ ಸಂಚಯ ಜನ ಭಾಗಿದಾರಿ’ ಅಭಿಯಾನದಡಿ ಪ್ರತಿ ಹನಿ ನೀರನ್ನು ಸಂರಕ್ಷಿಸುವ ಹಾಗೂ ಅಂತರ್ಜಲ ಮರುಪೂರಣದ ಧ್ಯೇಯದೊಂದಿಗೆ ಜಲ ಸಂರಕ್ಷಣೆಯಲ್ಲಿ ತೊಡಗಿಕೊಂಡ ರಾಜ್ಯದ 7 ಜಿಲ್ಲೆಗಳ ಗ್ರಾಮ ಪಂಚಾಯತಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪಡೆದುಕೊಂಡ ಎಲ್ಲ ಗ್ರಾಮ ಪಂಚಾಯತಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದಿಸಿದ್ದಾರೆ. ಜಲಸಂರಕ್ಷಣೆಗಾಗಿ ಗದಗ ಜಿಲ್ಲೆಯಲ್ಲಿ 11,971 ವಿಜಯಪುರ ಜಿಲ್ಲೆಯಲ್ಲಿ 11,453 , ಬೀದರ್ ಜಿಲ್ಲೆಯಲ್ಲಿ 10,297, ಕೋಲಾರ ಜಿಲ್ಲೆಯಾದ್ಯಂತ 8,470 ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ 9,885, ಮಂಡ್ಯ ಜಿಲ್ಲೆಯಲ್ಲಿ 7192 ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 7,815 ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಸಚಿವರು ಹೇಳಿದ್ದು, ರಾಜ್ಯದ ಇತರ ಜಿಲ್ಲೆಗಳು ಜಲಸಂರಕ್ಷಣೆಯಲ್ಲಿ ತೊಡಗಿಕೊಳ್ಳುವಂತೆ ಪ್ರಶಸ್ತಿ ಪಡೆದ ಜಿಲ್ಲೆಗಳು ಪ್ರೇರಣೆ ನೀಡಲಿ ಎಂದು ಆಶಿಸಿದ್ದಾರೆ. ಈ ಅಭಿಯಾನದಡಿ ಅಂತರ್ಜಲವನ್ನು ಹೆಚ್ಚಿಸಲು ಕ್ರಮ, ಮಳೆ ನೀರು ಸಂರಕ್ಷಣೆ, ಜಲಸಂರಕ್ಷಣೆಯ ಸಂಸ್ಕೃತಿ ಬಗ್ಗೆ…
ಬೆಂಗಳೂರು: ಇ-ಕಾಮರ್ಸ್‌ಗಳಾದ ಅಮೆಜಾನ್‌ನಲ್ಲಿ ಇದೇ ಮೊದಲ ಬಾರಿಗೆ ಜಾವಾ ಯೆಜ್ಡಿ ಅವರ ಎಲ್ಲಾ ಮಾಡೆಲ್‌ನ ಬೈಕ್‌ಗಳು ಆನ್‌ಲೈನ್‌ನಲ್ಲಿಯೇ ಲಭ್ಯವಿದ್ದು, ಜನರು ಬೈಕ್‌ನನ್ನೂ ಸಹ ಆನ್‌ಲೈನ್‌ನಲ್ಲಿಯೇ ಖರೀದಿಸಹುದು. ಈ ಕುರಿತು ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್‌ನ ಮುಖ್ಯ ವ್ಯವಹಾರ ಅಧಿಕಾರಿ ಶರದ್ ಅಗರ್ವಾಲ್, ಕಳೆದ ವರ್ಷ ಫ್ಲಿಪ್‌ಕಾರ್ಟ್‌ನಲ್ಲಿ ಬೈಕ್‌ಗಳ ಖರೀದಿಗೆ ಲಭ್ಯತೆ ಕಲ್ಪಿಸಿಕೊಡಲಾಗಿತ್ತು.ಇದೀಗ ಅದೇ ಮಾದರಿಯಲ್ಲಿ ಅಮೆಜಾನ್‌ನಲ್ಲಿಯೂ ಲಭ್ಯವಾಗುವಂತೆ ವ್ಯವಸ್ಥೆ ನಿರ್ಮಿಸಲಾಗಿದ್ದು, ಜಾವಾ ಬೈಕ್ ಕುಳಿತಲ್ಲೇ ಖರೀದಿಸಬಹುದಾಗಿದೆ. ಸುಮಾರು 40 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದ್ದು, ಈ ಹಬ್ಬದ ಋತುವಿನಲ್ಲಿ 100 ಕ್ಕೂ ಹೆಚ್ಚು ನಗರಗಳನ್ನು ತಲುಪುವ ಯೋಜನೆ ಹೊಂದಿದೆ. ನಮ್ಮ ಯುವ ಗ್ರಾಹಕರು ರಜಾದಿನಗಳನ್ನು ಬುಕ್ ಮಾಡಲು ಅಥವಾ ಆನ್‌ಲೈನ್‌ನಲ್ಲಿ ಕಾರು ಖರೀದಿಸಲು ಹಿಂಜರಿಯುತ್ತಿದ್ದರು, ಆನ್‌ಲೈನ್‌ನಲ್ಲಿ ತಮ್ಮ ಇಷ್ಟದ ಬೈಕ್ ಖರೀದಿ ಅಸಾಧ್ಯವೆಂದು ಭಾವಿಸಿದ್ದರು, ಆದರೆ, ಈಗ ಅವರ ಕನಸು ನನಸಾಗಿದೆ. ಒಂದು ವರ್ಷದ ಹಿಂದೆ ಇ-ಕಾಮರ್ಸ್‌ಗೆ ಹೋದೆವು. ಫ್ಲಿಪ್‌ಕಾರ್ಟ್‌ನಿಂದ ಪ್ರಾರಂಭಿಸಿ ಈಗ ಅಮೆಜಾನ್‌ಗೆ ವಿಸ್ತರಿಸುತ್ತಿರುವ ನಾವು, ಮೋಟಾರ್‌ಸೈಕ್ಲಿಂಗ್‌ನ ಆತ್ಮವನ್ನು ಹಾಗೆಯೇ ಉಳಿಸಿಕೊಂಡು…
ನಮ್ಮಲ್ಲಿ ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿಯುವ ಮತ್ತು ಹಣ ಸಂಪಾದಿಸುವ ಏಕೈಕ ಕಾರಣವೆಂದರೆ ನಮ್ಮ ಭವಿಷ್ಯದ ಪಾಲುದಾರರನ್ನು ಉತ್ತಮಗೊಳಿಸುವುದು. ಮುಂದಿನ ಪೀಳಿಗೆಯಾಗುವವರು ನಮ್ಮ ವಂಶಸ್ಥರು. ಅವರ ಬದುಕು ಹಸನಾಗಬೇಕಾದರೆ ಉತ್ತಮ ಶಿಕ್ಷಣ ಪಡೆಯಬೇಕು. ನಾವು ಯಾವ ಒಳ್ಳೆಯ ಶಾಲೆಗೆ ಸೇರಿಸಿದರೂ ಓದುವ ಹಂಬಲವಿದ್ದರೆ ಮಾತ್ರ ಅವರು ಓದಬಲ್ಲರು. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನಾವು ಆದಿ ಪೌರ್ಣಮಿಯ ದಿನದಂದು ಮಾಡಬೇಕಾದ ಹಯಗ್ರೀವರ ಪೂಜೆಯ ಬಗ್ಗೆ ನೋಡಲಿದ್ದೇವೆ . ಹಯಗ್ರೀವರು ಆದಿ ಪೌರ್ಣಮಿಯಂದು ಜನಿಸಿದರು ಎಂದು ಹೇಳಲಾಗುತ್ತದೆ. ಹಾಗಾದರೆ ಅವರ ಜನ್ಮದಿನವಾದ ಈ ಹಯಗ್ರೀವರ ಜಯಂತಿಯಂದು ನಾವು ಅವರನ್ನು ಹೇಗೆ ಪೂಜಿಸಬೇಕು? ಹಯಗ್ರೀವರು ಸರಸ್ವತಿಯ ಗುರು. ಶಿಕ್ಷಣದಲ್ಲಿ ಸರಸ್ವತಿಯೇ ಶ್ರೇಷ್ಠ ಎಂದು ಹೇಳುತ್ತೇವೆ. ಅವನ ಗುರು ಹಯಗ್ರೀವನಾಗಿದ್ದರೆ ಅವನು ಎಷ್ಟು ಶಕ್ತಿಶಾಲಿ? ಅವರನ್ನು ಮನಃಪೂರ್ವಕವಾಗಿ ಪೂಜಿಸಿದರೆ ನಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾರೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ…
ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೆಳಗಾವಿ ನಡುವೆ ಒಂದು ಟ್ರಿಪ್ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06503 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 17, 2025 ರಂದು ಸಂಜೆ 5:30 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 5:30 ಗಂಟೆಗೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 06504 ಬೆಳಗಾವಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 22, 2025 ರಂದು ಬೆಳಗಾವಿಯಿಂದ ಸಂಜೆ 5:30 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ. ಈ ವಿಶೇಷ ರೈಲು ಮಾರ್ಗಮಧ್ಯೆ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಲೊಂಡಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.…
ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಕನ್ನಡ ಬಿಗ್ ಬಾಸ್ ನಡೆಯುತ್ತಿರುವಂತ ಜಾಲಿವುಡ್ ಡೇಸ್ ಗೆ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಗೆ ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ, ಇದೀಗ ಪರಿಸರ ನಿಯಮ ಉಲ್ಲಂಘನೆಯ ಆರೋಪದಡಿ ಬಿಗ್ ಬಾಸ್ ಮನೆಗೆ ಬೀಗವನ್ನು ಜಡಿಯಲಾಗಿದೆ. ಇಂದು ಬೆಂಗಳೂರಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವಂತ ಜಾಲಿವುಡ್ ಸ್ಟುಡಿಯೋಸ್ ಗೆ ರಾಮನಗರ ತಹಶೀಲ್ದಾರ್, ಪೊಲೀಸರು ಭೇಟಿ ನೀಡಿದ್ದರು. ಜಾಲಿವುಡ್ ಸ್ಟುಡಿಯೋಸ್ ಒಳಗೆ ಪ್ರವೇಶಿಸಿದಂತ ತಹಶೀಲ್ದಾರ್, ಒಳಗೆ ಇರುವವರನ್ನು ಹೊರ ಕಳುಹಿಸುವಂತೆ ಸೂಚಿಸಿದ್ದರು. ಈ ಬಳಿಕ ರಾಮನಗರ ತಹಶೀಲ್ದಾರ್, ಪೊಲೀಸರ ಸಮ್ಮುಖದಲ್ಲಿ ಬಿಗ್ ಬಾಸ್ ನಡೆಯುತ್ತಿರುವಂತ ಜಾಲಿವುಡ್ ಸ್ಟುಡಿಯೋಸ್ ಗೆ ಬೀಗವನ್ನು ಜಡಿಯಲಾಗಿದೆ. ಜಾಲಿವುಡ್ ಸ್ಟುಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಟೆಡ್ ಗೆ ಬೀಗಮುದ್ರೆಯನ್ನು ಹಾಕಲಾಗಿದೆ. ಹೀಗಾಗಿ ಕನ್ನಡದ ಖ್ಯಾತ ಶೋ ಬಿಗ್ ಬಾಸ್ ಎರಡೇ ವಾರಕ್ಕೆ ಸ್ಥಗಿತಗೊಳ್ಳಲಿದ್ಯಾ ಎಂಬ ಅನುಮಾನವನ್ನು ಹುಟ್ಟು ಹಾಕಿದೆ. https://kannadanewsnow.com/kannada/10-day-holiday-for-government-and-aided-schools-on-request-of-teachers-association-dcm-d-k-shivakumar/ https://kannadanewsnow.com/kannada/holiday-for-all-schools-in-the-state-till-october-18-decision-taken-at-a-meeting-led-by-cm-siddaramaiah/
ಬೆಂಗಳೂರು : “ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಬೇಕೆನ್ನುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕಕ್ಷಕರ ಸಂಘದ ಮನವಿ ಮೇರೆಗೆ ಇದೇ ತಿಂಗಳು 18 ರವರೆಗೆ ಅಂದರೆ 10 ದಿನಗಳ ಕಾಲ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಆಯೋಗವು ನಡೆಸುತ್ತಿರುವ ಸಮೀಕ್ಷೆ ಪ್ರಗತಿ ಕುರಿತು ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. “ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.90ರಷ್ಟು ಜನರು ಸಮೀಕ್ಷೆಗೆ ಸಹಕಾರ ನೀಡಿದ್ದಾರೆ. ಸರ್ಕಾರದ ಪರವಾಗಿ ಅವರಿಗೆ ಅಭಿನಂದಿಸುತ್ತೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ತರಬೇತಿ ಹಾಗೂ ಚುನಾವಣಾ ಆಯೋಗದ ಕೆಲಸಗಳ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಸ್ವಲ್ಪ ತಡವಾಗಿ ಆರಂಭಿಸಿದ್ದೇವೆ. ಈ ಭಾಗದಲ್ಲಿ ಸಮೀಕ್ಷೆ ಮಂದಗತಿಯಲ್ಲಿದ್ದು, ಶೇ.25ರಷ್ಟು ಪೂರ್ಣಗೊಂಡಿದೆ.…
ಬೆಂಗಳೂರು : ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಹೌಸ್‌ಗೆ ಇದೀಗ ಸಂಕಷ್. ಶೋ ಆರಂಭವಾದಂತ ಎರಡೇ ವಾರದಲ್ಲಿ ಜಾಲಿವುಡ್ ಡೇಸ್ ಸ್ಟುಡಿಯೋಗೆ ತಹಶೀಲ್ದಾರ್ ಬೀಗ ಮುದ್ರೆಯಾಕಿ, ಸೀಜ್ ಮಾಡಿದ್ದಾರೆ. ಇಂದು ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಗೆಬೆಂಗಳೂರು ದಕ್ಷಿಣ ಜಿಲ್ಲಾಡಳಿತದ ಅಧಿಕಾರಿಗಳು ಸ್ಟುಡಿಯೋಸ್ ಗೆ ತೆರಳಿದ್ದರು. ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡವು, ವೇಲ್ಸ್ ಸ್ಟುಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಗೆ ಬಿಗಮುದ್ರೆ ಹಾಕಿದೆ. ಹೌದು ಬಿಗ್ ಬಾಸ್ ಹೊಸ ವಿಡಿಯೋದಿಂದ ಬೀಗ ಮುದ್ರೆ ಬಿದ್ದಿದೆ. ಬಿಗ್ ಬಾಸ್ ಬಂದ್ ಮಾಡುವಂತೆ ನಿನ್ನೆ ನೋಟಿಸ್ ನೀಡಿದ್ದರು. ಆದರೆ ನೋಟಿಸ್ ಪಡೆಯಲು ಜಾಲಿವುಡ್ ವೀಡಿಯೋಸ್ ಹಿಂದಿಟು ಹಾಕಿದೆ. ಹಾಗಾಗಿ ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಪೊಲೀಸರು ತೆರಳಿದ್ದರು. ಬಿಗ್ ಬಾಸ್ ಮನೆಯ ಒಳಗೆ ತೆರಳಿದ್ದಂತ ಅಧಿಕಾರಿಗಳು ಮನೆಯಲ್ಲಿ ಇರುವವರನ್ನು ಹೊರಗೆ ಕಳುಹಿಸಿ ಬಂದ್ ಮಾಡಿಸಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿದೆ. ಈ ಕುರಿತು ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅನಧಿಕೃತ ಮನೆಗಳನ್ನು ತೆರವು ಮಾಡಬೇಕೆಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ. ಪವಿತ್ರ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟದ ಅಂದವನ್ನು ಹಾಳು ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ. ಬೆಟ್ಟದಲ್ಲಿ ಯಾವುದೇ ಹೊಸ ಮನೆಗಳ ನಿರ್ಮಾಣ ಮಾಡಬಾರದು ಮತ್ತು ಮೊದಲ ಮಹಡಿ ಗಳನ್ನು ಕಟ್ಟಬಾರದು ಈಗಾಗಲೇ ಇರುವ ಮನೆಗಳ ಯಾತಸ್ಥಿತಿ ಕಾಪಾಡುವಂತೆ ಸರ್ಕಾರ ಆದೇಶ ನೀಡಿದ್ದರು ಕೆಲವರು ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಕನ್ನಡ ತೇಜಸ್ವಿ ನಾಗಲಿಂಗಸ್ವಾಮಿ ಸ್ವಾಮಿ ಆರೋಪ ಮಾಡಿದ್ದಾರೆ. ಕೆಲವರು ಅರಣ್ಯ ಇಲಾಖೆಯ ಗಡಿಯನ್ನು ದಾಟಿ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ ಅಂತವರ ಮೇಲೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಮನೆಗಳ ನಿರ್ಮಾಣ ಕಾರ್ಯ ಸ್ಥಗಿತ ಗೋಳಿಸ ಬೇಕು ಎಂದು ತೇಜಸ್ವಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈಗಾಗಲೇ ಅನೇಕ ಬಾರಿ ಚಾಮುಂಡಿ ಬೆಟ್ಟದಲ್ಲಿ ಕುಸಿತ ಉಂಟಾಗಿದ್ದು ಕಳೆದ ನಾಲ್ಕು ಐದು ವರ್ಷಗಳ ಹಿಂದೆಯೇ ನಂದಿ ರಸ್ತೆ ಕುಸಿತ ವಾಗಿದ್ದರೂ ಈವರೆಗೂ ಕೂಡ…
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ವಲಯದಲ್ಲಿನ ಮಲಂದೂರು ಮೀಸಲು ಅರಣ್ಯವನ್ನು ಒತ್ತುವರಿ ಮಾಡಿದ್ದಂತ 6 ಎಕರೆ 24 ಗುಂಟೆ ಜಮೀನನ್ನು ಅರಣ್ಯಾಧಿಕಾರಿಗಳು ತೆರವುಗೊಳಿಸಿದ್ದರು. ಆದರೇ ಈ ತೆರವು ಕಾನೂನಿನಡಿ ಮಾಡಿಲ್ಲ. ಕಾನೂನು ಮೀರಿ ಮಾಡಲಾಗಿದೆ ಎಂಬುದಾಗಿ ಹಲವರ ಆರೋಪವಾಗಿತ್ತು. ಇದು ಸುಳ್ಳು ಎಂಬುದನ್ನು ಅರಣ್ಯ ಇಲಾಖೆಯ 64ಎ ಆದೇಶವೇ ಹೇಳುತ್ತಿದೆ. ಕರ್ನಾಟಕ ಅರಣ್ಯ ಅಧಿನಿಯಮ 1963ರ ಸೆಕ್ಷನ್ 64(ಎ)ರ ಅಡಿಯಲ್ಲೇ ಕಾನೂನಿನಂತೆ ತೆರವು ಮಾಡಲಾಗಿದೆ. ಆ 64ಎ ಪ್ರೊಸಿಡಿಂಗ್ಸ್ ಆದೇಶದ ಸಂಪೂರ್ಣ ವಿವರ ಮುಂದಿದೆ ಓದಿ. ಈ ಕುರಿತಂತೆ ಸಾಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ.ಕೆ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂನ ಮಲಂದೂರು ಗ್ರಾಮದ ಸರ್ವೆ ನಂಬರ್ 157ರ ಮಲಂದೂರು ರಾಜ್ಯ ಅರಣ್ಯ ಪ್ರದೇಶದಲ್ಲಿ ಆರ್.ಎಂ ಷಣ್ಮುಖ ಬಿನ್ ಮಂಜಪ್ಪಗೌಡ ಎಂಬುವರು 6 ಎಕರೆ 24 ಗುಂಟೆ ಜಮೀನು ಒತ್ತುವರಿ ಮಾಡಿದ್ದರ ಬಗ್ಗೆ ದೂರು ಬಂದಿತ್ತು. ಈ ದೂರು ಆಧರಿಸಿ ಅರಣ್ಯಾಧಿಕಾರಿಗಳು…














