Author: kannadanewsnow09

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಅನಧಿಕೃತ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ಎನ್ನುವಂತೆ ಸರ್ಕಾರದಿಂದ ಬಿ-ಖಾತಾ ನೀಡಲು ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ. ರಾಜ್ಯದ ಪಟ್ಟಣ, ನಗರ ಪ್ರದೇಶದಲ್ಲಿನ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ವಿತರಣೆ ಮಾಡಿದಂತೆಯೇ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅನಧಿಕೃತ ಆಸ್ತಿಗಳಿಗೂ ಇದೇ ಕ್ರಮ ವಹಿಸಲು ಮುಂದಾಗಿದೆ ಎಂಬುದಾಗಿ ತಿಳಿದು ಬಂದಿದೆ. ರಾಜ್ಯ ಸರ್ಕಾರದಿಂದ ಹಳ್ಳಿಗಳಲ್ಲಿನ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ನೀಡಲು ಕಾಯ್ದೆಗೂ ತಿದ್ದುಪಡಿ ತರೋದಕ್ಕೆ ಪರಿಶೀಲನೆ ನಡೆಸುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಗ್ರಾಮೀಣ ಭಾಗದಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅನಧಿಕೃತ ಆಸ್ತಿಗಳಿಗೆ ನಗರ, ಪಟ್ಟಣ ವ್ಯಾಪ್ತಿಯಲ್ಲಿ ನೀಡುವಂತೆಯೇ ಬಿ-ಖಾತಾ ವಿತರಣೆಗೆ ನಿರ್ಧಾರವನ್ನು ಸರ್ಕಾರ ಶೀಘ್ರವೇ ಪ್ರಕಟಿಸೋ ಸಾಧ್ಯತೆ ಇದೆ. https://kannadanewsnow.com/kannada/bill-to-be-introduced-in-assembly-waiver-of-loans-if-financers-are-forced-to-recover/ https://kannadanewsnow.com/kannada/home-minister-g-parameshwara-warns-of-suo-motu-case-against-those-who-create-riots-in-the-state/

Read More

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕರ್ನಾಟಕ ಕಿರು ಸಾಲ(ಮೈಕ್ರೋ) ಮತ್ತು ಸಣ್ಣ ಸಾಲ ವಸೂಲಾತಿ ಬಲವಂತದ ಕ್ರಮಗಳ ಪ್ರತಿಬಂಧಕ ವಿಧೇಯಕ-2025 ಗುರುವಾರದಂದು ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಈ ವಿಧೇಯಕದಂತೆ ಇನ್ಮುಂದೆ ಬಲವಂತವಾಗಿ ಸಾಲ ವಸೂಲಿಗೆ ಇಳಿದ್ರೇ ಸಾಲ ಮನ್ನಾ ಮಾಡುವಂತ ನಿರ್ಧಾರವನ್ನು ಸರ್ಕಾರ ಕೈಗೊಳ್ಳೋದಕ್ಕೆ ಅವಕಾಶವಿದೆ. ಈ ವಿಧೇಯಕದಡಿ ಅನಧಿಕೃತ ಹಾಗೂ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಅಥವಾ ಲೇವಾದೇವಿದಾರರು ಸಾಲಗಾರನಿಂದ ಬಲವಂತದ ವಸೂಲಿಗೆ ಪ್ರಯತ್ನಿಸೋದನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಸಾಲ ಪಡೆದಿರುವ ಸಮಾಜದ ದುರ್ಬಲ ವರ್ಗದವರ ಬಲಿ ಬಲವಂತ ಮಾಡಿ ಸಾಲಗಾರ ಪಡೆದಿರುವ ಸಾಲ ಹಾಗೂ ಬಡ್ಡಿ ಮನ್ನಾ ಆಗಿದೆ ಎಂದು ಭಾವಿಸಬೇಕು ಎಂಬ ಮಹತ್ವದ ಅಂಶವನ್ನು ವಿಧೇಯಕ ಒಳಗೊಂಡಿದೆ. ಇದಷ್ಟೇ ಅಲ್ಲದೇ ಇಂಥಹ ಸಂಸ್ಥೆ ಅಥವಾ ಲೇವಾದೇವಿದಾರ ಸಾಲ, ಬಡ್ಡಿ ವಸೂಲಿಗೆ ಹೂಡುವ ಯಾವುದೇ ದಾವೆ ಅಥವಾ ವ್ಯವಹಾರವನ್ನು ನ್ಯಾಯಾಲಯಗಳು ಪುರಸ್ಕರಿಸಬಾರದು. ಸಾಲಗಾರ ಅಥವಾ ಆತನೊಂದಿಗೆ ಯಾರ ವಿರುದ್ಧವಾದರೂ ಜಂಟಿಯಾಗಿ ದಾವೆ ಹೂಡಿದ್ದರೇ ತಕ್ಷಣದಿಂದ ರದ್ದಾಗಬೇಕು. ಇನ್ನೂ ಯಾವುದೇ ಮೈಕ್ರೋ…

Read More

ಬೆಂಗಳೂರು : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಯೋ ವಂದನಾ ಯೋಜನೆಯು ಒಂದಾಗಿದ್ದು 70 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿಗೆ ರೂ.5.00ಲಕ್ಷಗಳ ಮೊತ್ತದ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು. ಗುರುವಾರದಂದು ವಿಧಾನಸಭೆಯಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಸದಸ್ಯರಾದ ವೇದವ್ಯಾಸ ಕಾಮತ್ ಡಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ 1650 ಚಿಕಿತ್ಸಾ ವೆಚ್ಚಗಳಲ್ಲಿ 294 ಸಾಮಾನ್ಯ/ಸರಳ ಚಿಕಿತ್ಸಾ ವಿಧಾನಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದು 251 ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸಾ ವಿಧಾನಗಳು, 934 ತೃತೀಯ ಹಂತದ ಚಿಕಿತ್ಸಾ ವಿಧಾನಗಳು ಮತ್ತು 171 ತುರ್ತು ಚಿಕಿತ್ಸಾ ವಿಧಾನಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಪಡೆಯಬಹುದಾಗಿದೆ. ಲಭ್ಯವಿಲ್ಲದ ಚಿಕಿತ್ಸಾ ವಿಧಾನಗಳಿಗೆ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಹೆಚ್‍ಬಿಪಿ2022 ಪ್ಯಾಕೇಜನ್ನು ಅನುಷ್ಠಾನಗೊಳಿಸಲು ಸರ್ಕಾರದ…

Read More

ಬೆಂಗಳೂರು: ಮಂಗನ ಕಾಯಿಲೆ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಿ, ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಇದರಿಂದ ಅನೇಕ ರೋಗಿಗಳು ಯಾವುದೇ ತೊಂದರೆಗಳಿಲ್ಲದೇ ಮಂಗನ ಕಾಯಿಲೆ ಸೋಂಕಿನಿಂದ ಚೇತರಿಸಿಕೊಳ್ಳತ್ತಾರೆ. ಈ ಖಾಯಿಲೆಯು ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಂಗನ ಕಾಯಿಲೆಯಿಂದ ಸಾವುಗಳು ಸಂಭವಿಸದಂತೆ ಮುಂಜಾಗ್ರತ ಕ್ರಮಗಳನ್ನು ವಹಿಸಲಾಗಿದೆ. ಈ ರೋಗಕ್ಕೆ ಯಾವುದೇ ಲಸಿಕೆ ಇರುವುದಿಲ್ಲ. ಈ ಹಿಂದೆ ಇದ್ದ ಲಸಿಕೆ ಕ್ಷಮತೆ ಕಳೆದುಕೊಂಡಿದೆ. ಈಗಾಗಲೇ ಐಸಿಎಂಆರ್ ಜೊತೆ ಚರ್ಚೆ ಮಾಡಿ ನಿರಂತರ ಸಂಪರ್ಕದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಹಾಗೂ ಲಸಿಕಾಗೆ ಸಂಶೋಧನೆ ಕಾರ್ಯ ನಡಿಯುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು. ವಿಧಾನಸಭೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಸದಸ್ಯರಾದ ಅರಗ ಜ್ಞಾನೇಂದ್ರ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ 674 ಖಚಿತ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಇಲ್ಲಿಯವರೆಗೆ ಯಾವುದೇ ಖಚಿತ ಡೆಂಗ್ಯೂ ಮರಣ ಪ್ರಕರಣಗಳು ವರದಿಯಾಗಿರುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಮಂಗನ ಕಾಯಿಲೆ ಸೊಂಕಿತ ಓರ್ವ…

Read More

ಬೆಂಗಳೂರು: ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡು ಹಿಡಿಯುವ ಹಾಗೂ ಭಯರಹಿತವಾಗಿ ಪರೀಕ್ಷೆ ಬರೆಯಲು ಅತ್ಮಸ್ಥೆರ್ಯ ತುಂಬುವ ಸದುದ್ದೇಶದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಹಿಂದಿನ ವರ್ಷಗಳಂತೆ ಈ ವರ್ಷವೂ ‘ಸಹಾಯವಾಣಿ’ ಕೌನ್ಸಿಲಿಂಗ್ ಕಾರ್ಯಕ್ರಮವನ್ನು ಮಾರ್ಚ್ 10 ರಿಂದ ಅಪರಾಹ್ನ 02.30 ಗಂಟೆಗೆ ಪ್ರಾರಂಭಿಸಲಾಗುವುದು. ಎಸ್.ಎಸ್.ಎಲ್.ಸಿ. ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಹಂತದ ಪರೀಕ್ಷೆಯಾಗಿರುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಮಕ್ಕಳು ಗಳಿಸಬೇಕೆಂದು ಪೋಷಕರ ಅಭಿಲಾಷೆಯಾಗಿರುತ್ತದೆ. ವಿದ್ಯಾರ್ಥಿಗಳ ಸಾಮಥ್ರ್ಯ, ಬುದ್ದಿಶಕ್ತಿ, ಆಸಕ್ತಿ, ಕ್ರಿಯಾಶೀಲತೆ, ಕಠಿಣ ಪರಿಶ್ರಮ ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಹೆಚ್ಚು ಅಂಕಗಳನ್ನು ಗಳಿಸಿ ಎಂದು ಅವರ ಮೇಲೆ ಒತ್ತಡವನ್ನು ಪೋಷಕರು/ಶಿಕ್ಷಕರು ಹಾಕುತ್ತಿರುವುದು ಇತ್ತೀಚಿನ ಸಮಸ್ಯೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಅಧ್ಯಯನದ ಗಮನಹರಿಸಲಾಗದಿರುವುದು, ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿರುವುದು ಕಂಡು ಬಂದಿದ್ದು, ಈ ಸಮಸ್ಯೆ ನಿವಾರಣೆಯಾಗದೆ ವಿದ್ಯಾರ್ಥಿ ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗಳ ನಿವಾರಣೆ ಮಾಡಿ, ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸ್ಪೂರ್ತಿ ನೀಡಬೇಕಾದ ಅವಶ್ಯಕತೆ ಇದೆ. ಮಾಚ 10…

Read More

ಬೆಂಗಳೂರು : ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಳೆಯ ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು ನೆಲಸಮಗೊಳಿಸಿ ಇದೇ ಜಾಗದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಅನುದಾನದ ಲಭ್ಯತೆಯನ್ನು ಆಧರಿಸಿ ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು. ಗುರುವಾರದಂದು ವಿಧಾನ ಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಕುಮಟಾ ಶಾಸಕರಾದ ದಿನಕರ್ ಕೇಶವಶೆಟ್ಟಿ ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಭೂಮಿಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಹಸ್ತಾಂತರವಾಗಿರುವುದಿಲ್ಲ ಮತ್ತು ಸದರಿ ಪ್ರಸ್ತಾವನೆಗೆಗೆ ಯಾವುದೇ ರೀತಿಯ ಅನುದಾನ ಮಂಜೂರಾಗಿರುವುದಿಲ್ಲ. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಇದ್ದು ಈಗಾಗಲೇ ಇಲಾಖೆಯಿಂದ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು…

Read More

ಬೆಂಗಳೂರು: ರಾಜ್ಯದ ರೈತರ ಕೃಷಿ ಪಂಪ್ ಸೆಟ್ ಗಳಿಗೆ ತಾಂತ್ರಿಕ ಸಾಧ್ಯತೆ ಇರುವ ವಿದ್ಯುತ್ ಉಪ ಕೇಂದ್ರಳಿಂದ ಹಗಲಿನ ವೇಳೆಯಲ್ಲಿಯೇ ನಿರಂತರ 7 ಗಂಟೆಗಳ ಕಾಲ 3 ಪೇಸ್ ವಿದ್ಯುತ್ ನ್ನು ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇಲ್ಲದಿರುವ ವಿದ್ಯುತ್ ಉಪ ಕೇಂದ್ರಗಳಿಂದ ಪಾಳಿಯಲ್ಲಿ ಹಗಲಿನ ವೇಳೆಯಲ್ಲಿ 4 ಗಂಟೆಗಳ ಕಾಲ ಹಾಗೂ ರಾತ್ರಿಯ ವೇಳೆಯಲ್ಲಿ 3 ಗಂಟೆಗಳ ಕಾಲ ಒಟ್ಟು 7 ಗಂಟೆಗಳ ಕಾಲ 3 ಪೇಸ್ ವಿದ್ಯುತ್ತನ್ನು ಸರಬರಾಜು ಮಾಡಲಾಗುತ್ತಿದೆ. ಅರಣ್ಯ ಪ್ರದೇಶದ ಮೂಲಕ ಹಾದುಹೋಗುವ ಕೃಷಿ ಫೀಡರ್ ಗಳಿಗೆ ಹಗಲಿನ ವೇಳೆಯಲ್ಲಿಯೇ 7 ಗಂಟೆಗಳ ಕಾಲ ನಿರಂತರವಾಗಿ 3 ಪೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆÉ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾದ ಸುರೇಶ್ ಕುಮಾರ್ ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಫಾರ್ಮ್ ಹೌಸ್ ಗಳನ್ನು ಹೊಂದಿರುವ ಎಲ್ಲಾ ಕೃಷಿ ಪೀಡರ್ ಗಳಿಗೆ ಒಎಲ್‍ಪಿ-ರಿಲೇಗಳ್ನು ಬಳಸಿಕೊಂಡು…

Read More

ಬೆಂಗಳೂರು: ಆಯುಷ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರುಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಅಲೋಪತಿ ವೈದ್ಯರುಗಳಿಗೆ ನೀಡಲಾಗುತ್ತಿರುವ ವೇತನ ಶ್ರೇಣಿ, ವೇತನ ಭತ್ಯೆ ಸೌಲಭ್ಯ ಮತ್ತು ಸ್ಥಾನಮಾನಗಳನ್ನು ಸಮಾನಾಂತರವಾಗಿ ವಿಸ್ತರಿಸಿ ಕಾಲ ಕಾಲಕ್ಕೆ ಸಮಾನತೆ ಕಾಪಾಡುವ ಸರ್ಕಾರದ ನೀತಿ ವಿಷಯಕ್ಕೆ ಅನುಮೋದನೆ ನೀಡಲಾಗಿದೆ ಹಾಗೂ ವೇತನ ಮತ್ತು ಭತ್ಯೆಗಳಿಗೆ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು. ಗುರುವಾರದಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ರಿಜ್ವಾನ್ ಅರ್ಷದ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಆದೇಶ ಸಂಖ್ಯೆ :ಆಕುಕ ಪಿಐಯಂ 2016 ದಿನಾಂಕ: 18-18-2016ರನ್ವಯ ಅಲೋಪತಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವೈದ್ಯರಿಗೆ 2016ರಲ್ಲಿ ನೀಡಿದ ಪರಿಷ್ಕøತ ವಿಶೇಷ ಭತ್ಯೆಯನ್ನು ಆಯುಷ್ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವೈದ್ಯರಿಗೂ ವಿಸ್ತರಿಸಲಾಗಿದೆ. ಪ್ರಸ್ತುತ ಇಲಾಖೆಯಲ್ಲಿ 180 ಖಾಯಂ ವೈದ್ಯರುಗಳು ಸ್ನಾತಕೋತ್ತರ ಪದವಿ ಪಡೆದು ಸೇವೆ ಸಲ್ಲಿಸುತ್ತಿದ್ದು, ಇವರುಗಳನ್ನು…

Read More

ಬೆಂಗಳೂರು: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮವು ಸತತ ಲಾಭದಲ್ಲಿದ್ದು 2023-24ನೇ ಆರ್ಥಿಕ ವರ್ಷದಲ್ಲಿ ಒಟ್ಟು ರೂ.121.97 ಕೋಟಿ ವಹಿವಾಟು ನಡೆಸಿದ್ದು ರೂ.56.11 ಕೋಟಿ ನಿವ್ವಳ ಲಾಭಗಳಿಸಿದೆ. ನಿವ್ವಳ ಲಾಭದ ಮೇಲೆ ಡಿವಿಡೆಂಡ್ ರೂ.16.77 ಕೋಟಿ ಮತ್ತು ವಿಶೇಷ ಲಾಭಾಂಶ ರೂ.76.64 ಕೋಟಿ ಒಟ್ಟು ರೂ.93.41 ಕೋಟಿ ಚೆಕ್‍ಗಳನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ನವರಿಗೆ ಸಣ್ಣ ಕೈಗಾರಿಕಾ ಸಚಿವರಾದ ಶರಣ ಬಸಪ್ಪ ದರ್ಶನಾಪುರ, ನಿಗಮದ ಅಧ್ಯಕ್ಷರಾದ ಟಿ.ರಘುಮೂರ್ತಿ, ಚಳ್ಳಕೆರೆ ವಿಧಾನಸಭೆ ಸದಸ್ಯರು, ಬಸವರಾಜ ರಾಯರೆಡ್ಡಿ, ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರರು, ಸರ್ಕಾರದ ಕಾರ್ಯದರ್ಶಿಗಳಾದ ರಮಣ್ ದೀಪ್ ಚೌದರಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ರವರುಗಳು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು. https://kannadanewsnow.com/kannada/teachers-should-not-be-given-any-other-work-speaker-basavaraj-horatti/

Read More

ಬೆಂಗಳೂರು: ಶಾಲಾ ಮಕ್ಕಳಿಗೆ ಬೋಧನೆ ಮಾಡುತ್ತಿರುವ ಶಿಕ್ಷಕರಿಗೆ ಚುನಾವಣೆ ಸೇರಿ ಅನ್ಯ ಕಾರ್ಯಗಳಿಗೆ ನಿಯೋಜನೆ ಮಾಡಬಾರದು ಎಂಬುದಾಗಿ ಶಾಲಾ ಶಿಕ್ಷಣ ಸಚಿವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ. ಗುರುವಾರದಂದು ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಡಾ.ಧನಂಜಯ ಸರ್ಜಿ ಕೇಳಿದ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಉತ್ತರಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಪರಿಣಾಮಕಾರಿ ಕಲಿಕೆಗೆ ಒತ್ತು ನೀಡಬೇಕಾದರೇ ಶಿಕ್ಷಕರಿಗೆ ಬೇರಿ ಕಾರ್ಯಗಳಿಗೆ ನೇಮಿಸಬಾರದು ಎಂದರು. ಸಭಾಪತಿಗಳ ಮಾತಿಗೆ ಒಪ್ಪಿದಂತ ಸಚಿವ ಮಧು ಬಂಗಾರಪ್ಪ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ಇಲಾಖೆಯಿಂದ ಹಲವು ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ಮಾತಿಗೆ ಸಹಮತವಿದ್ದು, ಶಿಕ್ಷಕರಿಗೆ ಅನ್ಯ ಕಾರ್ಯ ನೀಡದಂತೆ ಸೂಚಿಸುವುದಾಗಿ ಸದನಕ್ಕೆ ತಿಳಿಸಿದರು. https://kannadanewsnow.com/kannada/new-vaccine-for-monkey-disease-next-year-minister-dinesh-gundu-rao/

Read More