Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ನಾಗವಳ್ಳಿ ಸೇರಿದಂತೆ ಇತರೆ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ರೈತರು, ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರ ಬೆಳೆ ಒಣಗುತ್ತಿದೆ. ಕುಡಿಯೋದಕ್ಕೆ ನೀರಿಗೆ ಸಮಸ್ಯೆ ಉಂಟಾಗಿದೆ. ಈ ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಎಂಡಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವಂತ ಅವರು, ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ನಾಗವಳ್ಳಿ, ನೆಲಹರಿ, ಗುಡ್ಡೆ ಹಿತ್ತು, ಬಾಳಿಗಾ ಗ್ರಾಮಗಳಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ರೈತ ಕುಟುಂಬಗಳು ವಾಸವಿದ್ದು, ಬಹುತೇಕ ಕುಟುಂಬಗಳು ಕೃಷಿ ಮತ್ತು ತೋಟಗಾರಿಕೆಗೆ ಅವಲಂಬಿತರಾಗಿದ್ದಾರೆ ಎಂದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಸರಿಯಾದ ರೀತಿಲ್ಲಿ ವಿದ್ಯುತ್ ಕಲ್ಪಿಸದೇ ಇರುವುದರಿಂದ ಬಹುತೇಕ ಬೆಳೆಗಳು ನಾಶದ ಅಂಚಿನಲ್ಲಿದೆ. ಜೊತೆಗೆ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಓದಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾಗರ ತಾಲ್ಲೂಕು, ಭಾರಂಗಿ ಹೋಬಳಿ, ನಾಗವಳಿ, ಭಾಗಕ್ಕೆ ಭಟ್ಕಳ ಭಾಗದಿಂದ ಬರುವ ವಿದ್ಯುತ್…
ಹುಬ್ಬಳ್ಳಿ: ಸಾಗರ ತಾಲ್ಲೂಕಿನ ಬಾರಂಗಿಯ ನಾಗವಳ್ಳಿ ಗ್ರಾಮದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿತ್ತು. ಈ ಹಿನ್ನಲೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ, ರೈತರಿಗೆ ಅನುಕೂಲ ಕಲ್ಪಿಸುವಂತೆ ಅಶೋಕ್ ಬೇಳೂರು ಅವರು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹುಬ್ಬಳ್ಳಿಯ ಹೆಸ್ಕಾಂ ಕಚೇರಿಯಲ್ಲಿ ಅಧಿಕಾರಿಯನ್ನು ಭೇಟಿ ಮಾಡಿದಂತ ಅವರು, ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ಮೇರೆಗೆ ನಾಗವಳ್ಳಿ ಗ್ರಾಮದ ಜನರ ಸಮಸ್ಯೆ ಸರಿ ಪಡಿಸುವಂತೆ ನಿಮ್ಮನ್ನು ಭೇಟಿಯಾಗಿದ್ದೇನೆ. ಸರಿಯಾಗಿ ವಿದ್ಯುತ್ ಪೂರೈಕೆ ಮಾಡದ ಕಾರಣ ಬೇಸಿಗೆಯಲ್ಲಿ ರೈತರ ಫಸಲು ಒಣಗುವಂತಾಗಿದೆ ಎಂಬುದಾಗಿ ಮನವರಿಕೆ ಮಾಡಿಕೊಟ್ಟರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬಾರಂಗಿ ಹೋಬಳಿಯ ನಾಗವಳ್ಳಿ ಗ್ರಾಮದಲ್ಲಿ ಹೆಚ್ಚು ವಾಸಿಸುತ್ತಿರೋರು ಈ ನಾಡಿಗೆ ಬೆಳಕು ನೀಡಲು ತಮ್ಮ ಮನೆ ಮಠ ಕಳೆದುಕೊಂಡ ಶರಾವತಿ ಸಂತ್ರಸ್ತ ಜನರಾಗಿದ್ದಾರೆ. ಅವರಿಗೆ ಸರಿಯಾಗಿ ವಿದ್ಯುತ್ ನೀಡದೇ ಇದ್ದರೇ ಹೇಗೆ? ಎಂದು ಪ್ರಶ್ನಿಸಿದರು. ರೈತರ ಬೆಳೆಗೆ, ಕುಡಿಯೋ ನೀರಿಗಾಗಿ ಸಮರ್ಪಕ ರೀತಿಯಲ್ಲಿ ವಿದ್ಯುತ್ ಪೂರೈಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ಮೇರೆಗೆ ಹುಬ್ಬಳ್ಳಿಯ…
ಬೆಂಗಳೂರು: ರಾಜ್ಯಸಭಾ ಸದಸ್ಯರಾದ ರಾಜಸ್ಥಾನಿ ಲೆಹರ್ ಸಿಂಗ್ ಈ ದಿನ ಪತ್ರಿಕಾಗೋಷ್ಠಿ ಮೂಲಕ ಕಾಂಗ್ರೆಸ್ ಸರ್ಕಾರದ ಮೇಲೆ ಅನೇಕ ಆರೋಪಗಳನ್ನು ಮಾಡಿರುತ್ತಾರೆ. ತಾವೇ ಸ್ವತಃ ಅಲ್ಪಸಂಖ್ಯಾತ ಮಾರ್ವಾಡಿ ಸಮುದಾಯದವರೆಂದು ಹೇಳಿಕೊಂಡಿರುವ ಲೆಹರ್ ರವರು ಮುಸಲ್ಮಾನ್ ಸಮುದಾಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ವ್ಯಕ್ತಪಡಿಸಿರುತ್ತಾರೆ. ಅವರ ಆರೋಪಗಳ ಬಗ್ಗೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಈ ಕೆಳಕಂಡಂತೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಸ್ಟಿಸ್ ಆನಂದ್ ಆಯೋಗದ ವಖ್ಫ್ ಆಸ್ತಿಗೆ ಸಂಬಂಧಪಟ್ಟಂತಹ ವರದಿಯನ್ನು ನಿಷ್ಕ್ರಿಯ ಗೊಳಿಸಿದೆ ಎಂದು ಆರೋಪಿಸಿರುವ ಇವರು, ಪ್ರಜ್ಞಾಪೂರ್ವಕವಾಗಿ ಕೇಂದ್ರ ಸರ್ಕಾರ ಸಾಚಾರ್ ಕಮಿಟಿಯ ವರದಿಯನ್ನು ಮೂಲೆಗೆ ತಳ್ಳಿರುವ ಕುರಿತು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದಿಲ್ಲ. ಯಾವಾಗ ಈ ದೇಶದಲ್ಲಿ ಜಸ್ಟಿಸ್ ಸಾಚಾರ್ ಕಮಿಟಿ ವರದಿ ಲೋಕಸಭೆಯಲ್ಲಿ ಮಂಡನೆ ಆಯಿತು, ಯಾವ ಕಾರಣಕ್ಕಾಗಿ ಬಿಜೆಪಿ ಸರ್ಕಾರ ಇದುವರಿಗೆ ಜಸ್ಟಿಸ್ ಸಾಚಾರ್ ಕಮಿಟಿ ವರದಿಯನ್ನು ಯಾತವತ್ತಾಗಿ ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುವುದಿಲ್ಲ…
ಪೇಶಾವರ: ವಾಟ್ಸ್ಆ್ಯಪ್ ಗ್ರೂಪ್ನಿಂದ ತೆಗೆದುಹಾಕಿದ ನಂತರ ಕೋಪಗೊಂಡ ವ್ಯಕ್ತಿಯೊಬ್ಬ ರಾಜಿ ಪ್ರಯತ್ನಗಳನ್ನು ನಿರ್ಲಕ್ಷಿಸಿ, ವಾಟ್ಸಾಪ್ ಗ್ರೂಪ್ನ ಅಡ್ಮಿನ್ ಅನ್ನು ಬೆನ್ನಟ್ಟಿ ಗುಂಡಿಕ್ಕಿ ಕೊಂದಿದ್ದಾನೆ. ಮಾರ್ಚ್ 7 ರಂದು ರೆಗಿ ಸಫೆದ್ ಸಾಂಗ್ ಪ್ರದೇಶದಲ್ಲಿ ವಾಟ್ಸಾಪ್ ಗ್ರೂಪ್ ಮೂಲಕ ಕೊಲೆ ನಡೆದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆ ಈಗ ಅಂತರ್ಜಾಲದಲ್ಲಿಯೂ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆ ಆರೋಪಿ ಅಶ್ಫಾಕ್ನನ್ನು ಅದರ ಅಡ್ಮಿನ್ ಮುಷ್ತಾಕ್ ಅಹ್ಮದ್ ವಾಟ್ಸಾಪ್ ಗ್ರೂಪ್ನಿಂದ ತೆಗೆದುಹಾಕಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಇಬ್ಬರ ನಡುವೆ ದ್ವೇಷದ ಇತಿಹಾಸವಿರಬಹುದು. ಆದರೆ ಅಶ್ಫಾಕ್ ಅವರನ್ನು ತೆಗೆದುಹಾಕುವುದು ಪ್ರಚೋದಕವಾಗಿ ಕಾರ್ಯನಿರ್ವಹಿಸಿರಬಹುದು ಎಂದು ಸೂಚಿಸಲಾಗುತ್ತಿದೆ. ಭಾರತವೂ ವಾಟ್ಸಾಪ್ ಗ್ರೂಪ್ ವಿವಾದಗಳ ಮೇಲೆ ದಾಳಿಗಳನ್ನು ಕಂಡಿದೆ. 2023 ರಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್ಸಿಆರ್) ಗುರ್ಗಾಂವ್ನಲ್ಲಿ ವಾಟ್ಸಾಪ್ ಗ್ರೂಪ್ ಅಡ್ಮಿನ್ ಮೇಲೆ ಮೂವರು ಗುಂಡು ಹಾರಿಸಿದ್ದರು. ಕ್ರಾಸ್-ಪ್ಲಾಟ್ಫಾರ್ಮ್ ಮೆಸೇಜಿಂಗ್ ಮತ್ತು ಕಾಲಿಂಗ್ ಅಪ್ಲಿಕೇಶನ್ ವಾಟ್ಸಾಪ್ ಅನ್ನು ಭಾರತೀಯ ಉಪಖಂಡದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ಬಳಸಲಾಗುತ್ತದೆ.…
ತುಮಕೂರು: ರಾಜ್ಯದಲ್ಲಿ ವೀಲ್ಹಿಂಗ್ ಪುಂಡರ ವಿರುದ್ಧ ಸರ್ಕಾರ ಕಠಿಣ ನಿಲುವು ಹೊಂದಿದೆ. ಅಲ್ಲದೇ ವೀಲ್ಹಿಂಗ್ ಮಾಡುವವರ ವಿರುದ್ಧ ಕೇಸ್ ಹಾಕಿ ಬಿಸಿ ಮುಟ್ಟಿಸುತ್ತಿದೆ. ಇದರ ನಡುವೆ ರಾಜ್ಯದಲ್ಲಿ ವೀಲ್ಹಿಂಗ್ ಪುಂಡರ ಹಾವಳಿಗೆ ಮತ್ತೊಂದು ಬಲಿಯನ್ನು ಪಡೆಯಲಾಗಿದೆ. ಹಾಲು ತರೋದಕ್ಕೆ ಹೋಗಿದ್ದಂತ ವ್ಯಕ್ತಿಯೊಬ್ಬರು ವೀಲ್ಹಿಂಗ್ ಪುಂಡರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ತುಮಕೂರಿನ ಟೂಡಾ ಕಚೇರಿಯ ಬಳಿಯಲ್ಲೇ ಇಂದು ಬೆಳಗ್ಗೆ ವೀಲ್ಹಿಂಗ್ ಪುಂಡರ ಅಟ್ಟ ಹಾಸಕ್ಕೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹೇಮಾದ್ರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ತಿಪ್ಪೇಸ್ವಾಮಿ ಎಂಬುವರೇ ಮೃತ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ ಹಾಲು ತರೋದಕ್ಕೆ ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದಂತ ಪುಂಡರು ತಿಪ್ಪೇಸ್ವಾಮಿ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಲ್ಲಿ ತಿಪ್ಪೇಸ್ವಾಮಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/it-is-mandatory-to-consider-this-aspect-of-tahsildar-ri-while-land-conversion-in-the-state/ https://kannadanewsnow.com/kannada/women-mutual-fund-investment/ https://kannadanewsnow.com/kannada/good-news-for-the-states-farmers-2-lakh-pump-sets-to-be-legalised-by-the-government-this-year/
ನಿಮ್ಮ ಎಲ್ಲಾ ಸಂಪತ್ತನ್ನು ಕಳೆದುಕೊಂಡಿದ್ದೀರಾ? ಶುಕ್ರನಿಂದ ಉಂಟಾಗುವ ದೋಷ? ಈ ಒಂದು ಊಟವನ್ನು ಕಾಗೆಗೆ ದಾನ ಮಾಡಿ. ಶುಕ್ರ ದೋಷ ನಿವಾರಣೆಯಾಗುತ್ತದೆ ಮತ್ತು ಕಳೆದು ಹೋದ ಸಂಪತ್ತನ್ನು ಮರಳಿ ಪಡೆಯುವಿರಿ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಉತ್ತಮ ಸ್ಥಾನದಲ್ಲಿದ್ದರೆ, ಅವನು ರಾಜಯೋಗ ಜೀವನವನ್ನು ನಡೆಸುತ್ತಾನೆ ಮತ್ತು ಯಾವುದೇ ದೋಷಗಳಿಂದ ಮುಕ್ತನಾಗಿರುತ್ತಾನೆ ಎಂದು ಹೇಳಲಾಗುತ್ತದೆ. ಅಂತಹ ಶುಕ್ರನು ದುಷ್ಟ ಸ್ಥಿತಿಯಲ್ಲಿ ಬಂದರೆ, ಅವರ ಜೀವನದಲ್ಲಿ ಎಷ್ಟೇ ಸಂಪತ್ತು ಇದ್ದರೂ, ಅವರು ಅದನ್ನೆಲ್ಲ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ ಎಂದು ಹೇಳಲಾಗುತ್ತದೆ. ಶುಕ್ರಗ್ರಹದ ರೋಗದಿಂದ ಬಳಲಿ ತಮ್ಮ ಎಲ್ಲಾ ಸಂಪತ್ತನ್ನು ಕಳೆದುಕೊಂಡವರು ಈ ಪರಿಹಾರಗಳನ್ನು ಅನುಸರಿಸಿದರೆ, ಅವರು ಶುಕ್ರ ಯೋಗವನ್ನು ಮರಳಿ ಪಡೆದು ಅದ್ಭುತ ಜೀವನವನ್ನು ನಡೆಸುತ್ತಾರೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನಾವು ನೋಡಲಿರುವ ಪರಿಹಾರ ಅದುವೇ . ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ…
ಬೆಂಗಳೂರು: ರಾಜ್ಯದಲ್ಲಿ ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್ ನೀಡೋದಕ್ಕೂ ಅವಕಾಶವಿದೆ. ಎಸ್ಸಿ, ಎಸ್ಟಿ ಹಾಗೂ ಇತರೆ ವರ್ಗದವರಿಗೆ ಸರ್ಕಾರಿ ದರದಲ್ಲಿ ನಿವೇಶನ ನೀಡಲು ಕಾನೂನಿನಡಿ ಅವಕಾಶವಿದೆ. ಆ ಬಗ್ಗೆ ಮಾಹಿತಿ ಮುಂದೆ ಓದಿ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಂತ ನಿವೇಶನ ರಹಿತರು ಸ್ಥಳೀಯ ಆಡಳಿತಕ್ಕೆ ಅರ್ಜಿಯನ್ನು ಸಲ್ಲಿಸುವ ಮೂಲಕ ನಿವೇಶನ ಪಡೆಯಲು ಅವಕಾಶವಿದೆ. ಆದರೇ ಅದಕ್ಕೆ ಇಂತಿಷ್ಟೇ ಎನ್ನುವಂತ ಮಿತಿಯನ್ನು ಕೂಡ ವಿಧಿಸಲಾಗಿದೆ. ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ವಾಸದ ಮನೆಯನ್ನು ದಿನಾಂಕ 14-04-1998 ರೊಳಗೆ ನಿರ್ಮಿಸಿದ್ದರೆ ಮಾತ್ರ ಕಟ್ಟಡ ನಿರ್ಮಿಸಿದ ವಿಸ್ತೀರ್ಣದ ಭೂಮಿಯನ್ನು ಸಕ್ರಮೀಕರಣಕ್ಕಾಗಿ ಕಾಲಂ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ. ತಹಶೀಲ್ದಾರ್ ಕೈಪಿಡಿಯಲ್ಲಿನ ಮಾಹಿತಿ ಪ್ರಕಾರ, ನಗರ ಪ್ರದೇಶದಲ್ಲಿ 20×30 ಅಡಿ ವಿಸ್ತೀರ್ಣದ ನಿವೇಶನ ಜಮೀನಿಗೆ ಮಾತ್ರ ಹಕ್ಕು ಪತ್ರ ನೀಡಲು ತಹಶೀಲ್ದಾರರಿಗೆ ಅಧಿಕಾರ ಇರುತ್ತದೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ 30×40ರ ಅಳತೆಯ ನಿವೇಶನವನ್ನು ಮಂಜೂರು ಮಾಡಬಹುದಾಗಿದೆ. ತಹಶೀಲ್ದಾರರ ಕೈಪಿಡಿಯಲ್ಲಿ ಏನಿದೆ.? ಮಂಜೂರಾದ ನಿವೇಶನದ ಮೌಲ್ಯ ಷೆಡ್ಯೂಲ್‌ನಲ್ಲಿ ವಿಧಿಸಿರುವ ದರದಂತೆ…
ಬೆಂಗಳೂರು: ರಾಜ್ಯದಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಜಾನುವಾರುಗಳ ಮೇವಿಗಾಗಿ ಗೋಮಾಳ ಮೀಸಲಿಡುವುದು ಕಡ್ಡಾಯ. ಹಾಗಾದ್ರೇ ರಾಜ್ಯ ಸರ್ಕಾರದ ನಿಯಮಗಳಂತೆ ಉಚಿತ ಗೋಮಾಳವನ್ನು ಒದಗಿಸುವ ರೀತಿ ಹೇಗೆ ಎನ್ನುವ ಮಹತ್ವದ ಮಾಹಿತಿಯನ್ನು ಮುಂದೆ ಓದಿ. ಈ ಕುರಿತಂತೆ ಕರ್ನಾಟಕ ಭೂ ಕಂದಾಯ ನಿಯಮಗಳು 19666, 1974ರ ಮಾರ್ಚ್ 7ರ ವರೆಗೆ ತಿದ್ದುಪಾಟಾದ ರೀತ್ಯಾ ನಿಯಮಗಳ ಅಳವಡಿಕೆ ಅನುಸಾರ ಪ್ರತಿ ನೂರು ಜಾನುವಾರಗಳಿಗೆ ಹನ್ನೆರಡು ಹೆಕ್ಟೇರುಗಳಂತೆ ಪ್ರತಿಯೊಂದು ಗ್ರಾಮದ ಜಾನುವಾರಿಗೂ ಸರ್ಕಾರಿ ಭೂಮಿಯನ್ನು ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇಡತಕ್ಕದ್ದು ಎಂದಿದೆ. ಜಾನುವಾರುಗಳನ್ನು ಲೆಕ್ಕ ಹಾಕುವಾಗ ಆಡು, ಕುರಿ ಅಥವಾ ಕರು ಅಥವಾ ಹಸು ಅಥವಾ ಎಮ್ಮೆ ಇವುಗಳೊಂದನ್ನೂ ಒಂದೊಂದು ಜಾನುವಾರೆಂದು ಪರಿಗಣಿಸಬೇಕು ಎಂಬುದಾಗಿ ತಿಳಿಸಿದೆ. ಸಂಬಂಧ ಪಟ್ಟ ಗ್ರಾಮದಲ್ಲಿ ಅಥವಾ ಪಕ್ಷದ ಗ್ರಾಮದಲ್ಲಿ ಗ್ರಾಮದ ಜಾನುವಾರು ಮೇಯುವುದಕ್ಕೆ ಅನುಕೂಲವಾಗುವಂತೆ ಸಾಕಷ್ಟು ಅರಣ್ಯ ಪ್ರದೇಶವಿದ್ದರೇ, ಅದರ ವಿಸ್ತೀರ್ಣಕ್ಕನುಗುಣವಾಗಿ ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇದೆಯೆಂದು ಪ್ರದೇಶದ ವಿಸ್ತೀರಣವನ್ನು ಕಡಿಮೆ ಮಾಡಬಹುದಾಗಿದೆ. ಗ್ರಾಮದಲ್ಲಿ ಯಾವ ಗೋಮಾಳವೂ ಇಲ್ಲದಿದ್ದರೇ ಅಥವಾ ಇರುವ ಭೂಮಿಯನ್ನು (1)ನೇ…
ಹುಬ್ಬಳ್ಳಿ: ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಬೇಕಿದ್ದಂತ ಆಹಾರವನ್ನು ಅಕ್ರಮವಾಗಿ ಗೋದಾಮು ಒಂದರಲ್ಲಿ ಸಂಗ್ರಹಿಸಿದ್ದನ್ನು ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿದ್ದರು. ಈ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನುತೊಗೊಳಿಸಲಾಗಿದೆ. ಈ ಸಂಬಂಧ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ ಹಾಗೂ ಗುಪ್ತ ಮಾಹಿತಿ ಸಂಗ್ರಹಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಕಸಬಾ ಪೊಲೀಸ್ ಠಾಣೆಯ ಮಾಬು ಸಾಬ್ ವಾಲೀಕರ್, ಗೊಣೆಪ್ಪನವರ್ ಎನ್ನುವಂತ ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅಂದಹಾಗೇ ಹುಬ್ಬಳ್ಳಿಯ ಗಬ್ಬೂರಲ್ಲಿ ಗೋದಾಮಿನ ಮೇಲೆ ಅಂಗನವಾಡಿ ಮಕ್ಕಳ ಆಹಾರ ಅಕ್ರಮ ದಾಸ್ತಾನು ಸಂಬಂಧ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಂಗನವಾಡಿ ಮಕ್ಕಳಿಗೆ ಸರಬರಾಜು ಆಗಬೇಕಿದ್ದಂತ ಆಹಾರವನ್ನು ಅಕ್ರಮವಾಗಿ ಸಂಗ್ರಹಿಸಿದ್ದು ಪತ್ತೆಯಾಗಿತ್ತು. ಈ ಸಂಬಂಧ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಕೆಲವನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಈ ಪ್ರಕರಣದಲ್ಲೇ ಇಬ್ಬರು ಪಿಸಿಗಳನ್ನು ಕರ್ತವ್ಯ…
ಬೆಂಗಳೂರು: ದಲಿತರ ಹಣ ಅನ್ಯ ಉದ್ದೇಶಕ್ಕೆ ಬಳಕೆ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ. ಬೆಂಗಳೂರಿನ ಶಾಸಕರ ಭವನದಲ್ಲಿ ಇಂದು ಎಲ್ಲಾ ದಲಿತ ಸಂಘಟನೆಗಳ ಸಭೆಯ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ದಲಿತ ಸಂಘಟನೆಗಳು ಇದಕ್ಕಾಗಿ 10 ತಂಡಗಳನ್ನು ರಚಿಸಲಿವೆ. ಇನ್ನೊಂದು ವಾರದ ಒಳಗೆ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ ಎಂದು ಪ್ರಕಟಿಸಿದರು. ರಾಜ್ಯದೆಲ್ಲೆಡೆ ಪ್ರವಾಸದ ಬಳಿಕ ಬೆಂಗಳೂರಿನಲ್ಲಿ ಸಮುದಾಯದ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಈ ಸರಕಾರಕ್ಕೆ ತಕ್ಕ ಪಾಠ ಕಲಿಸಲು ತೀರ್ಮಾನ ಮಾಡಿದ್ದಾರೆ. ಕಾಯ್ದೆ ಉಲ್ಲಂಘನೆ ಸಂಬಂಧ ನಾವು ಇದನ್ನು ಕೋರ್ಟಿಗೆ ಒಯ್ಯಲಿದ್ದೇವೆ; ಸರಕಾರವನ್ನು ಕಟಕಟೆಗೆ ತಂದು ನಿಲ್ಲಿಸುವ ಕೆಲಸ ನಮ್ಮಿಂದ ಆಗಲಿದೆ ಎಂದು ತಿಳಿಸಿದರು. ದಲಿತರಿಗೆ ಆಗಿರುವ ಅನ್ಯಾಯವನ್ನು ಬಿಜೆಪಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಸರಿಪಡಿಸಲು ಮತ್ತು ನ್ಯಾಯ ದೊರಕಿಸಿಕೊಡಲು ರಾಜ್ಯಾದ್ಯಂತ ಹೋರಾಟ ಮಾಡಿದ್ದೇವೆ. ಈಗ ದಲಿತ ಮುಖಂಡರು, ಸಂಘಟನೆಗಳು ಸೇರಿದ್ದರಿಂದ ಹೆಚ್ಚಿನ…