Author: kannadanewsnow09

ಮಡಿಕೇರಿ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರ ಖಾತರಿ ಯೋಜನೆಯಾದ ‘ಯುವನಿಧಿ’ ಯೋಜನೆಯನ್ನು 2023 ರ ಡಿಸೆಂಬರ್, 26 ರಂದು ಚಾಲನೆ ನೀಡಲಾಗಿದೆ. 2023-24 ರಲ್ಲಿ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಉತ್ತೀರ್ಣರಾಗಿ 6 ತಿಂಗಳಾದರೂ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ http://sevasindhugs.karnataka.gov.in ಪೋರ್ಟಲ್ ಮೂಲಕ ಉಚಿತವಾಗಿ ‘ಯುವನಿಧಿ’ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪದವೀಧರರಿಗೆ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಪದವೀಧರರಿಗೆ ಪ್ರತಿ ತಿಂಗಳು ರೂ.3 ಸಾವಿರ ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ.1500 ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳವರೆಗೆ ನೀಡಲಾಗುತ್ತದೆ. ಈಗಾಗಲೇ ನೋಂದಾಯಿಸಿಕೊಂಡು ಹಣ ಪಡೆಯುತ್ತಿರುವ ಫಲಾನುಭವಿಗಳು, ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಮಾರ್ಚ್, ಏಪ್ರಿಲ್, ಮೇ ಮಾಹೆಯ ಸ್ವಯಂ ಘೋಷಣೆಯನ್ನು…

Read More

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಉಪ ವಿಭಾಗಾಧಿಕಾರಿ ಯತೀಶ್ ಆರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ದಂಪತಿಗಳಿಗೆ ಶುಭ ಕೋರಿದರು. ಇಂದು ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವಂತ ಹೊಸಕೆರೆ ಹಳ್ಳಿಯ ವಿ.ಲೆಗೆಸಿ ಕನ್ವಂನ್ಷನ್ ಸೆಂಟರ್ ನಲ್ಲಿ ಸಾಗರ ಉಪ ವಿಭಾಗಾಧಿಕಾರಿ ಯತೀಶ್ ಆರ್ ಹಾಗೂ ಡಾ.ಪ್ರಿಯಾಂಕಾ.ಎಂ.ಎಸ್ ಅವರ ಆರತಕ್ಷತೆ ಸಮಾರಂಭ ನಡೆಯಿತು. ಇಂದಿನ ಸಾಗರ ಉಪ ವಿಭಾಗಾಧಿಕಾರಿ ಅವರ ಆರತಕ್ಷತೆ ಸಮಾರಂಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಭಾಗಿಯಾಗಿ, ಯತೀಶ್ ಆರ್ ಹಾಗೂ ಡಾ.ಪ್ರಿಯಾಂಕಾ ಎಂ.ಎಸ್ ದಂಪತಿಗಳಿಗೆ ಶುಭ ಕೋರಿದರು. ಅಂದಹಾಗೇ ನಾಳೆ ಬೆಳಗ್ಗೆ 10.30ಕ್ಕೆ ಸಾಗರ ಉಪ ವಿಭಾಗಾಧಿಕಾರಿ ಯತೀಶ್ ಆರ್ ಹಾಗೂ ಡಾ.ಪ್ರಿಯಾಂಕಾ ಎಂ.ಎಸ್ ಅವರು ವಿವಾಹ ನೆರವೇರಲಿದೆ. ಅದಕ್ಕೂ ಪೂರ್ವಭಾವಿಯಾಗಿ ಇಂದು ರಿಸೆಪ್ಷನ್ ನಡೆಯಿತು. ವರದಿ: ವಸಂತ ಬಿ ಈಶ್ವರಗೆರೆ https://kannadanewsnow.com/kannada/morarji-desai-residential-school-extends-last-date-for-admission-to-class-6/ https://kannadanewsnow.com/kannada/good-news-for-street-vendors-daily-toll-collection-stopped/

Read More

ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ವ್ಯಾಪ್ತಿ ಬೀದಿ ಬದಿ ವ್ಯಾಪಾರಿಗಳ ಹಿತದೃಷ್ಠಿಯಿಂದ 2025ರ ಮಾರ್ಚ್ 10 ರಿಂದ ಬೀದಿ ಬದಿ ವ್ಯಾಪಾರಸ್ಥರಿಂದ ದಿನ ವಹಿ ಸುಂಕ ವಸೂಲಿ ಮಾಡುವುದನ್ನು ರದ್ದುಪಡಿಸಲಾಗಿರುತ್ತದೆ. ಇನ್ನೂ ಮುಂದೆ ಗುತ್ತಿಗೆದಾರರು ಮತ್ತು ಅನಧಿಕೃತ ವ್ಯಕ್ತಿಗಳು ಬೀದಿ ಬದಿ ವ್ಯಾಪಾರಸ್ಥರ ಬಳಿ ಬಂದು ಸುಂಕ ಕೇಳಿದ್ದಲ್ಲಿ ಕೂಡಲೇ ನಗರಸಭೆಗೆ ದೂರು ನೀಡಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ. https://kannadanewsnow.com/kannada/morarji-desai-residential-school-extends-last-date-for-admission-to-class-6/ https://kannadanewsnow.com/kannada/applications-invited-for-yuvanidhi-scheme-for-degree-diploma-students/

Read More

ಬಳ್ಳಾರಿ: ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ (ಆಂಗ್ಲ ಮಾಧ್ಯಮ) ಶಾಲೆ ಹಾಗೂ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ (ಸಿಬಿಎಸಿಇ) ಗಳ 2025-26 ನೇ ಶೈಕ್ಷಣಿಕ ಸಾಲಿಗೆ 6 ನೇ ತರಗತಿಗೆ ಉಚಿತ ಪ್ರವೇಶಕ್ಕಾಗಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ಮಾ.25 ರ ವರೆಗೆ ವಿಸ್ತರಿಸಲಾಗಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ ಅವರು ತಿಳಿಸಿದ್ದಾರೆ. ಆಸಕ್ತಿಯುಳ್ಳ ಐದನೇ ತರಗತಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳು ಸೇವಾಸಿಂಧು ಆನ್‌ಲೈನ್ ಪೋರ್ಟಲ್ https://sevasindhuservices.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಶಾಲೆಗಳ ವಿವರ: ಬಳ್ಳಾರಿ ತಾಲ್ಲೂಕಿನ ಕೊಳಗಲ್ಲಿನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ(ಸಿ.ಬಿ.ಎಸ್.ಸಿ)ಯ ಪ್ರಾಂಶುಪಾಲರ ಮೊ. 7353346069. ಸಂಡೂರು ತಾಲ್ಲೂಕಿನ ತೋರಣಗಲ್ಲು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರ ಮೊ.9480933730. ಕಂಪ್ಲಿ ತಾಲ್ಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರ ಮೊ.9113280239. ಕುರುಗೋಡು ತಾಲ್ಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರ…

Read More

ಧಾರವಾಡ : ಧಾರವಾಡ ಜಿಲ್ಲೆಯ ರೈತ ಮಕ್ಕಳಿಗಾಗಿ 2025-26 ನೇ ಸಾಲಿಗೆ 10 ತಿಂಗಳ (ಮೇ 02, 2025 ರಿಂದ ಫೆಬ್ರವರಿ 28, 2026 ರವರೆಗೆ) ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಮಹಿಳಾ-05 ಹಾಗೂ ಪುರುಷ–10, ಒಟ್ಟು–15 ಅಭ್ಯರ್ಥಿಗಳಿಗೆ ತೋಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಫಾರಂನ್ನು ಧಾರವಾಡ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯಲ್ಲಿ ಅಥವಾ ಇಲಾಖಾ ವೆಬ್‍ಸೈಟ್ https://horticulturedir.karnataka.gov.in ನಲ್ಲಿ ಮಾರ್ಚ್ 31, 2025 ರೊಳಗಾಗಿ ಡೌನಲೋಡ್ ಮಾಡಿಕೊಂಡು, ಅರ್ಜಿ ಶುಲ್ಕದ ಬಾಬತ್ತು ಸಾಮಾನ್ಯ ಅಭ್ಯರ್ಥಿಗಳಗೆ ರೂ. 30 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ. 15 ಮೌಲ್ಯದ ಇಂಡಿಯನ್ ಪೆÇೀಸ್ಟಲ್ ಆರ್ಡರ್ (ಐಪಿಓ) ಅಥವಾ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್‍ನ್ನು ತೋಟಗಾರಿಕೆ ಉಪನಿರ್ದೇಶಕರು (ಜಿಲ್ಲಾಪಂಚಾಯತ) ಧಾರವಾಡ ಅವರ ಹೆಸರಿನಲ್ಲಿ ಪಡೆದು, ಭರ್ತಿ ಮಾಡಿದ ಅಗತ್ಯ ದಾಖಲಾತಿಗಳೊಂದಿಗೆ ಏಪ್ರಿಲ್ 1, 2025 ರೊಳಗಾಗಿ ಧಾರವಾಡ ತೋಟಗಾರಿಕೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ…

Read More

ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಮಿಸ್ಟರಿಯ ನಂತ್ರ ನಟ ದರ್ಶನ್ ಮಾಧ್ಯಮಗಳಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಆದರೇ ಸೋಷಿಯಲ್ ಮೀಡಿಯಾದಲ್ಲಿ ಸಕ್ರೀಯವಾಗಿದ್ದಾರೆ. ಅವರು ಇನ್ಟಾಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಈಗ ಸಖತ್ ವೈರಲ್ ಆಗಿದೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆಯೋಪಾದಿಯ ತಿಳುವಳಿಕೆಯನ್ನು ಹೇಳಿದ್ದಾರೆ. ನಾಳೆಯಿಂದ ಮೈಸೂರಿನಲ್ಲಿ ನಟ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಮೈಸೂರಿನಲ್ಲಿ ಶೂಟಿಂಗ್ ಗೆ ಚಾಲನೆ ನೀಡಲಾಗುತ್ತಿದೆ. ಈ ಬೆನ್ನಲ್ಲೇ ಅಭಿಮಾನಿಗಳಿಗೆ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಖಡಕ್ ಸಂದೇಶವೊಂದನ್ನು ನೀಡಿದ್ದಾರೆ. ಈ ಬಗ್ಗೆ ತಮ್ಮ ಇನ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ನನ್ನ ಸೆಲೆಬ್ರಿಟಿಸ್ ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದರೆ, ಈ ವೀಡಿಯೊದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನು ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ನನ್ನ ಮನಸಿಗೆ ತುಂಬಾ…

Read More

ನವದೆಹಲಿ : ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋದ 5 ಜಿ ನೆಟ್ವರ್ಕ್, ಮಹಾ ಕುಂಭ ಮೇಳದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಓಕ್ಲಾ ಬಿಡುಗಡೆ ಮಾಡಿದ ವರದಿಯ ಪ್ರಕಾರ, ರಿಲಯನ್ಸ್ ಜಿಯೋದ ನೆಟ್ವರ್ಕ್ ವೇಗವು ಮಹಾಕುಂಭದಲ್ಲಿ ಅತ್ಯಂತ ವೇಗವಾಗಿತ್ತು, ಇದು 5 ಜಿ ನೆಟ್ವರ್ಕ್ ಲಭ್ಯತೆಯಲ್ಲಿ ಅದರ ಪ್ರತಿಸ್ಪರ್ಧಿ ಭಾರ್ತಿ ಏರ್ಟೆಲ್ ಅನ್ನು ಹಿಂದಿಕ್ಕಿದೆ. ಮಹಾಕುಂಭದಲ್ಲಿ 5 ಜಿ ನೆಟ್ವರ್ಕ್‌ನ ವೇಗವು 4 ಜಿಗಿಂತ ಸುಮಾರು 9 ಪಟ್ಟು ವೇಗವಾಗಿದೆ ಎಂದು ಓಕ್ಲಾ ತನ್ನ ವರದಿಯಲ್ಲಿ ಹೇಳಿದೆ. ಜನವರಿ ಆರಂಭದಿಂದ ಫೆಬ್ರವರಿ ಅಂತ್ಯದವರೆಗೆ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭ ಮೇಳ ನಡೆಯಿತು. 5ಜಿ ನೆಟ್ವರ್ಕ್ ಕಾರ್ಯಕ್ಷಮತೆಯಲ್ಲಿ ಜಿಯೋ ಅಗ್ರಸ್ಥಾನದಲ್ಲಿದೆ. ಜಿಯೋದ ಸರಾಸರಿ ಡೌನ್ಲೋಡ್ ವೇಗ 201.87 ಎಂಬಿಪಿಎಸ್ ಆಗಿದ್ದರೆ, ಏರ್ಟೆಲ್ 165.23 ಎಂಬಿಪಿಎಸ್ ಹೊಂದಿದೆ. ಮಹಾಕುಂಭದಲ್ಲಿ ರಿಲಯನ್ಸ್ ಜಿಯೋದ 5 ಜಿ ನೆಟ್ವರ್ಕ್‌ನ ಸರಾಸರಿ ಡೌನ್ಲೋಡ್ ವೇಗವು ಏರ್ಟೆಲ್‌ಗಿಂತ ಸುಮಾರು 36 ಎಂಬಿಪಿಎಸ್ ಹೆಚ್ಚಾಗಿದೆ. ಜಿಯೋ ಮತ್ತು ಏರ್ಟೆಲ್…

Read More

ಬೆಂಗಳೂರು : “ಭದ್ರಾ ಮೇಲ್ದಂಡೆ ಕಾಮಗಾರಿ ವೇಳೆ ರೈತರಿಗೆ ನೀಡಿರುವ ಭೂ ಸ್ವಾಧೀನ ಪರಿಹಾರ ತಾರತಮ್ಯವನ್ನು ಕಾನೂನು ಪ್ರಕಾರ ಸರಿಪಡಿಸಿ ಮುಂದಿನ ಆರು ತಿಂಗಳಿನಲ್ಲಿ ಕಾಮಗಾರಿ ಮುಗಿಸಿ ನೀರು ಕೊಡಬಹುದು ಎಂದು ಮಂತ್ರಿಗಳು, ಶಾಸಕರು ತಿಳಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ವಿಧಾನಸೌಧದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆಗಳ ಭೂಸ್ವಾಧೀನ ಸಮಸ್ಯೆ ನಿವಾರಿಸುವ ಕುರಿತು ಸಂತ್ರಸ್ತ ರೈತರೊಂದಿಗಿನ ಸಭೆಯ ನಂತರ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. “ಪರಿಹಾರ ತಾರತಮ್ಯ ಪರಿಹರಿಸುವುದಕ್ಕೆ ರೈತರು ಸಹ ಒಪ್ಪಿಕೊಂಡಿದ್ದಾರೆ. ಅವರಿಗೂ ಅನ್ಯಾಯವಾಗದ ರೀತಿಯಲ್ಲಿ ನಾವು ಗಮನ ಹರಿಸುತ್ತೇವೆ. ಆದಷ್ಟು ಬೇಗ ಈ ಯೋಜನೆ ಪೂರ್ಣಗೊಳಿಸಲು ನಾವು ಗಮನ ಹರಿಸುತ್ತೇವೆ” ಎಂದರು. “ಭೂ ಸ್ವಾಧೀನ ಪರಿಹಾರ ವಿಚಾರದಲ್ಲಿ ತಾರತಮ್ಯವಾಗಿರುವ ಕಾರಣಕ್ಕೆ ಭದ್ರಾ ಮೇಲ್ದಂಡೆ ಕಾಮಗಾರಿಗೆ ರೈತರು ತಡೆ ಒಡ್ಡಿದ್ದರು. ಏಕೆಂದರೆ ಹಳೇ ದರದ ಪ್ರಕಾರ ಕೆಲವರಿಗೆ ₹4 ಲಕ್ಷ ಪರಿಹಾರ ಸಿಕ್ಕಿದೆ.‌ ಅದೇ ಸರ್ವೇ ನಂಬರ್…

Read More

ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಶಾಲಾ ಗ್ರಂಥಾಲಯಗಳಿಗೆ 25 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದ 24,347 ಶಾಲೆಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ₹20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. https://kannadanewsnow.com/kannada/karnataka-tulu-sahitya-akademi-announces-datti-nidhi-pustakapuraskar-for-the-year-2022-2023/ https://kannadanewsnow.com/kannada/peoples-tax-money-in-congress-workers-pockets-mlas-powers-curtailed-r-ashoka/

Read More

ಬೆಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2022ನೇ ಹಾಗೂ 2023ನೇ ಸಾಲಿನ ಪುಸ್ತಕ ಪ್ರಶಸ್ತಿ ಹಾಗೂ ದತ್ತಿ ನಿಧಿ ಪುಸ್ತಕ ಪುರಸ್ಕಾರ ಪ್ರಕಟಗೊಂಡಿದೆ. ನಾಲ್ವರು ಲೇಖಕರಿಗೆ ವಾರ್ಷಿಕ ಪುಸ್ತಕ ಬಹುಮಾನ ಹಾಗೂ 6 ಲೇಖಕರಿಗೆ ವಾರ್ಷಿಕ ದತ್ತಿ ನಿಧಿ ಪುಸ್ತಕ ಬಹುಮಾನವನ್ನು ಪ್ರಕಟಿಸಲಾಗಿದೆ. 2022ನೇ ಸಾಲಿನ ತುಳು ಕವನ ವಿಭಾಗದ ಪುಸ್ತಕ ಬಹುಮಾನಕ್ಕೆ ರಾಜೇಶ್ ಶೆಟ್ಟಿ ದೋಟ ಅವರ ‘ಮುಗದಾರಗೆ’ ಕವನ ಸಂಕಲನ, 2023ನೇ ಸಾಲಿನ ತುಳು ಕವನ ವಿಭಾಗಕ್ಕೆ ರಘು ಇಡ್ಕಿದು ಅವರ ‘ಎನ್ನ ನಲಿಕೆ’ ಕವನ ಸಂಕಲನ, 2023ನೇ ಸಾಲಿನ ತುಳು ಕಾದಂಬರಿ ಬಹುಮಾನಕ್ಕೆ ರಾಜಶ್ರೀ ಟಿ. ರೈ ಪೆರ್ಲ ಅವರ ‘ಮುಸ್ರಾಲೋ ಪಟ್ರೊ’ ಕಾದಂಬರಿ, 2023ನೇ ಸಾಲಿನ ತುಳು ಅನುವಾದ ವಿಭಾಗದ ಪುಸ್ತಕ ಬಹುಮಾನಕ್ಕೆ ಕುಶಲಾಕ್ಷಿ ವಿ. ಕುಲಾಲ್ ಅವರ ‘ತಗೊರಿ ಮಿತ್ತ್ದ ಮಣ್ಣ್ ‘ ಅನುವಾದ ಕೃತಿ ಆಯ್ಕೆಯಾಗಿದೆ. ಈ ಪುಸ್ತಕ ಪ್ರಶಸ್ತಿಯು ₹25 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. 2022ನೇ…

Read More