Author: kannadanewsnow09

ಶಿವಮೊಗ್ಗ: ಅರಣ್ಯ ಇಲಾಖೆಯ ಪ್ರಯತ್ನದಿಂದ ಕಾಡಾನೆಗಳು ಸುರಕ್ಷಿತವಾಗಿ ಅಂಬ್ಳಿಗುಳ ಜಲಾಶಯದಾಟಿ ಹೋಗಿದೆ ಇಲ್ಲಿನ ಜನರು ಆತಂಕ ಪಡುವ ಅಗತ್ಯವಿಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಕಾಡಾನೆ ದಾಳಿಗೆ ತುತ್ತಾಗಿ ಬೆಳೆ ನಾಶ ಹೊಂದಿದ್ದಂತ ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸ್ಥಳದಲ್ಲೇ ರೈತರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವಿನ ಪರಿಹಾರ ವಿತರಿಸಿಸಿದರು. ಈ ಬಳಿಕ ಮಾತನಾಡಿದಂತ ಅವರು ಬೆಳೆ ನಷ್ಟಕ್ಕೆ ಪರಿಹಾರ ರೂಪದಲ್ಲಿ ಬಾಳೆ ಗಿಡ ಒಂದಕ್ಕೆ 200 ರೂ ಅಡಿಕೆ ಮತ್ತು ತೆಂಗಿನ ಗಿಡ ಹಾಳಾಗಿದ್ದರೆ ಗಿಡಕ್ಕೆ 800 ರೂ ಪರಿಹಾರ ಸರ್ಕಾರದಿಂದ ನೀಡಲಾಗುತ್ತದೆ ಎಷ್ಟು ಹಾನಿಯಾಗಿದೆ ಎಂಬುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ನಷ್ಟಕ್ಕೆ ಒಳಗಾದ ತೋಟಗಳನ್ನು ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಕಾಡಾನೆಗಳು ಹೆಚ್ಚಾಗಿ ಬಾಳೆ ಗಿಡಗಳನ್ನು ಹಾಳು ಮಾಡಿವೆ. ಅಡಿಕೆ ಮರಗಳಿಗೆ ಹೆಚ್ಚು ಹಾನಿಯಾಗಿಲ್ಲ. ಕಾಡಿನಂಚಿನಲ್ಲಿರುವ ತೋಟಗಳಿಗೆ ಸಹಜವಾಗಿ ಕಾಡುಪ್ರಾಣಿಗಳು…

Read More

ಬೆಂಗಳೂರು: ಮೂವರು ಹೆಣ್ಣುಮಕ್ಕಳು ಎನ್ನುವ ಕಾರಣಕ್ಕೆ ಒಂದೂವರೆ ತಿಂಗಳ ಹಸುಗೂಸನ್ನೇ ಬಿಟ್ಟು ಪತಿಯೊಬ್ಬ ಹೋಗಿರುವಂತ ಮನಕಲಕುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ ಯಲಹಂಕದಲ್ಲಿ ಲವ್ ಕಂ ಅರೆಂಜ್ ಮದುವೆಯಾಗಿದ್ದಂತ ಹರೀಶ್ ಎಂಬಾತನೇ ಈ ರೀತಿಯಾಗಿ ಬಿಟ್ಟು ಹೋಗಿರುವಂತ ಪತಿಯಾಗಿದ್ದಾರೆ. ಹರೀಶ್ ಪ್ರೀತಿಸಿ ವರಲಕ್ಷ್ಮೀ ಎಂಬಾಕೆಯನ್ನು ಮದುವೆಯಾಗಿದ್ದರು. ವರಲಕ್ಷ್ಮೀ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತ ಹರೀಶ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು.ಮೂರು ಹೆಣ್ಣುಮಕ್ಕಳನ್ನು ಸಾಕೋದಕ್ಕೆ ಆಗ್ತಿಲ್ಲ ಅಂತ ಪತ್ನಿ ವರಲಕ್ಷ್ಮೀ ಕಣ್ಣೀರು ಹಾಕುತ್ತಿದ್ದಾರೆ. ಪತಿ ತಮ್ಮನ್ನು ಬಿಟ್ಟು ಹೋಗಿರೋ ಬಗ್ಗೆ ಕಳೆದ ತಿಂಗಳು ಈಶಾನ್ಯ ಠಾಣೆಗೆ ದೂರು ನೀಡಿದ್ದಾರೆ. ಆದರೇ ಪತಿ ಹರೀಶ್ ಹುಡುಕಿ ಕರೆಸಿಲ್ಲ ಎಂಬುದಾಗಿ ಆರೋಪಿಸುತ್ತಿದ್ದಾರೆ. https://kannadanewsnow.com/kannada/deli-rodriguez-appointed-interim-president-of-venezuela/

Read More

ವೆನೆಜುವೆಲಾ ಹಂಗಾಮಿ ಅಧ್ಯಕ್ಷರಾಗಿ ಡೆಲ್ಲಿ ರೊಡ್ರಿಗಸ್ ನೇಮಕ ಮಾಡಲಾಗಿದೆ. ವೆನೆಜುವೆಲಾ ಸುಪ್ರೀಂ ಕೋರ್ಟ್ ನಿಂದ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಕ್ಯಾರಕಾಸ್‌ನಲ್ಲಿ ನಡೆದ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯಲ್ಲಿ ನಿಕೋಲಸ್ ಮಡುರೊ ಬಂಧನಕ್ಕೊಳಗಾದ ನಂತರ, ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಹಂಗಾಮಿ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಳ್ಳುವಂತೆ ವೆನೆಜುವೆಲಾದ ಸುಪ್ರೀಂ ಕೋರ್ಟ್ ಶನಿವಾರ ಆದೇಶಿಸಿದೆ. ನ್ಯಾಯಾಲಯವು ತನ್ನ ಸಾಂವಿಧಾನಿಕ ಕೊಠಡಿಯಿಂದ ಹೊರಡಿಸಲಾದ ತೀರ್ಪಿನಲ್ಲಿ, ಆಡಳಿತಾತ್ಮಕ ನಿರಂತರತೆ ಮತ್ತು ರಾಷ್ಟ್ರದ ಸಮಗ್ರ ರಕ್ಷಣೆಯನ್ನು ಖಾತರಿಪಡಿಸುವ ಸಲುವಾಗಿ ರೊಡ್ರಿಗಸ್ “ಬೊಲಿವೇರಿಯನ್ ಗಣರಾಜ್ಯದ ವೆನೆಜುವೆಲಾದ ಅಧ್ಯಕ್ಷರ ಹುದ್ದೆಯನ್ನು” ವಹಿಸಿಕೊಳ್ಳುತ್ತಾರೆ ಎಂದು ಹೇಳಿದೆ. “ರಾಜ್ಯದ ನಿರಂತರತೆ, ಸರ್ಕಾರದ ಆಡಳಿತ ಮತ್ತು ಗಣರಾಜ್ಯದ ಅಧ್ಯಕ್ಷರ ಬಲವಂತದ ಅನುಪಸ್ಥಿತಿಯಲ್ಲಿ ಸಾರ್ವಭೌಮತ್ವದ ರಕ್ಷಣೆಯನ್ನು ಖಾತರಿಪಡಿಸಲು ಅನ್ವಯವಾಗುವ ಕಾನೂನು ಚೌಕಟ್ಟನ್ನು ನಿರ್ಧರಿಸಲು” ಮತ್ತಷ್ಟು ಉದ್ದೇಶಪೂರ್ವಕವಾಗಿ ಉದ್ದೇಶಿಸಲಾಗಿದೆ ಎಂದು ನ್ಯಾಯಾಲಯವು ಸೇರಿಸಿತು. ಅಮೆರಿಕದ ಅಧಿಕಾರಿಗಳ ಪ್ರಕಾರ, ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅಮೆರಿಕದ ಮಿಲಿಟರಿ ಪಡೆಗಳು, ಗುಪ್ತಚರ ಸಂಸ್ಥೆಗಳು ಮತ್ತು ಕಾನೂನು ಜಾರಿ…

Read More

ಹನುಮಾನ್ ಚಾಲೀಸವು ಮಹಾಸ್ವಾಮೀ ಗೋಸ್ವಾಮಿ ತುಳಸಿದಾಸರ ಒಂದು ಮಹಾನ್ ಕಾವ್ಯಾತ್ಮಕ ಸಂಯೋಜನೆ ತುಳಸಿದಾಸರನ್ನು ವಾಲ್ಮೀಕಿ ಮಹರ್ಷಿಯ ಅವತಾರವೆಂದು ಹೇಳಲಾಗುತ್ತದೆ ಹರಿದ್ವಾರದಲ್ಲಿ ಕುಂಭಮೇಳ ನಡೆಯುವ ಸಂಧರ್ಭದಲ್ಲಿ ತುಳಸಿದಾಸರು ಸಮಾಧಿ ಸ್ಥಿತಿಯಲ್ಲಿ ಹನುಮಾನ್ ಚಾಲೀಸವನ್ನು ರಚಿಸಿದರೆಂದು ಹೇಳಲಾಗುತ್ತದೆ ಚಾಲೀಸ ಎಂದರೆ 40, ಹನುಮಾನ್ ಚಾಲೀಸದಲ್ಲಿ 40 ಪದ್ಯಗಳ ಮೂಲಕ ಹನುಮಂತನನ್ನು ವರ್ಣಿಸಲಾಗಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ,…

Read More

ಬೆಂಗಳೂರು : ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ ಇದ್ದಂತೆ .ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆಯನ್ನು ಕಲ್ಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತು ಇವರ ವತಿಯಿಂದ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಆಯೋಜಿಸಲಾಗಿದ್ದ 23 ನೇ ಚಿತ್ರ ಸಂತೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿಯಾಗಿ 8ನೇ ಬಾರಿ ಚಿತ್ರ ಸಂತೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಕಲಾವಿದರನ್ನು ಪ್ರೋತ್ಸಾಹಿಸುವುದು, ಅವರ ಚಿತ್ರಗಳ ಪ್ರದರ್ಶನ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಸೃಷ್ಟಿ ಮಾಡುವ ಕೆಲಸವನ್ನು ಚಿತ್ರಕಲಾ ಪರಿಷತ್ತು ಅರವತ್ತು ವರ್ಷಗಳಿಂದ ಮಾಡುತ್ತಾ ಬಂದಿದೆ. ಚಿತ್ರಸಂತೆ ತನ್ನ 23 ನೇ ವರ್ಷಕ್ಕೆ ಕಾಲಿಟ್ಟಿದೆ. ಸುಮಾರು 22 ರಾಜ್ಯಗಳು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಎಂದರು. ಪರಿಸರದ ರಕ್ಷಣೆ ಇಂದಿನ ಅಗತ್ಯ ಪ್ರತಿ ಜಿಲ್ಲೆಯಲ್ಲಿಯೂ ಸಾಧಕರ ವಸ್ತುಸಂಗ್ರಹಾಲಯಕ್ಕೆ ಬೇಡಿಕೆಯಿದ್ದು ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ ಎಂದರು. ಈ ಬಾರಿಯ ಚಿತ್ರ ಸಂತೆಯ ಧ್ಯೇಯ…

Read More

ನವದೆಹಲಿ: ಗ್ರೇಟರ್ ನೋಯ್ಡಾದಲ್ಲಿರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (GIMS) ದೇಶದ ಮೊದಲ ಕೃತಕ ಬುದ್ಧಿಮತ್ತೆ ಚಿಕಿತ್ಸಾಲಯವನ್ನು ಉದ್ಘಾಟಿಸಲಾಗಿದೆ. ಇದು ದೇಶದ ಮೊದಲ ಸರ್ಕಾರಿ ಆಧಾರಿತ AI ಚಿಕಿತ್ಸಾಲಯವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ AI ಅನ್ನು ಸಂಯೋಜಿಸುವಲ್ಲಿ ಇದು ಒಂದು ಪ್ರಮುಖ ಮತ್ತು ಮಹತ್ವದ ಹೆಜ್ಜೆ ಎಂದು ತಜ್ಞರು ಪರಿಗಣಿಸಿದ್ದಾರೆ. ವರದಿಯ ಪ್ರಕಾರ, ಕ್ಯಾನ್ಸರ್ ಮತ್ತು ಹೃದಯ, ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗಳಂತಹ ಗಂಭೀರ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಈ ಚಿಕಿತ್ಸಾಲಯವು ಕೃತಕ ಬುದ್ಧಿಮತ್ತೆ ಮತ್ತು ಜೆನೆಟಿಕ್ ಸ್ಕ್ರೀನಿಂಗ್ ಅನ್ನು ಬಳಸುತ್ತದೆ. ಇದು ರಕ್ತ ಪರೀಕ್ಷೆಗಳನ್ನು ವಿಶ್ಲೇಷಿಸುತ್ತದೆ, ಸ್ಕ್ಯಾನ್‌ಗಳನ್ನು ನಡೆಸುತ್ತದೆ ಮತ್ತು ರೋಗಗಳನ್ನು ಊಹಿಸಲು ಮತ್ತು ಚೇತರಿಕೆಯನ್ನು ನಿರ್ಣಯಿಸಲು ಜೆನೆಟಿಕ್ ಡೇಟಾವನ್ನು ಬಳಸುತ್ತದೆ. GIMS ನ ನಿರ್ದೇಶಕ ಬ್ರಿಗೇಡಿಯರ್ (ಡಾ.) ರಾಕೇಶ್ ಕುಮಾರ್ ಗುಪ್ತಾ ಮಾತನಾಡಿ ರಕ್ತ ಪರೀಕ್ಷೆಗಳು, ಇಮೇಜಿಂಗ್ ಸ್ಕ್ಯಾನ್‌ಗಳು ಮತ್ತು ಇತರ ಕ್ಲಿನಿಕಲ್ ಡೇಟಾ ಸೇರಿದಂತೆ ರೋಗನಿರ್ಣಯದ ಇನ್‌ಪುಟ್‌ಗಳನ್ನು ವಿಶ್ಲೇಷಿಸಲು ಕ್ಲಿನಿಕ್ ಜೆನೆಟಿಕ್ ಸ್ಕ್ರೀನಿಂಗ್…

Read More

ಮಂಗಳೂರು: ಬಂದರು ನಗರಿ ಮಂಗಳೂರಿನ ಪ್ರಸಿದ್ಧ ಗರೋಡಿ ಕ್ಷೇತ್ರದ ಉತ್ಸವ ಸಂದರ್ಭದಲ್ಲಿ ‘ಕೋಳಿ ಅಂಕ’ ನಡೆಸುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ‘ಕೋಳಿ ಅಂಕ’ವು ಉತ್ಸವ ಸಂದರ್ಭದ ಮೋಜಿನ ಆಟವಾಗಿದೆಯೇ ಹೊರತು ಜಾತ್ರಾ ಸಂಪ್ರದಾಯದ ಭಾಗ ಅಲ್ಲ ಎಂದು ಆಸ್ತಿಕರ ಹೇಳಿಕೊಂಡರೆ, ಇನ್ನೂ ಕೆಲವರು ಈ ಸ್ಪರ್ಧೆಗೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ. ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಾಕಾರಿ ಪೋಸ್ಟ್’ಗಳು ಹರಿದಾಡುತ್ತಿವೆ ಎಂದು ಆರೋಪಿಸಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯೂ ಆದ ಬಿಲ್ಲವ ಸಮುದಾಯದ ಮುಖಂಡ ಪದ್ಮರಾಜ್ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರನ್ನಾಧರಿಸಿ ಮಂಗಳೂರಿನ ಕಂಕನಾಡಿ ಠಾಣೆ ಪೊಲೀಸರು FIR ದಾಖಲಿಸಿದ್ದಾರೆ. ಏನಿದು ಆರೋಪ? ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ “Kalyug Kalki Post” ಎಂಬ ಶೀರ್ಷಿಕೆಯಡಿ ಒಂದು ದುರುದ್ದೇಶಪೂರಿತ ಹಾಗೂ ಪ್ರಚೋದನಾತ್ಮಕ ಪೋಸ್ಟ್ ಹರಿದಾಡುತ್ತಿದೆ. ಈ ಪೋಸ್ಟ್‌ನಲ್ಲಿರುವ ವಿಷಯವು ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹದ್ದಾಗಿದ್ದು, ಸಮಾಜದಲ್ಲಿ…

Read More

ಶಿವಮೊಗ್ಗ : ದೂರುದಾರರ ಉಳಿತಾಯ ಖಾತೆಯಿಂದ ಕಡಿತವಾದ ಹಣವನ್ನು ಪರಿಶೀಲಿಸಿ ಜಮೆ ಮಾಡದೇ ಸೇವಾ ನ್ಯೂನ್ಯತೆ ಎಸಗಿದ ಕೆನರಾ ಬ್ಯಾಂಕಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ. ದೂರುದಾರ ಆದೇಶ ಕೆ.ಎನ್. ಪಿಡ್ಬ್ಯೂಡಿ ವಸತಿಗೃಹ, ಬಾಲರಾಜ್ ರಸ್ತೆ, ಶಿವಮೊಗ್ಗ, ಇವರು ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ದುರ್ಗಿಗುಡಿ ಶಾಖೆ, ಶಿವಮೊಗ್ಗ ಮತ್ತು ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ಬೆಂಗಳೂರು ಇವರ ವಿರುದ್ಧ ದೂರನ್ನು ಸಲ್ಲಿಸಿ, ಎದುರಾರರ ಬ್ಯಾಂಕಿನಲ್ಲಿ ತಾವು ಉಳಿತಾಯ ಖಾತೆಯನ್ನು ಹೊಂದಿದ್ದು, ಪೇಟಿಎಂ ಮತ್ತು ಗೂಗಲ್ ಪೇ ಯನ್ನು ಅಳವಡಿಸಿಕೊಂಡು ಉಪಯೋಗಿಸುತ್ತಿರಲಾಗುತ್ತದೆ. ದಿ:04/05/2024ರಂದು ಬೆಳಿಗ್ಗೆ 8-00 ಗಂಟೆಗೆ ಕೆನರಾ ಬ್ಯಾಂಕ್‌ನಿಂದ 02 ಎಸ್‌ಎಂಎಸ್ ಬಂದಿದ್ದು 1ನೇ ಎಸ್‌ಎಂಎಸ್ ನಲ್ಲಿ ರೂ.5,00,000/-(ಐದು ಲಕ್ಷ) ಮತ್ತು 2ನೇ ಎಸ್‌ಎಂಎಸ್ ನಲ್ಲಿ ರೂ.50,000/-(ಐವತ್ತು ಸಾವಿರ)ಗಳು ಕಡಿತವಾಗಿದ್ದು, ಈ ವಿಷಯವನ್ನು 1ನೇ ಎದುರುದಾರರ ಬಳಿ ತಿಳಿಸಿದ್ದು, ಎದುರುದಾರರು ದೂರುದಾರರ ಖಾತೆಯಿಂದ ಹಣ ಕಡಿತವಾಗಿರುವುದನ್ನು ಖಾತರಿಪಡಿಸಿರುತ್ತಾರೆ. ತದನಂತರ, ದೂರುದಾರರು ಕ್ರೈಂ ಪೋಲೀಸ್ ಠಾಣೆ ಶಿವಮೊಗ್ಗ…

Read More

ಬೆಂಗಳೂರು: ಸಮ್ರಗ ಕರ್ನಾಟಕ ಪರಿಕಲ್ಪನೆ ಸಾಕಾರ ಆಗಲು ಪ್ರತಿ ಜಿಲ್ಲೆ, ಗ್ರಾಮಗಳ ಅಭಿವೃದ್ಧಿ ಆಗಬೇಕು. ಯಾವಾಗ ಉತ್ತರ ಕರ್ನಾಟಕ ಭಾಗದ ಜನರ ತಲಾ ಆದಾಯ ರಾಜ್ಯದ ತಲಾ ಆದಾಯಕ್ಕೆ ಸರಾಸರಿ ಬರುತ್ತದೆ ಆಗ ಅಭಿವೃದ್ಧಿ ಆದಂತೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ಬೆಂಗಳೂರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ಉತ್ತರ ಕರ್ನಾಟಕ ಭಾಗದ ಸಾಧಕರಿಗೆ ಏರ್ಪಡಿಸಿದ್ದ ವಿಕೆ ಎಕ್ಸಲೆನ್ಸ್ ಆಂಡ್ ಆನರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದರು. ವಿಜಯ ಕರ್ನಾಟಕ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ. ಯಾರೂ ಕೂಡ ಪ್ರಶಸ್ತಿ ಗಾಗಿ ಸಾಧನೆ ಮಾಡಿಲ್ಲ ಎನಿಸುತ್ತದೆ. ಬದುಕಿನಲ್ಲಿ ಏನಾದರೂ ಸಾಧಿಸಬೆಕು ಅದರಿಂದ ನಮ್ಮ ರಾಜ್ಯ ಸಮಾಜ ಮುಂದೆ ಬರಬೇಕು ಅಂತ ಸಾಧನೆ ಮಾಡಿದ್ದಿರಿ, ನೀವು ಸಿವಿಲ್ ಎಂಜನೀಯರಿಂಗ್ , ಆರ್ಕಿಟೆಕ್ ನಲ್ಲಿ ಸಾಧನೆ ಮಾಡಿದ್ದೀರಿ, ಬೆಂಗಳೂರಿನಲ್ಲಿ ಇದ್ದು ಸಾಧನೆ ಮಾಡುವುದಕ್ಕಿಂತ ಉತ್ತರ ಕರ್ನಾಟಕದಲ್ಲಿ ಸಾಧನೆ…

Read More

ಬೆಂಗಳೂರು: ಸರ್ಕಾರದ ಆಡಳಿತದಲ್ಲಿ ಪ್ರಮುಖ ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ವಿಮಾ ಭದ್ರತೆ ಒದಗಿವುಸು ಅತಿ ಮುಖ್ಯ ಮತ್ತು ಅತ್ಯಂತ ಜವಾಬ್ದಾರಿ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಸ್ನೇಹಿ ಕ್ರಮ ಕೈಗೊಳ್ಳಲು *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ‌. ಶರಣಪ್ರಕಾಶ್ ಆರ್. ಪಾಟೀಲ್* ಮುಂದಾಗಿದ್ದಾರೆ. ತಮ್ಮ ಇಲಾಖೆ ವ್ಯಾಪ್ತಿಯ ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮತ್ತು ಕುಟುಂಬ ಸದಸ್ಯರಿಗೆ ವಿಮಾ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಕಳೆದ ತಿಂಗಳು ರಸ್ತೆ ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಕುಟುಂಬ ಸದಸ್ಯರು ವಿಮಾ ಹಣ ಪಡೆಯಲು ತಾಂತ್ರಿಕ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು ತಮ್ಮ ಇಲಾಖೆಯ ಅಡಿಯಲ್ಲಿರುವ ಎಲ್ಲಾ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮಾಜಿಕ ಭದ್ರತಾ ಕ್ರಮವಾಗಿ ಕಡ್ಡಾಯವಾಗಿ ಟರ್ಮ್‌ ಇನ್ಶೂರೆನ್ಸ್‌ ಪಡೆಯಬೇಕೆಂದು ಸೂಚಿಸಿದ್ದಾರೆ. ಶನಿವಾರ ನಡೆದ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ…

Read More