Author: kannadanewsnow09

ಬೆಂಗಳೂರು: ರಾಜ್ಯದ ರಾಷ್ಟ್ರೀಯ ಆರೋಗ್ಯ ಯೋಜನೆಯ ಸಿಬ್ಬಂದಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಗುತ್ತಿಗೆ ವೈದ್ಯರು, ಸ್ಟಾಫ್ ನರ್ಸ್ ವೇತನವನ್ನು ಹೆಚ್ಚಳ ಮಾಡಿ ಆದೇಶಿಸಿದೆ. ಇಂದು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಆರೋಗ್ಯ ಸೇವೆ ಒದಗಿಸುವಲ್ಲಿ ತಜ್ಞ ವೈದ್ಯರ ಸೇವೆ ಮುಖ್ಯವಾದದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಮಹತ್ವದ ತೀರ್ಮಾನ ಎನ್ನುವಂತೆ ವೇತನ ಹೆಚ್ಚಳ ಮಾಡಲಾಗಿದೆ ಎಂದಿದೆ. ಎನ್ ಹೆಚ್ ಎಂ ಅಡಿ ನೇಮಕವಾದಂತ ಗುತ್ತಿಗೆ ವೈದ್ಯರು, ಶುಶ್ರೂಷಕರ ವೇತನವನ್ನು ಕೇಂದ್ರದ ಅನುಮತಿ ಪಡೆದು ಶೇ.25ರಿಂದ 50ರಷಅಟು ಹೆಚ್ಚಳ ಮಾಡಲಾಗಿದೆ ಎಂದು ಹೇಳಿದೆ. ಎಂಬಿಬಿಎಸ್ ವೈದ್ಯರ ವೇತನವನ್ನು ರೂ.45,000ದಿಂದ ರೂ.75,000ಕ್ಕೆ ಹೆಚ್ಚಳ ಮಾಡಲಾಗಿದೆ. 1,10,000 ಇದ್ದಂತ ತಜ್ಞ ವೈದ್ಯರ ವೇತನವನ್ನು ರೂ.1,40,000 ಮಾಡಲಾಗಿದೆ. ನರ್ಸ್ ವೇತನವನ್ನು ರೂ.18,000ದಿಂದ ರೂ.22,000ಕ್ಕೆ ಹೆಚ್ಚಳ ಮಾಡಲಾಗಿದೆ. ಪ್ರಸ್ತಾಪಿತ ಪರಿಷ್ಕರಿಸಲ್ಪಟ್ಟ ವೇತನವು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುತ್ತದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಾಲಿ ಪಡೆಯುತ್ತಿರುವ ವೇತನ ಶ್ರೇಣಿಯಲ್ಲಿಯೇ ಮಂದುವರಿಯುತ್ತಾರೆ. ಈ ನೌಕರರು ರಾಜೀನಾಮೆ ಸಲ್ಲಿಸಿ, ಹೊಸ…

Read More

ಬೆಂಗಳೂರು: ನಗರದಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಇರುವಂತ ಶೌಚಾಲಯ ಬಳಕೆಗೆ ಶುಲ್ಕ ಪಾವತಿಯಿಲ್ಲ ಎಂಬುದಾಗಿ ಬಿಎಂಆರ್ ಸಿಎಲ್ ಸ್ಪಷ್ಟ ಪಡಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಮೆಟ್ರೋ ರೈಲು ನಿಯಮಿತವು, ಮೆಟ್ರೋ ಸ್ವೈಪ್‌ ಗೇಟ್‌ಗಿಂತ ಹೊರಗೆ ಇರುವ ಶೌಚಾಲಯಗಳನ್ನು ಬಳಕೆ ಮಾಡುವವರಿಗೆ ಕನಿಷ್ಠ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿತ್ತು. ಈಗ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. https://twitter.com/KarnatakaVarthe/status/1928084694429569338 https://kannadanewsnow.com/kannada/in-the-financial-year-of-2025-the-amount-of-bank-fraud-has-increased-threefold-to-reach-36014-crores-rbi/ https://kannadanewsnow.com/kannada/from-now-on-a-break-on-communal-violence-in-karnataka-state-government-orders-the-formation-of-a-special-task-force/

Read More

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ( Reserve Bank of India-RBI) ಬ್ಯಾಂಕ್ ವಂಚನೆಗಳಲ್ಲಿ ಗಮನಾರ್ಹ ಏರಿಕೆಯನ್ನು ವರದಿ ಮಾಡಿದೆ. ಮಾರ್ಚ್ 2025ಕ್ಕೆ ಕೊನೆಗೊಂಡ ವರ್ಷದಲ್ಲಿ ಈ ಮೊತ್ತವು ಶೇ. 194 ರಷ್ಟು ಅಂದರೆ ಸುಮಾರು ಮೂರು ಪಟ್ಟು ಹೆಚ್ಚಾಗಿ 36,014 ಕೋಟಿ ರೂ.ಗಳಿಗೆ ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ ರೂ. 12,230 ಕೋಟಿಯಷ್ಟು ಹೆಚ್ಚಾದಂತೆ ಆಗಿದೆ. ವಂಚನೆ ಪ್ರಕರಣಗಳ ಸಂಖ್ಯೆ 2024-25ರಲ್ಲಿ ಹಿಂದಿನ ವರ್ಷಕ್ಕಿಂತ 36,060 ರಿಂದ 23,953 ಕ್ಕೆ ಇಳಿದಿದೆ ಮತ್ತು ಖಾಸಗಿ ಬ್ಯಾಂಕುಗಳು ಪ್ರಕರಣಗಳಲ್ಲಿ ಶೇ. 59.42 ರಷ್ಟಿವೆ ಎಂದು ಆರ್ ಬಿ ಐ ಮಾಹಿತಿ ನೀಡಿದೆ. ಇದರಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ರೂ. 25,667 ಕೋಟಿ ಮೌಲ್ಯದ ವಂಚನೆಗಳು ವರದಿಯಾಗಿವೆ. ಇದು ಒಂದು ವರ್ಷದ ಹಿಂದೆ ರೂ. 9,254 ಕೋಟಿಗಿಂತ ದೊಡ್ಡ ಏರಿಕೆಯಾಗಿದೆ ಎಂದು 2024-25 ರ RBI ನ ವಾರ್ಷಿಕ ವರದಿ ತಿಳಿಸಿದೆ. ಕುತೂಹಲಕಾರಿಯಾಗಿ, ಖಾಸಗಿ ಬ್ಯಾಂಕುಗಳು 14,233 ವಂಚನೆಗಳನ್ನು (ಕಳೆದ ವರ್ಷ 24,207…

Read More

ಬೆಂಗಳೂರು: ರಾಜ್ಯದಲ್ಲಿ ಮುಂದಿನ 3 ತಿಂಗಳವರೆಗೆ ಆಂಟಿ ರೇಬಿಸ್ ಲಸಿಕೆ ಮತ್ತು ರೇಬೀಸ್ ಇಮ್ಯುನೊಗ್ಲೋಬ್ಯುಲಿನ್ ಔಷಧಿಯ ಕೊರತೆಯಿಲ್ಲ ಎಂಬುದಾಗಿ ಸರ್ಕಾರ ಸ್ಪಷ್ಟ ಪಡಿಸಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ‘ರೇಬೀಸ್’ ಅನ್ನು ‘ಅಧಿಸೂಚಿತ ರೋಗ'(‘notifiable disease) ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಪ್ರತಿ ತಿಂಗಳು ಐಎಚ್‌ಐಪಿ (ಇಂಟಿಗ್ರೇಟೆಡ್ ಹೆಲ್ತ್‌ ಇನ್ಸಾರ್ಮೇಶನ್ ಪ್ಲಾಟಾರ್ಮ್) ನಲ್ಲಿ ಸುಮಾರು 40,000 ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತದೆ, ಈ ಎಲ್ಲಾ ಪುಕರಣಗಳಿಗೆ ಮಾರ್ಗಸೂಚಿಗಳ ಪ್ರಕಾರ ಜೀವ ಉಳಿಸುವ ಆಂಟಿ ರೇಬಿಸ್ ಲಸಿಕೆ ಮತ್ತು ರೇಬೀಸ್ ಇಮ್ಯುನೊಗ್ಲೋಬ್ಯುಲಿನ್ ಒದಗಿಸುವುದು ಕಷ್ಟಸಾದ್ಯವಾಗಿರುತ್ತದೆ ಎಂದಿದೆ. ರಾಜ್ಯದ ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ಎಲ್ಲಾ ಔಷಧಿಗಳು ಮತ್ತು ಬಳಕೆಯ ವಸ್ತುಗಳನ್ನು ಒದಗಿಸಲು ಕೆಎಸ್‌ಎಂಎಸ್‌ಎಲ್ ನೋಡಲ್ ಏಜೆನ್ಸಿಯಾಗಿದೆ. ಎಆರ್‌ವಿ ಮತ್ತು ರೇಬೀಸ್ ಇಮ್ಯುನೊಗ್ಲೋಬುಲಿನ್ ರಾಜ್ಯದಲ್ಲಿ (“Essential Drug List ) ನ ಪಟ್ಟಿಯಲ್ಲಿ ಇರುತ್ತವೆ ಎಂದು ಹೇಳಿದೆ. ರಾಜ್ಯದ “ಔಷಧ’ ತಂತ್ರಾಂಶದ ಮಾಹಿತಿಯ ಪ್ರಕಾರ, ಪ್ರಸ್ತುತ ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಕರಾವಳಿ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವಂತ ಕೋಮು ಗಲಭೆ ತಡೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಕೋಮು ಗಲಭೆ ನಿಯಂತ್ರಣ ಕ್ರಮವಾಗಿ ಡಿಐಜಿ, ಎಸ್ಪಿ ವರ್ಗಾವಣೆ ಮಾಡಿದ್ದು, ಆ ಸ್ಥಳಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೇಮಿಸಿದೆ. ಈ ಸಂಬಂಧ ಆದೇಶ ಮಾಡಿರುವಂತ ರಾಜ್ಯ ಸರ್ಕಾರವು, 2010ನೇ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಇಂಟಲಿಜೆನ್ಸಿ ಡಿಐಜಿಯಿಂದ ಮಂಗಳೂರು ಸಿಟಿ ಡಿಐಜಿಯಾಗಿ ವರ್ಗಾವಣೆ ಮಾಡಿ ಆದೇಶಿಸಿದೆ. ಈ ಹುದ್ದೆಯಲ್ಲಿದ್ದಂತ ಅನುಪಮ್ ಅಗರ್ವಾಲ್ ಅವರನ್ನು ಎತ್ತಂಗಡಿ ಮಾಡಿದೆ. ಇನ್ನೂ ಉಡುಪಿ ಎಸ್ಪಿಯಾಗಿದ್ದಂತ 2014ರ ಐಪಿಎಸ್ ಅಧಿಕಾರಿ ಡಾ.ಕೆ ಅರುಣ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿದೆ. ಈ ಹುದ್ದೆಯಲ್ಲಿದ್ದಂತ ಯತೀಶ್ ಎನ್ ಅವರನ್ನು ವರ್ಗಾವಣೆ ಮಾಡಿದೆ. ಇಂಟಲಿಜೆನ್ಸಿಯ ಎಸ್ಪಿಯಾಗಿದ್ದಂತ ಹರಿರಾಮ್ ಶಂಕರ್ ಅವರನ್ನು ಉಡುಪಿ ಎಸ್ಪಿಯಾಗಿ ನೇಮಕ ಮಾಡಿದೆ. ಈ ಹುದ್ದೆಯಲ್ಲಿದ್ದಂತ ಅರುಣ್ ಕೆ ಅವರನ್ನು ಮಂಗಳೂರು ಎಸ್ಪಿಯಾಗಿ…

Read More

ಮುಂಬೈ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನೆರೆಯ ಥಾಣೆ ನಿವಾಸಿಯೊಬ್ಬರನ್ನು ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಹೆಸರು ಬಹಿರಂಗಪಡಿಸದ ಆರೋಪಿ ಮುಂಬೈನ ಪ್ರಮುಖ ಸಂಘಟನೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು ಮತ್ತು ಮಹಿಳೆಯಂತೆ ನಟಿಸಿ ಫೇಸ್‌ಬುಕ್‌ನಲ್ಲಿ ಅವನೊಂದಿಗೆ ಸ್ನೇಹ ಬೆಳೆಸಿದ ಪಾಕಿಸ್ತಾನಿ ಏಜೆಂಟ್‌ನಿಂದ “ಹನಿ-ಟ್ರ್ಯಾಪ್” ಮಾಡಲ್ಪಟ್ಟನು ಎಂದು ಅಧಿಕಾರಿ ಹೇಳಿದರು. ನವೆಂಬರ್ 2024 ರಿಂದ ಮಾರ್ಚ್ 2025 ರವರೆಗೆ ವಾಟ್ಸಾಪ್ ಮೂಲಕ ‘ಪಾಕಿಸ್ತಾನ ಗುಪ್ತಚರ ಆಪರೇಟಿವ್’ ಜೊತೆ ಪ್ರಮುಖ ಸ್ಥಾಪನೆಯ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಅವನು ಹಂಚಿಕೊಂಡಿದ್ದಾನೆ ಎಂದು ಅಧಿಕಾರಿ ಹೇಳಿದರು. ಸುಳಿವು ಆಧರಿಸಿ, ಎಟಿಎಸ್‌ನ ಥಾಣೆ ಘಟಕದ ಅಧಿಕಾರಿಗಳು ಆ ವ್ಯಕ್ತಿಯನ್ನು ಇತರ ಇಬ್ಬರೊಂದಿಗೆ ವಶಕ್ಕೆ ಪಡೆದರು. ಬೇಹುಗಾರಿಕೆಗೆ ಸಂಬಂಧಿಸಿದ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3 ಮತ್ತು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 61 (2) (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಾಥಮಿಕ ವಿಚಾರಣೆಯ ನಂತರ ಆ ವ್ಯಕ್ತಿಯನ್ನು…

Read More

ಬೆಂಗಳೂರು: ಒಂದೆಡೆ ಮಂಗಳೂರಿನಲ್ಲಿ ಕೋಮು ದಳ್ಳುರಿ ಬಿಸಿಯಾಗಿದ್ದರೇ, ಮತ್ತೊಂದೆಡೆ ಅದರ ನಿಯಂತ್ರಣ ಕ್ರಮವಾಗಿ ಕರವಾಳಿ ಜಿಲ್ಲೆಯ ಹಿರಿಯ ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ಈ ಮೂಲಕ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಇಂದು ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಅನುಪಮ್ ಅಗರವಾಲ್, ಐಪಿಎಸ್ (2008) ಮಂಗಳೂರು ನಗರದ ಉಪ ನಿರೀಕ್ಷಕ ಮತ್ತು ಪೊಲೀಸ್ ಆಯುಕ್ತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಉಪ ನಿರೀಕ್ಷಕ ಜನರಲ್ ಆಫ್ ಪೊಲೀಸ್, ಆರ್ಥಿಕ ಅಪರಾಧಗಳು, ಅಪರಾಧ ತನಿಖಾ ಇಲಾಖೆ,  ಸಿ. ವಂಶಿ ಕೃಷ್ಣ, ಐಪಿಎಸ್ ಅವರನ್ನು ಏಕಕಾಲೀನ ಆರೋಪದಿಂದ ಮುಕ್ತಗೊಳಿಸಲಾಗಿದೆ. ಬೊರಸೆ ಭೂಷಣ್ ಗುಲಾಬ್ರಾವ್, ಐಪಿಎಸ್ (2009) ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ, ಅಪರಾಧ ತನಿಖಾ ಇಲಾಖೆಯ ಉಪ ನಿರೀಕ್ಷಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಬೆಳಗಾವಿ ನಗರದ ಉಪ ನಿರೀಕ್ಷಕ…

Read More

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಆರ್ಭಟ ಮುಂದುವರೆದಿದೆ. ಇಂದು ಕೋವಿಡ್ ನಿಂದಾಗಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ರಾಜ್ಯಾಧ್ಯಂತ 42 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ದೃಢಪಟ್ಟಿದೆ. ಇಂದು ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 42 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 253ಕ್ಕೆ ಏರಿಕೆಯಾಗಿದೆ. 19 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೇ ಕೋವಿಡ್ ಸೋಂಕಿನಿಂದ ಒಬ್ಬರು ಸಾವನ್ನಪ್ಪಿರುವುದಾಗಿ ತಿಳಿಸಿದೆ. ಕಳೆದ 24 ಗಂಟೆಯಲ್ಲಿ ಆರ್ ಟಿ ಪಿಸಿಆರ್ ಮೂಲಕ 463, ರಾಟ್ ಮೂಲಕ 50 ಸೇರಿದಂತೆ 513 ಜನರನ್ನು ಕೊರೋನಾ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 42 ಜನರಿಗೆ ಪಾಸಿಟಿವ್ ಬಂದಿದೆ. ಸದ್ಯ 42 ಆಕ್ಟೀವ್ ಕೇಸ್ ಇದ್ದಾವೆ. 33 ಮಂದಿ ಹೋಂ ಐಸೋಲೇಷನ್ ನಲ್ಲಿ ಇದ್ದರೇ, ಮೂವರು ಸರ್ಕಾರಿ, ಆರು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದೆ. https://kannadanewsnow.com/kannada/breaking-state-governments-move-to-withdraw-43-criminal-cases-suffers-setback-high-court-quashes-order/ https://kannadanewsnow.com/kannada/from-now-on-a-break-on-communal-violence-in-karnataka-state-government-orders-the-formation-of-a-special-task-force/

Read More

ಬೆಂಗಳೂರು : ವಿದ್ಯುತ್ ಸಂಪರ್ಕಗಳಿಗೆ ಸ್ವಾಧೀನಾನುಭವ ಪತ್ರ (ಒಸಿ) ಕಡ್ಡಾಯಗೊಳಿಸಿರುವುದರಿಂದ ಆಗುತ್ತಿರುವ ಸಮಸ್ಯೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಗುರುವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯಗೊಳಿಸಿರುವುದರಿಂದ ಮನೆ ನಿರ್ಮಾಣ,ಕೈಗಾರಿಕೋದ್ಯಮಕ್ಕೆ ಆಗುತ್ತಿರುವ ಸಮಸ್ಯೆ ಈಗಾಗಲೇ ಸರ್ಕಾರದ ಗಮನದಲ್ಲಿದ್ದು, ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ ಪರಿಹಾರ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದರು. ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರ ವಿದ್ಯುತ್ ಸಂಪರ್ಕಗಳಿಗೆ ಸ್ವಾಧೀನಾನುಭವ ಪತ್ರ ಕಡ್ಡಾಯಗೊಳಿಸಿದೆ. ಇದರಿಂದ ಉದ್ಭವವಾಗಿರುವ ಸಮಸ್ಯೆ ನಿವಾರಿಸಲು ಬೈಲಾ ತಿದ್ದುಪಡಿ ಮಾಡಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ, ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ…

Read More

ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ಪ್ರಚೋದನೆಗಳಿಗೆ ಭಾರತವು ಪ್ರಬಲವಾದ ಸಂಯಮದ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಪ್ರತಿಪಾದಿಸಿದರು. ಭಾರತೀಯ ಪಡೆಗಳು ಹೆಚ್ಚಿನ ಹಾನಿಯನ್ನುಂಟುಮಾಡುವ ಸಾಮರ್ಥ್ಯವನ್ನು ಹೊಂದಿದ್ದರೂ, ಸರ್ಕಾರವು ಜಗತ್ತಿಗೆ ಶಿಸ್ತು ಮತ್ತು ಕಾರ್ಯತಂತ್ರದ ಸಮನ್ವಯವನ್ನು ಪ್ರದರ್ಶಿಸಲು ಆಯ್ಕೆ ಮಾಡಿತು ಎಂದು ಎತ್ತಿ ತೋರಿಸಿದರು. ರಾಜಧಾನಿಯಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಶೃಂಗಸಭೆಯ ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಸಿಂಗ್, ರಾಷ್ಟ್ರೀಯ ಭದ್ರತೆ ಮತ್ತು ಸ್ವಾವಲಂಬನೆಯ ದ್ವಿಮುಖ ಗುರಿಗಳನ್ನು ಒತ್ತಿ ಹೇಳಿದರು. ಭಾರತದ ರಕ್ಷಣಾ ಸನ್ನದ್ಧತೆಯನ್ನು ಬಲಪಡಿಸುವಲ್ಲಿ ಮೇಕ್ ಇನ್ ಇಂಡಿಯಾ ಉಪಕ್ರಮದ ಪಾತ್ರವನ್ನು ಶ್ಲಾಘಿಸಿದರು. ನಾವು ಮೊದಲು ಭಯೋತ್ಪಾದಕ ಅಡಗುತಾಣಗಳನ್ನು ಮತ್ತು ನಂತರ ಶತ್ರುಗಳ ಮಿಲಿಟರಿ ನೆಲೆಗಳು ಮತ್ತು ವಾಯುನೆಲೆಗಳನ್ನು ಹೇಗೆ ನಾಶಪಡಿಸಿದ್ದೇವೆ ಎಂಬುದನ್ನು ನೀವು ನೋಡಿದ್ದೀರಿ ಎಂದು ಸಿಂಗ್ ಹೇಳಿದರು. ‘ಕರ್ಣೇ ಕೋ ಹಮ್ ಕುಚ್ ಔರ್ ಭಿ ಕರ್ ಸಕ್ತೇ ದಿ’ (ನಾವು ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು), ಆದರೆ ನಾವು ಶಕ್ತಿ…

Read More