Author: kannadanewsnow09

ಮಂಡ್ಯ: ಜಿಲ್ಲೆಯಲ್ಲಿ ಧಾರುಣ ಘಟನೆಯೊಂದು ನಡೆದಿದೆ. ಎಡಮುರಿಗೆ ತೆರಳಿದ್ದಂತ ಇಬ್ಬರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಎಡಮುರಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವನ್ನಪ್ಪಿದ್ದಾರೆ. ಕಾವೇರಿ ನದಿಯ ಪ್ರವಾಸಿ ತಾಣವಾಗಿರುವ ಎಡಮುರಿ ವಾಟರ್ ಪಾಲ್ಸ್. ಬೆಂಗಳೂರಿನ ಡಾನ್ ಬಾಸ್ಕೋ ಪದವಿ ಕಾಲೇಜಿನ ಇಬ್ಬರು ಮೃತ ದುರ್ದೈವಿಗಳಾಗಿದ್ದಾರೆ. ಮೃತ ವಿದ್ಯಾರ್ಥಿಗಳ್ನು ಶ್ಯಾಮ್(20) ವೆಂಕಟೇಶ್ (20) ಎಂದು ಗುರುತಿಸಲಾಗಿದೆ. ಕಾಲೇಜಿಗೆ ರಜೆ ಇದ್ದ ಕಾರಣಕ್ಕೆ ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಬಂದು ದುರ್ಘಟನೆ ನಡೆದಿದೆ. ಈ ವಿಷಯ ತಿಳಿದು ಸ್ಥಳದಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮೃಹದೇಹಗಳು ಹೊರ ತೆಗೆದಿದ್ದಾರೆ. ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/on-the-backdrop-of-the-lunar-eclipse-on-7th-the-gavigoragada-temple-in-bangalore-will-be-closed-at-11-am/ https://kannadanewsnow.com/kannada/ravikumar-resigns-from-the-post-of-president-of-the-karnataka-bovi-development-corporation/

Read More

ಬೆಂಗಳೂರು: ಭ್ರಷ್ಟಾಚಾರ ಆರೋಪದ ವೀಡಿಯೋ ವೈರಲ್ ಆಗಿದ್ದರಿಂದ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಗೆ ಸಿಎಂ ಸಿದ್ಧರಾಮಯ್ಯ ರಾಜೀಮಾಮೆ ಕೊಟ್ಟು ಹೊರ ಹೋಗುವಂತೆ ಖಡಕ್ ಸೂಚಿಸಿದ್ದರು. ಈ ಬೆನ್ನಲ್ಲೇ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿ ಕುಮಾರ್ ಅವರು ನಿಗಮದ ಯೋಜನೆಗಳಡಿ ಸೌಲಭ್ಯ ನೀಡಲು ಫಲಾನುಭವಿಗಳಿಂದ ಶೇ.60ರಷ್ಟ ಲಂಚ ಕೇಳಿದ್ದಂತ ವೀಡಿಯೋ ವೈರಲ್ ಆಗಿತ್ತು. ಈ ವೈರಲ್ ವೀಡಿಯೋ ಗಮನಿಸಿದ್ದಂತ ಸಿಎಂ ಸಿದ್ಧರಾಮಯ್ಯ ಗರಂ ಆಗಿದ್ದರು. ಜೊತೆಗೆ ರಾಜೀನಾಮೆಗೂ ಸೂಚಿಸಿದ್ದರು. ಈ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ. ಅಂದಹಾಗೇ ರವಿಕುಮಾರ್ ಸಲ್ಲಿಸಿರುವಂತ ರಾಜೀನಾಮೆ ಪತ್ರದಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ಹಣಕಾಸಿನಲ್ಲಿ ಶಿಸ್ತು, ಪಾರದರ್ಶಕತೆ ರೂಪಿಸಿದ್ದಕ್ಕೆ ನನ್ನ ವಿರುದ್ಧ ಈ ಷಡ್ಯಂತ್ರ ನಡೆದಿದೆ. ಇದಷ್ಟೇ ಅಲ್ಲದೇ ಎಐ ಬಳಸಿ ನನ್ನ ವಿರುದ್ಧ ಪಿತೂರು ಮಾಡಲಾಗಿದೆ. ನಿಗಮದ ಕಚೇರಿಯಲ್ಲಿಯೇ ವೀಡಿಯೋ ಶೂಟ್ ಮಾಡಲಾಗಿದೆ. ಹೀಗಾಗಿ ಪಕ್ಷಕ್ಕೆ ಮುಜುಗರ ಉಂಟಾಗುವುದನ್ನು ತಡೆಯಲು…

Read More

ಬೆಂಗಳೂರು: ಸೆಪ್ಟಂಬರ್.7ರ ಭಾನುವಾರದಂದು ರಕ್ತ ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಾಲಯವನ್ನು ಬೆಳಗ್ಗೆ 11 ಗಂಟೆಗೆ ಬಂದ್ ಮಾಡಲಾಗುತ್ತಿದೆ. ಈ ಬಗ್ಗೆ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಮಾಹಿತಿ ನೀಡಿದ್ದು, ಸೂರ್ಯಗ್ರಮಹಣವಾದರೇ ಗ್ರಹಣಕ್ಕೂ ಸ್ವಲ್ಪ ಹೊತ್ತಿನ ಮೊದಲು ದೇವಸ್ಥಾನ ಮುಚ್ಚಲಾಗುತ್ತದೆ. ಆದರೇ ಚಂದ್ರಗ್ರಹಣದ ವೇಳೆ ಹಾಗೆ ಮಾಡೋದಕ್ಕೆ ಬರೋದಿಲ್ಲ. ಗ್ರಹಣಕ್ಕೂ ಮೊದಲ ಸುಮಾರು 6 ಗಂಟೆ ದೇವಾಲಯವನ್ನು ಬಂದ್ ಮಾಡುವುದಾಗಿ ತಿಳಿಸಿದರು. ಸೆಪ್ಟೆಂಬರ್.7ರ ಭಾನುವಾರದಂದು ಚಂದ್ರಗ್ರಹಣದ ಕಾರಣ ಗಂಗಾಧರನಿಗೆ ಕ್ಷೀರ ನೈವೇದ್ಯ ಮಾಡಲಾಗುತ್ತದೆ. ಕ್ಷೀರ ಬಿಟ್ಟು ಬೇರೆ ಪ್ರಸಾದ ನೀಡುವುದಿಲ್ಲ. ಬೆಳಗ್ಗೆ 11 ಗಂಟೆಯವರೆಗೆ ದೇವರ ದರ್ಶನಕ್ಕೆ ಭಕ್ತಾಧಿಗಳಿಗೆ ಅವಕಾಶವಿದೆ. ಆ ಬಳಿಕ ಕ್ಲೋಸ್ ಮಾಡಲಾಗುತ್ತದೆ ಎಂದರು. https://kannadanewsnow.com/kannada/corruption-allegations-ravi-kumar-resigns-from-the-position-of-chairman-of-the-karnataka-bhovia-development-corporation/

Read More

ಬೆಂಗಳೂರು: ಶೇ.60% ಕಮೀಷನ್ ಆರೋಪದ ವೀಡಿಯೋ ವೈರಲ್ ಆಗಿದ್ದರಿಂದ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಗೆ ಸಿಎಂ ಸಿದ್ಧರಾಮಯ್ಯ ರಾಜೀಮಾಮೆ ಕೊಟ್ಟು ಹೊರ ಹೋಗುವಂತೆ ಖಡಕ್ ಸೂಚಿಸಿದ್ದರು. ಈ ಬೆನ್ನಲ್ಲೇ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್. ರವಿಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿ ಕುಮಾರ್ ಅವರು ನಿಗಮದ ಯೋಜನೆಗಳಡಿ ಸೌಲಭ್ಯ ನೀಡಲು ಫಲಾನುಭವಿಗಳಿಂದ ಶೇ.60ರಷ್ಟ ಕಮೀಷನ್  ಲಂಚ ಕೇಳಿದ್ದಂತ ವೀಡಿಯೋ ವೈರಲ್ ಆಗಿತ್ತು. ಈ ವೈರಲ್ ವೀಡಿಯೋ ಗಮನಿಸಿದ್ದಂತ ಸಿಎಂ ಸಿದ್ಧರಾಮಯ್ಯ ಗರಂ ಆಗಿದ್ದರು. ಜೊತೆಗೆ ರಾಜೀನಾಮೆಗೂ ಸೂಚಿಸಿದ್ದರು. ಈ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ. ಅಂದಹಾಗೇ ಎಸ್.ರವಿಕುಮಾರ್ ಸಲ್ಲಿಸಿರುವಂತ ರಾಜೀನಾಮೆ ಪತ್ರದಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ಹಣಕಾಸಿನಲ್ಲಿ ಶಿಸ್ತು, ಪಾರದರ್ಶಕತೆ ರೂಪಿಸಿದ್ದಕ್ಕೆ ನನ್ನ ವಿರುದ್ಧ ಈ ಷಡ್ಯಂತ್ರ ನಡೆದಿದೆ. ಇದಷ್ಟೇ ಅಲ್ಲದೇ ಎಐ ಬಳಸಿ ನನ್ನ ವಿರುದ್ಧ ಪಿತೂರು ಮಾಡಲಾಗಿದೆ. ನಿಗಮದ ಕಚೇರಿಯಲ್ಲಿಯೇ ವೀಡಿಯೋ ಶೂಟ್ ಮಾಡಲಾಗಿದೆ. ಹೀಗಾಗಿ ಪಕ್ಷಕ್ಕೆ…

Read More

ಯಶಸ್ವಿ ವಿವಾಹವು ಪಾಲುದಾರರು ಪರಸ್ಪರ ಅರ್ಥಮಾಡಿಕೊಳ್ಳುವುದು ಮತ್ತು ಆನಂದಿಸುವುದರ ಮೇಲೆ ಅವಲಂಬಿತವಾಗಿದೆ. ತನ್ನ ಹೆಂಡತಿಯ ಮಾತನ್ನು ಕೇಳುವ ಪುರುಷನು ಸಂತೋಷದ ಜೀವನವನ್ನು ನಡೆಸುತ್ತಾನೆ ಎಂಬ ಕಲ್ಪನೆಯನ್ನು ಮದುವೆ, ಸಂಬಂಧಗಳು ಮತ್ತು ಕುಟುಂಬ ಜೀವನದ ಬಗ್ಗೆ ಸಂಭಾಷಣೆಗಳಲ್ಲಿ ಹೆಚ್ಚಾಗಿ ಉಲ್ಲೇಖಿಸಲಾಗಿದೆ. ಇದು ಹಾಸ್ಯಮಯ ಮಾತಿನಂತೆ ತೋರುತ್ತಿದ್ದರೂ, ಅದರ ಹಿಂದೆ ಸಾಕಷ್ಟು ಬುದ್ಧಿವಂತಿಕೆ ಇದೆ. ಯುನೈಟೆಡ್ ಸ್ಟೇಟ್ಸ್‌ನ ಗಾಟ್‌ಮನ್ ಸಂಸ್ಥೆಯ ಮುಖ್ಯ ಸಂಶೋಧಕರ ಪ್ರಕಾರ, ತಮ್ಮ ಹೆಂಡತಿಯರಿಗೆ ವಿಧೇಯರಾಗುವ ಗಂಡಂದಿರು ಯಶಸ್ವಿ ಸಂತೋಷದಾಯಕ ಜೀವನವನ್ನು ನಡೆಸುವಲ್ಲಿ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು ಎಂದಿದೆ. ಡಾ. ಜಾನ್ ಗಾಟ್‌ಮನ್ ಯಶಸ್ವಿ ವಿವಾಹಗಳ ಬಗ್ಗೆ ಪ್ರಬಲವಾದ ಸತ್ಯವನ್ನು ಬಹಿರಂಗ ಆನ್‌ಲೈನ್‌ನಲ್ಲಿ ಅನೇಕ ಮಹಿಳೆಯರನ್ನು ರಂಜಿಸಿದ ಸಂಬಂಧ ಮತ್ತು ವಿವಾಹದ ಗುಣಲಕ್ಷಣಗಳ ಕುರಿತಾದ ಅಧ್ಯಯನವನ್ನು ವೈರಲ್ ಪೋಸ್ಟ್ ಹೈಲೈಟ್ ಮಾಡಿದೆ. ಸಂತೋಷದ ಮತ್ತು ಯಶಸ್ವಿ ವಿವಾಹಗಳ ಗುಣಲಕ್ಷಣಗಳನ್ನು ಅಧ್ಯಯನ ಮಾಡುವ ವರ್ಷಗಳನ್ನು ಕಳೆದ ನಂತರ, ಪುರುಷರು ತಮ್ಮ ಹೆಂಡತಿಯರಿಗೆ ಕಿವಿಗೊಡಬೇಕು ಮತ್ತು ವೃತ್ತಿಪರ ವೃತ್ತಿಜೀವನದಲ್ಲಿ ಅವರ ಸಕ್ರಿಯ ಪಾತ್ರಗಳನ್ನು ಬೆಂಬಲಿಸಬೇಕು…

Read More

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬೆಂಬಲಿಗರ ವಿರುದ್ಧದ 12 ಕೇಸ್ ಸೇರಿದಂತೆ ಒಟ್ಟು 62 ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸಂಪುಟ ಸಭೆಯಲ್ಲಿ ಹಿಂಪಡೆಯಲು ಒಪ್ಪಿಗೆ ಸೂಚಿಸಲಾಗಿದೆ. ಇಡಿ ಅಧಿಕಾರಿಗಳು 2019ರಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಿದಾಗ ದಾಂಧಲೆಯನ್ನು ಅವರ ಬೆಂಬಲಿಗರು ನಡೆಸಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಸಾತನೂರು, ಕೋಡಿಹಳ್ಳಿ ಸೇರಿದಂತೆ ರಾಮನಗರ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣ, ರೈತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರ ವಿರುದ್ಧದ ಮೊಕದ್ದಮ್ಮೆಗಳನ್ನು ಕೈಬಿಡಲು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದಂತ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

Read More

ಆವನಿ ಮಾಸದ ತಿರುಓಣಂ ನಕ್ಷತ್ರದಂದು, ಭಗವಾನ್ ಪೆರುಮಾಳ್ ವಾಮನ ಅವತಾರವನ್ನು ತೆಗೆದುಕೊಂಡು ಕೇವಲ ಮೂರು ಹೆಜ್ಜೆಗಳಲ್ಲಿ ಮೂರು ಲೋಕಗಳನ್ನು ಅಳೆದರು ಎಂದು ಹೇಳಲಾಗುತ್ತದೆ. ಅಂತಹ ವಾಮನ ಅವತಾರವನ್ನು ಲೋಕಗಳ ಅಧಿಪತಿ ಎಂದೂ ಕರೆಯುತ್ತಾರೆ. ಆವನಿ ಮಾಸದ ತಿರುಓಣಂ ನಕ್ಷತ್ರವು ಶುಕ್ರವಾರದೊಂದಿಗೆ ಹೊಂದಿಕೆಯಾಗುವುದು ಇನ್ನೂ ವಿಶೇಷವೆಂದು ಪರಿಗಣಿಸಲಾಗಿದೆ. ತಿರುಓಣಂ ನಕ್ಷತ್ರವು ಭಗವಾನ್ ಪೆರುಮಾಳಿಗೆ ಶುಭವಾಗಿದ್ದರೆ, ಶುಕ್ರವಾರ ಮಹಾಲಕ್ಷ್ಮಿ ದೇವಿಗೆ ಶುಭವಾಗಿದೆ. ಆ ದಿನ ನಾವು ಮಾಡಬೇಕಾದ ಸರಳ ಪೂಜೆ, ಇದು ಭಗವಾನ್ ಪೆರುಮಾಳ್ ಮತ್ತು ಮಹಾಲಕ್ಷ್ಮಿ ಇಬ್ಬರಿಗೂ ಶುಭ ದಿನವಾಗಿದ್ದು, ನಮ್ಮ ಜೀವನದಲ್ಲಿ ಸಂಪತ್ತಿಗೆ ಇರುವ ಎಲ್ಲಾ ರೀತಿಯ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನಾವು ಆ ಪೂಜೆಯ ಬಗ್ಗೆ ನೋಡಲಿದ್ದೇವೆ . ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು…

Read More

ಬೆಂಗಳೂರು: ಪ್ರಥಮ ಬಾರಿಗೆ ರಾಜ್ಯದ ಮುಜರಾಯಿ ಇಲಾಖೆಗೆ ಪ್ರತಿಷ್ಠಿತ ಕಟ್ಟಡ ನಿರ್ಮಾಣಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರ ದೂರ ದೃಷ್ಟಿಯಿಂದ ನಿರ್ಮಾಣವಾಗಲಿದೆ. ಹೌದು.. ಮುಜರಾಯಿ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಂತಹ ನಂತರ ರಾಮಲಿಂಗಾರೆಡ್ಡಿ ಅವರು ಈ ಇಲಾಖೆಗೆ ಹೊಸ ರೀತಿಯ ಆಯಾಮವನ್ನು ನೀಡುತ್ತಾ ಬಂದಿದ್ದಾರೆ. ಭಕ್ತರು ಮತ್ತು ಅರ್ಚಕ ಸಿಬ್ಬಂದಿ ಇವರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನ ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ ಈ ಇಲಾಖೆಯಲ್ಲಿ ದುಡಿಯುವ ಮಂದಿಗೆ ಹೆಚ್ಚಿನ ನೆರವನ್ನು ಒದಗಿಸಿ ಕೊಡಿಸಿದ್ದಾರೆ. ಮುಜರಾಯಿ ಇಲಾಖೆಗೆ ತನ್ನದೇ ಆದಂತಹ ಕಟ್ಟಡ ಇರಲಿಲ್ಲ. ಇಲ್ಲಿಯ ತನಕ ಇದು ಚಾಮರಾಜಪೇಟೆಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿತ್ತು. ಸಚಿವ ರಾಮಲಿಂಗಾರೆಡ್ಡಿ ಅವರ ಆಸಕ್ತಿಯ ಕಾರಣದಿಂದಾಗಿ ಬೆಂಗಳೂರಿನ ಕೆ ಆರ್ ವೃತ್ತದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಸುಮಾರು ಹತ್ತು ಸಾವಿರ ಚದುರ ಅಡಿ ಜಾಗದಲ್ಲಿ 27 ಕೋಟಿ ರೂಪಾಯಿಗಳ ವೆಚ್ಚದಲ್ಲಿ 5 ಅಂತಸ್ತಿನ ಧಾರ್ಮಿಕ ಸೌಧ ಕಟ್ಟಡವನ್ನು ನಿರ್ಮಾಣ ಮಾಡಲು ಬೇಕಾದಂತಹ ಸಿದ್ಧತೆಗಳನ್ನ ಮಾಡಿಕೊಂಡು ಸಂಪುಟದ ಅನುಮತಿಯನ್ನು ಪಡೆದುಕೊಂಡಿರೋದು ಸಂತಸದ ಸಂಗತಿಯಾಗಿದೆ.…

Read More

ಅಫ್ಘಾನಿಸ್ತಾನ: ಗುರುವಾರ ಆಗ್ನೇಯ ಅಫ್ಘಾನಿಸ್ತಾನದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರ (GFZ) ತಿಳಿಸಿದೆ. ಭೂಕಂಪವು 10 ಕಿಮೀ (6.21 ಮೈಲುಗಳು) ಆಳದಲ್ಲಿ ಸಂಭವಿಸಿದೆ ಎಂದು GFZ ತಿಳಿಸಿದೆ. ಕುನಾರ್ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿ 10 ಕಿಮೀ (6 ಮೈಲುಗಳು) ಆಳವಿಲ್ಲದ ಆಳದಲ್ಲಿ ಸಂಭವಿಸಿದ 6 ತೀವ್ರತೆಯ ಮತ್ತೊಂದು ಭೂಕಂಪದ ನಾಲ್ಕು ದಿನಗಳ ನಂತರ ಇದು ಸಂಭವಿಸಿದೆ. ಭಾನುವಾರ ತಡರಾತ್ರಿ (ಸ್ಥಳೀಯ ಸಮಯ ರಾತ್ರಿ 11:40) ಅಫ್ಘಾನಿಸ್ತಾನವನ್ನು ಅಪ್ಪಳಿಸಿದ ಹಿಂದಿನ ಭೂಕಂಪದಲ್ಲಿ ಕನಿಷ್ಠ 2,200 ಜನರು ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Read More

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಸರ್ಕಾರಿ ಪ್ರೌಢಶಾಲೆಯ ಬಾಲಕರು ತಾಲ್ಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಸರ್ಕಾರಿ ಪ್ರೌಢಶಾಲೆಯ 17 ವರ್ಷದ ಒಳಗಿನ ತಾಲ್ಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದಲ್ಲದೇ ಉಳವಿಯ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರು ಕೂಡ ಕಬ್ಬಡಿ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಉಳವಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಈ ಕ್ರೀಢಾ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು ಹರ್ಷ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಶಾಲಾ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ನೀಡಿದ ಪೋಷಕರಿಗೆ ವಂದನೆ ತಿಳಿಸಿದ್ದಾರೆ. ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Read More