Author: kannadanewsnow09

ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಬಳಿಯಲ್ಲಿ ಖಾಸಗಿ ಬಸ್ ಅಪಘಾತದ ನಂತ್ರ ಬೆಂಕಿ ಹೊತ್ತಿಕೊಂಡು, 20 ಮಂದಿ ಸಜೀವ ದಹನವಾಗಿದ್ದರು. ಈ ದುರಂತದ ಬೆನ್ನಲ್ಲೇ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರ ಸುರಕ್ಷತೆಗಾಗಿ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ಸಾರಿಗೆ ಬಸ್ಸುಗಳಲ್ಲಿ ಈ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಿ, ಸಚಿವ ರಾಮಲಿಂಗಾರೆಡ್ಡಿ ಆದೇಶಿಸಿದ್ದಾರೆ. ಈ ಕುರಿತಂತೆ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದು, ಇತ್ತೀಚೆಗೆ ಕರ್ನೂಲ್ ಬಸ್ ದುರಂತ ತೀವ್ರ ದುಃಖಕರವಾದ ಸಂಗತಿ. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿರುವ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಬೇಕು. ಈ ಹಿಂದೆ ನಾನು ಸಾರಿಗೆ ಸಚಿವನಾಗಿದ್ದಾಗ ಹಾವೇರಿ ಬಳಿ ಜಬ್ಬಾರ್ ಟ್ರಾವೆಲ್ಸ್ ನ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಪ್ರಯಾಣಿಕರು‌ ತಮ್ಮ ಪ್ರಾಣ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ. ನಾನು ಆ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಸುಮಾರು 50000 ವಾಹನಗಳಲ್ಲಿ ( ಸಾರಿಗೆ ಸಂಸ್ಥೆಗಳ…

Read More

ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿನ ಇತಿಹಾಸವನ್ನು ನೀರಸವೆಂದು ಭಾವಿಸುವ ಮಕ್ಕಳಿಗೆ ಈಗ ಸುವರ್ಣಾವಕಾಶ. ಭಾರತದ ಶ್ರೀಮಂತ ಚರಿತ್ರೆಯ ಒಳಹೊಕ್ಕು, ಅದರೊಂದಿಗೆ ಬೆರೆತು ಜ್ಞಾನ ಸಂಪಾದಿಸಲು ಇದೀಗ ಅತ್ಯಾಕರ್ಷಕ ವೇದಿಕೆಯೊಂದು ಸಜ್ಜಾಗಿದೆ. ಇತಿಹಾಸವನ್ನು ವ್ಯಕ್ತಿತ್ವ ವಿಕಸನದೊಂದಿಗೆ ಸಮೀಕರಿಸಿ ನಡೆಸುತ್ತಿರುವ ವಿಶಿಷ್ಟ ಶಿಬಿರ ಇದು. ಮಾತುಗಾರಿಕೆ, ವೇದಿಕೆಯಲ್ಲಿ ಹಿಂಜರಿಕೆಯಿಲ್ಲದೇ ಮಾತನಾಡುವುದು, ಕಥನ ಕಲೆಯೊಂದಿಗೆ ವಿಷಯ ಪ್ರಸ್ತುತಿ, ಇತರರೊಂದಿಗೆ ಪರಿಣಾಮಕಾರಿ ಸಂವಹನ ಇವೆಲ್ಲ ಮಗುವು ಭವಿಷ್ಯದಲ್ಲಿ ಯಾವುದೇ ವೃತ್ತಿರಂಗಕ್ಕೆ ಹೋದರೂ ಬೇಕಾಗುವ ಕೌಶಲಗಳು. ಇತಿಹಾಸದ ವಿಷಯಗಳನ್ನು ಬಳಸಿಕೊಂಡು ಈ ಎಲ್ಲ ಕೌಶಲಗಳನ್ನು ಮಕ್ಕಳಲ್ಲಿ ತುಂಬುವ ನಿಟ್ಟಿನಲ್ಲಿ ಈ ಶಿಬಿರ ವಿನ್ಯಾಸಗೊಂಡಿದೆ. ‘ಪರಮ್ ಹಿಸ್ಟರಿ ಸೆಂಟರ್’ ಆಯೋಜಿಸಿರುವ “ಹಿಸ್ಟರಿ ಮೇಕರ್ಸ್” ಎಂಬ ರಂಗಭೂಮಿ ಕಾರ್ಯಾಗಾರವು ಕೇವಲ ಪಾಠಕ್ಕೆ ಸೀಮಿತವಾಗದೆ, ಇತಿಹಾಸದ ಸ್ವ ಅನುಭವನ್ನು ಪಡೆದುಕೊಳ್ಳುವ ಮತ್ತು ಅದನ್ನು ಪ್ರದರ್ಶನ ರೂಪದಲ್ಲಿ ತೋರಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಲು ಸಿದ್ಧವಾಗಿದೆ. ರಂಗಭೂಮಿಯ ಮೂಲಕ ಇತಿಹಾಸದ ಅನಾವರಣ: 8 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆಂದೇ 8 ವಾರಾಂತ್ಯಗಳ…

Read More

ಮೈಸೂರು: ಪ್ರಯಾಣಿಕರೊಬ್ಬರು ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ನಲ್ಲಿಯೇ ಲ್ಯಾಪ್ ಟಾಪ್ ಒಂದನ್ನು ಬಿಟ್ಟು ಹೋಗಿದ್ದರು. ಇಂತಹ ಲ್ಯಾಪ್ ಟಾಪ್ ಪತ್ತೆ ಹಚ್ಚಿದಂತ ರೈಲ್ವೆ ಸಿಬ್ಬಂದಿಗಳು, ಮರಳಿ ಪ್ರಯಾಣಿಕನಿಗೆ ನೀಡಿ, ಪ್ರಾಮಾಣಿಕತೆಯನ್ನು ಮರೆದಿರುವಂತ ಘಟನೆ ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ನಡೆದಿದೆ. ಪ್ರಯಾಣಿಕ ನಂದಕಿಶೋರ್ ಎಸ್. ಎನ್. ಅವರು 25.10.2025 ರಂದು ಹರಿಹರ ದಿಂದ ರೈಲು ಸಂಖ್ಯೆ 22697ರಲ್ಲಿ ಪ್ರಯಾಣ ಆರಂಭಿಸುವ ಸಂದರ್ಭದಲ್ಲಿ ತಮ್ಮ ಲ್ಯಾಪ್‌ಟಾಪ್ ಅನ್ನು ಹರಿಹರ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 2/3 ರಲ್ಲಿ ಮರೆತು ಬಿಟ್ಟು ಹೋಗಿದ್ದರು. ಈ ಮಾಹಿತಿ ಪ್ರಯಾಣ ಟಿಕೆಟ್ ಪರೀಕ್ಷಕರಾದ ಅವಿನಾಶ್ ಭೋವಿ ಅವರಿಂದ ಮಾಹಿತಿ ದೊರೆತ ತಕ್ಷಣ, ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರರಾದ ಶ್ರೀ ಕೆ. ಇಮ್ತಿಯಾಜ್ ಅಹ್ಮದ್, ವಾಣಿಜ್ಯ ಹಾಗೂ ಕಾಯ್ದಿರಿಸುವ ಲಿಪಿಕರು, ಹರಿಹರ, ತಕ್ಷಣವೇ ಶೋಧ ಕಾರ್ಯ ಪ್ರಾರಂಭಿಸಿದರು. ಲ್ಯಾಪ್‌ಟಾಪ್ ಪತ್ತೆಹಚ್ಚಿ ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ರೈಲು ನೌಕರರ ಈ ಸಮಯೋಚಿತ ಮತ್ತು ಪ್ರಾಮಾಣಿಕ ಕಾರ್ಯವು ನೈರುತ್ಯ ರೈಲ್ವೆ ನೌಕರರ…

Read More

ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆಯಲ್ಲಿ ಐದು ಎಸ್ಕಾಂಗಳ ಆನ್‌ ಲೈನ್‌ ಸೇವೆಗಳಾದ ವಿದ್ಯುತ್‌ ಬಿಲ್‌ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಆನ್‌ ಲೈನ್‌ ಆಧರಿತ ಸೇವೆಗಳು ಅಕ್ಟೋಬರ್ 27ರ ರಾತ್ರಿ 8 ಗಂಟೆಯಿಂದ ಅಕ್ಟೋಬರ್ 28ರ ಬೆಳಗ್ಗೆ 11 ಗಂಟೆಯವರೆಗೆ ನಗರ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ. ಎಲ್ಲಾ ಐದು ವಿದ್ಯುತ್‌ ಸರಬರಾಜು ಕಂಪನಿಗಳ ಈ ಕೆಳಕಂಡ ನಗರ ಉಪ ವಿಭಾಗದ ಗ್ರಾಹಕರಿಗೆ https://www.bescom.co.in, www.hescom.co.in, www.gescomglb.org, www.mescom.org.in ಮತ್ತು .cescmysore.in ಪೋರ್ಟಲ್ ಗಳ ಮೂಲಕ ಮಾಡುವ ಆನ್‌ ಲೈನ್‌ ಸೇವೆಗಳಾದ ಬಿಲ್ ಪಾವತಿ, ಹೊಸ ಸಂಪರ್ಕ ಲಭ್ಯವಿರುವುದಿಲ್ಲ . ಹಾಗೆಯೇ ವಿದ್ಯುತ್ ಬಿಲ್ ಪಾವತಿಗಾಗಿ ಬಳಸುವ ಬೆಸ್ಕಾಂ ಮಿತ್ರ ಆಪ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿದಂತೆ ಮೊದಲಾದ ಥರ್ಡ್ ಪಾರ್ಟಿ ಪಾವತಿ ವಿಧಾನಗಳಲ್ಲಿ ಆನ್ ಲೈನ್ ಸೇವೆ ಅಲಭ್ಯ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಬೆಸ್ಕಾಂ ಬೆಂಗಳೂರು…

Read More

ಮದ್ರಾಸ್: ಶನಿವಾರ ಮದ್ರಾಸ್ ಹೈಕೋರ್ಟ್, ಕ್ರಿಪ್ಟೋಕರೆನ್ಸಿ ಭಾರತೀಯ ಕಾನೂನಿನ ಅಡಿಯಲ್ಲಿ ಆಸ್ತಿಯಾಗಿ ಅರ್ಹತೆ ಪಡೆದಿದ್ದು, ಮಾಲೀಕತ್ವಕ್ಕೆ ಅರ್ಹವಾಗಿದೆ ಮತ್ತು ಟ್ರಸ್ಟ್‌ನಲ್ಲಿ ಇರಿಸಬಹುದಾಗಿದೆ ಎಂದು ತೀರ್ಪು ನೀಡಿದೆ. ಕ್ರಿಪ್ಟೋಕರೆನ್ಸಿ ಅಮೂರ್ತವಾಗಿದ್ದು ಕಾನೂನುಬದ್ಧವಲ್ಲದಿದ್ದರೂ, ಅದು ಆಸ್ತಿಯ ಅಗತ್ಯ ಗುಣಲಕ್ಷಣಗಳನ್ನು ಹೊಂದಿದೆ ಎಂದು ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅಭಿಪ್ರಾಯಪಟ್ಟರು. “”ಕ್ರಿಪ್ಟೋ ಕರೆನ್ಸಿ” ಒಂದು ಆಸ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಮೂರ್ತ ಆಸ್ತಿಯಲ್ಲ ಅಥವಾ ಕರೆನ್ಸಿಯೂ ಅಲ್ಲ. ಆದಾಗ್ಯೂ, ಇದು ಒಂದು ಆಸ್ತಿಯಾಗಿದ್ದು, ಅದನ್ನು ಆನಂದಿಸಲು ಮತ್ತು ಹೊಂದಲು (ಪ್ರಯೋಜನಕಾರಿ ರೂಪದಲ್ಲಿ) ಸಮರ್ಥವಾಗಿದೆ. ಇದನ್ನು ಟ್ರಸ್ಟ್‌ನಲ್ಲಿ ಇರಿಸಿಕೊಳ್ಳಲು ಸಮರ್ಥವಾಗಿದೆ” ಎಂದು ನ್ಯಾಯಾಲಯ ಹೇಳಿದೆ. 2024 ರ ಸೈಬರ್ ದಾಳಿಯ ನಂತರ WazirX ಪ್ಲಾಟ್‌ಫಾರ್ಮ್‌ನಲ್ಲಿ XRP ಹಿಡುವಳಿಗಳನ್ನು ಸ್ಥಗಿತಗೊಳಿಸಿದ ಹೂಡಿಕೆದಾರರು (ಅರ್ಜಿದಾರರು) ಸಲ್ಲಿಸಿದ ಅರ್ಜಿಯಲ್ಲಿ ಈ ತೀರ್ಪು ಬಂದಿದೆ. ಅರ್ಜಿದಾರರು ಜನವರಿ 2024 ರಲ್ಲಿ Zanmai Labs ನಿರ್ವಹಿಸುವ WazirX ವಿನಿಮಯ ವೇದಿಕೆಯಲ್ಲಿ ₹1,98,516 ಹೂಡಿಕೆ ಮಾಡಿ 3,532.30 XRP ನಾಣ್ಯಗಳನ್ನು ಖರೀದಿಸಿದ್ದರು. ಅವರಿಗೆ ಪೋರ್ಟ್‌ಫೋಲಿಯೊ ಖಾತೆಯನ್ನು…

Read More

ಬೆಂಗಳೂರು: ಜೈಲಿನಲ್ಲಿ ಗುಬ್ಬಚ್ಚಿ ಸೀನಾ ಬರ್ತ್ ಡೇಯನ್ನು ಆಚರಣೆ ಮಾಡಿಕೊಂಡಿದ್ದಾರೆ. ಒಬ್ಬರಿಗೆ ಒಂದು ಕಾನೂನು, ಮತ್ತೊಬ್ಬರಿಗೆ ಮತ್ತೊಂದು ಕಾನೂನು ಮಾಡಲಾಗುತ್ತಿದೆ. ಕ್ವಾರಂಟೈನ್ ಸೆಲ್ಲಿನಿಂದ ಮೇನ್ ಸೆಲ್ ಗೆ ಶಿಫ್ಟ್ ಮಾಡಿ. ನಾವು ಟ್ರಯಲ್ ಗೆ ಸಿದ್ಧರಿದ್ದೇವೆ. ಒಂದೇ ದಿನದಲ್ಲಿ ಟ್ರಯಲ್ ನಡೆದು, ಜೀವಾವಧಿ ಶಿಕ್ಷೆ ಬೇಕಾದ್ರೂ ವಿಧಿಸಿ ಎಂಬುದಾಗಿ ನಟ ದರ್ಶನ್ ಪರ ವಕೀಲರು ಕೋರ್ಟಿನಲ್ಲಿ ವಾದಿಸಿದ್ದಾರೆ. ಇಂದು ಹಾಸಿಗೆ ದಿಂಬು ನೀಡದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಯಿತು. ಈ ವೇಳೆಯಲ್ಲಿ ನಟ ದರ್ಶನ್ ಪರವಾದಂತ ವಕೀಲರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯರನ್ನು ಜೈಲು ಅಧಿಕಾರಿಗಳು ಮಿಸ್ ಲೀಡ್ ಮಾಡಿದ್ದಾರೆ. ಆದೇಶದಲ್ಲಿ ಎಲ್ಲಿಯೂ ಜೈಲು ಅಧಿಕಾರಿಗಳಿಂದ ಮಾಹಿತಿ ಕೇಳಿ ಅಂತ ಹೇಳಿಲ್ಲ ಎಂದು ವಾದಿಸಿದರು. ಜೈಲಿನಲ್ಲೇ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಇದು ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಮಗಗೊಂದು ಕಾನೂನು ಎಂಬಂತೆ ತೋರಿಸುತ್ತಿದೆ. ನಟ ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್ಲಿನಿಂದ ಮೇನ್…

Read More

ಬೆಂಗಳೂರು: ನಿನ್ನೆ ಶಾಲೆಗೆಂದು ತೆರಳಿದ್ದಂತ ಎಸ್ ಎಸ್ ಎಲ್ ಸಿ ಓದುತ್ತಿದ್ದಂತ ಇಬ್ಬರು ವಿದ್ಯಾರ್ಥಿನಿಯರು ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವುದಾಗಿ ಪೊಲೀಸರು ಕೋಲಾರ ಠಾಣೆಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಇಂದು ಬೆಂಗಳೂರಲ್ಲಿ ಸುರಕ್ಷಿತವಾಗಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕೋಲಾರ ಜಿಲ್ಲೆಯ ನರಸಾಪುರ ಗ್ರಾಮದ ಶರಣ್ಯ ಹಾಗೂ ದೇವಿ ಎಂಬ ವಿದ್ಯಾರ್ಥಿನಿಯರೇ ನಾಪತ್ತೆಯಾಗಿದ್ದರು. ಈ ಇಬ್ಬರು ವಿದ್ಯಾರ್ಥಿನಿಯರು ನಿನ್ನೆಯ ಶುಕ್ರವಾರದಂದು ಬೆಳಗ್ಗೆ ಶಾಲೆಗೆಂದು ತೆರಳಿದ್ದರು. ಆದರೇ ಇದುವರೆಗೆ ಮನೆಗೆ ವಾಪಾಸ್ಸಾಗಿಲ್ಲ. ಹೀಗಾಗಿ ಇಡೀ ದಿನ ಅವರನ್ನು ಪೋಷಕರು ಹುಡುಕಾಡಿದ್ದಾರೆ. ಆದರೇ ದೊರೆತಿಲ್ಲ. ಹೀಗಾಗಿ ಪೋಷಕರಲ್ಲಿ ಆತಂಕ ಮನೆ ಮಾಡಿತ್ತು. ರಾತ್ರಿಯಾದರೂ ಇಬ್ಬರು ಮಕ್ಕಳು ವಾಪಾಸ್ ಆಗದ ಕಾರಣ ಕೋಲಾರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರ. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಂತ ಪೊಲೀಸರು, ಬಾಲಕಿಯರ ಪತ್ತೆಗೆ ತನಿಖೆ ಕೈಗೊಂಡಿದ್ದರು. ಈ ಬೆನ್ನಲ್ಲೇ ಬೆಂಗಳೂರಲ್ಲಿ ಇಂದು ನಾಪತ್ತೆಯಾಗಿದ್ದಂತ ಶರಣ್ಯ ಹಾಗೂ ದೇವಿ ಎಂಬ…

Read More

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿರಬಹುದು. ಆದರೇ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲೇ ಅವರು ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಇಂತಹ ಪವರ್ ಸ್ಟಾರ್ ಫ್ಯಾನ್ ಡಮ್ ಆಪ್ ಬಿಡುಗಡೆ ಮಾಡಲಾಗಿದ್ದು, ಇನ್ಮುಂದೆ ಅಭಿಮಾನಿಗಳಿಗೆ ಅಪ್ಪು ಇನ್ನಷ್ಟು ಹತ್ತಿರವಾಗಿಯೇ ಇರಲಿದ್ದಾರೆ. ಇಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಡಾ.ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಹೊರಬಂದಂತ ವಿಶ್ವದ ಮೊಟ್ಟ ಮೊದಲ ಫ್ಯಾನ್ ಡಮ್ ಆಪ್ ಅನ್ನು ಬಿಡುಗಡೆ ಮಾಡಿದರು. ಇದೊಂದು ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಜೀವನಾಧಾರಿತ ಎಐ ತಂತ್ರಜ್ಞಾನ ಆಧಾರಿತ ಮೊಬೈಲ್ ಆಪ್ ಆಗಿದೆ. ಇದನ್ನು ಕನ್ನಡದ ಅಪ್ಪು ಎಂಬುದಾಗಿಯೂ ಕರೆಯಲಾಗುತ್ತದೆ. ಏನಿದು ಡಾ.ಪುನೀತ್ ರಾಜ್ ಕುಮಾರ್ ಅವರ ಫ್ಯಾನ್ ಡಮ್ ಆಪ್? ಇದೊಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವಂತ ಆಪ್ ಆಗಿದೆ. ಇದೊಂದು ವಿಶ್ವದ ಮೊಟ್ಟಮೊದಲ ಫ್ಯಾನ್ ಡಮ್ ಆಪ್ ಆಗಿದೆ.…

Read More

ಬೆಂಗಳೂರು: ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಜೀವನಾಧಾರಿತ AI-ತಂತ್ರಜ್ಞಾನ ಆಧಾರಿತ ಮೊಬೈಲ್ ಆಪ್ ‘ಕನ್ನಡದ ಅಪ್ಪು’ ಬಿಡುಗಡೆಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಮಾಡಿದ್ದಾರೆ. ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜೀವನಾಧಾರಿತ ಎಐ ತಂತ್ರಜ್ಞಾನ ಆಧಾರಿತ ಮೊಬೈಲ್ ಆಪ್ ‘ಕನ್ನಡದ ಅಪ್ಪು’ ವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಶನಿವಾರ ಬಿಡುಗಡೆಗೊಳಿಸಿ, ಮಾತನಾಡಿದರು. ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್, ಅಟ್ ಸ್ಟಾರ್ ಫ್ಯಾನ್ಡಮ್ ಸಂಸ್ಥೆ ಸಂಸ್ಥಾಪಕ ಮುಖ್ಯಸ್ಥ ಡಾ. ಸಮರ್ಥ ನಾಗಭೂಷಣ್ ಅವರು ಇದ್ದರು. https://kannadanewsnow.com/kannada/delhi-educational-tour-for-sslc-toppers-mp-dr-prabha-mallikarjun-accommodated-9-students/ https://kannadanewsnow.com/kannada/useful-information-for-the-public-all-these-services-are-available-in-the-states-gram-panchayats/

Read More

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂಬತ್ತು ಎಸ್‌ಎಸ್‌ಎಲ್‌ಸಿ ಟಾಪರ್‌ ವಿದ್ಯಾರ್ಥಿಗಳಿಗೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ನವದೆಹಲಿಗೆ ಐದು ದಿನಗಳ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ್ದಾರೆ. ತಮ್ಮ ಗೃಹಕಚೇರಿಯಲ್ಲಿ ವಿದ್ಯಾರ್ಥಿಗಳನ್ನು ಭೇಟಿಮಾಡಿ ಅವರ ಅನಿಸಿಕೆಗಳನ್ನು ಆಲಿಸಿ ಎಲ್ಲರಿಗೂ ಪ್ರಯಾಣ ಸುಖಕರವಾಗಿರಲಿ ಎಂದು ಶುಭಹಾರೈಸಿದ್ದಾರೆ. ವಿದ್ಯಾರ್ಥಿಗಳು ಇಂಡಿಯಾ ಗೇಟ್, ಕಮಲ ಮಂದಿರ, ಕುತುಬ್ ಮಿನಾರ್, ಕೆಂಪುಕೋಟೆ, ಕರ್ತವ್ಯ ಪಥ ಮತ್ತು ಸ್ವಾಮಿನಾರಾಯಣ ಮಂದಿರ ಮುಂತಾದ ರಾಷ್ಟ್ರದ ಪ್ರಮುಖ ಸ್ಮಾರಕಗಳು ಹಾಗೂ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಶಿಕ್ಷಕರೂ ಕೂಡ ಜೊತೆಯಾಗಿ ತೆರಳಲಿದ್ದಾರೆ. ಈ ತಂಡವು ಸೋಮವಾರ ಸಂಜೆ 5-30 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಈ ಶೈಕ್ಷಣಿಕ ಪ್ರವಾಸದ ಉದ್ದೇಶ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆ ಬೆಳೆಸುವುದಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೇರೇಪಿಸಲು…

Read More