Subscribe to Updates
Get the latest creative news from FooBar about art, design and business.
Author: kannadanewsnow09
ಕೆಲವರು ಮಾಟ, ಮಂತ್ರ, ವಶೀಕರಣವನ್ನು ನಂಬೋದಿಲ್ಲ,ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ,ಆದರೆ ಇನ್ನೂ ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದುಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಇದ್ರೆ ಇವೆಲ್ಲಾ ಮಾಟದ ಸಂಕೇತನಿಮ್ಮ ಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಯಾರಾದ್ರೂ ಇಟ್ಟು ಹೋದ್ರೆ ನೋ ಡೌಟ್ ನಿಮ್ಮ ಹಾಗೂ ನಿಮ್ಮ ಮನೆ ಮೇಲೆ ಮಾಟ ಮಂತ್ರ ವಶೀಕರಣವಾಗಿದೆ ಎಂದರ್ಥ. ಬನ್ನಿ ನೋಡೋಣ ಇನ್ಯಾವೆಲ್ಲಾ ಲಕ್ಷಣ ಇವೆ ಎಂದು ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ. ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ…
ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಗ್ರಹಣ ಮುಗಿಯುವವರೆಗೂ ಪಠಿಸಿ ಗ್ರಹಣ ಮೋಕ್ಷಾ ನಂತರ ದಕ್ಷಿಣೆ ಅಕ್ಕಿ ದಾನ ಮಾಡಬಹುದು ಶ್ಲೋಕ : ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 || ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 || ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 || ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ಗ್ರಹಣಕಾಲದಲ್ಲಿ ಪಾಲಿಸ ಬೇಕಾದ ಆಚರಣೆಗಳು :- ಗ್ರಹಣದ ಆಚರಣೆ ಶಾಸ್ತ್ರದ ವಚನ, ಎಂದರೆ ಭಗವಂತನ ಆದೇಶ.…
ಬೆಂಗಳೂರು: ಒಂದು ದೇಶ ಒಂದು ಚುನಾವಣೆಯು ಈ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದೆ. ಇದರಿಂದ ರಾಜ್ಯ ಮತ್ತು ದೇಶಕ್ಕೆ ಒಳಿತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ. ಮಲ್ಲೇಶ್ವರದ ಹವ್ಯಕ ಭವನದಲ್ಲಿ ಇಂದು ಏರ್ಪಡಿಸಿದ್ದ ಒಂದು ದೇಶ ಒಂದು ಚುನಾವಣೆ ಕುರಿತ ವಿದ್ಯಾರ್ಥಿ ಪ್ರಮುಖರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಆಡಳಿತ ಸುಧಾರಣೆ ಜೊತೆಗೇ ಸಾವಿರಾರು ಕೋಟಿ ಹಣವನ್ನು ಉಳಿಸುವ ಕ್ರಮ ಇದು ಎಂದು ಮೆಚ್ಚುಗೆ ಸೂಚಿಸಿದರು. ಕೆಟ್ಟ ವಿಚಾರಗಳು ಬಹಳ ಬೇಗ ಜನರನ್ನು ತಲುಪುತ್ತವೆ. ಒಳ್ಳೆಯ ವಿಚಾರ ಜನರನ್ನು ತಲುಪಲು ಸ್ವಲ್ಪ ತಡ ಆಗುತ್ತದೆ. ಆದ್ದರಿಂದ ನಾವು ನಮ್ಮ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಈ ಒಳ್ಳೆಯ ವಿಚಾರದ ಕುರಿತು ಜಾಗೃತಿ ಮೂಡಿಸಬೇಕು. ವಿವಿಧ ಕ್ಷೇತ್ರಗಳ ಸಮಾಜದ ಗಣ್ಯರ ಮಧ್ಯೆ ಚರ್ಚೆ ಮಾಡಬೇಕು. ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಡುವೆ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು. ನರೇಂದ್ರ ಮೋದಿಜೀ ಅವರ ದಿಟ್ಟ ನಾಯಕತ್ವದಲ್ಲಿ ಭಾರತವು ಅತ್ಯಂತ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿದೆ.…
ಚಿಕ್ಕಬಳ್ಳಾಪುರ: ಪ್ರಿಯತಮೆ ತನ್ನ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೇರೇಸಂದ್ರ ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ. ಲವರ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನೊಂದು ಆತ್ಮಹತ್ಯೆ ಮಾಡಿಕೊಂಡಾತನನ್ನು ಕೇರಳದ ವಯನಾಡು ಮೂಲದ ಮೊಹಮ್ಮದ್ ಶಬ್ಬೀರ್(26) ಆಗಿದ್ದಾರೆ. ಈತ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ಆರ್ ಸಿ ಟಿ ಎನ್ನುವ ಅಲೈಡ್ ಸೈನ್ಸ್ ಕೋರ್ಸ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಕೆಲವೇ ತಿಂಗಳಲ್ಲಿ ಮೊಹಮ್ಮದ್ ಶಬ್ಬೀರ್ ವ್ಯಾಸಂಗ ಕೂಡ ಮುಕ್ತಾಯಗೊಳ್ಳುತ್ತಿತ್ತು. ಆದರೇ ಇಂದು ಬೆಳಗ್ಗೆ ಹಾಸ್ಟೆಲ್ ರೂಮಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹಾಸ್ಟೆಲ್ ರೂಮಿನ ಕಿಟಕಿಗೆ ಟವೆಲ್ ಕಟ್ಟಿ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನೇಣಿಗೂ ಮುನ್ನ ಮೊಹಮ್ಮದ್ ಶಬ್ಬೀರ್ ಡೆತ್ ನೋಟ್ ಬರೆದಿದ್ದು, ಅದರಲ್ಲಿ ನಾನು ನಿನ್ನನ್ನು ಯಾವಾಗಲೂ ಪ್ರೀತಿ ಮಾಡುತ್ತೇನೆ. ನನ್ನ ಪ್ರೀತಿ ಯಾವಾಗಲೂ ನಿರಂತರವಾಗಿದೆ. ನೀನೇ ಮೊದಲು, ನೀನೇ ಕೊನೆ ಎಂಬುದಾಗಿ ಬರೆದಿದ್ದಾನೆ. https://kannadanewsnow.com/kannada/marriage-registration-in-the-state-is-still-simple-just-sit-and-submit-the-application-like-this/ https://kannadanewsnow.com/kannada/shocking-11-year-old-girl-gives-birth-to-a-child-after-being-repeatedly-raped-by-a-married-man/
ಬೆಂಗಳೂರು: ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮೂಲಕ ವಿವಾಹ ನೋಂದಣಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸೋ ಪ್ರಕ್ರಿಯೆ ಜಾಲ್ತಿಯಲ್ಲಿದೆ. ಇದು ಕೆಲವರಿಗೆ ತಿಳಿದಿದ್ದರೇ, ಮತ್ತೆ ಕೆಲವರಿಗೆ ತಿಳಿದಿಲ್ಲ. ನೀವು ಮ್ಯಾರೇಜ್ ಸರ್ಟಿಫಿಕೇಟ್ ಗೆ ಅರ್ಜಿ ಸಲ್ಲಿಸಬೇಕು ಅನ್ನೋ ಯೋಚನೆಯಲ್ಲಿದ್ದರೇ, ಜಸ್ಟ್ ಮನೆಯಲ್ಲೇ ಕುಳಿತು, ಆನ್ ಲೈನ್ ಮೂಲಕ ನಾವು ಹೇಳುವಂತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ರಾಜ್ಯ ಸರ್ಕಾರದಿಂದ ವಿವಾಹ ನೋಂದಣಿಯ ಆನ್ ಲೈನ್ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ. ಆಪ್ ಲೈನ್ ಜೊತೆಗೆ, ನೀವು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ, ಎಲ್ಲೇ ಮದುವೆಯಾಗಿದ್ದರೂ ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಆನ್ ಲೈನ್ ಮೂಲಕ ಅರ್ಜಿಯನ್ನು ಕುಳಿತಲ್ಲಿಯೇ ಸಲ್ಲಿಸಬಹುದಾಗಿದೆ. ಆದರೇ ಇದಕ್ಕಾಗಿ ಕೆಲ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಈ ದಾಖಲೆಗಳು ಕಡ್ಡಾಯ ಮದುವೆ ಲಗ್ನ ಪತ್ರಿಕೆ ದಂಪತಿಗಳ ಒಂದು ಪೋಟೋ ಪತಿಯ ಆಧಾರ್ ಕಾರ್ಡ್ ಪತ್ನಿಯ ಆಧಾರ್ ಕಾರ್ಡ್ ಮೂವರು ಸಾಕ್ಷಿದಾರರ ಆಧಾರ್ ಕಾರ್ಡ್ ಈ ಮೇಲ್ಕಂಡ ದಾಖಲೆಗಳನ್ನು ಪಿಡಿಎಫ್ ಮಾಡಿ,…
ಬೆಂಗಳೂರು: ದೇಶದ ಜನತೆ ಕಾಂಗ್ರೆಸ್ ಪಕ್ಷದ ಬಗ್ಗೆ ಏಕೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಚರ್ಚಿಸಬೇಕು ಅಥವಾ ಚಿಂತನೇ ಮಾಡಬೇಕೆ ವಿನಾ ಕಾಂಗ್ರೆಸ್ ಪಕ್ಷವು ಇವಿಎಂ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ಮುರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಜೀ ಅವರಿಂದ ಮಾತ್ರ ಭಾರತವನ್ನು ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಜನ ಒಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದೆ ಪ್ರಸ್ತುತ ಇವಿಎಂ ಮೇಲೆ ದೂರುವುದು ಮತ್ತು ದೋಷಪೂರಿತ ಎಂದು ಕಾಂಗ್ರೆಸ್ ಹೇಳುತ್ತಿರುವುದು ಹುಚ್ಚುತನದ ಪರಮಾವಧಿ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನªರಿಗೆ ಇವಿಎಂ ಮೇಲೆ ಏಕೆ ವಿಶ್ವಾಸ ಕಡಿಮೆ ಆಗಿದೆ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿಯವರು ಸತತವಾಗಿ 3 ಬಾರಿ ಕೇಂದ್ರ ಲೋಕಸಭಾ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಬ್ಯಾಲೆಟ್ ಪೇಪರ್…
ಧರ್ಮಸ್ಥಳ: ಶವ ಹೂತಿಟ್ಟಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ನ್ಯಾಯಾಂಗ ಬಂಧನವಾಗಿ ಜೈಲುಪಾಲಾಗಿದ್ದಾರೆ. ಈ ಬೆನ್ನಲ್ಲೇ ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಸೌಜನ್ಯ ಮಾವ ವಿಠಲ್ ಗೌಡಗೆ ತಲೆ ಬುರುಡೆ ಐಡಿಯಾ ನೀಡಿದ್ದೇ ಗಿರೀಶ್ ಮಟ್ಟಣ್ಣನವರ್ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಎಸ್ಐಟಿ ಎದುರು ಸೌಜನ್ಯ ಮಾವ ವಿಠ್ಠಲ್ ಗೌಡ ಅವರೇ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕಾಡಿನಲ್ಲಿ ತಲೆ ಬುರುಡೆ ಹುಡುಕಿ ತರುವಂತೆ ಐಡಿಯಾ ನೀಡಿದ್ದೇ ಗಿರೀಶ್ ಮಟ್ಟಣ್ಣನವರ್ ಎಂಬುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಗಿರೀಶ್ ಮಟ್ಟಣ್ಣನವರ ಪ್ಲಾನ್ ನಂತೆ ವಿಠ್ಠಲ್ ಗೌಡ ಅವರು ಒಂದು ವರ್ಷದ ಹಿಂದೆ ಬುರುಡೆ ತಂದಿದ್ದರಂತೆ. ಬಂಗ್ಲೆಗುಡ್ಡದಿಂದ ಬುರುಡೆ ಹುಡುಕಿ ತಂದಿದ್ದರಂತೆ. ವಿಠ್ಠಲ್ ಗೌಡಗೆ ಕಾರಿನ ಚಾಲಕನಾಗಿ ಪ್ರದೀಪ್ ಗೌಡ ಸಾಥ್ ನೀಡಿದ್ದರಂತೆ. ವಿಠ್ಠಲ್ ಗೌಡ ಮತ್ತು ಪ್ರದೀಪ್ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ. ಕಾರಿನಲ್ಲೇ ಬುರುಡೆ ಬೆಂಗಳೂರಿಗೆ ವಿಠ್ಠಲ್ ಗೌಡ ಕೊಂಡೊಯ್ದಿದ್ದಾರೆ. ಬೆಂಗಳೂರಲ್ಲಿ ತಲೆ ಬುರುಡೆಯೊಂದಿಗೆ ವಿಠ್ಠಲ್ ಗೌಡ, ಪ್ರದೀವ್ ಅವರು…
ಮಂಡ್ಯ : ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ವೃತ್ತಿಪರ ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ಭರಿಸುವಲ್ಲಿ ಬಹಳಷ್ಟು ಆರ್ಥಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದು, ಹೀಗಾಗಿ ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ನೀಡಲಾಗುತ್ತಿದೆ ಎಂದು ಜಿಲ್ಲಾ ನಿರ್ದೆಶಕಿ ಎಂ.ಚೇತನಾ ತಿಳಿಸಿದರು. ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿರುವ ವ್ಯಾಖ್ಯಾನ ಮಂಟಪದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಮಾಡಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರಲ್ಲಿ ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮವು ಸಹ ಬಹಳ ಉತ್ತಮವಾದ ಕಾರ್ಯಕ್ರಮವಾಗಿದೆ ಎಂದರು. ರಾಜ್ಯದಲ್ಲಿ ಇಲ್ಲಿವರೆಗೂ 1,25,000 ವಿದ್ಯಾರ್ಥಿಗಳಿಗೆ 152.75 ಕೋಟಿ ಶಿಷ್ಯವೇತನ ವಿತರಣೆ ಮಾಡಲಾಗಿದೆ. ಮದ್ದೂರು ತಾಲೂಕಿನಲ್ಲಿ ಇಲ್ಲಿಯವರೆಗೂ 981 ವಿದ್ಯಾರ್ಥಿಗಳಿಗೆ 1 ಕೋಟಿ 25 ಸಾವಿರ ಮೊತ್ತ…
ಮಂಡ್ಯ: ರಾಜ್ಯದಲ್ಲಿ ಅಮಾನುಷ ಘಟನೆ ಎನ್ನುವಂತೆ ನಾಟಿ ಮಾಡಿದ ಭತ್ತದ ಪೈರಿಗೆ ಕಳೆನಾಶಕವನ್ನು ಕಿಡಿಗೇಡಿಗಳು ಸಿಂಪಡಿಸಿರುವಂತ ಕೃತ್ಯ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬಿಂಡೇನಹಳ್ಳಿ ಗ್ರಾಮದಲ್ಲಿ ನಾಟಿ ಮಾಡಿದಂತ ಭತ್ತದ ಪೈರಿಗೆ ಕಿಡಿಗೇಡುಗಳ ಕಳೆನಾಶಕ ಸಿಂಪಡಿಸಿ ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದಾಗಿ ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಪೈರು ಸಂಪೂರ್ಣ ನಾಶವಾಗಿದೆ. ಹೀಗಾಗಿ ಭತ್ತದ ಬೆಳೆ ಕಳೆದುಕೊಂಡು ರೈತನ ಗೋಳಾಟ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡೇನಹಳ್ಳಿ ಗ್ರಾಮದಲ್ಲಿ ಜಮೀನೊಂದರಲ್ಲಿ ಘಟನೆ ನಡೆದಿದೆ. ಗ್ರಾಮದ ಕುಳ್ಳೇಗೌಡ ಎಂಬುವವರಿಗೆ ಸೇರಿದ ಜಮೀನು ಇದಾಗಿದೆ. ಕಳೆದ 15 ದಿನಗಳ ಹಿಂದೆ ಗದ್ದೆಯಲ್ಲಿ ನಾಟಿಯನ್ನು ರೈತ ಕುಳ್ಳೇಗೌಡ ಮಾಡಿದ್ದರು. ಈ ಭತ್ತದ ಪೈರಿಗೆ ಕಳೆನಾಶಕ ಸಿಂಪಡಿಸಿರುವ ಹಿನ್ನಲೆ ಸಂಪೂರ್ಣವಾಗಿ ನಾಶವಾಗಿದೆ. ಭತ್ತ ಕಳೆದು ಕೊಂಡ ರೈತ ಕಂಗಾಲಾಗಿದ್ದಾರೆ. ಹಳೆ ದ್ವೇಷಕ್ಕೆ ಅದೇ ಗ್ರಾಮದ ಕಿಡಿಗೇಡಿಗಳಿಂದ ಕೃತ್ಯ ನಡೆಸಿರುವುದಾಗಿ ರೈತ ಆರೋಪಿಸಿದ್ದಾರೆ. ಕಿಡಿಕೇಡಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪರಿಹಾರಕ್ಕಾಗಿ ನೊಂದ ರೈತ ಕುಟುಂಬ…
ಬೆಂಗಳೂರು: “ಬೂತ್ ಮಟ್ಟದಲ್ಲಿ ನಾಯಕರಾಗಿ ಬೆಳೆದು ನಿಮ್ಮ ಸಾಮರ್ಥ್ಯ ಪ್ರದರ್ಶಿಸಿದರೆ ಮಾತ್ರ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ. ಅಲ್ಲಿ ನಿಮ್ಮ ಶಕ್ತಿ ಸಾಬೀತು ಮಾಡಿದರೆ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯಬಹುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. “ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದವರು, ಅವರ ವಿರುದ್ಧ ಹೋರಾಟ ಮಾಡಿದ್ದಕ್ಕೆ ನನಗೆ ಸಾತನೂರು ಕ್ಷೇತ್ರದಿಂದ ಟಿಕೆಟ್ ನೀಡಿದರು. ಏಕೆಂದರೆ ನನ್ನ ಸಂಘಟನೆಯ ಸಾಮರ್ಥ್ಯ ಅಷ್ಟು ಚೆನ್ನಾಗಿತ್ತು. ಯುವ ನಾಯಕನಾಗಿ ನಾನು ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೆ. ಈ ರೀತಿ ನಾಯಕನಾಗಿ ಬೆಳೆದೆ” ಎಂದು ಹೇಳಿದರು. “ಚುನಾವಣೆಗೆ ಹಣ ಮುಖ್ಯವಲ್ಲ, ನಿಮ್ಮ ಸಂಘಟನಾ ಸಾಮರ್ಥ್ಯ ಮುಖ್ಯ. ರತನ್ ಟಾಟಾ ಅವರು ಒಂದು ಮಾತು ಹೇಳುತ್ತಿದ್ದರು, ‘ವೇಗವಾಗಿ ಹೋಗಬೇಕು ಎಂದರೆ ಒಬ್ಬನೇ ಹೋಗು. ದೂರ ಕ್ರಮಿಸಬೇಕು ಎಂದರೆ ಜನರೊಟ್ಟಿಗೆ ಹೆಜ್ಜೆ ಹಾಕು’ ಎಂದು. ನೀವು…














