Subscribe to Updates
Get the latest creative news from FooBar about art, design and business.
Author: kannadanewsnow09
ದಕ್ಷಿಣ ಕೊರಿಯಾ ಮಣಿಸಿ ಭಾರತ ತಂಡ ಏಷ್ಯಾ ಕಪ್ 2025ನಲ್ಲಿ ಭರ್ಜರಿ ಗೆಲುವು: ವಿಶ್ವ ಕಪ್ ಗೆ ಸ್ಥಾನ | Hockey Asia Cup
ನವದೆಹಲಿ: 2025 ರ ಆವೃತ್ತಿಯ ಅಂತಿಮ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಸೋಲಿಸುವ ಮೂಲಕ ಭಾರತ ಪುರುಷರ ಹಾಕಿ ತಂಡ ಭಾನುವಾರ ನಾಲ್ಕನೇ ಬಾರಿಗೆ ಹಾಕಿ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಆರಂಭದಿಂದಲೂ ಪ್ರಾಬಲ್ಯ ಸಾಧಿಸಿ, ಬಿಹಾರದ ರಾಜ್‌ಗಿರ್‌ನಲ್ಲಿ ಕೊರಿಯನ್ನರನ್ನು 4-1 ಗೋಲುಗಳಿಂದ ಸೋಲಿಸುವ ಮೂಲಕ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಉತ್ಸಾಹಭರಿತ ಪ್ರಯತ್ನವನ್ನು ಮುಂದುವರಿಸಿತು. ಎಂಟು ವರ್ಷಗಳ ಹಿಂದೆ ಭಾರತೀಯ ಪುರುಷರ ತಂಡವು ಕೊನೆಯ ಏಷ್ಯಾ ಕಪ್ ಅನ್ನು ಗೆದ್ದಿತ್ತು. ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಚೀನಾವನ್ನು 7-0 ಗೋಲುಗಳಿಂದ ಸೋಲಿಸಿದ ನಂತರ ಭಾರತವು ಬಲವಾದ ಹೆಜ್ಜೆಯೊಂದಿಗೆ ಫೈನಲ್‌ಗೆ ಪ್ರವೇಶಿಸಿತು, ಆದರೆ ಕೊರಿಯಾ ಮಲೇಷ್ಯಾವನ್ನು 4-3 ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ನಂತರದ ಹಂತಗಳಲ್ಲಿ ಕೊರಿಯಾ ಕೆಲವು ಮುನ್ನಡೆ ಸಾಧಿಸಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿತು, ಇದು ಅವರಿಗೆ ಒಂದೇ ಒಂದು ಗೋಲು ಗಳಿಸಲು ಅವಕಾಶ ಮಾಡಿಕೊಟ್ಟಿತು ಆದರೆ ಅದು ಬಲಿಷ್ಠ ಭಾರತೀಯ ತಂಡವನ್ನು…
ಶಿವಮೊಗ್ಗ: ಇಂದು ಜನ್ನತ್ ಗಲ್ಲಿಯಲ್ಲಿನ ಗಣೇಶ ಮೂರ್ತಿಯನ್ನು ವಿಸರ್ಜನಾ ಮೆರವಣಿಗೆಯ ವೇಳೆ ನಡೆದಿದ್ದಂತ ಘಟನೆಯೊಂದು ನಡೆದಿತ್ತು. ಈ ಘಟನೆಯ ವೀಡಿಯೋವನ್ನು ಶೇರ್ ಮಾಡಿ ವೈರಲ್ ಮಾಡಿದ್ರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಎಚ್ಚರಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇವತ್ತು ಸಾಗರ ನಗರದ ಜೈಭುವನೇಶ್ವರಿ ಯುವಕರ ಸಂಘದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಸಂಘಟಕರಿಗೆ, ಪದಾಧಿಕಾರಿಗಳಿಗೆ ಒಂದು ವಿಚಾರವಾಗಿ ಅಸಮಾಧಾನ ಉಂಟಾಗಿತ್ತು. ಪೊಲೀಸರ ಜೊತೆಗೆ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದರು. ನಮ್ಮ ಕಡೆಯಿಂದ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂಬ ಆಶ್ವಾಸನೆ ನೀಡಿದ ಬಳಿಕದ ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ವಿಸರ್ಜನೆ ಕೂಡ ನಡೆದಿದೆ. ಶಾಂತಿಯುತವಾಗಿದೆ. ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದರು. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ನಡೆದಂತ ಘಟನೆಯ ವೀಡಿಯೋ ಏನು ಬಂದಿದೆ ಅದು ಬಿಎನ್ ಎಸ್ ಸೆಕ್ಷನ್ 20…
ಶಿವಮೊಗ್ಗ: ಜಿಲ್ಲೆಯ ಸಾಗರದ ಉಳ್ಳೂರು ಬಳಿಯಲ್ಲಿ ಆಟೋ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಉಂಟಾಗಿದೆ. ಈ ಅಪಘಾತದಲ್ಲಿ ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರಿನ ಸಂಪಿಗೆಸರದ ಬಳಿಯಲ್ಲಿ ಆಟೋ ಹಾಗೂ ಬೈಕ್ ನಡುವೆ ಅಪಘಾತ ಉಂಟಾಗಿದೆ. ಈ ಅಪಘಾತದಲ್ಲಿ ಸಂಪಿಗೆಸರದ ವಿನಯ್ ಎಂಬಾತನ ಕೈ, ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಆನಂದಪುರದಿಂದ ಸಾಗರಕ್ಕೆ ಆಟೋ ತೆರಳುತ್ತಿದ್ದರೇ, ಸಾಗರದಿಂದ ಉಳ್ಳೂರಿಗೆ ಬೈಕ್ ನಲ್ಲಿ ವಿನಯ್ ತೆರಳುತ್ತಿದ್ದರು. ಸಂಪಿಗೆಸರದ ಬಳಿಯಲ್ಲಿ ಅಪಘಾತ ಉಂಟಾಗಿದ್ದು, ಬೈಕ್ ಸವಾರ ವಿನಯ್ ಗಂಭೀರವಾಗಿ ಗಾಯಗೊಂಡಿದ್ದರೇ, ಆಟೋದಲ್ಲಿದ್ದಂತ ಮೂವರಿಗೆ ಸಣ್ಣಪುಟ್ಟ ಗಾಯವಾಗಿವೆ. ಗಾಯಾಳುಗಳನ್ನು ಸಾಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಪಘಾತದ ಘಟನೆಯ ನಂತ್ರ 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದರೂ ಸುಮಾರು ಅರ್ಧ ಗಂಟೆ ಕಾದರು ಸಾಗರದಿಂದ ಕೇವಲ 7 ಕಿಲೋಮೀಟರ್ ದೂರವಿರುವಂತ ಸಂಪಿಗೆಸರಕ್ಕೆ ಬಂದಿಲ್ಲ. ಇದರಿಂದಾಗಿ ರೋಗಿಗಳ ಪ್ರಾಣದ ಜೊತೆಗೆ 108 ಆ್ಯಂಬುಲೆನ್ಸ್ ಅವರು ಆಟ ಆಡುವಂತ…
ಬೆಂಗಳೂರು : “ತುಳು ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಘೋಷಿಸಬೇಕು ಎಂಬ ನಿಮ್ಮ ಬೇಡಿಕೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು. ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ “ಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿ” ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. “ಇತ್ತೀಚೆಗೆ ಕುಂದಾಪುರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಸೇರಿರುವ ಜನ ನೋಡಿದರೆ ಮುಂದೆ ನೀವೆಲ್ಲರೂ ನಮ್ಮನ್ನು ಬೆಂಗಳೂರಿನಿಂದ ಖಾಲಿ ಮಾಡಿಸುತ್ತೀರೇನೋ ಎಂದು ಭಯವಾಗುತ್ತಿದೆ. ನಿಮ್ಮ ಈ ಶಕ್ತಿ, ಉತ್ಸಾಹ ನೋಡಿ ನನಗೆ ಈ ಅನುಮಾನ ಕಾಡುತ್ತಿದೆ” ಎಂದು ಚಟಾಕಿ ಹಾರಿಸಿದರು. ಇಡೀ ದೇಶಕ್ಕೆ ಕರ್ನಾಟಕದ ಮೂಲಕ ಸಂಸ್ಕೃತಿ ಹಾಗೂ ಶಿಕ್ಷಣ ಕೊಟ್ಟವರು, ಧಾರ್ಮಿಕ ಶಕ್ತಿ ಕೊಟ್ಟವರು, ಬ್ಯಾಂಕ್ ವ್ಯವಸ್ಥೆ ಕೊಟ್ಟವರು ಈ ಕರಾವಳಿ ಜನ. ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನೀವು ಮುಂದೆ ಇದ್ದೀರಿ. ಕರಾವಳಿ ಭಾಗ, ದಕ್ಷಿಣ ಕನ್ನಡದ ಜನ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ನಿಮ್ಮ…
ಮಂಡ್ಯ: ಜಿಲ್ಲೆಯಲ್ಲಿ ಮದ್ದೂರಲ್ಲಿ ಗಣೇಶ ವಿಸರ್ಜನೆಯ ವೇಳೆಯಲ್ಲಿ ಕಲ್ಲು ತೂರಾಟ ಘಟನೆ ನಡೆದಿದೆ. ಅನ್ಯಕೋಮಿನವರು ಗಣೇಶ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿದ್ದಾಗಿ ಆರೋಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಕಲ್ಲು ತೂರಾಟ ನಡೆಸಿದ್ದರಿಂದ ಹಲವರಿಗೆ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಸ್ಥಳದಲ್ಲಿದ್ದಂತ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ, ಗಣೇಶ ಮೆರವಣಿಗೆ ಮುಂದುವರೆಸಲು ಅವಕಾಶ ಮಾಡಿಕೊಟ್ಟರು. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ಕೂರಿಸಿದ್ದಂತ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆಯಲ್ಲಿ ಅನ್ಯ ಕೋಮಿನಿಂದ ಕಲ್ಲು ತೂರಾಟ ನಡೆಸಿರುವಂತ ಆರೋಪ ಕೇಳಿ ಬಂದಿದೆ. ಮಸೀದಿಯ ಮುಂಭಾಗದಲ್ಲಿ ಡಿಜೆ ಬಳಸಿ ನೃತ್ಯ ಮಾಡಿದಂತ ಸಂದರ್ಭದಲ್ಲಿ ಈ ಗಲಭೆ ಉಂಟಾಗಿದೆ. ಈ ವೇಳೆಯಲ್ಲಿ ಅನ್ಯಕೋಮಿನಿಂದ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದಾಗಿ ಹೇಳಲಾಗುತ್ತಿದೆ. ಹೀಗಾಗಿ ಪ್ರತಿಯಾಗಿ ಕಲ್ಲು ತೂರಾಟ ನಡೆಸಲಾಗಿದ್ದು ಹಲವರಿಗೆ ಗಾಯವಾಗಿದೆ ಎಂದು ಎನ್ನಲಾಗುತ್ತಿದೆ. ಗಣೇಶ ಮೂರ್ತಿ ವಿಸರ್ಜನೆಯ ವೇಳೆಯಲ್ಲಿ ಉಂಟಾದಂತ ಗಲಭೆಯಲ್ಲಿ ಹಲವರು ಗಾಯಗೊಂಡಿದ್ದು, ಮದ್ದೂರು ಸಾರ್ವಜನಿಕ…
ಶಿವಮೊಗ್ಗ: ಶಿಕ್ಷಕರ ದಿನಾಚರಣೆಯಂದು ನೀಡಲಾಗುವಂತ ರಾಜ್ಯ ಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಗೆ ಸಾಗರದ ಜೂನಿಯರ್ ಕಾಲೇಜಿನ ಕನ್ನಡ ಉಪನ್ಯಾಸಕ ಸರ್ಫರಾಜ್ ಚಂದ್ರಗುತ್ತಿಗೆ ಸಂದಿತ್ತು. ಇಂತಹ ಅವರ ನಿವಾಸಕ್ಕೆ ತೆರಳಿದಂತ ಕಾಂಗ್ರೆಸ್ ಮುಖಂಡರಾದಂತ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ಸೇರಿದಂತೆ ಇತರರು ಸನ್ಮಾನಿಸಿ, ಅಭಿನಂದಿಸಿದರು. ಸೆಪ್ಟೆಂಬರ್.5ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಾಜ್ಯ ಸರ್ಕಾರವು 2025-26ನೇ ಸಾಲಿನ ಅತ್ಯುತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿಯನ್ನು ಸಾಗರದ ಜ್ಯೂನಿಯರ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಗುಡ್ಡೆಕೌತಿ ಟೀಚರ್ಸ್ ಕಾಲೋನಿ ನಿವಾಸಿಯಾದ ಸರ್ಫ಼ರಾಜ್ ಚಂದ್ರಗುತ್ತಿಯವರನ್ನು ಆಯ್ಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಅವರ ನಿವಾಸಕ್ಕೆ ತೆರಳಿದಂತ ಮಾಜಿ ತಾಲ್ಲೂಕು ಪ೦ಚಾಯ್ತಿ ಸದಸ್ಯರಾದ ಸೋಮಶೇಖರ್ ಲ್ಯಾವಿಗೆರೆ, ನಾಡಕಲಸಿ ಗ್ರಾ.ಪ೦ ಸದಸ್ಯರಾದ ಮಹಾಬಲೇಶ್ ಕೌತಿ, ನಗರ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿನೇಶ್.ಡಿ. ಮುಖಂಡರುಗಳಾದ ಗಿರೀಶ್ ಕೋವಿ, ಗುರು ಶಿರವಾಳ, ಹರೀಶ್ ಶಿರವಾಳ ಸದಸ್ಯರು ಗ್ರಾ.ಪ೦. ಭೀಮನೇರಿ, ಶಿಕ್ಷಕರಾದ ಶೇಖರಪ್ಪ, ಜಬಿಉಲ್ಲಾ ಖಾನ್, ಬಸವರಾಜಪ್ಪ, ಗಣೇಶ್, ಮಹೇಂದ್ರ ಹಾಗೂ ಇತರರು ಸನ್ಮಾನಿಸಿ ಅಭಿನಂದಿಸಿದರು. https://kannadanewsnow.com/kannada/children-splashed-over-the-ganapati-procession-in-the-sea-video-goes-viral-parents-apologize/…
ಶಿವಮೊಗ್ಗ: ಸಾಗರ ನಗರದಲ್ಲಿ ಜನ್ನತ್ ಗಲ್ಲಿ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಬಾಲಕರಿಬ್ಬರು ಉಗಿದಂತ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ಚಿಕ್ಕ ಮಕ್ಕಳು ತಿಳಿಯದೇ ಹೀಗೆ ಮಾಡಿದ್ದಾರೆ. ಅವರ ಪರವಾಗಿ ನಾವು ಕ್ಷಮೆಯನ್ನು ಯಾಚಿಸುತ್ತೇವೆ ಅಂತ ಪೋಷಕರು ಕ್ಷಮೆಯಾಚಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಇಂದು ಜನ್ನತ್ ಗಲ್ಲಿಯ ಗಣಪತಿ ಮೂರ್ತಿಯನ್ನು ರಾಜಬೀದಿಯಲ್ಲಿ ಉತ್ಸವದ ಮೂಲದ ವಿಸರ್ಜನೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗಿತ್ತು. ಗಣಪತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದಂತ ಸಂದರ್ಭದಲ್ಲಿ ಅನ್ಯ ಕೋಮಿನ ಬಾಲಕರಿಬ್ಬರು ಮನೆಯ ಮೇಲಿನಿಂದ ಉಗಿಯುತ್ತಿರುವಂತ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಪರ ಸಂಘಟನೆಗಳಿಂದ ಸ್ಥಳದಲ್ಲಿಯೇ ಪ್ರತಿಭಟನೆಯನ್ನು ನಡೆಸಲಾಯಿತು. ಗಣೇಶ ಮೂರ್ತಿಗೆ ಅಪಮಾನ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೂ ಒತ್ತಾಯಿಸಲಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತಂತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು, ವೈರಲ್ ಆಗಿರುವಂತ ವೀಡಿಯೋದಲ್ಲಿ ಇಬ್ಬರು ಬಾಲಕರಲ್ಲಿ ಓರ್ವ ಮೆರವಣಿಗೆಯ ಮೇಲೆ ಉಗಿದಿರುವುದು ಕಂಡು ಬಂದಿದೆ.…
ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಮೆರವಣಿಗೆ ಸಂದರ್ಭದಲ್ಲಿ ಗಣೇಶ ಮೂರ್ತಿಗೆ ಬಾಲಕರು ಅಪಮಾನ ಮಾಡಿರುವಂತ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಮಿಥುನ್ ತಿಳಿಸಿದ್ದಾರೆ. ಈ ಕುರಿತಂತೆ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು, ಸಾಗರದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಬಾಲಕರು ಅಪಮಾನ ಮಾಡಿದ್ದಾಗಿ ತಿಳಿದು ಬಂದಿದೆ. ಈ ಘಟನೆ ಕುರಿತು ತಾಯಿ ಹಾಗೂ ಇಬ್ಬರು ಮಕ್ಕಳನ್ನು ವಿಚಾರಣೆ ನಡೆಸಲಾಗಿದೆ ಎಂದರು. ಈಗಾಗಲೇ ಘಟನೆ ಸಂಬಂಧ ಹಿಂದೂಪರ ಸಂಘಟನೆಗಳ ಮುಖಂಡರ ಜೊತೆಗೂ ಮಾತುಕತೆ ನಡೆಸಲಾಗಿದೆ. ಈ ಘಟನೆಯ ಬಗ್ಗೆ ಹಿಂದೂ ಸಂಘಟನೆಯ ಮುಖಂಡರಿಗೂ ಮನವರಿಕೆ ಮಾಡಿಕೊಡಲಾಗಿದೆ ಎಂದರು. https://kannadanewsnow.com/kannada/shocking-11-year-old-girl-gives-birth-to-a-child-after-being-repeatedly-raped-by-a-married-man/ https://kannadanewsnow.com/kannada/from-september-22-a-social-and-educational-survey-will-be-initiated-in-the-state-providing-this-information-is-mandatory/
ಕೆಲವರು ಮಾಟ, ಮಂತ್ರ, ವಶೀಕರಣವನ್ನು ನಂಬೋದಿಲ್ಲ,ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ,ಆದರೆ ಇನ್ನೂ ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದುಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಇದ್ರೆ ಇವೆಲ್ಲಾ ಮಾಟದ ಸಂಕೇತನಿಮ್ಮ ಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಯಾರಾದ್ರೂ ಇಟ್ಟು ಹೋದ್ರೆ ನೋ ಡೌಟ್ ನಿಮ್ಮ ಹಾಗೂ ನಿಮ್ಮ ಮನೆ ಮೇಲೆ ಮಾಟ ಮಂತ್ರ ವಶೀಕರಣವಾಗಿದೆ ಎಂದರ್ಥ. ಬನ್ನಿ ನೋಡೋಣ ಇನ್ಯಾವೆಲ್ಲಾ ಲಕ್ಷಣ ಇವೆ ಎಂದು ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ. ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ…
ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಗ್ರಹಣ ಮುಗಿಯುವವರೆಗೂ ಪಠಿಸಿ ಗ್ರಹಣ ಮೋಕ್ಷಾ ನಂತರ ದಕ್ಷಿಣೆ ಅಕ್ಕಿ ದಾನ ಮಾಡಬಹುದು ಶ್ಲೋಕ : ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 || ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 || ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ | ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 || ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ಗ್ರಹಣಕಾಲದಲ್ಲಿ ಪಾಲಿಸ ಬೇಕಾದ ಆಚರಣೆಗಳು :- ಗ್ರಹಣದ ಆಚರಣೆ ಶಾಸ್ತ್ರದ ವಚನ, ಎಂದರೆ ಭಗವಂತನ ಆದೇಶ.…














