Author: kannadanewsnow09

ಬೆಂಗಳೂರು: ರಾಜ್ಯದ ಅನೇಕ ಜನರಿಗೆ ಈ ಮಾಹಿತಿ ಗೊತ್ತಿಲ್ಲ ಅನಿಸುತ್ತದೆ. ಈ ಹಿಂದೆ ನಾಡ ಕಚೇರಿಗೆ ಜಾತಿ-ಆದಾಯ ಪ್ರಮಾಣ ಪತ್ರದಿಂದ ಹಿಡಿದು, ಇತರೆ ಪ್ರಮಾಣ ಪತ್ರಗಳಿಗಾಗಿ ಅಲೆಯಬೇಕಾಗಿದ್ದು ಈಗ ಇಲ್ಲವೆನ್ನುವುದು. ಹಾಗಾದ್ರೇ ಹೇಗೆ ಎನ್ನುವ ಉದ್ಗಾರ ಬೇಡ. ಜಸ್ಟ್ ಕುಳಿತಲ್ಲಿಯೇ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಶುಲ್ಕವನ್ನು ಸಲ್ಲಿಸಿದರೇ ಸಾಕು, ಆನ್ ಲೈನ್ ನಲ್ಲಿಯೇ ಪ್ರಮಾಣಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಹೌದು… ಈಗ ನಾಡ ಕಚೇರಿಯ ಬಹುತೇಕ ಸೇವೆಗಳು ನೀವು ಕುಳಿತಲ್ಲಿಯೇ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾದ್ರೇ ಯಾವೆಲ್ಲ ಪ್ರಮಾಣಪತ್ರ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅನ್ನೋ ಪಟ್ಟಿ ಈ ಕೆಳಗಿದೆ. ಈ ಎಲ್ಲಾ ಪ್ರಮಾಣಪತ್ರಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಕೃಷಿ ಸೇವೆಗಳು ಕೃಷಿ ಕಾರ್ಮಿಕ ಪ್ರಮಾಣಪತ್ರ ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರ ಗೇಣಿರಹಿತ ದೃಢೀಕರಣ ಪ್ರಮಾಣಪತ್ರ ವ್ಯವಸಾಯಗಾರರ ಕುಟುಂಬದ ದೃಢೀಕರಣ ಪತ್ರ ಬೊನಾಫೈಡ್ ಪ್ರಮಾಣಪತ್ರ ಭೂ ಹಿಡುವಳಿ ಪ್ರಮಾಣಪತ್ರ…

Read More

ನವದೆಹಲಿ: ಚುನಾವಣಾ ಆಯೋಗವು ಗುರುತಿನ ಪುರಾವೆಯಾಗಿ ಆಧಾರ್ ಅನ್ನು ಸ್ವೀಕರಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹತ್ವದ ತೀರ್ಪಿನಲ್ಲಿ, ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಆಧಾರ್ ಅನ್ನು ಗುರುತಿನ ಮಾನ್ಯ ಪುರಾವೆಯಾಗಿ ಸ್ವೀಕರಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಮತದಾರರ ಗುರುತನ್ನು ಸ್ಥಾಪಿಸಲು ನಿಗದಿತ ದಾಖಲೆಗಳಲ್ಲಿ ಆಧಾರ್ ಅನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಆದಾಗ್ಯೂ, ಬಿಹಾರದಲ್ಲಿ ಮತದಾರರ ಗುರುತನ್ನು ಸ್ಥಾಪಿಸಲು ಸಲ್ಲಿಸಲಾದ ಆಧಾರ್‌ನ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ಕೇಳಿದೆ ಸರ್. ಮತದಾರರ ಪಟ್ಟಿಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಹೆಚ್ಚಿನ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಸುಲಭವಾಗಿ ಚಲಾಯಿಸಬಹುದು ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ನಿರ್ಧಾರ ಹೊಂದಿದೆ. ಮತದಾರರ ಪಟ್ಟಿಗಳ ಪರಿಷ್ಕರಣೆಗೆ ಸಂಬಂಧಿಸಿದ ಪ್ರಕರಣದ ಭಾಗವಾಗಿ ಈ ತೀರ್ಪು ಬಂದಿದೆ, ಗುರುತಿನ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಆಧಾರ್‌ನ ಮಹತ್ವವನ್ನು ಬಲಪಡಿಸುತ್ತದೆ.

Read More

ನವದೆಹಲಿ: ಮಧ್ಯಪ್ರದೇಶದ ಅಪಘಾತ ಕ್ಲೈಮ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದೆ. ಅದೇ ಅಪಘಾತದಲ್ಲಿ ಮಗುವೊಂದು ಅಂಗವಿಕಲವಾದರೇ ಅದಕ್ಕೆ ನಾಲ್ಕು ಪಟ್ಟು ಪರಿಹಾರ ನೀಡಬೇಕು ಎಂಬುದಾಗಿ ತೀರ್ಪು ನೀಡಿದೆ. ಅಪಘಾತದಲ್ಲಿ ಮಗು ಸಾವನ್ನಪ್ಪಿದರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಸಂದರ್ಭದಲ್ಲಿ, ಪರಿಹಾರವನ್ನು ಅವರನ್ನು ಕೌಶಲ್ಯಪೂರ್ಣ ಕೆಲಸಗಾರ ಎಂದು ಪರಿಗಣಿಸಿ ಲೆಕ್ಕಹಾಕಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ರಾಜ್ಯದಲ್ಲಿ ಅಪಘಾತದ ಸಮಯದಲ್ಲಿ ಕೌಶಲ್ಯಪೂರ್ಣ ಕೆಲಸಗಾರನ ಕನಿಷ್ಠ ವೇತನವನ್ನು ಮಗುವಿನ ಆದಾಯವೆಂದು ಪರಿಗಣಿಸಲಾಗುತ್ತದೆ. ಹಕ್ಕುದಾರ ವ್ಯಕ್ತಿಯು ನ್ಯಾಯಮಂಡಳಿಯ ಮುಂದೆ ಕನಿಷ್ಠ ವೇತನದ ಬಗ್ಗೆ ದಾಖಲೆಗಳನ್ನು ಪ್ರಸ್ತುತಪಡಿಸಬೇಕಾಗುತ್ತದೆ. ಅವರು ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಈ ದಾಖಲೆಗಳನ್ನು ಪ್ರಸ್ತುತಪಡಿಸುವುದು ವಿಮಾ ಕಂಪನಿಯ ಜವಾಬ್ದಾರಿಯಾಗಿರುತ್ತದೆ. ನಿರ್ಧಾರದ ಪ್ರತಿಯನ್ನು ಎಲ್ಲಾ ಮೋಟಾರು ಅಪಘಾತ ಕ್ಲೈಮ್ ನ್ಯಾಯಮಂಡಳಿಗಳಿಗೆ ಕಳುಹಿಸಬೇಕು. ಇದರಿಂದ ಸೂಚನೆಗಳ ಕಟ್ಟುನಿಟ್ಟಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬಹುದು. ಸುಪ್ರೀಂ ಕೋರ್ಟ್‌ನ ಆದೇಶದಲ್ಲಿ ಏನಿದೆ? ಇಲ್ಲಿಯವರೆಗೆ, ಅಪಘಾತದಲ್ಲಿ ಮಗು ಸಾವನ್ನಪ್ಪಿದರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಸಂದರ್ಭದಲ್ಲಿ, ಪರಿಹಾರವನ್ನು ಕಾಲ್ಪನಿಕ…

Read More

ನವದೆಹಲಿ: ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ (Dearness Allowance -DA)ಯಲ್ಲಿ ಶೇ. 3 ರಷ್ಟು ಹೆಚ್ಚಳ ಘೋಷಿಸುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರಿ ನೌಕರರು ( Central government employees ) ಮತ್ತು ಪಿಂಚಣಿದಾರರು ಹಬ್ಬದ ಪರಿಹಾರವನ್ನು ಪಡೆಯಲಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ನಿರಂತರ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಮನೆಯ ವೆಚ್ಚಗಳ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ 1.2 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ. ಪ್ರಸ್ತುತ, ಕೇಂದ್ರ ಸಿಬ್ಬಂದಿಗೆ ತುಟ್ಟಿ ಭತ್ಯೆ ಮೂಲ ವೇತನದ ಶೇ. 55 ರಷ್ಟಿದೆ. ಜುಲೈ 2025 ರ ಹಣದುಬ್ಬರ ಪ್ರವೃತ್ತಿಗೆ ಅನುಗುಣವಾಗಿ ಭತ್ಯೆಯನ್ನು ಶೇ. 58 ಕ್ಕೆ ಪರಿಷ್ಕರಿಸಲಾಗುವುದು ಎಂದು ತಜ್ಞರು ನಂಬಿದ್ದಾರೆ. ಈ ಲೆಕ್ಕಾಚಾರವು ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕವನ್ನು (ಸಿಪಿಐ-ಐಡಬ್ಲ್ಯೂ) ಆಧರಿಸಿದೆ, 2016 ರ ಮೂಲ ವರ್ಷವನ್ನು 261.42 ಕ್ಕೆ ನಿಗದಿಪಡಿಸಲಾಗಿದೆ. ಜನವರಿ ಮತ್ತು ಜುಲೈನಲ್ಲಿ ವಾರ್ಷಿಕವಾಗಿ ಎರಡು ಬಾರಿ ಡಿಎ ಪರಿಷ್ಕರಿಸಲಾಗುತ್ತದೆ, ಆದರೂ…

Read More

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯಿಂದಾಗಿ 651 ಮನೆಗಳು ಸಂಪೂರ್ಣ ಹಾನಿಗೊಂಡಿದ್ದರೇ, 520663 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ. ಅಲ್ಲದೇ ಮಳೆಯ ಕಾರಣದಿಂದಾಗಿ ಏಪ್ರಿಲ್ ನಿಂದ ಇಲ್ಲಿಯವರೆಗೆ 111 ಮಂದಿ ಸಾವನ್ನಪ್ಪಿರುವುದಾಗಿ ಸಿಎಂ ಸಿದ್ಧರಾಮಯ್ಯ ಮಾಹಿತಿ ನೀಡಿದ್ದಾರೆ. ಸೋಮವಾರದಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಭೆ ನಡೆಸಿದರು. ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಸೆಪ್ಟಂಬರ್ ಮೊದಲ ವಾರದವರೆಗೆ ವಾಡಿಕೆಗಿಂತ ಶೇ.4ರಷ್ಟು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ 721ಮಿ.ಮೀ ಇದ್ದು, 753 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಶೇ.23ರಷ್ಟು ಹೆಚ್ಚುವರಿ ಮಳೆ ದಾಖಲಾಗಿತ್ತು ಎಂದರು. ಮಳೆಯಿಂದಾಗಿ 683 ಕಿಮೀ ರಾಜ್ಯ ಹೆದ್ದಾರಿ, 1383 ಜಿಲ್ಲಾ ಪ್ರಮುಖ ಹೆದ್ದಾರಿ, 5558 ಗ್ರಾಮೀಣ ರಸ್ತೆಗಳು, 656 ಸೇತುವೆ/ಕಲ್ವರ್ಟ್ಗಳು, 1877ಶಾಲಾ ಕಟ್ಟಡಗಳು, 160 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1018 ಅಂಗನವಾಡಿಗಳು, 25279 ವಿದ್ಯುತ್ ಕಂಬಗಳು, 819 ಟ್ರಾನ್ಸ್ಫಾರ್ಮರ್ಗಳು, 31 ಸಣ್ಣ ನೀರಾವರಿ ಕೆರೆಗಳಿಗೆ ಹಾನಿ ಸಂಭವಿಸಿದೆ ಎಂದರು.…

Read More

ಬೆಂಗಳೂರು: ರಾಜ್ಯದಾದ್ಯಂತ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ಜಾರಿಗೆ ತರಲು ಪೂರ್ವಭಾವಿಯಾಗಿ ನಿಯಮಾವಳಿಗಳನ್ನು ರೂಪಿಸಲಾಗುತ್ತಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರಡು ನಿಯಮಾವಳಿಗಳನ್ನು ಪರಿಶೀಲಿಸಿ ಕೆಲವು ಬದಲಾವಣೆಗಳನ್ನು ಸೂಚಿಸಿದರಲ್ಲದೆ, ಒಂದು ವಾರದ ಅವಧಿಯಲ್ಲಿ ಕರಡು ನಿಯಮಾವಳಿಗಳನ್ನು ಪ್ರಕಟಿಸಲು ಸೂಚಿಸಿದರು. ತೆರಿಗೆ ದರ ಮತ್ತು ಫೀಜುಗಳನ್ನು ವಿಧಿಸುವ ಪ್ರಕ್ರಿಯೆ, ಕಟ್ಟಡಗಳು ಮತ್ತು ಭೂಮಿಯ ಮೇಲೆ ತೆರಿಗೆ ವಿಧಿಸುವುದು, ನಮೂನೆ 11 ಎ ನಿರ್ವಹಣೆ, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಅಧಿನಿಯಮ, 2025ರ ನಂತರ ನಮೂನೆ 11-ಎ ರಿಜಿಸ್ಟರ್‌ಗೆ ಹೊಸ ಆಸ್ತಿಗಳ ಸೇರ್ಪಡೆ, ಮೇಲ್ಮನವಿ, ದಂಡನೆಗಳು, ನೀರು ಸರಬರಾಜು ದರ ಮತ್ತು ಇತರ ದರಗಳ ನಿರ್ಧರಣೆ, ದಂಡ ನಿರ್ಧಾರ, ಸ್ಥಿರಸ್ವತ್ತಿನ ಪರಿಶೀಲನೆ, ಸ್ಥಿರ ಸ್ವತ್ತಿನ ಪರಿಶೀಲನೆ, ಮೇಲ್ಮನವಿ, ತಗಾದೆ ನೋಟೀಸ್‌, ಜಫ್ತಿ ಮತ್ತು ಮಾರಾಟ ಮುಂತಾದ ವಿಷಯಗಳನ್ನು ಸಚಿವ…

Read More

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಎರಡನೇ ಮುಂದುವರಿದ ಸುತ್ತು ಹಾಗೂ ಯುಜಿಸಿಇಟಿ ಕೋರ್ಸ್‌ಗಳ 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಇಚ್ಛೆ/ಆಯ್ಕೆಗಳನ್ನು ಅದಲು-ಬದಲು ಹಾಗೂ ಹೊಸದಾಗಿ ಸೇರಿಸುವುದಕ್ಕೆ ಸೆ.9ರಂದು ಬೆಳಿಗ್ಗೆ 8ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಎಲ್ಲ ವರ್ಗದ ಅರ್ಹ ಅಭ್ಯರ್ಥಿಗಳು 10 ಸಾವಿರ ರೂಪಾಯಿ ಕಾಷನ್‌ ಡೆಪಾಸಿಟ್‌ ಪಾವತಿಸುವುದಕ್ಕೂ ನಾಳೆ ಬೆಳಿಗ್ಗೆ 8 ಗಂಟೆವರೆಗೆ ಸಮಯ ನೀಡಲಾಗಿದೆ. ಅಭ್ಯರ್ಥಿಗಳ ಕೋರಿಕೆ ಮೇರೆಗೆ ಸಮಯ ವಿಸ್ತರಣೆ ಮಾಡಿದ್ದು, ಈ ಅವಧಿಯೊಳಗೆ ಅಭ್ಯರ್ಥಿಗಳು ಕಾಷನ್ ಡೆಪಾಸಿಟ್ ಕಟ್ಟಿ, ಇಚ್ಛೆ/ ಆಯ್ಕೆ ದಾಖಲಿಸಿಕೊಳ್ಳಬೇಕು. ಇದು ಕೊನೆಯ ಅವಕಾಶ. ಪುನಃ ಸಮಯ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Read More

ಯಾವುದೇ ಕೈಯಲ್ಲಿರುವ ಬೆರಳುಗಳು ಒಂದೇ ರೀತಿ ಇಲ್ಲ, ಅದೇ ರೀತಿ ಜೀವನದಲ್ಲೂ ಏರುಪೇರು ಆಗುತ್ತಲೇ ಇರುತ್ತದೆ. ಒಂದು ವೇಳೆ ತಂತ್ರ ಶಕ್ತಿಯಿಂದ ತೊಂದರೆ ಅನುಭವಿಸುತ್ತಿದ್ದರೆ ಅಥವಾ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ,ಶತ್ರುಗಳಿಂದ ನಿಮಗೆ ತೊಂದರೆಯಾಗುತ್ತಿದ್ದರೆ ,ಗಂಡ-ಹೆಂಡತಿ ನಡುವೆ ಯಾವುದಾದರೂ ವಿಚಾರಕ್ಕೆ ಯಾವಾಗಲೂ ಕಲಹ ಆಗುತ್ತಿದ್ದರೆ ನಾವು ಇಂದು ತಿಳಿಸಿಕೊಡುವ ಈ ಉಪಾಯವನ್ನು ಮಾಡಿದರೆ ಜೀವನವಿಡಿ ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಜೀವನವನ್ನು ನಡೆಸಬಹುದು. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ,…

Read More

ಕಾರವಾರ: ಅಂಗನವಾಡಿ ಬಳಿಯಲ್ಲಿದ್ದಂತ ಬೃಹತ್ ಗಾತ್ರದ ಆಲದಮರವೊಂದು ಮುರಿದು ಬಿದ್ದ ಪರಿಣಾಮ, ಗರ್ಭಿಣಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಧಾರುಣ ಘಟನೆ ಯಲ್ಲಾಪುರದ ಬಳಿಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಬಳಿಯಲ್ಲಿ ಅಂಗನವಾಡಿಯಿಂದ ಮನೆಗೆ ಮರಳುತ್ತಿದ್ದಂತ ವೇಳೆಯಲ್ಲಿ ದಾರಿಯಲ್ಲಿದ್ದಂತ ಆಲದ ಮರವು ದಿಢೀರ್ ಮುರಿದು ಬಿದ್ದಿದೆ. ಈ ಪರಿಣಾಮ 5 ತಿಂಗಳ ಗರ್ಭಿಣಿಯಾಗಿದ್ದಂತ ಬಾಬು ಖರಾತ್(28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಇದೇ ಘಟನೆಯಲ್ಲಿ ಸ್ವಾತಿ ಬಾಬು ಖರಾತ್(17), ಘಾಟು ಲಕ್ಕು ಕೊಕರೆ(5), ಶ್ರಾವಣಿ ಬಾಬು ಖರಾತ್(2), ಶಾಂಭವಿ ಬಾಬು ಖರಾತ್ (4) ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಗೇ ಸಾನ್ವಿ ಬಾಬು ಕೊಕರೆ (5), ವಿನಯ ಲಕ್ಕು ಕೊಕರೆ(5) ಮತ್ತು ಅನುಶ್ರೀ ಮಾಂಬು ಕೊಕರೆ(5) ಎಂಬ ಪುಟಾಣಿಗಳಿಗೆ ಸಣ್ಣಪುಟ್ಟ ಗಾಯವಾಗಿದೆ. https://kannadanewsnow.com/kannada/bjp-delegation-visits-maddur-on-the-10th-state-president-by-vijayendra/ https://kannadanewsnow.com/kannada/no-need-to-go-to-the-state-office-no-need-to-see-va-ri-just-do-this-to-get-these-certificates/

Read More

ನವದೆಹಲಿ: ಬಿಜೆಪಿ ನಿಯೋಗವು ಇದೇ 10ರಂದು ಮದ್ದೂರಿಗೆ ಭೇಟಿ ಕೊಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ನಾನು, ನಮ್ಮ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಪಕ್ಷದ ಮುಖಂಡರು ಈ ನಿಯೋಗದಲ್ಲಿ ಇರುವರು ಎಂದು ಅವರು ಪರಿಷ್ಕøತ ಪ್ರವಾಸದ ಕುರಿತು ಮಾಹಿತಿ ನೀಡಿದ್ದಾರೆ. ಮದ್ದೂರಿನ ಗಲಭೆಕೋರರನ್ನು ಕೂಡಲೇ ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ. ಹೆಣ್ಮಕ್ಕಳ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಅವರನ್ನು ಮತ್ತು ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಲಿದ್ದೇವೆ ಎಂದು ನುಡಿದರು. ಮದ್ದೂರಿಗೆ ತೆರಳಿ ಹಿಂದೂ ಸಮಾಜಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರ ಹೇಳಿಕೆ ಗಮನಿಸಿದರೆ ಮೈ ಉರಿಯುತ್ತದೆ. ಹೆಣ್ಮಕ್ಕಳ ಮೇಲೆ ಲಾಠಿಚಾರ್ಜ್ ಸಣ್ಣಪುಟ್ಟ ಘಟನೆ ಎಂದು ಗೃಹ ಸಚಿವರು ಹೇಳಿಕೆ ನೀಡುತ್ತಾರೆ ಎಂದು ಅವರು ಖಂಡಿಸಿದ್ದಾರೆ. https://kannadanewsnow.com/kannada/india-register-first-ever-win-against-oman-at-cafa-nations-cup-2025/ https://kannadanewsnow.com/kannada/no-need-to-go-to-the-state-office-no-need-to-see-va-ri-just-do-this-to-get-these-certificates/

Read More