Author: kannadanewsnow09

ಗೌರಿಬಿದನೂರು: 8ನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಖಾಸಗಿ ಶಾಲೆಯಲ್ಲಿ ಥಳಿಸಿದ್ದರ ವಿರುದ್ಧ ಪೋಷಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಮಕ್ಕಳ ರಕ್ಷಣಾ ಆಯೋಗದಿಂದ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ಸೂಚಿಸಲಾಗಿದೆ. ನಿನ್ನೆ ಗೌರಿಬಿದನೂರಿನ ಖಾಸಗಿ ಶಾಲೆಯೊಂದರಲ್ಲಿ 8ನೇ ತರಗತಿ ವಿದ್ಯಾರ್ಥಿ ಸುಶಾಂತ್ ಗೆ ಶಿಕ್ಷಕರೊಬ್ಬರು ಥಳಿಸಿದಂತ ಆರೋಪ ಕೇಳಿ ಬಂದಿತ್ತು. ಥಳಿತಕ್ಕೆ ಒಳಗಾಗಿದ್ದಂತ ವಿದ್ಯಾರ್ಥಿಯನ್ನು ನಿನ್ನೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಸಿಬ್ಬಂದಿ ಚಿಕಿತ್ಸೆ ಕೊಡಿಸಿದ್ದರು. ಶಾಲಾ ಶಿಕ್ಷಕ ವಿದ್ಯಾರ್ಥಿಯನ್ನು ಥಳಿಸಿದ್ದ ಬಗ್ಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದರು. ಸೂಕ್ತ ಕಾನೂನು ಕ್ರಮಕ್ಕೂ ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಮಕ್ಕಳ ರಕ್ಷಣಾ ಆಯೋಗದಿಂದ ಸ್ವಯಂ ಪ್ರೇರಿತ ಕೇಸ್ ದಾಖಲಿಸಲಾಗಿದೆ. ಶಾಲೆಗೆ ಭೇಟಿ ನೀಡಿ, ಐದು ದಿನಗಳಲ್ಲಿ ವರದಿ ನೀಡುವಂತೆ ಸಂಬಂಧಿಸಿದಂತ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಮಕ್ಕಳ ರಕ್ಷಣಾ ಆಯೋಗವು ಸೂಚಿಸಿದೆ. ಗೌರಿಬಿದನೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಥಳಿಸಿದ್ದರ ಬಗ್ಗೆ ಸಂಪೂರ್ಣ ವರದಿಯನ್ನು ಐದು ದಿನಗಳಲ್ಲಿ ನೀಡುವಂತೆ ಮಕ್ಕಳ…

Read More

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವಂತೆ ಸಲಹೆ ನೀಡಿದ್ದೇ ರಾಜ್ಯ ಸರ್ಕಾರ ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದಂತ ಅವರು, ಕರ್ನಾಟಕ ಸರ್ಕಾರದ ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಫೇರ್ ಫಿಕ್ಸೇಷನ್ ಸಮಿತಿಯ ಮುಂದೆ ಮೆಟ್ರೋ ದರಗಳನ್ನು ವಾರ್ಷಿಕವಾಗಿ ಪರಿಷ್ಕರಿಸುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ದಾಖಲೆಗಳನ್ನು ಉಲ್ಲೇಖಿಸಿ ತಿಳಿಸಿದರು. ಕೊಚ್ಚಿನ್, ಹೈದರಾಬಾದ್, ದೆಹಲಿಯಲ್ಲಿ ವಾರ್ಷಿಕ ದರ ಪರಿಷ್ಕರಣೆ ನಿಯಮ ಇಲ್ಲ. ಆದರೇ ಕರ್ನಾಟಕದ ಅಧಿಕಾರಿಗಳು ಪ್ರತಿ ವರ್ಷ ದರ ಏರಿಕೆಗೆ ಶಿಫಾರಸ್ಸು ಮಾಡಿದ್ದರು. ಈ ಬಗ್ಗೆ ಬಿಎಂಆರ್ ಸಿಎಲ್ ಫೇರ್ ಫಿಕ್ಸೇಷನ್ ಸಮಿತಿಗೆ ಪತ್ರ ಬರೆದು, ಶೀಘ್ರವಾಗಿ ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿದೆ ಎಂದರು. ಅಂದಹಾಗೇ ಕಳೆದ ವರ್ಷ ಕೂಡ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಲಾಗಿತ್ತು. ಶೇ.90ರಷ್ಟು ಟಿಕೆಟ್ ದರ…

Read More

ಶಿವಮೊಗ್ಗ: ಶಿವಮೊಗ್ಗ ತಾವರೆಚಟ್ನಹಳ್ಳಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಫೆ.08 ಮತ್ತು 09 ರಂದು ಬೆಳಗ್ಗೆ 09.00 ರಿಂದ ಸಂಜೆ 5.00 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ಯ ವ್ಯತ್ಯಯ ಉಂಟಾಗಲಿದೆ. ಕುವೆಂಪುನಗರದ ಸೂಡ ಸಿ ಮತ್ತು ಡಿ ಬ್ಲಾಕ್, ಶಿವಕುಮಾರ‍ಸ್ವಾಮಿ ಲೇಔಟ್ ಮತ್ತು ಇನ್ಫ್ರಾ ಸಿಟಿ ಹಾಗೂ ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಕಲ್ಲಾಪುರ, ಬಸವನಗಂಗೂರು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. https://kannadanewsnow.com/kannada/four-members-of-a-family-commit-suicide-after-being-fed-up-with-14-year-old-boys-online-game-addiction/

Read More

ಬಿಹಾರ: 14ರ ಬಾಲಕನ ಆನ್ ಲೈನ್ ಗೇಮ್ ಚಟಕ್ಕೆ ಬೇಸತ್ತಂತ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಬಿಹಾರದ ರಾಜಗೀರ್ ನ ಧರ್ಮಶಾಲೆಯಲ್ಲಿ ನಡೆದಿದೆ. 14 ವರ್ಷದ ಬಾಲಕ ಅಮೋಘ ಕೀರ್ತಿ ಆನ್ ಲೈನ್ ಗೇಮ್ ಚಟಕ್ಕೆ ಬಿದ್ದಿದ್ದನು. ಎಷ್ಟೇ ಬುದ್ಧಿವಾದ ಹೇಳಿದರೂ ಆನ್ ಲೈನ್ ಗೇಮ್ ಆಡುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಬೇಸತ್ತಂತ ಮಾವ ನಾಗಪ್ರಸಾದ್, 14 ವರ್ಷದ ಬಾಲಕ ಅಮೋಘ ಕೀರ್ತಿಯನ್ನು ಕೊಂದಿದ್ದರು. ಆಗಸ್ಟ್ 8, 2025ರಂದು ಅಮೋಘ ಕೀರ್ತಿ ಹತ್ಯೆಯನ್ನು ಮಾಪ ನಾಗಪ್ರಸಾದ್ ಹತ್ಯೆ ಮಾಡಿದ್ದರು. ಇದೀಗ ಇದೇ ವಿಚಾರವಾಗಿ ಮಾನಸಿಕವಾಗಿ ನೊಂದು ಗುಬ್ಬಿ ಮೂಲದ ಒಂದೇ ಕುಟುಂಬದ ಬಿಆರ್ ಸುಮಂಗಲಾ, ಜಿಆರ್ ನಾಗಪ್ರಸಾದ್, ಜಿಆರ್ ಶಿಲ್ಪಾ, ಜಿಆರ್ ಶ್ರುತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಶರಣಾದವರು ಅಮೋಘ ಕೀರ್ತಿಯ ತಾಯಿ ಮತ್ತು ಕುಟುಂಬದ ನಾಲ್ವರಾಗಿದ್ದಾರೆ. 14 ವರ್ಷದ ಬಾಲಕ ಅಮೋಘ ಕೀರ್ತಿ ಫ್ರೀ ಫೈರ್ ಗೇಮ್ ಚಟಕ್ಕೆ ದಾಸನಾಗಿದ್ದನು. ಈತ ಶಿಲ್ಪಾ ಪುತ್ರನಾಗಿದ್ದನು.

Read More

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಚಂದಾಪುರ ವಿಭಾಗದ 220/66/11ಕೆ.ವಿ ಸರ್ಜಾಪುರ ಗ್ರಾಮೀಣ, 66/11ಕೆ.ವಿ ಬೊಮ್ಮಸಂದ್ರ, 220/66/11ಕೆ.ವಿ ಜಿಗಣಿ ಗ್ರಾಮೀಣ, 66/11ಕೆ.ವಿ ಅತ್ತಿಬೆಲೆ, 66/11ಕೆ.ವಿ ಜಿಗಣಿ, 66/11ಕೆ.ವಿ ಜಿಗಣಿ ಲಿಂಕ್ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 08.02.2026 (ಭಾನುವಾರ) ರಂದು ಬೆಳ್ಳಿಗೆ 11:00 ರಿಂದ ಸಂಜೆ 05:00 ಗಂಟೆಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸರ್ಜಾಪುರ, ಬಿಲ್ಲಾಪುರ, ಎಂ.ಸಿ.ಹಳ್ಳಿ, ಬಿದರಗುಪ್ಪೆ, ಅತ್ತಿಬೆಲೆ ಭಾಗಗಳು, ಹಂಡೇನಹಳ್ಳಿ, ಬಿ.ಹೊಸಹಳ್ಳಿ, ಬೊಮ್ಮಸಂದ್ರ, ಜಿಗಣಿ ಕೈಗಾರಿಕಾ ಪ್ರದೇಶ, ಕೊಪ್ಪ ಗ್ರಾಮ, ನಿಸರ್ಗ ಬಡಾವಣೆ, ಮದಲಿಂಗಪುರ, ವಡ್ಡರಪಾಳ್ಯ, ಕಳ್ಳಬಾಳು ಮತ್ತು ಅಂಬೇಡ್ಕರ್ ಕೈಗಾರಿಕಾ ಪ್ರದೇಶ, ಅತ್ತಿಬೆಲೆ, ಯಡವೀಳ್ಯ ಅತ್ತಿಬೆಲೆ, ಅತ್ತಿಬೆಲೆ, ಜಿಗಣಿ ಕೈಗಾರಿಕಾ ಪ್ರದೇಶ, ಹಾರಗದ್ದೆ, ಜಿಗಣಿ ಕೈಗಾರಿಕಾ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. ಚಿಕ್ಕಬಳ್ಳಾಪುರ ವಿಭಾಗದ 66/11kV S/s CBPura IA, 66/11kV S/s CB ಪುರ U, 66/11kV S/s ನಲ್ಲಿಮರದಹಳ್ಳಿ, 220/66/11kV R/s ಗೌರಿಬಿದನೂರು, 220/66/11kV R/s ಮಿಟ್ಟೆಮರಿಯಲ್ಲಿ ದಿನಾಂಕ 08.02.2026 (ಭಾನುವಾರ) ಬೆಳಿಗ್ಗೆ…

Read More

ಬೆಂಗಳೂರು: ಕೌಟುಂಬಿಕ ಕಲಹದಿಂದಾಗಿ ತನ್ನ ಅಣ್ಣನನ್ನೇ ಚಾಕುವಿನಿಂದ ಇರಿದು ತಮ್ಮನೊಬ್ಬ ಕೊಲೆಗೈದಿರುವಂತ ಘಟನೆ ಮೈಲಸಂದ್ರದಲ್ಲಿ ನಡೆದಿದೆ. ಆ ಮೂಲಕ ಬೆಂಗಳೂರು ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಮೈಲಸಂದ್ರದಲ್ಲಿ ಈ ಘಟನೆ ನಡೆದಿದೆ. ಕೆಲಸದಿಂದ ಮನೆಗೆ ಮರಳಿದಂತ ಅಣ್ಣ ಬಾಲರಾಜ್ ಮೇಲೆ ತಮ್ಮ ಆಂಥೋನಿ ರಾಜ್ ಚಾಕುವಿನಿಂದ ಈ ದಾಳಿ ನಡೆಸಿದ್ದಾನೆ. ಹಿಂದಿನಿಂದ ಅಣ್ಣ ಬಾಲರಾಜ್ ಒದ್ದಿರುವಂತ ತಮ್ಮ ಆಂಥೋನಿ ರಾಜ್ ಮನಬಂದಂತೆ ಹೊಟ್ಟೆ ಸೇರಿದಂತೆ ಇತರೆ ಭಾಗಗಳಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ತೀವ್ರ ರಕ್ತಸ್ತ್ರಾವದಿಂದ ಅಣ್ಣ ಬಾಲರಾಜ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿರೋದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/bumper-gift-to-54-corporation-board-chairmen-government-orders-granting-them-the-status-of-ministers-of-state/

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ 54 ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಆದೇಶಿಸಿದೆ. ಆ ಮೂಲಕ ನಿಗಮ-ಮಂಡಳಿ ಅಧ್ಯಕ್ಷರಿಗೆ ಬಂಫರ್ ಗಿಫ್ಟ್ ನೀಡಿದೆ. ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಆದೇಶಿಸಿರುವುದಾಗಿ ತಿಳಿಸಿದೆ. ಯಾರಿಗೆಲ್ಲ ರಾಜ್ಯ ಸಚಿವರ ಸ್ಥಾನಮಾನ? ಇಲ್ಲಿದೆ ಲೀಸ್ಟ್ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದಂತ ಎನ್.ರಂಗಸ್ವಾಮಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ವಡ್ನಾಳ್ ಜಗದೀಶ್, ರಾಜ್ಯ ತಜ್ಞರ ಮೌಲ್ಯ ಮಾಪನ ಸಮಿತಿಯ ಅಧ್ಯಕ್ಷ ಮಹೇಶ್.ಎಂ.ಎನ್, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್.ಎಂ, ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಸತೀಶ್ ಕೃಷ್ಣ ಸೈಲ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ…

Read More

ಬೆಂಗಳೂರು : ಜನರು ಉಳಿತಾಯದ ಹೂಡಿಕೆಗಳು ಸರ್ಕಾರದ ಎಂ ಎಸ್ ಐ ಎಲ್ ಸಂಸ್ಥೆಯಲ್ಲಿ ಸುಭದ್ರವಾಗಿರುವ ಗ್ಯಾರಂಟಿ ಇದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿದ್ದ MSIL ಚಿಟ್ಸ್ ಹೊಸ ಸಾಫ್ಟ್ ವೆರ್ ಹಾಗೂ ಮೊಬೈಲ್ ಆಪ್ ಬಿಡುಗಡೆಗೊಳಿಸಿ ಮಾತನಾಡಿದರು. ಎಂಎಸ್ ಐ ಎಲ್ ಸರ್ಕಾರಿ ಸಂಸ್ಥೆಯು ಹಲವು ದಶಕಗಳಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. 2005 ರಿಂದ ಚಿಟ್ ಫಂಡ್ ವ್ಯವಸ್ಥೆ ಪ್ರಾರಂಭವಾಗಿದೆ. ಉಳಿತಾಯದ ಸಂಸ್ಕೃತಿ ಅತ್ಯವಶ್ಯ.ವಾಗಿದ್ದು, ಅಗತ್ಯ ಸಂದರ್ಭದಲ್ಲಿ ಉಳಿತಾಯದ ಹಣ ನೆರವಿಗೆ ಬರುತ್ತದೆ. ಜಾತಿವರ್ಗಗಳ ಬೇಧವಿಲ್ಲದೇ ಜಾರಿಯಾಗುವ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ದಿಂದ ಉಳಿತಾಯವಾಗುವ ಹಣವನ್ನು ಜನರು ವಿಶೇಷವಾಗಿ ಮಹಿಳೆಯರು ಹೂಡಿಕೆ ಮಾಡಬೇಕು ಎಂದರು. ಜನರ ಹೂಡಿಕೆ ಭದ್ರತೆಯ ಖಾತ್ರಿ ಹೂಡಿಕೆ ಹಣವನ್ನು ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯವಾಗಿದ್ದು, ಎಂಎಸ್ ಐ ಎಲ್ ನ ಚಿಟ್ ಫಂಡ್ ಈ ಭರವಸೆಯನ್ನು ನೀಡುತ್ತದೆ. ಸಾಮಾನ್ಯವಾಗಿ…

Read More

ಮಂಗಳೂರು : ಮೆಟ್ರೋ ದರ ಬಗ್ಗೆ ತೀರ್ಮಾನ ಮಾಡಲು ಪ್ರತ್ಯೇಕ ಸಮಿತಿ ಇದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಇದರ ಮುಖ್ಯಸ್ಥರು. ಮೆಟ್ರೋ ದರ ಏರಿಕೆ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಮಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ನಾನು ಬೆಂಗಳೂರಿಗೆ ಮರಳಿದ ಬಳಿಕ ಈ ಬಗ್ಗೆ ಚರ್ಚೆ ಮಾಡುವೆ. ಜನರಿಗೆ ತೊಂದರೆ ನೀಡಲು ನಮಗೆ ಇಷ್ಟವಿಲ್ಲ. ಆರ್ಥಿಕ ಸ್ಥಿತಿಗತಿ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು. ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು ನೀವು ಸಿಎಂ ಆಗಬೇಕು ಎಂಬ ಕನಸು ಜನರಿಗಿದೆ ಎಂದು ಕೇಳಿದಾಗ, ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ನಿಮಗೂ (ಮಾಧ್ಯಮ) ಇದೆ. ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು ಎಂದು ತಿಳಿಸಿದರು. ದಲಿತ ಸಂಘಟನೆಗಳು ಪರಮೇಶ್ವರ್ ಅವರು ಸಿಎಂ ಆಗಬೇಕು ಎಂದು ಆಸೆ ಪಟ್ಟಿರುವ ಬಗ್ಗೆ ಕೇಳಿದಾಗ, “ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದನ್ನು ನಾನು ಬೇಡ ಎಂದು ಹೇಳಲು…

Read More

ಮೈಸೂರು: ಜಗತ್ತಿನ ವಿವಿಧ ದೇಶಗಳ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ‘ಪರಿದೃಶ್ಯ–2026’ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ದಸರಾ ನಗರಿ ಮೈಸೂರು ಸಜ್ಜಾಗುತ್ತಿದೆ. ಫೆಬ್ರವರಿ 20ರಿಂದ 22ರವರೆಗೆ ಐತಿಹಾಸಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಉತ್ಸವ ನಡೆಯಲಿದೆ. ಮೈಸೂರು ಸಿನಿಮಾ ಸೊಸೈಟಿ (ಎಂಸಿಎಸ್) ಆಯೋಜಿಸಿರುವ ಈ ನಾಲ್ಕನೇ ಆವೃತ್ತಿಯ ಉತ್ಸವದಲ್ಲಿ ಭಾರತ ಸೇರಿದಂತೆ 114 ದೇಶಗಳಿಂದ ಆಯ್ಕೆಯಾದ ಕಿರುಚಿತ್ರಗಳು ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ. ಪ್ರೇಕ್ಷಕರ ಹೆಚ್ಚಿನ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಬಾರಿ ವಿಶಾಲ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ‘ಪರಿದೃಶ್ಯ’ ಉತ್ಸವವು ವರ್ಷದಿಂದ ವರ್ಷಕ್ಕೆ ಯಶೋಗಾಥೆ ಬರೆಯುತ್ತಿದೆ. ಮೊದಲ ಆವೃತ್ತಿಯಲ್ಲಿ 10 ದೇಶಗಳಿಂದ 150 ಚಿತ್ರಗಳು ಪ್ರದರ್ಶನಗೊಂಡಿದ್ದರೆ, ಮೂರನೇ ಆವೃತ್ತಿಯಲ್ಲಿ 109 ದೇಶಗಳಿಂದ 3,100ಕ್ಕೂ ಹೆಚ್ಚು ಚಿತ್ರಗಳು ಭಾಗವಹಿಸಿದ್ದವು. 2026ರ ಆವೃತ್ತಿಗೆ 114 ದೇಶಗಳಿಂದ 3,000ಕ್ಕೂ ಅಧಿಕ ಚಿತ್ರಗಳ ಭಾಗವಹಿಸುವಿಕೆಗೆ ಪ್ರಸ್ತಾವನೆಗಳು ಬಂದಿರುವುದು ಕುತೂಹಲಕಾರಿ ಬೆಳವಣಿಗೆ. ಉತ್ಸವ ನಿರ್ದೇಶಕಿ ಹಾಗೂ ಮೈಸೂರು ಸಿನಿಮಾ ಸೊಸೈಟಿಯ ಗೌರವ…

Read More