Author: kannadanewsnow09

ಬೆಂಗಳೂರು : ರಾಜ್ಯ ಸರ್ಕಾರವು ಸಿನಿ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂದಿನಿಂದ ಚಿತ್ರಮಂದಿರಗಳಲ್ಲಿ 200 ರೂ.ಟಿಕೆಟ್ ಗೆ ಅನುಮೋದನೆ ನೀಡಿದೆ. ಈ ಕುರಿತು ಸರ್ಕಾರ ಅಧಿಕೃತ ಆದೇಶ ಕೂಡ ಹೊರಡಿಸಿದೆ. ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಹೀಗಾಗಿ ರಾಜ್ಯದ ಎಲ್ಲಾ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ಮುಂದೆ ಟಿಕೆಟ್ ದರ ಏಕರೂಪವಾಗಿ ಇರಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ರಾಜ್ಯದಲ್ಲಿರುವ ಎಲ್ಲಾ ಮಲ್ಟಿಫ್ಲೆಕ್ಸ್ ಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಿ ಆದೇಶಿಸಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಲಾಗಿದೆ. ರೂ.200 ಮೀರದಂತೆ ಆದೇಶ ಹೊರಡಿಸಿದೆ. ಎಲ್ಲಾ ಭಾಷೆಯ ಸಿನಿಮಾಗಳಿಗೂ ಏಕರೂಪದ ದರವನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿನ ಎಲ್ಲಾ ಭಾಷೆಯ ಸಿನಿಮಾಗಳಿಗೂ ಏಕರೂಪದ ದರವನ್ನು ಜಾರಿಗೊಳಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

Read More

ಒಬ್ಬ ವ್ಯಕ್ತಿಯು ಬಡವನಾಗಿ ಹುಟ್ಟಿ ಬಡ ಜೀವನವನ್ನು ನಡೆಸಲು ಹಲವು ಕಾರಣಗಳಿವೆ. ಆಧ್ಯಾತ್ಮಿಕವಾಗಿ, ವಿವಿಧ ಪುರಾಣಗಳು, ಸಿದ್ಧರ ಬೋಧನೆಗಳು ಮತ್ತು ವೇದಾಂತ ದೃಷ್ಟಿಕೋನವು ವ್ಯಕ್ತಿಯು ಬಡವನಾಗಲು ಕಾರಣಗಳನ್ನು ನಮಗೆ ಹೇಗೆ ವಿವರಿಸುತ್ತದೆ? ಈ ಲೇಖನದಲ್ಲಿ, ನಾವು ಆಸಕ್ತಿದಾಯಕ ಆಧ್ಯಾತ್ಮಿಕ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ…

Read More

ನೇಪಾಳದ ರಾಜಕೀಯ ಬಿಕ್ಕಟ್ಟು ನಾಟಕೀಯ ತಿರುವು ತಲುಪಿದ್ದು, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ದೇಶದ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೀಗಾಗಿ ನೇಪಾಳ ಸಂಸತ್ ವಿಸರ್ಜನೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ದೇಶದಲ್ಲಿ ಮಾರಕ ಅಶಾಂತಿಯ ನಂತರ ವ್ಯಾಪಕ ರಾಜಕೀಯ ಬದಲಾವಣೆಯನ್ನು ಒತ್ತಾಯಿಸಿರುವ ಅಧ್ಯಕ್ಷ ರಾಮಚಂದ್ರ ಪೌಡೆಲ್, ಸುಶೀಲಾ ಕರ್ಕಿ ಮತ್ತು ಜೆನ್-ಝಡ್ ಪ್ರತಿಭಟನಾ ಚಳವಳಿಯ ಪ್ರತಿನಿಧಿಗಳ ನಡುವಿನ ತೀವ್ರವಾದ ಮಾತುಕತೆಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಒಪ್ಪಂದದ ಭಾಗವಾಗಿ, ನೇಪಾಳದ ಸಂಸತ್ತನ್ನು ವಿಸರ್ಜಿಸಲಾಗಿದೆ. ಇದು ಸಾಂವಿಧಾನಿಕ ಹೊಂದಾಣಿಕೆಯ ಮೂಲಕ ಸುಶೀಲಾ ಕರ್ಕಿ ಅವರ ಉನ್ನತೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಸುಶೀಲಾ ಕರ್ಕಿ ಅವರನ್ನು ಮೊದಲು ಮೇಲ್ಮನೆಗೆ ನಾಮನಿರ್ದೇಶನ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ನೇಪಾಳ ಸಂಸತ್ತು ವಿಸರ್ಜನೆಯಾಗಿದೆ. ಸುಶೀಲಾ ಕರ್ಕಿ ಇಂದು ರಾತ್ರಿ 8.30ಕ್ಕೆ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. https://twitter.com/ANI/status/1966499075190374879 https://kannadanewsnow.com/kannada/good-news-for-state-government-employees-extension-of-the-deadline-to-register-for-the-salary-package/ https://kannadanewsnow.com/kannada/bjps-n-ravikumar-insists-on-action-against-the-police-officer-for-permission-to-dj-in-chitradurga/

Read More

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11ಕೆವಿ ಹೆಚ್.ಎ.ಎಲ್ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 13.09.2025 (ಶನಿವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 04:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇಸ್ರೋ (ಮಾರತ್ತಹಳ್ಳಿ ಮತ್ತು ಎನ್ಎಎಲ್), ಬಾಗ್ಮನೆ ಟೆಕ್ ಪಾರ್ಕ್, ಜಿಟಿರೆ, ಡಬ್ಲ್ಯುಟಿಸಿ, 220 ಕೆವಿ ಹಾಲ್ ಎಹೆಚ್ಟಿ, ಇಂದಿರಾನಗರ ಡಿಫೆನ್ಸ್ ಕಾಲೋನಿ, 100 ಅಡಿ ರಸ್ತೆ, ಇಂದಿರಾನಗರ 1 ನೇ ಮತ್ತು 2 ನೇ ಹಂತ, 80 ಅಡಿ ರಸ್ತೆ, ಸಿಎಮ್ಹೆಚ್ ರಸ್ತೆ, ಕೃಷ್ಣ ದೇವಸ್ಥಾನ ರಸ್ತೆ ಎಚ್ ಕಾಲೋನಿ, ಜೀವನ್ ಭೀಮಾ, ಮಠನಗರ 1 ಜೀವನ್ ಭೀಮನಗರ, ಬಿಡಿ ಲೇಔಟ್, ಎಲ್ಐಸಿ ಕಾಲೋನಿ, ತಿಪ್ಪನಸಂದ್ರ, ರಮೇಶ್ ನಗರ, ಡಿಫೆನ್ಸ್, ಟಾಟಾ ಹೌಸಿಂಗ್, ರಾಜವಂಶ, ಬಿಇಎಂಎಲ್, ಎಡಿಎ, ಮಲ್ಲೇಶಪಾಳ್ಯ, ಮಾರುತಿ ನಾರ್, ಕಲ್ಲಪ್ಪ ಲೇಔಟ್, ರಾಜಣ್ಣ ಮತ್ತು ಎಲ್ ಎನ್ ರೆಡ್ಡಿ ಕಾಲೋನಿ, ಬಸವನಗರ, ಅಣ್ಣಾಸಂದ್ರ ಪಾಳ್ಯ, ಜೌಟ್, ಜೌಟ್ ರಸ್ತೆ, ಕೃಷ್ಣಪ್ಪ ಉದ್ಯಾನ, ವಿಮಾನ…

Read More

ಬೆಂಗಳೂರು: ಚಿತ್ರದುರ್ಗ ಜಿಲ್ಲೆಯಲ್ಲಿ ಗಣೇಶನ ಮೆರವಣಿಗೆ ಕಾರ್ಯಕ್ರಮದ ಡಿ.ಜೆ.ಗೆ ಸರ್ಕಾರ ಅನುಮತಿ ನೀಡಬೇಕೆಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮನವಿ ಮಾಡಿದ್ದಾರೆ. ಡಿಜೆ ವ್ಯವಸ್ಥೆ ಮಾಡಿರುವ ವಾಹನಕ್ಕೆ ನೀರು ಸುರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಚಿತ್ರದುರ್ಗದಲ್ಲಿ ಗಣೇಶನ ಮೆರವಣಿಗೆ ಡಿ.ಜೆ.ಯೊಂದಿಗೆ ಹೋಗಲು ಯೋಜನೆ ಮಾಡಿದ್ದೇವೆ. ಆದರೆ, ಹಿಂದೂ ಕಾರ್ಯಕರ್ತರಿಗೆ ಅನುಮತಿ ನೀಡುವುದಿಲ್ಲ ಎಂದು ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ ಎಂದು ಆಕ್ಷೇಪಿಸಿದರು. ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಮದ್ದೂರಿನಲ್ಲಿ ಡಿ.ಜೆ.ಗೆ ಅನುಮತಿ ನೀಡಿದ ಹಾಗೆ ಚಿತ್ರದುರ್ಗ ಜಿಲ್ಲೆಯಲ್ಲೂ ಡಿ.ಜೆ.ಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಚಿತ್ರದುರ್ಗದಲ್ಲಿ ಸೆ.13 ರಂದು ಗಣಪತಿ ವಿಸರ್ಜನೆ ಕಾರ್ಯಕ್ರಮವಿದೆ. ಆ ಕಾರ್ಯಕ್ರಮಕ್ಕೆ ಸರ್ಕಾರ ಡಿ.ಜೆ. ಬಳಸಲು ಅನುಮತಿ ನೀಡುತ್ತಿಲ್ಲ. ಚಿತ್ರದುರ್ಗದ ಬಿಜೆಪಿ ಕಾರ್ಯಕರ್ತರು ಡಿ.ಜೆ. ವ್ಯವಸ್ಥೆ…

Read More

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 4ನೇ ರೈಲು ಸಂಚಾರ ಆರಂಭವಾಗಿದೆ. ಹೀಗಾಗಿ ಇನ್ಮುಂದೆ 19 ನಿಮಿಷಕ್ಕೊಂದು ರೈಲು ಸಂಚಾರವು ಪ್ರಯಾಣಿಕರಿಗೆ ಲಭ್ಯವಾಗಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿ.ಎಂ.ಆರ್.ಸಿ.ಎಲ್)  ದಿನಾಂಕ 10ನೇ ಸೆಪ್ಟೆಂಬರ್ 2025 ರಿಂದ ಜಾರಿಗೆ ಬರುವಂತೆ ಹಳದಿ ಮಾರ್ಗದಲ್ಲಿ 4ನೇ ರೈಲು ಸೆಟ್ ಅನ್ನು ಕಾರ್ಯಾಚರಣೆ ಸೇರಿಸಲಾಗಿದೆ. ಮೆಟ್ರೋ ರೈಲುಗಳ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಪರಿಷ್ಕರಿಸ ಲಾಗಿದೆ: ಎಲ್ಲಾ ದಿನಗಳಲ್ಲಿ ರೈಲುಗಳು ಈಗ 19 ನಿಮಿಷಗಳ ಮಧ್ಯಂತರದಲ್ಲಿ (ಈಗಿನ 25 ನಿಮಿಷಗಳ ಮಧ್ಯಂತರದ ಬದಲಿಗೆ) ಚಲಿಸುತ್ತವೆ. ಮೊದಲ ರೈಲು ಸಮಯ: ಸೋಮವಾರದಿಂದ ಶನಿವಾರದಂದು, ಮೊದಲ ವಾಣಿಜ್ಯ ಸೇವೆಯು ಬೆಳಿಗ್ಗೆ ಈಗಿನ 6.30 ಗಂಟೆಯ ಬದಲಿಗೆ ಬೆಳಿಗ್ಗೆ 06:00 ಗಂಟೆಗೆ ಪ್ರಾರಂಭವಾಗುತ್ತದೆ. ಭಾನುವಾರದಂದು, ಮೊದಲ ರೈಲು ಬೆಳಿಗ್ಗೆ 07:00 ಗಂಟೆಗೆ ಪ್ರಾರಂಭವಾಗಲಿದೆ. ಕೊನೆಯ ರೈಲು ಸಮಯ: ಆರ್.ವಿ. ರಸ್ತೆಯಿಂದ: ರಾತ್ರಿ 11:55 (ಬದಲಾವಣೆ ಇಲ್ಲ) ಬೊಮ್ಮಸಂದ್ರದಿಂದ: ರಾತ್ರಿ 10:42 (ಬದಲಾವಣೆ ಇಲ್ಲ) ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ…

Read More

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದಾಗಿ ತಪ್ಪೊಪ್ಪಿಕೊಂಡಿದ್ದಂತ ದೂರುದಾರ ಬುರುಡೆ ಚಿನ್ನಯ್ಯ ಜೈಲುಪಾಲಾಗಿದ್ದರು. ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯ ಆದೇಶವನ್ನು ಸೆಪ್ಟೆಂಬರ್.16ಕ್ಕೆ ಕಾಯ್ದಿರಿಸಿದೆ. ಇಂದು ಬೆಳ್ತಂಗಡಿ ಕೋರ್ಟ್ ನಲ್ಲಿ ಬುರುಡೆ ಚಿನ್ನಯ್ಯ ಪರ ವಕೀಲರು ಜಾಮೀನಿಗಾಗಿ ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿತು. ವಿಚಾರಣೆಯ ಬಳಿಕ ಸೆಪ್ಟೆಂಬರ್.16ಕ್ಕೆ ಜಾಮೀನು ಆದೇಶ ಕಾಯ್ದಿರಿಸಿದೆ. ಜಾಮೀನಿಗೆ ಎಸ್ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ಈ ಎಲ್ಲವನ್ನು ವಿಚಾರಣೆ ನಡೆಸಿದಂತ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ. https://kannadanewsnow.com/kannada/the-suspect-who-shot-trumps-close-aide-charlie-kirk-has-been-arrested/ https://kannadanewsnow.com/kannada/charlie-kirks-killer-arrested-in-custody-trump-claims/

Read More

ಅಮೇರಿಕಾ: ಸಂಪ್ರದಾಯವಾದಿ ಕಾರ್ಯಕರ್ತ ಚಾರ್ಲಿ ಕಿರ್ಕ್ ಮೇಲೆ ಗುಂಡು ಹಾರಿಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ದೃಢಪಡಿಸಿದರು. ಫಾಕ್ಸ್ ನ್ಯೂಸ್‌ನಲ್ಲಿ ಮಾತನಾಡಿದ ಟ್ರಂಪ್, “ತಮಗೆ ತುಂಬಾ ಹತ್ತಿರವಿರುವ ಯಾರೋ ಒಬ್ಬರು ಅವರನ್ನು ಒಪ್ಪಿಸಿದ್ದಾರೆ” ಮತ್ತು ಶುಕ್ರವಾರದ ನಂತರ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಿದರು. https://twitter.com/RapidResponse47/status/1966474851809403193 ಆತ (ಶಂಕಿತ) ಬಂಧನದಲ್ಲಿದ್ದಾನೆ ಎಂದು ನನಗೆ ಖಚಿತವಾಗಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು. ಕಿರ್ಕ್ ಕೊಲೆಗಾರನಿಗೆ ಮರಣದಂಡನೆ ವಿಧಿಸಬೇಕೆಂದು ಅವರು ಆಶಿಸಿದ್ದಾರೆ. ಕಿರ್ಕ್ ಅತ್ಯುತ್ತಮ ವ್ಯಕ್ತಿ ಮತ್ತು ಅವರು ಇದಕ್ಕೆ ಅರ್ಹರಾಗಿರಲಿಲ್ಲ ಎಂದಿದ್ದಾರೆ.

Read More

ಯುಕೆ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಚಾರ್ಲಿ ಕಿರ್ಕ್ ಅವರನ್ನು ಕಾರ್ಯಕ್ರಮವೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಿನ್ನೆಯಷ್ಟೇ ಎಫ್ ಬಿ ಐ ನಿಂದ ಆರೋಪಿಯ ಪ್ರಥಮ ಪೋಟೋ ಕೂಡ ಬಿಡುಗಡೆ ಮಾಡಲಾಗಿತ್ತು. ಈ ಬೆನ್ನಲ್ಲೇ ಇಂದು ಚಾರ್ಲಿ ಕಿರ್ಕ್ ಗುಂಡಿಕ್ಕಿ ಹತ್ಯೆಗೈದಿದ್ದಂತ ಆರೋಪಿಯನ್ನು ಬಂಧಿಸಿದ್ದಾರೆ. ಸೆಪ್ಟೆಂಬರ್.11ರಂದು ಅಮೆರಿಕದ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಪ್ರದಾಯವಾದಿ ಯುವ ನಾಯಕ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕ ಚಾರ್ಲಿ ಕಿರ್ಕ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರಿಗೆ ಗುಂಡು ಹಾರಿಸಿ, ಹತ್ಯೆಗೈಯ್ಯಲಾಗಿತ್ತು. ಇದೀಗ ಚಾರ್ಲಿ ಕಿರ್ಕ್ ಹಂತಕನ ಬಂಧಿಸಲಾಗಿದೆ. ಅಲ್ಲದೇ ಎಫ್ ಬಿ ಐ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದನ್ನು ಟ್ರಂಪ್ ದೃಢಪಡಿಸಿದ್ದಾರೆ. https://kannadanewsnow.com/kannada/from-september-27-neha-hiremaths-murder-case-trial-court-has-scheduled-the-date/ https://kannadanewsnow.com/kannada/fir-registered-against-bjp-leaders-who-protested-regarding-internal-reservations-in-bangalore/

Read More

ಹುಬ್ಬಳ್ಳಿ: ಸೆಪ್ಟೆಂಬರ್.27ರಿಂದ ನೇಹಾ ಹಿರೇಮಠ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಯಲ್ ನಡೆಸಲು ದಿನಾಂಕವನ್ನು ಕೋರ್ಟ್ ನಿಗದಿ ಪಡಿಸಿದೆ. ಹುಬ್ಬಳ್ಳಿಯ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಲ್ಲಿ ಟ್ರಯಲ್ ನಡೆಯಲಿದೆ. ನೇಹಾ ಹಿರೇಮಠ್ ಹತ್ಯೆಯಾದ 17 ತಿಂಗಳ ನಂತ್ರ ಟ್ರಯಲ್ ಆರಂಭಗೊಳ್ಳುತ್ತಿದೆ. ಏಪ್ರಿಲ್ 18, 2024ರಂದು ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆಯಾಗಿತ್ತು. ಹುಬ್ಬಳ್ಳಿಯ ಕೆ ಎಲ್ ಇ ವಿವಿ ಆವರಣದಲ್ಲಿ ನೇಹಾ ಹತ್ಯೆಯಾಗಿತ್ತು. https://kannadanewsnow.com/kannada/420-crores-allocated-for-social-and-educational-survey-in-the-state-cm-siddaramaiah/ https://kannadanewsnow.com/kannada/fir-registered-against-bjp-leaders-who-protested-regarding-internal-reservations-in-bangalore/

Read More