Author: kannadanewsnow09

ಬೆಂಗಳೂರು: ವಿಜ್ಞಾನ ಮತ್ತು ಮುಂಚೂಣಿಯ ತಂತ್ರಜ್ಞಾನಗಳಿಂದ ನೈಜ-ಜಗತ್ತಿನ ಫಲಿತಾಂಶಗಳನ್ನು ಚುರುಕುಗೊಳಿಸಲು ಸಂಶೋಧಕರು, ಸಂಸ್ಥಾಪಕರು ಮತ್ತು ಉದ್ಯಮ ವಲಯವನ್ನು ಒಂದೇ ವೇದಿಕೆಯಲ್ಲಿ ತರುವ ಹೊಸ ಆವಿಷ್ಕಾರ ಹಾಗೂ ಉದ್ಯಮ ವೇದಿಕೆಯಾದ ಏಟ್ರಿಯಾ ವಿಶ್ವವಿದ್ಯಾಲಯದ ಏಟ್ರಿಯಾ ಬಿಯಾಂಡರ್ ಲ್ಯಾಬ್‌ಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಈ ಪ್ರಯೋಗಾಲಯವು ಸ್ವಯಂಚಾಲಿತ ಲಾಜಿಸ್ಟಿಕ್ಸ್ ವಿಮಾನ, ಗ್ರೀನ್ ಹೈಡ್ರೋಜನ್ ಮತ್ತು ಬಯೋಮೆಡಿಕಲ್ ಸುರಕ್ಷತೆಯಂತಹ ಕ್ಷೇತ್ರಗಳಲ್ಲಿ 9 ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಮೂಲಕ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ. ಉದ್ಘಾಟನೆಯ ಬಳಿಕ, ಕರ್ನಾಟಕವು ಡೀಪ್‌ಟೆಕ್ ಮತ್ತು ವಿಜ್ಞಾನ ಆಧಾರಿತ ಆವಿಷ್ಕಾರದ ಮುಂದಿನ ಹಂತವನ್ನು ಹೇಗೆ ಮುನ್ನಡೆಸಬಹುದು ಎಂಬ ವಿಷಯದ ಕುರಿತು ನಡೆದ ಸಂವಾದದಲ್ಲಿ ಸಚಿವರು ಭಾಗವಹಿಸಿದರು. ಇದೇ ವೇಳೆ ಪ್ರಬಲವಾದ ಸಂಶೋಧನೆ ಹಾಗೂ ಅಭಿವೃದ್ಧಿ ಇಕೋ ಸಿಸ್ಟಂ ಅನ್ನು ನಿರ್ಮಿಸುವುದು, ಎಐ ಮತ್ತು ಜೈವಿಕ ತಂತ್ರಜ್ಞಾನದ ಸಮ್ಮಿಲನ ಹಾಗೂ ಸಾಗರ ಮತ್ತು ನೀಲಿ ಆರ್ಥಿಕ ತಂತ್ರಜ್ಞಾನಗಳಲ್ಲಿನ ಉದಯೋನ್ಮುಖ ಅವಕಾಶಗಳ…

Read More

ಶಿವಮೊಗ್ಗ: ಸಾಗರದ ಐತಿಹಾಸಿಕ ಪ್ರಸಿದ್ಧವಾದ ಮಾರಿಕಾಂಬಾ ದೇವಿಯ ಜಾತ್ರೆ 9 ದಿನಗಳ ಕಾಲ ನಡೆಯುತ್ತಿದ್ದು ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಕುಟುಂಬ ಸಮೇತ ತಾಯಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಆ ಬಳಿಕ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐತಿಹಾಸಿಕ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯುತ್ತಿದೆ. ಈ ಜಾತ್ರೆಯಲ್ಲಿ ಊರಿಗೆ ಊರೇ ಪಾಲ್ಗೊಂಡಿದೆ. ಲಕ್ಷಾಂತರ ಭಕ್ತರು ಜಾತ್ರೆಗೆ ಬಂದು ಹೋಗುತ್ತಿದ್ದು ಅತ್ಯಂತ ವ್ಯವಸ್ಥಿತವಾಗಿ ಜಾತ್ರೆಯನ್ನು ಕಟ್ಟಿರುವುದು ಸಂತಸದ ಸಂಗತಿಯಾಗಿದೆ ಎಂದರು. ಇದೇ ಮೊದಲ ಬಾರಿಗೆ ನಾನು ಸಾಗರದ ಜಾತ್ರೆಯಲ್ಲಿ ಪಾಲ್ಗೊಂಡಿದ್ದೇನೆ. ಈ ಜಾತ್ರೆ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದ್ದು ತಾಯಿ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಭಾಗ್ಯ ನನಗೆ ಲಭ್ಯವಾಗಿದೆ ಎಂದ ಅವರು, ಜಾತ್ರೆಯನ್ನು ಮುನ್ನಡೆಸುವಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು. ರಾಜ್ಯ…

Read More

ಬೆಂಗಳೂರು : ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆಯಲ್ಲಿ ನಮೂದಿಸಿರುವ ವಾರ್ಡ್ ಗಡಿಗಳ ಪಾಲನೆ ಕಡ್ಡಾಯ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಬಿಎ ಮುಖ್ಯ ಕಚೇರಿಯ ಸಭಾಂಗಣದಲ್ಲಿ ಇಂದು 5 ನಗರ ಪಾಲಿಕೆಗಳ ಕರಡು ನಗರ ಪಾಲಿಕೆ ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯವಿಧಾನ (SOP) ಕುರಿತು ಆಯೋಜಿಸಲಾದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮ್ಯಾಪ್ ಗಡಿಗಳ ನವೀಕರಣಕ್ಕೆ ಸೂಚನೆ: ಅಧಿಸೂಚನಾ ವಾರ್ಡ್ ವಿವರಣೆಗಳಿಗೆ ಅನುಗುಣವಾಗಿ ಮ್ಯಾಪ್ ಗಡಿಗಳನ್ನು ಸರಿಪಡಿಸಿ ನವೀಕರಿಸುವ ಸಲುವಾಗಿ, ದೀರ್ಘಾವಧಿಯಲ್ಲಿ ವ್ಯವಸ್ಥಿತ ಸರ್ವೇ ಮೂಲಕ ಪರಿಶೀಲನೆ ಕೈಗೊಳ್ಳುವಂತೆ ಐಟಿ ವಿಭಾಗದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಚುನಾವಣಾ ವಿಭಾಗ ರಚನೆ: ಪ್ರತಿ ನಗರ ಪಾಲಿಕೆಯಲ್ಲಿ ಒಬ್ಬ ತಹಶೀಲ್ದಾರ್, ಒಬ್ಬ ಮ್ಯಾನೇಜರ್, ಒಬ್ಬ FDA, ಒಬ್ಬ SDA ಹಾಗೂ ಒಬ್ಬ ಡೇಟಾ ಎಂಟ್ರಿ ಆಪರೇಟರ್ ಹೊಂದಿರುವ ಚುನಾವಣಾ ವಿಭಾಗವನ್ನು ರಚಿಸುವಂತೆ ಮುಖ್ಯ ಆಯುಕ್ತರು ನಿರ್ದೇಶಿಸಿದರು. ನೋಡಲ್ ಅಧಿಕಾರಿ…

Read More

ಲಕ್ಷ್ಮೀ ಸರಸ್ವತಿ ಮತ್ತು ಗಂಗೆ :- ವಿಷ್ಣುವಿಗೆ ಆಪ್ತರಾದ ಲಕ್ಷ್ಮಿ- ಸರಸ್ವತಿ- ಗಂಗೆಯರಲ್ಲಿ ಒಮ್ಮೆ ವಾಗ್ವಾದ ಬಂದಿತು. ವಿಷ್ಣು ಯಾವಾಗಲೂ ಗಂಗೆಯ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾನೆ ಎಂದು ದೇವಿ ಸರಸ್ವತಿಗೆ ಅಸಮಧಾನವಾಗಿ ಗಂಗೆ ಜೊತೆ ಒರಟಾಗಿ ವರ್ತಿಸಿದಳು. ಗಮನಿಸಿದ ಲಕ್ಷ್ಮಿ, ನಾರಾಯಣನಿಗೆ ಎಲ್ಲರೂ ಸಮಾನರು ಗಂಗೆ ಹೆಚ್ಚು ನೀನು ಕಡಿಮೆ ಅಂತ ಇಲ್ಲ ಎಂದು ಸಮಾಧಾನ ಹೇಳಿದಳು. ಆದರೆ ಸರಸ್ವತಿಗೆ ಸರಿ ಎನಿಸಲಿಲ್ಲ ನನ್ನನ್ನು ಸಮಾಧಾನ ಪಡಿಸಲು, ಲಕ್ಷ್ಮಿ ಈ ರೀತಿ ಮಾತನಾಡುತ್ತಿದ್ದಾಳೆ, ಇವಳೂ ಸಹ ಗಂಗೆ ಪರ ಎಂದು ತಪ್ಪು ತಿಳಿದು, ನೀನೇನು ನನ್ನನ್ನು ಸಮಾಧಾನ ಪಡಿಸುವುದು ಬೇಡ ನನಗೆ ಎಲ್ಲಾ ಗೊತ್ತಿದೆ ಎಂದು, ಕೋಪದಿಂದ ‘ಲಕ್ಷ್ಮಿಗೆ’ ನೀನು ಒಂದು ನದಿಯಾಗಿ- ಮುಂದೆ ಗಿಡವಾಗು ಎಂದು ಸರಸ್ವತಿ ಶಾಪ ಕೊಟ್ಟಳು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ…

Read More

ಬೆಂಗಳೂರು: ಗುಂತಕಲ್ ವಿಭಾಗದ ಗೂತ್ತಿ–ಧರ್ಮಾವರಂ ನಡುವೆ ಧರ್ಮಾವರಂ ಹಂತ-3ರ ಯಾರ್ಡ್ ಆಧುನೀಕರಣ ಹಾಗೂ ರೈಲ್ವೆ ಕಾಮಗಾರಿಗಳ ಹಿನ್ನೆಲೆಯಲ್ಲಿ, ಫೆಬ್ರವರಿ 12 ರಿಂದ 22ರವರೆಗೆ, ಈ ಕೆಳಗಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ. ರದ್ದು: ರೈಲು ಸಂಖ್ಯೆ 77213 ಗುಂತಕಲ್–ಹಿಂದೂಪುರ ಡೆಮು ಫೆಬ್ರವರಿ 16 ರಿಂದ 22 ರವರೆಗೆ ಮತ್ತು ರೈಲು ಸಂಖ್ಯೆ 77214 ಹಿಂದೂಪುರ–ಗುಂತಕಲ್ ಡೆಮು ರೈಲು ಫೆಬ್ರವರಿ 17 ರಿಂದ 23, 2026 ರವರೆಗೆ ರದ್ದುಗೊಳ್ಳಲಿವೆ. ಭಾಗಶಃ ರದ್ದು: ಫೆಬ್ರವರಿ 17 ರಿಂದ 22 ರವರೆಗೆ ರೈಲು ಸಂಖ್ಯೆ 66559 ಕೆಎಸ್ಆರ್ ಬೆಂಗಳೂರು–ಅನಂತಪುರ ಮೆಮು ರೈಲು ಅನಂತಪುರದ ಬದಲಿಗೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂದವರೆಗೆ ಮಾತ್ರ ಸಂಚರಿಸಲಿದೆ. ಅದೇ ರೀತಿ, ಫೆಬ್ರವರಿ 17 ರಿಂದ 22 ರವರೆಗೆ ರೈಲು ಸಂಖ್ಯೆ 66560 ಅನಂತಪುರ–ಕೆಎಸ್ಆರ್ ಬೆಂಗಳೂರು ಮೆಮು ರೈಲು ಅನಂತಪುರದ ಬದಲಿಗೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.

Read More

ಬೆಂಗಳೂರು: ಮೇಕ್‌ಮೈಟ್ರಿಪ್ ವಿಶ್ವಾದ್ಯಂತ 560 ಕ್ಕೂ ಹೆಚ್ಚು ಹೋಟೆಲ್‌ಗಳೊಂದಿಗೆ ಪಾಲುದಾರಿಕೆ ಘೋಷಿಸಿದೆ. ಈ ಪಾಲುದಾರಿಕೆಯು ತನ್ನ ನೇರ ಅಂತಾರಾಷ್ಟ್ರೀಯ ಹೋಟೆಲ್ಗಳಲ್ಲಿ ತನ್ನ ಅಸ್ಥಿತ್ವ ವಿಸ್ತರಿಸುವ ಮೇಕ್‌ಮೈಟ್ರಿಪ್‌ನ ವಿಶಾಲ ಕಾರ್ಯತಂತ್ರದ ಭಾಗವಾಗಿದೆ. ಅಂತಾರಾಷ್ಟ್ರೀಯ ಹೋಟೆಲ್‌ಗಳನ್ನು ಬುಕ್ ಮಾಡುವ ಭಾರತೀಯ ಪ್ರಯಾಣಿಕರಿಗೆ ಈ ವೇದಿಕೆಯು ಹೆಚ್ಚು ಜನಪ್ರಿಯ ತಾಣವಾಗಿದೆ. ಕಳೆದ ವರ್ಷದಲ್ಲಿ, ಮೇಕ್‌ಮೈಟ್ರಿಪ್ 192 ದೇಶಗಳಲ್ಲಿ 4,350 ಕ್ಕೂ ಹೆಚ್ಚು ನಗರಗಳಲ್ಲಿ 77,900 ಕ್ಕೂ ಹೆಚ್ಚು ವಿಶಿಷ್ಟ ಹೋಟೆಲ್‌ಗಳನ್ನು ಮಾರಾಟ ಮಾಡಿದೆ. 2024 ಕ್ಕೆ ಹೋಲಿಸಿದರೆ 2025 ರಲ್ಲಿ ಮಾರಾಟವಾದ ವಿಶಿಷ್ಟ ಹೋಟೆಲ್‌ಗಳ ಸಂಖ್ಯೆ 17% ರಷ್ಟು ಹೆಚ್ಚಾಗಿದೆ. ಗಮನಾರ್ಹವಾಗಿ, ಈ ಬುಕಿಂಗ್‌ಗಳಲ್ಲಿ ಸುಮಾರು ಮೂರನೇ ಒಂದು ಭಾಗವು ಪ್ರೀಮಿಯಂ ಹೋಟೆಲ್ ವರ್ಗದಲ್ಲಿದ್ದು, ಸರಾಸರಿ ಕೊಠಡಿ-ರಾತ್ರಿ ದರ ₹15,000 ಮೀರಿದೆ. ಈ ಘೋಷಣೆಯೊಂದಿಗೆ, ಭಾರತೀಯ ಪ್ರಯಾಣಿಕರು ಅನಂತರಾ ಹೋಟೆಲ್ಸ್ & ರೆಸಾರ್ಟ್ಸ್, ಎಲೆವಾನಾ ಕಲೆಕ್ಷನ್, ದಿ ವೋಲ್ಸೆಲಿ ಹೋಟೆಲ್ಸ್, ಟಿವೋಲಿ ಹೋಟೆಲ್ಸ್ & ರೆಸಾರ್ಟ್ಸ್, ಮೈನರ್ ರಿಸರ್ವ್ ಕಲೆಕ್ಷನ್, ಎನ್ಎಚ್ ಕಲೆಕ್ಷನ್ ಹೋಟೆಲ್ಸ್ &…

Read More

ಶಿವಮೊಗ್ಗ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು ತಾಯಿಯ ದರ್ಶನ ಪಡೆದಂತ ಆರ್ ಬಿ ಡಿ ಸಂಸ್ಥೆಯ ಮಹೇಶ್ ಮತ್ತು ಸಿಬ್ಬಂದಿಗಳು, ಬೃಹತ್ ಗಾತ್ರದ ಹೂವಿನ ಹಾರವನ್ನು ದೇವಿಗೆ ಸಮರ್ಪಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರದ ಐತಿಹಾಸಿಕ ಪ್ರಸಿದ್ಧ ಮಾರಿಕಾಂಬೆ ಜಾತ್ರೆಗೆ ಇಂದಿಗೆ 9ನೇ ದಿನವಾಗಿದೆ. ಈ ದಿನದಂದು ಸಾಗರದ ಹೆಸರಾಂತ, ವಿಶ್ವಾಸಾರ್ಹ ಸಂಸ್ಥೆಯಾದಂತ ರಾಯಲ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಯ ಮಾಲೀಕರಾದಂತ ಮಹೇಶ್ ಅವರು ಮಾರಿಕಾಂಬೆಯ ದರ್ಶವನ್ನು ಪಡೆದರು. ಇದೇ ಸಂದರ್ಭದಲ್ಲಿ ಬೃಹತ್ ಗಾತ್ರದ ಹೂವಿನ ಹಾರವನ್ನು ಭಕ್ತಿ ಪೂರ್ವಕವಾಗಿ ಮಾರಿಕಾಂಬೆಗೆ ಅರ್ಪಿಸಿದರು. ಆ ಬಳಿಕ ಮಾತನಾಡಿದಂತ ಆರ್ ಬಿ ಡಿ ಮಾಲೀಕರಾದಂತ ಮಹೇಶ್ ಅವರು, ಇಂದು ಸಾಗರದ ಮಾರಿಕಾಂಬ ದೇವಿಗೆ ಹೂವಿನ ಹಾರವನ್ನು ಅರ್ಪಿಸಲಾಗಿದೆ. ಇದು ಹೂವಿನ ಹಾರವಲ್ಲ, ನಮ್ಮ ಸಂಸ್ಥೆಯ ನೂರಾರು ಕಾರ್ಮಿಕರ ಭಕ್ತಿಯ ಪ್ರತೀಕವಾಗಿದೆ. ತಾಯಿ ಮಾರಿಕಾಂಬೆಗೆ ಹೂವಿನ ಹಾರದ ಸೇವೆ ಮಾಡುವುದೇ ಒಂದು ಪುಣ್ಯವಾಗಿದೆ. ನಮ್ಮ ಸಂಸ್ಥೆಯಿಂದ…

Read More

ವಜ್ರಗಳನ್ನು ಹೆಚ್ಚಾಗಿ ಐಷಾರಾಮಿ, ಪ್ರೀತಿ ಮತ್ತು ಸ್ಥಾನಮಾನದ ಸಂಕೇತಗಳಾಗಿ ನೋಡಲಾಗುತ್ತದೆ. ಆದಾಗ್ಯೂ, ಜ್ಯೋತಿಷ್ಯ, ಆರೋಗ್ಯ ನಂಬಿಕೆಗಳು ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಪ್ರಕಾರ, ವಜ್ರಗಳು ಎಲ್ಲರಿಗೂ ಸರಿಹೊಂದುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ವಜ್ರವನ್ನು ಧರಿಸುವುದರಿಂದ ಭಾವನಾತ್ಮಕ ಅಸಮತೋಲನ, ಆರ್ಥಿಕ ಒತ್ತಡ ಅಥವಾ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕೆಲವು ಜನರು ವಜ್ರಗಳನ್ನು ಧರಿಸುವುದನ್ನು ತಪ್ಪಿಸಲು ಏಕೆ ಸಲಹೆ ನೀಡಲಾಗುತ್ತದೆ ಎಂಬುದನ್ನು ಇಲ್ಲಿ ಹತ್ತಿರದಿಂದ ನೋಡೋಣ. ವಜ್ರಗಳನ್ನು ತಪ್ಪಿಸಲು ಜ್ಯೋತಿಷ್ಯ ಕಾರಣಗಳು ಜ್ಯೋತಿಷ್ಯದಲ್ಲಿ, ವಜ್ರಗಳು ಸೌಂದರ್ಯ, ಐಷಾರಾಮಿ, ಸಂಬಂಧಗಳು ಮತ್ತು ಆನಂದವನ್ನು ನಿಯಂತ್ರಿಸುವ ಶುಕ್ರ ಗ್ರಹದೊಂದಿಗೆ (ಶುಕ್ರ) ಸಂಬಂಧ ಹೊಂದಿವೆ. ವ್ಯಕ್ತಿಯ ಜಾತಕದಲ್ಲಿ ಶುಕ್ರ ದುರ್ಬಲವಾಗಿದ್ದರೆ ಅಥವಾ ನಕಾರಾತ್ಮಕ ಸ್ಥಾನದಲ್ಲಿದ್ದರೆ, ವಜ್ರವನ್ನು ಧರಿಸುವುದರಿಂದ ಅದರ ದುಷ್ಪರಿಣಾಮಗಳು ಹೆಚ್ಚಾಗಬಹುದು. ಜನರು ಈ ಕಷ್ಟ ಅನುಭವಿಸುವ ಸಾಧ್ಯತೆ: ಸಂಬಂಧ ಸಂಘರ್ಷಗಳು ಅತಿಯಾದ ಭೋಗ ಅಥವಾ ವ್ಯಸನ ಆರ್ಥಿಕ ಅಸ್ಥಿರತೆ ಭಾವನಾತ್ಮಕ ಅತೃಪ್ತಿ ಜ್ಯೋತಿಷಿಗಳು ಸಾಮಾನ್ಯವಾಗಿ ವ್ಯಕ್ತಿಯ ಜನ್ಮ ಜಾತಕವನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದ ನಂತರವೇ ರತ್ನಗಳನ್ನು ಶಿಫಾರಸು ಮಾಡುತ್ತಾರೆ. ಜಾಗರೂಕರಾಗಿರಬೇಕಾದ…

Read More

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆಯನ್ನು ಮಾಡೋದೋ ಅಥವಾ ಇಲ್ಲವೋ ಎನ್ನುವ ಬಗ್ಗೆ ನಿರ್ಧರಿಸೋ ಸಂಬಂಧ ಇಂದು ಬಿಎಂಆರ್ ಸಿಎಲ್ ಬೋರ್ಡ್ ಸಭೆ ನಿಗದಿಯಾಗಿತ್ತು. ಆದರೇ ಇಂತಹ ಸಭೆಯನ್ನು ದಿಢೀರ್ ರದ್ದುಪಡಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂದು ನಮ್ಮ ಮೆಟ್ರೋ ದರ ಏರಿಕೆಯನ್ನು ರದ್ದುಗೊಳಿಸೋ ಸಂಬಂಧ ಬಿಎಂಆರ್ ಸಿಎಲ್ ಬೋರ್ಡ್ ಮೀಟಿಂಗ್ ನಿಗದಿಯಾಗಿತ್ತು. ಆ ಸಭೆಯನ್ನು ಅನಿವಾರ್ಯ ಕಾರಣಗಳಿಂದಾಗಿ ರದ್ದುಗೊಳಿಸಲಾಗಿದೆ. ಬೆಂಗಳೂರಿನ ಶಾಂತಿನಗರದ ಬಿಎಂಆರ್ ಸಿಎಲ್ ಕಚೇರಿಯಲ್ಲಿ ಈ ಸಭೆ ನಡೆಸಲು ನಿಗದಿ ಪಡಿಸಲಾಗಿತ್ತು. ಇಂದು ಮೆಟ್ರೋ ದರ ಏರಿಕೆಯ ಸಂಬಂಧ ನಿರ್ಧಾರ ಆಗಬೇಕಿತ್ತು. ಮೆಟ್ರೋ ಟಿಕೆಟ್ ದರ ಏರಿಕೆ ಭವಿಷ್ಯ ನಿರ್ಧಾರಗೊಳ್ಳಬೇಕಿತ್ತು. ಆದರೇ ಬೋರ್ಡ್ ಮೀಟಿಂಗ್ ರದ್ದುಗೊಂಡಿದೆ. ಈ ಬಿಎಂಆರ್ ಸಿಎಲ್ ಬೋರ್ಡ್ ಮೀಟಿಂಗ್ ನಾಳೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. https://kannadanewsnow.com/kannada/these-are-the-top-10-companies-with-the-highest-revenue-in-the-world-do-you-know-what-rank-reliance-holds/ https://kannadanewsnow.com/kannada/dcm-d-k-shivakumar-to-travel-to-delhi-tomorrow-morning/

Read More

ಶಿವಮೊಗ್ಗ : ಮೂರು ದಿನಗಳ ಕುಸ್ತಿ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿದೆ. ನೂರಾರು ಜೋಡಿ ಕುಸ್ತಿ ಪಂದ್ಯಾಟದಲ್ಲಿ ಪಾಲ್ಗೊಂಡು ನಮ್ಮೂರಿನ ಜನರನ್ನು ರಂಜಿಸಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ಮೈದಾನದಲ್ಲಿ ಭಾನುವಾರ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಏರ್ಪಡಿಸಿದ್ದ ಮೂರು ದಿನಗಳ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದಂತ ಅವರು, ಹಿಂದಿನ ಎಲ್ಲ ವರ್ಷಗಳಿಗಿಂತ ಈ ವರ್ಷ ಕುಸ್ತಿ ಪಂದ್ಯಾವಳಿ ಸೇರಿ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿದೆ. ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು 20 ಸಮಿತಿಗಳು ಅತ್ಯಂತ ಶಿಸ್ತುಬದ್ದವಾಗಿ ಜಾತ್ರೆಯನ್ನು ಸಂಯೋಜಿಸುವಲ್ಲಿ ಯಶಸ್ವಿಯಾಗಿವೆ. ಕುಸ್ತಿ ಪಂದ್ಯಾವಳಿ ಯಶಸ್ಸುಗೊಳಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. https://youtu.be/58y8RcIiYW0 ಮೂರು ದಿನ ಕುಸ್ತಿ ಪಂದ್ಯಾವಳಿಯಲ್ಲಿ ನೂರೈವತ್ತಕ್ಕೂ ಹೆಚ್ಚು ಕುಸ್ತಿ ಪಟುಗಳು ಪಾಲ್ಗೊಂಡಿದ್ದರು. ಸುಮಾರು 10ಲಕ್ಷಕ್ಕೂ ಅಧಿಕ ನಗದು ಬಹುಮಾನ, ಬೆಳ್ಳಿಗದೆ, ಅಖಾಡ ಬಳೆ, ಬೆಳ್ಳಿಪದಕ, ಬೆಳ್ಳಿ ಬಳೆ ಇನ್ನಿತರೆಗಾಗಿ…

Read More