Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸರ್ಕಾರದ ನಿರ್ದೇಶನದಂತೆ ಉಚಿತ/ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸುಗಳನ್ನು ವಿತರಣೆ ಮಾಡುತ್ತಿದೆ. ಅದರಂತೆ 2025-26 ನೇ ಸಾಲಿನ ವಿದ್ಯಾರ್ಥಿ ಪಾಸಿಗಾಗಿ ದಿನಾಂಕ 26.05.2025 ರಿಂದ ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ದಿನಾಂಕ 01.06.2025 ರಿಂದ ವಿದ್ಯಾರ್ಥಿ ಪಾಸುಗಳನ್ನು ಬೆಂಗಳೂರು ಒನ್ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುವುದು. 2025-26ನೇ ಸಾಲಿನ ವಿದ್ಯಾರ್ಥಿ ರಿಯಾಯಿತಿ ಪಾಸಿನ ಆನ್ಲೈನ್ ಅರ್ಜಿಯು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ಬೆಂಗಳೂರು ಒನ್ ಕೇಂದ್ರಗಳ ಮೂಲಕವು ವಿದ್ಯಾರ್ಥಿ ಪಾಸಿಗಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿ ಪಾಸುಗಳನ್ನು ಬೆಂಗಳೂರು ಒನ್ ಕೇಂದ್ರಗಳಲ್ಲಿ ಹಾಗೂ ಬೆಂ.ಮ.ಸಾ.ಸಂಸ್ಥೆಯ ಕೆಂಪೇಗೌಡ ಬಸ್ನಿಲ್ದಾಣ, ಕೆಂಗೇರಿ ಟಿಟಿಎಂಸಿ, ಹೊಸಕೋಟೆ, ಎಲೆಕ್ಟ್ರಾನಿಕ್ ಸಿಟಿ ಘಟಕ -19, ಶಾಂತಿನಗರ ಟಿಟಿಎಂಸಿ, ಕರಾರಸಾ ನಿಗಮದ ಆನೇಕಲ್ ಬಸ್ ನಿಲ್ದಾಣದಲ್ಲಿ ವಿತರಿಸಲಾಗುವುದು. ಮುಂದುವರೆದು, ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ್ದು, ಅದರಂತೆ ಕರ್ನಾಟಕ ರಾಜ್ಯದ…
ಬೆಂಗಳೂರು: ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದಂತ ಕೆಇಟಿ-2025ರ ಪರೀಕ್ಷೆಯ ಫಲಿತಾಂಶ ( KCET-2025 Exam Results) ಪ್ರಕಟವಾಗಲಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರು ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಸಿಇಟಿ-2025ರ ಪರೀಕ್ಷೆಯ ( CET-2025 ) ಫಲಿತಾಂಶವನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದಾಗಿದೆ. ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು cetonline.karnataka.gov.in ಅಥವಾ kea.kar.nic.in ಜಾಲತಾಣಕ್ಕೆ ಭೇಟಿ ನೀಡುವಂತೆ ಸೂಚಿಸಿದೆ. https://twitter.com/KEA_karnataka/status/1925880959242588459 ಸಿಇಟಿ ಪರೀಕ್ಷೆ ( CET Exam 2025) ಫಲಿತಾಂಶ ಈ ರೀತಿ ಚೆಕ್ ಮಾಡಿ -ವಿದ್ಯಾರ್ಥಿಗಳು ಅಧಿಕೃತ ಜಾಲತಾಣ cetonline.karnataka.gov.in ಜಾಲತಾಣಕ್ಕೆ ಭೇಟಿ ನೀಡಬೇಕು. -ಕೆಸಿಇಟಿ ಫಲಿತಾಂಶ 2024 ಎಂಬಲ್ಲಿ ಕ್ಲಿಕ್ ಮಾಡಬೇಕು. -ನಿಮ್ಮ ನೋಂದಣಿ ಸಂಖ್ಯೆ ಸೇರಿದಂತೆ ಇತರೆ ಮಾಹಿತಿ ನಮೂದಿಸಿ. -ಈ ಬಳಿಕ ಸಬ್ ಮಿಟ್ ಬಟಲ್ ಕ್ಲಿಕ್ ಮಾಡಿದರೇ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂಬುದಾಗಿ ಮರುನಾಮಕರಣ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಹೀಗಾಗಿ ಇನ್ಮುಂದೆ ರಾಮನಗರ ಜಿಲ್ಲೆಯು ಬೆಂಗಳೂರು ದಕ್ಷಿಣ ಜಿಲ್ಲೆ ಎಂಬುದಾಗಿ ಕರೆಯಲಾಗುತ್ತದೆ. ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1946ರ ಕಲಂ 4(4ಎ)ರಲ್ಲಿ ಕಲ್ಪಿಸಿರುವ ಅವಕಾಶದಂತೆ ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ, ರಾಮನಗರ ಜಿಲ್ಲೆ ಅನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಆದೇಶಿಸಿದ್ದಾರೆ. ದೇವನಾಗರಿ, ರೋನ್ ಲಿಪಿ ಮತ್ತು ಪ್ರಾದೇಶಿಕ ಭಾಷೆ ಕನ್ನಡ ಉಚ್ಚಾರಣೆಯಂತೆ ಹೊಸ ಹೆಸರನ್ನು ರಾಮನಗರ ಜಿಲ್ಲೆಯನ್ನು ಬೆಂಗಳೂರು ಸೌತ್ ಡಿಸ್ಟಿಕ್, ಬೆಂಗಳೂರು ದಕ್ಷಿಣ ಜಿಲ್ಲೆ ಎಂಬುದಾಗಿ ಮರುನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಬಂದೋಬಸ್ತ್ ಕರ್ತವ್ಯಗಳಿಗೆ ನಿಯೋಜಿಸುವಂತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪಾವತಿಸುತ್ತಿರುವ ಆಹಾರ ಭತ್ಯೆಯ ದರಗಳನ್ನು ಪರಿಷ್ಕರಿಸಿ ಆದೇಶಿಸಿದೆ. ಈ ಕುರಿತಂತೆ ಎಐಜಿಪಿ ಡಾ.ಸಂಜೀವ ಎಂ ಪಾಟೀಲ ಅವರು ಆದೇಶ ಹೊರಡಿಸಿದ್ದು, ಗುಣಮಟ್ಟದ ಆರೋಗ್ಯಕರ ಆಹಾರವನ್ನು ಪೂರೈಸುವ ದೃಷ್ಠಿಯಿಂದ ಹಬ್ಬಹರಿ ದಿನಗಳು, ವಿಶೇಷ ಹಾಗೂ ಚುನಾವಣಾ ಸಂದರ್ಭಗಳಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರಸ್ತುತ ಪಾವತಿಸುತ್ತಿರುವ ಆಹಾರ ಭತ್ಯೆ( Food Allowance) ದರವನ್ನು ರೂ.200ರಿಂದ ರೂ.300ಗಳಿಗೆ ಹೆಚ್ಚಿಸಿ ಆದೇಶಿಸಿದ್ದಾರೆ.
ಮೈಸೂರು: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ, ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಚಿಕಿತ್ಸೆಯನ್ನು ಆರಂಭಿಸಲಾಗಿದೆ. 16 ಜಿಲ್ಲಾಸ್ಪತ್ರೆಗಳಲ್ಲಿ ಏಕಕಾಲಕ್ಕೆ ಕೀಮೋಥೆರಪಿ ಚಿಕಿತ್ಸೆ ಪ್ರಾರಂಭವಾಗಿದ್ದು, ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 20 ಬೆಡ್ ಗಳ ಕೀಮೋಥೆರಪಿ ಕೇಂದ್ರ ಹಾಗೂ ಉಳಿದ 15 ಜಿಲ್ಲಾಸ್ಪತ್ರೆಗಳಲ್ಲಿ 10 ಬೆಡ್ ಗಳ ಕೀಮೋಥೆರಪಿ ಕೇಂದ್ರಗಳಿಗೆ ಚಾಲನೆ ದೊರೆತಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕೇಂದ್ರೀಕೃತವಾಗಿದ್ದ ಕ್ಯಾನ್ಸರ್ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಗಳ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಮೂಲಕ ವಿಕೇಂದ್ರಿಕೃತ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್ ಗೆ ತುತ್ತಾಗುತ್ತಿದ್ಧಾರೆ. ಪ್ರತಿ ವರ್ಷ 70 ಸಾವಿರ ಹೊಸ ರೋಗಿಗಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಶೇ 60 ರಷ್ಟು ಕ್ಯಾನ್ಸರ್ ಪೀಡಿತರು 100 ಕಿ.ಮೀ ಗೂ ಹೆಚ್ಚು ದೂರ ಪ್ರಯಾಣ ಮಾಡಬೇಕಿತ್ತು. ಇದರಲ್ಲಿ ಶೇ 30 ರಷ್ಟು ಬಡ ರೋಗಿಗಳು ದೂರದ ಪ್ರಯಾಣದ ವೆಚ್ಚ ಭರಿಸಲಾಗದೇ…
ಬೆಂಗಳೂರು: ಪರಿಶಿಷ್ಟ ಜಾತಿ/ಮೂಲ ಜಾತಿ ಸಮಗ್ರ ಸಮೀಕ್ಷೆಗಾಗಿ ಗೌರವಾನ್ವಿತ ನೀವೃತ್ತಿ ನ್ಯಾಯಮೂರ್ತಿಗಳಾದ ಡಾ. ಹೆಚ್.ಎನ್ ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯತ್ವ ಆಯೋಗವನ್ನು ರಚಿಸಲಾಗಿರುತ್ತದೆ. ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಲು ಗಣತಿದಾರರು ಪ್ರತಿದಿನವೂ ತಪ್ಪದೇ Mobile App ನಲ್ಲಿ Login ಆಗಿ ಕಡ್ಡಾಯವಾಗಿ ತಮಗೆ ನಿಗಧಿಪಡಿಸಲಾದ ಸಮೀಕ್ಷಾ ಬ್ಲಾಕ್ ನಲ್ಲಿರುವ ಎಲ್ಲಾ ಮನೆಗಳಿಗೂ ತಪ್ಪದೇ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲು ನಿರ್ದೇಶನ ನೀಡಲಾಗಿರುತ್ತದೆ. ಈ ಸಂಬಂಧ ಗೌರವಾನ್ವಿತ ನ್ಯಾಯಮೂರ್ತಿ ಡಾ: ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ವತಿಯಿಂದ ಕೈಗೊಳ್ಳುತ್ತಿರುವ ಪರಿಶಿಷ್ಟ ಜಾತಿ / ಮೂಲ ಜಾತಿ ಸಮಗ್ರ ಸಮೀಕ್ಷೆ-2025ಕ್ಕೆ ಸಂಬಂಧಿಸಿದಂತೆ, ನಿಗಧಿತ ಸಮಯಕ್ಕೆ ಸಮೀಕ್ಷೆಯ ಬಗ್ಗೆ ಮಾಹಿತಿ ಸಂಗ್ರಹಿಸದೇ ಯಾವುದೇ ರೀತಿ ಪ್ರಗತಿ ಸಾಧಿಸದೇ 5 ನೌಕರರುಗಳು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಲಾಗಿರುತ್ತದೆ. https://kannadanewsnow.com/kannada/first-in-the-country-starting-chemotherapy-treatment-at-the-district-hospital-level-in-karnataka/ https://kannadanewsnow.com/kannada/the-cet-2025-results-will-be-announced-tomorrow-at-2-pm-check-the-result-like-this/
ಬೆಂಗಳೂರು: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನುಮುಷ್ತಾಕ್, ದೀಪ್ತಿ ಭಾಸ್ತಿ ಅವರಿಗೆ ಗಾಂಧಿಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮೇ 28 ಬುಧವಾರ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಬಾನುಮುಷ್ತಾಕ್ ಮತ್ತು ದೀಪಾಬಸ್ತಿ ಅವರು ಇಬ್ಬರೂ ಪತ್ರಕರ್ತರಾಗಿದ್ದವರು ಎನ್ನುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಬಾನುಮುಷ್ತಾಕ್ ಅವರು ಹಾಸನದಿಂದ ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿದ್ದವರು ಮತ್ತು ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯೆಯಾಗಿದ್ದರು. ಬಾನುಮುಷ್ತಾಕ್ ಅವರ ಎದೆಯ ಹಣತೆ (ಹಾರ್ಟ್ಸ್ ಲ್ಯಾಂಪ್) ಕಥೆಗಳನ್ನು ಅನುವಾದ ಮಾಡಿದ ಕೊಡಗಿನ ದೀಪಾ ಬಸ್ತಿ ಅವರು ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಟೈಂಮ್ಸ್ ಆಫ್ ಇಂಡಿಯಾದಲ್ಲಿ ಪತ್ರಕರ್ತೆಯಾಗಿದ್ದವರು. ಹಾಗಾಗಿ ವೃತ್ತಿ ಬಾಂಧವರಾಗಿದ್ದ ಇಬ್ಬರೂ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನಿರ್ಧರಿಸಿ ಈ ಕಾರ್ಯಕ್ರಮವನ್ನು ಕರ್ನಾಟಕ ಪತ್ರಕರ್ತೆಯರ ಸಂಘ, ಬಹುರೂಪಿ ಮತ್ತು ಗಾಂಧಿ ಸ್ಮಾರಕ ನಿಧಿ ಸಹಕಾರದಲ್ಲಿ ಆಯೋಜಿಸಲಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ.…
ಮಂಡ್ಯ : ವಿಷ ಮಿಶ್ರಿತ ಕಲುಷಿತ ನೀರು ಕುಡಿದು 12 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಶುಕ್ರವಾರ ಜರುಗಿದೆ. ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಚನ್ನಾಪುರ ಗ್ರಾಮದ ರಾಜು ಎಂಬುವವರ ಕುರಿಗಳೇ ಸಾವನ್ನಪ್ಪಿರುವುದು ಎನ್ನಲಾಗಿದೆ. ಚನ್ನಾಪುರ ಗ್ರಾಮದಿಂದ ರಾಜು ಎಂಬುವವರು ಕುರಿಗಳಿಗೆ ಆಹಾರ ಅರಸಿಕೊಂಡು (ಮೇಯಿಸಲು) ಅಂದಾಜು 250 ಕ್ಕೂ ಹೆಚ್ಚು ಕುರಿಗಳೊಂದಿಗೆ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಕಡೆ ಬಂದಿದ್ದಾರೆ. ಮಧ್ಯಾಹ್ನದ ನಂತರ ಮೇವು ತಿಂದ ಬಳಿಕ ಅಲ್ಲಿಯೇ ಇದ್ದ ಚರಂಡಿ ನೀರನ್ನು ಕುಡಿದಿವೆ. ಚರಂಡಿಯಲ್ಲಿ ಮಿಶ್ರಣ ಗೊಂಡಿದ್ದ ಕಲುಷಿತ ನೀರು ಕುಡಿದು ಕೆಲ ಹೊತ್ತಿನಲ್ಲೇ 12 ಕ್ಕೂ ಹೆಚ್ಚು ಕುರಿಗಳು ನರಳಾಟದಿಂದ ಸಾವನ್ನಪ್ಪಿವೆ ಎನ್ನಲಾಗಿದೆ. ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಿಷ ಮಿಶ್ರಿತ ನೀರನ್ನು ಕುಡಿದು ಹಲವಾರು ಬಾರಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕುರಿಗಳು ಮೃತಪಟ್ಟಿವೆ. ಇಂದು ಕೂಡ ವಿಷ ಜಲವನ್ನು ಕುಡಿದು 12 ಕ್ಕೂ ಹೆಚ್ಚು ಕುರಿಗಳು…
ನವದೆಹಲಿ: ಭಾರತ ಶುಕ್ರವಾರ ಪಾಕಿಸ್ತಾನದಲ್ಲಿ ನೋಂದಾಯಿಸಲಾದ, ಒಡೆತನದ ಮತ್ತು ಗುತ್ತಿಗೆ ಪಡೆದ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶದ ಮುಚ್ಚುವಿಕೆಯನ್ನು ಜೂನ್ 23 ರವರೆಗೆ ವಿಸ್ತರಿಸಿದೆ ಎಂದು ನೋಟಾಮ್ ತಿಳಿಸಿದೆ. https://twitter.com/ANI/status/1925905005854289953 ಪಾಕಿಸ್ತಾನದ ವಿಮಾನಯಾನ ಸಂಸ್ಥೆಗಳು ನೋಂದಾಯಿಸಿದ, ನಿರ್ವಹಿಸುವ, ಒಡೆತನದ ಅಥವಾ ಗುತ್ತಿಗೆ ಪಡೆದ ಎಲ್ಲಾ ವಿಮಾನಗಳು ಮತ್ತು ಮಿಲಿಟರಿ ವಿಮಾನಗಳಿಗೂ ಈ ನಿರ್ಬಂಧ ಅನ್ವಯಿಸುತ್ತದೆ. ಏಪ್ರಿಲ್ 30 ರಂದು ಪಾಕಿಸ್ತಾನ ನಿರ್ವಹಿಸುವ ವಿಮಾನಗಳಿಗೆ ಭಾರತ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಪಾಕಿಸ್ತಾನವು ಶುಕ್ರವಾರ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶದ ಮುಚ್ಚುವಿಕೆಯನ್ನು ಜೂನ್ 24 ರವರೆಗೆ ವಿಸ್ತರಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ನವದೆಹಲಿ ಘೋಷಿಸಿದ ದಂಡನಾತ್ಮಕ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಇಸ್ಲಾಮಾಬಾದ್ ಏಪ್ರಿಲ್ 24 ರಂದು ಭಾರತೀಯ ವಿಮಾನಯಾನ ಸಂಸ್ಥೆಗಳು ತನ್ನ ವಾಯುಪ್ರದೇಶವನ್ನು ಬಳಸದಂತೆ ನಿರ್ಬಂಧಿಸಿತ್ತು. ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ICAO) ನಿಯಮಗಳು ಒಮ್ಮೆಗೆ ಒಂದು ತಿಂಗಳ ಕಾಲ ಅಂತಹ ಮುಚ್ಚುವಿಕೆಯನ್ನು ನಿರ್ಬಂಧಿಸುತ್ತವೆ. ಮೇ 7 ರಂದು ಪಾಕಿಸ್ತಾನ…
ಬೆಂಗಳೂರು: 2024 ರ ವಿಧಾನಸಭಾ ಚುನಾವಣೆಗಳ ನಂತರ ಬಹು ರಾಜ್ಯ ಸರ್ಕಾರಗಳು ತಮ್ಮ ಮೊದಲ ವರ್ಷವನ್ನು ಪೂರ್ಣಗೊಳಿಸುತ್ತಿರುವುದರಿಂದ, ಒನ್ಇಂಡಿಯಾ, ಪೊಲಿಟಿಕಲ್ ವೈಬ್ ಸಹಯೋಗದೊಂದಿಗೆ, ರಾಷ್ಟ್ರದ ಜನರ ಮನಸ್ಥಿತಿಯನ್ನು ಅಳೆಯುವ ಗುರಿಯನ್ನು ಹೊಂದಿರುವ ವ್ಯಾಪಕ, ಬಹುಭಾಷಾ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದೆ. ಇದು ಕೇವಲ ನಿಯಮಿತ ಕಾರ್ಯಕ್ಷಮತೆ ಪರಿಶೀಲನೆಯಲ್ಲ – ಅಧಿಕಾರಕ್ಕೆ ಬಂದ ಒಂದು ವರ್ಷದ ನಂತರ ಜನರು ತಮ್ಮ ನಾಯಕರು, ನೀತಿಗಳು ಮತ್ತು ಭರವಸೆಗಳ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳಲು ಇದು ಸಕಾಲಿಕ ಮತ್ತು ರಚನಾತ್ಮಕ ಪ್ರಯತ್ನವಾಗಿದೆ. ಯಾವುದೇ ಹೊಸ ಸರ್ಕಾರದ ಮೊದಲ ವಾರ್ಷಿಕೋತ್ಸವವು ನೈಸರ್ಗಿಕ ಚೆಕ್‌ಪಾಯಿಂಟ್ ಅನ್ನು ನೀಡುತ್ತದೆ ಮತ್ತು ಒನ್‌ಇಂಡಿಯಾದ ಉಪಕ್ರಮವು ರಾಜ್ಯಗಳಾದ್ಯಂತ ಸಾರ್ವಜನಿಕ ಅಭಿಪ್ರಾಯದ ಬಗ್ಗೆ ಆಳವಾದ, ಡೇಟಾ-ಬೆಂಬಲಿತ ಒಳನೋಟಗಳನ್ನು ನೀಡಲು ಬಳಸಿಕೊಳ್ಳುತ್ತದೆ. ಈ ಸಮೀಕ್ಷೆಯನ್ನು ಪ್ರತ್ಯೇಕಿಸುವುದು ಅದರ ವಿಸ್ತಾರವಾದ ವಿನ್ಯಾಸ. ಒನ್‌ಇಂಡಿಯಾದ ಸಂಪಾದಕೀಯ ನಾಯಕತ್ವದಿಂದ ರಚಿಸಲ್ಪಟ್ಟ ಮತ್ತು ಪೊಲಿಟಿಕಲ್ ವೈಬ್‌ನ ಅನುಭವಿ ವಿಶ್ಲೇಷಣಾ ತಂಡದಿಂದ ಕಾರ್ಯಗತಗೊಳಿಸಲ್ಪಟ್ಟ ಈ ಸಮೀಕ್ಷೆಯು ನಗರ ಮತ್ತು ಗ್ರಾಮೀಣ ಭೌಗೋಳಿಕತೆಯನ್ನು ವ್ಯಾಪಿಸಲಿದ್ದು, ಜಾತಿ, ವರ್ಗ,…