Subscribe to Updates
Get the latest creative news from FooBar about art, design and business.
Author: kannadanewsnow09
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಮೊದಲ ಏಕದಿನ ಪಂದ್ಯಕ್ಕೆ ರಜತ್ ಪಾಟಿದಾರ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದ್ದು, ತಿಲಕ್ ವರ್ಮಾ ಕೊನೆಯ ಎರಡು ಪಂದ್ಯಗಳನ್ನು ಮುನ್ನಡೆಸಲಿದ್ದಾರೆ. ಬಿಸಿಸಿಐ ಭಾನುವಾರ ಭಾರತ ಎ ತಂಡವನ್ನು ಪ್ರಕಟಿಸಿದ್ದರಿಂದ ಆಸ್ಟ್ರೇಲಿಯಾ ಎ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಲ್ಲಿ ಕನಿಷ್ಠ ಒಬ್ಬರು ಭಾಗವಹಿಸಬಹುದೆಂಬ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಇದರಲ್ಲಿ ಯಾವುದೇ ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನು ಸೇರಿಸಲಾಗಿಲ್ಲ. ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗುವ ಮೊದಲ ಏಕದಿನ ಪಂದ್ಯಕ್ಕೆ ರಜತ್ ಪಾಟಿದಾರ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದ್ದು, ಅಕ್ಟೋಬರ್ 3 ಮತ್ತು 5 ರಂದು ನಡೆಯಲಿರುವ ಕೊನೆಯ ಎರಡು ಪಂದ್ಯಗಳಿಗೆ ತಿಲಕ್ ವರ್ಮಾ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಎಲ್ಲಾ ಮೂರು ಪಂದ್ಯಗಳು ಕಾನ್ಪುರದಲ್ಲಿ ನಡೆಯಲಿವೆ. ಏಷ್ಯಾ ಕಪ್‌ಗೆ ಆಯ್ಕೆಯಾಗಿರುವ ತಿಲಕ್, ಅಭಿಷೇಕ್ ಶರ್ಮಾ, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಮೊದಲ ಪಂದ್ಯದ ಭಾಗವಾಗಿರುವುದಿಲ್ಲ ಮತ್ತು ಕೊನೆಯ ಎರಡು ಪಂದ್ಯಗಳಿಗೆ ಮಾತ್ರ ಅವರನ್ನು ಸೇರಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ 16 ರಿಂದ…
ಬೆಂಗಳೂರು: ಯುಜಿ ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆ.16ರೊಳಗೆ ತಮಗೆ ಸೂಕ್ತ ಅನಿಸುವ ಛಾಯ್ಸ್ ಆಯ್ಕೆ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ. ಸೀಟು ಹಂಚಿಕೆಯಾಗಿರುವವರಿಗೆ ಛಾಯ್ಸ್-1, 2 ಮತ್ತು ಛಾಯ್ಸ್ -4 ಆಯ್ಕೆಗೆ ಅವಕಾಶ ನೀಡಲಾಗಿದೆ. ಸೆ.15ರಂದು ಮಧ್ಯಾಹ್ನ 2ರಿಂದ ಸೆ.16ರಂದು ಮಧ್ಯಾಹ್ನ 1ರವರೆಗೆ ಛಾಯ್ಸ್ ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್ ಆಯ್ಕೆಗೂ ಮುನ್ನ ಪೋಷಕರ ಜತೆ ಚರ್ಚಿಸಿ ತೀರ್ಮಾನಿಸಲು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಸಲಹೆ ನೀಡಿದ್ದಾರೆ. ಛಾಯ್ಸ್- 1 ಮತ್ತು ಛಾಯ್ಸ್-2 ಆಯ್ಕೆ ಮಾಡಿದವರು ಸೆ.16ರೊಳಗೆ ಶುಲ್ಕ ಪಾವತಿಸಬೇಕು. ಛಾಯ್ಸ್-1 ಆಯ್ಕೆ ಮಾಡಿದವರು ಸೆ.16ರೊಳಗೆ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. https://kannadanewsnow.com/kannada/the-value-of-news-is-being-tarnished-by-breaking-news-minister-shivraj-tangadagi-expresses-concern/ https://kannadanewsnow.com/kannada/shivamogga-ganapati-bank-of-sagar-launches-customer-friendly-scheme-president-r-srinivas/
ಕೊಪ್ಪಳ: ಬ್ರೇಕಿಂಗ್ ಸುದ್ದಿ ನೀಡುವ ಆತುರದಲ್ಲಿ ಸುದ್ದಿಯ ಖಚಿತತೆ ಮಾಡಿಕೊಳ್ಳದೆ ಸುದ್ದಿ ಬಿತ್ತರಿಸುವ ಕೆಲಸವಾಗುತ್ತಿದ್ದು, ಇದರಿಂದ ಸುದ್ದಿಯ ಮೌಲ್ಯ ಕುಸಿಯುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕೆಗಳ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಪ್ರಶ್ನಾರ್ಥಕ ಚಿಹ್ನೆ ಹಾಕಿ ಸುದ್ದಿ ಬರೆದರೆ, ಅದೇ ಸತ್ಯ ಎಂದು ಓದುಗರು ನಂಬುತ್ತಾರೆ. ಹೀಗಾಗಿ ಸುದ್ದಿಯ ಖಚಿತತೆ ಪಡೆದು ಸುದ್ದಿ ಬರೆಯಬೇಕಿದೆ ಎಂದು ಸಚಿವರು ಸಲಹೆ ನೀಡಿದರು. ಬ್ರೇಕಿಂಗ್ ನ್ಯೂಸ್ ತನ್ನ ಮೌಲ್ಯವನ್ನೇ ಕಳೆದುಕೊಳ್ಳುತ್ತಿದೆ. ಹತ್ತು ವರ್ಷಗಳ ಹಿಂದೆ ಯಾವುದಾದರೂ ಚಾನೆಲ್ ನಲ್ಲಿ ಬ್ರೇಕಿಂಗ್ ಬಂದರೆ ನಿಂತು ಅದನ್ನು ನೋಡಿಕೊಂಡು ಹೋಗುತ್ತಿದ್ದೆವು. ಆದರೆ ಸುದ್ದಿ ನೀಡುವ ಬರದಲ್ಲಿ ಅದರ ಖಚಿತತೆಯನ್ನು ಪಡೆದುಕೊಳ್ಳದೇ ಬ್ರೇಕಿಂಗ್ ಸುದ್ದಿ…
ಶಿವಮೊಗ್ಗ: ಕುಡಿತ ಅನ್ನುವುದು ನಮ್ಮ ದೇಶಕ್ಕೆ ಅಗತ್ಯ ಇಲ್ಲ ನಮ್ಮ ದೇಶ ಸಮಶೀತೋಷ್ಣ ದೇಶ. ಶೇಕಡಾ 90 ರಷ್ಟು ಜನ ಮದ್ಯ ಸೇವನೆ ಮಾಡದೇ ಬದುಕುತ್ತಿದ್ದಾರೆ. ಶೇಕಡಾ 9ರಷ್ಟು ಜನರಿಂದ 23 ರಷ್ಟು ಜನರ ಸಂಸಾರ ಹಾಳು ಆಗುತ್ತಿದೆ ಎಂಬುದಾಗಿ ಸಮೀಕ್ಷೆಯಿಂದ ಬಯಲಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಗರ ತಾಲೂಕಿನ, 1981 ನೇ ಮದ್ಯ ವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿ ಅವಿನಹಳ್ಳಿ ವಲಯದ ಸಂಯುಕ್ತ ಆಶ್ರಯದಲ್ಲಿ ಚಿಪ್ಪಳಿ ಗ್ರಾಮದ ಆದಿಶಕ್ತಿ ನಗರದ ಶ್ರೀ ನಾರಾಯಣ ಗುರುಗಳ ಸಮುದಾಯ ಭವನದಲ್ಲಿ ಆಯೋಜಿಸಲಾದ 1981 ನೇ ಮದ್ಯವರ್ಜನಾ ಶಿಬಿರದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಮಾತನಾಡಿದರು. ಕುಡಿತದಿಂದ ಮನೆ ಹಾಳಾಗುತ್ತಿದೆ. ಮಕ್ಕಳು ವಿದ್ಯಾಬ್ಯಾಸದಿಂದ ವಂಚಿತ ರಾಗುತ್ತಿದ್ದಾರೆ. ಇದನ್ನು ಮನಗಂಡ ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮನ ಪರಿವರ್ತನೆಯ ಮೂಲಕ ಕುಡಿತದ ಚಟಕ್ಕೆ ಬಲಿಯಾದವರನ್ನು ಸಮಾಜದ ಮುಖ್ಯ…
ಶಿವಮೊಗ್ಗ : ಗ್ರಾಹಕರ ಸೇವೆಗೆ ಗಣಪತಿ ಬ್ಯಾಂಕ್ ಕಟಿಬದ್ದವಾಗಿದ್ದು, ಗ್ರಾಹಕಸ್ನೇಹಿ ಅನೇಕ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಭದ್ರಕಾಳಿ ಸಭಾಭವನದಲ್ಲಿ ಭಾನುವರ ಶ್ರೀ ಗಣಪತಿ ಅರ್ಬನ್ ಕೋ. ಆಪರೇಟಿವ್ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ 110ನೇ ವರ್ಷ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ, ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದಂತ ಅವರು, ಸಹಕಾರಿ ಸಂಸ್ಥೆಗಳು ಸದೃಢವಾಗಿ ನಡೆಯುವುದು ಕಷ್ಟಸಾಧ್ಯ. ಅನೇಕ ಸವಾಲುಗಳ ನಡುವೆಯೂ ಸಂಸ್ಥೆ 110 ವರ್ಷಗಳನ್ನು ಪೂರೈಸಿದೆ. ಜೊತೆಗೆ ರಾಜ್ಯದಲ್ಲಿಯೆ ಅತ್ಯಂತ ಮಾದರಿ ಸಹಕಾರಿ ಎನ್ನುವ ಹೆಗ್ಗಳಿಕೆ ನಮ್ಮ ಸಂಸ್ಥೆ ಹೊಂದಿದೆ ಎಂದರು. ಸಿಬಿಎಸ್ ತಂತ್ರಾಂಶ ಹೊಂದಿದ್ದು, ಯುಪಿಐ ಸೌಲಭ್ಯ, ನೆಫ್ಟ್, ಆರ್.ಟಿ.ಜಿ.ಎಸ್., ಪಿಓಎಸ್, ಮೊಬೈಲ್ ಬ್ಯಾಂಕಿಂಗ್, ಪಿಎಂಎಸ್‌ಬಿವೈ ಯೋಜನೆಯನ್ನು ಸಹ ಬ್ಯಾಂಕ್ ಹೊಂದಿದ್ದು, ರಾಜ್ಯದಲ್ಲಿಯೆ ಸಹಕಾರಿಯೊಂದು ಹಲವು ಸೇವೆಯನ್ನು ಹೊಂದಿದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಆರ್ಥಿಕ ವಹಿವಾಟುವಿನಲ್ಲಿ ಉನ್ನತ ಮಟ್ಟ ತಲುಪುತ್ತಿದ್ದು ಸಾಲವಸೂಲಾತಿ…
ಶಿವಮೊಗ್ಗ: ಮನುಷ್ಯನಿಗೆ ಶತೃ ದುರಾಸೆ. ಮನುಷ್ಯ ದುರಾಸೆಯಿಂದ ತನ್ನತನ ಕಳೆದುಕೊಳ್ಳುತ್ತಿದ್ದಾನೆ. ಆ ಮೂಲಕ ಭ್ರಷ್ಟಾಚಾರದಂತಹ ಜಾಲದಲ್ಲಿ ಸಿಲುಕುತ್ತಿದ್ದಾನೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಎಂ.ಎಲ್.ಹಳ್ಳಿಯಲ್ಲಿ ಭಾನುವಾರ ರಾಮಕೃಷ್ಣ ವಿವೇಕಾನಂದ ವಸತಿ ವಿದ್ಯಾಲಯ, ರಾಮಕೃಷ್ಣ ಸಮೂಹ ಸಂಸ್ಥೆ ಹಾಗೂ ಯುವ ಸ್ಪೂರ್ತಿ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿ ಜಾಗೃತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾರಿಗೆ ಹಣ, ಅಧಿಕಾರ, ಸಂಪತ್ತು ಗಳಿಸುವ ಹಪಹಪಿ ಇರುತ್ತದೆಯೋ ಅಂತಹವರಿಂದ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಡ್ಡದಾರಿಯಿಂದ ಹಣ ಮಾಡುವುದು ದೊಡ್ಡ ಅಪಾಯ. ಇದ್ದದ್ದರಲ್ಲಿಯೆ ಸಂತೋಷ ಪಡುವ, ಅಲ್ಪಸ್ವಲ್ಪ ದಾನ ಮಾಡಿ ತೃಪ್ತಿಪಡುವ, ಮಾನವೀಯ ಮೌಲ್ಯವನ್ನು ಬಿತ್ತುವ ಕೆಲಸವಾಗಬೇಕು. ನಾನು ಲೋಕಾಯುಕ್ತಕ್ಕೆ ಬರುವ ಮೊದಲು ಎಲ್ಲವೂ, ಎಲ್ಲರೂ ಒಳ್ಳೆಯವರು ಎಂದು ಕೊಂಡಿದ್ದೆ. ಆದರೆ ಲೋಕಾಯುಕ್ತಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಅನಾವರಣವಾಗುತ್ತಾ ಹೋಯಿತು ಎಂದರು. ಹಿಂದೆ ನಾವು ಓದುವ ಪಾಠಗಳಲ್ಲಿ ನೀತಿ ಶಿಕ್ಷಣ ಇತ್ತು.…
ಶಿವಮೊಗ್ಗ : ಸಾಲ ವಸೂಲಾತಿ ಹೆಸರಿನಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳವನ್ನು ತಕ್ಷಣ ನಿಲ್ಲಿಸಬೇಕು. ನ್ಯಾಯಾಲಯದ ಮೂಲಕ ಬ್ಯಾಂಕ್‌ಗಳು, ಮೈಕ್ರೋಫೈನಾನ್ಸ್ಗಳು ರೈತರ ಸಾಲ ವಸೂಲಾತಿಗೆ ಹೊಸ ಅಸ್ತ್ರ ಪ್ರಯೋಗಿಸುತ್ತಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನೇಕ ಕಡೆಗಳಲ್ಲಿ ಸಾಲ ವಸೂಲಾತಿ ಹೆಸರಿನಲ್ಲಿ ರೈತರ ಆಸ್ತಿ ಹರಜು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ತಕ್ಷಣ ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು. ಬೆಳೆ ಉತ್ತಮವಾಗಿ ಬಂದರೆ ರೈತ ಸಾಲ ತೀರಿಸಲು ಹೆದರುವುದಿಲ್ಲ. ಆದರೆ ಮಳೆ ಕಣ್ಣುಮುಚ್ಚಾಲೆಯಿಂದ ರೈತ ಫಸಲು ಕಳೆದುಕೊಂಡು ಸಂಕಷ್ಟದಲ್ಲಿದ್ದಾನೆ. ಇಂತಹ ಹೊತ್ತಿನಲ್ಲಿ ರೈತ ಸಾಲ ಹೇಗೆ ತೀರಿಸಲು ಸಾಧ್ಯ ಎನ್ನುವ ಕನಿಷ್ಟ ಪರಿಜ್ಞಾನ ಸರ್ಕಾರಕ್ಕೆ ಇರಬೇಕು. ಮುಖ್ಯಮಂತ್ರಿಗಳು ರೈತರ ಮೇಲೆ ದಬ್ಬಾಳಿಕೆ ಮಾಡಿ ಸಾಲ ವಸೂಲಿ ಮಾಡುವಂತೆ ಇಲ್ಲ ಎಂದು ಮೈಕ್ರೋಫೈನಾನ್ಸ್ ಕಂಪನಿಗಳಿಗೆ…
ಆ ಹಾಡಿನ ಮೂಲಕ ರಾತ್ರೋ ರಾತ್ರಿ ಫೇಮಸ್ ಆದಂತ ಆ ಹುಡುಗಿಯ ಇನ್ಸ್ಟಾ ಗ್ರಾಂ ಫಾಲೋವರ್ಸ್ ಸಂಖ್ಯೆಯೂ ಅಷ್ಟೇ ವೇಗವಾಗಿ ಏರಿಕೆಯಾಗಿದೆ. 150 ಮಂದಿ ಫಾಲೋವರ್ಸ್ ಹೊಂದಿದ ಆ ಯುವತಿ, ಇಂದು 40,000 ಫಾಲೋವರ್ಸ್ ಹೊಂದಿದ್ದಾಳೆ. ಆ ಬಗ್ಗೆ ಮುಂದೆ ಓದಿ. ಸೋಷಿಯಲ್ ಮೀಡಿಯಾವೇ ಹಾಗೆ ಜನಸಾಮಾನ್ಯರನ್ನು ರಾತ್ರಿ ಕಳೆದು ಬೆಳಗಾಗುವ ಅಷ್ಟರಲ್ಲಿ ಫೇಮಸ್ ಮಾಡಿ ಬಿಡುತ್ತದೆ. ಕೆಲವರು ರೀಲ್ಸ್ ಮಾಡಿ ಫೇಮಸ್ ಆದ್ರೇ, ಮತ್ತೆ ಕೆಲವರು ತಾರಾವರಿ ವೀಡಿಯೋ ಮಾಡಿ ಪ್ರಸಿದ್ಧಿ ಗಳಿಸಿದ್ದಾರೆ. ಫೇಮಸ್ ಆಗೋದಕ್ಕೆ ಸಾಮಾಜಿಕ ಮಾಧ್ಯಮಗಳು ವೇದಿಕೆಯನ್ನು ಕಲ್ಪಿಸಿವೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಹೀಗೆ ಫೇಮಸ್ ಆದಂತ ಯುವತಿಯೇ ನಿತ್ಯಾಶ್ರೀ. ಈಕೆ ಹೂವಿನ ಬಾಣದಂತೆ ಹಾಡಿದಂತ ಹಾಡಿನ ಮೂಲಕ ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಹೂವಿನ ಬಾಣದಂತೆ ಹಾಡಿನ ಮೂಲಕ ಫೇಮಸ್ ಆಗಿ ಬಿಟ್ಟಿದ್ದಾಳೆ. ಸ್ನೇಹಿತರ ಗುಂಪಿನಲ್ಲಿ ತಮಾಷೆಗೆಂದು ಹಾಡಿದ ಹೂವಿನ ಬಾಣದಂತೆ ಹಾಡು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿತ್ಯಾಶ್ರೀ ಹಾಡಿದಂತ…
ಬೆಂಗಳೂರು: ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಿದ್ದರೇ ಭಾರತ-ಪಾಕಿಸ್ತಾನ ಪಂದ್ಯಾವಳಿಯನ್ನು ರದ್ದು ಮಾಡುತ್ತಿದ್ದೆವು ಎಂಬುದಾಗಿ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ನಗರದಲ್ಲಿ ಸದ್ದಿಗಾರೊಂದಿಗೆ ಮಾತನಾಡಿದಂತ ಅವರು, ಭಾರತ-ಪಾಕ್ ಮ್ಯಾಚ್ ರದ್ದು ಮಾಡಬೇಕು. ಯಾವ ಮುಖ ಇಟ್ಕೊಂಡು ಇವರು ಮ್ಯಾಚ್ ನಡೆಸುತ್ತಿದ್ದಾರೆ. ಪಹಲ್ಗಾಮ್ ಘಟನೆಯ ನೋವು ನಮಗೆ ಇನ್ನೂ ಇದೆ ಎಂಬುದಾಗಿ ಕಿಡಿಕಾರಿದರು. ಅಮಿತಾ ಶಾ ಪುತ್ರ ಜೈ ಶಾಗೆ ಬ್ಯುಸಿನೆಸ್ ಮುಖ್ಯ. ಇಲ್ಲಿ ಅಶೋಕ್, ವಿಜಯೇಂದ್ರ, ಯತ್ನಾಳ್ ಅವರೇ ನಿಮಗೆ ಧಮ್ಮು, ತಾಕತ್ತು ಇದ್ರೆ ಕೇಂದ್ರ ಸರ್ಕಾರಕ್ಕೆ ಹೇಳಿ ಭಾರತ-ಪಾಕಿಸ್ತಾನ ಮ್ಯಾಚ್ ನಿಲ್ಲಿಸಿ. ನಾವು ಇನ್ನೂ ಪಹಲ್ಗಾಮ್ ದಾಳಿಯನ್ನು ಮರೆತಿಲ್ಲ. ನಮಗೆ ನೋವಿದೆ. ಅದಕ್ಕೆ ನಾನು ಇವತ್ತಿನ ಪಂದ್ಯಾವಳಿಯನ್ನು ನೋಡೋದಿಲ್ಲ ಎಂಬುದಾಗಿ ತಿಳಿಸಿದರು. https://kannadanewsnow.com/kannada/how-to-get-your-aadhar-card-on-whatsapp-here-is-the-information/ https://kannadanewsnow.com/kannada/kpcc-in-full-swing-for-greater-bengaluru-authority-elections-dk-orders-formation-of-preparatory-committee/
ನಾಗ್ಪುರ: ನಾನು ಬ್ರೋಕರ್ ಅಲ್ಲ. ನನ್ನ ಬುದ್ಧಿವಂತಿಕೆಯಿಂದ ಪ್ರತಿ ತಿಂಗಳು 200 ಕೋಟಿ ರೂಪಾಯಿ ಸಂಪಾದಿಸುವುದಾಗಿ ಕೇಂದ್ರ ರಸ್ತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಹೀಗೆ ಏಕೆ ಹೇಳಿದ್ದು ಅಂತ ಮುಂದೆ ಓದಿ. ಕಳೆದ ಕೆಲವು ತಿಂಗಳುಗಳಲ್ಲಿ, ದೇಶದಲ್ಲಿ ಎಥೆನಾಲ್ ಬಗ್ಗೆ ವಿವಾದವೊಂದು ಕಂಡುಬಂದಿದೆ. ಎಥೆನಾಲ್ ನಿಂದಾಗಿ ತಮ್ಮ ವಾಹನಗಳು ಹಾನಿಗೊಳಗಾಗುತ್ತಿವೆ ಎಂದು ಜನರು ಹೇಳುತ್ತಿದ್ದರು. ಈ ಇಡೀ ವಿಷಯ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು. ಇದಕ್ಕೆ ಕೇಂದ್ರ ರಸ್ತೆ ಸಚಿವ ನಿತಿನ್ ಗಡ್ಕರಿ ಅವರೇ ಕಾರಣ. ಆದರೆ, ನ್ಯಾಯಾಲಯ ಅದನ್ನು ತಿರಸ್ಕರಿಸಿತು. ಈ ವಿಷಯದ ಬಗ್ಗೆ ಗಡ್ಕರಿ ಮಾತನಾಡಿ, ಈ ಸಂಪೂರ್ಣ ವಿವಾದ ಸಾಮಾಜಿಕ ಮಾಧ್ಯಮದ ಪರಿಣಾಮವಾಗಿದೆ ಎಂದು ಹೇಳಿದರು. ಅವರು ನನ್ನ ಬುದ್ಧಿವಂತಿಕೆಯಿಂದ ಪ್ರತಿ ತಿಂಗಳು 200 ಕೋಟಿ ರೂ. ಗಳಿಸುತ್ತದೆ. ನನಗೆ ಹಣದ ಕೊರತೆಯಿಲ್ಲ ಮತ್ತು ನಾನು ಕುಗ್ಗುವುದಿಲ್ಲ ಎಂದರು. ತಮ್ಮ ಕೆಲಸ ಮತ್ತು ಪ್ರಯೋಗಗಳು ರೈತರ ಹಿತಕ್ಕಾಗಿಯೇ ಹೊರತು ಹೆಚ್ಚು ಗಳಿಸುವ ಅಗತ್ಯದಿಂದಲ್ಲ ಎಂದು ಅವರು ಹೇಳಿದರು.…






