Author: kannadanewsnow09

ಬೆಂಗಳೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅವರಿಂದ ಬೆಂಗಳೂರಿನ ಬೊಬ್ಬುರಕಮ್ಮೆ ಸಭಾಭವನದಲ್ಲಿ ನಡೆದ ಆಚಾರ್ಯತ್ರಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು ವಿಪ್ರ ಸಮುದಾಯದ ಸ್ವಂತ ಉದ್ಯಮ ನಡೆಸುವವರಿಗೆ ಕಿರು ಸಾಲಯೋಜನೆಯ ಫಲಾನುಭವಿಗಳಿಗೆ ಪತ್ರ ವಿತರಿಸಿ, ಚಾಣಕ್ಯ ಆಡಳಿತ ತರಬೇತಿ ಯೋಜನೆ ಲೊಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಸಚಿವರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ನಾವೇ ಸ್ಥಾಪಿಸಿದ್ದು. ನಮ್ಮ ಸಮಾಜ ಅತ್ಯಂತ ಸ್ವಾಭಿಮಾನಿ ಸಮಾಜ. ಕಷ್ಟದಿಂದ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರು ನಮ್ಮಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮುಂದುವರೆದ ಸಮಾಜ ಎಂಬ ಹಣೆಪಟ್ಟಿ ಇದ್ದರೂ, ಬ್ರಾಹ್ಮಣ ಸಮುದಾಯದಲ್ಲಿಯೂ ಬಡವರಿದ್ದಾರೆ, ಹತ್ತಾರು ಸಮಸ್ಯೆಗಳು ಇವೆ. ಯಾರು ಏನೇ ಹೇಳಲಿ. ನಮ್ಮ ಸರ್ಕಾರ ಬ್ರಾಹ್ಮಣರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ, ಮುಂದೆ ಕೂಡ ಸ್ಪಂದಿಸುತ್ತೇವೆ ಎಂದರು. ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರದ ಉದ್ದೇಶ ಎಲ್ಲ ಸಮಾಜ ಬೆಳಗಬೇಕು ಎಂಬುದಾಗಿದೆ. ಕಷ್ಟದಲ್ಲಿ ಇದ್ದವರಿಗೆ ಸರ್ಕಾರದ ಸಹಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಬ್ರಾಹ್ಮಣರಿಗೆ ಸಮಸ್ಯೆಯೇ ಇಲ್ಲ ಎನ್ನುವುದು ಶುದ್ಧ ತಪ್ಪು.ನಾನಂತೂ…

Read More

ಇಂಡೋನೇಷ್ಯಾ: ರಾಜಧಾನಿ ಜಕಾರ್ತದಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ 54 ಜನರು ಗಾಯಗೊಂಡಿದ್ದಾರೆ. ನವೆಂಬರ್ 7 ರಂದು ಶಾಲಾ ಸಂಕೀರ್ಣದೊಳಗಿನ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಘಟನೆಯ ಸ್ವಲ್ಪ ಸಮಯದ ನಂತರ, ನಗರ ಪೊಲೀಸ್ ಮುಖ್ಯಸ್ಥ ಅಸೆಪ್ ಎಡಿ ಸುಹೇರಿ ದೂರದರ್ಶನದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಜಕಾರ್ತಾದ ಕೆಲಪಾ ಗೇಡಿಂಗ್‌ನಲ್ಲಿರುವ ಸ್ಥಳದಲ್ಲಿ ಸ್ಫೋಟದ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಮಾಧ್ಯಮ ವರದಿಗಳ ಪ್ರಕಾರ, ಬಾಂಬ್ ಸ್ಫೋಟದ ಸ್ಥಳದಲ್ಲಿ ಹಲವಾರು ವಸ್ತುಗಳು ಪತ್ತೆಯಾಗಿವೆ, ಅವುಗಳಲ್ಲಿ ಬಾಡಿ ವೆಸ್ಟ್, ಬಂದೂಕುಗಳು ಮತ್ತು ಭಯೋತ್ಪಾದಕ ಚಟುವಟಿಕೆಯೊಂದಿಗೆ ಸಂಬಂಧವನ್ನು ಸೂಚಿಸುವ ಬಾಂಬ್ ವಸ್ತುಗಳು ಸೇರಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಸೀದಿಯ ಚಿತ್ರಗಳು ಯಾವುದೇ ವ್ಯಾಪಕ ಹಾನಿಯನ್ನು ತೋರಿಸದಿದ್ದರೂ, ಗಾಯಾಳುಗಳು ಸಣ್ಣಪುಟ್ಟ ಅಥವಾ ಗಂಭೀರವಾದ ಸುಟ್ಟಗಾಯಗಳನ್ನು ಅನುಭವಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Read More

ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲಾಗದ ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು. ಮೈಸೂರಿನಲ್ಲಿ ಶುಕ್ರವಾರ ದಿಶಾ ಸಮಿತಿ ಸಭೆ ಆರಂಭಕ್ಕೆ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಇರಾದೆ ಈ ಸರ್ಕಾರಕ್ಕೆ ಇಲ್ಲ. ಪ್ರತಿಯೊಂದು ವಿಷಯವನ್ನೂ ಕೇಂದ್ರದ ಮೇಲೆ ಹಾಕಿ ನುಣಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದರು. ಮುಖ್ಯಮಂತ್ರಿಗಳು ಮನಸು ಮಾಡಿದರೆ ಇದು ಅತ್ಯಂತ ಚಿಕ್ಕ‌ ವಿಚಾರ. ಕೆಲವು ನಿಮಿಷಗಳಲ್ಲಿ ಬಗೆಹರಿಸಬಹುದಾದ ವಿಷಯ ಇದಾಗಿದೆ. ಆದರೆ, ಸಿಎಂ ಅವರು ಪ್ರತಿಯೊಂದಕ್ಕೂ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. ದೇಶದ ಯಾವ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿದ್ದಾರೆ ಹೇಳಿ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು. ಈ ಸಮಸ್ಯೆ ವಿಚಾರದಲ್ಲಿ ಜನ ಪ್ರತಿನಿಧಿಗಳನ್ನು…

Read More

ಬೆಂಗಳೂರು: ಇಂದು ಕಬ್ಬು ಬೆಳೆಗಾರ ರೈತರ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನಡೆಸಿದರು. ಆ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. • ಕಬ್ಬು ಬೆಳೆಗಾರರಿಗೆ ನೆರವಾಗುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಫ್ಆರ್ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರದ ಕಾರ್ಯ. ಕೇಂದ್ರ ಸರ್ಕಾರ ದಿನಾಂಕ 6-05-2025ರಲ್ಲಿ ಎಫ್ಆರ್ಪಿ ನಿಗದಿಪಡಿಸಿದೆ. ಈ ಎಫ್ಆರ್ಪಿಯಲ್ಲಿ ಸಾಗಾಟ ಮತ್ತು ಕಟಾವು ವೆಚ್ಚ ಸಹ ಸೇರಿದೆ. ಸಕ್ಕರೆಯ ಎಂಎಸ್ಪಿ ಹೆಚ್ಚಳ ಮಾಡುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಇದೀಗ ಕೇಂದ್ರ ಸರ್ಕಾರ ಸಮಸ್ಯೆ ಹುಟ್ಟು ಹಾಕಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು. • ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ಹೇಳಿದರು. • ಸಕ್ಕರೆ ಕಾರ್ಖಾನೆ ಮಾಲಿಕರ ಪರವಾಗಿ ಮುರುಗೇಶ್…

Read More

ನವದೆಹಲಿ: ಬಾಲಿವುಡ್ ಖ್ಯಾತ ಗಾಯಕಿ, ನಟಿ ಸುಲಕ್ಷಣ ಪಂಡಿತ್ ಇಂದು ನವೆಂಬರ್ 6, 2025 ರಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಸುಲಕ್ಷಣ ಪಂಡಿತ್, ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಗಾಯನದಲ್ಲೂ ಉತ್ತಮ ಸಾಧನೆ ಮಾಡಿದ್ದರು. ಚಲನಚಿತ್ರೋದ್ಯಮದಲ್ಲಿ ಅವರ ಖ್ಯಾತಿ ಗಳಿಸಿದ್ದರು. ಗಾಯಕಿ-ನಟಿ ಸುಲಕ್ಷಣ ಪಂಡಿತ್ 70 ಮತ್ತು 80 ರ ದಶಕದ ಪ್ರಸಿದ್ಧ ನಟಿ ಮತ್ತು ಗಾಯಕಿ. ಅವರು ಜುಲೈ 12, 1954 ರಂದು ಛತ್ತೀಸ್‌ಗಢದ ರಾಯ್‌ಗಢದಲ್ಲಿ ಜನಿಸಿದರು. ಅವರು ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಹಾಡಲು ಪ್ರಾರಂಭಿಸಿದರು. ಸುಲಕ್ಷಣ 1967 ರಲ್ಲಿ ಮೊದಲ ಬಾರಿಗೆ ಚಲನಚಿತ್ರಕ್ಕಾಗಿ ಹಾಡಿದರು ಮತ್ತು ಅವರ ಚಲನಚಿತ್ರಗಳಲ್ಲಿ ಅನೇಕ ಜನಪ್ರಿಯ ಹಾಡುಗಳನ್ನು ಹಾಡಿದರು. 1967 ರ ಚಲನಚಿತ್ರ ತಕ್ದೀರ್‌ನಲ್ಲಿ ಲತಾ ಮಂಗೇಶ್ಕರ್ ಅವರೊಂದಿಗೆ ಅವರ ‘ಸಾತ್ ಸಮಂದರ್ ಪಾರ್ ಸೇ’ ಹಾಡು ಭಾರಿ ಹಿಟ್ ಆಗಿತ್ತು. 1976ರಲ್ಲಿ, ಸಂಕಲ್ಪ ಚಿತ್ರದ ‘ತು ಹಿ ಸಾಗರ್ ತು ಹಿ…

Read More

ಮಂಡ್ಯ : ಆರೋಪಿಯೊಬ್ಬನಿಂದ 5 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಹೆಡ್ ಕಾನ್ಸ್ಟೆಬಲ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗುರುವಾರ ಮಳವಳ್ಳಿ ಪಟ್ಟಣದಲ್ಲಿ ಜರುಗಿದೆ. ಮಳವಳ್ಳಿ ಗ್ರಾಮಾಂತರ ಪೋಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿಯಾಗಿದ್ದಾರೆ. ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮದ ನವೀನ್ ಎಂಬುವರು ಇತ್ತಿಚೆಗೆ ನಡೆದಿದ್ದ ಗಲಾಟೆಯೊಂದರಲ್ಲಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ನವೀನ್ ಹೊರ ಬಂದಿದ್ದರು. ಇವರ ಮೇಲೆ ಪೋಲೀಸ್ ಅಧಿಕಾರಿಗಳು ನವೀನ್ ಮೇಲೆ ರೌಡಿ ಶೀಟರ್ ತೆರೆಯಬೇಕೆಂದು ನಿರ್ಧರಿಸಲಾಗಿತ್ತು. ಹೀಗಾಗಿ ನಿನ್ನ ವಿರುದ್ದ ರೌಡಿ ಶೀಟರ್ ಅನ್ನು ತೆರೆಯಬಾರದು ಎಂದರೆ 5 ಸಾವಿರ ಲಂಚ ನೀಡಬೇಕೆಂದು ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ ನವೀನ್ ಬಳಿ ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ಮಂಡ್ಯ ಲೋಕಾಯುಕ್ತಕ್ಕೆ ನವೀನ್ ದೂರು ಸಲ್ಲಿಸಿದ್ದರು. ಗುರುವಾರ ಲೋಕಾಯುಕ್ತ ಅಧಿಕಾರಿಗಳ ಮಾರ್ಗದರ್ಶನ ದಂತೆ ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಆರೋಪಿ ನವೀನ್ ಅವರಿಂದ ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ 5 ಸಾವಿರ ಲಂಚ…

Read More

ನವದೆಹಲಿ : ಕೆಎಸ್‌ಆರ್‌ಟಿಸಿಯ ಮೈಸೂರು ನಗರ ಸಾರಿಗೆಯಲ್ಲಿ ಧ್ವನಿ ಸ್ಪಂದನ’ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಎಂಬ ದೇಶದ ಮೊದಲ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ಉಪಕ್ರಮವು “ಸ್ವಯಂ ಆಕ್ಸೆಸಿಬಿಲಿಟಿ ಪ್ರಶಸ್ತಿ‌2025 ಅನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯನ್ನು ಪ್ರಶಾಂತ್ ಕುಮಾರ್ ಮಿತ್ತಲ್ , ಡೆಪ್ಯುಟಿ ಡೈರೆಕ್ಟರ್ ಜನರಲ್ , NIC National Informatics Center, ಮತ್ತು ಸೈಮು ಜಿಂದಾಲ್ , ಸಂಸ್ಥಾಪಕತು, ಸ್ವಯಂ ಸಂಸ್ಥೆ ಅವರು ಶರಣ್ ಬಸವರಾಜ ಕೆ.ಎಂ., ವಿಭಾಗಿಯ ನಿಯಂತ್ರಣಧಿಕಾರಿ, ಮಂಡ್ಯ ವಿಭಾಗ ಹಾಗೂ ಸುಧಾರಾಣಿ ಆರ್., ಉಪ ಮುಖ್ಯ ಗಣಕ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸ್ವಯಂ ಸಂಸ್ಥೆಯು ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಅಂತರರಹಿತ ವಿನ್ಯಾಸ ಮತ್ತು ಒಳಗೊಳ್ಳುವಿಕೆಯ ಕ್ಷೇತ್ರದಲ್ಲಿ ಮಾದರಿಗಳನ್ನು ನಿರ್ಮಿಸಿರುವ ಸಂಸ್ಥೆಗಳನ್ನು ಗೌರವಿಸುವ ಉದ್ದೇಶ ಹೊಂದಿದೆ. 2025ನೇ ಆವೃತ್ತಿ ಸ್ವಯಂ ಸಂಸ್ಥೆಯ 25ನೇ ವಾರ್ಷಿಕೋತ್ಸವವಾಗಿದ್ದು, ಜಾಗತಿಕ ಮಟ್ಟದಲ್ಲಿ ಕ್ಷೇತ್ರದಲ್ಲಿ 25 ವರ್ಷಗಳ ಸೇವೆಯನ್ನು ಆಚರಿಸುತ್ತಿದೆ. ಧ್ವನಿ ಸ್ಪಂದನ – ಆನ್‌ಬೋರ್ಡ್…

Read More

ಚಿತ್ರದುರ್ಗ: ಜಿಲ್ಲೆಯಲ್ಲಿ ಅಬ್ಬಿನಹೊಳೆ ಠಾಣೆ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ, 9 ಲಕ್ಷದ 92 ಸಾವಿರ ಬೆಲೆಬಾಳುವ ಕುರಿಗಳನ್ನು ಕಳ್ಳತನ ಮಾಡಿದ್ದ  ಕಳ್ಳನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ; 01-11-2025 ರಂದು ಸಂಜೆ 06-30 ಗಂಟೆಯಿಂದ  ರಾತ್ರಿ 09-00 ಗಂಟೆಯ ವೇಳೆಯಲ್ಲಿ ಸಕ್ಕರ ಗ್ರಾಮದ ಬಳಿ ಇರುವ ಗುಂಡಪ್ಪ ತಂದೆ  ಈರಪ್ಪ ಅವರ ಜಮೀನಿನಲ್ಲಿದ್ದ ಕುರಿ ರೊಪ್ಪದಿಂದ ಸುಮಾರು 120 ಕುರಿಗಳು ಕಳ್ಳತನವಾಗಿರುವುದಾಗಿ, ಪಿರ್ಯಾದಿ ಸಕ್ಕರ ಗ್ರಾಮದ  ಭೂತಣ್ಣ  ಅವರು ನೀಡಿದ್ದ ದೂರಿನ ಮೆರೆಗೆ ಅಬ್ಬಿನಹೊಳೆ ಪೊಲೀಸ್ ಠಾಣಾ ಮೊ.ನಂ.192/2025 ಕಲಂ 303[2] BNS-2023  ರೀತ್ಯಾ ಪ್ರಕರಣ  ದಾಖಲಿಸಲಾಗಿತ್ತು ಎಂದಿದೆ. ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಿವಕುಮಾರ, ಹಿರಿಯೂರು ಪೊಲೀಸ್ ಉಪಾಧೀಕ್ಷಕರಾದ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಐಮಂಗಲ ವೃತ್ತ ನಿರೀಕ್ಷಕರಾದ ಗುಡ್ಡಪ್ಪ ಎನ್ ಹಾಗೂ ಅಬ್ಬಿನಹೊಳೆ ಪೊಲೀಸ್ ಠಾಣೆಯ…

Read More

ಬೆಂಗಳೂರು: ಕಬ್ಬು ಬೆಳೆಗಾರರ ವಿಚಾರದಲ್ಲಿ ರಾಜ್ಯ ಸರಕಾರ ಜವಾಬ್ದಾರಿಯಿಂದ ವರ್ತಿಸಿ ಸಂಧಾನ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ತಿಳಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರ, ಕೆಲವು ಸಚಿವರು, ಮುಖ್ಯಮಂತ್ರಿಗಳು ಈ ಕಬ್ಬು ಬೆಲೆ ನಿಗದಿ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಕಬ್ಬು ವರ್ಷದ ಪ್ರಾರಂಭಕ್ಕೆ ಮೊದಲು ಕೇಂದ್ರವು ಎಫ್‍ಆರ್‍ಪಿ ನಿಗದಿ ಮಾಡುತ್ತದೆ. ಈಗ ನಾವು 350 ರೂ. ಎಫ್‍ಆರ್‍ಪಿ ನಿಗದಿ ಮಾಡಿದ್ದೇವೆ ಎಂದು ವಿವರಿಸಿದರು. ಇದರ ಜೊತೆಗೆ ಎಥೆನಾಲ್ ಖರೀದಿ ಶುರು ಮಾಡಿದ ಬಳಿಕ ಮೊದಲು 3-4 ವರ್ಷ ಹಣ ಪಾವತಿ ಬಾಕಿ ಇರುತ್ತಿತ್ತು. ಈಗ ಕಳೆದ ಸಕ್ಕರೆ ವರ್ಷದ್ದು, 97.2 ಶೇಕಡಾ ಪಾವತಿ ಆಗಿದೆ. ರಾಜ್ಯ ಸರಕಾರವು ಕಾರ್ಖಾನೆಗಳ ಮಾಲೀಕರು, ರೈತರ ಜೊತೆ ಮಾತುಕತೆ ಮಾಡಿ ಸೂಕ್ತ ಸಂಧಾನ ಮಾಡಬೇಕು. ಸುಮ್ಮಸುಮ್ಮನೇ ಹೇಳಿಕೆ ಕೊಟ್ಟು ಪರಿಸ್ಥಿತಿಯನ್ನು ಕೆಡಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.…

Read More

ಬೆಂಗಳೂರು: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 5 ವರ್ಷಗಳ ಅವಧಿಯಲ್ಲಿ ರೂ.518.27 ಕೋಟಿ ರೂ.ಗಳ ಒಟ್ಟಾರೆ ಆಯವ್ಯಯದಲ್ಲಿ ಕರ್ನಾಟಕ ನವೋದ್ಯಮ ನೀತಿ, 2025-2030ಕ್ಕೆ ಅನುಮೋದನೆ ದೊರೆತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಮತ್ತು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಏಳು ಅಗತ್ಯ ಅಂಶಗಳ ಮೂಲಕ ಕರ್ನಾಟಕದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿರುವ ಸಚಿವರು ಹಣಕಾಸು ಮತ್ತು ಅನುದಾನಗಳು, ಇನ್ಕ್ಯುಬೇಷನ್ ಮತ್ತು ಮೂಲಸೌಕರ್ಯ ಬೆಂಬಲ, ಮಾರ್ಗದರ್ಶನ ಮತ್ತು ಕೌಶಲ್ಯ ಅಭಿವೃದ್ಧಿ, ಮಾರುಕಟ್ಟೆ ಪ್ರವೇಶ ಮತ್ತು ವಿಸ್ತರಣೆ, ಅಂತರರಾಷ್ಟ್ರೀಯ ಸಹಯೋಗ ಮತ್ತು ಪ್ರವೇಶ, ಸೇರ್ಪಡೆ ಮತ್ತು ಸುಸ್ಥಿರತೆ ಮತ್ತು ನಿಯಂತ್ರಕ ಸೌಲಭ್ಯಗಳನ್ನು ವಿಸ್ತರಿಸುವ ಮೂಲಕ ನವೋದ್ಯಮಗಳನ್ನು ಬಲಪಡಿಸಲು ಉದ್ದೇಶಿತ ಕರ್ನಾಟಕ ನವೋದ್ಯಮ ನೀತಿ ಪೂರಕವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ. ನವೋದ್ಯಮಗಳ ವಿಕಾಸದ ಅಗತ್ಯಗಳಿಗೆ ಅನುಗುಣವಾಗಿ ಕರ್ನಾಟಕ ನವೋದ್ಯಮ ನೀತಿಯು ನವೋದ್ಯಮ ವಿವಿಧ ಹಂತಗಳೊಂದಿಗೆ ಸಮನ್ವಯದೊಂದಿಗೆ ತನ್ನ ಕಾರ್ಯಕ್ರಮಗಳನ್ನು…

Read More