Author: kannadanewsnow09

ಬೆಂಗಳೂರು: ಬೆಂಗಳೂರಲ್ಲಿ ಶ್ವಾಸತಾಣಗಳನ್ನು ಉಳಿಸಲು, ಬೆಳೆಸಲು ಸರ್ಕಾರ ನಿರ್ಧರಿಸಿದ್ದು, ಯಲಹಂಕ ಬಳಿಯ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬೆಂಗಳೂರಿನಲ್ಲಿ ಲಾಲ್ ಬಾಗ್ ಹೈದರಾಲಿಯ ಕಾಲದಲ್ಲಿ ನಿರ್ಮಾಣವಾಗಿತ್ತು, ಕಬ್ಬನ್ ಪಾರ್ಕ್ ಬ್ರಿಟಿಷರ ಕಾಲದಲ್ಲಿ ರೂಪುಗೊಂಡಿತು. ಶತಮಾನವೇ ಕಳೆದರೂ ಮತ್ತೊಂದು ಬೃಹತ್ ಉದ್ಯಾನ ಬೆಂಗಳೂರಿನಲ್ಲಿ ಆಗಲಿಲ್ಲ. ಹೀಗಾಗಿ ತಾವು ಅರಣ್ಯ ಸಚಿವನಾದ ತರುವಾಯ ನೀಲಗಿರಿ ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿದ್ದ 153 ಎಕರೆ ಜಮೀನನ್ನು ಜೂ.2ರಂದು ಮರಳಿ ಅರಣ್ಯ ಇಲಾಖೆಗೆ ಪಡೆದು ಅಲ್ಲಿ ಉದ್ಯಾನ ನಿರ್ಮಿಸಲಾಗುವುದು ಎಂದರು. 8,848 ವನಮಹೋತ್ಸವ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮವನ್ನು ಜಗತ್ತೇ ಎದುರಿಸುತ್ತಿದ್ದು, ಈ ಕಾಲಘಟ್ಟದಲ್ಲಿ ಹಸಿರು ಹೊದಿಕೆಯ ಹೆಚ್ಚಳ, ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆ ಇಲಾಖೆಯ ಜವಾಬ್ದಾರಿಯಾಗಿದ್ದು, ಕಳೆದ 2 ವರ್ಷಗಳಲ್ಲಿ ಸುಮಾರು 8848 ವನಮಹೋತ್ಸವ ನಡೆಸಲಾಗಿದ್ದು, ಅರಣ್ಯ…

Read More

ವಸಂತ ಬಿ ಈಶ್ವರಗೆರೆ.., ಸಂಪಾದಕರು ಶಿವಮೊಗ್ಗ: ಜಿಲ್ಲೆಯ ಸಾಗರ ಹಾಗೂ ಸೊರಬ ಮಾರ್ಗದ ಭದ್ರಾಪುರ-ಹೊಳೆಕೊಪ್ಪ ಮಾರ್ಗದ ರಸ್ತೆ ಮಧ್ಯೆ ಅಕೇಶಿಯ ಮರ ಬಿದ್ದು ಸಂಚಾರ ಬಂದ್ ಆಗಿದೆ. ಮಳೆಗಾಲ ಆರಂಭಕ್ಕೆ ಮುನ್ನವೇ ಬೀಳುವಂತಿರುವ ಅಕೇಶಿಯ ಮರ ಕಡಿತಲೆ ಮಾಡಬೇಕಿದ್ದಂತ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ – ಸೊರಬ ಮಾರ್ಗದ ಭದ್ರಾಪುರ-ಹೊಳೆಕೊಪ್ಪದ ಮಧ್ಯದಲ್ಲಿ ಅಕೇಶಿಯ ಮರಗಳ ಸಾಲಿದೆ. ಕಳೆದ ಒಂದು ವರ್ಷಗಳ ಹಿಂದೆ ರಸ್ತೆಗೆ ಬಾಗಿರುವ, ಕೆಲವು ಒಣಗಿರುವಂತ ಅಕೇಶಿಯ ಮರಗಳನ್ನು ಕಡಿತಲೆ ಮಾಡಿ, ಮುಂದಾಗಲಿರುವಂತ ಅನಾಹುತ ತಪ್ಪಿಸುವಂತೆ ದೂಗೂರು ಗ್ರಾಮ ಪಂಚಾಯ್ತಿ ಪಿಡಿಓ ಪತ್ರ ಬರೆದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಆದರೇ ಇಲ್ಲಿಯವರೆಗೆ ತೆರವನ್ನೇ ಮಾಡಿಲ್ಲ. ರಸ್ತೆಗೆ ಬಿದ್ದ ಮರ, ವಾಹನ ಸಂಚಾರ ಅರ್ಧಗಂಟೆ ಬಂದ್ ಇಂದು ಭದ್ರಾಪುರ-ಹೊಳೆಕೊಪ್ಪ ಮಾರ್ಗದಲ್ಲಿ ಅಕೇಶಿಯ ಮರವೊಂದು ಭಾರೀ ಗಾಳಿ ಸಹಿಯ ಮಳೆಯಿಂದಾಗಿ ರಸ್ತೆಗೆ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಿಲೋಮೀಟರ್…

Read More

ಬೆಂಗಳೂರು: ಪದೇಪದೇ ಮೂರ್ಛೆರೋಗಕ್ಕೆ ತುತ್ತಾಗುತ್ತಿದ್ದ 21 ವರ್ಷದ ಯುವಕನಿಗೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಉದ್ದೇಶಿತ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (ಡಿಬಿಎಸ್) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ ಮತ್ತು ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ. ಗುರುಪ್ರಸಾದ್ ಹೊಸೂರ್ಕರ್ ವೈದ್ಯರ ತಂಡ ಈ ಚಿಕಿತ್ಸೆ ನಡೆಸಿದೆ. ಈ ಕುರಿತು ಮಾತನಾಡಿದ ಡಾ. ರಘುರಾಮ್ ಜಿ, ಯೆಮನ್‌ ಮೂಲದ 21 ವರ್ಷದ ಮೊಹಮದ್ ಎಂಬ ಯುವಕ ಕಳೆದ 12 ವರ್ಷಗಳಿಂದ ಅನಿಯಂತ್ರಿತ ಮೂರ್ಛೆರೋಗದಿಂದ ಬಳಲುತ್ತಿದ್ದನು. ಕೆಲವರಲ್ಲಿ ಮೂರ್ಛೆರೋಗ ಸಾಮಾನ್ಯವಾಗಿದ್ದರೂ, ಈ ಯುವಕನಿಗೆ ಅನಿಯಂತ್ರಿತವಾಗಿ ಮೂರ್ಛೆರೋಗ ಕಾಡುತ್ತಿತ್ತು, ಸಾಕಷ್ಟು ಬಾರಿ ನಡುಕದಿಂದ ತಲೆಸುತ್ತಿ ಬೀಳುವ ಸ್ಥಿತಿಗೆ ತಲುಪಿದ್ದನು. ಈಗಾಗಲೇ ಸಾಕಷ್ಟು ಬಾರಿ ಔಷಧಿ ಪಡೆದುಕೊಂಡು, ಹಲವು ಆಸ್ಪತ್ರೆಗಳಿಗೆ ತೆರಳಿದ್ದರೂ ಆ ಕ್ಷಣಕ್ಕೆ ಮಾತ್ರ ಪರಿಹಾರ ತೊರೆಯುತ್ತಿತ್ತು. ದೀರ್ಘಕಾಲದ ಪರಿಹಾರ ಸಿಗದೇ ಈ ಕಾಯಿಲೆಯಿಂದ ಯುವಕ ಬಳಲುತ್ತಿದ್ದನು. ಈ ಕಾಯಿಲೆಗೆ ಕಾರಣವೂ ಸಹ ತಿಳಿದಿರಲಿಲ್ಲ. ಬಳಿಕ ಫೋರ್ಟಿಸ್‌…

Read More

ಬೆಂಗಳೂರು: “ನೂತನ ಜೈವಿಕ ಇಂಧನ ನೀತಿ”ಯ ಕಾರ್ಯಯೋಜನೆ ರೂಪಿಸುತ್ತಿದ್ದು, ಶೀಘ್ರವೇ ಈ ನೀತಿಯನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್.ಈ ಸುಧೀಂದ್ರ ತಿಳಿಸಿದರು. ಮಂಡಳಿಯ 42 ನೇ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಉದ್ದೇಶಿತ ಜೈವಿಕ ಇಂಧನ ನೀತಿ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಿದರು. ರಾಜ್ಯದಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಜೈವಿಕ ಇಂಧನ ಬಳಕೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಸಂಬಂಧ ನೂತನ ಜೈವಿಕ ಇಂಧನ ನೀತಿಯನ್ನೂ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ನೀತಿಯನ್ನು ಅನುಷ್ಠಾನಗೊಳಿಸುವ ಮೂಲಕ ಜೈವಿಕ ಇಂಧನಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡುವಂತೆ ಮಾಡಲಾಗುವುದು ಎಂದು ಹೇಳಿದರು. ಇದೇ ವೇಳೆ 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಕೃಷ್ಣನ್‌, ಜಾಗತಿಕ ಮಟ್ಟದಲ್ಲಿ ಜೈವಿಕ ಇಂಧನಗಳ ಕುರಿತ ಸ್ಥಿತಿಗತಿ, ಉತ್ಪಾದನೆ, ಪೂರೈಕೆ ಹಾಗೂ ಬೇಡಿಕೆಯ ಕುರಿತು ವಿಷಯ…

Read More

ಸಂಸ್ಕಾರವೆಂದರೇನು ?. ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ. ರಾತ್ರಿಯಲ್ಲಾ ಗಂಡನ ಜೊತೆ ಇದ್ದರೂ ಹಗಲೊತ್ತು ಗ೦ಡ ಕಂಡೊಡನೆ ತಲೆ ಮೇಲೆ ಸೆರಗಾಕಿಕೊಳ್ಳೋದು ಸಂಸ್ಕಾರ. ಎಷ್ಟೇ ಆಧುನಿಕತೆ ಬಂದರೂ ಹಣೆಯ ಮೇಲಿನ ಬೊಟ್ಟು ಸಂಸ್ಕಾರ.! ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ ಭಕ್ತಿ ಸಂಸ್ಕಾರ.! ಯಜಮಾನಿಕೆ ದೊಡ್ಡಸ್ತಿಕೆಯಲ್ಲಿದ್ದರೂ ಚಿಕ್ಕವರಿಗಾಗಿ ತೋರಿಸುವ ಪ್ರೀತಿ ವಿಶ್ವಾಸ ಕಳಕಳಿ ನಿಜವಾದ ಸಂಸ್ಕಾರ. ನಮ್ಮ ನಡವಳಿಕೆಯಲ್ಲಿರುವ ನಯ ವಿನಯ ನಾಜೂಕು ನಿಜವಾದ ಸಂಸ್ಕಾರ.! ಓದು ಬರಹ ಉದ್ಯೋಗದ ಹೊರತಾಗಿಯೂ ಹೋರುವ ಆ  ಜವಾಬ್ದಾರಿ ಸಂಸ್ಕಾರ.! ಖಾಯಿಲೆ ಬಿದ್ದ ತಂದೆ ತಾಯಿಯ ಮಗುವಿನ ಹಾಗೆ ನೋಡಿಕೊಳ್ಳುವುದು ಸಂಸ್ಕಾರ.  ಸದಾ ಕುಟುಂಬದ ಕಣ್ಣಾದ ತಾಯಿಯ ಬೇಕು ಬೇಡ ಕೇಳಿ ಈಡೇರಿಸುವುದು ಸಂಸ್ಕಾರ.  ಮುದ್ದಿನ ಮಗ ಮಗಳು ತಪ್ಪು ಮಾಡಿದಾಗಮಾಡಿದಾಗ ಮ್ರುದು ಮಾತಿನಿಂದ ದಾರಿಗೆ ತರೋದು ಸಂಸ್ಕಾರ.!  ಅಡ್ಡ ದಾರಿ ತುಳಿತಾ ಇರೋ ಮಗಳಿಗೆ ಮಗನಿಗೆ ನಲ್ಮೆಯ ಮಾತುಗಳಿಂದ ಮನವೊಲಿಸುವುದು ಸಂಸ್ಕಾರ !.…

Read More

ಬೆಂಗಳೂರು: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕ ಕಂ ನಿರ್ವಾಹಕರ ಪುತ್ರ IFS ಪಾಸ್ ಮಾಡಿ, ಭಾರತದ ಅರಣ್ಯ ಸೇವೆಗೆ ಆಯ್ಕೆಯಾಗಿದ್ದರು. ಈ ವಿಷಯ ತಿಳಿದು ಬೆಂಗಳೂರಿನ ಕೇಂದ್ರ ಕಚೇರಿಗೆ ಸಾರಿಗೆ ನೌಕರ ಹಾಗೂ ಪುತ್ರನನ್ನು ಕರೆಸಿದಂತ ಸಚಿವ ರಾಮಲಿಂಗಾರೆಡ್ಡಿ ಸನ್ಮಾನಿಸಿ, ಗೌರವಿಸಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದ ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸಪ್ಪ, ಸಂಖ್ಯೆ 189 ಮತ್ತು ತಾಯಿ ನಾಗರತ್ನ ಅವರ ಮಗನಾದ ಆನಂದಕುಮಾರ ಅವರು ಭಾರತ ಸರ್ಕಾರದ ಕೇಂದ್ರ ಲೋಕಸೇವಾ ಆಯೋಗದ ಭಾರತೀಯ ಅರಣ್ಯ ಸೇವೆ (ಐ.ಎಫ್.ಎಸ್.,) ಪರೀಕ್ಷೆಯಲ್ಲಿ 41 ನೇ ರ‍್ಯಾಂಕ್ ಪಡೆದು ಭಾರತದ ಅರಣ್ಯ ಸೇವೆಗೆ ಆಯ್ಕೆಯಾಗಿರುತ್ತಾರೆ. ಅವರ ಈ ಸಾಧನೆಯು ಕುಟುಂಬಕ್ಕೂ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೂ ಕೀರ್ತಿ ತಂದಿದ್ದರು. ಈ ವಿಷಯ ತಿಳಿದಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಅಧ್ಯಕ್ಷರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ…

Read More

ಶಿವಮೊಗ್ಗ : ಜಿಲ್ಲೆಯ ಸಾಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿಯೊಬ್ಬಳು ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸೊರಬ ತಾಲ್ಲೂಕಿನ ಆಯಿಷಾ ಅವರು ತವರು ಮನೆ ಸಾಗರದ ಕಾರಣ ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. ಇಂದು ಡಾ.ಪ್ರತಿಮಾ ಅವರು ಸಿಜೇರಿಯನ್ ಮೂಲಕ ಆಯಿಷಾಗೆ ಹೆರಿಗೆ ಮಾಡಿಸಿದ್ದಾರೆ. ಮೂವರು ಮಕ್ಕಳಿಗೆ ಆಯಿಷಾ ಜನ್ಮ ನೀಡಿದ್ದಾರೆ. ಒಂದು ಗಂಡು, ಇಬ್ಬರು ಹೆಣ್ಣು ಮಕ್ಕಳಿಗೆ ಸಾಗರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ, ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ಆಯಿಷಾ ಅವರಿಗೆ ಎರಡನೇ ಹೆರಿಗೆ ಇದಾಗಿದ್ದು, ಮೊದಲ ಹೆರಿಗೆಯಲ್ಲಿ ಒಂದು ಮಗು ಜನಿಸಿತ್ತು. ಈ ಹೆರಿಗೆ ವೇಳೆಯಲ್ಲಿ ಅನೇಸ್ತೇಶಿಯಾವನ್ನು ಡಾ.ಸಂಗಮ್ ನೀಡಿದರೇ ಟೆಕ್ನಿಷಿಯನ್ ರಾಕೇಶ್ ನೀಡಿ ನೆರವಾಗಿದ್ದಾರೆ. ಡಾ.ಪ್ರತಿಮಾ ಅವರಿಗೆ ಸಿಜೇರಿಯನ್ ವೇಳೆ ಶುಶ್ರೂಷಕಿಯರಾದಂತ ಅನಿತಾ ಮತ್ತು ಸುವರ್ಣ ಸಾಥ್ ನೀಡಿದ್ದಾರೆ. ಅಟೆಂಡರ್ ಚಂದ್ರು ಇದ್ದರು.…

Read More

ನಾಳೆ ಅಮಾವಾಸ್ಯೆ, ಇದು ಕೃತಿಗೈ ಹಬ್ಬದೊಂದಿಗೆ ಸೇರಿಕೊಳ್ಳುತ್ತದೆ. ಈ ದಿನದಂದು, ಈ ಶಕ್ತಿಶಾಲಿ 1-ಸಾಲಿನ ಮಂತ್ರವನ್ನು ಪಠಿಸುವವರು ಜೀವನದಲ್ಲಿ ವಿಜಯಶಾಲಿಯಾಗುವುದನ್ನು ಮುಂದುವರಿಸಬಹುದು. ಅಮವಾಸ್ಯೆ ಕೃತಿಕೈ ಮುರುಗನ್ ಪೂಜೆ  ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ…

Read More

ಬೆಂಗಳೂರು: ಕರ್ನಾಟಕದ ಶಾಸಕಾಂಗ ಅಧಿಕಾರದ ಸ್ಥಾನಕ್ಕೆ ಸಾರ್ವಜನಿಕರನ್ನು ಆಹ್ವಾನಿಸುವ ಮೊದಲ ಅನುಭವವಾದ ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸಗಳಿಗೆ ಭಾನುವಾರ ಚಾಲನೆ ನೀಡಲಾಯಿತು. ಪ್ರವಾಸೋದ್ಯಮ ಇಲಾಖೆ (DoT) ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (Karnataka State Tourism Development Corporation-KSTDC), ಸ್ಪೀಕರ್ ಕಚೇರಿ-ಕರ್ನಾಟಕ ವಿಧಾನಸಭೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (Department of Personnel and Administrative Reforms-DPAR) ಮತ್ತು ವಿಧಾನಸೌಧ ಭದ್ರತಾ ವಿಭಾಗದ ಸಮನ್ವಯದೊಂದಿಗೆ ಈ ಉಪಕ್ರಮವು ಜೂನ್ 1 ರಿಂದ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರವಾಸಗಳನ್ನು ಪ್ರತಿ ತಿಂಗಳ 2 ನೇ ಮತ್ತು 4 ನೇ ಶನಿವಾರಗಳು ಮತ್ತು ಎಲ್ಲಾ ಭಾನುವಾರಗಳಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ (KSTDC ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಸಮಯದ ಸ್ಲಾಟ್‌ಗಳ ಪ್ರಕಾರ) ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ 50 ರೂ. ಪರಿಚಯಾತ್ಮಕ ಟಿಕೆಟ್ ಬೆಲೆಯನ್ನು ನಿಗದಿಪಡಿಸಲಾಗಿದೆ, ಆದರೆ 15…

Read More

ಬೆಂಗಳೂರು: ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕರು, ಗ್ರೇಡ್-2 ವೃಂದದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಶಾಲಾ ಶಿಕ್ಷಣ ಇಲಾಖೆಯ ನಾಲ್ಕೂ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರುಗಳ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಿ ಸಲ್ಲಿಸಲು ಕೋರಿರುತ್ತಾರೆ ಎಂದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ರವರ ಜೇಷ್ಠತಾ ಪಟ್ಟಿಯನ್ನು ವಿಭಾಗವಾರು ಸಿದ್ಧಪಡಿಸಲಾಗುತ್ತಿದೆ. ಆದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೋರಿಕೆಯಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ಸಂಬಂಧ ಸ್ನಾತಕೋತ್ತರ ಪದವಿ ಪಡೆದಿರುವ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-2 ರವರ ರಾಜ್ಯ ಮಟ್ಟದ ಒಂದೇ ಜೇಷ್ಠತಾ…

Read More