Subscribe to Updates
Get the latest creative news from FooBar about art, design and business.
Author: kannadanewsnow09
ಮೈಸೂರು: ಪ್ರಯಾಣಿಕರ ಅನುಕೂಲತೆ ಮತ್ತು ಸ್ಮಾರ್ಟ್ ನಿಲ್ದಾಣ ಯೋಜನೆಗೆ ಬೆಂಬಲ ನೀಡುವ ಉದ್ದೇಶದಿಂದ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ನಕ್ಷೆ ಮತ್ತು ಸಂಚರಣೆ ವ್ಯವಸ್ಥೆಯಾದ ‘ಮಾರ್ಗದರ್ಶಕ್’ ಅನ್ನು ಮೈಸೂರು ರೈಲು ನಿಲ್ದಾಣದಲ್ಲಿ ಪ್ರಾರಂಭಿಸಿದೆ. ಆಧುನಿಕ ಹಾಗೂ ಬಳಕೆದಾರ ಸ್ನೇಹಿ ಈ ವ್ಯವಸ್ಥೆಯನ್ನು ಇಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಮುದಿತ್ ಮಿತ್ತಲ್ ಅವರಿಂದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ‘ಮಾರ್ಗದರ್ಶಕ್’ ಮೂಲಕ ಪ್ರಯಾಣಿಕರು ಗೂಗಲ್ ಮ್ಯಾಪ್ ಬಳಸುವ ರೀತಿಯಲ್ಲಿ ನಿಲ್ದಾಣದ ಒಳಾಂಗಣವನ್ನು ಸುಲಭವಾಗಿ ಸಂಚರಣೆ ಮಾಡಬಹುದು. ‘ಮಾರ್ಗದರ್ಶಕ್’ದ ಪ್ರಮುಖ ವೈಶಿಷ್ಟ್ಯಗಳು: * 24/7 ಸ್ವಯಂ ಸೇವೆ: ಮಾಹಿತಿಗಾಗಿ ಯಾರನ್ನೂ ಕೇಳುವ ಅಗತ್ಯವಿಲ್ಲ – ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಸಂಚರಣೆ ಮಾಡಬಹುದು. * ತಿರುವು ಸಂಚರಣೆ: ನಿಮ್ಮ ಸ್ಥಳದಿಂದ ಪ್ಲಾಟ್‌ಫಾರ್ಮುಗಳು, ಮೆಟ್ಟಿಲು ಸೇವೆಗಳು, ಕುಡಿಯುವ ನೀರಿನ ಕೇಂದ್ರಗಳು, ನಿರೀಕ್ಷಣಾ ಕೊಠಡಿಗಳು, ಆಹಾರ ಮಳಿಗೆಗಳು ಮುಂತಾದ ಸ್ಥಳಗಳ ದಿಕ್ಕುಗಳನ್ನು ತಿಳಿಯಬಹುದು. * ಬಹುಭಾಷೆ: ನಿಮ್ಮ…
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ದಿನಾಂಕ: 27.06.2025 ರ ಶುಕ್ರವಾರದಂದು 110/33/11 ಕೆವಿ ಸಾಗರ ವಿದ್ಯುತ್ ವಿತರಣಾ’ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ನಾಳೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಅಂತ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಜೂನ್.27ರ ನಾಳೆ ಸಾಗರ ತಾಲ್ಲೂಕಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಸಾಗರ / ಪಟ್ಟಣ ವ್ಯಾಪ್ತಿಯ ಎಫ್- ಸಾಗರ ಟೌನ್, ಎಫ್-7 ಮಂಗಳಬೀಸು ಇಂಡಸ್ಟ್ರಿಯಲ್ ಏರಿಯಾ, ಎಫ್-8 ಮಾರಿಕಾಂಬ, ಎಫ್-15 ಆರ್.ಎಂ.ಸಿ, ಎಫ್-11 ಎಸ್.ಎನ್.ನಗರ ಮತ್ತು ಗ್ರಾಮೀಣ ವ್ಯಾಪ್ತಿಯ ಏಫ್-2 ಮಾಲೆ, ಎಫ್-3 ಹೆಗ್ಗೋಡು, ಎಫ್-4 ಆವಿನಹಳ್ಳಿ, ಎಫ್-5 ವರದಹಳ್ಳಿ, ಎಫ್-6 ಬೊಮ್ಮತ್ತಿ, ಎಫ್-9 ಮಾಸೂರು ವ್ಯಾಪ್ತಿಯಲ್ಲಿ ಪವರ್ ಕಟ್ ಆಗಲಿದೆ. ಇನ್ನೂ ಎಫ್-14 ಹಿರೇನೆಲ್ಲೂರು ಹಾಗೂ ಎಫ್-16 ಲಿಂಗದಹಳ್ಳಿ ಮಾರ್ಗದದಿಂದ ವಿದ್ಯುತ್ ಸಂಪರ್ಕ ಪಡೆದಿರುವ ಸಾಗರ ಪಟ್ಟಣ, ಆವಿನಹಳ್ಳಿ, ಹೆಗ್ಗೋಡು, ಭೀಮನಕೋಣೆ, ಯಡಜಿಗಳಮನೆ, ಕಲ್ಪನೆ, ಮಾಲೆ, ಭೀಮನೇರಿ,…
ಬೆಂಗಳೂರು: ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನುಮತಿ ಕಡ್ಡಾಯಗೊಳಿಸಲಾಗಿದೆ. ಬಿಬಿಎಂಪಿ ನೀಡುವಂತ ನಕ್ಷೆಯ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿದರೇ ನೀರು, ವಿದ್ಯುತ್ ಸಂಪರ್ಕ ನೀಡುವುದಿಲ್ಲ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಟ್ಟಡ ನಕ್ಷೆ ಮಂಜೂರು, ಸ್ವಾಧೀನ ಪ್ರಮಾಣಪತ್ರ ಇಲ್ಲದೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಹೀಗಾಗಿ, ಅನುಮತಿ ಇಲ್ಲದೆ ಜನರು ಮನೆ ಕಟ್ಟಬಾರದು ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1938206611203612957 https://kannadanewsnow.com/kannada/while-teaching-the-school-teacher-died-of-a-heart-attack/ https://kannadanewsnow.com/kannada/these-7-benefits-will-come-if-pf-is-deducted-from-your-salary-every-month/
ಬಾಗಲಕೋಟೆ: ರಾಜ್ಯದಲ್ಲಿ ದಿನೇ ದಿನ ಹದಿ ಹರೆಯದವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವಂತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಇಂದು ಪಾಠ ಮಾಡುತ್ತಿದ್ದಾಗಲೇ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವಂತ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ತುಂಗಳ ಹೈಸ್ಕೂಲಿನಲ್ಲಿ ಇಂದು ಪಾಠ ಮಾಡುತ್ತಿದ್ದಂತ ಸಂದರ್ಭದಲ್ಲಿ ಕನ್ನಡ ಶಿಕ್ಷಕ ಗುರುಪಾದ ಹಿಬ್ಬರಗಿ(49) ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಇನ್ನೇನು ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವ ವೇಳೆಗೆ ಹೃದಯಾಘಾತದಿಂದ ಕನ್ನಡ ಶಿಕ್ಷಕ ಗುರುಪಾದ ಹಿಪ್ಪರಗಿ ಅವರು ಸಾವನ್ನಪ್ಪಿದ್ದಾರೆ. ಶಿಕ್ಷಕರ ಸಾವಿನಿಂದಾಗಿ ವಿದ್ಯಾರ್ಥಿಗಳು ಕಣ್ಣೀರಾಗಿದ್ದಾರೆ. ಅಲ್ಲದೇ ಸಹ ಶಿಕ್ಷಕರು ಕಣ್ಣೀರಾಗಿದ್ದಾರೆ. ಇಡೀ ಶಾಲೆಯು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ. https://kannadanewsnow.com/kannada/former-mp-ananth-kumar-hegde-gets-big-relief-from-the-high-court/ https://kannadanewsnow.com/kannada/purushottam-bilimale-demands-hearing-in-kannada-in-karnataka-high-court/
ಬೆಂಗಳೂರು: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಕಾರು ಓವರ್ ಟೇಕ್ ವೇಳೆ ಗಲಾಟೆ ಪ್ರಕರಣದಲ್ಲಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಕಾರು ಓವರ್ ಟೇಕ್ ವೇಳೆ ಗಲಾಟೆ ಪ್ರಕರಣ ಸಂಬಂಧ ಕೇಸ್ ರದ್ದು ಕೋರಿ ಹೈಕೋರ್ಟ್ ಗೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿದ್ದಂತ ನ್ಯಾಯಪೀಠವು ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬುದಾಗಿ ಮಧ್ಯಂತರ ಆದೇಶ ನೀಡಿದೆ. ಈ ಮೂಲಕ ಅನಂತ್ ಕುಮಾರ್ ಹೆಗೆಡೆ ಬಿಗ್ ರಿಲೀಫ್ ನೀಡಿದೆ. https://kannadanewsnow.com/kannada/farmers-cooperation-is-essential-for-the-conservation-of-village-forests-sagar-dfo-mohan-kumar/ https://kannadanewsnow.com/kannada/purushottam-bilimale-demands-hearing-in-kannada-in-karnataka-high-court/
ಶಿವಮೊಗ್ಗ: ಗ್ರಾಮ ಅರಣ್ಯಗಳ ಸಂರಕ್ಷಣೆಗೆ ರೈತರ ಸಹಕಾರ ಅತ್ಯಗತ್ಯ. ಇಲ್ಲವಾದಲ್ಲಿ ಕಾಡುಗಳನ್ನು ಉಳಿಸುವುದು ಕಷ್ಟವಾಗುತ್ತದೆ ಎಂಬುದಾಗಿ ಸಾಗರ ತಾಲ್ಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡು ಸಂಪೆಕೈ ಬೆಟ್ಟದಲ್ಲಿ ನಡೆದಂತ ಬೆಟ್ಟ, ಕಾನು ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಜಾಗೃತಿ ಅಭಿಯಾನ, ವೃಕ್ಷರೋಪಣ ಪ್ರಕೃತಿ ವಂದನ ಸಮಾಲೋಚನಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, 2010ರಲ್ಲಿ ಅರಣ್ಯ ಇಲಾಖೆ ಜಾರಿಗೆ ತಂದಂತ ಪಶ್ಚಿಮಘಟ್ಟ ಕಾರ್ಯಪಡೆಯ ಅರಣ್ಯ ಕಾನು ಅರಣ್ಯ ಯೋಜನೆಯಿಂದಾಗಿ ಸುಮಾರು 20,000 ಎಕರೆಯಷ್ಟು ಅರಣ್ಯ ಸಂರಕ್ಷಣೆ ಸಾಧ್ಯವಾಯಿತು ಎಂದರು. ಪರಿಸರ ಉಳಿದಾಗ ಮಾತ್ರವೇ ಮನುಷ್ಯನ ಬದುಕು ಹಸನಾಗುತ್ತದೆ ಎಂಬುದನ್ನು ಯಾರು ಮರೆಯಬಾರದು. ಕಾನು ಅರಣ್ಯ ಉಳಿಸುವಂತ ಅರಣ್ಯ ಇಲಾಖೆಯ ಸಂಕಲ್ಪಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ಆ ಮೂಲಕ ಪರಿಸರ ಉಳಿಸೋದಕ್ಕೆ ಮುಂದಾಗಬೇಕು. ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಕೂಡ ಎಂದು ಹೇಳಿದರು. ಇನ್ನೂ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ…
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಭಾರತ vs ಇಂಗ್ಲೆಂಡ್ 2ನೇ ಟೆಸ್ಟ್ ನಿಂದ ಜಸ್ಪ್ರೀತ್ ಬುಮ್ರಾ ಹೊರಬಿದ್ದಿದ್ದಾರೆ. ಎಡ್ಜ್‌ಬಾಸ್ಟನ್‌ಗೆ ಮುನ್ನ ಭಾರತ ತಂಡ ಉತ್ತರಕ್ಕಾಗಿ ಪರದಾಡುತ್ತಿದೆ. ಭಾರತದ ವೇಗದ ಬೌಲರ್ ಮತ್ತು ಈ ಸರಣಿಯಲ್ಲಿ ಅವರ ಅತ್ಯಂತ ಅಮೂಲ್ಯ ಆಟಗಾರ ಜಸ್ಪ್ರೀತ್ ಬುಮ್ರಾ, ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. theindianexpree.com ವರದಿಯ ಪ್ರಕಾರ, ಜುಲೈ 10 ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಮರಳುವ ನಿರೀಕ್ಷೆಯಿದೆ. ಗೆಲ್ಲಲೇಬೇಕಾಗಿದ್ದ ಹೆಡಿಂಗ್ಲಿ ಟೆಸ್ಟ್‌ನಲ್ಲಿ ಸೋತ ನಂತರ, ಮುಂದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಎಂವಿಪಿ ಇಲ್ಲದಿರುವ ಸಾಧ್ಯತೆ ಇದೆ. ಲಾರ್ಡ್ಸ್‌ನಲ್ಲಿ ಕೆಲಸದ ಹೊರೆ ಅಥವಾ ಕೆಲಸದ ಹೊರೆ ನಿರ್ವಹಣೆಯ ಸಮಸ್ಯೆ ಇರಬಹುದು; ಹೆಡಿಂಗ್ಲಿಯಲ್ಲಿ 44 ಓವರ್‌ಗಳನ್ನು ಬೌಲಿಂಗ್ ಮಾಡಿದ ಜಸ್ಪ್ರೀತ್ ಬುಮ್ರಾ, ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ಗೆ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಜುಲೈ 10 ರಂದು ಲಂಡನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ಗೆ ಅವರು ಮರಳುವ ನಿರೀಕ್ಷೆಯಿದೆ. ಬರ್ಮಿಂಗ್‌ಹ್ಯಾಮ್…
ಬೆಂಗಳೂರು: ಕೆಲವೇ ಗೌರವಾನ್ವಿತ ನ್ಯಾಯಾಧೀಶರುಗಳ ವಿಶೇಷ ಆಸಕ್ತಿಯಿಂದ ಕನ್ನಡ ಭಾಷೆ ನ್ಯಾಯಾಲಯ ವ್ಯವಸ್ಥೆಯಲ್ಲಿ ಉಸಿರಾಡುತ್ತಿದ್ದು, ಕಕ್ಷಿದಾರರು, ನ್ಯಾಯವಾದಿಗಳು ಕನ್ನಡದವರೇ ಆಗಿದ್ದರೂ ಸಹ ವಿಚಾರಣೆಗಳು, ತೀರ್ಪುಗಳು ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಇರುವುದು ವ್ಯವಸ್ಥೆಯ ಅಣಕವಾಗಿದ್ದು, ರಾಜ್ಯ ಉಚ್ಚ ನ್ಯಾಯಾಲಯವು ಕನ್ನಡದಲ್ಲಿ ವಿಚಾರಣ ವ್ಯವಸ್ಥೆಯನ್ನು ಜಾರಿಯಲ್ಲಿಡುವಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. ಈ ಕುರಿತಂತೆ ರಾಜ್ಯ ಉಚ್ಚ ನ್ಯಾಯಾಲಯ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಕನ್ನಡದಲ್ಲಿ ನ್ಯಾಯದಾನವನ್ನು ಅಪೇಕ್ಷಿಸುವ ಅಸಂಖ್ಯ ಕನ್ನಡಿಗರ ವೇದನೆಯನ್ನು ಶಮನಗೊಳಿಸಬೇಕಾದಲ್ಲಿ ಮಾನ್ಯ ನ್ಯಾಯಾಲಯವು ಹೆಚ್ಚಿನ ಮುತುವರ್ಜಿಯನ್ನು ಅನುಸರಿಸಬೇಕಾದ ಅವಶ್ಯಕತೆ ಇದೆ. ಕನಿಷ್ಟ ಪಕ್ಷ ಕನ್ನಡದಲ್ಲಿ ಪ್ರಕರಣವನ್ನು ದಾಖಲಿಸಲು ಅನುವು ಮಾಡಿಕೊಟ್ಟಲ್ಲಿ ನ್ಯಾಯಾಲಯ ವ್ಯವಸ್ಥೆಯ ಬಗ್ಗೆ ಜನ ಸಾಮಾನ್ಯರಲ್ಲಿ ಗೌರವ ಹೆಚ್ಚುತ್ತದೆ. ವಿಚಾರಣೆಗಳು, ತೀರ್ಪುಗಳು ಕನ್ನಡ ಭಾಷೆಯಲ್ಲಿ ಬರುವಂತಾದಲ್ಲಿ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಭರವಸೆ ಮೂಡುತ್ತದೆ ಎಂದು ತಿಳಿಸಿದ್ದಾರೆ. ಹೊರನಾಡು ಗಡಿನಾಡಿನ ಕನ್ನಡಿಗರ ಪರವಾದ ಆದೇಶಗಳನ್ನು ಸಮರ್ಪಕವಾಗಿ…
ಬೆಂಗಳೂರು: ಏಕಕಾಲದಲ್ಲೇ ರೊಬೋಟ್ ಸಹಾಯದಿಂದ ದಾನಿಗಳಿಂದ ಕಿಡ್ನಿ ಪಡೆದು, ರೋಗಿಗೆ ಕಿಡ್ನಿ ಕಸಿ ಮಾಡುವ TREAT (ಟೋಟಲ್ ರೋಬೋಟ್ ಎನೇಬಲ್ಡ್ ಅಂಡ್ ಅಸ್ಸಿಸ್ಟಡ್ ಟ್ರಾನ್ಸ್‌ಪ್ಲಾಂಟ್) ಎಂಬ ಅಪರೂಪದ ಟೆಕ್ನಾಲಜಿಯನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಪರಿಚಯಿಸಿದ್ದು, ದೇಶದಲ್ಲೇ ಮೊದಲ ಪ್ರಯತ್ನ ಇದಾಗಿದೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆ ಮೂತ್ರಪಿಂಡ ವಿಜ್ಞಾನದ ಪ್ರಧಾನ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ, ಟ್ರೀಟ್ ಎಂಬ ನೂತನ ಟೆಕ್ನಾಲಜಿ ಕಿಡ್ನಿ ಕಸಿಯನ್ನು ಅತ್ಯಂತ ಸುಲಭಗೊಳಿಸಿದೆ. ರೋಬೋಟ್-ಸಂಯೋಜಿತ ಮೂತ್ರಪಿಂಡದ ಕಸಿ ನಡೆಸುವ ಈ ಅತ್ಯಾಧುನಿಕ ಉಪಕ್ರಮವು ಏಕಕಾಲದಲ್ಲೇ ದಾನಿ ಮತ್ತು ಸ್ವೀಕರಿಸುವವರಿಗೆ ಎರಡು ರೋಬಾಟ್ ನೆರವಿನಿಂದ ಕಿಡ್ನಿ ತೆಗೆದು , ಕಿಡ್ನಿ ಕಸಿ ಮಾಡುವ ಶಸ್ತ್ರಚಿಕಿತ್ಸೆಯನ್ನು ನಿಖರವಾಗಿ ನಡೆಸಲಿದ್ದು, ಸಂಪೂರ್ಣ ಯಶಸ್ಸು ನೀಡಲಿದೆ. ಈ ವಿನೂತನ ಪ್ರಯತ್ನದಿಂದ ಚೇತರಿಕೆಯ ಸಮಯವೂ ಕಡಿಮೆ ಆಗಲಿದ್ದು, ಶಸ್ತ್ರಚಿಕಿತ್ಸೆ ಅತ್ಯಂತ ನಿಖರವಾಗಿರಲಿದೆ ಎಂದು ಹೇಳಿದರು. ಈ ಟೆಕ್ನಾಲಜಿಯು ದಾನಿಗಳು ಕೂಡ ಶೀಘ್ರವೇ ಚೇತರಿಸಿಕೊಳ್ಳುವಂತೆ ಸಹಾಯಕಾರಿಯಾಗಲಿದೆ. ನಮ್ಮ ದೇಶದಲ್ಲಿ ಮಹಿಳೆಯರೇ…
ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಹೊಸ ಇತಿಹಾಸ ಬರೆದಿದೆ. ಅದೇ ಸ್ಪೇಸ್-ಎಕ್ಸ್ ನ ಫಾಲ್ಕನ್ 9 ರಾಕೆಟ್ ಉಡಾವಣೆ ಯಶಸ್ವಿಯಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಭಾರತೀಯ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನ ಯಾತ್ರಿಕರು ತಲುಪಿದ್ದಾರೆ. ಈ ಮೂಲಕ ಶುಭಾಂಶು ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. https://twitter.com/ANI/status/1938185342143668348 ನಿನ್ನೆ ಪ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಶುಭಾಂಶು ಶುಕ್ಲಾ, ಪೋಲೆಂಡ್ ನ ಸ್ಲವೋಜ್ ಉಝ್ ನಾಸ್ಕಿ, ಅಮೇರಿಕಾದ ಪೆಗ್ಗಿ ವಿಟ್ಸನ್, ಹಂಗೇರಿಯಾದ ಟಿಬರ್ ಸೇರಿದಂತೆ ನಾಲ್ವರು ಗಗನ ಯಾತ್ರಿಗಳನ್ನು ಹೊತ್ತ ಸ್ಪೆಸ್-ಎಕ್ಸ್ ಫಾಲ್ಕನ್ 9 ರಾಕೆಟ್ ಉಡಾವಣೆ ಮಾಡಲಾಗಿತ್ತು. ಇದೀಗ ಫಾಲ್ಕನ್ 9 ರಾಕೆಟ್ ನಲ್ಲಿದ್ದಂತ ನಾಲ್ವರು ಗಗನ ಯಾತ್ರಿಗಳು ಬಾಹ್ಯಾಕಾಶ ಕೇಂದ್ರವನ್ನು ತಲುಪಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಯಶಸ್ವಿಯಾಗಿ ತಲುಪಿದ್ದಾರೆ. ಹೀಗಾಗಿ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಂತೆ ಆಗಿದೆ. https://twitter.com/ANI/status/1938185478043509173 ಒಟ್ಟಾರೆಯಾಗಿ ಆಕ್ಸಿಯಮ್…