Author: kannadanewsnow09

ಮೈಸೂರು: ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನು ರೀತ್ಯ ತನಿಖೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು. ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಕುಮಾರಸ್ವಾಮಿ ಅವರು ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿರುವ ಕುರಿತಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸ ನಂಬಿಕೆ ಇದೆ. ಅವರು ಕಾನೂನು ರೀತ್ಯಾ ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದರು. ಬಿಜೆಪಿಯವರು ಯಾವತ್ತೂ ಸಿಬಿಐಗೆ ಒಂದು ಪ್ರಕರಣವಾದರೂ ಕೊಟ್ಟಿದ್ದಾರಾ? ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಡಿ.ಕೆ. ರವಿ ಪ್ರಕರಣ, ಲಾಟರಿ ಪ್ರಕರಣ, ಸಚಿವರಾದ ಕೆ.ಜೆ. ಜಾರ್ಜ್‌ ಅವರ ಮೇಲಿನ ಆರೋಪ, ಪರೇಶ್‌ ಮೇಸ್ತ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಯಿತು. ಈ ಪ್ರಕರಣಗಳಲ್ಲಿ ಯಾರಿಗಾದರೂ ಶಿಕ್ಷೆಯಾಗಿದೆಯೇ ಎಂದು ಪ್ರಶ್ನಿಸಿದರು. ಹಿಂದೆ ಬಿಜೆಪಿಯವರೇ ಸಿಬಿಐ ಯನ್ನು ಕರಪ್ಷನ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್ ಎಂದು ಬಣ್ಣಿಸಿದ್ದಾರೆ. ದೇವೇಗೌಡರು…

Read More

ಬೆಂಗಳೂರು: ನಗರದಲ್ಲಿ ಮತ್ತೆ ಮಳೆ ಆರ್ಭಡಿಸಿದೆ. ಬೆಂಗಳೂರಲ್ಲಿ ವರುಣ ಆರ್ಭಟಿಸುತ್ತಿದ್ದು, ನಗರದ ಹಲವಡೆ ಭಾರೀ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ ಟ್ರಾಫಿಕ್ ಜಾಮ್ ಕೂಡ ಉಂಟಾಗಿ, ವಾಹನ ಸವಾರರು ಪರದಾಡುವಂತೆ ಆಗಿದೆ. ಬೆಂಗಳೂರಿನ ಹಲವೆಡೆ ಮತ್ತೆ ಮಳೆ ಆರಂಭಗೊಂಡಿದೆ. ನಿನ್ನೆ ಸೇರಿದಂತೆ ಕೆಲ ದಿನಗಳ ಹಿಂದಿನಿಂದ ಸುರಿಯುತ್ತಿರುವಂತ ಮಳೆಯಿಂದಾಗಿ ಅವಾಂತರವೇ ಉಂಟಾಗಿತ್ತು. ಮುಂದೆ ಹೀಗೆ ಅವಾಂತರವಾದಾಗ ಸೂಕ್ತ ರೀತಿಯಲ್ಲಿ ಕಾರ್ಯಪ್ರವೃತ್ತಿಯಾಗಲು ವಲಯವಾರು ಕಂಟ್ರೋಲ್ ರೂಮನ್ನೂ ಬಿಬಿಎಂಪಿಯಿಂದ ತೆರೆಯಲಾಗಿದೆ. ಇದರ ನಡುವೆ ಇಂದು ಕೂಡ ಮಳೆ ಮುಂದುವರೆದಿದೆ. ಚಿಕ್ಕಬಿದರಕಲ್ಲು ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ. ಮಳೆಯ ಆರ್ಭಟದಿಂದಾಗಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ವಾಹನಗಳ ಸಂಚಾರ ಮಂದಗತಿಯಲ್ಲಿ ಸಾಗುವಂತೆ ಆಗಿದೆ. 8ನೇ ಮೈಲಿಯ ನವಯುಗ ಟೋಲ್ ನಿಂದ ಮಾದಾವರದವರೆಗೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಭಾರೀ ಮಳೆಯಾಗುತ್ತಿದ್ದು, ಜನರು ವರುಣನ ಆರ್ಭಟದಿಂದ ತತ್ತರಿಸಿ ಹೋಗುವಂತೆ ಆಗಿದೆ. https://kannadanewsnow.com/kannada/rape-case-against-mp-prajwal-sit-conducts-panchnama-at-hd-revannas-residence/ https://kannadanewsnow.com/kannada/man-killed-for-campaigning-for-congress-in-kalaburagi-over-political-rivalry/

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಇಂದು ಎಸ್ಐಟಿ ಅಧಿಕಾರಿಗಳಿಂದ ಶಾಸಕ ಹೆಚ್.ಡಿ ರೇವಣ್ಣ ನಿವಾಸದಲ್ಲಿ ಪಂಚನಾಮೆಯನ್ನು ನಡೆಸಲಾಗುತ್ತಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಈಗಾಗಲೇ ಹೊಳೆನರಸೀಪುರದಲ್ಲಿದ್ದಂತ ಶಾಸಕ ಹೆಚ್.ಡಿ ರೇವಣ್ಣ ಅವರ ನಿವಾಸದಲ್ಲಿ ಸಂತ್ರಸ್ತೆ ಮಹಿಳೆಯೊಂದಿಗೆ ತೆರಳಿ ಪಂಚನಾಮೆಯನ್ನು ನಡೆಸಿದ್ದರು. ಇಂದು ಎಸ್ಐಟಿ ಅಧಿಕಾರಿಗಳು ಈ ಪ್ರಕ್ರಿಯೆ ಮುಂದುವರೆಸಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ನಿವಾಸಕ್ಕೆ ಎರಡು ಕಾರುಗಳಲ್ಲಿ ಎಸ್ಐಟಿ ಅಧಿಕಾರಿಗಳು ಆಗಮಿಸಿದ್ದಾರೆ. ಬಸವನಗುಡಿಯಲ್ಲಿರುವಂತ ಶಾಸಕ ಹೆಚ್.ಡಿ ರೇವಣ್ಣ ಅವರ ನಿವಾಸಕ್ಕೆ 2 ವಾಹನಗಳಲ್ಲಿ 10ಕ್ಕೂ ಹೆಚ್ಚು ಎಸ್ಐಟಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಎಸ್ಐಟಿ ಅಧಿಕಾರಿಗಳು ಹೆಚ್.ಡಿ ರೇವಣ್ಣ ಅವರ ನಿವಾಸದಲ್ಲಿ ಪಂಚನಾಮೆ ನಡೆಸುತ್ತಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ 3ನೇ ಎಫ್ಐಆರ್ ದಾಖಲು ಮೇ 8 ರಂದು ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಎಫ್‍ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳಿಂದ ಎಫ್ಐಆರ್ ನಲ್ಲಿ…

Read More

ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆ ದೇಶದಾದ್ಯಂತ ಬಿಜೆಪಿ ವಿರೋಧಿ ಅಲೆ ಕಾಣಿಸುತ್ತಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ. ಬಸವ ಜಯಂತಿ ಅಂಗವಾಗಿ ವಿಧಾನಸೌಧದ ಮುಂದಿರುವ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡೂ ಹಂತದ ಮತದಾನ ಮಕ್ತಾಯವಾಗಿದ್ದು, ರಾಜ್ಯದಾದ್ಯಂತದಿಂದ ಬಂದಿರುವ ವರದಿಗಳ ರೀತ್ಯ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಪಕ್ಷ ನೀಡಿದ್ದ ಎಲ್ಲ ಐದು ಗ್ಯಾರಂಟಿಗಳನ್ನೂ ನಮ್ಮ ಸರ್ಕಾರ ಈಡೇರಿಸಿದ್ದು, ಜನರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಇಮ್ಮಡಿಯಾಗಿದೆ. ಈಗ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯ ಹಾಗೂ 25 ಗ್ಯಾರಂಟಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಪಕ್ಷ ಈಡೇರಿಸುತ್ತದೆ ಎಂಬ ಪೂರ್ಣ…

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಕೇಸ್ ನಿಂದಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿಗೆ ಯಾವುದೇ ಧಕ್ಕೆ ಉಂಟಾಗೋದಿಲ್ಲ. ಈ ಪ್ರಕರಣ ವೈಯಕ್ತಿಕ ಜಗಳವಾಗಿದೆ ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷದವರು ರಾಜ್ಯದಲ್ಲಿನ ಅಭಿವೃದ್ಧಿಯ ಬಗ್ಗೆ ಮಾತನಾಡುವುದನ್ನು ಬಿಟ್ಟು ಬರೀ ಪೆನ್ ಡ್ರೈವ್ ಕೇಸ್ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ಯಾರೇ ಆಗಲೀ ಈ ಕೃತ್ಯದಲ್ಲಿ ಭಾಗಿಯಾಗಿದ್ರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ ಎಂದರು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಭವಿಷ್ಯವಿಲ್ಲ. ಶಾಸಕರು ಅಸಮಾಧಾನಗೊಂಡಿದ್ದಾರೆ. ಅದು ಅಭಿವೃದ್ಧಿಗೆ ಅನುದಾನ ನೀಡದೇ ಇರೋ ಕಾರಣದಿಂದ ಆಗಿದೆ. ಹೀಗಾಗಿ ರಾಜ್ಯ ಸರ್ಕಾರದ ಬುಡ ಅಲುಗಾಡುತ್ತಿದೆ. ಚುನಾವಣೆ ಬಳಿಕ ಈ ಸರ್ಕಾರ ಪತನ ಗ್ಯಾರಂಟಿ ಎಂದರು. https://kannadanewsnow.com/kannada/every-inch-of-pakistan-occupied-kashmir-belongs-to-india-amit-shah/ https://kannadanewsnow.com/kannada/sc-grants-interim-bail-to-delhi-cm-arvind-kejriwal-till-june-1-in-excise-policy-case/

Read More

ಜಾರ್ಖಂಡ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (Pakistan-occupied Kashmir -PoK) ಬಗ್ಗೆ ಕಾಂಗ್ರೆಸ್ ಪ್ರಶ್ನಾರ್ಥಕ ಚಿಹ್ನೆಯನ್ನು ಎತ್ತುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ವಾಗ್ದಾಳಿ ನಡೆಸಿದರು.  ಪಿಒಕೆ ಅದರ ಪ್ರತಿ ಇಂಚು ಭಾರತಕ್ಕೆ ಸೇರಿದೆ. ಯಾವುದೇ ಶಕ್ತಿ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಪರಮಾಣು ಬಾಂಬ್ ಹೊಂದಿರುವ ಪಾಕಿಸ್ತಾನವನ್ನು ಗೌರವಿಸುವಂತೆ ಮಣಿಶಂಕರ್ ಅಯ್ಯರ್ ನಮಗೆ ಹೇಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇರುವುದರಿಂದ ಪಿಒಕೆ ಬಗ್ಗೆ ಮಾತನಾಡಬೇಡಿ ಎಂದು ಎನ್ಡಿಎ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿದ್ದರು. ಪಿಒಕೆ ಭಾರತಕ್ಕೆ ಸೇರಿದ್ದು ಮತ್ತು ಯಾವುದೇ ಶಕ್ತಿ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಕಾಂಗ್ರೆಸ್ ಮತ್ತು ಭಾರತ ಮೈತ್ರಿಕೂಟಕ್ಕೆ ಹೇಳಲು ಬಯಸುತ್ತೇನೆ” ಎಂದು ಅಮಿತ್ ಶಾ ಜಾರ್ಖಂಡ್ನ ಖುಂಟಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕಾಂಗ್ರೆಸ್ಗೆ ಏನಾಗಿದೆ ಎಂದು ನನಗೆ ತಿಳಿದಿಲ್ಲ. ಪಿಒಕೆ ಭಾರತದ ಭಾಗ ಎಂದು…

Read More

ಮೈಸೂರು: ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಪೆನ್‌ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರದಾಗಲಿ ಅಥವಾ ನನ್ನದಾಗಲಿ ಪಾತ್ರವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. ಮೈಸೂರಿನ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ನಮಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನು ರೀತಿಯಲ್ಲಿ ತನಿಖೆ ಮಾಡಿ ವರದಿ ನೀಡಲಿದ್ದಾರೆ. ಹಿಂದೆ ಎಲ್ಲ ಸಿಬಿಐಗೆ ಕೊಟ್ಟಿದ್ದೇವೆ. ಬಿಜೆಪಿಯವರು ಯಾವತ್ತೂ ಒಂದೇ ಒಂದು ಕೇಸ್ ಸಿಬಿಐಗೆ ನೀಡಿರಲಿಲ್ಲ ಎಂದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಮ್ಮ ಪಾತ್ರವಿಲ್ಲ. ಎಸ್ಐಟಿಯವರು ತನಿಖೆ ಮಾಡ್ತಿದ್ದಾರೆ. ನನಗೆ ನಂಬಿಕೆಯಿದೆ ಅವರು ಸರಿಯಾದ ದಾರಿಯಲ್ಲಿ ಮಾಡ್ತಾರೆ ಅಂತ. ನಾನು ಯಾವತ್ತೂ ಕೂಡ ಪೊಲೀಸರಿಗೆ ಕಾನೂನು ಬಿಟ್ಟು ಮಾಡಿ ಅಂತ ಹೇಳಿಲ್ಲ. ಕಾನೂನು ವಿರುದ್ಧವಾಗಿ ಮಾಡಿ ಅಂತನೂ ಹೇಳಿಲ್ಲ. ಕಾನೂನು ರೀತಿಯಲ್ಲೇ ಮಾಡ್ತಿದ್ದಾರೆ ಎಂದರು. ಸಿಬಿಐ ತನಿಖೆಗೆ ವಹಿಸಲಿ ಅಂತ ಪೆನ್ ಡ್ರೈವ್ ಗಳನ್ನು ಆಸ್ಟ್ರೇಲಿಯಾದಲ್ಲಿ ಅಪ್ ಲೋಡ್ ಮಾಡಲಾಗಿದೆ ಅಂತ ಹೇಳ್ತಿದ್ದಾರೆ. ನಮ್ಮ ಪೊಲೀಸರ ಬಗ್ಗೆ ನಮಗೆ ನಂಬಿಕೆಯಿದೆ. ನಾವು…

Read More

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಬೆಳಕಿಗೆ ಬಂದು ಕೆಲ ದಿನಗಳೇ ಕಳೆದಿದೆ. ಪ್ರಜ್ವಲ್ ರೇವಣ್ಣ ಮಾತ್ರ ವಿದೇಶದಲ್ಲಿ ಇದ್ದಾರೆಯೇ ಹೊರತು, ಬೆಂಗಳೂರಿಗೆ ಮರಳಿಲ್ಲ. ಈ ನಡುವೆ ಅವರ ವಿರುದ್ಧ 3ನೇ ಎಫ್ಐಆರ್ ದಾಖಲಾಗಿದ್ದು,  ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಕಾನೂನಿನ ಕುಣಿಕೆ ಬಿಗಿಯಾದಂತೆ ಆಗಿದೆ. ಅತ್ಯಾಚಾರಕ್ಕೆ ಒಳಗಾದಂತ ಸಂತ್ರಸ್ತ ಮಹಿಳೆಯೊಬ್ಬರು ಮೇ.8ರಂದು ಪೊಲೀಸರಿಗೆ ದೂರೊಂದನ್ನು ನೀಡಿದ್ದಾರೆ. ಈ ದೂರನ್ನು ಅಧರಿಸಿ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ವಿರುದ್ಧ ಕಠಿಣ ಸೆಕ್ಷನ್ ಗಳನ್ನು ಹಾಕಿ, ಕಾನೂನಿನ ಕುಣಿಕೆಯನ್ನು ಬಿಗಿಗೊಳಿಸಿದ್ದಾರೆ. ಸಂತ್ರಸ್ತ ಮಹಿಳೆಯೊಬ್ಬರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿಯಿಂದ ಮೂರನೇ ರೇಪ್ ಕೇಸಲ್ಲಿ ಐಪಿಸಿ ಸೆಕ್ಷನ್ 354(ಸಿ)ರಡಿಯಲ್ಲಿ ಖಾಸಗಿ ಚಿತ್ರಗಳು ಸೆರೆಹಿಡಿದು ವೀಕ್ಷಿಸುವುದು. 354(ಎ)ರಡಿ ಲೈಂಗಿಕ ಅನುಕೂಲಕ್ಕಾಗಿ ಒತ್ತಾಯ, 376(2)ರಡಿ  ಜನಪ್ರತಿನಿಧಿಗಳ ಸ್ಥಾನದಲ್ಲಿದ್ದೂ ಅತ್ಯಾಚಾರ. 354(ಬಿ) ಬಟ್ಟೆ ಹಿಡಿದು ಎಳೆದಾಡಿದ ಆರೋಪ ಸೇರಿದಂತೆ ವಿವಿಧ ಸೆಕ್ಷನ್ ಗಳನ್ನು ಹಾಕಿದ್ದಾರೆ. ಹೀಗಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ…

Read More

ಕಲಬುರ್ಗಿ: ಲೋಕಸಭಾ ಚುನಾವಣೆ ಬೆನ್ನಲ್ಲೇ ಕಲಬುರ್ಗಿಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ರಾಜಕೀಯ ವೈಷಮ್ಯಕ್ಕಾಗಿ ಜಾವೀದ್ ಚಿನ್ನಮಳ್ಳಿ(27) ಎಂಬಾತನನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು, ಬಾವಿಗೆ ಎಸೆದಿರುವಂತ ಘಟನೆ ನಡೆದಿದೆ. ಕಳೆದ ಅಮವಾಸ್ಯೆ ದಿನದಂದು ದುಷ್ಕರ್ಮಿಗಳು ಪಾರ್ಟಿ ಮಾಡೋದಕ್ಕೆ ಕರೆದೊಯ್ದು, ಜಮೀನಿನಲ್ಲಿ ಪಾರ್ಟಿ ಮಾಡಿಸಿ, ನಂತ್ರ ಬರ್ಬರವಾಗಿ ಹತ್ಯೆ ಮಾಡಿ ಬಾವಿಗೆ ಎಸೆದಿದ್ದಾರೆ ಎನ್ನಲಾಗಿದೆ. ಈ ಹತ್ಯೆಯ ಹಿಂದಿನ ಕಾರಣ ಕಾಂಗ್ರೆಸ್ ಪರ ಮತ ಹಾಕಿದ್ದಕ್ಕೆ, ಪ್ರಚಾರ ಮಾಡಿದ್ದಕ್ಕೆ ಎಂಬುದಾಗಿ ಹೇಳಲಾಗುತ್ತಿದೆ. https://kannadanewsnow.com/kannada/congress-conspiring-to-give-job-reservation-to-muslims-pm-modi/ https://kannadanewsnow.com/kannada/sc-grants-interim-bail-to-delhi-cm-arvind-kejriwal-till-june-1-in-excise-policy-case/

Read More

ಹಾಸನ: ಜಿಲ್ಲೆಯಲ್ಲಿ ಸದ್ದು ಮಾಡಿ, ದೇಶದಲ್ಲೇ ವ್ಯಾಪಕ ಸುದ್ದಿಗೆ ಕಾರಣವಾಗಿದ್ದಂ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಸಂಬಂಧ ವಕೀಲ ದೇವರಾಜೇಗೌಡ ಹಾಗೂ ಮಾಜಿ ಕಾರು ಚಾಲಕ ಕಾರ್ತಿಕ್ ಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಹಾಸನ ಪೆನ್ ಡ್ರೈವ್ ಕೇಸ್ ಸಂಬಂಧ ಹಾಸನ ಸೈಬರ್ ಪೊಲೀಸ್ ಠಾಣೆ ಏಪ್ರಿಲ್.23ರಂದು ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಇದೀಗ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹಾಗೂ ವಕೀಲ ದೇವರಾಜೇಗೌಡ ಅವರಿಗೆ ನೋಟಿಸ್ ನೀಡಲಾಗಿದೆ. ಅಂದಹಾಗೇ ಇವರಿಬ್ಬರು ಅಲ್ಲದೇ ಕ್ವಾಲಿಟಿ ಬಾರ್ ಶರತ್, ನವೀನ್ ಗೌಡ ಹಾಗೂ ಚೇತನ್ ಗೌಡ ವಿರುದ್ಧವೂ ಹಾಸನದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಗ ಈ ಪ್ರಕರಣ ಸಂಬಂಧವೂ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. https://kannadanewsnow.com/kannada/sc-grants-interim-bail-to-delhi-cm-arvind-kejriwal-till-june-1-in-excise-policy-case/ https://kannadanewsnow.com/kannada/congress-conspiring-to-give-job-reservation-to-muslims-pm-modi/

Read More