Author: kannadanewsnow09

ಹಾಸನ: ಜಿಲ್ಲೆಯಲ್ಲಿ ಭೀಮ ಆನೆ ಸೆರೆ ಕಾರ್ಯಾಚರಣೆಯ ವೇಳೆಯಲ್ಲಿ ಒಂದು ದಂತ ಕಟ್ ಆಗಿ, ರಕ್ತ ಸ್ತ್ರಾವದೊಂದಿಗೆ ಭಾರೀ ನರಳಾಟವನ್ನು ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಹಾಸನದಲ್ಲಿ ಉಪಟಳ ನೀಡ್ತಿದ್ದ ಭೀಮ ಆನೆಯು ಒಂದು ದಂತ ಕಟ್ ಆಗಿರೋದರಿಂದ ನರಳಾಡುತ್ತಿದೆ. ದಂತ ಮುರಿದುಕೊಂಡು ಕಾಡಾನೆ ಭೀಮ ಘೀಳಿಡುತ್ತಾ ಓಡಾಡುತ್ತಿದೆ. ಹಾಸನ ಜಿಲ್ಲೆಯ ಜಗಬೋರನಹಳ್ಳಿಯಲ್ಲಿ ಭೀಮ ಒದ್ದಾಟ ನಡೆಸುತ್ತಿದೆ. ಸಾಕಾನೆ, ಕಾಡಾನೆ ಭೀಮನ ನಡುವೆ ಕಾಳಗ ನಡೆದಾಗ ಒಂದು ದಂತ ಕಟ್ ಆಗಿದೆ. https://kannadanewsnow.com/kannada/central-governments-ban-on-sharavati-pumped-storage-is-a-first-stage-victory-farmer-leader-dinesh-shirwala/ https://kannadanewsnow.com/kannada/centers-ban-on-sharavati-pumped-storage-project-victory-for-environmentalists-fight/

Read More

ಶಿವಮೊಗ್ಗ: ಕೇಂದ್ರ ಸರ್ಕಾರವು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಡೆ ನೀಡಿರುವುದಾಗಿ ತಿಳಿದು ಬಂದಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಗೆಲುವು ಆಗಿದೆ. ಆದರೇ ನಮ್ಮ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಯೋಜನೆಯನ್ನು ರದ್ದುಗೊಳಿಸುವವರೆಗೂ ಮುಂದುವರೆಯಲಿದೆ ಎಂಬುದಾಗಿ ರೈತ ಮುಖಂಡ ದಿನೇಶ್ ಶಿರವಾಳ ತಿಳಿಸಿದ್ದಾರೆ. ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಇಂದು ಕೇಂದ್ರ ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಡೆ ನೀಡಿರುವುದು ಒಂದು ಹಂತದ ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು ಆಗಿದೆ. ನಮ್ಮ ಹೋರಾಟ ಇಲ್ಲಿಗೆ ಕೈ ಬಿಡುವುದಿಲ್ಲ. ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಆಗ ಮಾತ್ರವೇ ನಮ್ಮ ಹೋರಾಟವು ಅಂತ್ಯವಾಗಲಿದೆ ಎಂದರು. ಇದೇ ನವೆಂಬರ್.11ರಂದು ಶಿವಮೊಗ್ಗದಲ್ಲಿ ದುಂಡುಮೇಜಿನ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗೆಡೆ, ಎಟಿ ರಾಮಸ್ವಾಮಿ, ಗೋಪಾಲಕಗೌಡ, ಚೂನಪ್ಪ ಪೂಜಾರಿ, ಬಂಗಾರಮಕ್ಕಿ ಶ್ರೀ, ಮೂಲೆಗದ್ದೆ ಶ್ರೀಗಳು, ಮೌಲ್ವಿಗಳು, ಫಾದರ್ ಗಳು ಭಾಗಿಯಾಗಲಿದ್ದಾರೆ.…

Read More

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರ ಸೇರಿದಂತೆ ಇತರರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ ಟೆಲೆಕ್ಸ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು, ಉಪಾಧ್ಯಕ್ಷರಾಗಿ ಹೆಚ್ ಬಿ ಮದನ ಗೌಡ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಮತ್ತಿಕೆರೆ ಜಯರಾಮ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ. ಇನ್ನೂ ಕೆಯುಡಬ್ಲ್ಯೂಜೆಯ ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಜಿ ಸಿ, ಕಾರ್ಯದರ್ಶಿಯಾಗಿ ನಿಂಗಪ್ಪ ಚಾವಡಿ, ಪುಂಡಲೀಕ ಬಾಲೋಜಿ, ಸೋಮಶೇಖರ ಕೆರೆಗೋಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ವಾಸುದೇವ ಹೊಳ್ಳ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಕೆಯುಡಬ್ಲ್ಯೂಜೆ ಮುಖ್ಯ ಚುನಾವಣಾಧಿಕಾರಿ ಎನ್ ರವಿಕುಮಾರ್ ಟೆಲೆಕ್ಸ್ ಘೋಷಿಸಿದ್ದಾರೆ. ಶಿವಾನಂದ ತಗಡೂರ ಯಾರು? ಬಾಗೂರು-ನವಿಲೆ ಸುರಂಗ ಸಂತ್ರಸ್ತರ ಪರವಾಗಿ ಹೋರಾಟ ಸಂಘಟಿಸಿದ್ದ ಅವರು, ಹಾಸನ ಜಿಲ್ಲಾ ನೀರಾವರಿ ಹೋರಾಟ ಸಮಿತಿಗಳ ಒಕ್ಕೂಟ, ರೈತ ಹಿತ ರಕ್ಷಣಾ ಸಮಿತಿ, ಹಾಸನ ಜಿಲ್ಲಾ ಸಾಕ್ಷರತಾ ಆಂದೋಲನ ಸಮಿತಿ ಸಂಚಾಲಕರಾಗಿ ದುಡಿದವರು. ಹಲವು ಜನಪರ…

Read More

ಮೈಸೂರು: ಅರಸೀಕೆರೆ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯಲಿರುವ ಪ್ಲಾಟ್‌ಫಾರ್ಮ್ ಶೆಲ್ಟರ್ ಕಾಮಗಾರಿಯ ಸಲುವಾಗಿ, ಕೆಲವು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ. ನವೆಂಬರ್ 9 ರಿಂದ ಡಿಸೆಂಬರ್ 13 ರವರೆಗೆ ರೈಲು ಸಂಖ್ಯೆ 16214 ಎಸ್.ಎಸ್.ಎಸ್. ಹುಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ ರೈಲು ಬೀರೂರು ಮತ್ತು ಅರಸೀಕೆರೆ ನಡುವೆ ರದ್ದಾಗಲಿದ್ದು, ಈ ರೈಲು ಬೀರೂರು ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿವೆ. ಅದೇ ರೀತಿ, ನವೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ ಸಂಚರಿಸುವ ರೈಲು ಸಂಖ್ಯೆ 16213 ಅರಸೀಕೆರೆ – ಎಸ್.ಎಸ್.ಎಸ್. ಹುಬ್ಬಳ್ಳಿ ಎಕ್ಸ್‌ಪ್ರೆಸ್ ಸೇವೆಯು ಅರಸೀಕೆರೆ ಮತ್ತು ಬೀರೂರು ನಡುವೆ ರದ್ದಾಗಲಿದೆ; ಈ ರೈಲು ಅರಸೀಕೆರೆಗೆ ಬದಲು ಬೀರೂರು ನಿಲ್ದಾಣದಿಂದಲೇ ತನ್ನ ನಿಗದಿತ ಸಮಯದಲ್ಲಿ ಹೊರಡಲಿವೆ. ಇದರ ಜೊತೆಗೆ, ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು ಕೂಡ ನವೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ ಅರಸೀಕೆರೆ ಮತ್ತು ಹಾಸನ ನಡುವೆ ರದ್ದಾಗಲಿದೆ, ಮತ್ತು ಈ ಪ್ಯಾಸೆಂಜರ್ ರೈಲು…

Read More

ಬೆಂಗಳೂರು: ಬಳ್ಳೂರು ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಅತ್ತಿಬೆಲೆ ಸಮೀಪದ ಬಳ್ಳೂರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಬಾಲಕರನ್ನು ಅನಿಕೇತ್ ಕುಮಾರ್(12) ಹಾಗೂ ರೆಹಮಾತ್(11) ಎಂಬುದಾಗಿ ಗುರುತಿಸಲಾಗಿದೆ. ಕೂಲಿ ಕೆಲಸವನ್ನು ಮೃತ ಬಾಲಕರ ಪೋಷಕರು ಮಾಡಿಕೊಂಡಿದ್ದರು. ನಿನ್ನೆ ಸಂಜೆ ಮನೆ ಬಳಿ ಆಟವಾಡುತ್ತಾ ಕೆರೆ ಬಳಿ ತೆರಳಿದ್ದಾಗ ಕೆರೆಗೆ ಇಳಿದಿದ್ದಾಗ ಮಕ್ಕಳು ನೀರಿನಲ್ಲಿ ಮುಳುಗಿ ಈ ದುರಂತ ಸಂಭವಿಸಿದೆ. https://kannadanewsnow.com/kannada/6-7-magnitude-earthquake-hits-japan-tsunami-warning-issued/ https://kannadanewsnow.com/kannada/centers-ban-on-sharavati-pumped-storage-project-victory-for-environmentalists-fight/

Read More

ಜಪಾನ್: ಭಾನುವಾರ ಸಂಜೆ ಕರಾವಳಿಯಲ್ಲಿ 6.7 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಇವಾಟೆ ಪ್ರಾಂತ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಜಪಾನ್ ಟೈಮ್ಸ್ ವರದಿ ಮಾಡಿದೆ. ಇವಾಟೆ ಕರಾವಳಿಯ ಕೆಲವು ಭಾಗಗಳಲ್ಲಿ 1 ಮೀಟರ್‌ವರೆಗಿನ ಅಲೆಗಳು ಎದ್ದಿರಬಹುದು ಎಂದು ದೇಶದ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಸಂಜೆ 5.03 ಕ್ಕೆ ದಾಖಲಾದ ಭೂಕಂಪವು ಮೊರಿಯೊಕಾ ನಗರ ಮತ್ತು ಯಹಾಬಾ ಪಟ್ಟಣದಲ್ಲಿ ಶಿಂಡೋ 4 (ಜಪಾನಿನ ಭೂಕಂಪನ ಮಾಪಕ) ಕ್ಕೆ ಸಮಾನವಾದ ಕಂಪನವನ್ನು ಉಂಟುಮಾಡಿತು. ರಾಯಿಟರ್ಸ್ ವರದಿಯ ಪ್ರಕಾರ, ಜಪಾನ್‌ನ ಸಾರ್ವಜನಿಕ ಪ್ರಸಾರಕ NHK ನಿವಾಸಿಗಳು ಕರಾವಳಿ ಪ್ರದೇಶಗಳಿಂದ ದೂರವಿರಲು ಕೇಳಿಕೊಂಡಿದೆ. ಇವಾಟೆ ಪ್ರಾಂತ್ಯದ ಕರಾವಳಿಯಿಂದ 70 ಕಿಮೀ (45 ಮೈಲುಗಳು) ದೂರದಲ್ಲಿ ಸಂಜೆ 5.12 ಕ್ಕೆ (ಭಾರತೀಯ ಸಮಯ ಮಧ್ಯಾಹ್ನ 1.42) ಸುನಾಮಿ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಪೆಸಿಫಿಕ್ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ ಎಂದು NHK ತಿಳಿಸಿದೆ. https://kannadanewsnow.com/kannada/earthquake-of-magnitude-6-07-strikes-andaman-islands/ https://kannadanewsnow.com/kannada/centers-ban-on-sharavati-pumped-storage-project-victory-for-environmentalists-fight/

Read More

ನವದೆಹಲಿ: ಭಾರತದ ಅಂಡಮಾನ್ ದ್ವೀಪಗಳಲ್ಲಿ ಭಾನುವಾರ ಪ್ರಬಲ ಭೂಕಂಪ ಸಂಭವಿಸಿದೆ. ಅಂಡಮಾನ್ ದ್ವೀಪಗಳಲ್ಲಿ 6.07 ತೀವ್ರತೆಯ ಭೂಕಂಪ ಸಂಭವಿಸಿದೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) X ತೀವ್ರತೆಯನ್ನು ಪಡೆದುಕೊಂಡು 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಮತ್ತು 90 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಹೇಳಿದೆ. ಆರಂಭದಲ್ಲಿ, ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರ, GFZ, ಭಾನುವಾರ ಅಂಡಮಾನ್ ದ್ವೀಪಗಳಲ್ಲಿ 6.07 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹೇಳಿದೆ, ಇದು 10 ಕಿ.ಮೀ (6 ಮೈಲುಗಳು) ಆಳದಲ್ಲಿದೆ. https://twitter.com/NCS_Earthquake/status/1987412758338674874 ಏತನ್ಮಧ್ಯೆ, ಸೋಮವಾರ, ವಿದೇಶಾಂಗ ಸಚಿವಾಲಯ (MEA) ಭಾರತವು ಅಫ್ಘಾನಿಸ್ತಾನದಲ್ಲಿ ಭೂಕಂಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಿದೆ ಎಂದು ಹೇಳಿದೆ. ಭಾರತ ಕಳುಹಿಸಿದ ಸಹಾಯದ ಚಿತ್ರಗಳನ್ನು MEA ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಹಂಚಿಕೊಂಡಿದ್ದಾರೆ. “ಆಫ್ಘಾನ್ ಜನರಿಗೆ ತನ್ನ ಬೆಂಬಲವನ್ನು ಪುನರುಚ್ಚರಿಸುತ್ತಾ, ಭೂಕಂಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಭಾರತ ಆಹಾರ ಸಾಮಗ್ರಿಗಳನ್ನು ತಲುಪಿಸುತ್ತದೆ. ಭಾರತ ಮೊದಲು ಪ್ರತಿಕ್ರಿಯಿಸುತ್ತದೆ” ಎಂದು ಜೈಸ್ವಾಲ್ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. https://twitter.com/DrSJaishankar/status/1985310475325001759…

Read More

ಬೆಂಗಳೂರು: ಉತ್ತರ ಕನ್ನಡದಲ್ಲಿ ಶರಾವತಿ ನದಿಗೆ ನಿರ್ಮಿಸಲು ಉದ್ದೇಶಿಸಿದ್ದ 2,000 ಮೆಗಾವ್ಯಾಟ್ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ಪರಿಸರ ವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತಡೆಹಿಡಿದಿದೆ. ಹೀಗಾಗಿ ಪರಿಸರವಾದಿಗಳ ಹೋರಾಟಕ್ಕೆ ಭರ್ಜರಿ ಗೆಲುವು ಸಿಕ್ಕಂತೆ ಆಗಿದೆ. ಹೌದು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ 54 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸುವ ಪ್ರಸ್ತಾವನೆಗೆ ಅರಣ್ಯ ಸಲಹಾ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಸಮಿತಿಯ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಈ ನಿರ್ಧಾರವು ಪರಿಸರವಾದಿಗಳು ಮತ್ತು ಸ್ಥಳೀಯರ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ. ವಿರೋಧದ ನಡುವೆಯೂ ಯೋಜನೆ ಜಾರಿಗೆ ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಏನಿದು ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ? ವಿರೋಧ ಏಕೆ? ಪಂಪ್ಡ್ ಸ್ಟೋರೇಜ್ ಯೋಜನೆಯು ವಿಶ್ವದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನ ಎಂದೇ ಪರಿಗಣಿಸಲಾಗಿದ್ದು, ಎರಡು ಜಲಾಶಯಗಳ ನಡುವೆ ಇದನ್ನು ಕಾರ‍್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್‌…

Read More

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ( Karnataka Union of Working Journalists – KUWJ) ದ 20 ಜಿಲ್ಲೆಗಳ ಕಾರ್ಯಕಾರಿ ಸಮಿತಿಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಮದ್ಯಾಹ್ನ 12 ಗಂಟೆ ವೇಳೆಗೆ ಶೇಕಡ 60 ಮತದಾನ ಆಗಿದೆ. ಬೆಳಗ್ಗೆ 9 ಗಂಟೆಯಿಂದ ಮತದಾನ ಆರಂಭವಾಗಿದ್ದು ಪತ್ರಕರ್ತ ಸದಸ್ಯರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಗದಗ, ಚಿತ್ರದುರ್ಗ,ತುಮಕೂರು, ಕೋಲಾರ ಜಿಲ್ಲಾ ಘಟಕಗಳ ತೀವ್ರ ಪೈಪೋಟಿಯ ಸ್ಪರ್ಧೆ ನಡೆದಿವೆ. KUWJ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಾದ ಎನ್.ರವಿಕುಮಾರ್ ಅವರು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ , ಕೋಲಾರ ಮಾತಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮತದಾನ ಮದ್ಯಾಹ್ನ 3 ಗಂಟೆಗೆ ಕೊನೆಗೊಳ್ಳಲಿದ್ದು, ನಂತರ ಮತ ಎಣಿಕೆ ನಡೆಯಲಿದೆ. ಮತಗಟ್ಟೆಗೆ ಮುಖ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್ ಭೇಟಿ, ಪರಿಶೀಲನೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದಲ್ಲಿ ನಡೆಯುತ್ತಿದ್ದ ಮತಗಟ್ಟೆಗೆ ಮುಖ್ಯ ಚುನಾವಣಾ ಅಧಿಕಾರಿ ರವಿಕುಮಾರ್ ಟೆಲೆಕ್ಸ್ ಹಾಗೂ ರಾಜ್ಯ ಅಧ್ಯಕ್ಷರಾದಂತ ಶಿವಾನಂದ ತಗಡೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು. -ವಸಂತ ಬಿ…

Read More

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ನಮ್ಮ ನಾಡು ಪತ್ರಿಕೆಯ ವರದಿಗಾರ ಹೆಚ್. ಯು. ವೈದ್ಯನಾಥ್ (ವೈದ್ಯ), ಪ್ರಧಾನ ಕಾರ್ಯದರ್ಶಿಯಾಗಿ ದೂರದರ್ಶನ ಚಂದನ ವಾಹಿನಿ ವರದಿಗಾರ ಆರ್. ಎಸ್. ಹಾಲಸ್ವಾಮಿ ಹಾಗೂ ರಾಜ್ಯ ಸಮಿತಿಯ ನಿರ್ದೇಶಕರಾಗಿ ನಮ್ಮ ನಾಡು ಪತ್ರಿಕೆಯ ಸಂಪಾದಕ ಕೆ. ವಿ. ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿಯ ನಿರ್ದೇಶಕ ಸ್ಥಾನಕ್ಕೆ ಶಿಕಾರಿಪುರದ ನಮ್ಮ ಕನ್ನಡ ನಾಡು ಪತ್ರಿಕೆಯ ರಾಜರಾವ್ ಎಂ. ಜಾದವ್‌ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆಯನ್ನು ಚುನಾವಣಾಽಕಾರಿ ಶ್ರೀನಿವಾಸ್‌ ಅವರು ಘೋಷಿಸಿದ್ದಾರೆ. ವಸಂತ ಬಿ ಈಶ್ವರಗೆರೆ, ಸಂಪಾದಕರು

Read More